Tag: ಕೂದಲು

  • ರಾಜೀವ್ ತಲೆಗೂದಲ ಮೇಲೆ ಬಿತ್ತು ಲ್ಯಾಗ್ ಮಂಜು ಕಣ್ಣು!

    ರಾಜೀವ್ ತಲೆಗೂದಲ ಮೇಲೆ ಬಿತ್ತು ಲ್ಯಾಗ್ ಮಂಜು ಕಣ್ಣು!

    ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಮನೆಯ ಸದಸ್ಯರಿಗೆ, ಪಿಸಿಕಲ್ ಟಾಸ್ಕ್, ಕ್ವೀಜ್ ಹೀಗೆ ಹಲವು ರೀತಿಯ ಟಾಸ್ಕ್‍ಗಳನ್ನು ನೀಡಿರುವುದನ್ನು ನೋಡಿದ್ದೇವೆ. ಅಲ್ಲದೆ ಈ ಹಿಂದಿನ ಸೀಸನ್‍ಗಳಲ್ಲಿ ಕೂದಲಿನ ಮೇಲೆ ಪ್ರೀತಿ ಇಟ್ಟುಕೊಂಡಿದ್ದ ಕೆಲ ಸದಸ್ಯರ ಹೇರ್ ಕಟ್ ಮಾಡಿಸಿರುವುದನ್ನು ನೋಡಿದ್ದೇವೆ. ಸದ್ಯ ಬಿಗ್‍ಬಾಸ್ ಸೀಸನ್-8ರಲ್ಲಿ ಮನೆಯ ಎಲ್ಲಾ ಪುರುಷ ಸದಸ್ಯರಲ್ಲಿ ಹೆಚ್ಚು ತಲೆಕೂದಲು ಹೊಂದಿರುವವರು ಎಂದರೆ ರಾಜೀವ್.

    ಲಾಂಗ್ ಹೇರ್ ಬೆಳೆಸಿಕೊಂಡು ಸಖತ್ ಸ್ಟೈಲಿಶ್ ಆಗಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟವರು ರಾಜೀವ್. ಕೂದಲು ಬಗ್ಗೆ ಅದೇನೋ ಒಂದು ರೀತಿಯ ಪ್ರೀತಿ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ನಿನ್ನೆ ರಾಜೀವ್ ಜುಟ್ಟು ಬಿಟ್ಟುಕೊಂಡು ಮನೆಯಲ್ಲಿ ಓಡಾಡುತ್ತಿರುತ್ತಾರೆ. ಇದನ್ನು ನೋಡಿ ಮಂಜು ಬಿಗ್‍ಬಾಸ್‍ಗೆ ಪರೋಕ್ಷವಾಗಿ ರಾಜೀವ್ ಕೂದಲಿಗೆ ಕತ್ತರಿ ಹಾಕಿಸುವಂತೆ ಕ್ಲೂ ನೀಡಿದ್ದಾರೆ.

    ಅಣ್ಣ ಈ ಟೈಮ್‍ನಲ್ಲಿ ಕೂದಲು ಜಾಸ್ತಿ ಇರಬಾರದು. ಯಾಕೆಂದರೆ ನಾವು ತಿನ್ನುವ ಊಟವನ್ನೆಲ್ಲಾ ಕೂದಲೇ ಹೆಚ್ಚಾಗಿ ತಿನ್ನುತ್ತದೆ ಎನ್ನುತ್ತಾರೆ. ಆಗ ರಾಜೀವ್ ಹೋದರೆ ಹೋಗಲಿ ಬಿಡು ಎಂದು ಹೇಳುತ್ತಾರೆ. ಈ ವೇಳೆ ಮಂಜು ಬಿಗ್‍ಬಾಸ್ ನಾನು ನಿಮಗೊಂದು ರಿಕ್ವೆಸ್ಟ್ ಮಾಡುತ್ತೇನೆ. ನಮ್ಮಣ್ಣ ಬಹಳ ಸಣ್ಣ ಆಗುತ್ತಿದ್ದಾರೆ. ಆಗ ರಾಜೀವ್ ಮಂಜು ಬೇಡ ಏನು ಹೇಳಬೇಡ ಪ್ಲೀಸ್ ಸುಮ್ಮನಿದ್ದು ಬಿಡು, ಕೂದಲು ಬಗ್ಗೆ ಏನು ಮಾಡಬೇಡ. ಬಿಗ್‍ಬಾಸ್ ಜೊತೆ ಯಾಕೋ ಜಗಳ ಮಾಡುತ್ತಿದ್ದೀಯಾ ಎಂದು ತಲೆ ಮೇಲೆ ಕೈ ಹಿಡಿದುಕೊಳ್ಳುತ್ತಾರೆ. ಅದಕ್ಕೆ ಮಂಜು ಇಲ್ಲ ಅಣ್ಣ ಬರೀ ಹೇಳಿದ್ದಷ್ಟೇ ಎನ್ನುತ್ತಾ, ಚೆನ್ನಾಗಿರುವುದಿಲ್ಲ ಬಿಗ್‍ಬಾಸ್ ನಮ್ಮ ಅಣ್ಣನ ಕೂದಲಿಗೆ ಏನಾದರೂ ಮಾಡಿದರೇ ಎಂದು ಕೈ ಸನ್ನೆ ಮೂಲಕ ಕತ್ತರಿಸುವಂತೆ ಕ್ಯಾಮೆರಾ ಮುಂದೆ ಹಾಸ್ಯಮಯವಾಗಿ ಅವಾಜ್ ಹಾಕುತ್ತಾರೆ.

