Tag: ಕೂಲ್ ಡ್ರಿಂಕ್ಸ್

  • ವಿಡಿಯೋ: ಚಿಕನ್ ಜೊತೆ ಕೂಲ್ ಡ್ರಿಂಕ್ಸ್ ನೀಡದ್ದಕ್ಕೆ ರೊಚ್ಚಿಗೆದ್ದ ಯುವತಿ!

    ವಿಡಿಯೋ: ಚಿಕನ್ ಜೊತೆ ಕೂಲ್ ಡ್ರಿಂಕ್ಸ್ ನೀಡದ್ದಕ್ಕೆ ರೊಚ್ಚಿಗೆದ್ದ ಯುವತಿ!

    ವಾಷಿಂಗ್ಟನ್: ಯುವತಿಯೊಬ್ಬಳು ಚಿಕನ್ ಜೊತೆ ಉಚಿತ ಕೂಲ್ ಡ್ರಿಂಕ್ಸ್ ನೀಡಿಲ್ಲ ಎಂದು ರೊಚ್ಚಿಗೆದ್ದು ರೆಸ್ಟೋರೆಂಟ್‍ನನ್ನು ವಸ್ತುಗಳನ್ನೆಲ್ಲಾ ಎಸೆದು, ಕಿಟಕಿಯ ಗಾಜನ್ನು ಹೊಡೆದ ಘಟನೆ ಭಾನುವಾರ ಅಮೆರಿಕದ ನ್ಯೂಯಾರ್ಕ್‍ನಲ್ಲಿ ನಡೆದಿದೆ.

    ಯುವತಿ 4 ಡಾಲರ್(266 ರೂ) ಗೆ ಚಿಕನ್ ಖರೀದಿಸಿದ್ದಳು. ಆದರೆ ಅದಕ್ಕೆ ಕೂಲ್ ಡ್ರಿಂಕ್ಸ್ ನೀಡಲಿಲ್ಲ ಎಂದು ರೆಸ್ಟೋರೆಂಟ್ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದಿದ್ದಾಳೆ. ಈ ವಿಡಿಯೋ ರೆಸ್ಟೋರೆಂಟ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮಾಧ್ಯಮಗಳ ಪ್ರಕಾರ ಯುವತಿ ಚಿಕನ್ ಆರ್ಡರ್ ಮಾಡಿದ್ದಳು. ಚಿಕನ್ ಜೊತೆ ಕೂಲ್ ಡ್ರಿಂಕ್ಸ್ ಉಚಿತ ಎಂದುಕೊಂಡು ಅದನ್ನು ನಿರೀಕ್ಷಿಸುತ್ತಿದ್ದಳು. ನಂತರ ಆಕೆ ವೇಟರ್ ತಂದುಕೊಟ್ಟ ಚಿಕನ್ ತಿಂದಳು ಎಂದು ವರದಿಯಾಗಿದೆ.

    ಚಿಕನ್ ತಿಂದ ನಂತರ ಕೂಲ್ ಡ್ರಿಂಕ್ಸ್ ಬರಲಿಲ್ಲ ಎಂದು ಯುವತಿ ರೊಚ್ಚಿಗೆದ್ದು ರೆಸ್ಟೋರೆಂಟ್‍ನ ಸಿಬ್ಬಂದಿಯ ಹತ್ತಿರ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಅಲ್ಲದೇ ಅಲ್ಲಿದ್ದ ವಸ್ತುಗಳನ್ನು ಎಸೆದು, ಚೇರಿನಿಂದ ರೆಸ್ಟೋರೆಂಟ್‍ನ ಕಿಟಕಿಯ ಗಾಜನ್ನು ಒಡೆದಿದ್ದಾಳೆ.

    ರೆಸ್ಟೋರೆಂಟ್‍ನ ಸಿಬ್ಬಂದಿ ಪ್ರಕಾರ ಯುವತಿ ಕುಡಿದ ನಶೆಯಲ್ಲಿದ್ದಳು. ಹಾಗಾಗಿ ಆಕೆ ಕೂಲ್ ಡ್ರಿಂಕ್ಸ್ ಸಿಗದಿದ್ದಕ್ಕೆ ಈ ರೀತಿ ಮಾಡಿದ್ದಾಳೆ ಎಂದು ಹೇಳಿದ್ದಾರೆ. ಯುವತಿಯ ಈ ವರ್ತನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಪೊಲೀಸರು ಆಕೆಯನ್ನು ಹುಡುಕುತ್ತಿದ್ದಾರೆ.

