Tag: ಕುರಿ ಬಲಿ

  • ಅಹಿತಕರ ಘಟನೆ ನಡೆಯದಿರಲೆಂದು ವೈಟಿಪಿಎಸ್ ಅಧಿಕಾರಿಗಳಿಂದ ಕುರಿ ಬಲಿ!

    ಅಹಿತಕರ ಘಟನೆ ನಡೆಯದಿರಲೆಂದು ವೈಟಿಪಿಎಸ್ ಅಧಿಕಾರಿಗಳಿಂದ ಕುರಿ ಬಲಿ!

    (ಸಾಂದರ್ಭಿಕ ಚಿತ್ರ)

    ರಾಯಚೂರು: ವಿದ್ಯುತ್ ಕೇಂದ್ರದಲ್ಲಿ ಅಹಿತಕರ ಘಟನೆ ನಡೆಯಬಾರದು ಎಂದು ಯರಮರಸ್ ಸೂಪರ್‍ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ(ವೈಟಿಪಿಎಸ್) ಅಧಿಕಾರಿಗಳು ಕುರಿ ಬಲಿಕೊಟ್ಟ ಮೂಢನಂಬಿಕೆ ಮೆರೆದಿದ್ದಾರೆ.

    ಜಿಲ್ಲೆಯ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮಹಾದ್ವಾರ ಎದುರಿಗಿರುವ ತಾಯಮ್ಮ ದೇವಿಗೆ 5 ಕುರಿಗಳನ್ನು ಬಲಿ ಕೊಡಲಾಗಿದೆ. ವಿದ್ಯುತ್ ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಅಧಿಕಾರಿಗಳು ಬೇಡಿಕೊಂಡು ಹರಕೆ ತೀರಿಸಿದ್ದಾರೆ ಎನ್ನಲಾಗಿದೆ.

    ದೇವಸ್ಥಾನದಲ್ಲಿ ಮಧ್ಯಾಹ್ನ ಭಕ್ತರಿಗೆ, ವೈಟಿಪಿಎಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ಕುಟುಂಬದವರಿಗೆ ಬಾಡೂಟ ಮಾಡಿಸಲಾಗಿತ್ತು.

     

  • ಅಪಘಾತಗಳು ನಡೆಯದಂತೆ ರಸ್ತೆಗೆ ಕುರಿ ಬಲಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು!

    ಅಪಘಾತಗಳು ನಡೆಯದಂತೆ ರಸ್ತೆಗೆ ಕುರಿ ಬಲಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು!

    ರಾಮನಗರ: ಜಿಲ್ಲೆಯ ರಸ್ತೆಗಳಲ್ಲಿ ನಡೆಯೋ ಅಪಘಾತಗಳನ್ನು ತಡೆಯುವಂತೆ ಹಾಗೂ ಅಪಘಾತಗಳು ನಡೆಯದಿರಲಿ ಎಂದು ರಸ್ತೆಗೆ ಕುರಿ ಬಲಿ ನೀಡಿರುವ ಘಟನೆಯೊಂದು ನಡೆದಿದೆ.

    ಜಿಲ್ಲೆಯ ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ಹೌದು. ತಿಟ್ಟಮಾರನಹಳ್ಳಿ ಗ್ರಾಮದ ರಾಮಮ್ಮನ ಕೆರೆಯ ಏರಿ ರಸ್ತೆ ಬಹಳ ಕಡಿದಾಗಿದೆ. ಅಲ್ಲದೇ ತಿರುವುಗಳಿಂದ ಕೂಡಿದೆ. ಒಮ್ಮೆಲೆ ಬಸ್, ಕಾರು ಬಂದ್ರೆ ಇಲ್ಲವೇ ಸ್ಕೂಟರ್ ಬಂದ್ರೆ ಸ್ವಲ್ಪ ಯಾಮಾರಿದ್ರು ವಾಹನ ಸವಾರರು ಕೈಲಾಸ ಸೇರುವಂತಹ ಪರಿಸ್ಥಿತಿ. ಇದರಿಂದ ಗ್ರಾಮಸ್ಥರು ಶುಕ್ರವಾರ ರಸ್ತೆತಡೆ ನಡೆಸಿ ಕೆರೆಯ ಏರಿಯ ಮೇಲಿನ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸುವಂತೆ ಪ್ರತಿಭಟನೆ ಮಾಡಿದ್ರು.

    ಅಲ್ಲದೇ ಪದೇ ಪದೇ ಅಪಘಾತಗಳು ನಡೆದು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗೆ ಕುರಿಯನ್ನ ಬಲಿ ನೀಡಿದ್ದಾರೆ. ವಾಹನ ಚಾಲಕರು ಸ್ವಲ್ಪ ಯಾಮಾರಿದ್ರು ಕೆರೆಗೆ ಬೀಳುವುದು ಗ್ಯಾರಂಟಿ. ಇನ್ನೊಂದೆಡೆ ಗದ್ದೆ ರಸ್ತೆಯಿಂದ ಸುಮಾರು ಇಳಿಜಾರಿನಂತಿದೆ. ಆದ್ರೆ ಎರಡು ಭಾಗದಲ್ಲೂ ಸಹ ತಡೆಗೋಡೆಗಳಲ್ಲಿ ಇದ್ರಿಂದ ಸಾರ್ವಜನಿಕರು ಕುರಿಬಲಿ ನೀಡಿ ಅಪಘಾತಗಳು ನಡೆಯದಂತೆ ಪ್ರಾರ್ಥನೆ ಸಲ್ಲಿಸಿದ್ರು.

    ರಾಮಮ್ಮನ ಕೆರೆ ತುಂಬಿ ಕೋಡಿ ಹೊಡೆದ ಪರಿಣಾಮ ಗ್ರಾಮಸ್ಥರೆಲ್ಲ ಸೇರಿ ಮೆರವಣಿಗೆ ಮೂಲಕ ಕೆರೆಗೆ ಆಗಮಿಸಿ ಪೂಜೆ ಪುನಸ್ಕಾರ ಸಲ್ಲಿಸಿದ್ದಾರೆ. ಜೊತೆಗೆ ಬಾಗಿನ ಅರ್ಪಿಸಿ ಮಳೆಯಿಂದ ಕೆರೆ ತುಂಬಿದ್ದಕ್ಕೆ ಸಂತೋಷಗೊಂಡಿದ್ದಾರೆ.