Tag: ಕೃತಕ ಬುದ್ಧಿಮತ್ತೆ

  • 2024ರಲ್ಲಿ 50 ಸಾವಿರಕ್ಕೂ ಹೆಚ್ಚು ಐಟಿ ಉದ್ಯೋಗಿಗಳ ವಜಾ – ರಿಯಲ್ ಎಸ್ಟೇಟ್‌ಗೆ ಹೊಡೆತ

    2024ರಲ್ಲಿ 50 ಸಾವಿರಕ್ಕೂ ಹೆಚ್ಚು ಐಟಿ ಉದ್ಯೋಗಿಗಳ ವಜಾ – ರಿಯಲ್ ಎಸ್ಟೇಟ್‌ಗೆ ಹೊಡೆತ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ವರ್ಷ ಸುಮಾರು 50,000ಕ್ಕೂ ಅಧಿಕ ಐಟಿ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇದೀಗ ರಿಯಲ್ ಎಸ್ಟೇಟ್ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬೆಂಗಳೂರು ತಂತ್ರಜ್ಞಾನ ಕೇಂದ್ರವಾಗಿದ್ದು, ಐಟಿ ವೃತ್ತಿಪರರಿಗೆ ಆಶ್ರಯ ತಾಣವಾಗಿದೆ. ಲಕ್ಷಾಂತರ ಜನರು ಉದ್ಯೋಗ ಅರಸಿಕೊಂಡು ಬಂದು ಪೇಯಿಂಗ್ ಗೆಸ್ಟ್ ಹಾಗೂ ಇನ್ನಿತರ ಬಜೆಟ್ ಸ್ನೇಹಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ತ್ವರಿತ ಅಭಿವೃದ್ಧಿಯಿಂದಾಗಿ ಐಟಿ ವಲಯದಲ್ಲಿ ಸಾಮೂಹಿಕವಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಹೀಗಾಗಿ ನಗರವು ಉದ್ಯೋಗ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಹೇಳಿದೆ.ಇದನ್ನೂ ಓದಿ:ಮಗನ ಮುದ್ದಾದ ಫೋಟೋ ಹಂಚಿಕೊಂಡ ‘ಬಿಗ್‌ ಬಾಸ್‌’ ಖ್ಯಾತಿಯ ಕವಿತಾ ದಂಪತಿ

    ಈ ಉದ್ಯೋಗ ಬಿಕ್ಕಟ್ಟು ಐಟಿ ವಲಯಕ್ಕೆ ಮಾತ್ರ ಸೀಮಿತವಾಗಿರದೇ ನಗರದ ರಿಯಲ್ ಎಸ್ಟೇಟ್ ಹೂಡಿಕೆ, ಸ್ಥಳೀಯ ವ್ಯವಹಾರಗಳ ಪರಿಣಾಮ ಬೀರಲಿದೆ. ಜೊತೆಗೆ ನಗರದ ಆರ್ಥಿಕ ಸ್ಥಿರತೆಯ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ.

    ಮುಂಬರುವ ದಿನಗಳಲ್ಲಿ ಐಟಿ ವಲಯದಲ್ಲಿ ಮತ್ತಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದ್ದು, ಕಂಪನಿಗಳು ಎಐ ತಂತ್ರಜ್ಞಾನಕ್ಕೆ ಬದಲಾದಾಗ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಈ ಮೂಲಕ ಕಡಿಮೆ ವೇತನ ಪಡೆಯುವ ಉದ್ಯೋಗಿಗಳು ದುರ್ಬಲರಾಗುತ್ತಿದ್ದಾರೆ.

    ರಿಯಲ್ ಎಸ್ಟೇಟ್‌ಗೆ ತೀವ್ರ ಹೊಡೆತ:
    ಉದ್ಯೋಗಿಗಳನ್ನು ವಜಾಗೊಳಿಸುವದರಿಂದ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ತ್ರೀವ ಪರಿಣಾಮ ಬೀರಲಿದೆ. ಸಾಮಾನ್ಯವಾಗಿ ಕಡಿಮೆ ವೇತನ ಪಡೆಯುವ ಉದ್ಯೋಗಿಗಳು ಕೈಗೆಟುಕುವ ದರದಲ್ಲಿ ದೊರಕುವ ಪಿಜಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾರೆ. ಉದ್ಯೋಗಿಗಳನ್ನು ವಜಾಗೊಳಿಸುವುದರಿಂದ ಪಿಜಿ ಹಾಗೂ ಬಾಡಿಗೆ ಮನೆಗಳ ಬೇಡಿಕೆಯಲ್ಲಿ ತೀವ್ರ ಕುಸಿತ ಉಂಟಾಗುತ್ತದೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮಿಗಳು ಕೂಡ ಆರ್ಥಿಕ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾರೆ.

    ಜೊತೆಗೆ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ, ವಿಶೇಷವಾಗಿ ಟೆಕ್ ಪಾರ್ಕ್‌ಗಳು ಮತ್ತು ಕಾರ್ಪೊರೇಟ್ ಕಚೇರಿಗಳಿಗೆ ತಾಣವಾದ ಔಟರ್ ರಿಂಗ್ ರಸ್ತೆ ಬಳಿ ಇರುವವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ 56,984 ಕೋಟಿ ರೂ. ಮೀಸಲಿಟ್ಟ ತೆಲಂಗಾಣ ಸರ್ಕಾರ

  • ಹಣಕಾಸಿನ ವಂಚನೆ ತಡೆಗೆ ಆರ್‌ಬಿಐ ಅಭಿವೃದ್ಧಿಪಡಿಸಲಿದೆ AI ತಂತ್ರಜ್ಞಾನ! ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

    ಹಣಕಾಸಿನ ವಂಚನೆ ತಡೆಗೆ ಆರ್‌ಬಿಐ ಅಭಿವೃದ್ಧಿಪಡಿಸಲಿದೆ AI ತಂತ್ರಜ್ಞಾನ! ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

    ಹೆಚ್ಚುತ್ತಿರುವ ಹಣಕಾಸಿನ ವಂಚನೆ (Financial Fraud) ವಿರುದ್ಧದ ಹೋರಾಟ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank Of India) ಅಂಗವಾಗಿರುವ ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್‌ನ (Reserve Bank Innovation Hub) ಹೊಸ ಎಐ ತಂತ್ರಜ್ಞಾನವನ್ನು ಸಿದ್ಧಪಡಿಸಿದ್ದು, ಮ್ಯೂಲ್ ಹಂಟರ್ ಎಂದು ಕರೆಯಲಾಗುತ್ತದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಕ್ರಮ ಹಣ ವರ್ಗಾವಣೆಯ ಟ್ರ‍್ಯಾಕ್ ಹೇಗೆ ಮಾಡುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಗವಾಗಿರುವ ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ `Mule Hunter AI’ ಎಂಬ ಸುಧಾರಿತ ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಎಐ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ಮೂಲಕ ಹಣಕಾಸಿನ ವಂಚನೆಯ ವಿರುದ್ಧದ ಹೋರಾಡಬೇಕು ಎನ್ನುವ ಮೂಲ ಉದ್ದೇಶವನ್ನು ಹೊಂದಿದೆ. ಸಾಮಾನ್ಯವಾಗಿ ಮನಿ ಲಾಂಡರಿಂಗ್‌ ಯೋಜನೆಗಳಲ್ಲಿ ಬಳಸುವ ಮ್ಯೂಲ್ ಖಾತೆಗಳನ್ನು ಗುರುತಿಸಿ, ಫ್ಲ್ಯಾಗ್ ಮಾಡುವ ಮೂಲಕ ಈ ರೀತಿಯ ಖಾತೆಗಳನ್ನು ಪತ್ತೆಹಚ್ಚುತ್ತದೆ.

    ಈಗಾಗಲೇ ಈ ತಂತ್ರಜ್ಞಾನವನ್ನೊಳಗೊಂಡ ಅಪ್ಲಿಕೇಶನ್‌ಅನ್ನು ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಪ್ರಕಾರ, ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರುಗಳ ಪೈಕಿ 67.8% ರಷ್ಟು ಆನ್‌ಲೈನ್ ಹಣಕಾಸು ವಂಚನೆಗಳಾಗಿವೆ. ಹೀಗಾಗಿ ಈ ರೀತಿಯ ವಂಚನೆ ತಡಗಟ್ಟಲು ಎಐ ಪ್ರಮುಖ ಪಾತ್ರವಹಿಸುತ್ತದೆ.

