Tag: ಕುರಿಗಳು

  • ಕ್ರಿಮಿನಾಶಕ ಸಿಂಪಡಿಸಿದ್ದ ಆಹಾರ ಸೇವನೆ ಶಂಕೆ – 60ಕ್ಕೂ ಹೆಚ್ಚು ಕುರಿಗಳು ಸಾವು

    ಕ್ರಿಮಿನಾಶಕ ಸಿಂಪಡಿಸಿದ್ದ ಆಹಾರ ಸೇವನೆ ಶಂಕೆ – 60ಕ್ಕೂ ಹೆಚ್ಚು ಕುರಿಗಳು ಸಾವು

    ಗದಗ: ಕ್ರಿಮಿನಾಶಕ ಔಷಧ ಸಿಂಪಡಿಸಿದ ಆಹಾರ ಸೇವಿಸಿ ಸುಮಾರು 60ಕ್ಕೂ ಹೆಚ್ಚು ಕುರಿಗಳು (Sheeps) ಸಾವನ್ನಪ್ಪಿದ ಘಟನೆ ಶಿರಹಟ್ಟಿ (Shirahatti) ತಾಲೂಕಿನ ಹೊಳೆಇಟಗಿ ಗ್ರಾಮದಲ್ಲಿ ನಡೆದಿದೆ.

    ಚಿಕ್ಕೋಡಿ ತಾಲೂಕಿನ ಶಿರಗಾಂವ್ ಗ್ರಾಮದ ಸಂಚಾರಿ ಕುರಿಗಾಹಿಗಳ ಕುರಿಗಳು ಸಾವನ್ನಪ್ಪಿವೆ. ಸಾವನ್ನಪ್ಪಿದ ಕುರಿಗಳು ಪದ್ಮಣ್ಣ ಪೂಜಾರಿ, ಮಣಿ ಪೂಜಾರಿ ಹಾಗೂ ಯಲ್ಲವ್ವ ಪೂಜಾರಿ ಎಂಬವರಿಗೆ ಸೇರಿದ್ದವು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹಾಸನ | ಕೃಷಿ ಹೊಂಡಕ್ಕೆ ಬಿದ್ದ ಆಟಿಕೆ ರೈಲು ತರಲು ಇಳಿದ ಇಬ್ಬರು ಬಾಲಕರು ದುರ್ಮರಣ

    ಜಮೀನು ಅಥವಾ ಬದುವಿಗೆ ಕ್ರಿಮಿನಾಶಕ ಔಷಧ ಸಿಂಪಡಿಸಿರಬಹುದು. ಔಷಧ ಸಿಂಪಡಿಸಿದ ಹುಲ್ಲು ಸೇವಿಸಿ ಕುರಿಗಳು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳು ಕಂಗಾಲಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

    ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ, ಪಶುವೈದ್ಯರು ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ ಪಶು ವೈದ್ಯಕೀಯ ವಿಜ್ಞಾನ ಸಂಸ್ಥೆ ಮರಣೋತ್ತರ ಪರೀಕ್ಷೆ ನಂತರ ಸೂಕ್ತ ಪರಿಹಾರ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

  • Mandya | ರೈಲಿಗೆ ಸಿಲುಕಿ 17 ಕುರಿಗಳು ಸಾವು

    Mandya | ರೈಲಿಗೆ ಸಿಲುಕಿ 17 ಕುರಿಗಳು ಸಾವು

    ಮಂಡ್ಯ: ರೈಲಿಗೆ ಸಿಲುಕಿ 17 ಕುರಿಗಳು ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ತಾಲೂಕಿನ ಹೊಸಬೂದನೂರು ಗ್ರಾಮದ ಬಳಿ‌ಯ ರೈಲ್ವೆ ಟ್ರಾಕ್‌ನಲ್ಲಿ (Railway Track) ಜರುಗಿದೆ.

