Tag: ಕೂದಲು ಕಸಿ

  • ಕೂದಲು ಕಸಿ ಮಾಡಲು ಹೋಗಿ ಎಡವಟ್ಟು- ನೋವಿನಿಂದ ನರಳಿ ನರಳಿ ವ್ಯಕ್ತಿ ಸಾವು

    ಕೂದಲು ಕಸಿ ಮಾಡಲು ಹೋಗಿ ಎಡವಟ್ಟು- ನೋವಿನಿಂದ ನರಳಿ ನರಳಿ ವ್ಯಕ್ತಿ ಸಾವು

    ನವದೆಹಲಿ: ಬೋಳು ತಲೆಯಿದ್ದವರು (Bald Hair) ಕೂದಲನ್ನು (Hair) ಬೆಳೆಸಲು ಔಷಧಿಗಳ ಮೊರೆ ಹೋಗುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಜನರು ಕೂದಲ ಕಸಿ (Hair Transplant) ಮಾಡಿಸುವಲ್ಲಿಗೆ ವಾಲುತ್ತಿದ್ದಾರೆ. ಆದರೆ ಕೂದಲ ಕಸಿ ಮಾಡಿಸಿಕೊಳ್ಳಲು ಹೋದವರೊಬ್ಬರು ವೈದ್ಯರ (Doctors) ಯಡವಟ್ಟಿನಿಂದ ಜೀವವನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

    ದೆಹಲಿಯ (Delhi) ವ್ಯಕ್ತಿ ಅಥರ್ ರಶೀದ್ (30) ಕೂದಲ ಕಸಿ ಮಾಡಿಸಿಕೊಳ್ಳಲು ಕ್ಲಿನಿಕ್‌ಗೆ ಹೋಗಿದ್ದರು. ಆದರೆ ಕೂದಲ ಕಸಿ ಮಾಡಿಸಿಕೊಂಡ ಬಳಿಕ ಅವರು ತೀವ್ರವಾದ ನೋವಿನಿಂದ ಬಳಲುತ್ತಿದ್ದು, ಬಹು ಅಂಗಾಂಗ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಷನ್ ವಯರ್ ಸ್ಪರ್ಶಿಸಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವು

    ರಶೀದ್ ತಮ್ಮ ಮನೆಯಲ್ಲಿ ಒಬ್ಬರೇ ದುಡಿಯುತ್ತಿದ್ದ ವ್ಯಕ್ತಿಯಾಗಿದ್ದು, ತಮ್ಮ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕೂದಲ ಶಸ್ತ್ರಚಿಕಿತ್ಸೆಯ ಬಳಿಕ ನನ್ನ ಮಗ ತುಂಬಾ ನೋವಿನಿಂದ ಬಳಲುತ್ತಿದ್ದ ಆತನ ಮೈಮೇಲೆ ಗುಳ್ಳೆಗಳಾಗಿದ್ದವು ಎಂದು ರಶೀದ್ ತಾಯಿ ಆಸಿಯಾ ಬೇಗಂ ತಿಳಿಸಿದ್ದಾರೆ. ಇದನ್ನೂ ಓದಿ: ಮಗಳನ್ನು ಕೋಚಿಂಗ್ ಸೆಂಟರ್‌ಗೆ ಕರೆದೊಯ್ಯುತ್ತಿದ್ದ ವ್ಯಕ್ತಿ ರಾಜಸ್ಥಾನದ ಗ್ಯಾಂಗ್‌ವಾರ್‌ಗೆ ಬಲಿ

    ಘಟನೆಯ ಬಳಿಕ ರಶೀದ್ ಕುಟುಂಬದ ಸದಸ್ಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ವೈದ್ಯರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಲೆಕೂದಲು ಕಸಿಯಿಂದ ವ್ಯಕ್ತಿ ಸಾವು – ಅಕ್ರಮ ಸಲೂನ್‌ಗಳ ವಿರುದ್ಧ ತನಿಖೆಗೆ ಕೋರ್ಟ್ ಸೂಚನೆ

    ತಲೆಕೂದಲು ಕಸಿಯಿಂದ ವ್ಯಕ್ತಿ ಸಾವು – ಅಕ್ರಮ ಸಲೂನ್‌ಗಳ ವಿರುದ್ಧ ತನಿಖೆಗೆ ಕೋರ್ಟ್ ಸೂಚನೆ

    ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ತರಬೇತಿಯಿಲ್ಲದೆ ತಲೆಕೂದಲು ಕಸಿ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆಯುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಸಲೂನ್‌ಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಸೂಚನೆ ನೀಡಿದೆ.

