Tag: ಕುಮದ್ವತಿ ನದಿ

  • ಕುಮದ್ವತಿ ನದಿಯಲ್ಲಿ ಹೆಚ್ಚಿದ ನೀರು – ಸೇತುವೆ ಎರಡು ಬದಿಗೆ ಬ್ಯಾರಿಕೇಡ್ ಹಾಕಿ ಓಡಾಟಕ್ಕೆ ಬ್ರೇಕ್

    ಕುಮದ್ವತಿ ನದಿಯಲ್ಲಿ ಹೆಚ್ಚಿದ ನೀರು – ಸೇತುವೆ ಎರಡು ಬದಿಗೆ ಬ್ಯಾರಿಕೇಡ್ ಹಾಕಿ ಓಡಾಟಕ್ಕೆ ಬ್ರೇಕ್

    ಹಾವೇರಿ: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಳೆಯಿಂದ ಕುಮದ್ವತಿ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದು, ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಚಪ್ಪರದಹಳ್ಳಿ-ಯಲಿವಾಳ ಸೇತುವೆ ಮೇಲಿನ ಸಂಚಾರ ಬಂದ್ ಆಗಿದೆ.

    ಸೇತುವೆ ಮೇಲೆ ನೀರು ಹರಿತಿರೋದ್ರಿಂದ ಸೇತುವೆ ಮೇಲಿನ ಓಡಾಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಸೇತುವೆಯ ಎರಡೂ ಬದಿಗೆ ಬ್ಯಾರಿಕೇಡ್‍ಗಳನ್ನು ಹಾಕಿ ಸೇತುವೆ ಮೇಲಿನ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ. ಸೇತುವೆ ಮೇಲೆ ಭರಪೂರ ನೀರು ಹರಿತಿದ್ರೂ ಹುಚ್ಚು ಸಾಹಸ ಮಾಡ್ತಾ, ಕೆಲವರು ಸೇತುವೆ ನೀರಲ್ಲಿ ಓಡಾಡ್ತಿದ್ದರು. ಇದನ್ನೂ ಓದಿ:  ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳಲು ಮಕ್ಕಳಂತೆ ಅತ್ತ ಪೊಲೀಸಪ್ಪ – ನೆಟ್ಟಿಗರಿಗೆ ಫುಲ್ ಮನರಂಜನೆ

    ಸೇತುವೆ ಮೇಲೆ ಓಡಾಡದಂತೆ ತಾಕೀತು ಮಾಡಿ ಬ್ಯಾರಿಕೇಡ್ ಹಾಕಿ, ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕುಮದ್ವತಿ ನದಿಯ ತೀರದಲ್ಲಿ ಬಾವಲಿಗಳ ಹತ್ಯೆ- ಐವರು ಆರೋಪಿಗಳ ಬಂಧನ

    ಕುಮದ್ವತಿ ನದಿಯ ತೀರದಲ್ಲಿ ಬಾವಲಿಗಳ ಹತ್ಯೆ- ಐವರು ಆರೋಪಿಗಳ ಬಂಧನ

    ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕು ಮಾಸೂರು ಗ್ರಾಮದ ಬಳಿ ಇರುವ ಕುಮದ್ವತಿ ನದಿಯ ತೀರದಲ್ಲಿ 85 ಬಾವಲಿಗಳ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

    ಮಾಸೂರು ಗ್ರಾಮದ ಕುಮದ್ವತಿ ನದಿ ದಂಡೆಯ ಮೇಲೆ ನೀಲಗಿರಿ ಮರಗಳ ಮೇಲೆ ವಾಸವಿದ್ದ 85 ಬಾವಲಿಗಳನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತೀರುಗುವ ವೇಳೆ 5 ಅರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಕಾರಿನೊಳಗೆ ಪ್ರೇಮಿಗಳು ಆತ್ಮಹತ್ಯೆ