    ಇಂದು ಸಂಜೆ ನಾಯಿಗಳು ಅಟ್ಟಾಡಿಸಿದ ವೇಳೆ ಕುರಿಮಂದೆ ಚದುರಿದ ಪರಿಣಾಮ 17 ಕುರಿಗಳು (Sheep) ರೈಲ್ವೆ ಹಳಿ ದಾಟಲೆತ್ನಿಸಿವೆ. ಈ ವೇಳೆ ಬಂದ ರೈಲು 17 ಕುರಿಗಳ ಮೇಲೆ ಹರಿದಿದೆ. ಹೊಸಬೂದನೂರು ಗ್ರಾಮದ ಜಯಮ್ಮ ಅವರಿಗೆ ಸೇರಿದ ಕುರಿ ಮೃತಪಟ್ಟಿದ್ದು, ಸುಮಾರು 2 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ. ಇದನ್ನೂ ಓದಿ: ವಿಮಾನ – ಹೆಲಿಕಾಪ್ಟರ್ ದುರಂತ; ಎಲ್ಲಾ 64 ಮಂದಿ ದುರ್ಮರಣ, 28 ಮೃತದೇಹ ಪತ್ತೆ

    ಜಯಮ್ಮ ಅವರು ಬಯಲಿನಲ್ಲಿ ಕುರಿ ಮಂದೆಯನ್ನು ಮೇಯಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ನಾಯಿಗಳು ಅಟ್ಟಾಡಿಸಿದಾಗ ಚದುರಿದ ಕುರಿಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: Mahakumbh 2025 | ಕಾಲ್ತುಳಿತಕ್ಕೆ ಬಲಿಯಾದವರ ಮೃತದೇಹ ಬೆಳಗಾವಿಗೆ – ಕುಟುಂಬಸ್ಥರಲ್ಲಿ ಆಕ್ರಂದನ

  • ಮಂಡ್ಯ ಜಿಲ್ಲೆಯಲ್ಲಿ ಮಿತಿಮೀರಿದೆ ಚಿರತೆ ಹಾವಳಿ – ನಾಲ್ಕು ಕುರಿಗಳು ಸಾವು

    ಮಂಡ್ಯ ಜಿಲ್ಲೆಯಲ್ಲಿ ಮಿತಿಮೀರಿದೆ ಚಿರತೆ ಹಾವಳಿ – ನಾಲ್ಕು ಕುರಿಗಳು ಸಾವು

    ಮಂಡ್ಯ: ಜಿಲ್ಲೆಯಲ್ಲಿ ಚಿರತೆ (Leopard) ಹಾವಳಿ ಮಿತಿ ಮೀರಿದ್ದು ಜನರನ್ನು ಆತಂಕಕ್ಕೀಡುಮಾಡಿದೆ. ಕೊಟ್ಟಿಗೆಯಲ್ಲಿದ್ದ ಕುರಿಗಳ ಹಿಂಡಿನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಅಗಸನಪುರ ಗ್ರಾಮದಲ್ಲಿ ನಡೆದಿದೆ.

    ಚಿರತೆ ದಾಳಿಯಿಂದ ಅಗಸನಪುರ ನಿವಾಸಿ ರತ್ನಮ್ಮ ಎಂಬುವವರಿಗೆ ಸೇರಿದ್ದ ನಾಲ್ಕು ಕುರಿಗಳು ಸಾವನ್ನಪ್ಪಿವೆ. ಜಿಲ್ಲೆಯ ಹಲವೆಡೆ ಚಿರತೆ ಹಾವಳಿಗೆ ಕಂಗಾಲಾಗಿರುವ ರೈತರು, ಕೂಡಲೇ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ನಿರ್ಮಿತ ದೀರ್ಘ ಶ್ರೇಣಿಯ ಕ್ಷಿಪಣಿಗಳಿಂದ ರಷ್ಯಾ ಮೇಲೆ ಉಕ್ರೇನ್‌ ದಾಳಿ

    ಕಳೆದ ಎರಡು ದಿನಗಳ ಹಿಂದೆಯಷ್ಟೇ ನೆಲಮಂಗಲ (Nelamangala) ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಚಿರತೆ ಮಹಿಳೆಯ ಮೇಲೆ ದಾಳಿ ಮಾಡಿದ ಘಟನೆ ನಡೆದಿತ್ತು. ಇದನ್ನೂ ಓದಿ: Nelamangala| ಚಿರತೆ ದಾಳಿ- ಮಹಿಳೆ ಬಲಿ

  • ರೈಲಿಗೆ ಸಿಕ್ಕಿ 92 ಕುರಿಗಳ ಮಾರಣ ಹೋಮ – ಕುರಿಗಾಹಿ ಮಹಿಳೆಗೆ ಗಾಯ

    ರೈಲಿಗೆ ಸಿಕ್ಕಿ 92 ಕುರಿಗಳ ಮಾರಣ ಹೋಮ – ಕುರಿಗಾಹಿ ಮಹಿಳೆಗೆ ಗಾಯ

    ಚಿಕ್ಕಬಳ್ಳಾಪುರ: ರೈಲಿಗೆ (Train) ಸಿಕ್ಕಿ 92 ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ರೈಲು ಮಾರ್ಗದ ಲಕ್ಕಹಳ್ಳಿ ಗ್ರಾಮದ ಬಳಿ ನಡೆದಿದೆ.

