Tag: ಕುಮಾರಧಾರ

  • ಭಾರೀ ಮಳೆಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ – ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಸೂಚನೆ

    ಭಾರೀ ಮಳೆಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ – ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಸೂಚನೆ

    ಮಂಗಳೂರು: ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ (Rain) ಹಿನ್ನೆಲೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ (Kadaba) ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ (Kukke Subrahmanya) ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ.

    ಪಶ್ಚಿಮ ಘಟ್ಟ ಪ್ರದೇಶ, ಕುಮಾರಪರ್ವತ ಸೇರಿದಂತೆ ಸುಬ್ರಹ್ಮಣ್ಯ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಬಾರಿಯ ಮಳೆಗೆ ಎರಡನೇ ಸಲ ಕುಮಾರಧಾರ (Kumaradhara) ಸ್ನಾನಘಟ್ಟ ಮುಳುಗಡೆಯಾಗಿದೆ. ಕುಮಾರಧಾರ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದ್ದು, ಕುಮಾರಧಾರ ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಸೂಚಿಸಲಾಗಿದೆ. ಇದನ್ನೂ ಓದಿ: Valmiki Scam | ನಾಪತ್ತೆಯಾಗಿದ್ದ ದದ್ದಲ್‌ ವಿಧಾನಸೌಧದಲ್ಲಿ ಪ್ರತ್ಯಕ್ಷ

    ನಿರಂತರ ಸುರಿಯುತ್ತಿರುವ ಮಳೆಗೆ ಕುಮಾರಧಾರ ತುಂಬಿ ಹರಿಯುತ್ತಿದೆ. ಅಲ್ಲದೇ ಕುಮಾರಧಾರ ಉಪನದಿ ದರ್ಪಣ ತೀರ್ಥ ತುಂಬಿ ಹರಿಯುತ್ತಿದೆ. ಕುಮಾರಧಾರ ನದಿ ತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿ, ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್‌ಐಆರ್

  • ನಾಳೆ ದಕ್ಷಿಣ ಕನ್ನಡದ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ – ಎಲ್ಲೆಲ್ಲಿ ಏನಾಗಿದೆ?

    ನಾಳೆ ದಕ್ಷಿಣ ಕನ್ನಡದ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ – ಎಲ್ಲೆಲ್ಲಿ ಏನಾಗಿದೆ?

    ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ನಿರಂತರ ಮಳೆ (Rain) ಸುರಿಯುತ್ತಿರುವ ಹಿನ್ನೆಲೆ ನಾಳೆ(ಜೂ.28) ಜಿಲ್ಲೆಯ ಎಲ್ಲಾ ಪ್ರಾಥಮಿಕ-ಪ್ರೌಢಶಾಲೆಗಳಿಗೆ (School) ರಜೆ (Holiday) ಘೋಷಣೆ ಮಾಡಲಾಗಿದೆ.

    ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಘೋಷಣೆ ಮಾಡಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ನಾಳೆಯು ದಕ್ಷಿಣಕನ್ನಡ ಜಿಲ್ಲೆಗೆ ಹವಾಮಾನ ಇಲಾಖೆ (Weather Report) ರೆಡ್ ಅಲರ್ಟ್ (Red Alert) ಘೋಷಣೆ ಮಾಡಿದೆ.

     

    ಎಲ್ಲೆಲ್ಲಿ ಏನಾಗಿದೆ?
    ಮಂಗಳೂರಿನಲ್ಲಿ,ವಿದ್ಯುತ್ ತಂತಿ ತಲುಗಿ ಇಬ್ಬರು ಸಾವನ್ನಪ್ಪಿದ್ದು, ಮನೆ ಮೇಲೆ ಮಣ್ಣಿನ ದಿಬ್ಬ ಕುಸಿದು ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಮಳೆಯಿಂದ ಜಿಲ್ಲೆಯ ನಾನಾ ಕಡೆಗಳಲ್ಲಿ ಅವಾಂತರ ಉಂಟಾಗಿದ್ದು,ಸೇತುವೆಯಿಂದ ಕಾರು‌ ನದಿಗೆ ಬಿದ್ದು ಇಬ್ಬರು ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ.ಇನ್ನೊಂದೆಡೆ ಕಾಸರಗೋಡಿನ ಮಧೂರು ದೇವಸ್ಥಾನ ಜಲಾವೃತಗೊಂಡಿದೆ. ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಕೇಸ್ – ಆರೋಪಿ ಅರುಣ್ ಚೌಗಲೆ ಜಾಮೀನು ಅರ್ಜಿ ವಜಾ