    ಹಣಕಾಸಿನ ವಂಚನೆಯ ವಿರುದ್ಧ ಹೋರಾಡುವ ದೊಡ್ಡ ಸಮಸ್ಯೆಯೆಂದರೆ ಮ್ಯೂಲ್ ಖಾತೆಗಳನ್ನು ಪತ್ತೆ ಹಚ್ಚುವುದು. ಅಕ್ರಮ ಹಣಕಾಸು ಚಟುವಟಿಕೆಗಳ ಪ್ರಮುಖ ಸಕ್ರಿಯ ಕೇಂದ್ರವಾಗಿ ಮ್ಯೂಲ್ ಖಾತೆಗಳು ಕಾರ್ಯನಿರ್ವಹಿಸುತ್ತವೆ. `ಮ್ಯೂಲ್ ಹಂಟರ್ ಎಐ’ ನಂತಹ ತಂತ್ರಜ್ಞಾನಗಳು ಹಣಕಾಸಿನ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಸೈಬರ್ ಅಪರಾಧವನ್ನು ನಿಗ್ರಹಿಸಲು ಪ್ರಾಮುಖ್ಯತೆಯನ್ನು ಹೊಂದಿವೆ.

    ಮ್ಯೂಲ್ ಖಾತೆ ಎಂದರೇನು?
    ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ ಪ್ರಕಾರ, ಅಕ್ರಮ ಹಣವನ್ನು ವರ್ಗಾವಣೆ ಮಾಡಲು ಬಳಸುವ ಬ್ಯಾಂಕ್ ಖಾತೆಯನ್ನು ಮ್ಯೂಲ್ ಖಾತೆ (Mule Accounts) ಎನ್ನುವರು. ಸುಲಭವಾಗಿ ಹಣದ ಭರವಸೆಯ ಆಮಿಷಕ್ಕೆ ಒಳಗಾಗಲು ಬಲವಂತಪಡಿಸುವ ಅನುಮಾನಾಸ್ಪದ ವ್ಯಕ್ತಿಗಳು ಇದನ್ನು ಬಳಸುತ್ತಾರೆ. ಈ ರೀತಿಯ ಖಾತೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡುವುದರಿಂದ ಹಣವನ್ನು ಪತ್ತೆಹಚ್ಚಲು ಮತ್ತು ಮರುಪಡೆಯಲು ಕಷ್ಟವಾಗುತ್ತದೆ.

    ಮ್ಯೂಲ್ ಹಂಟರ್ ಎಐನ ಅಭಿವೃದ್ಧಿ:
    ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ ಪ್ರಕಾರ, ಇದು ಮ್ಯೂಲ್ ಖಾತೆಗಳನ್ನು ಗುರುತಿಸಲು ಮತ್ತು ವರದಿ ಮಾಡುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ವಿಧಾನಗಳು ಮತ್ತು ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಇಲಾಖೆಯು ಬ್ಯಾಂಕುಗಳೊಂದಿಗೆ ವ್ಯಾಪಕವಾದ ಸಮಾಲೋಚನೆ ನಡೆಸಿದೆ.

    ಈ ತಂತ್ರಜ್ಞಾನವು ಈಗಾಗಲೇ ಹಲವಾರು ಬ್ಯಾಂಕ್‌ಗಳೊಂದಿಗೆ ಕೆಲಸ ನಿರ್ವಹಿಸಿದ್ದು, ಮ್ಯೂಲ್ ಖಾತೆಯ ಹತ್ತೊಂಬತ್ತು ವಿಭಿನ್ನ ಮಾದರಿಯ ಚಟುವಟಿಕೆಗಳನ್ನು ವಿಶ್ಲೇಷಿಸಿದೆ. ಹೀಗಾಗಿ ತಂತ್ರಜ್ಞಾನದ ಆರಂಭಿಕ ಫಲಿತಾಂಶದಲ್ಲಿ ದಕ್ಷತೆ ಮತ್ತು ನಿಖರತೆಯನ್ನು ಎತ್ತಿ ತೋರಿಸಿದೆ.

    ಮ್ಯೂಲ್ ಹಂಟರ್ ಎಐ ಹೇಗೆ ಕೆಲಸ ಮಾಡುತ್ತದೆ?
    ಶಂಕಿತ ಮ್ಯೂಲ್ ಖಾತೆಗಳನ್ನು ಗುರುತಿಸಲು ನಿಯಮ-ಆಧಾರಿತ ವ್ಯವಸ್ಥೆಗಿಂತ ಕೃತಕ ಬುದ್ಧಿಮತ್ತೆ (Artificial Intelligence) ಹಾಗೂ ಮಷಿನ್ ಲರ್ನಿಂಗ್ ಆಧಾರಿತ ಪರಿಹಾರವು ಸೂಕ್ತವಾಗಿರುತ್ತದೆ. ಈ ಮೂಲಕ ಹೆಚ್ಚಿನ ನಿಖರತೆ ಹಾಗೂ ಹೆಚ್ಚಿನ ವೇಗದೊಂದಿಗೆ ಮ್ಯೂಲ್ ಖಾತೆಗಳ ವಹಿವಾಟು ಮತ್ತು ಖಾತೆ ವಿವರ-ಸಂಬಂಧಿತ ಡೇಟಾಸೆಟ್‌ಗಳನ್ನು ವಿಶ್ಲೇಷಿಸಬಹುದು.

    ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್‌ನ ಎಐನಿಂದ ಹಣಕಾಸು ವಂಚನೆಯ ಖಾತೆಗಳನ್ನು ವೇಗವಾಗಿ ಗುರುತಿಸುವ ಉದ್ದೇಶವನ್ನು ಹೊಂದಿದೆ. ವಂಚನೆಗಳು ವಿವಿಧ ಮಾರ್ಗಗಳ ಮೂಲಕ ಸಂಭವಿಸಬಹುದು. ಈ ರೀತಿಯ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ. ಹಣವು ಅಂತಿಮವಾಗಿ ಯಾವ ಮ್ಯೂಲ್ ಖಾತೆಗಳಿಗೆ ಹೋಗುತ್ತದೆ ಎಂಬುದನ್ನು ಇದು ತಿಳಿಸುತ್ತದೆ. ಹೀಗಾಗಿ ಈ ತಂತ್ರಜ್ಞಾನ ಮಷಿನ್ ಲರ್ನಿಂಗ್ (Machine Learning) ಆಧಾರಿತ ವಿಧಾನದ ಮೂಲಕ ಬ್ಯಾಂಕಿನ ವ್ಯವಸ್ಥೆಯಲ್ಲಿ ಹೆಚ್ಚಿನ ಮ್ಯೂಲ್ ಕಾತೆಗಳನ್ನು ಪತ್ತೆಹಚ್ಚಲು ಸಹಕಾರಿಯಗುತ್ತದೆ.

  • ದಕ್ಷಿಣ ಗೆಲ್ಲಲು AI ಮೊರೆ ಹೋದ ಮೋದಿ – ವಿಶ್ವದಲ್ಲೇ ಮೊದಲು ಎಂದ ಬಿಜೆಪಿ

    ದಕ್ಷಿಣ ಗೆಲ್ಲಲು AI ಮೊರೆ ಹೋದ ಮೋದಿ – ವಿಶ್ವದಲ್ಲೇ ಮೊದಲು ಎಂದ ಬಿಜೆಪಿ

    ನವದೆಹಲಿ: ಅಬ್‌ ಕೀ ಬಾರ್ 400 ಪಾರ್‌ (Abki Baar 400 Paar) ಘೋಷಣೆ ಮೊಳಗಿಸುತ್ತಿರುವ ಬಿಜೆಪಿ (BJP) ಲೋಕಸಭಾ ಚುನಾವಣೆಯನ್ನು (Lok Sabha Election) ಗೆಲ್ಲಲು ಕೃತಕ ಬುದ್ಧಿಮತ್ತೆಯ (Artificial Intelligence) ಮೊರೆ ಹೋಗಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಈ ಬಾರಿ ಹೆಚ್ಚಿನ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈಗ ಎಐ ತಂತ್ರಜ್ಞಾನ ಬಳಸಲು ಮುಂದಾಗಿದೆ. ಈ ಮೂಲಕ ಚುನಾವಣಾ ಭಾಷಣವನ್ನು ತರ್ಜುಮೆ ಮಾಡಲು ಎಐ ತಂತ್ರಜ್ಞಾನವನ್ನು ಬಳಸುತ್ತಿರುವುದು ವಿಶ್ವದಲ್ಲೇ ಮೊದಲು ಎಂದು ಬಿಜೆಪಿ ಹೇಳಿಕೊಂಡಿದೆ.