    ರೈಲ್ವೆ ಹಳಿಗಳ ಪಕ್ಕದಲ್ಲೇ ಕೂದಲಮ್ಮ, ಕೂದಲಪ್ಪ, ಹಾಗೂ ದೇವರಾಜ್ ಎಂಬುವವರು ಕುರಿಗಳನ್ನ ಮೇಯಿಸುತ್ತಿದ್ದ ವೇಳೆ ನಾಯಿಗಳು ದಾಳಿ ಮಾಡಿವೆ. ನಾಯಿಗಳ ದಾಳಿಯಿಂದ ಕುರಿಗಳು ಬೆದರಿ ರೈಲು ಬರುವ ಸಮಯಕ್ಕೆ ರೈಲ್ವೆ ಹಳಿಗಳ ಮೇಲೆ ನುಗ್ಗಿವೆ. ಹೈಸ್ಪೀಡ್‌ನಲ್ಲಿ ಬರುತ್ತಿದ್ದ ರೈಲಿಗೆ ಸಿಕ್ಕಿ 92 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇದನ್ನೂ ಓದಿ: ಇಂಧನ ಸಚಿವ ಕೆ.ಜೆ ಜಾರ್ಜ್ ಚಿಕ್ಕಮಗಳೂರು ಕಚೇರಿಯಲ್ಲಿ ಕಳ್ಳತನ

    ರೈಲ್ವೆ ಹಳಿಗಳ ಮೇಲೆ ರಾಶಿ ರಾಶಿ ಕುರಿಗಳು ಸಾವನ್ನಪ್ಪಿ ಬಿದ್ದಿವೆ. ಘಟನೆಯಲ್ಲಿ ಕುರಿಗಾಹಿ ಮಹಿಳೆ (Cowherd Woman) ಕೂದಲಮ್ಮ ಸಹ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮತ್ತೆ ಕೊರೊನಾ ಹೆಚ್ಚಳ – ದೇಶದ ಒಟ್ಟು ಪ್ರಕರಣಗಳ ಪೈಕಿ 90% ಕೇರಳದಲ್ಲೇ ದಾಖಲು

  • ಅಕಾಲಿಕ ಮಳೆ : ಕುರಿಗಳ ಜೊತೆ ಕುರಿಗಾಯಿ ಸಾವು – ಎಲ್ಲೆಲ್ಲಿ ಏನಾಗಿದೆ?

    ಅಕಾಲಿಕ ಮಳೆ : ಕುರಿಗಳ ಜೊತೆ ಕುರಿಗಾಯಿ ಸಾವು – ಎಲ್ಲೆಲ್ಲಿ ಏನಾಗಿದೆ?

    ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆ ಅವಾಂತರ ಮುಂದುವರೆದಿದೆ. ರಾಯಚೂರಿನ ಲಿಂಗಸಗೂರಿನ ಬನ್ನಿಗೋಳದಲ್ಲಿ ಸಿಡಿಲು ಹೊಡೆದು ಗುರಿಗಾಯಿ ರಾಮಣ್ಣ ಪೂಜಾರಿ ಸಾವನ್ನಪ್ಪಿದ್ದಾರೆ. ಹಲವು ಕುರಿ ಮೇಕೆಗಳು ಸಾವನ್ನಪ್ಪಿವೆ.

    ಲಿಂಗಸಗೂರು, ಹಟ್ಟಿ, ಮುದಗಲ್ ಸೇರಿ ರಾಯಚೂರು ಜಿಲ್ಲೆಯ ವಿವಿಧಡೆ ಆಲಿಕಲ್ಲು ಸಹಿತ ಭಾರೀ ಮಳೆ ಆಗಿದೆ. ಬೃಹತ್ ಮರವೊಂದು ಹೆದ್ದಾರಿಗೆ ಉರುಳಿ, ಸಂಚಾರ ಅಸ್ತವ್ಯಸ್ತವಾಗಿದೆ. ಭತ್ತ ಕಟಾವು ಮಾಡಿದ್ದ ರೈತರು ಕಂಗಾಲಾಗಿದ್ದಾರೆ.

