Tag: ಕೂಲಿ ಕಾರ್ಮಿಕ

  • ಕಾಡಾನೆ ತುಳಿತಕ್ಕೆ ಕೂಲಿ ಕಾರ್ಮಿಕ ಬಲಿ!

    ಕಾಡಾನೆ ತುಳಿತಕ್ಕೆ ಕೂಲಿ ಕಾರ್ಮಿಕ ಬಲಿ!

    ಮೈಸೂರು: ಕಾಡಾನೆಯೊಂದು ಕೆಲಸದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕನನ್ನು ಕಾಲಿನಿಂದ ತುಳಿದು ಸಾಯಿಸಿದ ಘಟನೆ ಎಚ್.ಡಿ.ಕೋಟೆಯ ಹೈರಿಗೆ-ಮಾದಾಪುರ ಸಮೀಪದಲ್ಲಿ ನಡೆದಿದೆ.

    ರಾಯಚೂರಿನ ಕಕ್ಕೇರಿ ಮೂಲದ ಹನುಮಂತಪ್ಪ(50) ಮೃತ ದುರ್ದೈವಿ. ನಾಲೆ ಕೆಲಸಕ್ಕಾಗಿ ಮೈಸೂರಿಗೆ 8 ಮಂದಿ ಕೂಲಿ ಕಾರ್ಮಿಕರು ಬಂದಿದ್ದರು. ಅವರಲ್ಲಿ ಹನುಮಂತಪ್ಪ ಕೂಡ ಒಬ್ಬರು. ಬೇರೆ ಊರಿನಿಂದ ಜೀವನ ನಡೆಸಲು ಕೆಲಸಕ್ಕೆಂದು ಬಂದ ಹನುಮಂತಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಇಂದು ಮುಂಜಾನೆ ಕಾರ್ಮಿಕರೆಲ್ಲ ನಾಲೆ ಕೆಲಸದಲ್ಲಿ ತೊಡಗಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿ ಕಾಲಿನಿಂದ ಕಾರ್ಮಿಕನನ್ನು ತುಳಿದಿದೆ. ಪರಿಣಾಮ ಸ್ಥಳದಲ್ಲೇ ಹನುಮಂತಪ್ಪ ಸಾವನ್ನಪ್ಪಿದ್ದಾರೆ.

    ಶುಕ್ರವಾರ ರಾತ್ರಿ ಹೈರಿಗೆ-ಮಾದಾಪುರ ಸಮೀಪದ ಜಮೀನಿಗೆ ಕಾಡಾನೆಗಳು ನುಗ್ಗಿದ್ದವು. ಈ ವೇಳೆ ರೈತರು ಆನೆಯನ್ನ ಓಡಿಸಲು ಮುಂದಾಗಿದ್ದು, ಜಮೀನಿಂದ ನಾಲೆಯತ್ತ ಬಂದ ಕಾಡಾನೆ ಕಾರ್ಮಿಕನ ಮೇಲೆ ದಾಳಿ ಮಾಡಿ ಬಲಿ ಪಡೆದಿದೆ.

    ಇದೀಗ ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣು

    ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣು

    ಬೀದರ್: ಸಾಲಬಾಧೆಯಿಂದ ಮನನೊಂದು ಕೂಲಿ ಕಾರ್ಮಿಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ಬರ್ಗಾನ್ ತಾಂಡದಲ್ಲಿ ನಡೆದಿದೆ.

    ರಾಮ್‍ರಾವ್ ರಾಥೋಡ್ (37) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ರಾಮ್‍ರಾವ್ ಖಾಸಗಿಯಾಗಿ ಸಾಲ ಮಾಡಿಕೊಂಡು ಅದನ್ನು ಮರುಪಾವತಿ ಮಾಡಲಾದಗೆ ಕಷ್ಟಪಡುತ್ತಿದ್ದರು. ಸಾಲಬಾಧೆಯಿಂದ ಬೇಸತ್ತ ಕಾರ್ಮಿಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ರಾಥೋಡ್ ಸಾವಿನಿಂದ ಮನನೊಂದಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಇಟ್ಟಿಗೆ ಕಾರ್ಖಾನೆಯ ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಬಲಗೈನ ಅಂಗೈ ಅಪ್ಪಚ್ಚಿ!

    ಇಟ್ಟಿಗೆ ಕಾರ್ಖಾನೆಯ ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಬಲಗೈನ ಅಂಗೈ ಅಪ್ಪಚ್ಚಿ!

    ಕೋಲಾರ: ಇಟ್ಟಿಗೆ ಕಾರ್ಖಾನೆಯ ಯಂತ್ರಕ್ಕೆ ಕೈ ಸಿಲುಕಿ ಕೂಲಿ ಕಾರ್ಮಿಕರೊಬ್ಬರು ಕೈ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಮಾಲೂರು ತಾಲೂಕಿನ ದ್ಯಾಪಸಂದ್ರ ಗ್ರಾಮದ ರಾಜಾರಾಮ್ ಇಟ್ಟಿಗೆ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದ್ದು, 30 ವರ್ಷದ ಅಕ್ಬರ್ ಅಲಿ ಕೈಕಳೆದುಕೊಂಡ ಕೂಲಿ ಕಾರ್ಮಿಕರಾಗಿದ್ದಾರೆ.

    ಇಟ್ಟಿಗೆ ಕೊಯ್ಯುವಾಗ ಅಚಾನಕ್ಕಾಗಿ ಕಾರ್ಮಿಕ ಅಕ್ಬರ್ ಅಲಿಯ ಬಲಗೈ ಯಂತ್ರದಲ್ಲಿ ಸಿಲುಕಿದ್ದು, ಪರಿಣಾಮ ಅಂಗೈ ಸಂಪೂರ್ಣ ನಜ್ಜು ಗುಜ್ಜಾಗಿದೆ. ಕೂಡಲೇ ಗಾಯಾಳುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.