     

    ಯಾಕೆ ಎಐ?
    ಲೋಕಸಭಾ ಚುನಾವಣೆಯಲ್ಲಿ ಹಿಂದಿ ಭಾಷಿಕರು ಇರುವ ಉತ್ತರ ಭಾರತದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಾ ಬಂದಿದೆ. ಆದರೆ ದಕ್ಷಿಣದಲ್ಲಿ ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನ ಬರುತ್ತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ 129 ಕ್ಷೇತ್ರಗಳ ಪೈಕಿ ಬಿಜೆಪಿ ಜಯಗಳಿದ್ದು ಕೇವಲ 29. ಅದರಲ್ಲೂ ಬಹುಪಾಲು ಕರ್ನಾಟಕದಿಂದ (25+1) ಬಂದಿತ್ತು. ಹೀಗಾಗಿ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಜನರನ್ನು ಸೆಳೆಯಲು ಬಿಜೆಪಿ ಎಐ ಸಹಾಯ ಪಡೆಯಲು ಮುಂದಾಗಿದೆ. ಇದನ್ನೂ ಓದಿ: 15 ವರ್ಷದ ಬಳಿಕ ಘರ್‌ ವಾಪ್ಸಿ – ಮರಳಿ ಬಿಜೆಪಿ ಜೊತೆ ಬಿಜೆಡಿ ಮೈತ್ರಿ?

     

    ಸಹಾಯ ಹೇಗೆ?
    ಬಿಜೆಪಿಯ ತಾರಾ ಪ್ರಚಾರಕರ ಪಟ್ಟಿಯಲ್ಲಿ ಮೋದಿಗೆ ಮೊದಲ ಸ್ಥಾನ. ಒಂದು ದಿನದಲ್ಲಿ ಗರಿಷ್ಠ 3-4 ಸ್ಥಳಗಳಲ್ಲಿ ಮೋದಿ ಪ್ರಚಾರ ಮಾಡುತ್ತಾರೆ. ಹೀಗಾಗಿ ದಕ್ಷಿಣ ರಾಜ್ಯಗಳಿಗೆ ಮೋದಿ ಭೇಟಿ ನೀಡಿದ ವೇಳೆ ಮಾಡಿದ ಚುನಾವಣಾ ಪ್ರಚಾರ ಭಾಷಣಗಳನ್ನು ಆಯಾ ರಾಜ್ಯಗಳ ಭಾಷೆಗಳಿಗೆ ತತ್‌ಕ್ಷಣದಲ್ಲಿ ತರ್ಜುಮೆ ಮಾಡಿ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಿದೆ. ಈ ತಂತ್ರದಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ಸುಲಭವಾಗಿ ತಲುಪಬಹುದು ಎಂದು ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ. ದಕ್ಷಿಣದ ಈ ರಾಜ್ಯಗಳ ಜೊತೆ ಪಂಜಾಬ್, ಒಡಿಶಾ, ಮಹಾರಾಷ್ಟ್ರದಲ್ಲೂ ಇದೇ ತಂತ್ರ ಅಳವಡಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ವರದಿಯಾಗಿದೆ.

    ಈ ಹಿಂದೆ ಮೋದಿಯವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ನಡೆದ ಕಾಶಿ-ತಮಿಳು ಸಂಗಮ ಕಾರ್ಯಕ್ರಮದಲ್ಲಿ ಪ್ರಧಾನಿಯವರ ಭಾಷಣವನ್ನು ಆ ಕ್ಷಣದಲ್ಲೇ ತಮಿಳು ಭಾಷೆಗೆ ತರ್ಜುಮೆ ಮಾಡಲಾಗುತ್ತಿತ್ತು. ರಿಯಲ್‌ ಟೈಮ್‌ನಲ್ಲೇ ತರ್ಜುಮೆಯಾದ ಕಾರಣ ಈ ಕಾರ್ಯಕ್ರಮ ಯಶಸ್ವಿಯಾಗಿತ್ತು.  ಇದನ್ನೂ ಓದಿ: ಚಿಕ್ಕೋಡಿ ಗೆಲ್ಲಲು ರಣತಂತ್ರ – ಸವದಿಗೆ ಟಾಸ್ಕ್ ಜೊತೆಗೆ ಆಫರ್‌ ಕೊಟ್ಟ ಕಾಂಗ್ರೆಸ್‌

     

  • ರಾಮಮಂದಿರ ಲೋಕಾರ್ಪಣೆ – AI ಕಣ್ಗಾವಲು ಸಾಧ್ಯತೆ, 11 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

    ರಾಮಮಂದಿರ ಲೋಕಾರ್ಪಣೆ – AI ಕಣ್ಗಾವಲು ಸಾಧ್ಯತೆ, 11 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

    ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮಂದಿರ (Ayodhya Ram Mandir) ಲೋಕಾರ್ಪಣೆಗೆ ಇನ್ನು 18 ದಿನಗಳು ಮಾತ್ರ ಉಳಿದಿವೆ. ಇಡೀ ಅಯೋಧ್ಯಾ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿವೆ. ಅಯೋಧ್ಯೆ ಬೀದಿ ಬೀದಿಗಳಲ್ಲೂ ಶ್ರೀರಾಮನ ವರ್ಣಕಲೆ ಮಿಂದೇಳುತ್ತಿವೆ. ಇದರೊಂದಿಗೆ ಜ.22ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಭದ್ರತೆಯ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಲಾಗಿದೆ.

    ಜ.22 ರಂದು ಪ್ರಧಾನಿ ಮೋದಿ (Narendra Modi) ಅವರು ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಯ (Security) ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅಂದು ಕೃತಕ ಬುದ್ಧಿಮತ್ತೆ (AI Surveillance) ಕಣ್ಗಾವಲಿಗೆ ನಿಯೋಜಿಸುವ ಸಾಧ್ಯತೆಯಿದೆ. ರಾಮಮಂದಿರ ಉದ್ಘಾಟನೆಯ ನಂತರ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಭದ್ರತೆ ನಿಯೋಜಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ

    ಅಂದು ಕೃತಕ ಬುದ್ಧಿಮತ್ತೆಯೊಂದಿಗೆ 11,000 ರಾಜ್ಯ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಹೇಳಲಾಗಿದೆ. ಆದ್ರೆ ಈ ತೀರ್ಮಾನವನ್ನು ಅಂತಿಮಗೊಳಿಸಲಾಗಿಲ್ಲ. ಈ ನಡುವೆ ರಾಮಮಂದಿರಕ್ಕೆ ಬೆದರಿಕೆಗಳೂ ಕೇಳಿಬಂದಿರುವುದರಿಂದ ಭದ್ರತಾ ಸಿಬ್ಬಂದಿ ಸಂಖ್ಯೆ ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಅಂದಿನ ದಿನ ಅಯೋಧ್ಯೆ ಕಡೆಗೆ ಹೋಗುವ ಎಲ್ಲ ರಸ್ತೆಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಸಹ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಯಂದು ಇಡೀ ದಿನ ಪ್ರಧಾನಿ ಮೋದಿ ಉಪವಾಸ!

    ಯುಪಿ ಆಂಟಿ-ಟೆರರ್ ಸ್ಕ್ವಾಡ್ (ATS) ಮತ್ತು ವಿಶೇಷ ಕಾರ್ಯಪಡೆ (STF) ತಂಡಗಳು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ನಂತಹ ಕೇಂದ್ರೀಯ ಏಜೆನ್ಸಿಗಳ ಜೊತೆಗೆ 8,000 ನಾಗರಿಕ ಪೊಲೀಸ್‌ ಸಿಬ್ಬಂದಿ, 34 ಸಬ್ ಇನ್ಸ್‌ಪೆಕ್ಟರ್‌ಗಳು, 71 ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು 312 ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ರಾಮಮಂದಿರ ಇರುವ ಕೆಂಪು ವಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿರಲಿದ್ದು, ಗುಪ್ತಚರ ಘಟಕದ ಸುಮಾರು 38 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಮತ್ತು ವಿಧ್ವಂಸಕ ಕೃತ್ಯ ವಿರೋಧಿ ತಂಡಗಳು, ಪೊಲೀಸ್ ರೇಡಿಯೊ ಸಂವಹನದ 4 ಸಿಬ್ಬಂದಿ ಮತ್ತು 47 ಅಗ್ನಿಶಾಮಕ ಸಿಬ್ಬಂದಿಯನ್ನ ಭದ್ರತೆಗೆ ನೇಮಿಸಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಾಲರಾಮನ ಮೂರ್ತಿ ಹೇಗಿರಲಿದೆ – ಕುತೂಹಲದ ಪ್ರಶ್ನೆಗೆ ಜ.22 ರಂದು ಸಿಗಲಿದೆ ಉತ್ತರ

  • ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

    ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

    ಹೈದರಾಬಾದ್: ಹೈದರಾಬಾದ್‌ ಮೂಲದ ಗ್ರೀನ್‌ ರೊಬೊಟಿಕ್ಸ್‌ ಸಂಸ್ಥೆಯು (Robotics Firm) ಕೃತಕ ಬುದ್ಧಿಮತ್ತೆಯಿಂದ ಕಾರ್ಯಾಚರಣೆ ನಡೆಸಲ್ಪಡುವ ಅತ್ಯಾಧುನಿಕ ಸ್ವಾಯತ್ತ ಆ್ಯಂಟಿ ಡ್ರೋನ್ ವ್ಯವಸ್ಥೆಯನ್ನ (Anti Drone System) ಅನಾವರಣಗೊಳಿಸಿದೆ. ಇದಕ್ಕೆ ʻಇಂದ್ರಜಾಲ್‌ʼಎಂದು ಹೆಸರಿಡಲಾಗಿದ್ದು, ವಿಶಾಲ ಪ್ರದೇಶವನ್ನು ರಕ್ಷಿಸುತ್ತದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಇಂತಹ ಅತ್ಯಾಧುನಿಕ ಡ್ರೋನ್‌ ಅಭಿವೃದ್ಧಿಪಡಿಸಲಾಗಿದೆ.

    ಡೀಪ್‌ ಟೆಕ್‌ ಕಂಪನಿಯ ಭಾಗವಾದ ಗ್ರೀನ್‌ ರೊಬೊಟಿಕ್ಸ್‌ (Robotics) ಹೈದರಾಬಾದ್‌ ಹೊರ ವಲಯದಲ್ಲಿ ಈ ಸುಧಾರಿತ ಡ್ರೋನ್‌ನ ಸಾಮರ್ಥ್ಯ ಪರೀಕ್ಷೆ ನಡೆಸಿದೆ. ಇದು ರಕ್ಷಣಾ ವಲಯ, ಉದ್ಯಮ ಹಾಗೂ ಸರ್ಕಾರಿ ವಲಯಗಳಿಗೆ ಕೃತಕ ಬುದ್ಧಿಮತ್ತೆ ಚಾಲಿತ ಭದ್ರತಾ ಪರಿಹಾರ ಕ್ರಮಗಳನ್ನ ಸೂಚಿಸಲಿದೆ. ಮುಖ್ಯವಾಗಿ ʻಇಂದ್ರಜಾಲ್‌ʼ (Indrajaal) ವಿಶಾಲ ಪ್ರದೇಶವನ್ನ ರಕ್ಷಿಸುವ ಏಕೈಕ ಡ್ರೋನ್‌ ವ್ಯವಸ್ಥೆಯಾಗಿದೆ. ಸೇನೆಗಳು ನಿಭಾಯಿಸಲಾಗದ ಶತ್ರು ಸೇನೆಯ ಬೆದರಿಕೆಗಳ ವಿರುದ್ಧ ಇದು ಸಮರ್ಥವಾಗಿ ಹೋರಾಡಿ ರಕ್ಷಣೆ ಒದಗಿಸಲಿದೆ ಎಂದು ವರದಿಯಾಗಿದೆ.

    ʻಇಂದ್ರಜಾಲ್‌ʼ ವಿಶೇಷತೆ ಏನು?
    ಸಾಧಾರಣವಾಗಿ ಡ್ರೋನ್‌ ಎರಡು ರೀತಿಯಲ್ಲಿ ಶತ್ರು ಡ್ರೋನ್‌ ವಿರುದ್ಧ ಕಾರ್ಯಾಚರಣೆ ನಡೆಸುತ್ತದೆ. ಒಂದು ಡ್ರೋನ್‌ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಇನ್ನೊಂದು ಡ್ರೋನ್‌ ಅನ್ನೇ ಹೊಡೆದುರುಳಿಸುವುದು. ಈ ಇಂದ್ರಜಾಲ್‌ ಡ್ರೋನ್‌ ಎರಡು ರೀತಿಯನ್ನು ಕಾರ್ಯಾಚರಣೆ ಮಾಡುವ ಸಾಮರ್ಥ್ಯ ಹೊಂದಿರುವುದು ವಿಶೇಷ. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?

    ಹೈದರಾಬಾದ್‌ ಮೂಲದ ಗ್ರೀನ್‌ ರೊಬೊಟಿಕ್ಸ್‌ ಸಂಸ್ಥೆಯು ವಿನ್ಯಾಸಗೊಳಿಸಿರುವ ಈ ಡ್ರೋನ್‌ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಚಾಲಿತ ವ್ಯವಸ್ಥೆಯನ್ನ ಒಳಗೊಂಡಿದೆ. 360 ಡಿಗ್ರಿ ರಕ್ಷಣೆ ಒದಗಿಸುತ್ತದೆ. ಕಾರ್ಯಾಚರಣೆ ಸಂದರ್ಭದಲ್ಲಿ ಶತ್ರುಗಳ ಬೆದರಿಕೆಗಳನ್ನ ಪತ್ತೆಹಚ್ಚುವ, ವರ್ಗೀಕರಿಸುವ, ಟ್ರ್ಯಾಕ್ ಮಾಡುವ ಮತ್ತು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿರುವುದು ವಿಶೇಷ. 4,000 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋನ್‌ಗಳನ್ನು ಇದು ಹೊಡೆದುರಳಿಸುವ ಸಾಮರ್ಥ್ಯ ಹೊಂದಿದೆ.

    2020ರಲ್ಲಿ ಭಾರತದಲ್ಲಿ 76 ಡ್ರೋನ್‌ ದಾಳಿ ಪ್ರಕರಣಗಳು ವರದಿಯಾಗಿವೆ. 2021ರಲ್ಲಿ 109, 2022ರಲ್ಲಿ 266 ಪ್ರಕರಣಗಳು ವರದಿಯಾಗಿವೆ. ಇನ್ನೂ 2023ರ ಮೊದಲ ತಿಂಗಳು 8 ಪ್ರಕರಣಗಳು ವರದಿಯಾಗಿದ್ದು, ಈಗಾಗಲೇ ಪ್ರಕರಣಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದೆ. ಹಾಗಾಗಿ ದೇಶದ ಭದ್ರತೆಗಾಗಿ ಪ್ರತಿಕೂಲ ಕ್ರಮಗಳನ್ನ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಚಂದ್ರನ ಮೇಲೆ ಹೊಸ ಕುಳಿ ಮೂಡಿಸಿದ ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆ

     

    ಇಂದ್ರಜಾಲ್‌ ವಿಶಾಲ ಪ್ರದೇಶವನ್ನ ಕವರ್‌ ಮಾಡುವುದರಿಂದ ದೆಹಲಿ ಎನ್‌ಸಿಆರ್‌ ಪ್ರದೇಶ, ಅಂತಾರಾಷ್ಟ್ರೀಯ ಗಡಿಗಳು, ವಿಐಪಿ ಜಾಥಾ ಅಥವಾ ಬೃಹತ್‌ ಜನಮೂಹ ಹೊಂದಿರುವ ಪ್ರದೇಶಳು ಹಾಗೂ ತೈಲ ಸಂಸ್ಕರಣಾ ಘಟಕಗಳ ಮೇಲೆ ಇದನ್ನು ಭದ್ರತೆಗೆ ನಿಯೋಜನೆ ಮಾಡಬಹುದು ಎಂದು ವಿಂಗ್ ಕಮಾಂಡರ್ ಸಾಯಿ ಮಲ್ಲೇಲ ತಿಳಿಸಿದ್ದಾರೆ.

    2014 ರಿಂದ 2016ರ ವರೆಗೆ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಉತ್ತರಾಖಂಡದ ಗರ್ವನರ್‌ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್, ಇಂದ್ರಜಾಲ್‌ ಅನ್ನು ಸಾರ್ವಜನಿಕರ ರಕ್ಷಣೆ, ಸಾರ್ವಜನಿಕರ ಮೂಲ ಸೌಕರ್ಯಗಳು ಹಾಗೂ ದೇಶದ ಭದ್ರತಾ ಸವಾಲುಗಳಿಗೆ ಪರಿಹಾರ ಕ್ರಮವಾಗಿ ಬಳಸಬಹುದು ಎಂದು ಸಲಹೆ ನೀಡಿದ್ದಾರೆ.