    ದಾವಣಗೆರೆಯ ಚನ್ನಗಿರಿ ತಾಲೂಕಿನ ಟಿ ಗೊಲ್ಲರಹಳ್ಳಿ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ 35 ಕುರಿಗಳು ಸಾವನ್ನಪ್ಪಿವೆ. ಚಿತ್ತಪ್ಪ, ವೀರೇಶ್, ಕಾಟಪ್ಪ ಎನ್ನುವರಿಗೆ ಸೇರಿದ ಕುರಿಗಳಾಗಿದ್ದು, ಕುರಿಗಾಯಿಗೂ ಕೂಡ ಸಿಡಿಲು ಬಡಿದಿದ್ದು, ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ ನೀಡಿದ್ದಾರೆ. ಕುರಿ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ವಿರೂಪಾಕ್ಷಪ್ಪ ಭರವಸೆ ನೀಡಿದರು. ಇದನ್ನೂ ಓದಿ: ಪಶು ವಿವಿ ಘಟಿಕೋತ್ಸವ – ಸೈನಿಕನ ಮಗಳಿಗೆ 13, ರೈತನ ಮಗನಿಗೆ 9 ಚಿನ್ನದ ಪದಕ

    ಅವಿಭಜಿತ ಬಳ್ಳಾರಿಯ ಸಂಡೂರು, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ ತಾಲೂಕುಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಬೆಳಗಾವಿಯ ಸದಲಗಾ ಮತ್ತು ಕೊಪ್ಪಳದ ಕುಷ್ಟಗಿಯಲ್ಲಿ ಸಿಡಿಲು ಹೊಡೆದು ತೆಂಗಿನಮರ ಧಗಧಗಿಸಿದೆ. ಹಾವೇರಿಯಲ್ಲಿ ಗುಡುಗು ಸಿಡಿಲು ಸಹಿ ಭಾರೀ ಮಳೆ ಆಗಿದೆ. ಕೊಡಗು, ಶಿವಮೊಗ್ಗ ಸೇರಿ ಹಲವೆಡೆ ಉತ್ತಮ ಮಳೆ ಆಗಿದೆ.

  • ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಕುರಿಗಳು – ಕುರಿಗಾಹಿಗಳ ಕಣ್ಣೀರು

    ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಕುರಿಗಳು – ಕುರಿಗಾಹಿಗಳ ಕಣ್ಣೀರು

    ಚಿತ್ರದುರ್ಗ: ಭಾರೀ ಮಳೆಯಿಂದಾಗಿ ರಭಸವಾಗಿ ಹರಿಯುತ್ತಿರುವ ಹಳ್ಳವೊಂದರಲ್ಲಿ 14 ಕುರಿಗಳು ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡ ತೇಕಲವಟ್ಟಿ ಗ್ರಾಮದ ಹಳ್ಳದಲ್ಲಿ ನಡೆದಿದೆ.

    ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ದೊಡ್ಡ ತೇಕಲವಟ್ಟಿಯ ಹಳ್ಳ ಭರ್ತಿಯಾಗಿ ರಭಸವಾಗಿ ಹರಿಯುತ್ತಿದೆ. ಈ ವೇಳೆ ಕುರಿಗಳನ್ನು ಮೇಯಿಸಲು ತೆರಳಿದ್ದ ಈಶ್ವರಪ್ಪ ಎಂಬವರ 4 ಕುರಿಗಳು, ರೇವಣ್ಣನ 4 ಕುರಿಗಳು ಹಾಗೂ ರಂಗಪ್ಪ ಎಂಬವರಿಗೆ ಸೇರಿದ 2 ಕುರಿಗಳು ಹಳ್ಳ ದಾಟುವ ಸಂದರ್ಭದಲ್ಲಿ ಹಳ್ಳದ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿವೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ – ಶಿಕ್ಷಕ ಅರೆಸ್ಟ್

    ಈ ವೇಳೆ ಸಾವನ್ನಪ್ಪಿದ್ದ 10 ಕುರಿಗಳು ಕುರಿಗಾಹಿಗಳ ಸಾಹಸದಿಂದ ಕೈಗೆ ಸಿಕ್ಕಿವೆ. ಆದರೆ ಇನ್ನೂ 4 ಕುರಿಗಳು ನೀರಲ್ಲೇ ಕೊಚ್ಚಿ ಹೋಗಿವೆ. ಹೀಗಾಗಿ ಸಾವನ್ನಪ್ಪಿರುವ ಕುರಿಗಳನ್ನು ವಾಪಸ್ ತಂದು ತಮ್ಮ ಮನೆಯ ಮುಂದೆ ರಾಶಿ ಹಾಕಿರುವ ಕುರಿಗಾಹಿಗಳು ಕಣ್ಣೀರಿಡುತ್ತಿರುವ ದೃಶ್ಯ ಎಲ್ಲರ ಮನಕಲಕುವಂತಿದೆ.

