ಬೆಂಗಳೂರು: ಪಂಜಾಬಿನ (Punjab) ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shanthakumar) ಅವರನ್ನು ಇಂದು ಏರ್ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ (Bengaluru) ಕರೆತರಲಾಗಿದೆ.
ಮೂರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಶಾಂತಕುಮಾರ್ ಅವರು ಗಾಯಗೊಂಡು ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಷಯ ತಿಳಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏರ್ ಅಂಬುಲೆನ್ಸ್ ಮೂಲಕ ಶಾಂತಕುಮಾರ್ ಅವರನ್ನು ಬೆಂಗಳೂರಿಗೆ ಕರೆತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: 2 ಜೀವಗಳನ್ನ ಬಲಿ ಪಡೆದಿದ್ದ, ಇಡೀ ಗ್ರಾಮದ ಜನರನ್ನೇ ಕಾಡಿದ್ದ ಸಲಗ ಕೊನೆಗೂ ಸೆರೆ
ಬೆಂಗಳೂರು/ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shanthakumar) ಅವರನ್ನು ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.
ಪಂಜಾಬ್ ಗಡಿಯ ಪಾಟಿಯಾಲ ಬಳಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಕುರುಬೂರು ಶಾಂತಕುಮಾರ್ ಗಾಯಗೊಂಡಿದ್ದರು. ಪಾಟಿಯಾಲದ ಸರ್ಕಾರಿ ರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸದ್ಯ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಏರ್ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗ್ತಿದೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ರೈತ ಮುಖಂಡ ಚಿಕಿತ್ಸೆ ಪಡೆಯಲಿದ್ದಾರೆ.
ನವದೆಹಲಿ: ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shanthakumar) ಅವರನ್ನು ಬೆಂಗಳೂರಿಗೆ (Bengaluru) ಶಿಫ್ಟ್ ಮಾಡಲು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ (V Somanna) ಪ್ರಯತ್ನ ನಡೆಸುತ್ತಿದ್ದಾರೆ.
ಅಪಘಾತದಲ್ಲಿ (Accident) ಬೆನ್ನುಮೂಳೆಗೆ ತೀವ್ರಗಾಯವಾಗಿದ್ದು ಕುರುಬೂರು ಶಾಂತಕುಮಾರ್ ಅವರು ಪಂಜಾಬ್‌ನ ಪಟಿಯಾಲ ರಾಜೇಂದ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿಗೆ ಏರ್‌ಲಿಫ್ಟ್ (Airlift) ಮಾಡುವ ಸಂಬಂಧ ಪಟಿಯಾಲ ಜಿಲ್ಲೆಯ ಡಿಸಿ ಜೊತೆ ಸಚಿವ ಸೋಮಣ್ಣ ಮಾತನಾಡಿದ್ದಾರೆ. ಬೆಂಗಳೂರಿನಲ್ಲೇ ಚಿಕಿತ್ಸೆ ಕೊಡಿಸುವ ಸಂಬಂಧ ಶಾಂತಕುಮಾರ್ ಜೊತೆ ಮೂರು ಬಾರಿ ಸೋಮಣ್ಣ ಮಾತನಾಡಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ
ಕರ್ನಾಟಕದ ರೈತ ಮುಖಂಡನಾಗಿ ಹಲವು ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಕುರುಬೂರು ಶಾಂತಕುಮಾರ್ ಪಂಜಾಬ್‌ನಲ್ಲಿ ಆಯೋಜನೆಗೊಂಡಿದ್ದ ರೈತ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಗೆ ತೆರಳಿದ್ದರು.
ದೆಹಲಿಯಿಂದ ಪಂಜಾಬ್ ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಎಸ್ಕಾರ್ಟ್ ವಾಹನ ಜೊತೆ ತೆರಳುತ್ತಿದ್ದ ವೇಳೆ ಮುಂದಿನ ವಾಹನ ಅಪಘಾತಕ್ಕೀಡಾಗಿದೆ. ಹೀಗಾಗಿ ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಪರಿಣಾಮ ಹಿಂದಿನಿಂದ ಬರುತ್ತಿದ್ದ 5ಕ್ಕೂ ಹೆಚ್ಚು ಕಾರುಗಳು ಏಕಕಾಲಕ್ಕೆ ಸರಣಿ ಅಪಘಾತಕ್ಕೀಡಾಗಿತ್ತು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಕಳೆದ ಒಂದು ವರ್ಷದಿಂದ ಕನೋಲಿ ಬಾರ್ಡರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಂತಕುಮಾರ್ ಅವರು ಶುಕ್ರವಾರ ಸಭೆಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿತ್ತು.
ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ (CM Siddaramaiah) ಮನವಿ ಮಾಡಿರುವುದಾಗಿ ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shanthakumar) ತಿಳಿಸಿದ್ದಾರೆ.