    ಮಂಗಳೂರಿನ, ರೊಸಾರಿಯೊ ಶಾಲೆಯ ಬಳಿ ವಿದ್ಯುತ್ ತಂತಿ ಸ್ಪರ್ಶಗೊಂಡು ಪುತ್ತೂರು ಹಾಗೂ ಸಕಲೇಶಪುರ ಮೂಲದ ಇಬ್ಬರು ರಿಕ್ಷಾ ಚಾಲಕರು ಮೃತಪಟ್ಟಿದ್ದಾರೆ. ಬೆಳಗ್ಗೆ ಜಾವ 4:30ರ ಸುಮಾರಿಗೆ ರಿಕ್ಷಾ ಸ್ವಚ್ಚಗೊಳಿಸಲೆಂದು ಹೊರಬಂದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದುರ್ಘಟನೆ ಸಂಭವಿಸಿದೆ.

    ಪುತ್ತೂರಿನ ಜೈನರ ಗುರಿಯಲ್ಲಿ ಮನೆ ಮೇಲೆ ಧರೆ ಕುಸಿದು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಪುತ್ತೂರಿನ ಸಿಂಗಾಣಿಯಲ್ಲಿ‌ ಗುಡ್ಡ ಕುಸಿದು ‌ಹಲವು ಮನೆಗಳು ಅಪಾಯದಲ್ಲಿದೆ. ಚೆಲ್ಯಡ್ಕ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

     

    ಕುಮಾರಧಾರ ಸ್ನಾನಘಟ್ಟ ಮುಳುಗಡೆ: ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಪಶ್ಚಿಮ ಘಟ್ಟ ಪ್ರದೇಶ, ಕುಮಾರಪರ್ವತ ಸೇರಿದಂತೆ ಸುಬ್ರಹ್ಮಣ್ಯ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕುಮಾರಧಾರ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದೆ. ಕುಮಾರಧಾರ ನದಿಯ ಉಪನದಿ ದರ್ಪಣ ತೀರ್ಥ ಕೂಡಾ ತುಂಬಿ ಹರಿಯುತ್ತಿದೆ. ಹೀಗಿದ್ದರೂ ನದಿ ದಡದಲ್ಲೇ ಭಕ್ತಾಧಿಗಳು ತೀರ್ಥ ಸ್ನಾನ ಮಾಡುತ್ತಿದ್ದು, ಕುಮಾರಧಾರ ನದಿಗೆ ಇಳಿಯದಂತೆ ಭಕ್ತಾಧಿಗಳಿಗೆ ಸೂಚನೆ ನೀಡಲಾಗಿದೆ. ಸದ್ಯ ಕುಮಾರಧಾರ ನದಿ ತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿ, ಹೋಮ್ ಗಾರ್ಡ್ಸ್  ನಿಯೋಜನೆ ಮಾಡಲಾಗಿದೆ.

     

    ಮಧೂರು ದೇವಸ್ಥಾನ ಜಲಾವೃತ: ಮಂಗಳೂರಿನ ಗಡಿ ಭಾಗ ಕಾಸರಗೋಡಿನಲ್ಲೂ ಮಳೆ ಅಬ್ಬರಿಸುತ್ತಿದ್ದು, ಮಧೂರು ದೇವಸ್ಥಾನ ಜಲಾವೃತಗೊಂಡಿದೆ. ಮಧುವಾಹಿನಿ‌ ನದಿ‌ ತುಂಬಿ‌ ಹರಿಯುತ್ತಿದ್ದು ದೇವಸ್ಥಾನದ ಒಳಭಾಗಕ್ಕೂ ನದಿ ನೀರು ನುಗ್ಗಿ, ದೇವಸ್ಥಾನ ದ್ವೀಪದಂತಾಗಿದೆ. ಪಳ್ಳಂಜಿ -ಪಾಂಡ್ಯ ಎಂಬಲ್ಲಿ ತಡೆಬೇಲಿಯಿಲ್ಲದ ಸೇತುವೆಯಿಂದ ಕಾರೊಂದು ನದಿಗೆ ಬಿದ್ದಿದೆ.ಸವಾರರು ಇಬ್ಬರಿಬ್ಬರನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದು ಕಾರು ನೀರು ಪಾಲಾಗಿದೆ.

  • ಭಾರೀ ಮಳೆಗೆ ಕುಕ್ಕೆಯ ಕುಮಾರಧಾರ ಸ್ನಾನಘಟ್ಟ ಮುಳುಗಡೆ

    ಭಾರೀ ಮಳೆಗೆ ಕುಕ್ಕೆಯ ಕುಮಾರಧಾರ ಸ್ನಾನಘಟ್ಟ ಮುಳುಗಡೆ

    – ನದಿಗೆ ಇಳಿಯದಂತೆ ಭಕ್ತರಿಗೆ ಸೂಚನೆ

    ಮಂಗಳೂರು: ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ದ.ಕ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ (Kukke Subrahmanya) ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ.

    ಘಟ್ಟ ಪ್ರದೇಶ, ಕುಮಾರಪರ್ವತ ಸೇರಿದಂತೆ ಸುಬ್ರಹ್ಮಣ್ಯ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ರಾತ್ರಿ ಸುರಿದ ನಿರಂತರ ಮಳೆಗೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕುಮಾರಧಾರ (Kumaradhara River) ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಿದೆ. ಕುಮಾರಧಾರ ಉಪನದಿ ದರ್ಪಣ ತೀರ್ಥ ಕೂಡ ತುಂಬಿ ಹರಿಯುತ್ತಿದೆ.

    ತುಂಬಿ ಹರಿಯುತ್ತಿರುವುದರಿಂದ ಕುಮಾರಧಾರ ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ದೇಗುಲಕ್ಕೆ ಬರುವ ಭಕ್ತರು ನದಿ ದಡದಲ್ಲೇ ತೀರ್ಥಸ್ನಾನ ಮಾಡುತ್ತಿದ್ದಾರೆ. ನದಿತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿ, ಹೋಮ್ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ – ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ

    ಮಣ್ಣಿನ ದಿಬ್ಬ ಕುಸಿದು ಮಕ್ಕಳಿಬ್ಬರು ಪಾರು: ಇತ್ತ ಪುತ್ತೂರಿನಲ್ಲಿ ಮನೆ ಮೇಲೆ ಮಣ್ಣಿನ ದಿಬ್ಬ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಪಾರಾದ ಘಟನೆ ಇಂದು ನಸುಕಿನ‌ ಜಾವ ನಡೆದಿದೆ. ಪುತ್ತೂರಿನ ಬನ್ನೂರು ಸಮೀಪದ ಜೈನರಗುರಿಯಲ್ಲಿ ಮಜೀದ್ ಎಂಬವರ ಮನೆಗೆ ಪಕ್ಕದ ಮಣ್ಣಿನ ದಿಬ್ಬ ಕುಸಿದು ಬಿದ್ದಿದೆ.

    ಮಜೀದ್ ಮತ್ತು ಇಬ್ಬರು ಮಕ್ಕಳ ಮಲಗಿದ್ದ ಕೊಠಡಿ ಮೇಲೆ ಮಣ್ಣು ಬಿದ್ದ ಪರಿಣಾಮ ಮನೆಯ ಅರ್ಧ ಭಾಗ ಕುಸಿದು ಬಿದ್ದಿದೆ. ಈ ವೇಳೆ ಇಬ್ಬರು ಮಕ್ಕಳು‌ ಮಣ್ಣಿನಡಿ ಸಿಲುಕಿಕೊಂಡಿದ್ದು ತಕ್ಷಣ ಎಚ್ಚೆತ್ತ ಮಜೀದ್ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ನಗರಸಭಾ ಅಧಿಕಾರಿಗಳು ಭೇಟಿ ಮಾಡಿದ್ದು,ನಗರಸಭೆ ಮತ್ತು ಸ್ಥಳೀಯರಿಂದ ಮಣ್ಣು ತೆರವು ಕಾರ್ಯಾಚರಣೆ ನಡೆದಿದೆ.

  • ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನಿಂತಿಲ್ಲ ಅಕ್ರಮ ಮರಳು ದಂಧೆ

    ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನಿಂತಿಲ್ಲ ಅಕ್ರಮ ಮರಳು ದಂಧೆ

    ಮಂಗಳೂರು: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಸುಬ್ರಹ್ಮಣ್ಯದ ತುಂಬಾ ಅಕ್ರಮ ಮರಳು ದಂಧೆಯದ್ದೇ ಕಾರುಬಾರು. ದೇಗುಲಕ್ಕೆ ಆಗಮಿಸುವ ಭಕ್ತರು ತೀರ್ಥ ಸ್ನಾನಗೈಯುವ ಪರಮ ಪವಿತ್ರ ಕುಮಾರಧಾರ ನದಿಯ ಎಲ್ಲೆಂದರಲ್ಲಿ ಮರಳಿಗಾಗಿ ಅಕ್ರಮ ದಂಧೆಕೋರರು ಹಿಟಾಚಿ, ಡ್ರೆಜ್ಜಿಂಗ್ ಮೆಷಿನ್ ಬಳಸಿ ನದಿಯೊಡಲು ಬರಿದು ಮಾಡುತ್ತಿದ್ದು ಅಕ್ರಮ ಮಟ್ಟ ಹಾಕಬೇಕಾದ ಸುಬ್ರಹ್ಮಣ್ಯ ಪೊಲೀಸರು, ಗಣಿ ಇಲಾಖೆ ಅಧಿಕಾರಿಗಳು ಎಲ್ಲಾ ಗೊತ್ತಿದ್ದೂ ಮೌನವಹಿಸಿರುವ ಆರೋಪ ಕೇಳಿಬಂದಿದೆ.

    ವಿವಿಧ ಇಲಾಖೆಗಳಿಗೆ ತಿಂಗಳ ಮಾಮೂಲಿಯಿಂದಲೇ ನಡೆಯುತ್ತಿರುವ ದಂಧೆಗೆ ಬ್ರೇಕ್ ಹಾಕೋರು ಯಾರು ಅನ್ನೋದು ಸುಬ್ರಹ್ಮಣ್ಯ ಕ್ಷೇತ್ರದ ಭಕ್ತರ ಪ್ರಶ್ನೆಯಾಗಿದೆ. ಪಂಜ ಏನೆಕಲ್ಲು ಮಾರ್ಗವಾಗಿ ಸಾಗುವಾಗ ಕುಮಾರಧಾರ ಸೇತುವೆಗಿಂತ ಮುಂದೆ ಪರ್ವತ ಮುಖಿ ಬಳಿಯ ಸರಕಾರಿ ಆಸ್ಪತ್ರೆಯ ಮಾರು ದೂರದಲ್ಲೇ ಅಕ್ರಮ ಮರಳುಗಾರಿಕೆ ನಿತ್ಯ ನಿರಂತರ ನಡೆಯುತ್ತಿದೆ. ಸಂಜೆ 6 ಗಂಟೆಯಿಂದ ಶುರುವಾಗುವ ಮರಳು ಸಾಗಾಟ ಮುಂಜಾನೆ 6 ಗಂಟೆಯವರೆಗೂ ನಡೆಯುತ್ತಿದೆ. ಇಲ್ಲಿಂದ ಪ್ರತಿನಿತ್ಯ ನೂರಾರು ಲೋಡ್‍ಗಳಷ್ಟು ಮರಳು ಸಕಲೇಶಪುರ ಮಾರ್ಗವಾಗಿ ಹಾಸನ, ಬೆಂಗಳೂರು ಕಡೆಗೂ ಸಾಗಾಟವಾಗುತ್ತಿದೆ. ಇಲ್ಲಿ ಬಟಾಬಯಲಾಗಿ ಮರಳು ಹೊತ್ತ ಲಾರಿಗಳು ಸಾಗುತ್ತಿದ್ದರೂ ಪೊಲೀಸ್ ಇಲಾಖೆ, ಗಣಿ ಇಲಾಖೆ ಅಧಿಕಾರಿಗಳು ದಂಧೆ ನಿಲ್ಲಿಸಲು ಮುಂದಾಗದೇ ಇರುವುದು ಜನರ ಸಂದೇಹಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮಾರ್ಚ್‍ನಲ್ಲಿ GST ದಾಖಲೆ ಸಂಗ್ರಹ – ಯಾವ ರಾಜ್ಯದಲ್ಲಿ ಎಷ್ಟು ಸಂಗ್ರಹ?