    ಕಳೆದ ವರ್ಷದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿರುವ ಕುರಿಗಾಹಿಗಳು ಕಷ್ಟಪಟ್ಟು ಸಾಕಿರೋ ಕುರಿಗಳು ಕಣ್ಮುಂದೆಯೇ ಕೊಚ್ಚಿ ಹೋದ ದೃಶ್ಯ ನೆನೆದು ಕಣ್ಣೀರಿಡ್ತಾ, ಕಂಗಾಲಾಗಿದ್ದಾರೆ. ಕುರಿಗಾಹಿಗಳ ಬದುಕಿಗೆ ಆಸರೆಯಾಗಿದ್ದ ಕುರಿಗಳನ್ನು ಕಳೆದುಕೊಂಡಿರೋ ಹಿನ್ನೆಲೆ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಹೀಗಾಗಿ ಇದೊಂದು ಅತಿವೃಷ್ಟಿ ಎಂದು ಪರಿಗಣಿಸಿ ಈ ಕೂಡಲೇ ತಾಲೂಕು ಆಡಳಿತ ಹಾಗೂ ಸರ್ಕಾರ ಕುರಿಗಾಹಿಗಳ ನೆರವಿಗೆ ಧಾವಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಯುವರತ್ನನಿಗೆ ಪದ್ಮಶ್ರೀ ನೀಡಲು ಶಿಫಾರಸ್ಸಿಗೆ ತೀರ್ಮಾನ

  • ಕುರಿಗಳ ಮಾಲೀಕರ ಹುಡುಕಾಟದಲ್ಲಿ ಪೊಲೀಸರು

    ಕುರಿಗಳ ಮಾಲೀಕರ ಹುಡುಕಾಟದಲ್ಲಿ ಪೊಲೀಸರು

    ಚಾಮರಾಜನಗರ: ಕುರಿ ಕದ್ದ ಕಳ್ಳರ ಹಿಂದೆ ಬೀಳುವ ಪೊಲೀಸರು ಕೆಲವೊಮ್ಮೆ ಕುರಿ ಮಾಲೀಕರ ಹುಡುಕಾಟವನ್ನೂ ನಡೆಸಬೇಕಾಗುತ್ತದೆ. ಇಂತಹದ್ದೊಂದು ಘಟನೆ ತಾಲೂಕಿನ ಸಂತೇಮರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಈಗ ಕುರಿ ಮಾಲೀಕರ ಹುಡುಕಾಟದಲ್ಲಿ ತೊಡಗಿದ್ದಾರೆ.

    ಶುಕ್ರವಾರ ರಾತ್ರಿ ಕಾವುದವಾಡಿ-ಸಂತೇಮರಹಳ್ಳಿ ರಸ್ತೆಯಲ್ಲಿ ಇಬ್ಬರು ಯುವಕರು ಬೈಕ್ ನಲ್ಲಿ 3 ಕುರಿಗಳನ್ನು ಹೊತ್ತೊಯ್ಯುತ್ತಿದ್ದರು. ಅದೇ ದಾರಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೆ ಅನುಮಾನ ಮೂಡಿ, ಅವರನ್ನು ಹಿಂಬಾಲಿಸಲು ಶುರು ಮಾಡಿದ್ದಾರೆ. ಬೆನ್ನುಬಿದ್ದ ಪೊಲೀಸರನ್ನು ನೋಡಿ ಭಯಗೊಂಡ ಕಳ್ಳರು, ಮಹದೇಶ್ವರ ದೇವಸ್ಥಾನದ ಬಳಿ ಕುರಿಗಳನ್ನು ಎಸೆದು ವೇಗವಾಗಿ ಪರಾರಿಯಾಗಿದ್ದಾರೆ.