    ಈ ವೇಳೆ ಮನೆ ಮಂದಿಯೆಲ್ಲಾ ರಾಜೀವ್ ನಿಮ್ಮ ಕೂದಲು ಕತ್ತರಿಸಲೆಂದು ಮಂಜು ಬಿಗ್‍ಬಾಸ್‍ಗೆ ಫಿಟ್ಟಿಂಗ್ ಹಾಕಿಕೊಡುತ್ತಿದ್ದಾರೆ ಎಂದು ಹೇಳುತ್ತಾರೆ. ಅಲ್ಲದೆ ಇತ್ತೀಚೆಗಷ್ಟೇ ರಾಜೀವ್ ಮಡದಿ ಕ್ಯಾಪ್ಟನ್ ಆದಾಗ ವಾಯ್ಸ್ ರೆಕಾರ್ಡರ್ ಕಳಿಸುವ ಮೂಲಕ ವಿಶ್ ಮಾಡಿದ್ದರು. ಈ ವೇಳೆ ನೀವು ಕೂದಲನ್ನು ಕೆಳಗೆ ಕಟ್ಟುತ್ತಿದ್ದೀರಾ, ಅದು ನಿಮಗೆ ಚೆನ್ನಾಗಿ ಕಾಣಿಸುತ್ತಿಲ್ಲ. ಮನೆಯಲ್ಲಿ ಹೇಗೆ ಕೂದಲನ್ನು ಮೇಲೆ ಕಟ್ಟುತ್ತಿದ್ರೋ ಹಾಗೇ ಬಿಗ್‍ಬಾಸ್ ಮನೆಯಲ್ಲಿ ಕೂಡ ಕೂದಲನ್ನು ಮೇಲಕ್ಕೆ ಕಟ್ಟಿಕೊಳ್ಳಿ ಎಂದು ತಿಳಿಸಿದ್ದರು.

    ಈ ಹಿಂದೆ ಬಿಗ್‍ಬಾಸ್ ಸೀಸನ್-3ರಲ್ಲಿ ನಟ ಚಂದನ್‍ರವರ ಹೇರ್ ಟ್ರೀಮ್ ಮಾಡಿಸಲಾಗಿತ್ತು. ಅಲ್ಲದೆ ಬಿಗ್‍ಬಾಸ್ ಸೀಸನ್-7ರಲ್ಲಿ ಬಿಗ್‍ಬಿಸ್ ದೀಪಿಕಾ ದಾಸ್‍ಗೆ ಶೈನಿ ಶೆಟ್ಟಿ ಗಡ್ಡ ತೆಗೆಸುವಂತೆ ಟಾಸ್ಕ್ ನೀಡಿದ್ದರು.

  • ವಿಮಾನದಲ್ಲಿ ಕಿರಿಕಿರಿ ಉಂಟುಮಾಡಿದ ಯುವತಿಗೆ ತಲೆಗೂದಲಿಗೆ ಚ್ಯುಯಿಂಗಮ್ ಅಂಟಿಸಿದ್ಳು!

    ವಿಮಾನದಲ್ಲಿ ಕಿರಿಕಿರಿ ಉಂಟುಮಾಡಿದ ಯುವತಿಗೆ ತಲೆಗೂದಲಿಗೆ ಚ್ಯುಯಿಂಗಮ್ ಅಂಟಿಸಿದ್ಳು!

    ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಆನ್ ಬೋರ್ಡ್ ಟಿವಿ ನೋಡುತ್ತಿರುವಾಗ ಕಿರಿಕಿರಿ ಉಂಟುಮಾಡಿದ ಯುವತಿಯ ಕೂದಲಿಗೆ ಸಹಪ್ರಯಾಣಿಕೆ ಒಬ್ಬರು ಚ್ಯುಯಿಂಗಮ್ ಹಾಗೂ ಲಾಲಿಪಪ್ ಅಂಟಿಸಿದ ಪ್ರಸಂಗವೊಂದು ನಡೆದಿದೆ.

    ಹೌದು. ವಿಮಾನದಲ್ಲಿ ಪ್ರಯಾಣಿಕರಿಬ್ಬರ ನಡುವೆ ನಡೆದ ಚಿಕ್ಕ ಗಲಾಟೆಯ ವೀಡಿಯೋವೊಂದನ್ನು ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಘಟನೆ ಎಲ್ಲಿ ನಡೆದಿದ್ದು ಹಾಗೂ ಈ ಪ್ರಸಂಗ ನಿಜವಾಗಿಯೂ ನಡೆದಿದೆಯಾ ಎಂಬ ಅನುಮಾನ ಕೂಡ ಮೂಡಿದೆ.

