Tag: ಕುವೈಟ್

  • SAFF Champions Final: ಪೆನಾಲ್ಟಿಯಲ್ಲಿ ರೋಚಕ ಗೆಲುವು – 9ನೇ ಬಾರಿ ಭಾರತ ಚಾಂಪಿಯನ್‌

    SAFF Champions Final: ಪೆನಾಲ್ಟಿಯಲ್ಲಿ ರೋಚಕ ಗೆಲುವು – 9ನೇ ಬಾರಿ ಭಾರತ ಚಾಂಪಿಯನ್‌

    ಬೆಂಗಳೂರು: ರೋಚಕ ಹೋರಾಟದಲ್ಲಿ ಭಾರತ ಫುಟ್‌ಬಾಲ್‌ ತಂಡ (India Football Team) 2023ರ ಸಾಲಿನ ಸ್ಯಾಫ್‌ (SAFF) ಫುಟ್‌ಬಾಲ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಸಡನ್‌ಡೆತ್‌ ಪೆನಾಲ್ಟಿಯಲ್ಲಿ (Sudden Death Penalty Shootout) ಭಾರತ ಕುವೈಟ್‌ ತಂಡವನ್ನು ಮಣಿಸುವ ಮೂಲಕ 9ನೇ ಬಾರಿ ಪ್ರಶಸ್ತಿ ಜಯಿಸಿತು.

    ಕಂಠೀರವ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದ ನಿಗದಿತ 90 ನಿಮಿಷದ ವೇಳೆಗೆ ಎರಡು ತಂಡಗಳು 1-1 ಗೋಲು ಹೊಡೆದ ಪರಿಣಾಮ ಫಲಿತಾಂಶ ನಿರ್ಧಾರಕ್ಕೆ ಹೆಚ್ಚುವರಿ ಸಮಯ ನೀಡಲಾಯಿತು. 30 ನಿಮಿಷ ಅವಧಿಯ ಆಟದಲ್ಲಿ ಇತ್ತಂಡಗಳ ಪರ ಯಾವುದೇ ಗೋಲು ಸಿಡಿಯದ ಕಾರಣ ಪೆನಾಲ್ಟಿಗೆ ಮೊರೆ ಹೊಗಲಾಯಿತು.  ಇದನ್ನೂ ಓದಿ: ಟೀಂ ಇಂಡಿಯಾ ಬೌಲಿಂಗ್‌ ಯಾವಾಗ್ಲೂ ಕಳಪೆ, ನಾವ್‌ ತಲೆ ಕೆಡಿಸಿಕೊಳ್ಳಲ್ಲ – ಪಾಕ್‌ ಮಾಜಿ ಕ್ರಿಕೆಟಿಗ ವ್ಯಂಗ್ಯ

    5 ಪೆನಾಲ್ಟಿ ಅವಕಾಶದಲ್ಲಿ ಭಾರತ ಮತ್ತು ಕುವೈಟ್‌ ತಲಾ 4 ಗೋಲು ಹೊಡೆದ ಪರಿಣಾಮ ಪಂದ್ಯ ಸಡನ್‌ಡೆತ್‌ನತ್ತ ತಿರುಗಿತು. ಈ ವೇಳೆ ಭಾರತದ ಮಹೇಶ್‌ ಗೋಲು ಹೊಡೆದರೆ ಕುವೈಟ್‌ ಆಟಗಾರ ಹಜಿಯಾ ಹೊಡೆದ ಚೆಂಡನ್ನು ಗೋಲ್‌ ಕೀಪರ್‌ ಗುರುಪ್ರೀತ್‌ ಸಿಂಗ್ ತಡೆಯುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಹಿಂದೆ ಭಾರತ 1993, 1997, 1999, 2005, 2009, 2011, 2015, 2021 ರಲ್ಲಿ ಪ್ರಶಸ್ತಿ ಜಯಿಸಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏರ್ ಲಿಫ್ಟ್‌ನಲ್ಲೂ ಕೇರಳದ ಲಾಬಿ, ವಿಮಾನವಿಲ್ಲದೆ ಲಕ್ಷಾಂತರ ಕನ್ನಡಿಗರು ಕಂಗಾಲು