    ಕಳ್ಳರು ತಪ್ಪಿಸಿಕೊಂಡ ಬಳಿಕ ಅವರು ಬಿಟ್ಟು ಹೋಗಿದ್ದ 3 ಕುರಿಗಳನ್ನು ಪೊಲೀಸರು ಠಾಣೆಗೆ ತಂದು ಆವರಣದಲ್ಲಿ ಕಟ್ಟಿ ಮೇವು ಹಾಕಿದ್ದಾರೆ. ಕಳ್ಳರು ಯಾವ ಊರಿನಲ್ಲಿ, ಯಾರ ಕುರಿ ಕದ್ದಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ತಮ್ಮ ಕುರಿಗಳು ಕಳ್ಳತನ ಆಗಿರುವುದಾಗಿ ಯಾರೂ ದೂರು ನೀಡಲು ಠಾಣೆಗೂ ಬಂದಿಲ್ಲ. ಹೀಗಾಗಿ ಪೊಲೀಸರು ಕುರಿಗಳ ಮಾಲೀಕರ ಹುಡುಕಾಟದಲ್ಲಿ ತೊಡಗಿದ್ದಾರೆ.

  • ರಾಯಚೂರಿನಲ್ಲಿ ಭಾರೀ ಮಳೆ- ಕುರಿಗಳನ್ನ ಸೇತುವೆ ದಾಟಿಸಲು ಗ್ರಾಮಸ್ಥರು ಹರಸಾಹಸ

    ರಾಯಚೂರಿನಲ್ಲಿ ಭಾರೀ ಮಳೆ- ಕುರಿಗಳನ್ನ ಸೇತುವೆ ದಾಟಿಸಲು ಗ್ರಾಮಸ್ಥರು ಹರಸಾಹಸ

    ರಾಯಚೂರು: ಲಿಂಗಸೂಗುರು ತಾಲೂಕಿನಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ತಾಲೂಕಿನ ಬನ್ನಿಗೋಳ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಗ್ರಾಮಕ್ಕೆ ನೀರು ನುಗ್ಗುವ ಭೀತಿ ಎದುರಾಗಿದೆ.

    ಗ್ರಾಮದ ಹಳ್ಳದ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಇದರಿಂದ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಕುರಿಗಾಯಿಗಳು ಕಷ್ಟಪಟ್ಟು ತಮ್ಮ ಕುರಿ, ಮೇಕೆಗಳನ್ನ ಹಳ್ಳ ದಾಟಿಸಿದ್ದಾರೆ.

    ನಿರಂತರವಾಗಿ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆಗಾಲದಲ್ಲಿ ಈ ಭಾಗದ ಬಹುತೇಕ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗುತ್ತದೆ. ಈ ಭಾರೀ ಉತ್ತಮ ಮಳೆ ಸುರಿಯುತ್ತಿರುವುದರಿಂದ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಗ್ರಾಮಸ್ಥರು ಪ್ರಾಣಭಯದಿಂದ ಹಳ್ಳ ದಾಟುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಉಳಿದಂತೆ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

  • ಕುರಿ ಕದ್ದು ಹೊರರಾಜ್ಯಕ್ಕೆ ಮಾರುತ್ತಿದ್ರು – ಗ್ರಾಮಸ್ಥರ ಕೈಗೆ ಸಿಕ್ಕಿ ಅರೆಬೆತ್ತಲಾಗಿ ಗೂಸಾ ತಿಂದ್ರು

    ಕುರಿ ಕದ್ದು ಹೊರರಾಜ್ಯಕ್ಕೆ ಮಾರುತ್ತಿದ್ರು – ಗ್ರಾಮಸ್ಥರ ಕೈಗೆ ಸಿಕ್ಕಿ ಅರೆಬೆತ್ತಲಾಗಿ ಗೂಸಾ ತಿಂದ್ರು

    ಗದಗ: ಕುರಿಗಳ ಕಳ್ಳತನ ಕೃತ್ಯಕ್ಕೆ ಮುಂದಾದ ಯುವಕರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಸಖತ್ ಗೂಸಾ ನೀಡಿರುವ ಘಟನೆ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.