  • ಮಧ್ಯರಾತ್ರಿ ಧಗಧಗನೆ ಹೊತ್ತಿ ಉರಿದ ಹೊಟೇಲ್, ಕೂಲ್ ಡ್ರಿಂಕ್ಸ್ ಅಂಗಡಿ, ಪಾನ್ ಶಾಪ್

    ಮಧ್ಯರಾತ್ರಿ ಧಗಧಗನೆ ಹೊತ್ತಿ ಉರಿದ ಹೊಟೇಲ್, ಕೂಲ್ ಡ್ರಿಂಕ್ಸ್ ಅಂಗಡಿ, ಪಾನ್ ಶಾಪ್

    ಗದಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮೂರು ಅಂಗಡಿಗಳು ಧಗಧಗನೆ ಹೊತ್ತಿ ಉರಿದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಆಲೂರ ವೆಂಕರಾವ್ ಸರ್ಕಲ್ ಬಳಿ ಇರುವ ಹೊಟೇಲ್, ಕೂಲ್ ಡ್ರಿಂಕ್ಸ್ ಅಂಗಡಿ ಹಾಗೂ ಪಾನ್ ಶಾಪ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳೀಯ ನಿವಾಸಿಯೊಬ್ಬರಿಗೆ ಸೇರಿದ ಈ ಹೊಟೇಲ್‍ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ನಂತರ ಪಕ್ಕದ ಪವಾರ್ ಎಂಬವರ ಕೋಲ್ ಡ್ರಿಂಕ್ಸ್ ಅಂಗಡಿಗೆ ತಗುಲಿದೆ.

    ಕೂಲ್ ಡ್ರಿಂಕ್ಸ್ ಅಂಗಡಿಯಲ್ಲಿದ್ದ ಮೂರು ಸಿಲಿಂಡರ್ ಗಳಲ್ಲಿ ಒಂದು ಸಿಲಿಂಡರ್ ಸ್ಫೋಟಗೊಂಡಿದೆ. ಇನ್ನೆರಡು ಸಿಲಿಂಡರ್ ಸ್ಫೋಟಗೊಳ್ಳುತ್ತವೆ ಎಂದು ಭಯಗೊಂಡು ಸಾರ್ವಜನಿಕರು ಬೆಂಕಿ ನಂದಿಸಲು ಮುಂದಾಗಲಿಲ್ಲ. ಇದರ ಪರಿಣಾಮ ಅಕ್ಕಪಕ್ಕದ ಅಂಗಡಿಗೂ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.

    ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಡಿಯೋ: ಕೂಲ್ ಡ್ರಿಂಕ್ಸ್ ಬಾಟಲಿ ನುಂಗಿತು ನಾಗರ ಹಾವು!

    ವಿಡಿಯೋ: ಕೂಲ್ ಡ್ರಿಂಕ್ಸ್ ಬಾಟಲಿ ನುಂಗಿತು ನಾಗರ ಹಾವು!

    ಕಾರವಾರ: ಆಹಾರ ಅರಸಿ ಬಂದಿದ್ದ ನಾಗರಹಾವೊಂದು ಮನೆಯೊಳಗಿದ್ದ ಕೂಲ್ ಡ್ರಿಂಕ್ಸ್ ಬಾಟಲಿಯನ್ನು ನುಂಗಿದ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಲಂಡಕನ ಹಳ್ಳಿಯಲ್ಲಿ ನಡೆದಿದೆ.

    ಶುಕ್ರವಾರ ಸಂಜೆ ನಾಗರಹಾವು ಆಹಾರ ಅರಸಿ ಮುನಾಫ್ ಎಂಬುವರ ಮನೆಯ ಕೋಳಿ ಗೂಡಿಗೆ ಲಗ್ಗೆ ಇಟ್ಟಿತ್ತು. ಹೀಗಾಗಿ ನಾಗರ ಹಾವು ಕೋಳಿ ಮೊಟ್ಟೆ ಎಂದು ತಿಳಿದು ಕೂಲ್ ಡ್ರಿಂಕ್ಸ್ ಬಾಟಲಿಯನ್ನು ನುಂಗಿದೆ.

    ಕೋಳಿ ಕೂಗಾಟದಿಂದ ಮನೆಯ ಮಾಲೀಕರಿಗೆ ಹಾವು ಬಾಟಲನ್ನು ನುಂಗಿದ್ದು ಗಮನಕ್ಕೆ ಬಂದಿದೆ. ಇದನ್ನು ಕಂಡು ಮಾಲೀಕ ಉರಗ ತಜ್ಞ ಪ್ರಶಾಂತ್ ಹುಲೇಕಲ್ ಅವರನ್ನು ಕರೆಸಿದ್ದಾರೆ. ಕೊನೆಗೆ ಪ್ರಶಾಂತ್ ಅವರು ನಾಗರಹವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    https://youtu.be/6QOqNtOIDsQ