Tag: ಕುರುಡ

  • ಅಂಧ ಮಗನಿಗೆ ಲೈವ್ ಫುಟ್‍ಬಾಲ್ ಪಂದ್ಯವನ್ನು ನಿರೂಪಣೆ ಮಾಡಿದ ತಂದೆ

    ಅಂಧ ಮಗನಿಗೆ ಲೈವ್ ಫುಟ್‍ಬಾಲ್ ಪಂದ್ಯವನ್ನು ನಿರೂಪಣೆ ಮಾಡಿದ ತಂದೆ

    – ತಂದೆಯ ಪ್ರೇಮಕ್ಕೆ ನೆಟ್ಟಿಗರು ಫಿದಾ

    ಕೊಲಂಬಿಯಾ: ತನ್ನ ಕಣ್ಣು ಕಾಣದ ಮಗನಿಗೆ ತಂದೆಯೋರ್ವ ಲೈವ್ ಫುಟ್‍ಬಾಲ್ ಪಂದ್ಯವನ್ನು ನಿರೂಪಣೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕೊಲಂಬಿಯಾದ ಬ್ಯಾರನ್ಕ್ವಿಲ್ಲಾದ ಎಸ್ಟಾಡಿಯೊ ಮೆಟ್ರೊಪಾಲಿಟಾನೊ ರಾಬರ್ಟೊ ಮೆಲೆಂಡೆಜ್‍ನಲ್ಲಿ ಆಡಿದ ಫುಟ್‍ಬಾಲ್ ಪಂದ್ಯದ ಸಂದರ್ಭದಲ್ಲಿ ಈ ವಿಡಿಯೋವನ್ನು ಸ್ಥಳೀಯರೊಬ್ಬರು ಶೂಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಂದೆಯ ಪ್ರೀತಿಯನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    https://www.instagram.com/p/B8q8uwgJDXX/

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಜೂನಿಯರ್ ಡೆ ಬ್ಯಾರನ್ಕ್ವಿಲ್ಲಾ ಎಫ್‍ಸಿ ಫುಟ್‍ಬಾಲ್ ತಂಡದ ಫ್ಯಾನ್ ಪೇಜ್‍ವೊಂದು ಶೇರ್ ಮಾಡಿದ್ದು, ಈ ವಿಡಿಯೋದಲ್ಲಿ ಬ್ಯಾರನ್ಕ್ವಿಲ್ಲಾ ತಂಡದ ಜೆರ್ಸಿ ತೊಟ್ಟು ಬಂದಿರುವ ಅಪ್ಪ ಮತ್ತು ಮಗ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಣ್ಣು ಕಾಣದ ಮಗನಿಗೆ ತಂದೆ ಪಕ್ಕದಲ್ಲಿ ಕುಳಿತುಕೊಂಡು, ಪಂದ್ಯದ ಸಂಪೂರ್ಣ ವಿವರಣೆಯನ್ನು ನೀಡುತ್ತಿರುವುದನ್ನು ನಾವು ಕಾಣಬಹುದು.

    ಈ ವಿಡಿಯೋವನ್ನು ಶೇರ್ ಮಾಡಿರುವ ಬ್ಯಾರನ್ಕ್ವಿಲ್ಲಾ ಫ್ಯಾನ್ ಪೇಜ್, ನಿನ್ನೆ ಮೆಟ್ರೋಪಾಲಿಟನ್ ಸ್ಟೇಡಿಯಂನಲ್ಲಿ ನಾನು ಒಂದು ಸುಂದರ ದೃಶ್ಯವನ್ನು ನೋಡಿದೆ. ಅದನ್ನು ನಾನು ನಿಮ್ಮ ಜೊತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಈ ವಿಡಿಯೋದಲ್ಲಿ ಆ ತಂದೆಗೆ ಮಗನ ಮೇಲೆ ಇರುವ ಪ್ರೀತಿ ನೋಡಿದರೆ ತುಂಬ ಖುಷಿಯಾಗುತ್ತದೆ. ಅವರು ಮಗನ ಮೇಲೆ ಇಟ್ಟಿರುವ ಪ್ರೀತಿಯನ್ನು ನಮ್ಮ ತಂಡದ ಮೇಲೂ ಇಟ್ಟಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.