    ಬಂಧಿತ ಆರೋಪಿಗಳಾದ ಬೆಂಗಳೂರು ಮೂಲದ ಮಂಜುನಾಥ್(45), ತುಮಕೂರು ಜಿಲ್ಲೆಯ ಅಗ್ನಿಬನ್ನಿರಾಯನಗರದ ಕೃಷ್ಣಪ್ಪ ಉರ್ಫ್(60), ರಾಮಕೃಷ್ಣಯ್ಯ(52), ಲಕ್ಷ್ಮಯ್ಯ ಹಾಗೂ ಲೋಕೇಶ್ ನನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರಿಂದ ಹತ್ಯೆಗೈದ 85 ಬಾವಲಿ ಹಾಗೂ ಬಾವಲಿಗೆ ಬೇಟೆಗೆ ಬಳಸಿರುವ ಆಯುಧಗಳು ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಐವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9 ಮತ್ತು 51 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಕುಮದ್ವತಿ ನದಿ ಕಾಲುವೆಗೆ ರಾಸಾಯನಿಕ ಸೇರ್ಪಡೆ- ಹಸು ಕರುಗಳು ಸಾವು, ರೈತರಲ್ಲಿ ಆತಂಕ

    ಕುಮದ್ವತಿ ನದಿ ಕಾಲುವೆಗೆ ರಾಸಾಯನಿಕ ಸೇರ್ಪಡೆ- ಹಸು ಕರುಗಳು ಸಾವು, ರೈತರಲ್ಲಿ ಆತಂಕ

    ಬೆಂಗಳೂರು: ಕುಮದ್ವತಿ ನದಿಯ ಕಾಲುವೆಗೆ ಕಾರ್ಖಾನೆಗಳ ರಾಸಾಯನಿಕ ವಸ್ತು, ಪ್ಲಾಸ್ಟಿಕ್ ಸೇರಿಕೊಂಡಿದೆ. ಈ ನೀರನ್ನು ಕುಡಿದು ಹಸು, ಕರುಗಳು ಸಾವನ್ನಪ್ಪುತ್ತಿವೆ ಎಂದು ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅಲ್ಕೂರು ಗ್ರಾಮದ ಬಳಿ ಇರುವ ಕುಮದ್ವತಿ ನದಿ ನೀರಿನ ಮೂಲಕ್ಕೆ ಬೆಂಗಳೂರಿನ ವಿಜಯನಗರ ಮೂಲದ ಕಂಪನಿ ಜೆ.ಎಸ್.ಡಬ್ಲ್ಯು ನಿಂದ ರಾಸಾಯನಿಕ ಮತ್ತು ಪ್ಲಾಸ್ಟಿಕ್ ಹಾಕಿರುವುದಾಗಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈ ತ್ಯಾಜ್ಯದಿಂದ ನೀರಿನ ಮೂಲ ಸಂಪೂರ್ಣ ಕಲುಷಿತವಾಗಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

    ಈಗಾಗಲೇ ಈ ನೀರನ್ನು ಕುಡಿದ ಹಸು ಮತ್ತು ಕರುಗಳು ಸಾವುನ್ನಪ್ಪಿದ್ದು, ಕುಮದ್ವತಿ ಕಾಲುವೆ ಪಕ್ಕದ ಕೊಳವೆ ಬಾವಿಯ ನೀರು ಕೂಡ ಕಲುಷಿತವಾಗಿದೆ. ಅದನ್ನು ಸೇವಿಸುವ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಬರುವ ಮುನ್ನ ಸ್ಥಳೀಯ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಗ್ರಾಮಸ್ಥರು ಎಚ್ಚರಿಕೆ ಕೊಟ್ಟಿದ್ದಾರೆ.

    ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಜೆ.ಎಸ್.ಡಬ್ಲ್ಯು ಕಂಪನಿ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಕುಮದ್ವತಿ ನದಿಯಿಂದ ಪ್ರಸಿದ್ಧ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಹರಿಯುತ್ತದೆ. ಈ ಹಿಂದೆ ಹಲವಾರು ಸ್ವಯಂ ಸೇವಕ ಸಂಸ್ಥೆಗಳು ಈ ನದಿ ಪಾತ್ರವನ್ನು ಶುದ್ಧಗೊಳಿಸಿದ್ದರು. ಇದೀಗ ಮತ್ತೆ ನದಿ ಕಲುಷಿತವಾಗುತ್ತಿರುವುದು ಬೇಸರವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.