    ವೀಡಿಯೋದಲ್ಲಿ ಏನಿದೆ..?
    ವಿಮಾನದಲ್ಲಿ ಕುಳಿತಿದ್ದ ಯುವತಿಯೊಬ್ಬಳು ತನ್ನ ಉದ್ದನೆಯ ಚಿನ್ನದ ಬಣ್ಣದ ಕೂದಲನ್ನು ಹಿಂಬದಿಯಲ್ಲಿದ್ದ ಆನ್‍ಬೋರ್ಡ್ ಟಿವಿ ಪರದೆ ಮೇಲೆ ಹಾಕಿದ್ದಾಳೆ. ಆದರೆ ಟಿವಿ ಕಾಣದಿದ್ದರಿಂದ ಹಿಂದಿನ ಸೀಟಿನಲ್ಲಿದ್ದ ಮಹಿಳೆಯ ಒಂದೆರಡು ಬಾರಿ ಕೂದಲನ್ನು ಮುಂದಕ್ಕೆ ಹಾಕುತ್ತಾಲೇ. ಆದರೆ ಯುವತಿ ಮಾತ್ರ ಆಗಾಗ ಕೂದಲನ್ನು ಹಿಂದಕ್ಕೆ ಹಾಕುವ ಮೂಲಕ ಮಹಿಳೆಗೆ ಕಿರಿಕಿರಿ ಉಂಟು ಮಾಡುತ್ತಿದ್ದಳು.

    ಯುವತಿಯ ಕೂದಲಿನಿಂದ ಬೇಸತ್ತ ಮಹಿಳೆ ತನ್ನಲ್ಲಿದ್ದ ಚ್ಯುಯಿಂಗಮ್, ಲಾಲಿಪಪ್ ಅನ್ನು ಕೂದಲಿಗೆ ಅಂಟಿಸಿದ್ದಾಳೆ. ಅಲ್ಲದೆ ಅಲ್ಲೇ ಇದ್ದ ಕಾಫಿ ಕಪ್ ಗೆ ಕೂಡ ಕೂದಲನ್ನು ಮುಳುಗಿಸಿದ್ದಾಳೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನೇಲ್ ಕಟ್ಟರ್ ಸಹಾಯದಿಂದ ಕೂದಲನ್ನು ಕತ್ತರಿಸಿದ್ದಾಳೆ. ನಂತರ ಮತ್ತೆ ಪದೇ ಪದೇ ಕೂದಲನ್ನು ಎದುರು ಹಾಕಿದ್ರೂ ಯುವತಿ ಮಾತ್ರ ತನ್ನ ಕೂದಲನ್ನು ಹಿಂದಕ್ಕೆ ಹಾಕುತ್ತಲೇ ಬಂದಿದ್ದಾಳೆ. ಕೊನೆಗೆ ಆಕೆಯ ಕೈಗೆ ಕೂದಲಲ್ಲಿದ್ದ ಚ್ಯುಯಿಂಗಮ್ ಸಿಕ್ಕಿದ್ದು, ಅಚ್ಚರಿಗೊಂಡಿದ್ದಾಳೆ. ಅಲ್ಲದೆ ತಾನು ಕುಳೀತಿದ್ದ ಸೀಟಿನಿಂದ ಎದ್ದು ಮುಂದಕ್ಕೆ ಹೋಗಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

    https://www.youtube.com/watch?time_continue=183&v=4SCSr2tBYDg&feature=emb_title&ab_channel=SpottedUK

  • ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಧ್ರುವ ಸರ್ಜಾ ಕೂದಲು ದಾನ

    ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಧ್ರುವ ಸರ್ಜಾ ಕೂದಲು ದಾನ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ತನ್ನ ಕೂದಲನ್ನು ದಾನ ಮಾಡಿದ್ದಾರೆ.

    ಧ್ರುವ ಅವರು ‘ಪೊಗರು’ ಚಿತ್ರಕ್ಕಾಗಿ ಕಳೆದ 2 ವರ್ಷದಿಂದ ಕೂದಲು ಬಿಟ್ಟಿದ್ದರು. ಇದೀಗ ಅವರ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಬಿದ್ದಿದೆ. ಸಿನಿಮಾ ಕಂಪ್ಲೀಟ್ ಆದ ಹಿನ್ನೆಲೆಯಲ್ಲಿ ಧ್ರುವ ಅವರು ಹೇರ್ ಕಟ್ ಮಾಡಿಸಿದ್ದಾರೆ. ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಈ ಕೂದಲು ಕೊಡೋದಾಗಿ ಧ್ರುವ ಹೇಳಿದ್ದಾರೆ.

    ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಂದಕಿಶೋರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾ ಬಿಡುಗಡೆಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

    ಈ ಹಿಂದೆ ಚಿತ್ರ ಬಿಡುಗಡೆಯ ಬಗ್ಗೆ ಮಾತನಾಡಿದ್ದ ನಂದಕಿಶೋರ್, ‘ಪೊಗರು’ ಚಿತ್ರವನ್ನು ಡಿಸೆಂಬರ್ 25ರ ಕ್ರಿಸ್‍ಮಸ್ ಹಬ್ಬದಂದು ಅಥವಾ ಜನವರಿ ತಿಂಗಳ ಸಂಕ್ರಾಂತಿ ಹಬ್ಬದಂದು ರಿಲೀಸ್ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಕೂದಲು, ಗಡ್ಡ ಬಿಟ್ಟುಕೊಂಡು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದರು.

  • ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ

    ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ

    – ಸಂಘಟಕರ ವಿರುದ್ಧ ಪೋಷಕರು ಗಂಭೀರ ಆರೋಪ

    ಹೈದರಾಬಾದ್: ವಿದ್ಯಾರ್ಥಿನಿಯೊಬ್ಬಳ ಕೂದಲು ಗೋ-ಕಾರ್ಟ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. ಮೀರ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರ್ರಾಮ್ ಗುಡಾದಲ್ಲಿರುವ ಗೋ-ಕಾರ್ಟಿಂಗ್ ಪ್ಲೇ ಝೋನ್ ನಲ್ಲಿ ಈ ಅವಘಡ ಸಂಭವಿಸಿದೆ.

    ಮೃತ ದುರ್ದೈವಿಯನ್ನು ವರ್ಷಿಣಿ ಎಂದು ಗುರುತಿಸಲಾಗಿದ್ದು, ಈಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಗುರುವಾರ ಸಂಜೆ ಗುರ್ರಾಮ್ ಗುಡಾದ ಗೋ-ಕಾರ್ಟಿಂಗ್ ಪ್ಲೇ ಝೋನ್ ಗೆ ತೆರಳಿದ್ದಳು. ಅಲ್ಲದೆ ಗೋ-ಕಾರ್ಟಿಂಗ್ ಮಾಡುತ್ತಿದ್ದ ವೇಳೆ ಅದರ ಚಕ್ರಕ್ಕೆ ವರ್ಷಿಣಿ ಕೂದಲು ಸಿಲುಕಿಕೊಂಡು ತಲೆಗೆ ಗಂಭೀರ ಗಾಯಗಳಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ವರ್ಷಿಣಿ ಕೂದಲು ಚಕ್ರಕ್ಕೆ ಸಿಲುಕಿಕೊಂಡ ಕೂಡಲೇ ಗೋ-ಕಾರ್ಟ್ ಅಪಘಾತಕ್ಕೀಡಾಗಿದೆ. ಪರಿಣಾಮ ಆಕೆ ಧರಿಸಿದ್ದ ಹೆಲ್ಮೆಟ್ ಕೂಡ ಪುಡಿಯಾಗಿದೆ. ಘಟನೆ ನಡೆದ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

    ಇತ್ತ ಘಟನೆಯಿಂದ ಮಗಳನ್ನು ಕಳೆದುಕೊಳ್ಳುತ್ತಿದ್ದಂತೆಯೇ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಗೋ-ಕಾರ್ಟ್ ಪ್ಲೇ ಝೋನ್ ಸಂಘಟಕರ ನಿರ್ಲಕ್ಷ್ಯವೇ ನಮ್ಮ ಮಗಳ ಸಾವಿಗೆ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಹೈದರಾಬಾದ್ ನ ಮೀರ್ ಪೇಟೆ ಪೊಲೀಸ್ ಠಾಣೆಯಲ್ಲಿ ಸಂಘಟಕರ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ.

    ಈ ಹಿಂದೆ ಅಂದರೆ 2018ರಲ್ಲಿ ಹರಿಯಾಣದಲ್ಲಿ ಕೂಡ ಇಂತದ್ದೇ ಘಟನೆ ನಡೆದಿತ್ತು. 29 ವರ್ಷದ ಪುನೀತ್ ಕೌರ್ ಎಂಬ ಮಹಿಳೆಯ ಕೂದಲು ಗೋ-ಕಾರ್ಟ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದರು. ಇದನ್ನೂ ಓದಿ: ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ 28ರ ಮಹಿಳೆ ದುರ್ಮರಣ

  • ಅಲೋಪೆಸಿಯಾದಿಂದ ಬಳಲುತ್ತಿರೋ ಗೆಳತಿಯ ತಲೆ ಬೋಳಿಸಿ ತನ್ನ ಕೂದಲೂ ತೆಗೆದ!

    ಅಲೋಪೆಸಿಯಾದಿಂದ ಬಳಲುತ್ತಿರೋ ಗೆಳತಿಯ ತಲೆ ಬೋಳಿಸಿ ತನ್ನ ಕೂದಲೂ ತೆಗೆದ!

    – ವೈರಲ್ ವಿಡಿಯೋ ನೋಡಿ ಕಣ್ಣೀರು ಹಾಕಿದ ನೆಟ್ಟಿಗರು

    ನವದೆಹಲಿ: ಪ್ರೀತಿ ಕುರುಡು ಅಂತಾರೆ. ನಿಜವಾದ ಪ್ರೀತಿ ಎಲ್ಲ ರೂಪಗಳಲ್ಲಿ ಬರುತ್ತದೆ. ಅಲೋಪೆಸಿಯಾದಿಂದ ಬಳಲುತ್ತಿರುವ ತನ್ನ ಗೆಳತಿಯ ತಲೆ ಬೋಳಿಸಿ ಬಳಿಕ ತನ್ನ ಕೂದಲನ್ನೂ ತೆಗೆದುಕೊಂಡಿರುವುದು ಇದಕ್ಕೆ ಸೂಕ್ತ ನಿದರ್ಶನವಾಗಿದೆ.