    2021ರ ಜೂನ್‌ 27ರಂದು ಜಮ್ಮುವಿನ ವಿಮಾನ ನಿಲ್ದಾಣದ ಮೇಲೆ ಭೀಕರ ಡ್ರೋನ್‌ ದಾಳಿ ನಡೆದಿತ್ತು. ಅಲ್ಲದೇ ಕಳೆದ ಜೂನ್‌ 15 ರಂದು ಗಾಲ್ವಾನ್‌ ದಾಳಿಯನ್ನೂ ಎದುರಿಸಬೇಕಾಯಿತು. ಆ ಸಂದರ್ಭದಲ್ಲಿ ನಮ್ಮ ಬಳಿಕ ಏನು ಪರಿಹಾರವಿದೆ ಎಂದು ನಾವೇ ನೋಡಿಕೊಂಡಾಗ ಆಶ್ಚರ್ಯ ಪಡುವಂತಾಗಿತ್ತು. ಆದ್ರೆ ಇದೀಗ ಎಲ್ಲ ಸಮಸ್ಯೆಗಳಿಗೆ ಉತ್ತರವಾಗಿ ʻಇಂದ್ರಜಾಲ್‌ʼ ನಮ್ಮ ಮುಂದೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಕೆಲ ದಿನಗಳ ಹಿಂದೆ ರಷ್ಯಾ ಉಕ್ರೇನ್‌ ಯುದ್ಧದಲ್ಲೂ ಇದೇ ಮಾದರಿಯ ಡ್ರೋನ್‌ ಅನ್ನು ಬಳಕೆ ಮಾಡಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ChatGPTಗೆ ಸೆಡ್ಡು ಹೊಡೆಯಲು ತನ್ನದೇ ಹೊಸ ಕಂಪನಿ ತೆರೆದ ಮಸ್ಕ್

    ChatGPTಗೆ ಸೆಡ್ಡು ಹೊಡೆಯಲು ತನ್ನದೇ ಹೊಸ ಕಂಪನಿ ತೆರೆದ ಮಸ್ಕ್

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಬುಧವಾರ ಹೊಸ ಕೃತಕ ಬುದ್ಧಿಮತ್ತೆಯ (Artificial Intelligence) ಸ್ಟಾರ್ಟ್ ಅಪ್ ‘ಎಕ್ಸ್ಎಐ’ (xAI) ಅನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಎಐ (AI) ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ಓಪನ್ ಎಐನ (OpenAI) ಚಾಟ್ ಜಿಪಿಟಿಗೆ (ChatGPT) ಸೆಡ್ಡು ಹೊಡೆಯಲು ಇದೀಗ ಮಸ್ಕ್ ಮುಂದಾಗಿದ್ದಾರೆ.

    ಈಗಾಗಲೇ ಎಲೆಕ್ಟ್ರಿಕ್ ಕಾರು ತರಾರಿಕಾ ಕಂಪನಿ ಟೆಸ್ಲಾ, ರಾಕೆಟ್ ಉಡಾವಣಾ ಕಂಪನಿ ಸ್ಪೇಸ್‌ಎಕ್ಸ್‌ನ ಸಿಇಒ ಮಾತ್ರವಲ್ಲದೇ ಟ್ವಿಟ್ಟರ್‌ನ ಮಾಲೀಕನಾಗಿರುವ ಮಸ್ಕ್ ಈಗ ಎಐ ಲೋಕದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.

    ಈ ಹಿಂದೆ ಮಸ್ಕ್ ಎಐ ಅಭಿವೃದ್ಧಿಯನ್ನು ನಿಲ್ಲಿಸಬೇಕು. ಇದರಿಂದ ದೊಡ್ಡ ಅಪಾಯದ ಸಾಧ್ಯತೆಯಿದೆ. ಈ ವಲಯದಲ್ಲಿ ನಿಯಂತ್ರಣದ ಅಗತ್ಯವಿದೆ. ಇದು ನಾಗರಿಕತೆಯ ವಿನಾಶಕ್ಕೆ ಕಾರಣವಾಗಬಹುದು ಎಂದು ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಭಾರತದಲ್ಲಿ 20 ಲಕ್ಷಕ್ಕೆ ಕಾರು – ಕೇಂದ್ರದ ಜೊತೆ ಟೆಸ್ಲಾ ಮಾತುಕತೆ

    ಇದೀಗ ತನ್ನದೇ ಎಐ ಕಂಪನಿಯನ್ನು ಪ್ರಾರಂಭ ಮಾಡಿ ಮಾಹಿತಿಯನ್ನು ಹಂಚಿಕೊಂಡಿರುವ ಮಸ್ಕ್, ಸುರಕ್ಷಿತ ಎಐ ಅನ್ನು ನಿರ್ಮಿಸುವ ತನ್ನ ಯೋಜನೆಯನ್ನು ವಿವರಿಸಿದ್ದಾರೆ. ಎಐಗೆ ನೈತಿಕತೆಯನ್ನು ಸ್ಪಷ್ಟವಾಗಿ ಪ್ರೋಗ್ರಾಮಿಂಗ್ ಮಡುವ ಬದಲು ಅವರು ಎಕ್ಸ್ಎಐಯಲ್ಲಿ ಹೆಚ್ಚಿನ ಕುತೂಹಲಕಾರಿ ಅಂಶವನ್ನು ರಚಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

    ಮನುಷ್ಯರಿಗಿಂತಲೂ ಚುರುಕಾದ ಸೂಪರ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ಇನ್ನು ಕೇವಲ 5-6 ವರ್ಷಗಳಲ್ಲಿ ಬರಲಿದೆ ಎಂದು ಮಸ್ಕ್ ಭವಿಷ್ಯ ನುಡಿದಿದ್ದಾರೆ.

    ಮಸ್ಕ್ ಈ ಹಿಂದೆ 2015ರಲ್ಲಿ ಓಪನ್ ಎಐನ ಸಹ ಸಂಸ್ಥಾಪಕರಾಗಿದ್ದರು. ಆದರೆ 2018ರಲ್ಲಿ ಅವರು ಕಂಪನಿಯ ಮಂಡಳಿಯಿಂದ ಕೆಳಗಿಳಿದರು. ಓಪನ್ ಎಐನಲ್ಲಿ ಮೈಕ್ರೊಸಾಫ್ಟ್ ಹೂಡಿಕೆ ಮಾಡುತ್ತಿದೆ. ಇದನ್ನೂ ಓದಿ: ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ? ವಿಶೇಷತೆ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಕಳ್ಳತನ ಎಸಗಿದ್ರೂ ಕಳ್ಳರು ಸಿಕ್ಕಿಬಿಳ್ತಾರೆ

    ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಕಳ್ಳತನ ಎಸಗಿದ್ರೂ ಕಳ್ಳರು ಸಿಕ್ಕಿಬಿಳ್ತಾರೆ

    – ಅಪರಾಧ ಮಟ್ಟ ಹಾಕಲು ಎಐ ಮೊರೆ ಹೋಗುತ್ತಿದ್ದಾರೆ ಪೊಲೀಸರು

    ಯಾವುದೇ ಒಂದು ಕಳ್ಳತನ ಅಥವಾ ಅಪರಾಧ ವರದಿಯಾದಾಗ ಪೊಲೀಸರು (Police) ಎಚ್ಚೆತ್ತುಕೊಳ್ಳುವಲ್ಲಿ ಅಥವಾ ತನಿಖೆಯನ್ನು ಪ್ರಾರಂಭಿಸುವಲ್ಲಿ ಯಾವಾಗಲೂ ತಡವಹಿಸುತ್ತಾರೆ ಎಂಬ ಅಪಖ್ಯಾತಿ ಮೊದಲಿನಿಂದಲೂ ಇದೆ. ಆದರೆ ಪೊಲೀಸರಿಗೆ ತಕ್ಷಣವೇ ಅಪರಾಧಗಳ ಮಾಹಿತಿಗಳು ಬಂದು ತಡ ಮಾಡದೇ ತನಿಖೆಗೆ ಇಳಿಯಲು ಅಂತಹ ತಂತ್ರಜ್ಞಾನದ ಅವಶ್ಯಕತೆಯೂ ಇದೆ. ತಂತ್ರಜ್ಞಾನ ಲೋಕದಲ್ಲಿ ಸದ್ದು ಮಾಡುತ್ತಿರೋ ಕೃತಕ ಬುದ್ಧಿಮತ್ತೆ (Artificial Intelligence) ಪೊಲೀಸರಿಗೆ ಒಂದು ದೊಡ್ಡ ವರದಾನಗಿ ಸಂಚಲನ ಸೃಷ್ಠಿಯಾಗುವಲ್ಲಿ ಯಾವುದೇ ಸಂಶಯವಿಲ್ಲ.

    ಒಂದು ದೊಡ್ಡ ನಗರದಲ್ಲಿ ದಾರಿಹೋಕರೊಬ್ಬರ ಕಡೆಗೆ ಬೈಕ್ ಸವಾರರಿಬ್ಬರು ಬಂದು ಅವರ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಹೋಗುತ್ತಾರೆ. ನಂತರ ಕಳ್ಳರು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಆ ನಗರದ ಪೊಲೀಸರು ತಕ್ಷಣವೇ ಈ ಬಗ್ಗೆ ಮಾಹಿತಿ ಪಡೆದು ಏಕಕಾಲದಲ್ಲಿ ಫೀಲ್ಡಿಗಿಳಿದು ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಇದು ಯಾವುದೋ ಒಂದು ಸಿನಿಮಾದ ಕಥೆಯಂತೆ ಎನಿಸಿದರೂ ವಾಸ್ತವದಲ್ಲಿ ಇಂತಹ ಪ್ರಯತ್ನಗಳನ್ನು ಮಾಡುವಲ್ಲಿ ಪೊಲೀಸ್ ಇಲಾಖೆಗಳಲ್ಲಿ ಸತತ ಪ್ರಯತ್ನ ನಡೆಯುತ್ತಿದೆ.