    ಕಳ್ಳತನದ ವೇಳೆ ಸಿಕ್ಕಿಬಿದ್ದ ಇಬ್ಬರು ಕಳ್ಳರನ್ನು ಅರೆಬೆತ್ತಲೆಗೊಳಿಸಿ ಸ್ಥಳಿಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ನಾಲ್ಕು ಜನ ಸೇರಿಕೊಂಡು ಕುರಿ ಕಳ್ಳತನ ಮಾಡ್ತಿದ್ದರು. ಈ ಖದೀಮರು ಗದಗನ ಸೆಟಲ್ಮೆಂಟ್ ನಿವಾಸಿಗಳು ಎನ್ನಲಾಗುತ್ತಿದ್ದು, ಈ ಕೃತ್ಯಕ್ಕೆ ಅಣ್ಣಿಗೇರಿ ಕುರಿಕಾಯುವ ಓರ್ವ ಬಾಲಕನನ್ನು ಬಳಸಿಕೊಂಡಿದ್ದರು. ಇಬ್ಬರು ಬಾಲಕರು ಸೇರಿದಂತೆ ಒಟ್ಟು ನಾಲ್ಕು ಜನ ಕಳ್ಳರ ಗ್ಯಾಂಗ್ ಅನೇಕ ದಿನಗಳಿಂದ ಅಸುಂಡಿ, ಮಲ್ಲಸಮುದ್ರ, ಬಿಂಕದಕಟ್ಟಿ, ಕುರ್ತಕೋಟಿ ಹೀಗೆ ಅನೇಕ ಕಡೆಗಳಲ್ಲಿ ಕುರಿಗಳನ್ನು ಕಳ್ಳತನ ಮಾಡುತ್ತಿದ್ದರು.

    ಕಳ್ಳತನ ಮಾಡಿದ ಕುರಿಗಳನ್ನು ಗದಗದಿಂದ ಹೊರರಾಜ್ಯದ ಕೊಲ್ಲಾಪುರ ಹಾಗೂ ಸೊಲ್ಲಾಪುರಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಇವರ ಚಲನ-ವಲನ ಅನುಮಾನಗೊಂಡ ಕುರಿಗಾಹಿಗಳು, ಮರದ ಮೇಲೆ ಏರಿ ಕುಳಿತು ಖದೀಮರು ಕುರಿಗಳನ್ನು ಕದಿಯುವುದನ್ನು ನೋಡಿದ್ದಾರೆ. ಬಳಿಕ ಕಳ್ಳರನ್ನು ಹಿಡಿದು ಥಳಿಸಿ, ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಕರೆ ತಂದು ವಿಚಾರಣೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 4 ದಿನದಲ್ಲಿ 40 ಕುರಿಗಳನ್ನು ಕೊಂದ ಹಿಮ ಚಿರತೆ ಸೆರೆ

    4 ದಿನದಲ್ಲಿ 40 ಕುರಿಗಳನ್ನು ಕೊಂದ ಹಿಮ ಚಿರತೆ ಸೆರೆ

    ಶಿಮ್ಲಾ: ನಾಲ್ಕು ದಿನದಲ್ಲಿ 40 ಕುರಿಗಳನ್ನು ಕೊಂದು ಹಾಕಿದ್ದ ಡೆಡ್ಲಿ ಹಿಮ ಚಿರತೆಯನ್ನು ಹಿಮಾಚಲ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ.

    ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 40ಕ್ಕೂ ಹೆಚ್ಚು ಕುರಿಗಳನ್ನು ಹಿಚ ಚಿರತೆ ಕೊಂದು ಆತಂಕ ಸೃಷ್ಟಿಸಿತ್ತು. ಇದೀಗ ಈ ಹಿಮ ಚಿರತೆಯನ್ನು ಸ್ಥಳೀಯರ ಸಹಾಯದಿಂದ ಅರಣ್ಯ ಇಲಾಖೆ ಸೆರೆಹಿಡಿದು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

    ಈ ವಿಚಾರವಾಗಿ ಮಾಹಿತಿ ನೀಡಿರುವ ಕಾಜಾ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‍ಒ) ಹರ್ದೇವ್ ನೇಗಿ, ಸ್ಪಿಟಿಯ ಜಿಯು ಗ್ರಾಮದಲ್ಲಿ ಶನಿವಾರ ಹಿಮ ಚಿರತೆಯನ್ನು ಸೆರೆಹಿಡಿಯಲಾಗಿದೆ. ಈ ಹಿಮ ಚಿರತೆಯನ್ನು ಶಿಮ್ಲಾ ಜಿಲ್ಲೆಯ ಕುಫ್ರಿಯ ಹಿಮಾಲಯನ್ ನೇಚರ್ ಪಾರ್ಕ್‍ಗೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.