Tag: ಕುರುಬ ಸಮಾಜ

  • ಸಿದ್ದುಗೆ ಮುಳುವಾಯ್ತು ಅಹಿಂದ ಮಂತ್ರ – ಕುರುಬ ಸಮಾಜದಲ್ಲಿ ಅಸಮಾಧಾನ ಸ್ಫೋಟ

    ಸಿದ್ದುಗೆ ಮುಳುವಾಯ್ತು ಅಹಿಂದ ಮಂತ್ರ – ಕುರುಬ ಸಮಾಜದಲ್ಲಿ ಅಸಮಾಧಾನ ಸ್ಫೋಟ

    ಯಾದಗಿರಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಈಗ ಅಹಿಂದ ಮಂತ್ರವೇ ಮುಳುವಾಗಿ ಪರಿಣಮಿಸುತ್ತಿದ್ದು, ಅವರ ವಿರುದ್ಧವೇ  ಕುರುಬ ಸಮಾಜದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

    ಸಿದ್ದರಾಮಯ್ಯ ಅವರ ವಿರುದ್ಧ ಯಾದಗಿರಿ ಕುರುಬ ಸಮಾಜ ತೀವ್ರವಾಗಿ ತಮ್ಮ ಆಕ್ರೋಶ ಹೊರ ಹಾಕಿದೆ. ಯಾದಗಿರಿ ಪತ್ರಿಕಾ ಭವನದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕುರುಬ ಸಮಾಜದ ವಿವಿಧ ಸಂಘಗಳ ಮುಖಂಡರು ಮತ್ತು ಸಂಗೊಳ್ಳಿ ರಾಯಣ್ಣ ಸಂಘದ ಜಿಲ್ಲಾಧ್ಯಕ್ಷ ಭೀಮರಾಯ ಬಂಡಾರಿ ಸಿದ್ದರಾಮಯ್ಯ ಅವರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು. ಕುರುಬ ಸಮಾಜದಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟು ಬೇರೆ ಯಾರನ್ನು ಬೆಳೆಯಲು ಬಿಡುತ್ತಿಲ್ಲ. ಕುರುಬ ಸಮಾಜದಲ್ಲಿ ರಾಜಕೀಯ ಆಸಕ್ತರು ಅವರೊಬ್ಬರೇ ಅಲ್ಲ, ಇನ್ನೂ ತುಂಬ ಜನ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿದ್ದರಾಮಯ್ಯ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ನಮ್ಮ ಸಮಾಜದಲ್ಲಿನ ಮುಖಂಡರನ್ನು ಗುರುತಿಸುವ ಕಾರ್ಯ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಇದ್ದರೆ ಕುರುಬರ ಮತ ಪಡೆಯಬಹುದು ಅಂತ ತಿಳಿದುಕೊಂಡಿದೆ. ಆದರೆ ಇದು ಅವರ ಭ್ರಮೆ. ಸಿದ್ದರಾಮಯ್ಯ ಅವರು ನಮ್ಮ ಸಮಾಜಕ್ಕೆ ಏನು ಮಾಡಿಲ್ಲ ಅಂದ ಮೇಲೆ ಅವರ ಜೊತೆಗೆ ನಾವು ಏಕೆ ಇರಬೇಕು. ಇನ್ನ ಮೇಲೆ ನಾವು ಏನು ಎಂದು ಕುರುಬ ಸಮಾಜ ತೋರಿಸುತ್ತದೆ. ಈಗ ನಮಗೆ ಗೊತ್ತಾಗಿದೆ, ಇವಾಗ ನೋಡಿ ಎಂದು ಸವಾಲನ್ನು ಹಾಕಿದರು. ಇದನ್ನೂ ಓದಿ: ತುಂಗಾನಗರ ಪೊಲೀಸರು ಏನು ದನ ಕಾಯುತ್ತಿದ್ದಾರಾ? : SPಗೆ ಈಶ್ವರಪ್ಪ ಪ್ರಶ್ನೆ

    ನಮಗೆ ಯಾರನ್ನ ಗೆಲ್ಲಸಬೇಕು, ಯಾರನ್ನು ಸೋಲಿಸಬೇಕು ಎಂದು ಚೆನ್ನಾಗಿ ಗೊತ್ತು. ಹೆಸರಿಗೆ ಮಾತ್ರ ಸಿದ್ದರಾಮಯ್ಯ ಅವರು ಕುರುಬರ ನಾಯಕರು. ಅವರು ಯಾವತ್ತು ನಮ್ಮ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಿಲ್ಲ. ಅವರೂ ಅಹಿಂದ ಹೆಸರನಲ್ಲಿ ರಾಜಕೀಯ ಮಾಡಿ ನಮ್ಮ ಸಮಾಜವನ್ನೆ ಮರೆತು ಬಿಟ್ಟಿದ್ದಾರೆ. ಮುಂದೆ ಅವರು ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡಲಿ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಸಿಡಿದರು.

  • ಪಕ್ಷದ ವಿಚಾರ ಬಂದಾಗ ಕುತ್ತಿಗೆ ಕಡಿದರೂ ಪಕ್ಷ ಬಿಟ್ಟು ಹೋಗೋದಿಲ್ಲ: ಈಶ್ವರಪ್ಪ

    ಪಕ್ಷದ ವಿಚಾರ ಬಂದಾಗ ಕುತ್ತಿಗೆ ಕಡಿದರೂ ಪಕ್ಷ ಬಿಟ್ಟು ಹೋಗೋದಿಲ್ಲ: ಈಶ್ವರಪ್ಪ

    – ಹೋರಾಟದ ಮೂಲಕ ಎಸ್‍ಟಿ ಹಕ್ಕು ಪಡೆಯೋಣ

    ಹಾವೇರಿ: ಪಕ್ಷದ ವಿಚಾರ ಬಂದಾಗ ಕುತ್ತಿಗೆ ಕಡಿದರೂ ಪಕ್ಷ ಬಿಟ್ಟು ಹೋಗೋದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯ, ಕುರುಬರ ಎಸ್‍ಟಿ ಮೀಸಲಾತಿಯ ರಾಜ್ಯಮಟ್ಟದ ಮಹಿಳಾ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯೋಣ. ಪಕ್ಷವನ್ನು ಬಿಟ್ಟು ಕುರುಬರು ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಒಂದಾಗಿದ್ದೇವೆ ಎಂದರು.

    ಕುರುಬರ ಎಸ್‍ಟಿ ಮೀಸಲಾತಿ ಹೋರಾಟಕ್ಕೆ ಭಗವಂತ ಯಶಸ್ಸು ನೀಡುತ್ತಾನೆ. ಸ್ವಾಮೀಜಿಗಳ ನೇತೃತ್ವದಲ್ಲಿ ನಾವೆಲ್ಲ ಒಂದಾಗಿದ್ದೇವೆ. ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡೋಣ. ಪಕ್ಷದ ವಿಚಾರ ಬಂದಾಗ ಕುತ್ತಿಗೆ ಕಡಿದರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯೋಣ ಎಂದು ತಿಳಿಸಿದರು.