    ತಂದೆಯ ಈ ಪ್ರೀತಿಗೆ ಮೆಚ್ಚಿ ಕಮೆಂಟ್ ಮಾಡಿರುವ ಕೆಲ ನೆಟ್ಟಿಗರು, ಈ ರೀತಿಯ ವಿಡಿಯೋವನ್ನು ಶೇರ್ ಮಾಡಿದ್ದಕ್ಕೆ ಧನ್ಯವಾದಗಳು. ಈ ವಿಡಿಯೋವನ್ನು ನೋಡಿ ನನ್ನ ಮನಸ್ಸು ಕರಗಿ ಹೋಯ್ತು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ತಂದೆಗೆ ಮಗನ ಮೇಲೆ ಇರುವ ಫ್ಯಾಶನ್ ನೋಡಿದರೆ ಬಹಳ ಖುಷಿಯಾಗುತ್ತದೆ. ಅದಕ್ಕೆ ಫುಟ್‍ಬಾಲ್ ಅನ್ನು ಒಂದು ಸುಂದರ ಆಟ ಎಂದು ಕರೆಯುವುದು ಎಂದು ಕಮೆಂಟ್ ಮಾಡಿದ್ದಾರೆ.

  • ಹಾಲು ಮಾರಿ ಬದುಕುತ್ತಿದ್ದ ಕಣ್ಣು ಕಾಣದ ದಿವ್ಯಾಂಗನ ಹಸುಗಳನ್ನು ಕದ್ದ ಕಳ್ಳರು

    ಹಾಲು ಮಾರಿ ಬದುಕುತ್ತಿದ್ದ ಕಣ್ಣು ಕಾಣದ ದಿವ್ಯಾಂಗನ ಹಸುಗಳನ್ನು ಕದ್ದ ಕಳ್ಳರು

    ದಾವಣಗೆರೆ: ಹಾಲು ಮಾರಿ ಬದುಕುತ್ತಿದ್ದ ಕಣ್ಣು ಕಾಣದ ದಿವ್ಯಾಂಗ ವ್ಯಕ್ತಿಯ ಹಸುಗಳನ್ನು ಯಾರೋ ಕಿಡಿಗೇಡಿಗಳು ಕಳುವು ಮಾಡಿದ್ದು, ಈಗ ಆತನ ಇಡೀ ಜೀವನವನ್ನೇ ಕತ್ತಲು ಅವರಿಸಿದಂತಾಗಿದೆ.

    ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಠಗಿದುರ್ಗದ ಮಗನೂರು ಚೆನ್ನಪ್ಪ ಅವರಿಗೆ ಸೇರಿದ 90 ಸಾವಿರ ಮೌಲ್ಯದ ಎರಡು ಹಸುಗಳು ಕಳುವಾಗಿದ್ದು, ಅವುಗಳನ್ನೆ ನಂಬಿ ಪ್ರತಿನಿತ್ಯ ಹಾಲು ಕರೆದು ಮಾರಿ ಬಂದ ಹಣದಿಂದ ಜೀವನ ನಡೆಸುತ್ತಿದ್ದರು. ಆದರೆ ಹಸುಗಳನ್ನು ಕಳ್ಳರು ಕಳುವು ಮಾಡಿದ್ದು ಅವರ ಜೀವನ ನಡೆಸುವುದಕ್ಕೂ ಕೂಡ ಕಷ್ಟವಾಗಿದೆ.

    ಇಂದು ಬೆಳಗಿನ ಜಾವ ಕಳ್ಳರು ಚೆನ್ನಪ್ಪ ಅವರ ಎರಡು ಹಸುಗಳನ್ನು ಕಳುವು ಮಾಡಿದ್ದಾರೆ. ತನ್ನ ಜೀವನ ನಡೆಸಲು ಸಹಾಯವಾಗಿದ್ದ ಎರಡು ಹಸುಗಳನ್ನು ಕಳೆದುಕೊಂಡು ಚೆನ್ನಪ್ಪ ರೋಧನೆ ಅನುಭವಿಸುತ್ತಿದ್ದಾರೆ. ಈ ಸಂಬಂಧ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.