    ಇಲ್ಲಿ ಮಾತ್ರವಲ್ಲದೆ ಸುಬ್ರಹ್ಮಣ್ಯ ಸುತ್ತಮುತ್ತ ಹತ್ತಾರು ಕಡೆಗಳಲ್ಲಿ ನದಿಯಿಂದ ಮರಳು ತೆಗೆಯಲಾಗುತ್ತಿದೆ. ಕುಲ್ಕುಂದ ಸಮೀಪದ ಮೈಸೂರು ಕೆಫೆ ಲಾಡ್ಜ್ ಪಕ್ಕದಲ್ಲಿ ಹಾದುಹೋಗುವ ರಸ್ತೆಯಲ್ಲಿ ಮರಳು ಲಾರಿಗಳ ಆರ್ಭಟ ಮಿತಿಮೀರಿದ್ದು ನದಿಯಲ್ಲಿ ಸಂಜೆಯಾಗುತ್ತಿದ್ದಂತೆ ಮರಳು ಲೋಡ್ ಮಾಡಲಾಗುತ್ತಿದೆ. ಲಾರಿಗಳ ಬೇಕಾಬಿಟ್ಟಿ ಓಡಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಾರ್ವಜನಿಕರ ವಾಹನ ಓಡಾಟಕ್ಕೆ ಸಂಚಕಾರ ಉಂಟಾಗಿದೆ. ಸ್ಥಳೀಯರು ಅನೇಕ ಬಾರಿ ಪೊಲೀಸ್ ಇಲಾಖೆ, ಗ್ರಾಮ ಪಂಚಾಯತ್‍ಗೆ ದೂರು ನೀಡಿದ್ದರೂ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಎಂದು ವಿದ್ಯಾರ್ಥಿಯ ಕೈ ಕಚ್ಚಿದ ಉಪನ್ಯಾಸಕ

    ಜಿಲ್ಲೆಯಲ್ಲಿ ಕಾನೂನು ರೀತಿಯಲ್ಲಿ ಸರ್ಕಾರಕ್ಕೆ ರಾಜಾಧನ ಪಾವತಿಸಿ ಮರಳುಗಾರಿಕೆ ನಡೆಸುತ್ತಿರುವವರು ಅಕ್ರಮ ದಂಧೆಕೋರರ ಹಾವಳಿಯಿಂದ ಕಂಗಲಾಗಿದ್ದಾರೆ. ಪರ್ಮಿಟ್, ಟ್ಯಾಕ್ಸ್ ಎಲ್ಲಾ ಕಟ್ಟಿಯೂ ಕೂಡಾ ಇಲಾಖೆ ಅಕ್ರಮ ವ್ಯವಹಾರ ನಡೆಸುವವರ ಪರವಾಗಿ ನಿಂತಿದೆ ಎಂದು ಆರೋಪಿಸುತ್ತಿದ್ದಾರೆ. ಮಾರ್ಚ್ ತಿಂಗಳ ಅಂತ್ಯಕ್ಕೆ ವಾರ್ಷಿಕ ಲೆಕ್ಕದ ಕಾರಣಕ್ಕೆ ಮರಳುಗಾರಿಕೆ ಪರ್ಮಿಟ್ ಮೂರು ದಿನಗಳ ಕಾಲ ಇಲಾಖೆ ಬ್ಲಾಕ್ ಮಾಡಿದ್ದರೂ ಇಲ್ಲಿ ಮಾತ್ರ ಯಥಾಪ್ರಕಾರ ಮರಳು ಸಾಗಾಟವಾಗಿದೆ. ಉಪ್ಪಿನಂಗಡಿ, ಕಡಬ, ಬೆಳ್ತಂಗಡಿ, ಸುಬ್ರಹ್ಮಣ್ಯ, ಸುಳ್ಯ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕಂಡು ಜನರು ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ರೋಸಿಹೋಗಿದ್ದು ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು ಈ ಕೂಡಲೇ ದಂಧೆಯನ್ನು ಸಂಪೂರ್ಣ ಮಟ್ಟ ಹಾಕುವ ಮೂಲಕ ಜನರ ವಿಶ್ವಾಸವನ್ನು ಉಳಿಸಬೇಕಾಗಿದೆ.

  • ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಮರಳು ದಂಧೆ – ಅಧಿಕಾರಿಗಳು ಮೌನ, ಭಕ್ತರ ಆಕ್ರೋಶ

    ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಮರಳು ದಂಧೆ – ಅಧಿಕಾರಿಗಳು ಮೌನ, ಭಕ್ತರ ಆಕ್ರೋಶ

    ಮಂಗಳೂರು: ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟದಲ್ಲೇ ಕಳೆದೊಂದು ತಿಂಗಳಿಂದ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಆಡಳಿತ, ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.

