Tag: ಕುಮಾರಕೃಪಾ

  • ಕೊನೆಗೂ ಡಿಕೆಶಿಗೆ ಸಿಕ್ತು ಅದೃಷ್ಟದ ಮನೆ – ಕಾವೇರಿ ನಿವಾಸಕ್ಕೆ ಸಿಎಂ ಶಿಫ್ಟ್ – ಯಾರಿಗೆ ಯಾವ ಮನೆ?

    ಕೊನೆಗೂ ಡಿಕೆಶಿಗೆ ಸಿಕ್ತು ಅದೃಷ್ಟದ ಮನೆ – ಕಾವೇರಿ ನಿವಾಸಕ್ಕೆ ಸಿಎಂ ಶಿಫ್ಟ್ – ಯಾರಿಗೆ ಯಾವ ಮನೆ?

    ಬೆಂಗಳೂರು: ಇಷ್ಟು ದಿನ ಸಿದ್ದರಾಮಯ್ಯ (siddaramaiah) ಅವರು ವಾಸವಿದ್ದ ಸರ್ಕಾರಿ ಬಂಗಲೆ ಕುಮಾರಕೃಪಾ (Kumarakrupa Guest House) ಅದೃಷ್ಟದ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಶಿಫ್ಟ್ ಆಗಲಿದ್ದಾರೆ.

    ಸಿದ್ದರಾಮಯ್ಯ ಅವರು ಕಾವೇರಿ ನಿವಾಸಕ್ಕೆ (Kaveri House) ಶಿಫ್ಟ್ ಆದ ನಂತರ ಡಿಕೆ ಶಿವಕುಮಾರ್ ಇಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸಿಎಂ ಬೊಮ್ಮಾಯಿ ಅವರಿದ್ದ ಮನೆಯನ್ನು ಎಂ.ಬಿ ಪಾಟೀಲ್‌ಗೆ ನಿಗದಿ ಮಾಡಲಾಗಿದ್ದು, ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿದ್ದ ವಸತಿ ಗೃಹವನ್ನ ನೂತನ ಸಚಿವ ಪ್ರಿಯಾಂಕ್ ಖರ್ಗೆಗೆ ನಿಗದಿ ಮಾಡಲಾಗಿದೆ. ಇದನ್ನೂ ಓದಿ: 6 ತಿಂಗಳಲ್ಲಿ ಏನು ಮಾಡಿದ್ದೀರಿ- ಅಧಿಕಾರಿಗಳಿಗೆ ಸಿದ್ದರಾಮಯ್ಯ ಪ್ರಶ್ನೆ

    ಸಿದ್ದರಾಮಯ್ಯ ಅವರ ಅದೃಷ್ಟದ ನಿವಾಸ ಕುಮಾರಕೃಪಾ ತನಗೆ ಬೇಕೆಂಬ ಬೇಡಿಕೆಯನ್ನ ಡಿ.ಕೆ ಶಿವಕುಮಾರ್ ಇಟ್ಟಿದ್ದರು. ಅಂದುಕೊಂಡಂತೆ ನೂತನ ಡಿಕೆಶಿ ಅವರಿಗೆ ಸಿದ್ದರಾಮಯ್ಯ ಅವರಿದ್ದ ಅದೃಷ್ಟದ ಮನೆ ಸಿಕ್ಕಿದೆ. ಇದನ್ನೂ ಓದಿ: Exclusive: ಸಿದ್ದು ಅದೃಷ್ಟದ ಮನೆಗೆ ಬೇಡಿಕೆ ಇರಿಸಿದ ಡಿಕೆಶಿ

    ಸಿದ್ದರಾಮಯ್ಯ ಅವರು ಇದ್ದ ನಿವಾಸ ಅದೃಷ್ಟದ ಮನೆ ಎಂದು ಹೇಳಲಾಗಿತ್ತು. ಈ ಹಿಂದೆ ಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಅವರು ಇದೇ ನಿವಾಸದಲ್ಲಿದ್ದರು. 5 ವರ್ಷ ಆಡಳಿತ ಯಶಸ್ವಿಯಾಗಿ ಪೂರೈಸಿದ್ದರು. ಇದೀಗ ಅದೃಷ್ಟದ ಮನೆಯನ್ನ ಡಿ.ಕೆ ಶಿವಕುಮಾರ್ ಅವರಿಗೆ ನಿಗದಿ ಮಾಡಲಾಗಿದೆ.

    ಯಾರಿಗೆ – ಯಾವ ಮನೆ?

    • ಡಿ.ಕೆ ಶಿವಕುಮಾರ್ – ನಂ.1 ಕುಮಾರ ಕೃಪಾ ಈಸ್ಟ್, ಗಾಂಧಿಭವನ ರಸ್ತೆ
    • ಎಂ.ಬಿ ಪಾಟೀಲ್ – ನಂ.1, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ
    • ಕೆ.ಜೆ ಜಾರ್ಜ್ – ನಂ.2, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ
    • ಜಿ. ಪರಮೇಶ್ವರ್ – ನಂ.94/ಎ, 9ನೇ ಕ್ರಾಸ್, ಸದಾಶಿವನಗರ, ಆರ್‌ಎಂವಿ ಬಡಾವಣೆ
    • ಪ್ರಿಯಾಂಕ್ ಖರ್ಗೆ – ನಂ.4, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ
  • Exclusive: ಸಿದ್ದು ಅದೃಷ್ಟದ ಮನೆಗೆ ಬೇಡಿಕೆ ಇರಿಸಿದ ಡಿಕೆಶಿ

    Exclusive: ಸಿದ್ದು ಅದೃಷ್ಟದ ಮನೆಗೆ ಬೇಡಿಕೆ ಇರಿಸಿದ ಡಿಕೆಶಿ

    ಬೆಂಗಳೂರು: ರಾಜ್ಯದ ನೂತನ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್ (DK Sivakumar) ಇದೀಗ ಸಿದ್ದರಾಮಯ್ಯ (Siddaramaiah) ಅವರ ಅದೃಷ್ಟದ ನಿವಾಸ ಮೇಲೆ ಕಣ್ಣಿಟ್ಟಿದ್ದಾರೆ.

    ಸಿದ್ದರಾಮಯ್ಯ ಅವರ ಅದೃಷ್ಟದ ನಿವಾಸ ಡಿ.ಕೆ ಶಿವಕುಮಾರ್ ತನಗೆ ಬೇಕೆಂಬ ಬೇಡಿಕೆಯಿಟ್ಟಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: `ಗ್ಯಾರಂಟಿ’ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ, 40% ಕಮಿಷನ್ ಆರೋಪ ತನಿಖೆಯಾಗಲಿ – ಬೊಮ್ಮಾಯಿ

    ಸಿದ್ದರಾಮಯ್ಯ ಹಾಲಿ ಇರುವ ಕುಮಾರಕೃಪಾ (Kumarakrupa GuestHouse) ಅವರ ಅದೃಷ್ಟದ ನಿವಾಸವಾಗಿದೆ. ಈ ಹಿಂದೆ ಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಇದೇ ನಿವಾಸದಲ್ಲಿದ್ದರು, 5 ವರ್ಷ ಯಶಸ್ವಿಯಾಗಿ ಅಧಿಕಾರ ಪೂರೈಸಿದರು. ಈಗಲೂ ಅದೇ ಮನೆಯಲ್ಲಿದ್ದಾರೆ. ಆದರೀಗ ಕಾವೇರಿ ನಿವಾಸಕ್ಕೆ (Kaveri Guest House) ತೆರಳುತ್ತಿರುವ ಹಿನ್ನೆಲೆಯಲ್ಲಿ ಡಿಕೆಶಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಎನ್ನಲಾಗಿದೆ. ಆಪ್ತರನ್ನ ಕಳುಹಿಸಿ ಸರ್ಕಾರಿ ಬಂಗಲೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

    ಸಿದ್ದರಾಮಯ್ಯ ಅವರಿಗೆ ಅದೃಷ್ಟ ತಂದ ನಿವಾಸ ನನಗೂ ಅದೃಷ್ಟ ತರುತ್ತೆ ಎಂಬ ನಂಬಿಕೆಯಲ್ಲಿ ಇದ್ದಾರೆ. ಆದರೆ ಇದಕ್ಕೆ ಸಿದ್ದರಾಮಯ್ಯ ಅವರು ಒಪ್ಪುತ್ತಾರಾ? ಅದೃಷ್ಟದ ಮನೆ ಬಿಟ್ಟು ಕಾವೇರಿ ನಿವಾಸಕ್ಕೆ ಹೋಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

  • ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ‘ಹೈಫೈ’ ಅನ್ಯಾಯ!

    ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ‘ಹೈಫೈ’ ಅನ್ಯಾಯ!

    ಬೆಂಗಳೂರು: ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ಎಡವಟ್ ನಿರ್ಧಾರಗಳಿಂದ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಓಟಕ್ಕೆ ಬ್ರೇಕ್ ಸಿಗುತ್ತಿಲ್ಲ. ಕೊರೊನಾ ಸೋಂಕಿತರಿಗೆ ಬೆಡ್, ಸರಿಯಾದ ಊಟ, ಚಿಕಿತ್ಸೆ ಸಿಗದೇ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಸರ್ಕಾರದ ಮತ್ತೊಂದು ಹೈಫೈ ಅನ್ಯಾಯ ಬೆಳಕಿಗೆ ಬಂದಿದೆ.

    ಕೊರೊನಾ ಸೋಂಕಿತರು ಬೆಡ್ ಸಿಗದೇ ನಡುರಸ್ತೆಯಲ್ಲಿ ಕಾಯುವಂತಾಗಿದೆ. ಇನ್ನು ಕೆಲವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಇದೀಗ ರಾಜಕಾರಣಿಗಳಿಗೆ ಮಾತ್ರ ಸರ್ಕಾರ ಮುಂಗಡ ಬೆಡ್ ಗಳನ್ನು ಬುಕ್ ಮಾಡಿಕೊಂಡಿರುವ ವಿಷಯ ರಿವೀಲ್ ಆಗಿದೆ.

    ಶಾಸಕರು, ಅಧಿಕಾರಿಗಳು ಕೊರೊನಾಗೆ ತುತ್ತಾದರೆ ಕುಮಾರಕೃಪದಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ನಡೆಸಿದೆ. ಹೋಟೆಲ್ ನ 100 ಕೊಠಡಿಗಳನ್ನು ಬುಕ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬಡವರಿಗೊಂದು, ರಾಜಕಾರಣಿಗಳಿಗೊಂದು ಚಿಕಿತ್ಸೆ ನೀಡಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

  • ಲಕ್ಕಿ ಹೌಸ್‍ಗೆ ಮರಳಿದ ಸಿದ್ದರಾಮಯ್ಯ

    ಲಕ್ಕಿ ಹೌಸ್‍ಗೆ ಮರಳಿದ ಸಿದ್ದರಾಮಯ್ಯ

    ಬೆಂಗಳೂರು: ಕಳೆದ ಆರೂವರೆ ವರ್ಷದಿಂದ ವಾಸವಿದ್ದ ಕಾವೇರಿ ನಿವಾಸ ಖಾಲಿ ಮಾಡಿ ಹೊಸ ಸರ್ಕಾರಿ ಬಂಗಲೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಶಿಫ್ಟ್ ಆಗಿದ್ದಾರೆ. ಕುಮಾರ ಕೃಪ ಅನೆಕ್ಷ್ಚರ್ ಒನ್ ಸಿದ್ದರಾಮಯ್ಯ ಶಿಫ್ಟ್ ಆಗಿರುವ ಲಕ್ಕಿ ಹೌಸ್. ವಿಪಕ್ಷ ನಾಯಕರಾಗಿದ್ದಾಗ 4 ವರ್ಷಗಳ ಕಾಲ ಇದೇ ನಿವಾಸದಲ್ಲಿ ಸಿದ್ದರಾಮಯ್ಯ ವಾಸವಾಗಿದ್ದರು. ಈ ನಿವಾಸದಲ್ಲಿದ್ದಾಗಲೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಸಿಎಂ ಆದ ನಂತರ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಿದ್ದರು.

    ಕಾವೇರಿ ನಿವಾಸಕ್ಕೆ ಸಿಎಂ ಯಡಿಯೂರಪ್ಪ ಬರಲು ತೀರ್ಮಾನಿಸಿದ ನಂತರ ಸಿದ್ದರಾಮಯ್ಯ ಗೆ ಕುಮಾರಕೃಪ ನಿವಾಸ ಎಂದ ನಿಗದಿ ಮಾಡಲಾಗಿತ್ತು. ಆದರೆ ಈ ನಿವಾಸದಲ್ಲಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮನೆ ಖಾಲಿ ಮಾಡಲು ತಡ ಮಾಡಿದ್ದರು. ಅತ್ತ ಕಾವೇರಿ ನಿವಾಸ ಬದಲಿಸಲು ಮನಸಿಲ್ಲದ ಸಿದ್ದರಾಮಯ್ಯ ಸಹ ಸತಾಯಿಸಿದ್ದರು. ಲೋಕೋಪಯೋಗಿ ಅಧಿಕಾರಿಗಳು ಸಿದ್ದರಾಮಯ್ಯ ನಿವಾಸದ ಬೋರ್ಡ್ ಕಿತ್ತು ಹಾಕಿದ್ದು ವಿವಾದವಾಗಿತ್ತು.

    ವಿಪಕ್ಷ ನಾಯಕರಾಗಿ ಹೋಗಿದ್ದ ನೀವು ಅದೇ ಲಕ್ಕಿ ನಿವಾಸದಿಂದಾಗಿ ಸಿಎಂ ಆಗಿದ್ದೀರಿ. ಈಗ ಅದೇ ನಿವಾಸಕ್ಕೆ ಶಿಫ್ಟ್ ಆದರೆ ಪುನಃ ಅದೃಷ್ಟ ಒಲಿಯಬಹುದು ಎಂದು ಸಿದ್ದರಾಮಯ್ಯರನ್ನು ಆಪ್ತರು ಒತ್ತಾಯಿಸಿದ್ದರು ಎನ್ನಲಾಗಿದೆ. ಹೀಗಾಗಿ ಕುಟುಂಬ ಮತ್ತು ಆಪ್ತರ ಒತ್ತಾಯದ ಮೇರೆಗೆ ಸಿದ್ದರಾಮಯ್ಯನವರು ಕುಮಾರಕೃಪಾಕ್ಕೆ ಶಿಫ್ಟ್ ಆಗಿದ್ದಾರೆ. ಇಂದು ಬೆಳಗ್ಗೆಯೇ ಸಿದ್ದರಾಮಯ್ಯನವರ ಪತ್ನಿ ಕುಮಾರಕೃಪಾದಲ್ಲಿ ವಿಶೇಷ ಪೂಜೆಯನ್ನು ಸಹ ಮಾಡಿಸಿದ್ದಾರೆ.

  • ಕೋರ್ಟ್ ಮೆಟ್ಟಿಲೇರುತ್ತಾ ಸಿದ್ದರಾಮಯ್ಯ ಮನೆ ವಿವಾದ?

    ಕೋರ್ಟ್ ಮೆಟ್ಟಿಲೇರುತ್ತಾ ಸಿದ್ದರಾಮಯ್ಯ ಮನೆ ವಿವಾದ?

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತುತ ವಾಸವಿರುವ ಸರ್ಕಾರಿ ಬಂಗಲೆ ಕಾವೇರಿ ಖಾಲಿ ಮಾಡುವಂತೆ ಕಳೆದ 2-3 ತಿಂಗಳಿನಿಂದ ಹಲವಾರು ಬಾರಿ ಲೋಕೋಪಯೋಗಿ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಮನೆ ಖಾಲಿ ಮಾಡುತ್ತಿಲ್ಲ. ಆದ್ದರಿಂದ ಈಗ ಮನೆ ವಿವಾದ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.

    ಸಿದ್ದರಾಮಯ್ಯನವರಿಗೆ ಹಂಚಿಕೆ ಆಗಿರುವ ಕುಮಾರಕೃಪಾ ಅನೆಕ್ಷ್ಚರ್ 1ಕ್ಕೆ ಅವರು ಹೋಗುತ್ತಿಲ್ಲ. ಇತ್ತ ಕಾವೇರಿ ನಿವಾಸಕ್ಕೆ ಬರಬೇಕಿದ್ದ ಸಿಎಂ ಯಡಿಯೂರಪ್ಪ ತಮ್ಮ ಖಾಸಗಿ ನಿವಾಸದಲ್ಲೇ ಇರಬೇಕಾಗಿದೆ. ಆದರೆ ಸಿದ್ದರಾಮಯ್ಯ ಪಾಲಿಗೆ ಬೇರೆ ನಿವಾಸ ಹಂಚಿಕೆ ಆಗಿದ್ದರೂ ಕಾವೇರಿ ನಿವಾಸ ಖಾಲಿ ಮಾಡುತ್ತಿಲ್ಲ. ಖಾಲಿ ಮಾಡದಿರುವುದಕ್ಕೆ ಸರಿಯಾದ ಕಾರಣವನ್ನು ನೀಡುತ್ತಿಲ್ಲ. ಇದರಿಂದ ಬೇಸತ್ತ ಅಧಿಕಾರಿಗಳು ಮಾಜಿ ಸಿಎಂಗೆ ಮನೆ ಖಾಲಿ ಮಾಡಲು ಒಂದು ವಾರದ ಗಡುವು ನೀಡಿದ್ದಾರೆ.

    ನೀಡಿರುವ ಗಡುವು ಮೀರಿದರೆ ಕೋರ್ಟ್ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ. ಒಂದು ವಾರದಲ್ಲಿ ಮಾಜಿ ಸಿಎಂ ಮನೆ ಖಾಲಿ ಮಾಡುತ್ತಾರಾ ಅಥವಾ ಅಧಿಕಾರಿಗಳು ಯೋಚಿಸಿದಂತೆ ಕೋರ್ಟ್ ನೋಟಿಸ್ ಬಂದ ನಂತರ ಖಾಲಿ ಮಾಡುತ್ತಾರಾ ಎನ್ನುವುದೇ ಸದ್ಯದ ಕುತೂಹಲ.

  • ರೇವಣ್ಣ ಮನೆ ನವೀಕರಣಕ್ಕೆ ದುಂದುವೆಚ್ಚ ಮಾಡ್ತಿಲ್ಲ: ಸಿಎಂ ಎಚ್‍ಡಿಕೆ

    ರೇವಣ್ಣ ಮನೆ ನವೀಕರಣಕ್ಕೆ ದುಂದುವೆಚ್ಚ ಮಾಡ್ತಿಲ್ಲ: ಸಿಎಂ ಎಚ್‍ಡಿಕೆ

    ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಮನೆ ನವೀಕರಣಕ್ಕೆ ದುಂದು ವೆಚ್ಚ ಮಾಡಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅವರು, ಮನಸ್ಸಿಗೆ ಬಂದಂತೆ ನವೀಕರಣ ಮಾಡಲು ಅನುಮತಿ ನೀಡಬಾರದು ಎಂದು ಈಗಾಗಲೇ ನಾನು ಆರ್ಥಿಕ ಇಲಾಖೆಗೆ ಸೂಚಿಸಿದ್ದೇನೆ. ರೇವಣ್ಣ ಮನೆ ನವೀಕರಣಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಆಗುತ್ತಿಲ್ಲ ಎಂದು ಅವರು ತಿಳಿಸಿದರು.

    ಕುಮಾರಕೃಪಾದಲ್ಲಿ ಕಳೆದ ಡಿಸೆಂಬರ್ ನಲ್ಲೆ ಕಾಮಗಾರಿ ಪ್ರಾರಂಭವಾಗಿದ್ದು ನಮ್ಮ ಸರ್ಕಾರ ಯಾವುದೇ ಆದೇಶ ನೀಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲೇ ಮಳೆ ನೀರು ಕಾಲುವೆಗೆ ಹೋಗುವಂತೆ ಪೈಪ್ ಲೈನ್ ಅಳವಡಿಕೆಗೆ ಅನುಮತಿ ನೀಡಲಾಗಿತ್ತು. ಕೋಟ್ಯಂತರ ರೂ ಖರ್ಚು ಮಾಡಲಾಗುತ್ತಿದೆ ಎಂದು ನಿಮಗೆ ಯಾರೋ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ಕುಮಾರಸ್ವಾಮಿ ತಿಳಿಸಿದರು.

    ಆರೋಪ ಏನು?
    ಸಚಿವರ ರೇವಣ್ಣ ಅವರಿಗೆ ಶಿವಾನಂದ ಸರ್ಕಲ್ ಬಳಿ ಇರುವ ಕುಮಾರಕೃಪಾ ನಂಬರ್ 1 ನಿವಾಸ ಸಿಕ್ಕಿದೆ. ಸದ್ಯ ಆಷಾಢ ಮಾಸ ಇರೋದರಿಂದ ಸರ್ಕಾರಿ ಬಂಗಲೆಗೆ ಸಚಿವರು ಪ್ರವೇಶ ಮಾಡಿಲ್ಲ. ಆದರೆ ಪ್ರವೇಶಕ್ಕೂ ಮುನ್ನವೇ ವಾಸ್ತು ಪ್ರಕಾರ ಕಟ್ಟಡದ ನವೀಕರಣ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಹೆಚ್.ಸಿ.ಮಹಾದೇವಪ್ಪ ತಮ್ಮ ಪ್ರವೇಶದ ವೇಳೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಡದ ನವೀಕರಣಗೊಳಿಸಿದ್ದರು. ಈಗ ಮತ್ತೆ ಅದೇ ಕಟ್ಟಡದ ನವೀಕರಣ ನಡೆಯುತ್ತಿದೆ.

    ಮಳೆಯಾದರೆ ಕುಮಾರ ಕೃಪಾ ಮುಂದೆ ಮಳೆನೀರು ನಿಂತುಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮನೆಯ ಮುಂದಿನ ನೀರನ್ನು ರಸ್ತೆಗೆ ತಿರುಗಿಸಿದ್ದಾರೆ. ಇದರಿಂದ ಸಹಜವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ ಎಂದು ಸಾರ್ವಜನಿಕರು ದೂರಿದ್ದರು.

  • ಏನೇ ವರದಿ ಬಿತ್ತರಿಸಿದ್ರೂ ನಾನು ಪ್ರತಿಕ್ರಿಯೆ ನೀಡಲ್ಲ: ಪಬ್ಲಿಕ್ ಟಿವಿ ವರದಿಗೆ ರೇವಣ್ಣ ಕೆಂಡಾಮಂಡಲ

    ಏನೇ ವರದಿ ಬಿತ್ತರಿಸಿದ್ರೂ ನಾನು ಪ್ರತಿಕ್ರಿಯೆ ನೀಡಲ್ಲ: ಪಬ್ಲಿಕ್ ಟಿವಿ ವರದಿಗೆ ರೇವಣ್ಣ ಕೆಂಡಾಮಂಡಲ

    ಬೆಂಗಳೂರು: ಇಂದು ಬೆಳಗ್ಗೆ ನಿಮ್ಮ ಪಬ್ಲಿಕ್ ಟಿವಿ ಬಿತ್ತರಿಸಿದ್ದ ವರದಿಗೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕೋಪಗೊಂಡಿದ್ದಾರೆ.

    ವಾಸ್ತು ಪ್ರಕಾರದಲ್ಲಿ ಕುಮಾರಕೃಪಾ ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿದ್ದು, ಕಟ್ಟಡದ ಅನಗತ್ಯ ನೀರು ರಸ್ತೆಗೆ ಹರಿಯುವಂತೆ ಮಾಡಲಾಗಿದೆ. ಈ ವಿಚಾರವನ್ನು ಇಟ್ಟುಕೊಂಡು ವರದಿ ಮಾಡಿದ್ದಕ್ಕೆ ಅದನ್ನೆಲ್ಲಾ ಕೇಳೊಕೆ ನೀವ್ಯಾರೋ? ನಾನು ನಿಮಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ನನ್ನ ಮತ ನೀಡಿ ಬಂದ ಜನರಿಗೆ ಉತ್ತರ ನೀಡುತ್ತೇನೆ. ಕೆಲ ಪತ್ರಿಕೆ ನನ್ನ ಬಗ್ಗೆ ಬರೆದರೂ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಪಬ್ಲಿಕ್ ಟಿವಿ ಏನೇ ವರದಿ ಬಿತ್ತರಿಸಿದ್ರೂ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.

    ಮಳೆಯಾದರೆ ಕುಮಾರಕೃಪಾ ಮುಂದೆ ಮಳೆನೀರು ನಿಂತುಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮನೆಯ ಮುಂದಿನ ನೀರನ್ನು ರಸ್ತೆಗೆ ತಿರುಗಿಸಿದ್ದಾರೆ. ಮಳೆಯ ನೀರು ಮತ್ತು ಕಟ್ಟಡದ ಕೊಳಚೆ ನೇರವಾಗಿ ರಸ್ತೆಯ ಮೇಲೆ ಹರಿಯುವ ಸಾಧ್ಯತೆಗಳಿವೆ. ಇದರಿಂದ ಸಹಜವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ.

    ಅತಿ ಹೆಚ್ಚಾಗಿ ಜೋತಿಷ್ಯ ನಂಬುವ ಸಚಿವರು ಸಾರ್ವಜನಿಕರ ಹಣದಲ್ಲಿ ಸರ್ಕಾರದ ಕಟ್ಟಡವನ್ನು ತಮಗೆ ಅನುಕೂಲವಾಗುವಂತೆ ಮಾಡಿಕೊಳ್ಳುತ್ತಿರೋದು ಇದೀಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಕೊಳಚೆ ನೀರನ್ನು ರಸ್ತೆಗೆ ಹರಿಸುವ ಮೂಲಕ ಕೇವಲ ತಮ್ಮ ಸುರಕ್ಷತೆ ನೋಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

    ಶಿವಾನಂದ ಸರ್ಕಲ್ ಬಳಿ ಇರುವ ಕುಮಾರಕೃಪಾ ಕಟ್ಟಡವನ್ನು ಹೆಚ್.ಡಿ.ರೇವಣ್ಣರಿಗೆ ನೀಡಲಾಗಿದೆ. ಸದ್ಯ ಆಷಾಢ ಮಾಸ ಆಗಿರೋದ್ರಿಂದ ಕಟ್ಟಡಕ್ಕೆ ಪ್ರವೇಶ ನೀಡಿಲ್ಲ. ಆಷಾಢ ಕಳೆಯುತ್ತಿದ್ದಂತೆ ಶ್ರಾವಣ ಮಾಸದ ಆರಂಭದಲ್ಲಿ ಸಚಿವರು ಕುಮಾರಕೃಪಾಕ್ಕೆ ಪ್ರವೇಶಿಸಲಿದ್ದಾರೆ.

    ಸಚಿವ ರೇವಣ್ಣರಿಗೆ ಪಬ್ಲಿಕ್ ಟಿವಿ ಪ್ರಶ್ನಾವಳಿ:
    1. ನೀವು ಸರ್ಕಾರಿ ದುಡ್ಡಲ್ಲಿ ವಾಸ್ತು ಪ್ರಕಾರ ಮನೆ ನವೀಕರಣ ಮಾಡುತ್ತಿಲ್ವಾ?
    2. ಚರಂಡಿ ನೀರು ರಸ್ತೆಗೆ ಬಿಟ್ಟು ಜನರಿಗೆ ಕಿರಿಕಿರಿ ಮಾಡುತ್ತಿಲ್ವಾ?
    3. ಪಬ್ಲಿಕ್ ಟಿವಿ ನಿಮ್ಮ ಮೇಲೆ ಸುಖಾಸುಮ್ಮನೆ ವರದಿ ಮಾಡಿಲ್ಲ. ದೃಶ್ಯ ಸಾಕ್ಷಿ ಸಮೇತ ನಿಮ್ಮ ಮುಂದಿಟ್ಟಿದ್ದು ಸುಳ್ಳಾ?
    4. ನೀವು ಸಚಿವರಾದ ಮಾತ್ರಕ್ಕೆ ಪ್ರಶ್ನಾತೀತರೇ?