ಸಿಎಂ ಅವರನ್ನು ಭೇಟಿಯಾಗಿ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 40 ಸಾವಿರ ಕೆರೆಗಳನ್ನು ಹೂಳೆತ್ತಿಸಿ ರೈತ ಜಮೀನಿಗೆ ನೀರು ಸರಬರಾಜು ಮಾಡಲು ಮನವಿ ಮಾಡಿದ್ದೇವೆ. ತೆಲಂಗಾಣದಲ್ಲಿ ಈ ಮಾದರಿ ಮಾಡಿದ್ದಾರೆ. ಇದನ್ನು ರಾಜ್ಯದಲ್ಲಿ ಜಾರಿ ಮಾಡಲು ಮನವಿ ಮಾಡಿದ್ದೇವೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದು ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇನ್ನೂ ಕಾಯ್ದೆ ರದ್ದು ಮಾಡಿಲ್ಲ. ಎಪಿಎಂಸಿ ಕಾಯ್ದೆ ರದ್ದು ಮಾಡಿದಂತೆ ಕೂಡಲೇ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಆರೋಗ್ಯ ಸ್ಥಿತಿ ತೀವ್ರ ಗಂಭೀರ
ಕೇಂದ್ರದ ಕಾಯ್ದೆ ನೆಪದಲ್ಲಿ ರೈತರ ಜಮೀನುಗಳನ್ನ ಬ್ಯಾಂಕ್ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ಹೀಗಾಗಿ ಕೇಂದ್ರದ ಕಾನೂನುನನ್ನು ರಾಜ್ಯ ಸರ್ಕಾರ ವಿರೋಧ ಮಾಡಬೇಕು. ಎನ್‌ಡಿಆರ್‌ಎಫ್ ಮಾನದಂಡ ಪರಿಷ್ಕರಣೆ ಮಾಡಬೇಕು. ಬರ ಪರಿಹಾರದ ಪರಿಹಾರ ಮೊತ್ತ ಜಾಸ್ತಿ ಮಾಡಬೇಕು. ಕಳಸಾ-ಬಂಡೂರಿ ಯೋಜನೆ ವಿಚಾರ ವನ್ಯಜೀವಿ ಮಂಡಳಿ ವಿರೋಧ ಮಾಡಿದೆ. ಇದಕ್ಕೆ ಯಾರು ವಿರೋಧ ಮಾಡದೇ ಯೋಜನೆ ಜಾರಿ ಮಾಡಲು ಸಹಕಾರ ನೀಡಬೇಕು. ಈ ಬಗ್ಗೆ ಕೇಂದ್ರಕ್ಕೆ ಒತ್ತಾಯ ಮಾಡಬೇಕು. ಅಗತ್ಯ ಬಿದ್ದರೆ ನಿಯೋಗದಲ್ಲಿ ನಾವು ಭಾಗಿಯಾಗುತ್ತೇವೆ ಎಂದು ತಿಳಿಸಿದ್ದೇವೆ. ಕಳಸಾ-ಬಂಡೂರಿ ವಿಚಾರವಾಗಿ ಕೇಂದ್ರದ ಬಳಿಕ ನಿಯೋಗ ಹೋಗುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯ ರೈಲ್ವೆ ಮೇಲೆ ಆಗಂತುಕರ ಕಣ್ಣು – ಆಗಸ್ಟ್ ತಿಂಗಳಲ್ಲೇ 18 ಬಾರಿ ರೈಲು ಹಳಿ ತಪ್ಪಿಸಲು ಯತ್ನ
ರಾಜ್ಯದಲ್ಲಿ 40 ಸಾವಿರ ಪಂಪ್ ಸೆಟ್‌ಗಳು ಇವೆ. ಈ ಪಂಪ್ ಸೆಟ್‌ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಸರ್ಕಾರ ಹೇಳುತ್ತಿದೆ. ಆಧಾರ್ ಕಾರ್ಡ್ ಕಡ್ಡಾಯಕ್ಕೆ ನಮ್ಮ ವಿರೋಧ ಇದೆ. ಯಾವುದೇ ಕಾರಣಕ್ಕೂ ಪಂಪ್ ಸೆಟ್‌ಗೆ ಆಧಾರ್ ಕಾರ್ಡ್ ಕಡ್ಡಾಯಬೇಡ ಎಂದು ಹೇಳಿದ್ದೇವೆ. ಸಿಎಂ ಇದಕ್ಕೆ ಒಪ್ಪಿದ್ದಾರೆ. ಕಬ್ಬಿನ ಕಾರ್ಖಾನೆಗೆ ಬಾಕಿ ಇರೋ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆ ಈಡೇರಿಕೆಗೆ ಒಂದು ತಿಂಗಳು ಗಡುವು ನೀಡಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸದೇ ಹೋದರೆ ವಿಧಾನಸೌಧದಕ್ಕೆ ಮುತ್ತಿಗೆ ಹಾಕೋದಾಗಿ ತಿಳಿಸಿದ್ದೇವೆ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ವರ್ಗಾಯಿಸಲು ಚಿಂತನೆ: ಬಿ.ದಯಾನಂದ್
ನವದೆಹಲಿ: ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ, ಜನಸಾಮಾನ್ಯರಿಗೆ ನೀರು ಉಳಿಸದೆ, ಕಾವೇರಿ ನೀರು ತಮಿಳುನಾಡಿಗೆ ಹರಿಸಿ ರಾಜ್ಯದ ರೈತರಿಗೆ ಕುಡಿಯುವ ನೀರಿಗೆ ಸಂಕಷ್ಟ ತಂದಿರುವ ನೀತಿಯನ್ನು ಸರಿಪಡಿಸುವಂತೆ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ (Cauvery Water Management Board) ಅವೈಜ್ಞಾನಿಕ ಆದೇಶಕ್ಕೆ ತಡೆ ನೀಡುವಂತೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಪರವಾಗಿ ರೈತ ನಾಯಕ ಕುರುಬೂರು ಶಾಂತಕುಮಾರ್ (Kuruburu Shanthakumar) ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಅವರಿಗೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ (New Delhi) ಶೇಖಾವತ್ ನಿವಾಸದಲ್ಲಿ ಭೇಟಿಯಾದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನಿಯೋಗ, ಕಾವೇರಿ ನೀರು ಹರಿಸಲು ಪ್ರಾಧಿಕಾರ ನೀಡಿರುವ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿತು. ಸುಮಾರು 20 ನಿಮಿಷಗಳ ಚರ್ಚೆಯಲ್ಲಿ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದರು. ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ – ನ.7 ಕ್ಕೆ ಮೊದಲ, ನ.30 ರಂದು ಕೊನೆ ಚುನಾವಣೆ
ಕರ್ನಾಟಕ ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ಬರಗಾಲಕ್ಕೆ 195 ತಾಲೂಕುಗಳು ತುತ್ತಾಗಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವೇರಿ ಜಲನಯನ ಭಾಗದ 38 ತಾಲೂಕುಗಳು ಬರಗಾಲಕ್ಕೆ ತುತ್ತಾಗಿ ರೈತರು ಯಾವುದೇ ಬೆಳೆ ಬೆಳೆದಿಲ್ಲ. ಕಾವೇರಿ ವ್ಯಾಪ್ತಿಗೆ ಬರುವ ಬೆಂಗಳೂರಿನಲ್ಲಿ 1.30 ಕೋಟಿ ಜನರಿಗೆ ಕುಡಿಯುವ ನೀರಿನ ಸಂಕಷ್ಟ ಬಂದಿದೆ. ಇಂಥ ಸಂದಿಗ್ಧ ಸಮಯದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ಪ್ರತಿನಿತ್ಯ 5,000 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಬೇಕೆಂಬ ಅವೈಜ್ಞಾನಿಕ ಆದೇಶವನ್ನು ಹೊರಡಿಸಿತ್ತು. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧ; ಚಿನ್ನ, ಬೆಳ್ಳಿ ದರದ ಮೇಲೆ ಎಫೆಕ್ಟ್
ರಾಜ್ಯದಲ್ಲಿ ಹೋರಾಟದ ನಂತರವೂ ಮಂಡಳಿ 3,000 ಕ್ಯೂಸೆಕ್ ನೀರು ಬಿಡಬೇಕೆಂಬ ಆದೇಶ ನೀಡಿರುವುದನ್ನು ಒಪ್ಪಿ, ರಾಜ್ಯ ಸರ್ಕಾರ ಮತ್ತೆ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸುವಂತೆ, ಕುಡಿಯುವ ನೀರು ಉಳಿಸುವಂತೆ ಶೇಖಾವತ್ ಅವರಿಗೆ ಮನವಿ ಮಾಡಲಾಯಿತು. ಇದೇ ವೇಳೆ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಿ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಇದರಿಂದ ನೀರಿನ ಬವಣೆ ಕಡಿಮೆಯಾಗಲಿದೆ ಎಂದು ಮನವಿ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಿಲುಕಿದ್ದ 18,000 ಭಾರತೀಯರು ಸೇಫ್
ಸಭೆಯ ಬಳಿಕ ಮಾತನಾಡಿದ ಕಬ್ಬು ಬೆಳೆಗಾರರ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕಾವೇರಿ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಮಾತುಕತೆ ನಡೆಸಿದೆ. ಮುಂದಿನ ಸಭೆಯಲ್ಲಿ ನೀರು ಹರಿಸದಂತೆ ಮನವಿ ಮಾಡಿದೆ. ಮೇಕೆದಾಟು ಬಗ್ಗೆ ಗಂಭೀರವಾಗಿ ಪರಿಶೀಲಿಸಲು ಕೋರಿದ್ದೇವೆ. ಜಲಶಕ್ತಿ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಇದನ್ನೂ ಓದಿ: 5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಇಂದು ಪ್ರಕಟ
ಬೆಂಗಳೂರು: ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shanthakumar) ಅವರನ್ನು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪೊಲೀಸರು ವಶಕ್ಕೆ (Custody) ಪಡೆದಿದ್ದಾರೆ.
ಕಾವೇರಿಗಾಗಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದ್ದು, ಬೆಂಗಳೂರು ಬಂದ್ ಹಿನ್ನೆಲೆ ಬೆಳ್ಳಂಬೆಳಗ್ಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳು ಆರಂಭಗೊಂಡಿದೆ. ಈ ವೇಳೆ ಕುರುಬೂರು ಶಾಂತಕುಮಾರ್ ಹಾಗೂ ಇತರೆ ಕೆಲವರನ್ನು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿಭಟನಾ ಮೆರವಣಿಗೆಗೂ ಮುನ್ನವೇ ಶಾಂತಕುಮಾರ್ ಹಾಗೂ ಇತರರನ್ನು ಖಾಕಿ ಪಡೆ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್ – ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೂ ಸಹಜ ಸ್ಥಿತಿ
ಈ ಸಂದರ್ಭ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಂತಕುಮಾರ್, ಪೊಲೀಸರು ಗೂಂಡಾಗಿರಿ ಮೂಲಕ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನ ಜನತೆ ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ಬೀದಿಗಿಳಿಯಬೇಕು. ಸರ್ಕಾರಕ್ಕೆ ಸರಿಯಾದ ಪಾಠವನ್ನು ಕಲಿಸಬೇಕು. ಕರ್ನಾಟಕದ ರೈತರು ನಮಗೆ ಬೆಂಬಲ ನೀಡಿ ರಸ್ತೆಗಿಳಿಯಬೇಕು ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮೂವರು ಕೇಂದ್ರ ಸಚಿವರಿಗೆ ಬಿಜೆಪಿ ಟಿಕೆಟ್
ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ (Kuruburu Shanthakumar) ನೇತೃತ್ವದಲ್ಲಿ ಜಲ ಸಂರಕ್ಷಣಾ ಸಮಿತಿಯಿಂದ (Water Conservation Committee) ಮಂಗಳವಾರ ಬಂದ್‌ಗೆ ಕರೆ ನೀಡಲಾಗಿದ್ದು, ಕನ್ನಡ ಪರ ಸಂಘಟನೆಗಳು (Pro-Kannada Organization) ಈ ವಿಚಾರವಾಗಿ ತಟಸ್ಥ ಧೋರಣೆ ತಾಳಿವೆ.
ಮಂಗಳವಾರ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಪ್ರವೀಣ್ ಶೆಟ್ಟಿ (Praveen Shetty) ಬಣ ಹೇಳಿದೆ. ಸದ್ಯಕ್ಕೆ ಕನ್ನಡ ಸಂಘಟನೆಗಳಿಂದ ಮಂಗಳವಾರ ಬಂದ್ ಬಗ್ಗೆ ಬೆಂಬಲವಿಲ್ಲ. ಬೇರೆ ದಿನಾಂಕದಂದು ಬಂದ್ ಘೋಷಣೆಯಾಗಬೇಕಿತ್ತು. ಮಂಗಳವಾರ ಕರೆ ನೀಡಿದ್ದು ಬಹಳ ಬೇಗ ಆಯ್ತು. ಎಲ್ಲರನ್ನೂ ಒಟ್ಟುಗೂಡಿಸಲು ಕಷ್ಟ ಆಗಬಹುದು ಎಂದು ಕನ್ನಡ ಸಂಘಟನೆಗಳ ಮುಖಂಡರು ಹೇಳುತ್ತಿದ್ದಾರೆ. ಇದನ್ನೂ ಓದಿ: ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರಿಗೆ ಬೆಂಕಿ ಹಚ್ಚಿದ ಶ್ರೀರಾಮ ಸೇನೆ
ಮೈಸೂರು: ದೇಶ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಕೃಷಿ ವಿಚಾರದ ಬಗ್ಗೆ ರೈತರು, ಸರ್ಕಾರ ಹಾಗೂ ಮಾಧ್ಯಮಗಳು ನಡೆಸುವ ಸೌಹಾರ್ದ ಮಾತುಕತೆ ನಿಂತು ಹೋಗಿದೆ ಎಂದು ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಮಟ್ಟದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಸೌಹಾರ್ದ ಮಾತುಕತೆ ನಿಂತು ರೈತ ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಸಮಗ್ರ ರೈತ ಚಳವಳಿ ಕಲ್ಪನೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು, ರೈತ ಈ ದೇಶದಲ್ಲಿ ಮತ ಅಲ್ಲ. ಸಮರ್ಥ ರೈತ ಹೋರಾಟ ಮತ್ತೆ ಶುರುವಾಗಬೇಕು. ರೈತ ಸಂಘಟನೆ ಹೇಳುತ್ತವೆ ಎಂದರೆ ಸರ್ಕಾರ ಆ ಮಾತು ಕೇಳಬೇಕು. ಹಿಂದಿನ ಚಳವಳಿಯ ಶಕ್ತಿ ರೈತ ಹೋರಾಟಕ್ಕೆ ಬರಬೇಕಿದೆ ಎಂದು ಹೇಳಿದರು.
