Tag: ಕುಬ್ರಾ ಸೇಠ್

  • ಬಿಕಿನಿಯಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ಕುಬ್ರಾ ಸೇಠ್‌

    ಬಿಕಿನಿಯಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ಕುಬ್ರಾ ಸೇಠ್‌

    ಬಾಲಿವುಡ್ ನಟಿ ಕುಬ್ರಾ ಸೇಠ್ (Kubbra Sait) ಅವರು ಆಸ್ಟ್ರೇಲಿಯಾಗೆ ವೆಕೇಶನ್‌ಗೆ ತೆರಳಿದ್ದಾರೆ. ನೀಲಿ ಬಣ್ಣದ ಬಿಕಿಸಿ ಧರಿಸಿ ನಟಿ ಮಿಂಚಿದ್ದಾರೆ. ಬೆಂಗಳೂರಿನ ಬೆಡಗಿ ಕುಬ್ರಾ ಹಾಟ್ ಅವತಾರಕ್ಕೆ ಪಡ್ಡೆಹುಡುಗರು ಬೋಲ್ಡ್ ಆಗಿದ್ದಾರೆ. ಸದ್ಯ ನಟಿಯ ಬಿಕಿನಿ ಸಖತ್ ವೈರಲ್ ಆಗುತ್ತಿದೆ.

    ಕನ್ನಡದ ಹುಡುಗಿ ಕುಬ್ರಾ ಸೇಠ್ ಬಾಲಿವುಡ್ ರಂಗದಲ್ಲಿ ಸದ್ದು ಮಾಡ್ತಿದ್ದಾರೆ. ಸದಾ ಒಂದಲ್ಲಾ ಒಂದು ವಿಚಾರವಾಗಿ ನಟಿ ಸುದ್ದಿಯಲ್ಲಿರುತ್ತಾರೆ. ಈಗ ಆಸ್ಟ್ರೇಲಿಯಾದ ಸುಂದರ ತಾಣಗಳಿಗೆ ನಟಿ ಭೇಟಿ ನೀಡಿದ್ದಾರೆ. ನೀಲಿ ಬಣ್ಣದ ಬಿಕಿನಿಯಲ್ಲಿ ಹಾಟ್ & ಬೋಲ್ಡ್‌ ಆಗಿ ಕ್ಯಾಮೆರಾ ಕಣ್ಣಿಗೆ ನಟಿಯ ಲುಕ್ ನೋಡಿ, ಸರಿಯಾಗಿ ಬಟ್ಟೆ ಹಾಕಿ ಮೇಡಂ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

    2011ರಲ್ಲಿ ಸಲ್ಮಾನ್ ಖಾನ್ ನಟನೆಯ ‘ರೆಡಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕುಬ್ರಾ ಸೇಠ್ ಕಾಲಿಟ್ಟರು. ಸಾಕಷ್ಟು ವೆಬ್ ಸಿರೀಸ್ ಮೂಲಕ ನಟಿ ಗಮನ ಸೆಳೆದರು. ಇದನ್ನೂ ಓದಿ:ತೆಲುಗು ನಟ ಬ್ರಹ್ಮಾನಂದಂ ಪುತ್ರನ ಮದುವೆಗೆ ಬಂದ ಸೆಲೆಬ್ರಿಟಿಗಳು

    ಕುಬ್ರಾ ಒಬ್ಬರೇ ಅಲ್ಲ, ಅವರ ಸಹೋದರ ದಾನೀಶ್ ಸೇಠ್ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕನ್ನಡದ ಫ್ರೆಂಚ್ ಬಿರಿಯಾನಿ, 777 ಚಾರ್ಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಮಾಲಿವುಡ್ ನಟ ಮೋಹನ್ ಲಾಲ್ ಸಿನಿಮಾದಲ್ಲಿ ದಾನೀಶ್ ಕಾಣಿಸಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತನ್ನ ದೇಹದ ಮೇಲಾದ ದೌರ್ಜನ್ಯವನ್ನು ಇಂಚಿಂಚು ಬರೆದಿಟ್ಟ ನಟಿ, ಬರಹಗಾರ್ತಿ ಕುಬ್ರಾ ಸೇಠ್

