Tag: ಕುನೋ ರಾಷ್ಟ್ರೀಯ ಉದ್ಯಾನ

  • 5 ಮರಿಗಳಿಗೆ ಜನ್ಮ ನೀಡಿದ ಗಾಮಿನಿ – ಕುನೋದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆ

    5 ಮರಿಗಳಿಗೆ ಜನ್ಮ ನೀಡಿದ ಗಾಮಿನಿ – ಕುನೋದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆ

    ಭೋಪಾಲ್‌: ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ 5 ವರ್ಷದ ಚೀತಾ (African Cheetah) 5 ಮರಿಗಳಿಗೆ ಜನ್ಮ ನೀಡಿದ್ದು, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಇದರಲ್ಲಿ ಭಾರತದಲ್ಲಿ ಜನಿಸಿದ 13 ಮರಿಗಳೂ ಸೇರಿವೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ (Bhupendra Yadav) ತಿಳಿಸಿದ್ದಾರೆ.

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ, ಸುಮಾರು 5 ವರ್ಷ ಪ್ರಾಯದ ಹೆಣ್ಣು ಚೀತಾ ಗಾಮಿನಿ ಭಾನುವಾರ 5 ಮರಿಗಳಿಗೆ (Cheetah Cubs) ಜನ್ಮ ನೀಡಿದ್ದು, ಭಾರತದಲ್ಲಿ ಜನಿಸಿದ ಚೀತಾ ಮರಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ, ಈ ಚೀತಾವನ್ನು ದಕ್ಷಿಣ ಆಫ್ರಿಕಾದ ತ್ಸ್ವಾಲು ಕಲಹರಿ ಮೀಸಲು ಪ್ರದೇಶದಿಂದ ತರಲಾಗಿತ್ತು ಎಂದು ತಿಳಿಸಿದ್ದಾರೆ.

    ಇಲ್ಲಿನ ಅರಣ್ಯಾಧಿಕಾರಿಗಳು (Forest Officers), ಪಶು ವೈದ್ಯರು ಹಾಗೂ ರಕ್ಷಣಾ ಸಿಬ್ಬಂದಿ ತಂಡವು ಚೀತಾಗಳಿಗೆ ಒತ್ತಡ ರಹಿತ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದಾರೆ. ಇದು ಚೀತಾಗಳ ಜನನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇದೀಗ ಕುನೋದಲ್ಲಿ ಒಟ್ಟು ಚೀತಾಗಳ ಸಂಖ್ಯೆ 26 ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2 ಚೀತಾಗಳ ಸಾವಿಗೆ ಕಾರಣ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್!

    ಇದಕ್ಕೂ ಮುನ್ನ ಜ್ವಾಲಾ ಎಂಬ ಚೀತಾ ಕಳೆದ ಜನವರಿ 20 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆಶಾ ಹೆಸರಿನ ಮತ್ತೊಂದು ಚೀತಾ ಅದೇ ತಿಂಗಳ ಆರಂಭದಲ್ಲಿ 3 ಮರಿಗಳಿಗೆ ಜನ್ಮ ನೀಡಿತು.

    1952 ರಲ್ಲಿ ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಗಿತ್ತು. ಆ ನಂತರ ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು (Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ಚೀತಾಗಳನ್ನು ಎರಡು ಬ್ಯಾಚ್‌ಗಳಲ್ಲಿ ಆಮದು ಮಾಡಿಕೊಳ್ಳಲಾಯಿತು. 2022 ರಲ್ಲಿ ನಮೀಬಿಯಾದಿಂದ ಮೊದಲ ಬ್ಯಾಚ್‌ ಅನ್ನು ಆಮದು ಮಾಡಿಕೊಳ್ಳಲಾಗಿತ್ತು. ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು.

    ಆರಂಭದ ಒಂದು ವರ್ಷದ ಅವಧಿಯಲ್ಲಿ ಸುಮಾರು 10 ಚೀತಾಗಳು ಸಾವಿಗೀಡಾಗಿದ್ದವು. ಆದ್ರೆ ಪ್ರಸಕ್ತ ವರ್ಷದ ಮೊದಲ ಮೂರು ತಿಂಗಳಲ್ಲೇ 12 ಮರಿಗಳ ಜನನವಾಗಿದ್ದು, ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವರ್ಷದಿಂದಲೇ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಸಫಾರಿ ಆರಂಭಿಸುವ ಬಗ್ಗೆಯೂ ಅಧಿಕಾರಿಗಳು ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಮಲಗಿದ್ದ ವ್ಯಾಪಾರಿ; ಆಚೆಗೆಳೆದು 35 ಸುತ್ತು ಗುಂಡು ಹಾರಿಸಿ ಕೊಂದ ದುರುಳರು!

  • ಗುಡ್‌ನ್ಯೂಸ್‌ – ಕುನೋ ಪಾರ್ಕ್‌ನಲ್ಲಿ ಇನ್ಮುಂದೆ ಪ್ರವಾಸಿಗರಿಗೆ ಚೀತಾ ವೀಕ್ಷಣೆ ಭಾಗ್ಯ

    ಗುಡ್‌ನ್ಯೂಸ್‌ – ಕುನೋ ಪಾರ್ಕ್‌ನಲ್ಲಿ ಇನ್ಮುಂದೆ ಪ್ರವಾಸಿಗರಿಗೆ ಚೀತಾ ವೀಕ್ಷಣೆ ಭಾಗ್ಯ

    ಭೋಪಾಲ್‌: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ (Kuno National Park) ಸಫಾರಿ ಝೋನ್‌ಗೆ (Safari Zone) ಎರಡು ಗಂಡು ಚೀತಾಗಳನ್ನ (Cheetah) ಬಿಡುಗಡೆಗೊಳಿಸಿದ್ದು, ಜನರಿಗೆ ಚೀತಾ ವೀಕ್ಷಣೆ ಭಾಗ್ಯ ಸಿಗಲಿದೆ.

    ʻಅಗ್ನಿʼ ಮತ್ತು ʻವಾಯುʼ ಹೆಸರಿನ ಎರಡು ಗಂಡು ಚೀತಾಗಳನ್ನ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಅಹೆರಾ ಪ್ರವಾಸೋದ್ಯಮ (Tourism) ವಿಭಾಗದ ಪರೋಂಡ್‌ ಅರಣ್ಯ ವಲಯಕ್ಕೆ ಬಿಡಲಾಗಿದೆ. ಅರಣ್ಯ ವಿಭಾಗದ ಪಶುವೈದ್ಯರು ಈ ಎರಡೂ ಚೀತಾಗಳ ಆರೋಗ್ಯ ಉತ್ತಮವಾಗಿರುವುದನ್ನು ಖಚಿತಪಡಿಸಿದ ಬಳಿಕ ಸಫಾರಿ ಝೋನ್‌ಗೆ ಬಿಡಲಾಗಿದ್ದು, ಇದು ಪ್ರವಾಸೋದ್ಯಮ ಮತ್ತಷ್ಟು ಆಕರ್ಷಣೆ ತರಲಿದೆ. ಪ್ರವಾಸಿಗರೂ (Tourists) ಚೀತಾ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

    ಡಿಸೆಂಬರ್‌ 21ರ ವರೆಗೂ ಕುನೋ ಅರಣ್ಯ ಉತ್ಸವ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಚೀತಾಗಳನ್ನ ಅರಣ್ಯಕ್ಕೆ ಬಿಡುಗಡೆಗೊಳಿಸಲಾಗಿದೆ. ಇನ್ನುಳಿದ ಚೀತಾಗಳು ಕುನೋ ಆವರಣದಲ್ಲೇ ಉಳಿದಿವೆ. ತಜ್ಞರಿಂದ ಸಂಪೂರ್ಣ ಮೌಲ್ಯಮಾಪನ ಮಾಡಿದ ಬಳಿಕ ಹಂತ-ಹಂತವಾಗಿ ಬಿಡುಗಡೆ ಮಾಡಲು ಅರಣ್ಯ ಇಲಾಖೆ ಸಜ್ಜಾಗಿದೆ. ಇದನ್ನೂ ಓದಿ: ಚೀತಾ ಯೋಜನೆ ಮರುಪರಿಚಯಿಸುವ ಕಾರ್ಯಕ್ರಮದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಲು ಯಾವುದೇ ಕಾರಣವಿಲ್ಲ: ಸುಪ್ರೀಂ

    ಚೀತಾ ಮರುಪರಿಚಯಿಸುವ ಯೋಜನೆ ಅಡಿಯಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ (Namibia) ಆ ನಂತರ ದಕ್ಷಿಣ ಆಫ್ರಿಕಾದಿಂದ ತರಲಾದ 20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಅಂದಿನಿಂದ ಅಲ್ಲಿ 4 ಮರಿಗಳು ಜನಿಸಿದ್ದವು. ಆದ್ರೆ ವಿವಿಧ ಕಾರಣಗಳಿಂದಾಗಿ ಮಾರ್ಚ್‌ನಿಂದ 6 ವಯಸ್ಕ ಚೀತಾಗಳು ಸಾವನ್ನಪ್ಪಿದ್ದವು. ಮೂರು ಮರಿಗಳು ಸೇರಿದಂತೆ ಒಟ್ಟು 9 ಚೀತಾಗಳು ಮೃತಪಟ್ಟವು. ಆ ನಂತರ ಉಳಿದ ಚೀತಾಗಳನ್ನು ಪಶುವೈದ್ಯರ ನಿಗಾದಲ್ಲಿ ಇರಿಸಲಾಗಿತ್ತು. ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು – 9 ಕ್ಕೇರಿದ ಸಾವಿನ ಸಂಖ್ಯೆ

    ಚೀತಾ ಹಿನ್ನೆಲೆ ನಿಮ್ಗೆ ಗೊತ್ತಾ?
    ಮಚ್ಚೆ ಗುರುತಿನ ಚೀತಾಗಳ ಸಂತತಿ ಈಗಾಗಲೇ ಭಾರತದಲ್ಲಿ ನಾಶವಾಗಿದೆ. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 1952ರಲ್ಲಿ ಈ ಪ್ರಭೇದ ಭಾರತದಲ್ಲಿ ಇಲ್ಲ ಎಂದು ಘೋಷಣೆ ಮಾಡಲಾಗಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿತ್ತು. ಆದ್ರೆ ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 2 ರಿಂದ 6 ವರ್ಷ ವಯಸ್ಸಿನ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ ಈ ಚಿರತೆಗಳು ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು. ನಂತರ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಿಸಲಾಗಿತ್ತು.

  • ಚೀತಾ ಯೋಜನೆ ಮರುಪರಿಚಯಿಸುವ ಕಾರ್ಯಕ್ರಮದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಲು ಯಾವುದೇ ಕಾರಣವಿಲ್ಲ: ಸುಪ್ರೀಂ

    ಚೀತಾ ಯೋಜನೆ ಮರುಪರಿಚಯಿಸುವ ಕಾರ್ಯಕ್ರಮದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಲು ಯಾವುದೇ ಕಾರಣವಿಲ್ಲ: ಸುಪ್ರೀಂ

    ನವದೆಹಲಿ: ಭಾರತದಲ್ಲಿ ಚೀತಾ ಯೋಜನೆ (Project Cheetah) ಮರುಪರಿಚಯಿಸುವ ಕಾರ್ಯಕ್ರಮಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸಲು ಯಾವುದೇ ಕಾರಣವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಹೇಳಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) 9 ಚೀತಾಗಳ ಸಾವಿನ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ಬಳಿಕ ಕೋರ್ಟ್ ಹೀಗೆ ಹೇಳಿದೆ.

    ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ ಸಾವನ್ನಪ್ಪಿದ 9 ಚೀತಾಗಳಲ್ಲಿ ಮೂರು ಮರಿಗಳು ಸೇರಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಲಾದ 20 ಚೀತಾಗಳನ್ನು ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಅಂದಿನಿಂದ ಅಲ್ಲಿ ನಾಲ್ಕು ಮರಿಗಳು ಜನಿಸಿದ್ದವು. ಇದನ್ನೂ ಓದಿ: ಕಳವಳ ಉಂಟುಮಾಡಿದ ರೇಡಿಯೋ ಕಾಲರ್ – ಮತ್ತೊಂದು ಚೀತಾ ಕತ್ತಿನಲ್ಲಿ ತೀವ್ರ ಗಾಯಗಳು ಪತ್ತೆ

    ಕಳೆದ ತಿಂಗಳು ನಾಲ್ಕು ದಿನಗಳ ಅಂತರದಲ್ಲಿ ಎರಡು ಗಂಡು ಚೀತಾಗಳು ಸಾವನ್ನಪ್ಪಿದ್ದು, ತೇಜಸ್ ಹೆಸರಿನ ಚೀತಾ ಜುಲೈ 11 ರಂದು ಸಾವನ್ನಪ್ಪಿತ್ತು. ಜುಲೈ 14 ರಂದು ಸೂರಜ್ ಹೆಸರಿನ ಚೀತಾದ ಶವ ಪತ್ತೆಯಾಗಿತ್ತು. ಇದಕ್ಕೂ ಮೊದಲು ಮಾರ್ಚ್ 27 ರಂದು ಸಶಾ ಎಂಬ ಹೆಣ್ಣು ಚೀತಾ ಮೂತ್ರಪಿಂಡದ ಕಾಯಿಲೆಯಿಂದ ಮೃತಪಟ್ಟಿತ್ತು. ಉದಯ್ ಹೆಸರಿನ ಚೀತಾ ಏಪ್ರಿಲ್ 23 ರಂದು ಹೃದಯ-ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿತ್ತು. ದಕ್ಷಾ ಹೆಸರಿನ ಹೆಣ್ಣು ಚೀತಾ ಮೇ 9 ರಂದು ಸಾವಿಗೀಡಾಗಿತ್ತು. ಹವಾಮಾನ ವೈಪರೀತ್ಯ ಮತ್ತು ನಿರ್ಜಲೀಕರಣದಿಂದ ಮೇ 25 ರಂದು ಎರಡು ಚಿರತೆ ಮರಿಗಳು ಹಾಗೂ ಮೇ 23 ರಂದು ಮತ್ತೊಂದು ಮರಿ ಸಾವನ್ನಪ್ಪಿದ್ದವು. ಇದನ್ನೂ ಓದಿ:  ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಇನ್ನೆರಡು ಚೀತಾ ಮರಿಗಳ ಸಾವು – ಕಳೆದ ಎರಡು ತಿಂಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳ

    ಮಚ್ಚೆ ಗುರುತಿನ ಚೀತಾಗಳ ಸಂತತಿ ಈಗಾಗಲೇ ಭಾರತದಲ್ಲಿ ನಾಶವಾಗಿದೆ. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 1952ರಲ್ಲಿ ಈ ಪ್ರಭೇದ ಭಾರತದಲ್ಲಿ ಇಲ್ಲ ಎಂದು ಘೋಷಣೆ ಮಾಡಲಾಗಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿತ್ತು. ಆದ್ರೆ ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 2 ರಿಂದ 6 ವರ್ಷ ವಯಸ್ಸಿನ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ ಈ ಚಿರತೆಗಳು ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು. ನಂತರ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಿಸಲಾಗಿತ್ತು.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಕುನೋ ಉದ್ಯಾನಕ್ಕೆ ಬಿಡಲಾದ ಒಂದು ವರ್ಷ ಅವಧಿ ಪೂರೈಸುವುದರ ಒಳಗೆ ಮೂರು ಮರಿಗಳು ಸೇರಿದಂತೆ 9 ಚೀತಾಗಳು ಸಾವನ್ನಪ್ಪಿವೆ. ಇಲ್ಲಿನ ಹವಾಮಾನ ಪರಿಸ್ಥಿತಿ ಮತ್ತು ಅದರಿಂದಾಗುವ ಪರಿಣಾಮಗಳನ್ನು ತಿಳಿಯಲು ನಿರಂತರವಾಗಿ ಕೆಲಸ ನಡೆಯುತ್ತಿದೆ. ಅಲ್ಲದೇ ಪ್ರತಿ ವರ್ಷ 12 ರಿಂದ 14 ಹೊಸ ಚೀತಾಗಳನ್ನು ತರಿಸಲಾಗುತ್ತದೆ. ಕುನೋದಲ್ಲಿ ಸಮಸ್ಯೆಗಳಿವೆ ಆದ್ರೆ ಆತಂಕಕಾರಿ ಏನೂ ಅಲ್ಲ ಎಂದು ಸರ್ಕಾರ ಕೋರ್ಟ್‌ಗೆ ತಿಳಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು – 9 ಕ್ಕೇರಿದ ಸಾವಿನ ಸಂಖ್ಯೆ

    ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು – 9 ಕ್ಕೇರಿದ ಸಾವಿನ ಸಂಖ್ಯೆ

    ಭೋಪಾಲ್: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಬುಧವಾರ ಮತ್ತೊಂದು ಚೀತಾ (Cheetah) ಸಾವನ್ನಪ್ಪಿದ್ದು, ಐದು ತಿಂಗಳಲ್ಲಿ ಚೀತಾಗಳ ಸಾವಿನ ಸಂಖ್ಯೆ ಒಂಭತ್ತಕ್ಕೆ ಏರಿದೆ.

    ಇಂದು ಬೆಳಗ್ಗೆ ಹೆಣ್ಣು ಚಿರತೆ ಧಾತ್ರಿ (ತಿಬ್ಲಿಸಿ) ಶವವಾಗಿ ಪತ್ತೆಯಾಗಿದೆ. ಸಾವಿನ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚೀತಾಗಳ ಸಾವು ಉತ್ತಮ ಬೆಳವಣಿಗೆಯಲ್ಲ: ಸುಪ್ರೀಂ

    ಏಳು ಗಂಡು, ಆರು ಹೆಣ್ಣು ಮತ್ತು ಒಂದು ಹೆಣ್ಣು ಮರಿ ಸೇರಿ ಒಟ್ಟು 14 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದ ಬೊಮಾಸ್‌ನಲ್ಲಿ ಇರಿಸಲಾಗಿದ್ದು, ಅವುಗಳ ಆರೋಗ್ಯದ ಬಗ್ಗೆ ಉದ್ಯಾನದ ವನ್ಯಜೀವಿ ಪಶುವೈದ್ಯರು ಹಾಗೂ ನಮೀಬಿಯಾದ ತಜ್ಞರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಎರಡು ಹೆಣ್ಣು ಚೀತಾಗಳು ಬಯಲಿನಲ್ಲಿದ್ದು, ಅವುಗಳಲ್ಲಿ ಒಂದು ಶವವಾಗಿ ಪತ್ತೆಯಾಗಿದೆ.

    ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ ಸಾವನ್ನಪ್ಪಿದ ಒಂಭತ್ತು ಚೀತಾಗಳಲ್ಲಿ ಮೂರು ಮರಿಗಳು ಸೇರಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಲಾದ 20 ಚೀತಾಗಳನ್ನು ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಅಂದಿನಿಂದ ಅಲ್ಲಿ ನಾಲ್ಕು ಮರಿಗಳು ಜನಿಸಿದ್ದವು. ಇದನ್ನೂ ಓದಿ: ಕಳವಳ ಉಂಟುಮಾಡಿದ ರೇಡಿಯೋ ಕಾಲರ್ – ಮತ್ತೊಂದು ಚೀತಾ ಕತ್ತಿನಲ್ಲಿ ತೀವ್ರ ಗಾಯಗಳು ಪತ್ತೆ

    ಕಳೆದ ತಿಂಗಳು ನಾಲ್ಕು ದಿನಗಳ ಅಂತರದಲ್ಲಿ ಎರಡು ಗಂಡು ಚೀತಾಗಳು ಸಾವನ್ನಪ್ಪಿದ್ದು, ತೇಜಸ್ ಹೆಸರಿನ ಚೀತಾ ಜುಲೈ 11 ರಂದು ಸಾವನ್ನಪ್ಪಿತ್ತು. ಜುಲೈ 14 ರಂದು ಸೂರಜ್ ಹೆಸರಿನ ಚೀತಾದ ಶವ ಪತ್ತೆಯಾಗಿತ್ತು. ಇದಕ್ಕೂ ಮೊದಲು ಮಾರ್ಚ್ 27 ರಂದು ಸಶಾ ಎಂಬ ಹೆಣ್ಣು ಚೀತಾ ಮೂತ್ರಪಿಂಡದ ಕಾಯಿಲೆಯಿಂದ ಮೃತಪಟ್ಟಿತ್ತು. ಉದಯ್ ಹೆಸರಿನ ಚೀತಾ ಏಪ್ರಿಲ್ 23 ರಂದು ಹೃದಯ-ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿತ್ತು. ದಕ್ಷಾ ಹೆಸರಿನ ಹೆಣ್ಣು ಚೀತಾ ಮೇ 9 ರಂದು ಸಾವಿಗೀಡಾಗಿತ್ತು. ಹವಾಮಾನ ವೈಪರೀತ್ಯ ಮತ್ತು ನಿರ್ಜಲೀಕರಣದಿಂದ ಮೇ 25 ರಂದು ಎರಡು ಚಿರತೆ ಮರಿಗಳು ಹಾಗೂ ಮೇ 23 ರಂದು ಮತ್ತೊಂದು ಮರಿ ಸಾವನ್ನಪ್ಪಿದ್ದವು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಳವಳ ಉಂಟುಮಾಡಿದ ರೇಡಿಯೋ ಕಾಲರ್ – ಮತ್ತೊಂದು ಚೀತಾ ಕತ್ತಿನಲ್ಲಿ ತೀವ್ರ ಗಾಯಗಳು ಪತ್ತೆ

    ಕಳವಳ ಉಂಟುಮಾಡಿದ ರೇಡಿಯೋ ಕಾಲರ್ – ಮತ್ತೊಂದು ಚೀತಾ ಕತ್ತಿನಲ್ಲಿ ತೀವ್ರ ಗಾಯಗಳು ಪತ್ತೆ

    ಭೋಪಾಲ್: ಕಳೆದ ವಾರ ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) 2 ಚೀತಾಗಳು (Cheetah) ಸಾವನ್ನಪ್ಪಿದ್ದು, ಅವುಗಳ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್‌ನ (Radio Collar) ಸುತ್ತಲೂ ತೀವ್ರವಾದ ಗಾಯಗಳು ಕಂಡುಬಂದಿತ್ತು. ಇದೀಗ ರೇಡಿಯೋ ಕಾಲರ್‌ನಿಂದಾಗಿ ಮತ್ತೊಂದು ಚೀತಾಗೆ ತೀವ್ರ ಗಾಯಗಳಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಇದು ತೀವ್ರ ಕಳವಳಕ್ಕೆ ಕಾರಣವಾಗಿದೆ.

    ಇತ್ತೀಚೆಗೆ ತೇಜಸ್ ಹಾಗೂ ಸೂರಜ್ ಎಂಬ ಚೀತಾಗಳ ಸಾವಿನ ಬಳಿಕ ವೈದ್ಯರ ತಂಡ ಪವನ್ ಎಂಬ ಚೀತಾವನ್ನು ಪ್ರಜ್ಞಾಹೀನಗೊಳಿಸಿ, ಅದನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅದರ ಕುತ್ತಿಗೆಗೆ ಜೋಡಿಸಲಾಗಿದ್ದ ರೇಡಿಯೋ ಕಾಲರ್‌ನ ಸುತ್ತ ನಂಜು ಹಾಗೂ ತೀವ್ರವಾದ ಗಾಯ ಕಂಡುಬಂದಿದೆ. ತಕ್ಷಣವೇ ಅದರ ರೇಡಿಯೋ ಕಾಲರ್ ಅನ್ನು ತೆಗೆದುಹಾಕಲಾಗಿದ್ದು, ಸೋಂಕನ್ನು ಗುಣಪಡಿಸಲು ಚಿಕಿತ್ಸೆ ಪ್ರಾರಂಭಿಸಿದ್ದಾರೆ.