    ಹೌದು, ಕ್ರಿಮಿನಲ್ ಬ್ಯಾಗ್ರೌಂಡ್ ಹೊಂದಿರುವ ವ್ಯಕ್ತಿಗಳು, ಅಥವಾ ಅಪರಾಧ ಶಂಕಿತ ವ್ಯಕ್ತಿಗಳ ಡೇಟಾವನ್ನು ಸಂಗ್ರಹಿಸಿ ಸಿಸ್ಟಮ್‌ಗಳಿಗೆ ಸೇರಿಸುವ ಪ್ರಯೋಗಗಳು ನಡೆಯುತ್ತಿದೆ. ಸರಗಳ್ಳತನ ಅಥವಾ ಮೊಬೈಲ್ ಕಳ್ಳತನದಂತಹ ಕೃತ್ಯಗಳನ್ನು ಎಐ (AI) ಮೂಲಕ ತಕ್ಷಣವೇ ಪತ್ತೆ ಹಚ್ಚಿ, ಕ್ಷಣಗಳಲ್ಲೇ ಕ್ರಮ ಕೈಗೊಳ್ಳುವಂತಹ ಪ್ರಯೋಗಗಳನ್ನು ನಡೆಸಲಾಗುತ್ತಿದೆ.

    3 ವರ್ಷಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೊಲೀಸ್ ಇಲಾಖೆಗಳಲ್ಲಿ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿದ್ದು, ಬಳಿಕ ದೆಹಲಿ ಪೊಲೀಸರು ಎಐ ಆಧಾರಿತ ಪರಿಹಾರಗಳನ್ನು ಹೆಚ್ಚಿನ ಪ್ರಕರಣಗಳಲ್ಲಿ ಅನುಸರಿಸುತ್ತಿದ್ದಾರೆ ಹಾಗೂ ಅನ್ವೇಶಿಸುತ್ತಿದ್ದಾರೆ. ‘ಸೇಫ್ ಸಿಟಿ’ ಪ್ರಾಜೆಕ್ಟ್, ಅಪರಾಧ ಮತ್ತು ಕ್ರಿಮಿನಲ್ ಟ್ರ‍್ಯಾಕಿಂಗ್ ಸಿಸ್ಟಮ್ ಏಕೀಕರಣ, ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ ಮತ್ತು ಆಫೀಸ್ ಆಟೊಮೇಷನ್‌ನಂತಹ ಕ್ರಮಗಳು ತಂತ್ರಜ್ಞಾನ ಹಾಗೂ ಎಐಗೆ ಸಂಬಂಧಿಸಿರುವ ಪ್ರಮುಖ ಉದಾಹರಣೆಗಳಾಗಿವೆ.

    ಸೇಫ್ ಸಿಟಿ ಯೋಜನೆಯಡಿ 15 ಸಾವಿರ ಕ್ಯಾಮೆರಾಗಳನ್ನು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸ್ಥಾಪಿಸಲಾಗಿವೆ. ಇವು ದೆಹಲಿ ಸರ್ಕಾರ ಸ್ಥಾಪಿಸಿರುವ ಕ್ಯಾಮೆರಾಗಳೊಂದಿಗೆ ಲಿಂಕ್ ಹೊಂದಿದೆ. ಈ ಕ್ಯಾಮೆರಾಗಳಲ್ಲಿ ಸಂಗ್ರಹವಾಗುವ ವಿಷಯಗಳನ್ನು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ ಹಾಗೂ ಎಐ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಇದು ಅಪರಾಧಗಳನ್ನು ನಿಗ್ರಹಿಸುವಲ್ಲಿ ಮೈಲಿಗಲ್ಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

     

    ಕಳೆದ ವರ್ಷ ಜನವರಿಯಲ್ಲಿ ದೆಹಲಿ ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸಲು ಹಾಗೂ ಅಪರಾಧ ಮತ್ತು ಕ್ರಿಮಿನಲ್ ಟ್ರ‍್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್‌ನಲ್ಲಿ (ಸಿಸಿಟಿಎನ್‌ಎಸ್) ಕೇಸ್ ಡೈರಿಗಳನ್ನು ಬರೆಯಲು ಹಿಂದಿ ಟೈಪಿಂಗ್‌ಗಾಗಿ ಎಐ ಆಧಾರಿತ ಕೀಬೋರ್ಡ್ ಅನ್ನು ಪರಿಚಯಿಸಿದ್ದರು. ಈ ಸಿಸ್ಟಂ ಪೊಲೀಸ್ ಕೆಲಸಗಳಲ್ಲಿ ಸಾಮಾನ್ಯವಾಗಿ ಬಳಸುವ ಹಿಂದಿ ಅಥವಾ ಉರ್ದು ಪದಗಳ ಸಮಗ್ರ ನಿಘಂಟು ಹೊಂದಿದೆ. ಇದು ದಾಖಲಾಗುವ ಹೊಸ ಪದಗಳನ್ನು ಕೂಡಾ ಡೇಟಾಬೇಸ್‌ನಲ್ಲಿ ಸಂಗ್ರಹಿಸಿಡುತ್ತದೆ. ಹೀಗೆ ಇದು ಸರಿಯಾದ ದಾಖಲೆಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡಿ ಪೊಲೀಸರಿಗೆ ವೇಗ, ನಿಖರತೆ ಹಾಗೂ ದಕ್ಷತೆಯನ್ನು ಸುಧಾರಿಸುವಂತೆ ಮಾಡುತ್ತದೆ.

    ಅಪರಾಧಗಳನ್ನು ನಿಗ್ರಹಿಸಲು ಎಐ ಯಿಂದ ಹೇಗೆ ಸಾಧ್ಯ?
    ಸರಗಳ್ಳತನದಂತಹ ಅಪರಾಧಗಳು ಹೆಚ್ಚಾಗಿ ನಡೆಯುವಂತಹ ಪ್ರದೇಶಗಳನ್ನು ಗುರುತಿಸಿ ಅದನ್ನು ಸಿಸ್ಟಂಗಳಿಗೆ ನೀಡಲಾಗುತ್ತದೆ. ಕಳ್ಳತನ ಇತ್ಯಾದಿ ಕ್ರಿಮಿನಲ್ ಹಿನ್ನೆಲೆಯುಳ್ಳವರ ಗುರುತಿನ ಡೇಟಾ ಹಾಗೂ ಆರೋಪಿ/ ಅಪರಾಧಿ ಜೈಲಿನಿಂದ ಬಿಡುಗಡೆಯಾದ ದಿನಾಂಕವನ್ನು ಕೂಡಾ ಸಂಯೋಜಿಸಲಾಗುತ್ತದೆ. ಅಪರಾಧಿಗಳ ಮುಖದ ಗುರುತುಗಳನ್ನು ಬಳಸಿಕೊಂಡು ಸಿಸಿಟಿವಿ ಫೂಟೇಜ್ ಮೂಲಕ ಆತನನ್ನು ಗುರುತಿಸಿ, ಆತನ ಚಲನ ವಲನದ ಬಗ್ಗೆ ಎಚ್ಚರಿಸುವಂತೆ ಮಾಡಬಹುದು.

    ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸಂಭವನೀಯ ದರೋಡೆ ಅಥವಾ ದರೋಡೆ ನಡೆದಾಗ ತಕ್ಷಣವೇ ಅದನ್ನು ಸೂಚಿಸಲು ಎಲ್ಲಾ ಡೇಟಾಗಳನ್ನು ಎಐ ಪ್ರಕ್ರಿಯೆಗೊಳಿಸುತ್ತದೆ. ಇದು ಪೊಲೀಸರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು, ಗಸ್ತು ತಿರುಗುವುದನ್ನು ಹೆಚ್ಚಿಸಲು ಮಾತ್ರವಲ್ಲದೇ ಕಣ್ಗಾವಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    ಎಐ ಪೊಲೀಸರಿಗೆ ದೊಡ್ಡ ಸವಾಲು ಎನಿಸಿದರೂ ಇದರ ಸಣ್ಣ ಪ್ರಮಾಣದ ಬಳಕೆ ದೊಡ್ಡ ಬದಲಾವಣೆಯನ್ನೇ ತಂದು ಕೊಡುವ ಸಾಧ್ಯತೆಯಿದೆ. ಎಐ ತಂತ್ರಜ್ಞಾನ ಪೊಲೀಸರ ಕಾರ್ಯಗಳಲ್ಲಿ ಅಪಾರವಾದ ಸಹಾಯ ಮಾಡುತ್ತದೆ. ಕಣ್ಗಾವಲು, ಭಯೋತ್ಪಾದನಾ ವಿರೋಧಿ ಕ್ರಮಗಳಿಗೂ ಇದು ಅನುಕೂಲವಾಗಿದೆ. ಮುಂಬರುವ ವರ್ಷಗಳಲ್ಲಿ ಪೊಲೀಸರು ಎಐ ಆಧಾರಿತ ಪರಿಹಾರಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಸುಲಭವಾಗಿ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಸ ಕೃತಕ ಬುದ್ಧಿಮತ್ತೆ ಕಂಪನಿ X.AI ಪ್ರಾರಂಭಿಸಲಿದ್ದಾರೆ ಮಸ್ಕ್

    ಹೊಸ ಕೃತಕ ಬುದ್ಧಿಮತ್ತೆ ಕಂಪನಿ X.AI ಪ್ರಾರಂಭಿಸಲಿದ್ದಾರೆ ಮಸ್ಕ್

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಚಾಟ್‌ಜಿಪಿಟಿ (ChatGPT) ತಯಾರಕ ಓಪನ್‌ಎಐಗೆ (OpenAI) ಟಕ್ಕರ್ ನೀಡಲು ಕೃತಕ ಬುದ್ಧಿಮತ್ತೆಯ (Artificial Intelligence) ಹೊಸ ಸ್ವಂತ ಕಂಪನಿಯನ್ನು (Company)  ಪ್ರಾರಂಭಿಸಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಮೂಲಗಳ ಪ್ರಕಾರ ಮಸ್ಕ್ ತನ್ನ ಹೊಸ ಎಐ (AI) ಕಂಪನಿಗಾಗಿ ಸಂಶೋಧಕರು ಹಾಗೂ ಎಂಜಿನಿಯರುಗಳ ತಂಡವನ್ನು ಒಟ್ಟುಗೂಡಿಸುತ್ತಿದ್ದಾರೆ. ಈ ಕಂಪನಿಗಾಗಿ ಅವರು ತಮ್ಮ ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾ ಕಂಪನಿಯಲ್ಲಿನ ಕೆಲ ಹೂಡಿಕೆದಾರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ವರದಿಗಳ ಪ್ರಕಾರ ಮಸ್ಕ್‌ನ ಹೊಸ ಕೃತಕ ಬುದ್ಧಿಮತ್ತೆ ಕಂಪನಿಯ ಹೆಸರು ಎಕ್ಸ್.ಎಐ (X.AI) ಆಗಿದೆ. ಕಳೆದ ತಿಂಗಳು ಮಸ್ಕ್ ಎಕ್ಸ್.ಎಐ ಕಾರ್ಪ್ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾಯಿಸಿಕೊಂಡಿದ್ದಾರೆ. ನೆವಾಡಾದಲ್ಲಿ ಈ ಕಂಪನಿ ಓಪನ್ ಆಗುವ ಸಾಧ್ಯತೆಯಿದೆ. ಮಸ್ಕ್ ತಮ್ಮ ಕುಟುಂಬದ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಜೇರೆಡ್ ಬಿರ್ಚಾಲಾ ಅವರನ್ನು ಕಂಪನಿಗೆ ಕಾರ್ಯದರ್ಶಿಯಾಗಿ ಪಟ್ಟಿ ಮಾಡಿದ್ದಾರೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!

    2015ರಲ್ಲಿ ಪ್ರಾರಂಭವಾದ ಲಾಭರಹಿತ ಓಪನ್‌ಎಐ ಸಂಸ್ಥೆಗೆ ಮಸ್ಕ್ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಅವರು 2018ರಲ್ಲಿ ಕಂಪನಿಯ ಮಂಡಳಿಯಿಂದ ಕೆಳಗಿಳಿದರು. ಇದೀಗ ಓಪನ್‌ಎಐಗೆ ಪ್ರತಿಸ್ಪರ್ಧಿಯಾಗಿ ಮಸ್ಕ್ ತಮ್ಮದೇ ಹೊಸ ಕಂಪನಿಯನ್ನು ತೆರೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: Twitter logo – ನಾಯಿ ಹೋಯ್ತು, ಮತ್ತೆ ನೀಲಿ ಹಕ್ಕಿ ಬಂತು

  • ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

    ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

    ನವದೆಹಲಿ: ಅಮೆರಿಕ ಇಂಧನ ಇಲಾಖೆಯ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್’ ಅನ್ನು ಅಭಿವೃದ್ಧಿಪಡಿಸಿದೆ.

    ವಿಜ್ಞಾನದಲ್ಲಿನ ಆವಿಷ್ಕಾರಗಳಿಗೆ ಅಭೂತಪೂರ್ವ ಸಾಮಥ್ರ್ಯ ಇರುವ ಸೂಪರ್ ಕಂಪ್ಯೂಟರ್ ಗಳ ಅವಶ್ಯಕತೆ ಇದೆ. ಹಾಗಾಗಿ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ಸಮಿತ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದಿನ ಟೈಟಾನ್ ಸೂಪರ್ ಕಂಪ್ಯೂಟರ್ ಗಿಂತ 8 ಪಟ್ಟು ವೇಗವಾಗಿ ಸಮಿತ್ ಕೆಲಸ ನಿರ್ವಹಿಸುತ್ತದೆ.

    ಸಮಿತ್ ನ ಕಾರ್ಯನಿರ್ವಹಣಾ ಸಾಮರ್ಥ್ಯ 200 ಪೆಟಾ ಫ್ಲಾಪ್ಸ್ ಆಗಿದ್ದು 5 ವರ್ಷ ಹಿಂದಿನ ಚೈನಾದ 93 ಪೆಟಾ ಫ್ಲಾಪ್ಸ್ ಸಾಮಥ್ರ್ಯದ ತೈಹುಲೈಟ್ ಸೂಪರ್ ಕಂಪ್ಯೂಟರ್ ಅನ್ನು ಹಿಂದಿಕ್ಕಿದೆ. ವಿಜ್ಞಾನಿಗಳು ಸಮಿತ್ ಅನ್ನು ತಮ್ಮ ಜಿನೋಮ್ ಗಳ ಅಧ್ಯಯನದಲ್ಲಿ ಬಳಸಿದ್ದಾರೆ. ಹಿಂದಿನ ಸೂಪರ್ ಕಂಪ್ಯೂಟರ್ ಗಳಿಗಿಂತ ಕ್ಷಣಮಾತ್ರದಲ್ಲಿ ಲಕ್ಷಾಂತರ ಜಿನೋಮ್ ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

    ಆರೋಗ್ಯ, ಕೃತಕ ಬುದ್ಧಿಮತ್ತೆ, ಶಕ್ತಿ, ಹವಾಮಾನ, ಭೌತಶಾಸ್ತ್ರ ಹಾಗೂ ಇತರ ಸಂಶೋಧನ ಕ್ಷೇತ್ರಗಳಲ್ಲಿ ಬೇಕಾಗಿದ್ದ ನಂಬಲು ಅಸಾಧ್ಯವಾದ ಸೂಪರ್ ಕಂಪ್ಯೂಟರ್ ಸಮಿತ್ ಆಗಿದೆ. ಈ ಸಂಶೋಧನೆಗಳಿಂದ ಬ್ರಹ್ಮಾಂಡವನ್ನು ಇನ್ನೂ ಸರಿಯಾಗಿ ಅರ್ಥೈಸಬಹುದಾಗಿದ್ದು ಅಮೆರಿಕಾದ ಆರ್ಥಿಕ ವ್ಯವಸ್ಥೆಯನ್ನು ಇನ್ನೂ ಸ್ಪರ್ಧಾತ್ಮಕವಾಗಿಸುವುದರ ಜೊತೆಗೆ ಉತ್ತಮ ಭವಿಷ್ಯಕ್ಕೆ ಸಹಾಯವಾಗಲಿದೆ.