    ಇದರ ವಿಡಿಯೋವನ್ನು ಬಾಸ್ಕೆಟ್ ಬಾಲ್ ಮಾಜಿ ಆಟಗಾರ ರೆಕ್ಸ್ ಚಾಂಪ್‍ಮ್ಯಾನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಈತನ ಗೆಳತಿ ಅಲೋಪೆಸಿಯಾ ಎಂಬ ತಲೆಗೂದಲು ಉದುರುವ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಮಾನವೀತೆಯ ದೃಶ್ಯ ನೋಡಿದರೆ ನಿಮ್ಮ ಕಣ್ಣಂಚಲ್ಲೂ ನೀರು ಬರುವುದು ಪಕ್ಕಾ ಎಂದು ಬರೆದುಕೊಂಡಿದ್ದಾರೆ.

    https://twitter.com/RexChapman/status/1288606133414965249

    1 ನಿಮಿಷ ಇರುವ ಈ ವಿಡಿಯೋದಲ್ಲಿ, ಮೊದಲು ಗೆಳೆಯ ತನ್ನ ಗೆಳತಿಯ ತಲೆಯನ್ನು ಸಂಪೂರ್ಣವಾಗಿ ಬೋಳಿಸುತ್ತಿರುತ್ತಾನೆ. ಈ ವೇಳೆ ಆಕೆಗೆ ದುಃಖ ಬಂದರೂ ಅದನ್ನು ತೋರ್ಪಡಿಸಿಕೊಳ್ಳಲಾಗದೆ ತಡಪಡಿಸುತ್ತಾಳೆ. ತನ್ನ ಗೆಳೆಯನ ಮುಖವನ್ನು ನೋಡುತ್ತಿದ್ದಂತೆಯೇ ನಗುತ್ತಾ ಅಳುತ್ತಾಳೆ.

    ಗೆಳತಿಯ ತಲೆಯನ್ನು ಸಂಪೂರ್ಣವಾಗಿ ಬೋಳಿಸಿದ ಬಳಿಕ ಕೂಡಲೇ ತನ್ನ ತಲೆಗೂದಲನ್ನೂ ಟ್ರಿಮ್ಮರ್ ಮೂಲಕ ಬೋಳಿಸಿaಕೊಳ್ಳುತ್ತಾನೆ. ಇದನ್ನು ನೋಡಿದ ಗೆಳತಿ ಶಾಕ್ ನಿಂದ ಕಣ್ಣೀರು ಹಾಕುತ್ತಾಳೆ. ಗೆಳೆಯ ತಾನೂ ತಲೆ ಬೋಳಿಸಿಕೊಳ್ಳುವ ಮೂಲಕ ಗೆಳತಿಗೆ ಧೈರ್ಯ ತುಂಬುತ್ತಾನೆ. ಅವಳು ಅಳುತ್ತಿದ್ದಂತೆಯೇ ಅವನು ಆಕೆಯ ಕೆನ್ನೆಗೆ ಕಿಸ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋ ನೋಡಿ ನೆಟ್ಟಿಗರು ಕಣ್ಣೀರಾಗಿದ್ದಾರೆ. ಅಲ್ಲದೆ ಕೆಲವು ಬಳಕೆದಾರರು ಇದೇ ರೀತಿಯ ಅನುಭವಗಳನ್ನು ಕಮೆಂಟ್ ನಲ್ಲಿ ಹಂಚಿಕೊಂಡಿದ್ದಾರೆ.

    https://twitter.com/Sherlock33M/status/1288659769738309640

  • ತಂದೆಯ ದಾಖಲೆ ಹಿಂದಿಕ್ಕಲು ಮಗಳು ಸಿದ್ಧ

    ತಂದೆಯ ದಾಖಲೆ ಹಿಂದಿಕ್ಕಲು ಮಗಳು ಸಿದ್ಧ

    ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಮಾಡೆಲ್ ಬೆನ್ನಿ ಹಾರ್ಲೆಮ್ ತಮ್ಮ ವಿಶಿಷ್ಟ ಕೂದಲಿನ ಮೂಲಕ 2017ರಲ್ಲಿ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ಅವರ ಕೂದಲು ವಿಶ್ವದ ಅತಿ ಎತ್ತರದ ಮತ್ತು ದಪ್ಪದ ಕೂದಲಾಗಿವೆ.

    ಬೆನ್ನಿ ಅವರ ದಾಖಲೆಯನ್ನು ಈವರೆಗೂ ಯಾರೂ ಹಿಂದಿಕ್ಕಿಲ್ಲ. ಆದರೆ ತಂದೆಯ ದಾಖಲೆಯನ್ನು ಹಿಂದಿಕ್ಕಲು ಬೆನ್ನಿ ಮಗಳು ಜಾಕ್ಸೆನ್ ಹಾರ್ಲೆಮ್ ಮುಂದಾಗಿದ್ದಾರೆ.

    ಹೌದು. ತಂದೆ-ಮಗಳು ಫೋಟೋಶೂಟ್‍ಗಳಲ್ಲಿ ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಬೆನ್ನಿ ತಮ್ಮ ಕೂದಲದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಇದರಿಂದಾಗಿ ಅವರ ಕೂದಲುಗಳು ಯಾವಾಗಲೂ ಆಕರ್ಷಕವಾಗಿ ಕಾಣುತ್ತವೆ. ಬೆನ್ನಿ ಹಾಗೂ ಜಾಕ್ಸೆನ್ ಕೂದಲಿಗೆ ಯಾವುದೇ ರೀತಿಯ ರಾಸಾಯನಿಕ, ಸಾಂಪು ಬಳಸದೆ ನೈಸರ್ಗಿಕ ಗಿಡಮೂಲಿಕೆ ಬಳಿಸುತ್ತಾರೆ.