    ನದಿಯಲ್ಲಿ ಹಿಟಾಚಿ, ಡ್ರೆಜ್ಜಿಂಗ್ ಮೆಷಿನ್ ಬಳಸಿ ಮರಳು ಮೇಲೆತ್ತುತ್ತಿದ್ದು ಕುಮಾರಧಾರ ಸೇತುವೆಗೆ ಮುಂದೊಂದು ದಿನ ಕಂಟಕ ತಪ್ಪಿದ್ದಲ್ಲ. ಕೊರೋನಾ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ಅಂತ್ಯದಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ಸ್ನಾನಘಟ್ಟದ ಹೂಳೆತ್ತುವ ಗುತ್ತಿಗೆ ಪಡೆದವರು ಮರಳು, ಶಿಲ್ಟ್ ಸಂಗ್ರಹಿಸಿ ಗಣಿ ಇಲಾಖೆಯ ಯಾರ್ಡ್ ಗಳಿಗೆ ಸಾಗಿಸುವ ಬದಲು ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾರೆ ಎಂದು ಕ್ಷೇತ್ರದ ಭಕ್ತರು ದೂರಿದ್ದಾರೆ. ದಿನವೊಂದಕ್ಕೆ 50-60 ಲೋಡ್ ಗಳಷ್ಟು ಮರಳು ಸಾಗಾಟವಾಗುತ್ತಿದ್ದು ಸಂಜೆ 6 ಗಂಟೆಯ ಬಳಿಕ ಅನುಮತಿ ಇಲ್ಲದಿದ್ದರೂ ರಾತ್ರಿಯಾದರೂ ಹಿಟಾಚಿಯಲ್ಲಿ ಮರಳು ಅಗೆಯಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಗಣಿ ಇಲಾಖೆ, ಅಧಿಕಾರಿಗಳಿಗೆ ತಿಳಿದಿದ್ದರೂ ಸುಮ್ಮನಿರುವುದೇಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಸುಬ್ರಮಣ್ಯ ದೇವಸ್ಥಾನದ ಸ್ನಾನಘಟ್ಟದಲ್ಲೇ ಪೊಲೀಸ್ ಔಟ್ ಪೋಸ್ಟ್ ಇದೆ. ಅವರ ಕಣ್ಣೆದುರಿಗೆ ಡ್ರೆಜ್ಜಿಂಗ್ ಬಳಸಿ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದ್ದರೂ ದಾಳಿ ನಡೆದಿಲ್ಲ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮಂಗಳೂರಿನ ಗಣಿ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ದಾಳಿ ನಡೆಸಿದ್ದಾರೆ. ಆದರೆ ಈ ಬಗ್ಗೆ ಶುಕ್ರವಾರ ಸಂಜೆಯೇ ಮಾಹಿತಿ ಪಡೆದಿದ್ದ ದಂಧೆಕೋರರು ರಾತೋರಾತ್ರಿ ಸಂಗ್ರಹಿಸಿದ್ದ ಮರಳು, 2 ಡ್ರೆಜ್ಜಿಂಗ್ ಮೆಷಿನ್, ಹಿಟಾಚಿ ಎಲ್ಲವನ್ನು ಮಂಗಮಾಯ ಮಾಡಿದ್ದಾರೆ. ಅಧಿಕಾರಿಗಳು ಸ್ಥಳದಲ್ಲಿ ಉಳಿದಿದ್ದ ಸೊತ್ತುಗಳನ್ನು ಸೀಜ್ ಮಾಡಿ ತೆರಳಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿನ ದಂಧೆ ಯಾವ ರೀತಿ ನಡೀತಾ ಇದೆ ಅಂದ್ರೆ ಖಾಸಗಿ ವ್ಯಕ್ತಿಗಳ ಜಾಗಗಳಲ್ಲಿ ಮರಳು ದಾಸ್ತಾನು ಇಡುವುದು ಮಾತ್ರವಲ್ಲದೆ ಸರ್ಕಾರಿ ಕಚೇರಿ, ಆಸ್ಪತ್ರೆ ಆವರಣದಲ್ಲೂ ಅಭಿವೃದ್ಧಿ ಕಾಮಗಾರಿ ಎಂದು ಹೇಳಿಕೊಂಡು 50-60 ಲೋಡ್ ಮರಳು ದಾಸ್ತಾನು ಇಟ್ಟಿರುವ ಮಾಹಿತಿಯಿದೆ. ಇದನ್ನೂ ಓದಿ: ಯಾರೂ ನಿರೀಕ್ಷೆ ಮಾಡದವರು ಸಿಎಂ ಆಗ್ತಾರೆ: ಯತ್ನಾಳ್