    4,608 ಸರ್ವರ್ ಗಳನ್ನು ಹೊಂದಿರುವ ಸಮಿತ್ 2 ಟೆನ್ನಿಸ್ ಕೋರ್ಟ್‍ಗಳ ಜಾಗವನ್ನು ತೆಗೆದುಕೊಳ್ಳಲಿದೆ. 9 ಸಾವಿರ 22-ಕೋರ್ ಐಬಿಎಂ ಪವರ್ 9 ಪ್ರೊಸೆಸರ್ ಗಳನ್ನು ಒಳಗೊಂಡಿದ್ದೂ 27 ಸಾವಿರಕ್ಕೂ ಹೆಚ್ಚು ಎನ್ವಿಡಿಯಾ ಟೆಸ್ಲಾ ವಿ100 ಗ್ರಾಫಿಕ್ ಪ್ರೊಸೆಸರ್ ಗಳನ್ನು ಹೊಂದಿದೆ. ಇಡೀ ವ್ಯವಸ್ಥೆಯನ್ನು ತಂಪಾಗಿಡಲು ಒಂದು ನಿಮಿಷಕ್ಕೆ 15 ಸಾವಿರ ಲೀಟರ್ ನಷ್ಟು ನೀರು ಬೇಕಾಗುತ್ತದೆ. 8100 ಮನೆಗಳು ಬಳಸುವಷ್ಟು ವಿದ್ಯುತ್ ಅನ್ನು ಸಮಿತ್ ಬಳಸುತ್ತದೆ.

    ಅಮೆರಿಕಾ, ಚೈನಾ ದೇಶಗಳಲ್ಲದೆ ಯುರೋಪ್, ಜಪಾನ್ ಹಾಗೂ ಇತರ ದೇಶಗಳ ನಡುವೆ ವೇಗದ ಸೂಪರ್ ಕಂಪ್ಯೂಟರ್ ತಯಾರು ಮಾಡಲು ಸ್ಪರ್ಧೆ ಏರ್ಪಟ್ಟಿದೆ. ಆರೋಗ್ಯ, ಪರಿಸರ ಕ್ಷೇತ್ರಗಳಲ್ಲದೆ ವಿಮಾನ ವಿನ್ಯಾಸ, ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲೂ ಸೂಪರ್ ಕಂಪ್ಯೂಟರ್ ಗಳನ್ನು ಬಳಸಲಾಗುತ್ತದೆ.

    ಕಂಪ್ಯೂಟರ್ ಸಾಮಥ್ರ್ಯ ಮತ್ತು ಫ್ಲಾಪ್ಸ್
    ಫ್ಲಾಪ್ಸ್ (FLOPS) ಎಂದರೆ ಕಂಪ್ಯೂಟರ್ ನ ಸಾಮರ್ಥ್ಯ ಅಳೆಯಲು ಬಳಸುವ ಮಾನದಂಡ. ಫ್ಲೋಟಿಂಗ್ ಪಾಯಿಂಟ್ ಆಪರೇಷನ್ಸ್ ಪರ್ ಸೆಕೆಂಡ್ (Floating Point Operations per Second) ಎಂಬುದು ಇದರ ವಿಸ್ತೃತ ರೂಪ. ಅಂದರೆ, ಒಂದು ಸೆಕೆಂಡ್ ಅವಧಿಯಲ್ಲಿ ಲೆಕ್ಕ ಮಾಡುವ ಕಂಪ್ಯೂಟರ್ ನ ಸಾಮರ್ಥ್ಯ. ಕಂಪ್ಯೂಟರ್ ನ ಕಾರ್ಯನಿರ್ವಹಣಾ ಸಾಮರ್ಥ್ಯ ಒಂದು ಪೆಟಾ ಫ್ಲಾಪ್ಸ್ ಇದ್ದರೆ ಆ ಕಂಪ್ಯೂಟರ್ ಒಂದು ಸೆಕೆಂಡ್‍ನಲ್ಲಿ ಸಾವಿರ ಲಕ್ಷಕೋಟಿಗಳಷ್ಟು ಲೆಕ್ಕಾಚಾರ ಮಾಡುವ ಸಾಮರ್ಥ್ಯ ಹೊಂದಿದೆ ಎಂದರ್ಥ.

  • ಎಐ ಬಗ್ಗೆ ಹೇಳೋ ಆಧುನಿಕ ತಂತ್ರಜ್ಞಾನಕ್ಕಿಂತ ಕುಂಡಲಿ ಮೇಲು: ಹೆಗಡೆ

    ಎಐ ಬಗ್ಗೆ ಹೇಳೋ ಆಧುನಿಕ ತಂತ್ರಜ್ಞಾನಕ್ಕಿಂತ ಕುಂಡಲಿ ಮೇಲು: ಹೆಗಡೆ

    ಹುಬ್ಬಳ್ಳಿ: ಕಂಪ್ಯೂಟರ್ ಸಹಾಯದಿಂದ ನಮ್ಮ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಗ್ಗೆ ಹೇಳುವ ಆಧುನಿಕ ತಂತ್ರಜ್ಞಾನಕ್ಕಿಂತ ನಮ್ಮ ಹಿರಿಯರು ಬರೆಯುತ್ತಿದ್ದ ಕುಂಡಲಿಗಳೇ ಮೇಲು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

    ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಇ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಐ ಬಳಸಿ ನಮ್ಮ ಸಂಪೂರ್ಣ ಮಾಹಿತಿಯನ್ನು ಕ್ರೋಢಿಕರಿಸಿ ಕೊಟ್ಟರೆ ಅದನ್ನು ಆಧುನಿಕ ತಂತ್ರಜ್ಞಾನ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ, ಕೇವಲ ಜನ್ಮದಿನಾಂಕ, ಸಮಯ ಕೊಟ್ಟರೆ ಸಾಕು, ಆ ವ್ಯಕ್ತಿಯನ್ನೂ ನೋಡದೆ ವ್ಯಕ್ತಿತ್ವ, ಬಣ್ಣ, ನಿಲುವು, ಅವನ ಆರೋಗ್ಯ ಮತ್ತು ಅವನು ಎಂದು ಸಾಯುತ್ತಾನೆ ಎಂಬುದನ್ನು ನಮ್ಮ ಕುಂಡಲಿ ಹೇಳುತ್ತದೆ ಎಂದು ತಿಳಿಸಿದರು.

    ಕುಂಡಲಿ ಹೇಳಿದ್ದನ್ನು ನಾವು ಒಪ್ಪುವುದಿಲ್ಲ. ಯಾಕೆಂದರೆ ನಮಗೆ ಹಿತ್ತಲ ಗಿಡ ಮದ್ದಲ್ಲ. ನಾವು ನಮ್ಮ ಭಾಷೆಯಲ್ಲಿ ಹೇಳಿದರೆ ಅದಕ್ಕೆ ಬೆಲೆ ಇಲ್ಲ. ಆದರೆ ಅವರ ಭಾಷೆಯಲ್ಲಿ ಹೇಳಿದರೆ ಹೊಸ ಆವಿಷ್ಕಾರ ಎಂದು ಹೇಳುತ್ತೇವೆ ಎಂದು ಅಭಿಪ್ರಾಯಪಟ್ಟರು.

    ಅಧ್ಯಾತ್ಮ ತಳಹದಿಯಲ್ಲಿ ಜಗತ್ತಿಗೆ ನಾವು ಶೂನ್ಯ ಕೊಟ್ಟಿದ್ದೇವೆ. ಭಾರತ ಜಗತ್ತಿಗೆ ಶೂನ್ಯವನ್ನು ಕೊಡುಗೆಯಾಗಿ ಕೊಡದೇ ಇದ್ದರೆ, ಜಗತ್ತಿನಲ್ಲಿ ಈ ರೀತಿಯ ತಾಂತ್ರಿಕ ಆವಿಷ್ಕಾರಗಳು ನಡೆಯುತ್ತಿರಲಿಲ್ಲ. ನಾನು ಹೇಳುತ್ತಿಲ್ಲ, ವಿಜ್ಞಾನಿ ಐನ್ ಸ್ಟೈನ್ ಹೇಳಿರುವ ಮಾತು. ಆದರೆ ಈ ಮಾತನ್ನು ಅನಂತಕುಮಾರ ಹೆಗಡೆ ಹೇಳಿದ್ದರೆ ಚಡ್ಡಿ ಹಾಕಿಕೊಂಡು ಹೇಳಿದ ಎಂದು ಎಡಬಿಡಂಗಿಗಳು ಹೇಳುತ್ತಾರೆ ವ್ಯಂಗ್ಯವಾಡಿದರು.

    ಈ ವೇಳೆ, ನಮ್ಮ ಇತ್ತೀಚಿನ ಕವಿಗಳು ಕನಸಲ್ಲಿ ಕಂಡದನ್ನು ಬೆಳಗಿನಲ್ಲಿ ಶಬ್ದಗಳಲ್ಲಿ ಜೋಡಿಸಿದ ಹಾಗೆ ಬರೆಯುತ್ತಾರೆ. ಅದಕ್ಕೆ ಯಾವುದೇ ಅರ್ಥ, ಛಂದಸ್ಸು, ಅಲಂಕಾರ ಇರುವುದಿಲ್ಲ ಎಂದು ಹೇಳಿ ತನ್ನನ್ನು ಟೀಕಿಸುವ ಸಾಹಿತಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.