Tag: ಕುಸಲ್ ಮೆಂಡೀಸ್

  • 138ಕ್ಕೆ ಆಲೌಟ್‌ – 27 ವರ್ಷಗಳಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು; 110 ರನ್‌ ಗೆಲುವಿನೊಂದಿಗೆ ಸರಣಿ ಗೆದ್ದ ಲಂಕಾ

    138ಕ್ಕೆ ಆಲೌಟ್‌ – 27 ವರ್ಷಗಳಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು; 110 ರನ್‌ ಗೆಲುವಿನೊಂದಿಗೆ ಸರಣಿ ಗೆದ್ದ ಲಂಕಾ

    ಕೊಲಂಬೊ: ಅವಿಷ್ಕಾ ಫರ್ನಾಂಡೋ, ಕುಸಲ್‌ ಮೆಂಡಿಸ್‌ ಅಮೋಘ ಬ್ಯಾಟಿಂಗ್‌ ಹಾಗೂ ದುನಿತ್ ವೆಲ್ಲಲಾಗೆ ಮ್ಯಾಜಿಕ್‌ ಬೌಲಿಂಗ್‌ ನೆರವಿನೊಂದಿಗೆ ಶ್ರೀಲಂಕಾ ತಂಡವು ಭಾರತದ ವಿರುದ್ಧ 110 ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲೇ ಭಾರತದ ವಿರುದ್ಧ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅಲ್ಲದೇ ಕಳೆದ 27 ವರ್ಷಗಳಲ್ಲಿ ಲಂಕಾ ವಿರುದ್ಧ ಭಾರತಕ್ಕೆ ಮೊದಲ ಸರಣಿ ಸೋಲು ಇದಾಗಿದೆ.

    2023ರ ವರ್ಷಾರಂಭದಲ್ಲೇ ಭಾರತ, ಶ್ರೀಲಂಕಾ ವಿರುದ್ಧ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಟಿ20 ಸರಣಿ ಹಾಗೂ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಏಕದಿನ ಸರಣಿಯನ್ನು ತವರಿನಲ್ಲೇ ಗೆದ್ದುಕೊಂಡಿತ್ತು. ಆದ್ರೆ ಈ ಬಾರಿ ತನ್ನ ತವರಿನಲ್ಲಿ ಬಲಿಷ್ಠ ಭಾರತದ ವಿರುದ್ಧ ಸರಣಿ ಗೆದ್ದು ಸೇಡು ಲಂಕಾ ತೀರಿಸಿಕೊಂಡಿತು. ಕೊಲೊಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗವನ್ನು 110 ರನ್‌ಗಳಿಂದ ಮಣಿಸುವ ಮೂಲಕ ಶ್ರೀಲಂಕಾ 27 ವರ್ಷಗಳ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದ ದಾಖಲೆ ಬರೆಯಿತು.

    ಶ್ರೀಲಂಕಾ ನೀಡಿದ 249 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 110 ರನ್‌ಗಳಿಂದ ಸೋಲು ಕಂಡಿತು. ಚೇಸಿಂಗ್‌ ಆರಂಭಿಸಿದ ಭಾರತ ಆರಂಭದಿಂದಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳಲು ಆರಂಭಿಸಿತು. ಭಾರತದ ಪರ ರೋಹಿತ್‌ ಶರ್ಮಾ 35 ರನ್‌ (20 ಎಸೆತ, 6 ಬೌಂಡರಿ, 1 ಸಿಕ್ಸರ್)‌, ವಾಷಿಂಗ್ಟನ್‌ ಸುಂದರ್‌ ಕೊನೆಯಲ್ಲಿ 30 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ ಭಾರತ ತಂಡ ಹೀನಾಯ ಸೋಲಿಗೆ ತುತ್ತಾಯಿತು. ಇದನ್ನೂ ಓದಿ: ತಲೆಗೂದಲು ಕಟ್‌, ರಕ್ತ ಹೊರತೆಗೆತ, ಕಠಿಣ ವ್ಯಾಯಾಮ, ಆಹಾರದಿಂದ ದೂರ – ತೂಕ ಇಳಿಸಲು ಏನೆಲ್ಲಾ ಮಾಡಿದ್ರು ವಿನೇಶ್‌?

    ವಿರಾಟ್‌ ಕೊಹ್ಲಿ ಸಹ ಕೇವಲ 20 ರನ್‌ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಶುಭಮನ್‌ ಗಿಲ್‌, ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಶಿವಂ ದುಬೆ, ರಿಯಾನ್‌ ಪರಾಗ್‌ ಸಹ ಭಾರತ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ವಿಫಲರಾದರು. ಇದರಿಂದಾಗಿ ಭಾರತ 3ನೇ ಪಂದ್ಯವನ್ನು ಸೋತು, ಸರಣಿ ಬಿಟ್ಟುಕೊಡಬೇಕಾಯಿತು. ಇದನ್ನೂ ಓದಿ: ಪದಕ ಗೆದ್ದು ತಾಯ್ನಾಡಿಗೆ ಮರಳಿದ ಮನು ಭಾಕರ್‌ಗೆ ಹೂಮಳೆಯ ಸ್ವಾಗತ

    ಫರ್ನಾಂಡೋ ಭರ್ಜರಿ ಬ್ಯಾಟಿಂಗ್:
    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಶ್ರೀಲಂಕಾ, ಉತ್ತಮ ಆರಂಭ ಪಡೆಯಿತು. ಪಥುಮ್‌ ನಿಸ್ಸಾಂಕ, ಆವಿಷ್ಕ ಫರ್ನಾಂಡೋ ಹಾಗೂ ಕುಶಾಲ್‌ ಮೆಂಡಿಸ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಲಂಕಾ 3 ವಿಕೆಟ್‌ಗೆ 183 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಬೃಹತ್‌ ಮೊತ್ತ ಪೇರಿಸುವ ಸಾಧ್ಯತೆಯೂ ಇತ್ತು. ಆದರೆ, ನಂತರ ಬಂದ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಸಿಲುಕಿ ವಿಕೆಟ್‌ ಒಪ್ಪಿಸಿದ ಕಾರಣ ಶ್ರೀಲಂಕಾ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 248 ರನ್‌ ಗಳಿಸಲಷ್ಟೇ ಶಕ್ತವಾಯಿತು.

    ಲಂಕಾ ಪರ ಪಾತುಂ ನಿಸ್ಸಾಂಕ 45 ರನ್‌, ಅವಿಷ್ಕಾ ಫರ್ನಾಂಡೋ 96 ರನ್‌ (102, 9 ಬೌಂಡರಿ, 2 ಸಿಕ್ಸರ್), ಕುಸಲ್ ಮೆಂಡಿಸ್ 59 ರನ್‌, ಚರಿತ್ ಅಸಲಂಕಾ 10 ರನ್‌, ಜನಿತ್ ಲಿಯಾನಗೆ 8 ರನ್‌, ದುನಿತ್ ವೆಲ್ಲಲಾಗೆ 2 ರನ್‌, ಕಮಿಂಡು ಮೆಂಡಿಸ್ 23 ರನ್‌, ಮಹೀಶ್‌ ತೀಕ್ಷಣ 3 ರನ್‌ ಗಳಿಸಿ ಅಜೇಯರಾಗುಳಿದರು. ಇದನ್ನೂ ಓದಿ: Paris Olympics 2024 | ಅನರ್ಹಗೊಂಡ ಕೆಲವೇ ನಿಮಿಷಗಳಲ್ಲಿ ವಿನೇಶ್‌ ಆಸ್ಪತ್ರೆಗೆ ದಾಖಲು

    ಭಾರತದ ಪರ ರಿಯಾನ್‌ ಪರಾಗ್‌ 3 ವಿಕೆಟ್‌ ಕಬಳಿಸಿದರೆ, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಕುಲ್ದೀಪ್‌ ಯಾದವ್‌ ಅವರು ತಲಾ ಒಂದು ವಿಕೆಟ್‌ ಪಡೆದರು. ಮೊದಲ ಪಂದ್ಯ ರೋಚಕ ಟೈ ಆದರೆ, 2ನೇ ಪಂದ್ಯದಲ್ಲಿ ಭಾರತವು 32 ರನ್‌ಗಳಿಂದ ಸೋಲನುಭವಿಸಿತ್ತು.  ಇದನ್ನೂ ಓದಿ: ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್: ವಿನೇಶ್‌ಗೆ ಸಮಾಧಾನ ಹೇಳಿದ ಮೋದಿ

  • ಇಂದಿನಿಂದ ಹೈವೋಲ್ಟೇಜ್ ಏಕದಿನ ಸರಣಿ – ಟೀಂ ಇಂಡಿಯಾ ವಿಶ್ವಕಪ್ ಅಭಿಯಾನ ಶುರು

    ಇಂದಿನಿಂದ ಹೈವೋಲ್ಟೇಜ್ ಏಕದಿನ ಸರಣಿ – ಟೀಂ ಇಂಡಿಯಾ ವಿಶ್ವಕಪ್ ಅಭಿಯಾನ ಶುರು

    ದಿಸ್ಪುರ್: ಶ್ರೀಲಂಕಾ (SriLanka) ವಿರುದ್ಧದ ಟಿ20 ಸರಣಿಯನ್ನು (T20 Series) 2-1 ಅಂತರದಿಂದ ಗೆದ್ದು ಬೀಗಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಗಾಗಿ ಸಜ್ಜಾಗಿದ್ದು, ಜನವರಿ 10 ರಿಂದ ಮೂರು ಪಂದ್ಯಗಳ ಈ ಸರಣಿ ಆರಂಭವಾಗಲಿದೆ.

    ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ಭಾರತ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma), ಕೆ.ಎಲ್ ರಾಹುಲ್ (KL Rahul) ಸರಣಿಯ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಆದರೆ ಗಾಯಾಳುವಾಗಿದ್ದ ಟೀಂ ಇಂಡಿಯಾ (Team India) ವೇಗಿ ಜಸ್ಪ್ರೀತ್‌ ಬುಮ್ರಾ ಅವರನ್ನು ಲಂಕಾ ಏಕದಿನ ಸರಣಿಯಿಂದಲೂ ಹೊರಗಿಡಲಾಗಿದೆ. ಅಲ್ಲದೇ ಮುಂದೆ ನಡೆಯುವ ಆಸ್ಟ್ರೇಲಿಯಾ ಸರಣಿಯಿಂದಲೂ ಔಟಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಈ ಏಕದಿನ ಸರಣಿಯೊಂದಿಗೆ ಟೀಂ ಇಂಡಿಯಾದ ವಿಶ್ವಕಪ್ (ODI WorldCup) ಏಕದಿನದ ಅಭಿಯಾನ ಕೂಡ ಶುರುವಾಗಲಿದೆ. ಇದೇ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪೂರ್ವಭಾವಿಯಾಗಿ ಭಾರತ ತಂಡವು ಒಟ್ಟು 35 ಪಂದ್ಯಗಳನ್ನು ಆಡಲಿದೆ. ಇದರ ಮೊದಲ ಭಾಗವಾಗಿ ಇದೀಗ ಲಂಕಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಹೀಗಾಗಿಯೇ 2023ರ ಮೊದಲ ಏಕದಿನ ಸರಣಿಯು ಟೀಂ ಇಂಡಿಯಾ ಪಾಲಿಗೆ ಮಹತ್ವದೆನಿಸಿಕೊಂಡಿದೆ. ಇದನ್ನೂ ಓದಿ: 9 ಸಿಕ್ಸರ್‌, 7 ಬೌಂಡರಿ – 45 ಎಸೆತಗಳಲ್ಲೇ ಸ್ಫೋಟಕ ಶತಕ ಸಿಡಿಸಿದ ದಾಖಲೆ ವೀರ ಸೂರ್ಯ

    ರೋಹಿತ್ ಶರ್ಮಾ ಏಕದಿನ ಸರಣಿಯನ್ನು ಮುನ್ನಡೆಸಲಿದ್ದು, ಟಿ20 ಏಕದಿನ ನಾಯಕ ಹಾರ್ದಿಕ್ ಪಾಂಡ್ಯ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತ ಹಿರಿಯ ಆಟಗಾರರ ಕಂಬ್ಯಾಕ್ ಹಿನ್ನೆಲೆಯಲ್ಲಿ ಟಿ20 ತಂಡದಲ್ಲಿದ್ದ ಕೆಲ ಆಟಗಾರರು ಏಕದಿನ ಸರಣಿಗೆ ಆಯ್ಕೆಯಾಗಿಲ್ಲ. ಇದನ್ನೂ ಓದಿ: ಸೂರ್ಯನ ಸಿಡಿಲಬ್ಬರದ ಶತಕಕ್ಕೆ ಲಂಕಾ ಭಸ್ಮ – ಭಾರತಕ್ಕೆ ಟಿ20 ಸರಣಿ ಕಿರೀಟ

    ಈ ಬಳಗದಲ್ಲಿ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ಕೆ.ಎಲ್ ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಹಾಗೂ ಅರ್ಷ್‌ದೀಪ್ ಸಿಂಗ್ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಈ ಏಕದಿನ ಸರಣಿ ಗೆಲವು ಕೂಡ ವಿಶ್ವಕಪ್ ಮೇಲೆ ಭಾರೀ ಪರಿಣಾಮ ಬೀರಲಿದ್ದು, ರೋಹಿತ್ ಪಡೆಗೆ ಕಠಿಣ ಪರೀಕ್ಷೆಯಾಗಿದೆ.

    ಏಕದಿನ ಸರಣಿ ವೇಳಾಪಟ್ಟಿ:

    • ಜನವರಿ 10: ಮೊದಲ ಏಕದಿನ ಪಂದ್ಯ (ಸ್ಥಳ- ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿ)
    • ಜನವರಿ 12: 2ನೇ ಏಕದಿನ ಪಂದ್ಯ (ಸ್ಥಳ- ಈಡನ್ ಗಾರ್ಡನ್ಸ್, ಕೋಲ್ಕತ್ತಾ)
    • ಜನವರಿ 15: 3ನೇ ಏಕದಿನ ಪಂದ್ಯ (ಗ್ರೀನ್‌ಫೀಲ್ಡ್ ಸ್ಟೇಡಿಯಂ, ತಿರುವನಂತಪುರಂ)

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k