    ಕ್ಯಾಲಿಫೋರ್ನಿಯಾದ ಬೆನ್ನಿ ಹಾರ್ಲೆಮ್ ಅವರನ್ನು ವಿಶ್ವದ ಅತ್ಯಂತ ಯಶಸ್ವಿ ಬಲಿಷ್ಟ ಕೂದಲು ಹೊಂದಿರುವ ವ್ಯಕ್ತಿಯಾಗಿದ್ದಾರೆ. 2016ರಲ್ಲಿ ಬೆನ್ನಿ ಅವರು ಭಾರೀ ಗಾತ್ರದ ಕೂದಲಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಅವರು ಮೊದಲು ಬೆಳಕಿಗೆ ಬಂಸಿದ್ದರು. ಆ ಬಳಿಕ ಅಂದ್ರೆ 2017ರಲ್ಲಿ ಗಿನ್ನಿಸ್ ವಿಶ್ವ ದಾಖಲೆ ಬರೆದರು.

    ಕೂದಲ ರಕ್ಷಣೆಗಾಗಿ ನಾವು ಮನೆಯಲ್ಲಿ ನೈಸರ್ಗಿಕ ಶಾಂಪೂ ತಯಾರಿಸುತ್ತೇವೆ. ಜೊತೆಗೆ ಪೋಷಕಾಂಶ ನೀಡುವ ಆಹಾರವನ್ನು ತಯಾರಿಸುತ್ತೇವೆ. ಮನೆಯಲ್ಲೇ ಶಾಂಪೂ ತಯಾರಿಸುವುದನ್ನು ಕಲಿಯಬೇಕು ಎಂದು ಮಾಡೆಲ್ ಬೆನ್ನಿ ಹಾರ್ಲೆಮ್ ಹೇಳುತ್ತಾರೆ.

  • ಫೋನ್‍ನಲ್ಲಿ ಮಾತು-ಬಾಲಕಿಯ ಕೂದಲು ಕತ್ತರಿಸಿದ ಪೋಷಕರು

    ಫೋನ್‍ನಲ್ಲಿ ಮಾತು-ಬಾಲಕಿಯ ಕೂದಲು ಕತ್ತರಿಸಿದ ಪೋಷಕರು

    ಭೋಪಾಲ್: ಹುಡುಗನ ಜೊತೆ ಫೋನ್ ನಲ್ಲಿ ಮಾತನಾಡಿದ್ದ ಬಾಲಕಿಯ ಕೂದಲು ಕತ್ತರಿಸಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದ ಸೊಂಡವಾ ಪ್ರದೇಶದ ಅಲಿರಾಜಪುರದಲ್ಲಿ ನಡೆದಿದೆ.

    ಫೋನ್ ನಲ್ಲಿ ಹುಡುಗರ ಜೊತೆ ಮಾತನಾಡಿದ್ದಾಳೆ ಎಂದು ಶಂಕಿಸಿ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತನಾಡಿದ್ದು ತಪ್ಪು ಎಂದು ಹೇಳಿ ಬಾಲಕಿಯ ಕೂದಲನ್ನು ಕತ್ತರಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್‍ಐಆರ್ ಸಹ ದಾಖಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ಅಪ್ರಾಪ್ತ ಬಾಲಕಿ ಠಾಣೆಗೆ ಬಂದು ಪೋಷಕರು ತನ್ನನ್ನು ದೊಣ್ಣೆಯಿಂದ ಥಳಿಸಿ, ಕೂದಲು ಕತ್ತರಿಸಿದ್ದಾರೆ ಎಂದು ದೂರು ನೀಡಿದ್ದಳು. . ಬಾಲಕಿ ಹುಡುಗರ ಜೊತೆ ಫೋನ್ ನಲ್ಲಿ ಮಾತನಾಡುತ್ತಾಳೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಬಾಲಕಿಯ ಚಿಕ್ಕಪ್ಪ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಮಕ್ಕಳಿಗಾಗಿ ತನ್ನ ತಲೆ ಕೂದಲನ್ನೇ 150 ರೂ.ಗೆ ಮಾರಿದ ತಾಯಿ

    ಮಕ್ಕಳಿಗಾಗಿ ತನ್ನ ತಲೆ ಕೂದಲನ್ನೇ 150 ರೂ.ಗೆ ಮಾರಿದ ತಾಯಿ

    ಚೆನ್ನೈ: ಮಕ್ಕಳಿಗೆ ಊಟ ಕೊಡಿಸಲು ಹಣವಿಲ್ಲದೇ ತಾಯಿಯೊಬ್ಬರು ತನ್ನ ತಲೆ ಕೂದಲನ್ನು ಬೊಳಿಸಿ ಅದನ್ನು 150 ರೂ.ಗೆ ಮಾರಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

    ಸೇಲಂನ ಪ್ರೇಮಾ (31) ಎಂಬವರು ತನ್ನ ಮಕ್ಕಳಿಗಾಗಿ ತಲೆ ಕೂದಲನ್ನು ಮಾರಿದ್ದಾರೆ. ಪ್ರೇಮಾ ಅವರ ಪತ್ನಿ ಸೇಲಂ ತುಂಬಾ ಸಾಲ ಮಾಡಿ ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮಾ ದಂಪತಿಗೆ ಮೂರು ಮಕ್ಕಳಿದ್ದು, ಆ ಮಕ್ಕಳಿಗೆ ಊಟ ಕೊಡಿಸಲು ಹಣವಿಲ್ಲದೇ ಪ್ರೇಮಾ ತನ್ನ ತಲೆ ಕೂದಲನ್ನು ಮಾರಿದ್ದಾರೆ.

