Tag: ಕುರುಣಾನಿಧಿ

  • ಕರುಣಾನಿಧಿ ನಿವಾಸವನ್ನು ಬಡವರ ಆಸ್ಪತ್ರೆ ಮಾಡಲು ಮುಂದಾದ ಟ್ರಸ್ಟ್

    ಕರುಣಾನಿಧಿ ನಿವಾಸವನ್ನು ಬಡವರ ಆಸ್ಪತ್ರೆ ಮಾಡಲು ಮುಂದಾದ ಟ್ರಸ್ಟ್

    ಚೆನ್ನೈ: ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಕರುಣಾನಿಧಿಯವರ ಗೋಪಾಲಪುರಂನಲ್ಲಿರುವ ನಿವಾಸವನ್ನು ಬಡವರ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

    ಗೋಪಾಲಪುರಂನಲ್ಲಿರುವ ಅಂಜುಗಂ ಇಲ್ಲಂ ನಲ್ಲಿ ಕರುಣಾನಿಧಿಯವರು ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ವಾಸವಾಗಿದ್ದರು. ಹೀಗಾಗಿ ಪ್ರತೀ ದಿನ ಇಲ್ಲಿ ಪಕ್ಷದ ಕಾರ್ಯಕರ್ತರು, ಜನಸಾಮಾನ್ಯರ ಭೇಟಿ ಮಾಡುತ್ತಿದ್ದರು. 2010ರಲ್ಲಿ ತಮ್ಮ 86ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಈ ಮನೆಯನ್ನು ಅಣ್ಣಾ ಅಂಜುಗಂ ಟ್ರಸ್ಟ್ ಗೆ ದೇಣಿಗೆಯಾಗಿದ್ದ ನೀಡಿದ್ದ ಅವರು, ಬಡವರಿಗಾಗಿ ಆಸ್ಪತ್ರೆ ನಡೆಸುವಂತೆ ತಿಳಿಸಿದ್ದರು ಎನ್ನಲಾಗಿದೆ.

    ಈ ಹಿನ್ನೆಲೆಯಲ್ಲಿ ಇದೀಗ ಅವರ ನಿಧನದ ನಂತರ ಟ್ರಸ್ಟ್, ಕಲೈನಾರ್ ಕರುಣಾನಿಧಿ ಆಸ್ಪತ್ರೆ ಎಂಬ ಹೆಸರಿನಡಿ ಆಸ್ಪತ್ರೆಯೊಂದನ್ನು ಆರಂಭಿಸಲು ಮುಂದಾಗಿದೆ. ನಾನು ವಿಚಾರವಾದಿ ಎಂಬ ತೃಪ್ತಿ ನನಗಿದೆ. ಒಂದು ವೇಳೆ ನಾನು ಆಧ್ಯಾತ್ಮದಲ್ಲಿ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದರೆ ನನ್ನ ಆತ್ಮಕ್ಕೂ ತೃಪ್ತಿಯಾಗುತ್ತಿತ್ತು ಎಂದು ತಮ್ಮ ಮನೆಯನ್ನು ಕೊಡುಗೆಯಾಗಿ ನೀಡುವ ಸಮಾರಂಭದಲ್ಲಿ ಅವರು ತಿಳಿಸಿದ್ದರು.

    ತಮಿಳು ಚಿತ್ರರಂಗದ ಕಥೆಗಾರ, ಸಂಭಾಷಣಾಕಾರರಾಗಿ ಮುಂಚೂಣಿಯಲ್ಲಿದ್ದ ಕರುಣಾನಿಧಿ ಈ ಮನೆಯನ್ನು ಶರಭೇಶ್ವರ ಅಯ್ಯರ್ ಎಂಬವರಿಂದ 1955ರಲ್ಲಿ ಮನೆ ಖರೀದಿ ಮಾಡಿದ್ದರು.

    ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಂಜೆ ವಿಧಿವಶರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾಜಾಜಿಹಾಲ್‍ನಲ್ಲಿ ಕರುಣಾನಿಧಿ ಪಾರ್ಥಿವ ಶರೀರ-ಸಾವಿರಾರು ಜನರಿಂದ ಅಂತಿಮ ದರ್ಶನ

    ರಾಜಾಜಿಹಾಲ್‍ನಲ್ಲಿ ಕರುಣಾನಿಧಿ ಪಾರ್ಥಿವ ಶರೀರ-ಸಾವಿರಾರು ಜನರಿಂದ ಅಂತಿಮ ದರ್ಶನ

    ಚೆನ್ನೈ: ತಮಿಳುನಾಡಿನ ಅಪೂರ್ವ ನಿಧಿ ಕಲೈನಾರ್ ಮರೆಯಾಗಿದ್ದಾರೆ. ನಿಧಿ ಇಲ್ಲದ ದ್ರಾವಿಡ ನಾಡು ಬಡವಾಗಿದ್ದು, ರಾಜ್ಯದಲ್ಲಿ ಕಣ್ಣೀರ ಕೋಡಿ ಹರಿದಿದೆ. ಪತ್ನಿಯರಿಬ್ಬರು, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿರುವ ಮುತ್ತುವೇಲು ನಿಧನಕ್ಕೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.

    ಮಂಗಳವಾರ ಸಂಜೆ 6 ಗಂಟೆ 10 ನಿಮಿಷಕ್ಕೆ ಕಾವೇರಿ ಆಸ್ಪತ್ರೆ ವೈದ್ಯರು ಕರುಣಾನಿಧಿ ಅವರ ಸಾವಿನ ಸುದ್ದಿಯನ್ನ ಪ್ರಕಟಿಸಿದ್ದರು. ನಂತ್ರ ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ರಾತ್ರಿ 9.30ರ ಸುಮಾರಿಗೆ ಕಾವೇರಿ ಆಸ್ಪತ್ರೆಯಿಂದ ಗೋಪಾಲಪುರಂ ನಿವಾಸಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕಿಡಲಾಗಿತ್ತು. ಈ ವೇಳೆ ನಟ ರಜಿನಿಕಾಂತ್, ಪಶ್ಚಿಮಗಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ಕರುಣಾನಿಧಿ ಯಾವಾಗಲೂ ಕಪ್ಪು ಕನ್ನಡಕವನ್ನೇ ಧರಿಸುತ್ತಿದ್ದರು ಯಾಕೆ?

    ಮಧ್ಯರಾತ್ರಿ 1.30 ರ ಸುಮಾರಿಗೆ ಸಿಐಟಿ ಕಾಲೋನಿಯಲ್ಲಿರುವ ಪುತ್ರಿ ಕನಿಮೋಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯ್ತು. ನಸುಕಿನ ಜಾವ 5.30ರ ನಂತರ ರಾಜಾಜಿ ಹಾಲ್‍ನಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗಿದ್ದು, ಸಾಗರೋಪಾದಿಯಲ್ಲಿ ಜನ ಹರಿದು ಬರ್ತಿದ್ದಾರೆ.   ಇದನ್ನೂ ಓದಿ: ಸಾಹಿತಿ, ಹೋರಾಟಗಾರ, ಪತ್ರಕರ್ತ, ರಾಜಕೀಯ ನಾಯಕ: ಇಲ್ಲಿದೆ ಕರುಣಾನಿಧಿ ಹೆಜ್ಜೆಗುರುತು

     ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾವೇರಿ ಆಸ್ಪತ್ರೆ ವೈದ್ಯರು ಸೋಮವಾರವೇ 24 ಗಂಟೆಗಳ ಕಾಲ ಯಾವ ಭರವಸೆಗಳನ್ನು ನೀಡೋದಕ್ಕೆ ಸಾಧ್ಯವಿಲ್ಲ. ಕ್ಷಣ ಕ್ಷಣಕ್ಕೂ ಕರುಣಾನಿಧಿ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಸ್ಪಷ್ಟಪಡಿಸಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ವಿಧಿವಶರಾದ್ರು. ಇದನ್ನೂ ಓದಿ: ಡಿಎಂಕೆ Vs ಎಐಎಡಿಎಂಕೆ: ಕರುಣಾ ಮೇಲೆ ಜಯಾ ಮುನಿಸಾಗಿದ್ದು ಯಾಕೆ? ಏನದು ಆ ಒಂದು ತಪ್ಪು?

    ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಇದನ್ನೂ ಓದಿ: ಬದುಕಿರುವಾಗಲೇ ದಂತಕಥೆಯಂತಿದ್ದ ಕರುಣಾನಿಧಿ ಜೊತೆಗಿನ ಒಡನಾಟವನ್ನು ಹಂಚಿಕೊಂಡ ಎಚ್‍ಡಿಕೆ