    Salon

    ನಗರದೆಲ್ಲೆಡೆ ಸಲೂನ್‌ಗಳು ನಾಯಿಕೊಡೆಗಳಂತೆ ಎಲೆ ಎತ್ತುತ್ತಿದ್ದು, ಸ್ವಘೋಷಿತ ತಂತ್ರಜ್ಞರು ವೈದ್ಯಕೀಯ ನೈತಿಕತೆಯನ್ನು ಬದಿಗೊತ್ತಿ, ತಲೆಕೂದಲು ಕಸಿ ಹಾಗೂ ಸೌಂದರ್ಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ಪ್ರಕರಣವೊಂದರ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಕಸ್ಟಡಿಗೆ ಮರಾಠಿ ನಟಿ

    ಕೂದಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ವ್ರಣವಾಗಿ (ಗಾಯವಾಗಿ) ಮೃತಪಟ್ಟ 35 ವರ್ಷದ ಅಥರ್ ರಶೀದ್ ಸಾವಿನ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಯಿತು.

    haircut salon

    ಇಂತಹ ಸಲೂನ್‌ಗಳು ತಲೆ ಎತ್ತುತ್ತಿರುವ ಬಗ್ಗೆ ಪರಿಶೀಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ದೆಹಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸೌಂದರ್ಯದ ಶಸ್ತ್ರಚಿಕಿತ್ಸೆ ಹಾಗೂ ಕೂದಲು ಕಸಿ ಮಾಡಲು ವೈದ್ಯಕೀಯ ಮಾರ್ಗಸೂಚಿಗಳು ಇಲ್ಲದಿದ್ದರೆ, ಅದಕ್ಕೆ ಸೂಕ್ತ ಕ್ರಮ ರೂಪಿಸಬೇಕು ಎಂದೂ ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು: ಸಿದ್ದಣ್ಣ ಮೇಟಿ

    ಕೂದಲು ಕಸಿ ವಿಧಾನ ಅಥವಾ ಸೌಂದರ್ಯ ಕಾಪಾಡುವ ಶಸ್ತ್ರಚಿಕಿತ್ಸೆಗಳು ಅನರ್ಹ ವೃತ್ತಿಪರರಿಂದ (ಚಿಕಿತ್ಸೆ ಬಗ್ಗೆ ತಿಳಿಯದೇ ವೃತ್ತಿ ಮಾಡುವವರು) ಮಾರಕವಾಗಬಹುದು ಎನ್ನುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ. ಇದಕ್ಕೆ ಕಟ್ಟುನಿಟ್ಟಿನ ವೈದ್ಯಕೀಯ ಮೇಲ್ವಿಚಾರಣೆಯೂ ಅಗತ್ಯವಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

    COURT (2)

    ಪ್ರಸ್ತುತ ರಶೀದ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಂ ವರ್ಮಾ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈತ ಹರೀಶ್‌ಶರ್ಮಾ ಹಾಗೂ ಇತರರೊಂದಿಗೆ ಯುನೈಟೆಡ್ ಹೇರ್ ಸ್ಟುಡಿಯೋ ನಡೆಸುತ್ತಿದ್ದ. ಶಸ್ತ್ರಚಿಕಿತ್ಸೆಗಾಗಿ ರಶೀದ್‌ನಿಂದ 30 ಸಾವಿರ ರೂ. ಶುಲ್ಕ ಪಡೆದಿದ್ದ. ಆದರೆ ಕೂದಲು ಕಸಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಹೊಂದಿರಲಿಲ್ಲ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಪ್ರಿಯಕರನ ಸಾವಿನಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ 

    ಈ ಹಿನ್ನೆಲೆಯಲ್ಲಿ ಕೇಂದ್ರ, ದೆಹಲಿ ರಾಜ್ಯ ಸರ್ಕಾರ, ದೆಹಲಿ ಪೊಲೀಸ್ ಆಯುಕ್ತರು, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ದೆಹಲಿ ವೈದ್ಯಕೀಯ ಮಂಡಳಿಗೆ ಸಮಸ್ಯೆ ನಿಭಾಯಿಸಲು ಮತ್ತು ಸ್ಥಿತಿಗತಿ ವರದಿ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೀಠ ಸೂಚಿಸಿದೆ.