    ಪತಿಯ ಆತ್ಮಹತ್ಯೆ ನಂತರ ಮೂರು ಮಕ್ಕಳನ್ನು ಸಾಕುವುದು ಪ್ರೇಮಾಗೆ ಕಷ್ಟವಾಗಿದೆ. ಕೊನೆಗೆ ಆ ಮೂವರು ಮಕ್ಕಳನ್ನು ಸಾಕಲು ಪ್ರೇಮಾ ಹಣಕ್ಕಾಗಿ ಅಂಗಲಾಚಿದ್ದಾರೆ. ನಿನ್ನೆ ಶುಕ್ರವಾರ ಆದ ಕಾರಣ ಯಾರೂ ಆಕೆಗೆ ಹಣ ನೀಡಲು ಮುಂದೆ ಬಂದಿಲ್ಲ. ಮಕ್ಕಳ ನೋವನ್ನು ನೋಡಲಾಗದ ಪ್ರೇಮಗೆ ಕೂದಲು ಮಾರುವವರೊಬ್ಬರು ತಲೆ ಬೋಳಿಸಿ ಕೂದಲು ನೀಡಿದರೆ 150 ರೂ. ನೀಡುವುದಾಗಿ ಹೇಳಿದ್ದಾರೆ.

    ಆಗ ಕೊಡಲೇ ತಮ್ಮ ಕೂದಲು ಬೋಳಿಸಿಕೊಂಡ ಪ್ರೇಮ, ಕೂದಲನ್ನು ನೀಡಿ 150 ರೂ. ಪಡೆದು ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಕೊಡಿಸಿ. ನಂತರ ಉಳಿದ ಹಣದಲ್ಲಿ ಕೀಟನಾಶಕ ಖರೀದಿಸಿ ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಸ್ಥಳೀಯರು ಆಕೆಯನ್ನು ಕಾಪಾಡಿದ್ದಾರೆ.

    ಜಿ ಬಾಲಾ ಎಂಬವರು ಪ್ರೇಮಾ ಅವರ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಲ ದಾನಿಗಳು ಅವರಿಗೆ ಧನ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ. ಜೊತೆಗೆ ಜಿಲ್ಲಾಡಳಿತ ಆಕೆಗೆ ಮಾಸಿಕ ವಿಧವೆಯ ಪಿಂಚಣಿಯನ್ನು ಮಂಜೂರು ಮಾಡುವುದಾಗಿ ಹೇಳಿದೆ.

  • ತಿಂಡಿಯಲ್ಲಿ ಕೂದಲು ಸಿಕ್ಕಿದ್ದಕ್ಕೆ ರೊಚ್ಚಿಗೆದ್ದು ಪತ್ನಿಯ ತಲೆಯನ್ನೇ ಬೋಳಿಸಿದ

    ತಿಂಡಿಯಲ್ಲಿ ಕೂದಲು ಸಿಕ್ಕಿದ್ದಕ್ಕೆ ರೊಚ್ಚಿಗೆದ್ದು ಪತ್ನಿಯ ತಲೆಯನ್ನೇ ಬೋಳಿಸಿದ

    ಢಾಕಾ: ಉಪಹಾರದಲ್ಲಿ ಕೂದಲು ಬಂದಿದ್ದಕ್ಕೆ ಸಿಟ್ಟಿಗೆದ್ದು ಬಲವಂತವಾಗಿ ಪತ್ನಿ ತಲೆ ಬೋಳಿಸಿದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

    ಬೆಳಗ್ಗೆ ತಿಂಡಿ ಸೇವಿಸುತ್ತಿದ್ದಾಗ ಹೆಂಡತಿಯ ಕೂದಲು ತಟ್ಟೆಯಲ್ಲಿ ಬಿದ್ದಿದ್ದಕ್ಕೆ ಸಿಟ್ಟಿಗೆದ್ದು ಬಲವಂತವಾಗಿ ತಲೆಯ ಕೂದಲನ್ನು ಬೋಳಿಸಿದ್ದಾನೆ. ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದು, ಸಂಪ್ರದಾಯವಾದಿ ಮುಸ್ಲಿಂ ರಾಷ್ಟ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ ಎಂದು ಹಕ್ಕುಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

    ಬಾಂಗ್ಲಾದೇಶದ ಜಾಯ್‍ಪುರ್‍ನ ವಾಯವ್ಯ ಜಿಲ್ಲೆಯ ಹಳ್ಳಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆಯ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, 35 ವರ್ಷದ ಬಾಬ್ಲು ಮೊಂಡಾಲ್‍ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