    ಜಿಪಿಎಸ್, ಕ್ಯಾಮೆರಾ ಯಾವುದೂ ಇಲ್ಲ….!:
    ನದಿಯ ಹೂಳೆತ್ತುವ ನೆಪದಲ್ಲಿ ಡ್ರೆಜ್ಜಿಂಗ್ ಮೆಷಿನ್ ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದ್ದು, ಇದರಲ್ಲಿ ಗಣಿ ಇಲಾಖೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮರಳು ಸಾಗಾಟದ ಲಾರಿಗಳಿಗೆ ಜಿಪಿಎಸ್, ಲೈಸೆನ್ಸ್, ನಂಬರ್ ಪ್ಲೇಟ್, ಸಿಸಿ ಕ್ಯಾಮೆರಾ ಯಾವುದೂ ಇಲ್ಲ. ಒಂದು ಲೋಡ್ ಮರಳು 15-18 ಸಾವಿರ ರೂ. ತನಕ ಹೊರಗಡೆ ಮಾರಾಟವಾಗುತ್ತಿದ್ದು ಗಣಿ ಇಲಾಖೆಯ ಅಧಿಕೃತ ಲೈಸೆನ್ಸ್ ಇದ್ದು ಸಾವಿರಾರು ರೂಪಾಯಿ ಖರ್ಚು ಮಾಡಿ, ಕ್ಯಾಮೆರಾ, ಜಿಪಿಎಸ್ ಹಾಕಿ ಡ್ರೆಜ್ಜಿಂಗ್ ಗೆ ಅನುಮತಿಯಿಲ್ಲದೆ ದೋಣಿಗಳಲ್ಲಿ ಮರಳು ಸಂಗ್ರಹ ಮಾಡುವ ವ್ಯಾಪಾರಿಗಳು ಇವರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅಕ್ರಮ ನಿಲ್ಲಿಸಲು ಹಿಂದೇಟು ಹಾಕುತ್ತಿರುವ ಆರೋಪವೂ ಇದೆ.

    ಕುಕ್ಕೆಯನ್ನು ಸಂಪರ್ಕಿಸುವ ಸೇತುವೆಗೆ ಅಪಾಯ…!:
    ಸ್ನಾನಘಟ್ಟದಲ್ಲಿ ಹೊಸ ಸೇತುವೆಯ ಅಡಿಯಲ್ಲಿ ಮರಳು ಸಂಗ್ರಹಕ್ಕೆ ಆಳವಾದ ಕುಳಿಗಳನ್ನು ನಿರ್ಮಾಣ ಮಾಡಲಾಗಿದೆ. ಇದರ ಅರಿವಿಲ್ಲದೆ ತೀರ್ಥಸ್ನಾನಕ್ಕೆ ನದಿಗಿಳಿಯುವ ಭಕ್ತರ ಪ್ರಾಣಕ್ಕೂ ಸಂಚಕಾರ ತಪ್ಪಿದ್ದಲ್ಲ. ಇದು ಹೀಗೆ ಮುಂದುವರಿದರೆ ಸೇತುವೆಗೂ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಲ್ಲಾರಪಟ್ನ ಸೇತುವೆ ಮರಳು ದಂಧೆಗೆ ಕುಸಿದಿದ್ದರೆ ಮರವೂರು ಸೇತುವೆ ಬಿರುಕು ಬಿಟ್ಟಿದೆ. ಮುಂದೊಂದು ದಿನ ಇವುಗಳ ಸಾಲಿಗೆ ಕುಮಾರಧಾರ ಸೇತುವೆಯೂ ಸೇರಿದರೆ ಅಚ್ಚರಿ ಪಡಬೇಕಿಲ್ಲ.

  • ಕುಮಾರಧಾರ ನದಿಗೆ ಮೀನು ಹಿಡಿಯಲು ಹೋಗಿದ್ದ ಯುವಕ ಸಾವು

    ಕುಮಾರಧಾರ ನದಿಗೆ ಮೀನು ಹಿಡಿಯಲು ಹೋಗಿದ್ದ ಯುವಕ ಸಾವು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದ ದೊಳ್ತಿಲ ಎಂಬಲ್ಲಿ ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿತ್ತು. ಇಂದು ಆತ ನಾಪತ್ತೆಯಾಗಿದ್ದ ಸ್ವಲ್ಪ ದೂರದಲ್ಲಿ ಮೃತದೇಹ ನದಿ ನೀರಿನಲ್ಲಿ ಪತ್ತೆಯಾಗಿದೆ.

    ಮೃತ ಯುವಕನನ್ನು ದೊಳ್ತಿಲ ರಾಮಣ್ಣ ನಾಯ್ಕ್ ಅವರ ಪುತ್ರ ಪ್ರಕಾಶ್ (26) ಎಂದು ಗುರುತಿಸಲಾಗಿದೆ. ಪ್ರಕಾಶ್ ಹಾಗೂ ತನ್ನ ಸ್ನೇಹಿತರಿಬ್ಬರ ಜೊತೆ ಮೀನು ಹಿಡಿಯಲು ಬಿಟ್ಟಿದ್ದ. ಬಲೆಯನ್ನು ಈಜಿ ತರುತ್ತಿರುವಾಗ ನೀರಿನ ರಭಸಕ್ಕೆ ಕೊಚ್ಚಿ ಕೊಂಡು ಹೋಗಿದ್ದು ನಾಪತ್ತೆಯಾಗಿದ್ದ. ಸ್ಥಳಕ್ಕೆ ಪುತ್ತೂರು ಅಗ್ನಿಶಾಮಕ ದಳದ ಅಧಿಕಾರಿಗಳು, ಬೆಳ್ಳಾರೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನು ಓದಿ: ಕರಾವಳಿಯಲ್ಲಿ ಭಾರೀ ಮಳೆ- ತುಂಬುತ್ತಿರುವ ಜಿಲ್ಲೆಯ ಜೀವನದಿಗಳು

  • ಪಶ್ಚಿಮ ಘಟ್ಟದಲ್ಲಿ ಮಳೆ- ಕುಕ್ಕೆಯಲ್ಲಿ ಮುಳುಗಿದ ಸ್ನಾನಘಟ್ಟ

    ಪಶ್ಚಿಮ ಘಟ್ಟದಲ್ಲಿ ಮಳೆ- ಕುಕ್ಕೆಯಲ್ಲಿ ಮುಳುಗಿದ ಸ್ನಾನಘಟ್ಟ

    – ಪ್ರವಾಹದ ನೀರಿನಲ್ಲೇ ಪುಣ್ಯಸ್ನಾನ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕುಮಾರಧಾರಾ ನದಿ ಇದೀಗ ತುಂಬಿ ಹರಿಯಲಾರಂಭಿಸಿದೆ.

    ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಭಕ್ತಾದಿಗಳು ಪ್ರವಾಹದ ನೀರಲ್ಲೇ ಪುಣ್ಯಸ್ನಾನವನ್ನು ಮಾಡುತ್ತಿದ್ದಾರೆ. ನೇತ್ರಾವತಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದೆ.

    ಬಂಟ್ವಾಳದಲ್ಲಿ ನೇತ್ರಾವತಿ 7.7 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಬಂಟ್ವಾಳದಲ್ಲಿ ನದಿಯ ಅಪಾಯದ ಮಟ್ಟ 9 ಮೀಟರ್ ಆಗಿದ್ದು, ಮಳೆ ಹೀಗೇ ಮುಂದುವರಿದಲ್ಲಿ ನದಿ ಅಪಾಯದ ಮಟ್ಟದಲ್ಲಿ ಹರಿಯುವ ಸಾಧ್ಯತೆ ಇದೆ.

    ಈ ಬಾರಿ ಇದೇ ಮೊದಲ ಬಾರಿ ನದಿಗಳು ತುಂಬಿದ್ದು ರಭಸವಾಗಿ ಹರಿಯುತ್ತಿವೆ. ಜೂನ್ ತಿಂಗಳು ಪೂರ್ತಿ ಮಳೆಯಾಗದೆ ಈ ಬಾರಿ ಮಳೆ ಕೊರತೆಯಾಗಿತ್ತು. ಇನ್ನೂ ಎರಡು ದಿನ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.