  • ಮದುವೆಗಾಗಿ ಕೂದಲು ಕಸಿ ಮಾಡಿಸಿಕೊಂಡು ಮಸಣ ಸೇರಿದ

    ಮದುವೆಗಾಗಿ ಕೂದಲು ಕಸಿ ಮಾಡಿಸಿಕೊಂಡು ಮಸಣ ಸೇರಿದ

    ಪಾಟ್ನಾ: ಮದುವೆಗಾಗಿ ಕೂದಲು ಕಸಿ ಮಾಡಿಕೊಂಡವ ಮರುದಿನವೇ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಮನೋರಂಜನ್ ಪಾಸ್ವಾನ್ ಮೃತನಾಗಿದ್ದಾನೆ. ಈತ ಬಿಹಾರ ಮಿಲಿಟರಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದನು. ಕೂದಲು ಕಸಿಗೆ ಒಳಗಾಗಿದ್ದ ಈತ ಔಷಧದ ಪರಿಣಾಮದಿಂದ ಕಸಿ ಮಾಡಿಕೊಂಡ ಒಂದೇ ದಿನದಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ.

    ನಡೆದಿದ್ದೇನು?: ಮನೋರಂಜನ್‍ಗೆ ಮೇ 11 ರಂದು ಈ ವ್ಯಕ್ತಿಯ ಮದುವೆ ನಿಶ್ಚಯವಾಗಿತ್ತು. ಕೂದಲು ಕಸಿ ಮಾಡಿಸಿಕೊಳ್ಳುವ ಸಲುವಾಗಿ ಪಾಟ್ನಾಗೆಹೀಗಿದ್ದನು. ಖಾಸಗಿ ಕ್ಲಿನಿಕ್‍ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಕೂದಲು ಕಸಿಗೆ ಒಳಗಾಗಿದ್ದನು. ಕಸಿ ನಂತರ ಚರ್ಮದ ತುರಿಕೆಯ ಅನುಭವ ಹೇಳಿಕೊಂಡಿದ್ದನು. ಪಾಸ್ವಾನ್ ಸ್ನೇಹಿತ ಕಮಲ್ ಕುಮಾರ್ ಮರುದಿನ ಕ್ಲಿನಿಕ್‍ಗೆ ಕರೆದೊಯ್ದಿದ್ದರು. ಪಾಸ್ವಾನ್ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಬೋಳು ತಲೆ ಇರೋದು ಮುಚ್ಚಿಟ್ಟು ಮದ್ವೆಯಾದ ಪತಿಯ ವಿರುದ್ಧ ದೂರು

    ನಂತರ ಕ್ಲಿನಿಕ್ ಸಿಬ್ಬಂದಿ ಪಾಸ್ವಾನ್‍ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಐಸಿಯುನಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಪ್ಲಾಸ್ಟಿಕ್ ಸರ್ಜನ್, ಕಾರ್ಡಿಯಾಕ್ ಸರ್ಜನ್, ಇಂಟರ್ನಲ್ ಮೆಡಿಸಿನ್ ಮತ್ತು ಐಸಿಯು ತಜ್ಞರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಒಂದು ಗಂಟೆಯ ನಂತರ ಪಾಸ್ವಾನ್ ಸಾವನ್ನಪ್ಪಿದ್ದಾನೆ. ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ವೇಳೆ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

    ಔಷಧಿಯ ಪ್ರತಿಕ್ರಿಯೆಯಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ. ಮೃತರ ಕುಟುಂಬ ಸದಸ್ಯರು ಲಿಖಿತ ದೂರು ನೀಡಿದ್ದಾರೆ ಮತ್ತು ನಾವು ಈ ಪ್ರಕರಣವನ್ನು ತನಿಖೆ ಮಾಡಲಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.