    ತನ್ನ ದೇಹದ ಮೇಲಾದ ದೌರ್ಜನ್ಯವನ್ನು ಇಂಚಿಂಚು ಬರೆದಿಟ್ಟ ನಟಿ, ಬರಹಗಾರ್ತಿ ಕುಬ್ರಾ ಸೇಠ್

    ಬಾಲಿವುಡ್ ನಟಿ, ಬರಹಗಾರ್ತಿ ಕುಬ್ರಾ ಸೇಠ್ ಬರೆದ ‘ಓಪನ್ ಬುಕ್’ ಪುಸ್ತಕ ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ಅವರು ತಮ್ಮ 17ನೇ ವಯಸ್ಸಿನಲ್ಲೇ ನಡೆದ ಲೈಂಗಿಕ ದೌರ್ಜನ್ಯವನ್ನು ದಾಖಲಿಸಿದ್ದಾರೆ. ಈ ದೌರ್ಜನ್ಯ ಬೆಂಗಳೂರಿನಲ್ಲಿ ನಡೆದದ್ದು ಎಂದು ಬರೆದು ಬೆಚ್ಚಿ ಬೀಳಿಸಿದ್ದಾರೆ. ಆ ವಯಸ್ಸಿನಲ್ಲಿ ತಾವು ಯಾವ ರೀತಿಯಲ್ಲಿ ನರಕಯಾತನೆ ಅನುಭವಿಸಿದೆ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ನನಗಾಗ ಕೇವಲ 17 ವರ್ಷ. ನನಗೆ ಏನೂ ಅರಿಯದ ವಯಸ್ಸದು. ಆ ವಯಸ್ಸಿನಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವಾಯಿತು. ಅವನು ಕಾರಿನಲ್ಲಿ ಹೋಗುವಾಗ ಬಟ್ಟೆಯನ್ನು ಸರಿಸಿ, ಅವನ ಕೈಗಳು ನನ್ನ ತೊಡೆ ಸ್ಪರ್ಶಿಸುತ್ತಿದ್ದವು. ನೇರವಾಗಿ ನಮ್ಮ ಮನೆಗೆ ಬಂದು ಅವನು ಕಿಸ್ ಮಾಡುತ್ತಿದ್ದ. ನೀನಂದರೆ ನನಗೆ ಇಷ್ಟ  ಎನ್ನುತ್ತಿದ್ದ. ಹೋಟೆಲ್‌ನಲ್ಲಿ ನಡೆದದ್ದು ಮತ್ತೊಂದು ಘೋರ ಘಟನೆ. ಇದೆಲ್ಲವೂ ನಡೆದಾಗಲೂ ನಾನು ಅಸಹಾಯಕಳು’ ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಕುಬ್ರಾ ಸೇಠ್.

    ಬಾಲ್ಯದಲ್ಲಿ ಇವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇವರ ತಾಯಿ ಆರ್ಥಿಕವಾಗಿ ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದರಂತೆ. ಈ ವೇಳೆಯಲ್ಲಿ ಬೆಂಗಳೂರಿನಲ್ಲಿದ್ದ ರೆಸ್ಟೊರೆಂಟ್ ಮಾಲೀಕರೊಬ್ಬರು ಇವರ ಸಹಾಯಕ್ಕೆ ಬಂದರಂತೆ. ಸಹಾಯ ಮಾಡಿದ್ದಕ್ಕೆ ಇಡೀ ಕುಟುಂಬ ಅವರನ್ನು ದೇವರೆಂದು ನೋಡುತ್ತಿದ್ದರಂತೆ. ಆದರೆ ಆ ವ್ಯಕ್ತಿ ಮಾಡಿದ್ದೇ ಬೇರೆ. ಮನೆಗೆ ಬಂದು ಚುಂಬಿಸುತ್ತಿದ್ದರು. ಅಮ್ಮನ ಎದುರೇ ಇದೆಲ್ಲವೂ ನಡೆಯುತ್ತಿತ್ತು ಎಂದು ಕರಾಳ ಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    ಮುಂದೊಂದು ದಿನ ನಾನು ಈ ವಿಷಯವನ್ನು ಬಾಯ್ಬಿಟ್ಟೇನೂ ಅನ್ನುವ ಕಾರಣಕ್ಕಾಗಿ ಅವನು ಕೊಲೆ  ಬೆದರಿಕೆ ಬೇರೆ ಹಾಕಿದ್ದ. ಹಾಗಾಗಿ ನಾನು ಯಾರ ಬಳಿಯೂ ಆಗ ಹೇಳಿಕೊಳ್ಳಲು ಆಗಲಿಲ್ಲ. ಅವನಿಗೆ ಬೇರೊಬ್ಬ ಹುಡುಗಿ ಜೊತೆ ಮದುವೆ ಆಯಿತು. ಮಕ್ಕಳೂ ಆದವು. ಅವನು ಸುಖವಾಗಿ ಜೀವನ ಸಾಗಿಸುತ್ತಿದ್ದಾನೆ. ನನಗೂ ಇವತ್ತಿಗೂ ಆ ನೋವು ಕಾಡುತ್ತಿದೆ ಎಂದು ತಮ್ಮ ಆತ್ಮಕಥೆಯಲ್ಲಿ ಕುಬ್ರಾ ಸೇಠ್ ಬರೆದುಕೊಂಡಿದ್ದಾರೆ.