    ಏರ್ ಲಿಫ್ಟ್‌ನಲ್ಲೂ ಕೇರಳದ ಲಾಬಿ, ವಿಮಾನವಿಲ್ಲದೆ ಲಕ್ಷಾಂತರ ಕನ್ನಡಿಗರು ಕಂಗಾಲು

    – ಕುವೈಟ್‍ನಿಂದ ರಾಜ್ಯಕ್ಕಿಲ್ಲ ಒಂದೂ ವಿಮಾನ

    ಮಂಗಳೂರು: ಕೊರೊನಾ ವಿಚಾರದಲ್ಲೂ ಕೇರಳ ಲಾಬಿ ಮಾಡುತ್ತಿದ್ದು, ವಿದೇಶದಲ್ಲಿ ಸಹ ಲಾಬಿ ಮಾಡುತ್ತಿದೆ. ಇದರಿಂದ ನೇರವಾಗಿ ಕರ್ನಾಟಕದಿಂದ ಹೋಗಿ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಎಫೆಕ್ಟ್ ಆಗುತ್ತಿದೆ.

    ಗಲ್ಫ್ ರಾಷ್ಟ್ರಗಳಲ್ಲಿ ರಾಜ್ಯದ 5 ಲಕ್ಷ ಕನ್ನಡಿಗರಿದ್ದಾರೆ. ಅದರಲ್ಲೂ ಕರಾವಳಿ ಮೂಲದವರೆ ಹೆಚ್ಚಿದ್ದಾರೆ. ಆದರೆ ಕೇರಳ ಲಾಬಿಯಿಂದ ಅವರು ಇದೀಗ ಅಲ್ಲೇ ಉಳಿದುಕೊಳ್ಳುವಂತಾಗಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಎರ್ ಲಿಫ್ಟ್‍ನಲ್ಲಿ ಕೇರಳ ಸರ್ಕಾರ ಲಾಬಿ ನಡೆಸುತ್ತಿರುವುದರಿಂದ ಕನ್ನಡಿಗರು ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಗಲ್ಫ್‍ನಿಂದ ಕೇರಳಕ್ಕೆ 10ಕ್ಕೂ ಹೆಚ್ಚು ವಿಮಾನಗಳು ಬಂದಿವೆ. 35ಕ್ಕೂ ಹೆಚ್ಚು ವಿಮಾನ ಸೇವೆಗಳು ಬುಕ್ ಆಗಿವೆ. ಆದರೆ ಕರ್ನಾಟಕಕ್ಕೆ ಬೆರಳೆಣಿಕೆಯ ವಿಮಾನಗಳು ಮಾತ್ರ ಬಂದಿದ್ದು, ಅದರಲ್ಲೂ ಕುವೈಟ್‍ನಲ್ಲಿ ಅತಂತ್ರರಾಗಿರುವ ಕನ್ನಡಿಗರಿಗೆ ಈವರೆಗೆ ಒಂದೂ ವಿಮಾನ ಸೇವೆ ಸಿಕ್ಕಿಲ್ಲ. ಹೀಗಾಗಿ ಕನ್ನಡಿಗರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಕೇಂದ್ರದಲ್ಲಿ ವಿದೇಶಾಂಗ ಇಲಾಖೆ ಸಹಾಯಕ ಸಚಿವರಾಗಿರುವ ಮುರಳೀಧರನ್ ಕೇರಳದ ಪ್ರಭಾವಿ ನಾಯಕರು. ಹೀಗಾಗಿ ಕೇರಳಕ್ಕೆ ಹೆಚ್ಚಿನ ವಿಮಾನಗಳನ್ನು ನೀಡಲಾಗುತ್ತಿದೆ. ಇನ್ನು ಕುವೈಟ್‍ನಲ್ಲಿ ಕೇರಳದವರು ಪ್ರಮುಖ ಹುದ್ದೆಯಲ್ಲಿದ್ದಾರೆ. ಹೀಗಾಗಿ ಅಲ್ಲಿಂದ ಕೇರಳಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಈ ನಡುವೆ ಕನ್ನಡಿಗರನ್ನು ಕರೆತರುವಲ್ಲಿ ರಾಜ್ಯ ಸರ್ಕಾರ ಅಷ್ಟೊಂದು ಆಸಕ್ತಿ ವಹಿಸಿದಂತಿಲ್ಲ.

    ಈ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಅನಿವಾಸಿ ಕನ್ನಡಿಗರೊಂದಿಗೆ ವಿಡೀಯೋ ಕರೆ ಮಾಡಿ ಮಾತನಾಡಿ, ಇನ್ನು ಹತ್ತು ದಿನಗಳ ಒಳಗಾಗಿ ಕರೆಸಿಕೊಳ್ಳವ ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರಗತಿ ಕಾಣುತ್ತಿಲ್ಲ. ಸದ್ಯ ಲಾಬಿಯಲ್ಲಿ ಕೇರಳದವರ ಕಣ್ಣಿಗೆ ಬೆಣ್ಣೆ ಕರ್ನಾಟಕದವರ ಪಾಲಿಗೆ ಸುಣ್ಣ ಎಂಬಂತಾಗಿದೆ. ತಕ್ಷಣ ಈ ಬಗ್ಗೆ ಕರ್ನಾಟಕದ ಸಂಸದರು ಮತ್ತು ಕೇಂದ್ರ ಸಚಿವರು ಗಮನ ಹರಿಸಿ ಗಲ್ಫ್‍ನಲ್ಲಿರುವ ಕನ್ನಡಿಗರ ಆಗಮನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

  • ಕುವೈತ್‍ಗೆ ತೆರಳಿ ಬೀದಿಗೆ ಬಿದ್ದಿದ್ದ ಕರಾವಳಿ ಮೂಲದ ಯುವಕರು ತಾಯ್ನಾಡಿಗೆ ವಾಪಸ್

    ಕುವೈತ್‍ಗೆ ತೆರಳಿ ಬೀದಿಗೆ ಬಿದ್ದಿದ್ದ ಕರಾವಳಿ ಮೂಲದ ಯುವಕರು ತಾಯ್ನಾಡಿಗೆ ವಾಪಸ್

    ಮಂಗಳೂರು: ನಕಲಿ ಏಜೆನ್ಸಿ ಮೂಲಕ ಕುವೈತ್ ರಾಷ್ಟ್ರಕ್ಕೆ ತೆರಳಿ, ಬೀದಿಗೆ ಬಿದ್ದಿದ್ದ ಕರಾವಳಿ ಮೂಲದ 19 ಮಂದಿ ಯುವಕರು ಕೊನೆಗೂ ತಾಯ್ನಾಡಿಗೆ ಮರಳಿದ್ದಾರೆ.

    ಗುರುವಾರ ಮುಂಬೈಗೆ ವಿಮಾನದಲ್ಲಿ ಬಂದಿದ್ದ ಯುವಕರನ್ನು ಇಂದು ಬೆಳಗ್ಗೆ ಬಸ್ ಮೂಲಕ ಮಂಗಳೂರಿಗೆ ಕರೆ ತರಲಾಯಿತು. ಅನಿವಾಸಿ ಉದ್ಯಮಿಗಳಾದ ಮೋಹನ್ ದಾಸ್ ಕಾಮತ್, ರಾಜ್ ಭಂಡಾರಿ ಕುವೈತ್‍ನಲ್ಲಿ ಸಿಕ್ಕಿಬಿದ್ದಿದ್ದ ಯುವಕರಿಗೆ ಆಶ್ರಯ ನೀಡಿ, ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ.

    ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಎನ್ನುವ ಏಜೆನ್ಸಿ ಮೂಲಕ ತೆರಳಿದ್ದ ನೂರಾರು ಯುವಕರು, ಅಲ್ಲಿ ಉದ್ಯೋಗ ಸಿಗದೇ ಬೀದಿ ಪಾಲಾಗಿದ್ದರು. ಹಿಂತಿರುಗಿ ಬರಲು ವೀಸಾ ಇಲ್ಲದೆ, ಊಟಕ್ಕೂ ಗತಿಯಿಲ್ಲದ ಸ್ಥಿತಿ ಒದಗಿತ್ತು. ಬಳಿಕ ಯುವಕರು ಒಂದೆಡೆ ಸೇರಿ, ವಿಡಿಯೋ ಮಾಡಿ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮೂಲಕ ರಕ್ಷಣೆಗೆ ಮೊರೆಹೋಗಿದ್ದರು.