ಸರ್ಕಾರ ನೂತನ ಕಾನೂನುಗಳನ್ನು ತರುವಾಗ ರೈತರನ್ನು ಕೂರಿಸಿಕೊಂಡು ಚರ್ಚೆ ನಡೆಸಬೇಕು. ಈ ರೀತಿಯ ಸೌಜನ್ಯವನ್ನು ಸರ್ಕಾರ ಇಂದು ಕಳೆದುಕೊಂಡಿದೆ. ಇದರಿಂದಾಗಿ ಕೆಲವೊಮ್ಮೆ ಸರ್ಕಾರ ರೈತರಿಗೆ ಒಳ್ಳೆಯದಾಗುವ ಕಾನೂನನ್ನು ತಂದರೂ ಅದನ್ನು ಒಪ್ಪಿಕೊಳ್ಳದಂತ ಪರಿಸ್ಥಿತಿ ರೈತರಲಿಲ್ಲದ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ಕಬ್ಬು ಬೆಳೆಯುವುದು ಸುಲಭ ಎನ್ನುತ್ತಾರೆ. ಆದರೆ ರೈತನಿಗೆ ಅದರ ಕಷ್ಟ ಗೊತ್ತಿದೆ. ಕಬ್ಬಿಗೆ ಸರ್ಕಾರಗಳು ನಿಗದಿ ಪಡಿಸುವ ಬೆಲೆ ಬೇರೆ ಆಗಿರುತ್ತದೆ. ಕಾರ್ಖಾನೆಗಳು ನಿಗದಿಗೊಳಿಸುವ ಬೆಲೆಯೇ ಬೇರೆಯಾಗಿದೆ. ಇದರಿಂದಾಗಿ ರೈತ ತೊಂದರೆಗೀಡಾಗುತ್ತಾನೆ ಎಂದು ನುಡಿದರು.
ಇತ್ತೀಚಿನ ದಿನಗಳಲ್ಲಿ ಯಾರು ರೈತರು, ಯಾರು ರೈತರಲ್ಲ ಎನ್ನುವುದೇ ತಿಳಿಯದಂತ ಪರಿಸ್ಥಿತಿ ಇದೆ. ಕೃಷಿಕರಲ್ಲದವರೂ ಕೃಷಿಕರಂತೆಯೂ, ಕೃಷಿಕರು ಕೃಷಿಕರಲ್ಲದವರಂತೆ ನಟಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೃಷಿಯೇ ಆಧಾರವಾಗಿಸಿ ಸಂತೋಷದ ಜೀವನ ನಡೆಸಬಹುದು. ಆದರೆ ಏಕ ಧಾನ್ಯ ಪದ್ಧತಿಯಲ್ಲಿ ಸಿಲುಕಿಕೊಂಡಿರುವವರು, ಇದನ್ನೆ ನಾವು ಮಾಡಬೇಕು ಎಂದು ಹಠಕ್ಕೆ ಬಿದ್ದವರು ತೊಂದರೆಗೀಡಾಗುತ್ತಿದ್ದಾರೆ. ಕೃಷಿಕನಿಗೆ ಶ್ರಮದ ಜೊತೆಗೆ ಬುದ್ಧಿವಂತಿಕೆಯು ಇದ್ದರೆ ಸುಖಕರ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.
ಜಾಗತಿಕ ತಾಪಮಾನದ ಏರಿಳಿತಗಳು ನಮ್ಮನ್ನು ಎಲ್ಲಿಗೆ ತೆಗದುಕೊಂಡು ಹೋಗುತ್ತಿದೆ ಎನ್ನುವುದಕ್ಕೆ ಈ ವರ್ಷ ಮಾದರಿಯಾಗಿದೆ. ವಿಚಿತ್ರವಾದ ಹವಾಮಾನ ಏರು ಪೇರಾಗುತ್ತಿದೆ. ಇದು ಬೆಳೆಗಳ ಮೇಲೂ, ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಬೇಸರಿಸಿದರು.
ಸಮಸ್ಯೆ ನಿವಾರಣೆಯಾಗುತ್ತಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳು ರೈತನಿಗೆ ಸೇರಿದ್ದು. ಈ ಸತ್ಯ ರಾಜಕೀಯ ಪಕ್ಷಗಳಿಗೆ ಅರ್ಥವಾಗಬೇಕು. ಈ ಮನೋಭಾವ ಬಂದರೆ ರೈತರ ಕಲ್ಯಾಣ ಸಾಧ್ಯ. ಚಳವಳಿ, ರಾಜಕಾರಣದ ನಡುವೆ ಸಂಬಂಧ ಇರಬೇಕಿತ್ತು. ಆದರೆ ಈ ಸಂಬಂಧ ಇಲ್ಲದ ಕಾರಣ ರೈತರ ಕಲ್ಯಾಣ ಆಗುತ್ತಿಲ್ಲ. ಆಹಾರ ಉತ್ಪಾದನೆ ಹೆಚ್ಚಾದರೂ ರೈತನ ಸಮಸ್ಯೆ ನಿವಾರಣೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿರುವ ಬ್ಯಾಗ್ ತರುತ್ತೇನೆಂದು ಹೇಳಿ ಹೋದ ಯುವತಿ ನಾಪತ್ತೆ
ಮೈಷುಗರ್ ಬಗ್ಗೆ ಮಾತನಾಡಿ, ಮೈಷುಗರ್‌ನಲ್ಲಿ ಕಬ್ಬು ಅರೆಯುವ ವ್ಯವಸ್ಥೆ ಬೇಗ ಪುನಾರಂಭವಾಗುತ್ತದೆ. ಶ್ರೀರಾಮ ಸಕ್ಕರೆ ಕಾರ್ಖಾನೆ ಖಾಸಗಿ ಅವರು ತೆಗೆದು ಕೊಂಡಿದ್ದಾರೆ. ಇದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ನಿವಾರಿಸಿ ಬೇಗ ಕಾರ್ಖಾನೆ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.
ಗಂಭೀರವಾಗಿ ಪರಿಗಣಿಸಿ: ಕುರುಬೂರು ಶಾಂತಕುಮಾರ್ ಮಾತನಾಡಿ, ಆಹಾರ ಉತ್ಪಾದನೆ ಹೆಚ್ಚಾಗಿದ್ದರೂ ರೈತರ ಬಾಳು ಹಸನಾಗಿಲ್ಲ. ಸರಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು
ರೈತನದು ಅನಿಶ್ಚಿತತೆಯ ಬದುಕು. ರೈತನ ಬದುಕು ನಿಶ್ಚಿತತೆಗೆ ತರುವ ಕೆಲಸ ಆಗಬೇಕಿದೆ. ಕೃಷಿಯ ಉಪ ಚಟುವಟಿಕೆಗಳನ್ನು ರೂಪಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಬದ್ಧತೆಯಿಂದ ಚಿಂತನೆ ನಡೆಸಿದೆ. ರೈತನ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಖಾಸಗಿ ಮಾರುಕಟ್ಟೆ ಎಪಿಎಂಸಿ ಕಾಯ್ದೆಗಿಂತಾ ಮುಂಚೆಯೇ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಖಾಸಗಿ ಮಾರುಕಟ್ಟೆ ಆರಂಭಿಸಿ ಬಹಳ ವರ್ಷ ಆಗಿದೆ. ಖಾಸಗಿ ಮಾರುಕಟ್ಟೆ ಈಗ ಬಂದಿದಲ್ಲ ಎಂದರು. ಇದನ್ನೂ ಓದಿ: ಹಿಂದೂ ಹಿಂದೂಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ: ರಾಜಾಸಿಂಗ್ ಠಾಕೂರ್
ಈ ಕಾರ್ಯಕ್ರಮದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ಗೆ ರೈತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತ್ತೂರು ಶ್ರೀಗಳು, ಹಿರಿಯ ಪತ್ರಕರ್ತರಾದ ರವಿ ಹೆಗಡೆ ಭಾಗಿಯಾಗಿದ್ದರು.
ಬೆಂಗಳೂರು: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರೆ ನೀಡಲಾಗಿದ್ದ ಭಾರತ್ ಬಂದ್ ಬೆಂಬಲಿಸಲು ಬಂದಿದ್ದ 100ಕ್ಕೂ ಹೆಚ್ಚು ರೈತರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ.