  • ನನ್ನನ್ನು 7 ಬಾರಿ ನಗ್ನಗೊಳಿಸಿ ಶೂಟಿಂಗ್ ನಡೆದಿದೆ: ನಟಿ ಕುಬ್ರಾ ಸೇಠ್

    ನನ್ನನ್ನು 7 ಬಾರಿ ನಗ್ನಗೊಳಿಸಿ ಶೂಟಿಂಗ್ ನಡೆದಿದೆ: ನಟಿ ಕುಬ್ರಾ ಸೇಠ್

    ಮುಂಬೈ: ನಟ ಸೈಫ್ ಅಲಿ ಖಾನ್ ಹಾಗೂ ನವಾಜುದ್ದೀನ್ ಸಿದ್ದೀಕಿ ನಟಿಸುತ್ತಿರುವ ವೆಬ್ ಸಿರೀಸ್ ‘ಸೇಕ್ರೆಡ್ ಗೇಮ್ಸ್’ನಲ್ಲಿ ನಟಿ ಕುಬ್ರಾ ಸೇಠ್ ರನ್ನು 7 ಬಾರಿ ನಗ್ನಗೊಳಿಸಿ ಚಿತ್ರಿಕರಿಸಿದ್ದಾರೆ.

    ಸೇಕ್ರೆಡ್ ಗೇಮ್ಸ್ ನಲ್ಲಿ ಕುಬ್ರಾ ಮಂಗಳಮುಖಿ ಕ್ಯಾಬರೆ ಡ್ಯಾನ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕುಬ್ರಾ ನನ್ನನ್ನು 7 ಬಾರಿ ನಗ್ನಗೊಳಿಸಿ ಚಿತ್ರೀಕರಿಸಿದ್ದಾರೆ ಎಂದು ಸ್ವತಃ ನಟಿಯೇ ಹೇಳಿಕೊಂಡಿದ್ದಾರೆ.

    ಚಿತ್ರದಲ್ಲಿ 7 ಬಾರಿ ನನ್ನನ್ನು ನಗ್ನಗೊಳಿಸಿ ಚಿತ್ರಕರಿಸಿದ ಮೇಲೆ ನಿರ್ದೇಶಕ ಅನುರಾಗ್ ಕಶ್ಯಪ್ ನನ್ನ ಬಳಿ ಕ್ಷಮೆ ಕೇಳಿದ್ದರು. ಪ್ರತಿ ಬಾರಿ ಆ ಸೀನ್ ಚಿತ್ರೀಕರಿಸಿದ ಮೇಲೆ ಅವರು ನನ್ನ ಬಳಿ ಬಂದು “ನಾನು ಈ ಸೀನ್ ಸಾಕಷ್ಟು ಸಲ ಮಾಡಿಸುತ್ತಿದ್ದೇನೆ. ನನ್ನನ್ನು ಕ್ಷಮಿಸು. ದಯವಿಟ್ಟು ನನ್ನನ್ನು ದ್ವೇಷಿಸಬೇಡ. ನನಗೆ ಗೊತ್ತು ನೀನು ದ್ವೇಷಿಸುತ್ತೀಯಾ ಎಂದು ಆದರೂ ದ್ವೇಷಿಸಬೇಡ ಎಂದು ಹೇಳುತ್ತಿದ್ದರು.

    ನಾನು ಈ ಸೀನ್ ಮಾಡುವಾಗ ನೆಲದ ಮೇಲೆ ಬಿದ್ದು ಅಳಬೇಕಿತ್ತು. ಆದರೆ ಅನುರಾಗ್ ನನಗೆ ನಿಜವಾಗಿಯೂ ಏಳು ಬಾರಿ ಅಳಿಸಿದ್ದಾರೆ. ಸೀನ್ ಮುಗಿದ ಮೇಲೂ ನಾನು ನೆಲದ ಮೇಲೆ ಕೂತು ಅಳುತ್ತಿದೆ. ಆಗ ಅನುರಾಗ್ ನನ್ನ ಬಳಿ ಬಂದು ನನ್ನನ್ನು ತಪ್ಪಿಕೊಂಡು ಐ ಲವ್ ಯೂ ಸೋ ಮಚ್ ಹಾಗೂ ಈ ಸೀನ್ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದರು. ಆಗ ನಾನು ಆ ರೂಮಿನಿಂದ ಹೊರಬಂದೆ. ಅಲ್ಲಿ ಇದ್ದವರು ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದರು. ಅದು ತುಂಬಾ ಅದ್ಭುತವಾಗಿ ಬರುತ್ತೆ ಎಂದು ನಾನು ಎಂದುಕೊಂಡಿರಲಿಲ್ಲ ಎಂದು ಕುಬ್ರಾ ತಿಳಿಸಿದ್ದಾರೆ.

    ಈ ಸೀನ್ ಚಿತ್ರಿಕರಿಸುವ ಮೊದಲು ನಾನು ತುಂಬಾ ನಗುತ್ತಿದ್ದೆ. ಆದರೆ ಆ ಸೀನ್‍ನಲ್ಲಿ ನಾನು ಅಳಬೇಕಿತ್ತು. ಆಗ ಅನುರಾಗ್ ನನ್ನ ಬಳಿ ಬಂದು ನೀನು ಏನು ಕುಡಿತೀಯಾ ಎಂದು ಕೇಳಿದ್ದಾಗ ವೈನ್ ಎಂದು ಹೇಳಿದೆ. ಆದರೆ ಅವರು ನನಗೆ ವಿಸ್ಕಿ ನೀಡಿ ಸೀನ್‍ನಲ್ಲಿರುವ ಲೈನ್ಸ್‍ಗಳನ್ನು ಓದುತ್ತಿದ್ದರು. ನಾನು ಓದಿದ ಮೇಲೆ ಅವರು ಪೇಪರ್ ತೆಗೆದುಕೊಂಡು ನಾನು ಹೇಳುವುದ್ದನ್ನು ಅನುಭವ ಮಾಡಿಕೋ ಎಂದು ಹೇಳಿದ್ದರು.

    ಅವರು ಹೇಳಿದ ಮಾತು ಕೇಳಿ ಆ ಕ್ಷಣವೇ ನನ್ನ ಕಣ್ಣಲ್ಲಿ ನೀರು ಬಂತು. ಆಗ ಅವರು ಯಾರೂ ಏನು ಮಾತಾಡಬೇಡಿ, ನಾನು ಅವಳನ್ನು ಸಿನಿಮಾ ಸೆಟ್‍ನಲ್ಲಿ ಭೇಟಿ ಮಾಡುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟು ಹೋದರು. ಆದರೆ ನಾನು ಸಿನಿಮಾ ಸೆಟ್ ಹೋಗುವರೆಗೂ ನನ್ನ ಜೊತೆ ಯಾರೂ ಮಾತನಾಡಲಿಲ್ಲ. ನಾನು ಆ ಸೀನ್ ಅದ್ಭುತವಾಗಿ ಮಾಡಿದ್ದೇನೆ ಹಾಗೂ ಆ ಸೀನ್ ತುಂಬಾ ಚೆನ್ನಾಗಿ ಚಿತ್ರೀಕರಿಸಲಾಗಿದೆ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದರು ಎಂದು ನಟಿ ಕುಬ್ರಾ ಸೇಠ್ ಹೇಳಿದ್ದಾರೆ.