    ಕೂಡಲೇ ಎಚ್ಚೆತ್ತ ಶಾಸಕ ವೇದವ್ಯಾಸ ಕಾಮತ್, ಭಾರತೀಯ ವಿದೇಶಾಂಗ ಇಲಾಖೆ ಮೂಲಕ ರಾಯಭಾರ ಕಚೇರಿ ಸಂಪರ್ಕಿಸಿದ್ದಲ್ಲದೆ, ಅಲ್ಲಿರುವ ಕರಾವಳಿ ಮೂಲದ ಉದ್ಯಮಿಗಳ ಮೂಲಕ ರಕ್ಷಣಾ ವ್ಯವಸ್ಥೆ ಮಾಡಿದ್ದಾರೆ. ಎರಡು ತಿಂಗಳ ನಿರಂತರ ಶ್ರಮದಿಂದ ಇದೀಗ 19 ಮಂದಿ ಮಂಗಳೂರು ತಲುಪಿದ್ದಾರೆ. ಹಲವರು ಕುವೈತ್‍ನಲ್ಲಿ ಸಿಕ್ಕಿಬಿದ್ದಿದ್ದು ಕರೆ ತರುವ ವ್ಯವಸ್ಥೆ ಮಾಡಲಾಗುತ್ತಿದೆ.

  • ಕುವೈಟ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿದ 35 ಮಂದಿ ಮಂಗ್ಳೂರಿಗರು!

    ಕುವೈಟ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿದ 35 ಮಂದಿ ಮಂಗ್ಳೂರಿಗರು!

    ಮಂಗಳೂರು: ಜಿಲ್ಲೆಯ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿ ಇರುವ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್‍ಮೆಂಟ್ ಎನ್ನುವ ಕಂಪನಿಯಿಂದ ಮೋಸಕ್ಕೊಳಗಾದ 35 ಮಂದಿ ಮಂಗಳೂರಿಗರು ಕಳೆದ 6 ತಿಂಗಳಿನಿಂದ ಕುವೈಟ್‍ನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.

    ಕುವೈಟ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್‍ಮೆಂಟ್ ಕಂಪನಿಯ ಪ್ರಸಾದ್ ಶೆಟ್ಟಿ ಎಂಬವರು ಪ್ರತಿಯೊಬ್ಬರಿಂದ 65 ಸಾವಿರ ರೂ. ವಸೂಲಿ ಮಾಡಿದ್ದರು. ಇದನ್ನು ನಂಬಿ ಕುವೈಟ್‍ಗೆ ತೆರಳಿದ್ದ ಜನರು ಮಾತ್ರ ಸರಿಯಾದ ಕೆಲಸ ದೊರೆಯದೆ, ಕಳೆದ 6 ತಿಂಗಳಿಂದ ಪರದಾಡುತ್ತಿದ್ದಾರೆ.

    ಪ್ರಸ್ತುತ ಊಟಕ್ಕೂ ಗತಿಯಿಲ್ಲದೆ ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಡಿಯನ್ ಎಂಬೆಸಿಯನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗದೆ ಕೊನೆಯದಾಗಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಅವರನ್ನು ವಿಡಿಯೋ ರೆಕಾರ್ಡ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.

    ಸಂತ್ರಸ್ತರ ವಿಡಿಯೋ ವೈರಲ್‍ಗೊಳ್ಳುವ ಮೂಲಕ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ತಲುಪಿದ್ದು, ಕೂಡಲೇ ಸ್ಪಂದಿಸಿದ ಶಾಸಕರು ಕುವೈಟ್‍ನಲ್ಲಿರುವ ತನ್ನ ಗೆಳೆಯರನ್ನು ಸಂಪರ್ಕಿಸಿ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ.

    ಅಲ್ಲದೆ ಕೇಂದ್ರ ಸಚಿವಾಲಯದ ಮೂಲಕ ಇಂಡಿಯನ್ ಎಂಬೆಸಿಯನ್ನು ಸಂಪರ್ಕಿಸಿ ಸಂತ್ರಸ್ತರನ್ನು ಹಿಂದಕ್ಕೆ ಕರೆಸಿಕೊಳ್ಳುವ ವ್ಯವಸ್ಥೆಯ ಬಗ್ಗೆಯೂ ಕ್ರಮ ಕೈಗೊಂಡಿದ್ದಾರೆ. ಇಂದು ಇಂಡಿಯನ್ ಎಂಬೆಸಿ ಸಂತ್ರಸ್ತರನ್ನು ಭೇಟಿಯಾಗಲಿದೆ.

  • Stupid ಎಂದಿದ್ದಕ್ಕೆ ಮದ್ವೆಯಾಗಿ ಮೂರೇ ನಿಮಿಷಕ್ಕೆ ಡಿವೋರ್ಸ್

    Stupid ಎಂದಿದ್ದಕ್ಕೆ ಮದ್ವೆಯಾಗಿ ಮೂರೇ ನಿಮಿಷಕ್ಕೆ ಡಿವೋರ್ಸ್

    ಕುವೈಟ್: ಸ್ಟುಪಿಡ್ ಎಂದು ಹೇಳಿದಕ್ಕೆ ಮದುವೆ ಆಗಿ ಮೂರೇ ನಿಮಿಷಕ್ಕೆ ಪತ್ನಿ ತನ್ನ ಪತಿಯಿಂದ ವಿಚ್ಛೇದನ ಪಡೆದ ಘಟನೆ ಕುವೈಟ್‍ನಲ್ಲಿ ನಡೆದಿದೆ.

    ನಗರದ ನ್ಯಾಯಾಲಯದಲ್ಲಿ ವರ ಹಾಗೂ ವಧು ಮದುವೆ ಆಗಲು ತೆರಳಿದ್ದರು. ಮದುವೆ ಪತ್ರದ ಮೇಲೆ ಸಹಿ ಹಾಕಿ ಹೊರಗೆ ಬರುವಾಗ ವಧು ಕಾಲು ಜಾರಿ ಕೆಳಗೆ ಬಿದಿದ್ದಾಳೆ. ಮಹಿಳೆ ಕೆಳಗೆ ಬಿದ್ದಿದ್ದನ್ನು ನೋಡಿದ ವರ ಆಕೆಗೆ ಸಹಾಯ ಮಾಡುವ ಬದಲು ಸ್ಟುಪಿಡ್ ಎಂದು ಬೈದಿದ್ದಾನೆ.

    ವರ ಈ ರೀತಿ ಬೈದಿದ್ದರಿಂದ ವಧು ಮನನೊಂದಿದ್ದಳು. ಅಲ್ಲದೇ ಮದುವೆ ಆದ ಮೂರೇ ನಿಮಿಷಕ್ಕೆ ಅಲ್ಲಿದ್ದ ಜಡ್ಜ್ ಬಳಿ ಹೋಗಿ ತಕ್ಷಣವೇ ತನ್ನ ಪತಿಯಿಂದ ವಿಚ್ಛೇದನ ನೀಡುವಂತೆ ಕೇಳಿಕೊಂಡಿದ್ದಾಳೆ. ಈಕೆಯ ಮನವಿಯನ್ನು ಸ್ವೀಕರಿಸಿದ ಜಡ್ಜ್ ಇಬ್ಬರಿಗೂ ವಿಚ್ಛೇದನ ಕೊಡಿಸಿದ್ದಾರೆ.

    ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಕೆಲವರು ಮಹಿಳೆಗೆ ಪರ ಮಾತನಾಡಿ ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಆಕೆಯ ವಿರುದ್ಧ ಮಾತನಾಡಿದ್ದಾರೆ. ಕೆಲವರು ಮದುವೆ ಆರಂಭದಲ್ಲಿ ಪತಿ ಈ ರೀತಿ ವರ್ತಿಸಿದರೆ, ಆತನಿಂದ ದೂರ ಇರುವುದೇ ಒಳ್ಳೆಯದು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv