Tag: ಕೂಲಿ ನಂ.1 ಹಾಡು

  • ಕೂಲಿ ನಂ.1 ಹಾಡಿಗೆ ಸಕ್ಕತ್ತಾಗಿ ಸ್ಟೆಪ್ ಹಾಕಿದ ಸನ್ನಿ ಲಿಯೋನ್- ವಿಡಿಯೋ ವೈರಲ್

    ಕೂಲಿ ನಂ.1 ಹಾಡಿಗೆ ಸಕ್ಕತ್ತಾಗಿ ಸ್ಟೆಪ್ ಹಾಕಿದ ಸನ್ನಿ ಲಿಯೋನ್- ವಿಡಿಯೋ ವೈರಲ್

    ಮುಂಬೈ: ಬಾಲಿವುಡ್‍ನ ಬೇಬಿ ಡಾಲ್ ಸನ್ನಿ ಲಿಯೋನ್ ಕೂಲಿ ನಂ.1 ಚಿತ್ರದ ಹಾಡೊಂದಕ್ಕೆ ಸಕ್ಕತ್ತಾಗಿ ಸ್ಟೆಪ್ ಹಾಕುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬಿಟೌನ್ ಅಂಗಳದಲ್ಲಿ ತನ್ನ ಮಾದಕ ನೋಟದಿಂದಲೇ ಹೆಸರು ಮಾಡಿರುವ ಸನ್ನಿ ಲಿಯೋನ್ ಹಲವು ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು. ಆದ್ರೆ ಇತ್ತಿಚಿಗೆ ತಮ್ಮ ಹೊಸ ಚಿತ್ರವೊಂದರ ಶೂಟಿಂಗ್ ವೇಳೆಯಲ್ಲಿ ಬಾಲಿವುಡ್‍ನ ಜನಪ್ರಿಯ ಹಾಡು ಕೂಲಿ ನಂ.1 ಚಿತ್ರದ `ಮೇ ತೋ ರಸ್ತೆ ಸೆ ಜಾ ರಹಾ ಥಾ’ ಹಾಡಿಗೆ ಸೂಪರ್ ಆಗಿ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

    https://www.instagram.com/p/BqUPAAWBgBr/?utm_source=ig_embed

    ಕೆಲವು ದಿನಗಳ ಹಿಂದೆಯಷ್ಟೆ ಹಿಂದಿ ಮಾಧ್ಯಮದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋವೊಂದಲ್ಲಿ ಲೈಲಾ ಹಾಡಿಗೆ ಹೆಜ್ಜೆ ಹಾಕಿ ಸನ್ನಿ ಸುದ್ದಿಯಾಗಿದ್ದರು. ಈಗ ಕೂಲಿ ನಂ.1 ಚಿತ್ರದ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸದ್ಯ ಸನ್ನಿಯ ಡ್ಯಾನ್ಸ್ ಸ್ಟೆಪ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಭಾನುವಾರ ಈ ವಿಡಿಯೋವನ್ನು ಸನ್ನಿ ಅಪ್ಲೋಡ್ ಮಾಡಿದ್ದು 7.65 ಲಕ್ಷ ವ್ಯೂ ಕಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews