Tag: ಕುರ್ತಾ

  • ವಿಪಕ್ಷ ನಾಯಕನ ಪಟ್ಟ ಅಲಂಕರಿಸ್ತಿದ್ದಂತೆಯೇ ಲುಕ್ ಬದಲಿಸಿಕೊಂಡ ರಾಗಾ

    ವಿಪಕ್ಷ ನಾಯಕನ ಪಟ್ಟ ಅಲಂಕರಿಸ್ತಿದ್ದಂತೆಯೇ ಲುಕ್ ಬದಲಿಸಿಕೊಂಡ ರಾಗಾ

    ನವದೆಹಲಿ: 18ನೇ ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ವಿರೋಧ ಪಕ್ಷದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗಿರುವಾಗ ರಾಗಾ ತಮ್ಮ ಲುಕ್ ಕೂಡ ಬದಲಾಯಿಸಿಕೊಂಡಿದ್ದಾರೆ. ಈ ಬದಲಾವಣೆಯ ಕುರಿತು‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

    ಹೌದು. 18ನೇ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಹೆಗಲ ಮೇಲೆ ಮಹತ್ವದ ಜವಾಬ್ದಾರಿ ಇದೆ. ಮಂಗಳವಾರ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮನೆಯಲ್ಲಿ ಭಾರತ ಒಕ್ಕೂಟದ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಜವಾಬ್ದಾರಿ ವಹಿಸಿಕೊಂಡ ನಂತರ ರಾಹುಲ್ ಗಾಂಧಿ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ.

    ಇಂದು ಸದನದಲ್ಲಿ ರಾಹುಲ್ ಗಾಂಧಿ (Rahul Gandhi) ಅವರು ಔಪಚಾರಿಕವಾಗಿ ಕುರ್ತಾ ಮತ್ತು ಪೈಜಾಮ ಧರಿಸುವ ಮೂಲಕ ಮಿಂಚಿದ್ದಾರೆ. ಸಾಮಾನ್ಯವಾಗಿ ರಾಹುಲ್‌ ಗಾಂಧಿಯವರು ಹೆಚ್ಚಾಗಿ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಮಂಗಳವಾರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆಯೂ ರಾಹುಲ್ ಗಾಂಧಿ ಟೀ ಶರ್ಟ್ ಮತ್ತು ಜೀನ್ಸ್‌ ಧರಿಸಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಬಿಳಿ ಬಣ್ಣದ ಟೀ ಶರ್ಟ್ ಧರಿಸೋ ಹಿಂದಿನ ಸೀಕ್ರೆಟ್ ರಿವೀಲ್

    ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲೂ ಹೆಚ್ಚಾಗಿ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ರಾಹುಲ್ ಗಾಂಧಿ ಯಾವಾಗಲೂ ಬಿಳಿ ಟೀ ಶರ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತಾನು ಯಾಕೆ ಬಿಳಿ ಬಣ್ಣವನ್ನು ಆಯ್ದುಕೊಳ್ಳುತ್ತೇನೆ ಎಂಬುದಕ್ಕೆ ಕಾರಣವನ್ನು ಕೂಡ ನೀಡಿದ್ದರು. ನನಗೆ ಬಿಳಿ ಟಿ-ಶರ್ಟ್ ಪಾರದರ್ಶಕತೆ, ದೃಢತೆ ಮತ್ತು ಸರಳತೆಯ ಸಂಕೇತವಾಗಿದೆ ಎಂದಿದ್ದರು.

    2023ರ ಜೂನ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಕುರ್ತಾ ಮತ್ತು ಪೈಜಾಮದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ಅಂದರೆ 2022ರ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಕುರ್ತಾ ಮತ್ತು ಪೈಜಾಮದಲ್ಲಿ ಕಾಣಿಸಿಕೊಂಡಿದ್ದರು.

  • ಸಚಿವರಿಗೆ ತುರಿಕೆ ಪುಡಿ ಎರಚಿದ ಅನಾಮಿಕ – ಸಭೆಯಲ್ಲೇ ಕುರ್ತಾ ತೆಗೆದು ಕೈ ತೊಳೆದುಕೊಂಡ ಸಚಿವ

    ಸಚಿವರಿಗೆ ತುರಿಕೆ ಪುಡಿ ಎರಚಿದ ಅನಾಮಿಕ – ಸಭೆಯಲ್ಲೇ ಕುರ್ತಾ ತೆಗೆದು ಕೈ ತೊಳೆದುಕೊಂಡ ಸಚಿವ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಸಚಿವರೊಬ್ಬರು (Minister) ಸಾರ್ವಜನಿಕ ಸಭೆಯೊಂದರಲ್ಲೇ ಕುರ್ತಾ ತೆಗೆದು ಬಾಟಲಿಯ ನೀರಿನಿಂದ ಕೈಗಳನ್ನು ತೊಳೆದುಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಮಧ್ಯಪ್ರದೇಶದ ಮುಂಗೋಲಿ ಗ್ರಾಮದ ಮೂಲಕ ಬಿಜೆಪಿ ವಿಕಾಸ್ ರಥಯಾತ್ರೆ ವೇಳೆ ಈ ಘಟನೆ ನಡೆದಿದೆ. ಸಾರ್ವಜನಿಕ ಸಭೆಯೊಂದರಲ್ಲಿ ರಾಜ್ಯ ಸಚಿವ ಬ್ರಜೇಂದ್ರ ಸಿಂಗ್ ಯಾದವ್ (Brajendra Singh Yadav) ಮೇಲೆ ಯಾರೋ ತುರುಕೆ ಪುಡಿ ಎರೆಚಿದ್ದಾನೆ. ಈ ವೇಳೆ ತುರಿಕೆ ಎಷ್ಟು ತೀವ್ರವಾಗಿತ್ತೆಂದರೆ ಸಚಿವರು ಕುರ್ತಾ ತೆಗೆದು ಬಾಟಲಿ ನೀರಿನಿಂದ ತೊಳೆಯಬೇಕಾಯಿತು.

    ಎರಡು ದಿನಗಳ ಹಿಂದೆ ವಿಕಾಸ ರಥವು ಖಾಂಡ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂಚರಿಸುತ್ತಿದ್ದಾಗ ಹಾಳಾದ ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಯಾತ್ರೆಯ ನೇತೃತ್ವ ವಹಿಸಿದ್ದ ಸ್ಥಳೀಯ ಬಿಜೆಪಿ ಶಾಸಕ ದೇವೇಂದ್ರ ವರ್ಮಾ ಮತ್ತು ಗ್ರಾಮದ ಮಾಜಿ ಸರಪಂಚ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಪ್ರದೇಶದಲ್ಲಿ ಸರ್ಕಾರವು 3 ಕಿ.ಮೀ ರಸ್ತೆಯನ್ನು ಸಹ ಮಂಜೂರು ಮಾಡಲು ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪೊಲೀಸರು ಅಂತಾ ಹೇಳ್ಕೊಂಡು ಚಿನ್ನದ ಬಿಸ್ಕೆಟ್‌, ಹಣ ದರೋಡೆ ಮಾಡಿದ್ದ ಆರೋಪಿಗಳು ಅಂದರ್‌

    ನಾವು ಕಾಂಗ್ರೆಸ್ ಅನ್ನು ಕೆಟ್ಟದಾಗಿ ಪರಿಗಣಿಸಿದ್ದೇವೆ. ಆದರೆ ನೀವು (ಬಿಜೆಪಿ) ಕಾಂಗ್ರೆಸ್‍ಗಿಂತ ಕೆಟ್ಟವರು. ನಮಗೆ ಸರಿಯಾದ ರಸ್ತೆಗಳನ್ನು ನೀಡಿ. ಇಲ್ಲದಿದ್ದರೆ ನಾವು ನಿಮಗೆ ಮತ ಹಾಕುವುದಿಲ್ಲ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡ ವೀಡಿಯೋ ವೈರಲ್ ಆಗಿತ್ತು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ಮತ ಹಾಕಬೇಡಿ, ಅದು ನಿಮ್ಮ ಹಕ್ಕು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಪ್ರೇಮಿಗಳ ದಿನಾಚರಣೆಗೆ ಹಿಂದೂ ಸಂಘಟನೆಗಳ ಅಡ್ಡಿ ಆತಂಕ – ಬೆಂಗ್ಳೂರು ಪಾರ್ಕ್, ಮಾಲ್‌ಗಳಲ್ಲಿ ಹೈ ಅಲರ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಂದೇ ಸೂರಿನಲ್ಲಿ ಮದುವೆಯ ಬಟ್ಟೆಗಳು – ಸಮ್ಯಕ್‌ಗೆ ಬನ್ನಿ ಖರೀದಿಸಿ

    ಒಂದೇ ಸೂರಿನಲ್ಲಿ ಮದುವೆಯ ಬಟ್ಟೆಗಳು – ಸಮ್ಯಕ್‌ಗೆ ಬನ್ನಿ ಖರೀದಿಸಿ

    ದುವೆಗೆ ಉಡುಪುಗಳು ನಗರದಲ್ಲಿ ಸಿಗುತ್ತದೆ. ಆದರೆ ಬೇಕಾದ ರೀತಿಯ ಇಂದಿನ ಸ್ಟೈಲ್‌ಗೆ ತಕ್ಕಂತೆ ಉಡುಪುಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಆದರೆ ನೀವು ಚಿಂತೆ ಮಾಡಬೇಕಾದ ಅಗತ್ಯವೇ ಇಲ್ಲ. ಬೇಕಾದ ಶೈಲಿಯ, ವಿಶಿಷ್ಟ ವಿನ್ಯಾಸಕಾರರು ಮಾಡಿರುವ ಉಡುಪುಗಳು ಬೇಕಾದ ದರದಲ್ಲಿ ʼಸಮ್ಯಕ್‌ʼನಲ್ಲಿ ಸಿಗುತ್ತದೆ.

    2006ರಲ್ಲಿ ಬೆಂಗಳೂರಿನಲ್ಲಿ ಸಮ್ಯಕ್‌ ತನ್ನ ಮಳಿಗೆಯನ್ನು ಆರಂಭಿಸಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಮೆಚ್ಚುಗೆ ಗಳಿಸಲು ಕಾರಣವೂ ಇದೆ. ಸಾಧಾರಣವಾಗಿ ಮದುವೆಯ ಸಂದರ್ಭದಲ್ಲಿ ಮಹಿಳೆಯರ ಉಡುಪುಗಳ ಖರೀದಿಯ ಬಗ್ಗೆ ಹೆಚ್ಚು ಚರ್ಚೆ ಆಗುತ್ತದೆ. ಆದರೆ ಈಗ ಕಾಲ ಬದಲಾಗಿದ್ದು ಪುರುಷರೂ ಉಡುಪುಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಈ ನಿಟ್ಟಿನಲ್ಲಿ ಸಮ್ಯಕ್‌ ಮಹಿಳೆಯರ ಮತ್ತು ಪುರುಷರ ವಸ್ತ್ರಗಳ ಸಂಗ್ರಹವನ್ನೇ ತೆರೆದಿದೆ. ಒಂದೇ ಮಳಿಗೆಯಲ್ಲಿ ಎರಡು ಕಡೆಯವರಿಗೆ ವಸ್ತ್ರಗಳು ಸುಲಭವಾಗಿ ಸಿಗುವ ಕಾರಣ ಮೆಚ್ಚುಗೆಗೆ ಪಾತ್ರವಾಗಿದೆ.

    ಕಂಚಿಪುರಂ ಸಿಲ್ಕ್‌, ಬನಾರಸಿ, ಎಂಬ್ರಾಯಿಡರಿ ರೀತಿಯ ಸೀರೆಗಳು ಡಿಸೈನರ್‌ ಸಲ್ವಾರ್‌, ಗೌನ್‌, ಕುರ್ತಾಗಳು ಇಲ್ಲಿ ಲಭ್ಯವಿದೆ. ಶ್ರೇಷ್ಠ ವಿನ್ಯಾಸಕಾರರದಾದ ಸಬ್ಯಸಾಚಿ, ಮನೀಷ್‌ ಮಲ್ಹೋತ್ರಾ, ಅನಿತಾ ಡೋಂಗ್ರೆ, ರೋಹಿತ್‌ ಬಾಲ್‌, ಅನುಶ್ರೀ ರೆಡ್ಡಿ ವಿನ್ಯಾಸ ಮಾಡಿದ ವಧು-ವರರ ಉಡುಪುಗಳು ಸಮ್ಯಕ್‌ನಲ್ಲಿ ಸಿಗುವುದು ವಿಶೇಷ.

    ಪುರುಷರಿಗೆ ಬೇಕಾದ ಶೆರ್ವಾನಿ, ಇಂಡೋ ವೆಸ್ಟರ್ನ್‌ ಶೆರ್ವಾನಿ, ಕುರ್ತಾ ಪೈಜಾಮಾ, ವೆಸ್ಟ್‌ ಕೋಟ್‌ ಅಲ್ಲದೇ ಕ್ಲಾಸಿಕ್‌, ಟುಕ್ಸೆಡೋ, ಜೋಧ್‌ಪುರಿ ಶೈಲಿಯ ಸೂಟ್ಸ್‌ ಇಲ್ಲಿ ದೊರೆಯುತ್ತದೆ. ಇಲ್ಲಿರುವ ಕಲೆಕ್ಷನ್‌ಗಳು ವಿನ್ಯಾಸಗಾರರಿಗೆ ಸಹ ಪ್ರೇರಣೆ ನೀಡಿದೆ. ದೇಶದ ಎಲ್ಲೆಡೆ ಉತ್ತಮವಾದ ಸಂಪರ್ಕವಿದ್ದು ಉತ್ತಮವಾಗಿರುವುದರಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ಆಯ್ಕೆ ಮಾಡಿ ಗ್ರಾಹಕರಿಗೆ ನೀಡುವುದರಲ್ಲಿ ಸಮ್ಯಕ್‌ ಯಾವಾಗಲೂ ಮುಂದಿರುತ್ತದೆ.

    ಗ್ರಾಹಕರ ನಂಬಿಕೆ ವಿಶ್ವಾಸ ಸಿಗುತ್ತಿದ್ದಂತೆ 2012ರಲ್ಲಿ https://www.samyakk.com ಹೆಸರಿನಲ್ಲಿ ವೆಬ್‌ಸೈಟ್‌ ಆರಂಭವಾಗಿದೆ. ವೆಬ್‌ಸೈಟ್‌ನಿಂದ ಭಾರತ ಮಾತ್ರವಲ್ಲ ವಿದೇಶದಲ್ಲೂ ಉತ್ತಮ ಪ್ರತಿಕ್ರಿಯೆಗಳು ಸಿಕ್ಕಿದೆ. ಆನ್‌ಲೈನ್‌ ವೆಬ್‌ಸೈಟ್‌ ತೆರದ ಬಳಿಕ ಶಾಪಿಂಗ್‌ ಸಹ ಸುಲಭವಾಯಿತು. ಜನರು ಕುಳಿತ ಸ್ಥಳದಿಂದಲೇ ಇಷ್ಟವಾಗಿರುವ ಬಟ್ಟೆಗಳನ್ನು ಖರೀದಿಸತೊಡಗಿದರು. ಯಾವುದಕ್ಕೂ ರಾಜಿಯಾಗದೇ ಗುಣಮಟ್ಟ ವಸ್ತುಗಳು ನಿಗದಿತ ಸಮಯದ ಒಳಗಡೆ ತಲುಪುತ್ತಿದ್ದ ಕಾರಣ ವಿದೇಶದಲ್ಲೂ ಸಮ್ಯಕ್‌ಗೆ ಗ್ರಾಹಕರು ಹುಟ್ಟಿಕೊಂಡರು.

    ದೇಶದ ಎಲ್ಲ ವರ್ಗದ ಜನರಿಗೆ ಬೇಕಾದ ಉಡುಪುಗಳ ಮಳಿಗೆ ಸಮ್ಯಕ್. ಸಾಂಪ್ರದಾಯಿಕ ವಿನ್ಯಾಸದಿಂದ ಹಿಡಿದು ಆಧುನಿಕ ಸಮಕಾಲೀನರವರೆಗಿನ ಸಂಪೂರ್ಣ ಶ್ರೇಣಿಯ ಉಡುಪುಗಳು ಇಲ್ಲಿ ಸಿಗುವುದು ವಿಶೇಷ. ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳಿಂದ ಪ್ರೇರಣೆ ಪಡೆದು ವಸ್ತ್ರಗಳನ್ನು ವಿನ್ಯಾಸ ಮಾಡಲಾಗುತ್ತದೆ. ಮಹಿಳೆಯರಿಗೆ ಬೇಕಾದ ಸೀರೆಗಳು, ಲೆಹೆಂಗಾಗಳು ಮತ್ತು ಸಲ್ವಾರ್ ಸೂಟ್‌ಗಳು ಪುರುಷರಿಗಾಗಿ ಶೆರ್ವಾನಿ, ಸೂಟ್‌ಗಳು ಮತ್ತು ಇಂಡೋ-ವೆಸ್ಟರ್ನ್ ಸಾಂಪ್ರದಾಯಿಕ ಮತ್ತು ನವ ಸಾಂಸ್ಕೃತಿಕ ವಿನ್ಯಾಸಗಳ ಉಡುಪುಗಳು ಲಭ್ಯವಿದೆ.

    ಬೆಂಗಳೂರು ನಗರದ ಹೃದಯಭಾಗದಲ್ಲಿ ತೆರೆಯಲಾದ ಅಂಗಡಿಯಲ್ಲಿ 5 ಮಳಿಗೆಗಳಿವೆ. ಪ್ರತಿ ಮಹಡಿಯಲ್ಲಿ ನಮ್ಮ ಸೊಗಸಾದ ಮತ್ತು ಡಿಸೈನರ್ ಉಡುಪುಗಳು ಮತ್ತು ಪರಿಕರಗಳ ಸಂಗ್ರಹವಿದೆ. ಖರೀದಿ ಮಾತ್ರವಲ್ಲ, ಗ್ರಾಹಕರಿಗೆ ಬೆಸ್ಪೋಕ್ ಸೇವೆಗಳು ಸಹ ಇಲ್ಲಿ ಸಿಗುತ್ತದೆ. ಫ್ಯಾಷನ್ ಸಲಹೆಗಾರರು ಯಾವುದೇ ಸಂದರ್ಭಕ್ಕೂ ಅತ್ಯುತ್ತಮವಾದ ವಿನ್ಯಾಸ ಮತ್ತು ಉಡುಪುಗಳ ಆಯ್ಕೆಗಳ ಶಿಫಾರಸು ಮಾಡುತ್ತಾರೆ.

    ಉಡುಪುಗಳ ಪರಿಪೂರ್ಣತೆಗಾಗಿ ಕರಕುಶಲವಾಗಿ ತಯಾರಿಸಲಾಗುತ್ತದೆ ಮತ್ತು ಯಾವುದೇ ರೀತಿಯ ಕಡಿತ ಇರುವುದಿಲ್ಲ. ವಿಶ್ವಾದ್ಯಂತ ಬೆಲೆಗಳು ಏಕರೂಪವಾಗಿದೆ. ಉಡುಪುಗಳ ಮಾರಾಟದಲ್ಲಿ ದಶಕಗಳ ಅನುಭವ ಇರುವ ಕಾರಣ ಭಾರತದಲ್ಲಿ ಈಗ ಸಮ್ಯಕ್‌ ಒಂದು ನಂಬಿಕೆ ಮತ್ತು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಬ್ರ್ಯಾಂಡ್‌ಗಳ ಪೈಕಿ ಒಂದಾಗಿದೆ.

    ವಿಳಾಸ
    ಸಮ್ಯಕ್‌
    ಸಂಖ್ಯೆ 24, ಡಿಸೋಜಾ ವೃತ್ತ,
    ರಿಚ್ಮಂಡ್ ರಸ್ತೆ, ಬೆಂಗಳೂರು – 560047,
    0091-8041113330
    esales@samyakk.com
    080 – 43753548
    ಮೊ : 78299 28490
    ವೆಬ್‌ಸೈಟ್‌: www.samyakk.com

  • ನೆಟ್ಟಿಗರ ಹೃದಯ ಕದ್ದ ರಿತೇಶ್ ವಿಭಿನ್ನ ದೀಪಾವಳಿ ಆಚರಣೆ

    ನೆಟ್ಟಿಗರ ಹೃದಯ ಕದ್ದ ರಿತೇಶ್ ವಿಭಿನ್ನ ದೀಪಾವಳಿ ಆಚರಣೆ

    – ರಿತೇಶ್ ಐಡಿಯಾಗೆ ಮೆಚ್ಚುಗೆ
    – ಅಮ್ಮನ ಹಳೆ ಸೀರೆಯಿಂದ ಹೊಸ ಬಟ್ಟೆ

    ಮುಂಬೈ: ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರ ದೀಪಾವಳಿಯ ಹೊಸ ಬಟ್ಟೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಮ್ಮನ ಹಳೆ ಸೀರೆಯಿಂದ ತಾವು ಹಾಗೂ ಇಬ್ಬರು ಮಕ್ಕಳಿಗೂ ರಿತೇಶ್ ಕುರ್ತಾ ಹೊಲಿಸಿಕೊಂಡಿದ್ದಾರೆ.

    ಅಮ್ಮನ ಹಳೆಯ ಸೀರೆಯನ್ನ ಬಳಸಿ ಹೊಸ ಬಟ್ಟೆ ಮಾಡಿಕೊಂಡಿರುವ ವೀಡಿಯೋ ರಿತೇಶ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಮ್ಮನ ಹಳೆ ಸೀರೆ. ಮಕ್ಕಳು ಮತ್ತು ನನಗೆ ದೀಪಾವಳಿಯ ಹೊಸ ಬಟ್ಟೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು ಎಂದು ರಿತೀಶ್ ಬರೆದುಕೊಂಡಿದ್ದಾರೆ.

    ಇನ್ನು ರಿತೇಶ್ ಐಡಿಯಾಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ತಾವು ಸಹ ಅಮ್ಮನ ಸೀರೆಯಲ್ಲಿ ಕುರ್ತಾ ಹೊಲಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅಮ್ಮನ ಸೀರೆಯಲ್ಲಿ ಆಕೆಯ ಪ್ರೀತಿ ಮತ್ತು ಆಶೀರ್ವಾದ ಇರುತ್ತೆ. ಇಂತಹ ಪ್ರೀತಿಯ ಕ್ಯೂಟ್ ವೀಡಿಯೋ ಶೇರ್ ಮಾಡಿಕೊಂಡ ನಿಮಗೆ ಧನ್ಯವಾದಗಳು ಎಂದು ನೆಟ್ಟಿಗರೊಬ್ಬರು ರಿಪ್ಲೈ ಮಾಡಿದ್ದಾರೆ.

  • 800 ರೂ. ಕುರ್ತಾ ಖರೀದಿಸಲು ಹೋಗಿ 80 ಸಾವಿರ ಕಳೆದುಕೊಂಡ ಮಹಿಳೆ

    800 ರೂ. ಕುರ್ತಾ ಖರೀದಿಸಲು ಹೋಗಿ 80 ಸಾವಿರ ಕಳೆದುಕೊಂಡ ಮಹಿಳೆ

    ಬೆಂಗಳೂರು: ಆನ್‍ಲೈನ್ ವಂಚಕರ ಜಾಲದಲ್ಲಿ ಸಿಕ್ಕಿಹಾಕಿಕೊಂಡ ಸಿಲಿಕಾನ್ ಸಿಟಿಯ ಮಹಿಳೆಯೊಬ್ಬರು 800 ರೂ. ಬೆಲೆಯ 1 ಕುರ್ತಾ ಆರ್ಡರ್ ಮಾಡಿ, ಬರೋಬ್ಬರಿ 80 ಸಾವಿರ ರೂ. ಕಳೆದುಕೊಂಡಿದ್ದಾರೆ.

    ಗೊಟ್ಟಿಗೆರೆಯ ನಿವಾಸಿ ಶ್ರವಣಾ ಅವರು ಆನ್‍ಲೈನ್ ವಂಚಕರ ಜಾಲಕ್ಕೆ ಬಿದ್ದು ಮೋಸ ಹೋಗಿದ್ದಾರೆ. ನವೆಂಬರ್ 8ರಂದು ಮಹಿಳೆ ಮೊಬೈಲ್‍ನಲ್ಲಿ ಇ-ಕಾಮರ್ಸ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು, ಅದರಲ್ಲಿ ಸುಮಾರು 800 ರೂ. ಬೆಲೆಯ 1 ಕುರ್ತಾ ಆರ್ಡರ್ ಮಾಡಿದ್ದರು. ಆದರೆ ಆರ್ಡರ್ ಡೆಲಿವರಿ ಸಮಯ ಮುಗಿದ ಮೇಲೂ ಕುರ್ತಾಗಳು ಮಹಿಳೆಗೆ ತಲುಪಿರಲಿಲ್ಲ.

    ಆಗ ಆ್ಯಪ್‍ನಲ್ಲಿ ಇದ್ದ ಕಸ್ಟಮರ್ ಕೇರ್ ನಂಬರ್ ಗೆ ಮಹಿಳೆ ಕರೆ ಮಾಡಿ ವಿಚಾರಿಸಿದರು. ಈ ವೇಳೆ ಕರೆಯಲ್ಲಿ ಮಾತನಾಡಿದ ಸಿಬ್ಬಂದಿ, ಈ ಬಗ್ಗೆ ತಿಳಿದು ಕರೆ ಮಾಡುತ್ತೇವೆ. ಆದಷ್ಟು ಬೇಗ ನಿಮ್ಮ ಆರ್ಡರ್ ಡೆಲಿವರಿಯಾಗುತ್ತೆ ಎಂದು ನಂಬಿಸಿದ್ದಾನೆ. ಬಳಿಕ ನಿಮ್ಮ ಬ್ಯಾಂಕ್ ಆಕೌಂಟ್ ಮಾಹಿತಿ ಕೊಡಿ ಎಂದು ಮಹಿಳೆಗೆ ಹೇಳಿದ್ದಾನೆ. ಬಹುಶಃ ನನಗೆ ಸಹಾಯ ಮಾಡಲು ಸಿಬ್ಬಂದಿ ಕೇಳುತ್ತಿದ್ದಾನೆ ಎಂದು ಮಹಿಳೆ ಕೂಡ ಆತ ಕೇಳಿದ ಎಲ್ಲಾ ಮಾಹಿತಿ ನೀಡಿದ್ದಾರೆ.

    ಮಹಿಳೆಯಿಂದ ಬ್ಯಾಂಕ್ ಆಕೌಂಟ್ ಮಾಹಿತಿ ಪಡೆದ ಬಳಿಕ ಅವರ ಫೋನಿಗೆ ಒಂದು ಓಟಿಪಿ ಬಂದಿತ್ತು. ಅದನ್ನೂ ಕೂಡ ಹೇಳಿ ಎಂದು ಸಿಬ್ಬಂದಿ ಕರೆ ಮಾಡಿ ಕೇಳಿದಾಗ ಓಟಿಪಿಯನ್ನು ಮಹಿಳೆ ಹೇಳಿದ್ದರು. ನಂತರ ನಿಮ್ಮ ಕುರ್ತಾ ನಿಮಗೆ ಬಂದು ಸೇರುತ್ತದೆ ಎಂದು ಸಿಬ್ಬಂದಿ ಹೇಳಿ ಕರೆ ಕಟ್ ಮಾಡಿದ್ದಾನೆ.

    ಮಹಿಳೆ ಕೂಡ ಸಿಬ್ಬಂದಿ ಮಾತನ್ನು ನಂಬಿ ಕುರ್ತಾ ಕೆಲ ದಿನಗಳಲ್ಲಿ ಡೆಲಿವರಿಯಾಗುತ್ತದೆ ಎಂದುಕೊಂಡಿದ್ದರು. ಆದರೆ ಓಟಿಪಿ ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ಮಹಿಳೆ ಅಕೌಂಟ್‍ನಲ್ಲಿದ್ದ 79,600 ರೂ. ಹಣ 4 ಕಂತಿನಲ್ಲಿ ಕಡಿತಗೊಂಡಿದೆ.

    ಹಣ ಕಳೆದುಕೊಂಡ ಬಳಿಕ ತನಗೆ ಮೋಸ ಮಾಡಲಾಗಿದೆ ಎನ್ನುವುದು ಮಹಿಳೆಗೆ ಗೊತ್ತಾಗಿದ್ದು, ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆನ್‍ಲೈನ್ ಶಾಪಿಂಗ್ ಮೋಹಕ್ಕೆ ಮಹಿಳೆ ಹಣವನ್ನು ಕಳೆದುಕೊಂಡು ಮೋಸಹೋಗಿದ್ದಾರೆ. ಕುರ್ತಾದ ಆಸೆ ತೋರಿಸಿ ಮಹಿಳೆಗೆ ವಂಚಕರು ಪಂಗನಾಮ ಹಾಕಿದ್ದಾರೆ.

    ಈ ಬಗ್ಗೆ ಸೈಬರ್ ಪೀಸ್ ಫೌಂಡೇಷನ್ ಅಧ್ಯಕ್ಷ ವಿನೀತ್ ಕುಮಾರ್ ಮಾತನಾಡಿ, ಯಾವಾಗಲೂ ಗೂಗಲ್ ಪ್ಲೇ ಅಥವಾ ಐಓಎಸ್‍ನಲ್ಲಿ ಇರುವ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡುವುದು ಒಳ್ಳೆಯದು. ಕೆಲವೊಮ್ಮೆ ಅದರಲ್ಲೂ ಫೇಕ್ ಆ್ಯಪ್‍ಗಳು ಇರುತ್ತವೆ. ಅದರ ಬಗ್ಗೆ ಎಚ್ಚರವಹಿಸಿ. ನಿಮ್ಮ ಮೊಬೈಲ್‍ನಲ್ಲಿ ಪ್ಲೇ ಪ್ರೊಟೆಕ್ಟ್ ಫೀಚರ್ ಆನ್ ಮಾಡಿದರೆ ಅದು ನಿಮಗೆ ಡೌನ್‍ಲೋಡ್ ಮಾಡುವ ಆ್ಯಪ್‍ಗಳ ಸೆಕ್ಯೂರಿಟಿ ಸ್ಟೇಟಸ್ ಏನು ಎನ್ನುವುದನ್ನು ತೋರಿಸುತ್ತದೆ ಎಂದು ತಿಳಿಸಿದರು.

  • ಕಾಶಿಯಲ್ಲಿ ಪೊಲೀಸರಿಗೆ ಧೋತಿ-ಕುರ್ತಾ ಸಮವಸ್ತ್ರ ಕಡ್ಡಾಯ!

    ಕಾಶಿಯಲ್ಲಿ ಪೊಲೀಸರಿಗೆ ಧೋತಿ-ಕುರ್ತಾ ಸಮವಸ್ತ್ರ ಕಡ್ಡಾಯ!

    ವಾರಾಣಸಿ: ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಹೊಸ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ.

    ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯ ಸಮೀಪ ಕಾರ್ಯ ನಿರ್ವಹಿಸುವ ಪೊಲೀಸರು ಕಡ್ಡಾಯವಾಗಿ ಧೋತಿ-ಕುರ್ತಾ ಧರಿಸಬೇಕೆಂಬ ನಿಯಮವನ್ನು ಜಾರಿಗೆ ಮಾಡಿ ಪೊಲೀಸ್ ಇಲಾಖೆ ಆದೇಶ ನೀಡಿದೆ.

    ಈ ಕುರಿತು ಮಾಹಿತಿ ನೀಡಿರುವ ವಾರಾಣಾಸಿಯ ಜ್ಞಾನವಾಪಿ ಎಸ್ಪಿ ಶೈಲೇಂದ್ರ ಕುಮಾರ್ ರೈ, ಈ ವಸ್ತ್ರ ಸಂಹಿತೆ ನಿಯಮ ದೇವಾಲಯದ ಗರ್ಭಗುಡಿಯ ಬಳಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನುಳಿದ ಪೊಲೀಸರು ತಮ್ಮ ಸಾಮಾನ್ಯ ಸಮವಸ್ತ್ರ ಧರಿಸಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಪೊಲೀಸರು ಬೆಲ್ಟ್ ಧರಿಸಿ, ಇಲಾಖೆ ಸಮವಸ್ತ್ರದಲ್ಲಿಯೇ ಗರ್ಭಗುಡಿ ಬಳಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸದ್ಯ ಪೊಲೀಸ್ ಇಲಾಖೆಯ ಈ ಹೊಸ ನಿಯಮವನ್ನು ದೇವಾಲಯದ ಆಡಳಿತ ಮಂಡಳಿ ಸ್ವಾಗತಿಸಿದೆ.

    ಈ ನಿಯಮ ಸೋಮವಾರದಿಂದಲೇ ಜಾರಿಯಾಗಿದ್ದು, ಧೋತಿ-ಕುರ್ತಾ ಧರಿಸಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರನ್ನು ಕಂಡ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  • ಇನ್ಮುಂದೆ ಬ್ರಿಟಿಷ್ ಗೌನ್ ಕ್ಯಾನ್ಸಲ್- ಹೊಸ ಡ್ರೆಸ್ ಸ್ಟೈಲ್‍ನಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವ

    ಇನ್ಮುಂದೆ ಬ್ರಿಟಿಷ್ ಗೌನ್ ಕ್ಯಾನ್ಸಲ್- ಹೊಸ ಡ್ರೆಸ್ ಸ್ಟೈಲ್‍ನಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವ

    ನವದೆಹಲಿ: ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸುವಾಗ ಇಂದಿಗೂ ಬ್ರಿಟಿಷ್ ಗೌನ್ ಹಾಕಲಾಗುತ್ತಿದೆ. ಹೀಗಾಗಿ ಗೌನ್ ಬದಲಾಗಿ ಸ್ವದೇಶಿ ನಿರ್ಮಿತ ಕುರ್ತಾ ಬಳಸಬೇಕು ಅಂತ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ.

    ಕುರ್ತಾ ಡಿಸೈನ್ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದು, ವಿದ್ಯಾರ್ಥಿಗಳಿಂದ ಡಿಸೈನ್ ಬಂದ ಮೇಲೆ ಉನ್ನತವಾದ ಕುರ್ತಾವನ್ನು ಅಂತಿಮವಾಗಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ.

    ಕಳೆದ ತಿಂಗಳಷ್ಟೇ ದೆಹಲಿಯಲ್ಲಿ ನಡೆದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸಭೆಯಲ್ಲಿ ಗೌನ್ ಸಂಸ್ಕೃತಿಯು ಬ್ರಿಟಿಷ್ ವಸಾಹತು ಶಾಹಿಯ ಪ್ರತಿರೂಪವಾಗಿದೆ ಎನ್ನುವ ಒಮ್ಮತ ಅಭಿಪ್ರಾಯ ಮೂಡಿಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲು ಮುಂದಾಗಿತ್ತು. ಅಲ್ಲದೇ ಶೀಘ್ರದಲ್ಲಿಯೇ ದೇಶದ ಎಲ್ಲಾ ವಿಶ್ವ ವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿಯ ಉಡುಪು ಧರಿಸಬೇಕು ಎನ್ನುವುದರ ಬಗ್ಗೆ ಸೂಚನೆಯನ್ನು ನೀಡಲಾಗುವುದು ಎಂದು ತಿಳಿಸಿತ್ತು.

    ದೇಶದಲ್ಲಿ 800 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಇದ್ದು, 40 ಸಾವಿರಕ್ಕೂ ಹೆಚ್ಚು ಶಿಕ್ಷಣದ ಸಂಸ್ಥೆಗಳಲ್ಲಿ 3ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕುರ್ತಾ ಬಳಸುವ ಮೂಲಕ ಮೇಕ್ ಇನ್ ಇಂಡಿಯಾಗೆ ಒತ್ತು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ ಎಂದು ತಿಳಿದುಬಂದಿದೆ.

    ಕಳೆದ ವರ್ಷ ಮುಂಬೈಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಘಟಿಕೋತ್ಸವದ ವೇಳೆ ವಿದ್ಯಾರ್ಥಿಗಳು ಖಾದಿ ವಸ್ತ್ರಗಳನ್ನು ಧರಿಸಿ ಬಂದಿದ್ದರು.