ಮೌರ್ಯ ಸರ್ಕಲ್‍ನಲ್ಲಿ ಒಂದುಗೂಡಿ ವಿನೂತನ ರೀತಿಯ ಮೆರವಣಿಗೆ ನಡೆಸಲು ರೈತರು ಯತ್ನಿಸಿದ್ದಾರೆ. ಈ ವೇಳೆ ರೈತ ಮುಖಂಡರನ್ನು ಬಂಧಿಸಲು ಯತ್ನಿಸಿದಾಗ ಪೊಲೀಸರು ಹಾಗೂ ರೈತರ ನಡುವೆ ಭಾರಿ ವಾಗ್ವಾದ ನಡೆಯಿತು. ಏಕೆ ಬಂಧನ ಮಾಡುತ್ತೀರಿ, ನಾವು ಮೆರವಣಿಗೆಯನ್ನೇ ಆರಂಭಿಸಿಲ್ಲ, ನಮ್ಮ ರೈತರು ಬರುತ್ತಿದ್ದಾರೆ. ಅಲ್ಲಿ ತನಕ ಊರಿನಿಂದ ತಂದಿರುವ ತಿಂಡಿಯನ್ನು ತಿಂದು ಮುಂದೆ ಸಾಗುತ್ತೇವೆ ಎಂದು ರೈತರು ಪೊಲೀಸರ ಬಳಿ ಹೇಳಿದ್ದಾರೆ. ಇದನ್ನೂ ಓದಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎದುರಲ್ಲೇ ಶಾಸಕಿ ರೂಪಾಲಿ ನಾಯ್ಕ್ ಗರಂ
ಇದಕ್ಕೆ ಅವಕಾಶ ನೀಡದ ಪೊಲೀಸರು, ಯಾವುದೇ ಪ್ರತಿ ಉತ್ತರ ನೀಡದೆ ರೈತರನ್ನು ಬಂಧಿಸಿದರು. ಪೊಲೀಸರ ಈ ನಡೆಯನ್ನು ಖಂಡಿಸಿದ ಕುರುಬೂರು ಶಾಂತಕುಮಾರ್, ಕಾನೂನುಬಾಹಿರ ಕ್ರಮಗಳನ್ನ ಕೈಗೊಳ್ಳುತ್ತಿರುವುದು ಪೊಲೀಸರ ಸರ್ವಾಧಿಕಾರಿ ಧೋರಣೆಯಾಗಿದೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ. ಕೇಂದ್ರದ ಕೆಲವು ಮಂತ್ರಿಗಳು ರೈತ ಚಳುವಳಿಯ ಬಗ್ಗೆ ಹಗುರವಾಗಿ ಕೋಲೆ ಬಸವನ ರೀತಿ ಮಾತನಾಡುತ್ತಿದ್ದಾರೆ. ಇವರಿಗೆ ಕೃಷಿ ಕಾಯ್ದೆಗಳ ದುಷ್ಪರಿಣಾಮಗಳ ಬಗ್ಗೆ ಅರಿವೇ ಇಲ್ಲ ಬೇಕಿದ್ದರೆ ರೈತ ಮುಖಂಡರ ಸಭೆ ಕರೆದು ಚರ್ಚಿಸಲಿ ಎಂದು ಬಹಿರಂಗ ಸವಾಲು ಹಾಕಿದರು. ಇದನ್ನೂ ಓದಿ: ತಪ್ಪು ಕಲ್ಪನೆಗಳಿಂದ ಭಾರತ್ ಬಂದ್ ಕರೆ ನೀಡಲಾಗಿದೆ: ಲಕ್ಷ್ಮಣ್ ಸವದಿ
ರೈತರು ಉತ್ಪನ್ನಗಳನ್ನ ಎಲ್ಲಿ ಬೇಕಾದರೂ ಯಾರಿಗಾದರೂ ಮಾರಾಟ ಮಾಡಬಹುದು ಎನ್ನುತ್ತಾರೆ. ನಾವು ವಿಧಾನಸೌಧಕ್ಕೆ ಹಣ್ಣು ತರಕಾರಿಗಳನ್ನ ಮಾರಲು ಹೋಗುತ್ತಿದ್ದರೆ ಪೊಲೀಸರೇ ತಡೆಯುತ್ತಿದ್ದಾರೆ. ಇಂತಹ ನಡೆ ರೈತರ ಕಣ್ಣಿಗೆ ಮಣ್ಣೆರಚುವ ಕೇಂದ್ರ ಸರ್ಕಾರದ ಕುತಂತ್ರವಲ್ಲವೇ ಎಂದು ಕಿಡಿಕಾರಿದರು. ವಿಧಾನಸೌಧ ಬಳಿ ಎತ್ತಿನಗಾಡಿ ಕುದುರೆಗಾಡಿ ಪ್ರತಿಭಟನೆ ನಡೆಸುವಾಗ ಯಾವುದನ್ನೂ ಕೇಳದ ಪೊಲೀಸರು, ನಮ್ಮನ್ನ ಮಾತ್ರ ಅನುಮತಿ ಪಡೆಯಲಾಗಿದೆಯೇ ಎಂದು ಕೇಳುತ್ತಾರೆ. ಇದು ಪೊಲೀಸರ ಕಾರ್ಯವೈಖರಿ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ನವೆಂಬರ್ 26ಕ್ಕೆ ಹೋರಾಟಕ್ಕೆ ಒಂದು ವರ್ಷ ತುಂಬುತ್ತದೆ. ಆಗ ದೇಶದ ಎಲ್ಲಾ ರಾಜ್ಯಗಳಿಂದ 5 ಕೋಟಿಗೂ ಹೆಚ್ಚು ರೈತರು ದೆಹಲಿ ಪ್ರವೇಶ ಮಾಡುತ್ತಾರೆ. ಸರ್ಕಾರದ ಯಾವುದೇ ಕುತಂತ್ರದ ಕಾರ್ಯತಂತ್ರಗಳಿಗೂ ನಾವು ಬಗ್ಗುವುದಿಲ್ಲ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣ ರೆಡ್ಡಿ ಮಾತನಾಡಿ, ರೈತರು ಕರೆ ನೀಡಿರುವ ಭಾರತ್ ಬಂದ್ ವಿಫಲಗೊಳಿಸಲು ಸರ್ಕಾರ ಪೊಲೀಸ್ ಬಲದ ಮೂಲಕ ಯತ್ನಿಸುತ್ತಿದೆ. ಪೊಲೀಸರು ಕಾನೂನು ಪಾಲಕರಾಗದೇ ಮಂತ್ರಿಗಳ ಗುಲಾಮರ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.