    ತನ್ನ ಪತ್ನಿ ಸಿದ್ಧಪಡಿಸಿದ ಅಕ್ಕಿ ಹಾಗೂ ಹಾಲಿನ ಉಪಹಾರವನ್ನು ಸೇವಿಸುತ್ತಿರುವಾಗ ತಟ್ಟೆಯಲ್ಲಿ ಕೂದಲು ಪತ್ತೆಯಾಗಿದೆ. ಕೂದಲನ್ನು ನೋಡುತ್ತಲೇ ಬಾಬ್ಲು ಕೋಪಗೊಂಡು ಹೆಂಡತಿಯನ್ನು ದೂಷಿಸಿದ್ದಾನೆ. ನಂತರ ಬ್ಲೇಡ್ ತೆಗೆದುಕೊಂಡು ಬಲವಂತವಾಗಿ ಹೆಂಡತಿಯ ತಲೆಯನ್ನು ಬೋಳಿಸಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಬಬ್ಲು ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು, ಇದರಿಂದ ಆತನ ಹೆಂಡತಿಗೆ ಘೋರ ನೋವುಂಟಾಗಿದ್ದು, ಗರಿಷ್ಠ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವ ಅಪರಾಧವಾಗಿದೆ. ಅಲ್ಲದೆ ತನ್ನ 23 ವರ್ಷದ ಹೆಂಡತಿಯ ವಿಧೇಯತೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ವಿವರಿಸಿದ್ದಾರೆ.

    ಸರ್ಕಾರೇತರ ಸಂಸ್ಥೆಯೊಂದರ ಪ್ರಕಾರ, ವರ್ಷದ ಮೊದಲ ಆರು ತಿಂಗಳಲ್ಲಿ ದಿನಕ್ಕೆ ಸರಾಸರಿ ಮೂರು ಅತ್ಯಾಚಾರಗಳು ಬಾಂಗ್ಲಾದೇಶದಲ್ಲಿ ನಡೆದಿವೆ. ಜನವರಿ-ಜೂನ್ ನಡುವೆ ಒಟ್ಟು 630 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದು, ಹಲ್ಲೆಯಿಂದಾಗಿ 37 ಮಂದಿ ಸಾವನ್ನಪ್ಪಿದ್ದರೆ, 7 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ.

  • ಜಗಳವಾಡುತ್ತಾ ಪತ್ನಿಯ ಮೂಗು, ಕೂದಲು ಕತ್ತರಿಸಿದ ಪತಿ

    ಜಗಳವಾಡುತ್ತಾ ಪತ್ನಿಯ ಮೂಗು, ಕೂದಲು ಕತ್ತರಿಸಿದ ಪತಿ

    ಲಾಹೋರ್: ಪತಿಯೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಾ ಕೋಪಗೊಂಡು ಆಕೆಯ ಮೂಗು ಮತ್ತು ಕೂದಲನ್ನು ಕತ್ತರಿಸಿ ಕೌರ್ಯ ಮೆರೆದ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ.

    ಮಂಗಳವಾರದಂದು ಈ ಘಟನೆ ನಡೆದಿದೆ. ಆರೋಪಿಯನ್ನು ಸಾಜಿದ್ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಆರೋಪಿ ಎಸ್ಕೆಪ್ ಆಗಿದ್ದಾನೆ. ಇತ್ತ ತೀವ್ರವಾಗಿ ಗಾಯಗೊಂಡ ಸಾಜಿದ್ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೃತ್ಯವೆಸೆಗಿ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಈ ಬಗ್ಗೆ ದಂಪತಿಯ ಮಗಳು ಪ್ರತಿಕ್ರಿಯಿಸಿ, ನನ್ನ ಅಮ್ಮ ಹಲವು ಸಂಘಗಳಲ್ಲಿ ಸದಸ್ಯರಾಗಿ ಅದರಲ್ಲಿ ಹಣ ಉಳಿಸುತ್ತಿದ್ದರು. ಆದರೆ ಈ ವಿಚಾರಕ್ಕೆ ಅಪ್ಪ ಯಾವಾಗಲೂ ಅಮ್ಮನ ಬಳಿ ಜಗಳ ಮಾಡುತ್ತಿದ್ದರು, ಅಮ್ಮನಿಗೆ ಹೊಡೆಯುತ್ತಿದ್ದರು. ಮಂಗಳವಾರ ಕೂಡ ಅಪ್ಪ-ಅಮ್ಮ ಜಗಳ ಮಾಡುತ್ತಿದ್ದಾಗ, ಸಿಟ್ಟಿನಿಂದ ಅಪ್ಪ ಮೊದಲು ಅಮ್ಮನಿಗೆ ಪೈಪ್‍ನಿಂದ ಹೊಡೆದರು. ಬಳಿಕ ಚಾಕುವಿನಿಂದ ಅಮ್ಮನ ಮೂಗು, ಕೂದಲು ಕತ್ತರಿಸಿದ್ದಾರೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.

    ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ಜಗಳವಾಡುತ್ತಿದ್ದರು. ಪತಿಯ ಕಾಟವನ್ನು ತಾಳಲಾರದೆ ಪತ್ನಿ ಎರಡು ಬಾರಿ ಮನೆಬಿಟ್ಟು ಹೋಗಿದ್ದಳು. ಆದರೆ ಪತಿ ಆಕೆಯ ಮನವೊಲಿಸಿ, ಮುಂದೆ ಹೀಗೆ ಆಗಲ್ಲ ಎಂದು ಮಾತು ಕೊಟ್ಟು ವಾಪಸ್ ಕರೆತಂದಿದ್ದನು ಎಂದು ಕುಟುಂಬದ ಇತರೆ ಸದಸ್ಯರು ವಿಚಾರಣೆ ವೇಳೆ ಹೇಳಿದ್ದಾರೆ.