ನೂರಕ್ಕೂ ಹೆಚ್ಚು ರೈತರನ್ನು ಪೊಲೀಸರು ಆಡುಗೋಡಿ ಪೊಲೀಸ್ ಮೈದಾನಕ್ಕೆ ಕರೆದೊಯ್ದಾಗ ಅಲ್ಲಿ ರೈತರು 1 ಗಂಟೆ ಕಾಲ ಬಸ್ಸಿನಿಂದ ಕೆಳಗೆ ಇಳಿಯದೆ ಪೊಲೀಸರ ಕಾನೂನುಬಾಹಿರ ವರ್ತನೆಯನ್ನ ಖಂಡಿಸಿದ್ದಾರೆ. 3 ಗಂಟೆ ನಂತರ ಬಂಧಿತ ರೈತರು, ರೈತ ಮಹಿಳೆಯರು, ಬೀದಿ ಬದಿ ವ್ಯಾಪಾರಿಗಳನ್ನು ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಅಂದಪ್ಪ ಕೊಳೂರ, ಬೆಂಗಳೂರು ನಗರಾಧ್ಯಕ್ಷೆ ಶಿವಮ್ಮ, ಚನ್ನರಾಯಪಟ್ಟಣದ ಪ್ರೇಮ, ಮೈಸೂರು ಜಿಲ್ಲೆಯ ನಾಗರಾಜ್, ಪ್ರಜಾ ಪರಿವರ್ತನಾ ವೇದಿಕೆಯ ಗೋವಿಂದರಾಜು ಹೆಸರಘಟ್ಟ, ಶಿವರುದ್ರಪ್ಪ ಇನ್ನು ಮುಂತಾದವರಿದ್ದರು.
ಬೀದರ್: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದು, ಹೋರಾಟ ಫಲಪ್ರದವಾಗದ ಕಾರಣ ಸೆಪ್ಟೆಂಬರ್ 27 ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ಭಾರತ್ ಬಂದ್‍ಗೆ ಕೆರೆ ನೀಡಲಾಗಿದೆ. ಈ ಬಂದ್ ಕರ್ನಾಟಕದಲ್ಲೂ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರಾಜ್ಯ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇಂದು ಬೀದರ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಹೋರಾಟದಲ್ಲಿ 12ನೇ ಸುತ್ತಿನ ಮಾತುಕತೆಯಾದರು ಕೂಡಾ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ. ಈಗಾಗಲೇ ಹೋರಾಟದಲ್ಲಿ 600ಕ್ಕೂ ಹೆಚ್ಚು ರೈತರ ಪ್ರಾಣ ಬಲಿದಾನವಾಗಿವೆ. ಇಷ್ಟಾದ್ರು ಕೂಡಾ ಇಲ್ಲಿಯ ತನಕ ಪ್ರಧಾನಿ ಮೋದಿ ಸಮಸ್ಯೆ ಪರಿಹರಿಸುವಂತ ಕೆಲಸ ಮಾಡಿಲ್ಲ. ರೈತರ ಬೆನ್ನೆಲುಬನ್ನು ಮುರಿಯುವ ನೀಚ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ ಎಂದು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜನ ಅಸಮಾನ್ಯ, ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಉಪೇಂದ್ರ
ಸೆಪ್ಟೆಂಬರ್ 27 ರಂದು ಭಾರತ ಬಂದ್‍ಗೆ ಕರೆ ನೀಡಿದ್ದು, ಕರ್ನಾಟಕದಲ್ಲೂ ಕೂಡಾ ಸಂಪೂರ್ಣ ಬಂದ್ ಮಾಡಬೇಕು ಎಂದು ಸಭೆ ಮಾಡಿ ನಿರ್ಮಾಣ ಮಾಡಿದ್ದೇವೆ. ರೈತರು ಹಾಗೂ ಜನರನ್ನು ಮೋಸ ಮಾಡಿ ಆಡಳಿತ ಮಾಡುತ್ತೇವೆ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಮೋದಿಯವರೆ. ಈ ದೇಶದ ಜನರು ಎಚ್ಚರಗೊಂಡಿದ್ದಾರೆ. ಮುಂದಿನ ಉತ್ತರ ಪ್ರದೇಶದ ಚುನಾವಣೆಯಲ್ಲಿ ರೈತರ ಶಕ್ತಿಯನ್ನು ತೋರಿಸಬೇಕಾಗುತ್ತದೆ ಎಂದು ಕುರುಬೂರು ಶಾಂತಕುಮಾರ್ ಗುಡುಗಿದ್ದಾರೆ. ಇದನ್ನೂ ಓದಿ: ಬಾಳೆಎಲೆಯಲ್ಲಿ ಮೂಡಿದ ಮೋದಿ ಚಿತ್ರ