    ಪ್ರಸ್ತುತ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 4 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಪರಿಸ್ಥಿತಿಯ ತೀವ್ರತೆಯನ್ನು ಗುರುತಿಸಿ ಚಿಕಿತ್ಸೆಯಲ್ಲಿ ಇನ್ನಷ್ಟು ಸಹಾಯ ಮಾಡಲು ಗ್ವಾಲಿಯರ್ ಹಾಗೂ ಭೋಪಾಲ್‌ನಿಂದ ಹೆಚ್ಚುವರಿ ನಾಲ್ವರು ವೈದ್ಯರನ್ನು ಕರೆಸಲಾಗಿದೆ. 8 ವೈದ್ಯರ ತಂಡ ಚೀತಾಗಳನ್ನು ಶಾಂತಗೊಳಿಸಲು ಹಾಗೂ ಅಗತ್ಯ ಔಷಧಿಗಳನ್ನು ನೀಡಲು ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: 2 ಚೀತಾಗಳ ಸಾವಿಗೆ ಕಾರಣ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್!

    ಸದ್ಯ ರೇಡಿಯೋ ಕಾಲರ್‌ಗಳಿಲ್ಲದಿದ್ದರೂ ಚೀತಾಗಳ ಚಲನವಲನಗಳ ಬಗ್ಗೆ ಗಮನಹರಿಸಲು ಡ್ರೋನ್ ಕ್ಯಾಮೆರಾಗಳ ಬಳಕೆ ಸಹಾಯವಾಗಲಿದೆ. ಭಾರತದಲ್ಲಿ ಚೀತಾಗಳ ಸಂತತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಕಳೆದ ವರ್ಷ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ತರಿಸಲಾಯಿತು. ಆದರೆ ಕಳೆದ 5 ತಿಂಗಳಿನಿಂದ ಅವುಗಳಲ್ಲಿ ಒಟ್ಟು 8 ಚೀತಾಗಳು ಸಾವನ್ನಪ್ಪಿವೆ. ಇದನ್ನೂ ಓದಿ: ISI ನಂಟಿನ ಶಂಕೆ – ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್ ತೀವ್ರ ವಿಚಾರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2 ಚೀತಾಗಳ ಸಾವಿಗೆ ಕಾರಣ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್!

    2 ಚೀತಾಗಳ ಸಾವಿಗೆ ಕಾರಣ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್!

    ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಇತ್ತೀಚೆಗೆ ಕೇವಲ 3 ದಿನಗಳ ಅಂತರದಲ್ಲಿ 2 ಚೀತಾಗಳು (Cheetah) ಸಾವನ್ನಪ್ಪಿದ್ದವು. ಅವುಗಳ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್‌ಗಳಿಂದ (Radio Collar) ಉಂಟಾಗಿದ್ದ ಸೋಂಕೇ ಆ 2 ಚೀತಾಗಳ ಸಾವಿಗೆ ಕಾರಣ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

    ಕಳೆದ ಮಂಗಳವಾರ ತೇಜಸ್ ಹಾಗೂ ಶುಕ್ರವಾರ ಸೂರಜ್ ಎಂಬ ಚೀತಾಗಳು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಶವವಾಗಿ ಪತ್ತೆಯಾಗಿತ್ತು. ತೇಜಸ್ ಕೆಲ ದಿನಗಳ ಹಿಂದೆ ಹೆಣ್ಣು ಚೀತಾಗಳೊಂದಿಗೆ ಕಾದಾಡಿ ಗಾಯಗೊಂಡಿತ್ತು. ಬಳಿಕ ಅದು ಚೇತರಿಸಿಕೊಳ್ಳಲು ಸಾಧ್ಯವಾಗದೇ ಸಾವನ್ನಪ್ಪಿತ್ತು ಎಂದು ಹೇಳಲಾಗಿತ್ತು. ಆದರೆ ಬಳಿಕ ಅದರ ಕತ್ತಿನ ಸುತ್ತ ಆಗಿದ್ದ ಸೋಂಕು ಕೂಡಾ ಅದರ ಸಾವಿಗೆ ಕಾರಣ ಎಂಬುದು ತಿಳಿದುಬಂದಿದೆ.

    ತೇಜಸ್ ಹಾಗೂ ಸೂರಜ್ ಎರಡೂ ಚೀತಾಗಳ ಕತ್ತಿನ ಸುತ್ತಲೂ ರೇಡಿಯೋ ಕಾಲರ್‌ಗಳಿಂದಾಗಿ ಸೋಕು ಉಂಟಾಗಿದ್ದು, ಅದರ ಗಾಯಗಳಿಂದಾಗಿ ಅವು ಸಾವನ್ನಪ್ಪಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದು ಕಳವಳಕ್ಕೆ ಕಾರಣವಾಗಿದೆ ಎಂದು ಚೀತಾ ಪ್ರಾಜೆಕ್ಟ್ ಸ್ಟೀರಿಂಗ್ ಸಮಿತಿಯ ಅಧ್ಯಕ್ಷ ರಾಜೇಶ್ ಗೋಪಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮೂರೇ ದಿನದ ಅಂತರದಲ್ಲಿ ಮತ್ತೊಂದು ಚೀತಾ ಸಾವು – 4 ತಿಂಗಳಲ್ಲಿ 8ನೇ ಘಟನೆ

    ಇದೀಗ ರೇಡಿಯೋ ಕಾಲರ್ ಅಳವಡಿಸಲಾಗಿರುವ ಎಲ್ಲಾ ಚೀತಾಗಳನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಈ ಘಟನೆಗಳು ದುರದೃಷ್ಟಕರವಾಗಿದ್ದರೂ ಪ್ರಾಜೆಕ್ಟ್ ಚೀತಾಗೆ ಹಿನ್ನಡೆಯಲ್ಲ ಎಂದು ಅವರು ತಿಳಿಸಿದ್ದಾರೆ.

    ಭಾರತದಲ್ಲಿ ಚೀತಾದ ಸಂತತಿಯ ಪುನರುತ್ಥಾನದ ಯೋಜೆನೆಯ ಅನುಷ್ಠಾನದಲ್ಲಿ ನೈಸರ್ಗಿಕ ಸಾವು ಸಹಜ. ಇದು ಸರಾಸರಿ ಸಾವಿನ ಪ್ರಮಾಣವನ್ನು ದಾಟಿಲ್ಲ. ಭಾರತಕ್ಕೆ ತರಲಾಗಿರುವ ಚೀತಾಗಳ ಪೈಕಿ 75% ರಷ್ಟು ಜೀವಂತವಾಗಿದ್ದು, ಆರೋಗ್ಯವೂ ಆಗಿವೆ. ಹೀಗಾಗಿ ಈ ಬಗ್ಗೆ ಆತಂಕ ಪಟುವ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: Chandrayaan-3 ಬಾಹ್ಯಾಕಾಶ ನೌಕೆಯು ಸುರಕ್ಷಿತವಾಗಿದೆ: ಇಸ್ರೋ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೂರೇ ದಿನದ ಅಂತರದಲ್ಲಿ ಮತ್ತೊಂದು ಚೀತಾ ಸಾವು – 4 ತಿಂಗಳಲ್ಲಿ 8ನೇ ಘಟನೆ

    ಮೂರೇ ದಿನದ ಅಂತರದಲ್ಲಿ ಮತ್ತೊಂದು ಚೀತಾ ಸಾವು – 4 ತಿಂಗಳಲ್ಲಿ 8ನೇ ಘಟನೆ

    ಭೋಪಾಲ್: ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ ಗಂಡು ಚೀತಾ (Cheetah) ಸೂರಜ್ (Suraj) ಸಾವನ್ನಪ್ಪಿದೆ. ಈ ಉದ್ಯಾನದಲ್ಲಿ ಸುಮಾರು 4 ತಿಂಗಳುಗಳಲ್ಲಿ ಸಾವನ್ನಪ್ಪಿರುವ 8ನೇ ಚೀತಾ ಇದಾಗಿದೆ.

    ಇಂದು ಮುಂಜಾನೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಆಫ್ರಿಕಾದಿಂದ ತರಲಾಗಿದ್ದ ಚೀತಾ ಸೂರಜ್ ಶವವಾಗಿ ಪತ್ತೆಯಾಗಿದೆ. ಸೂರಜ್ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹಾರಾಟ ನಿಲ್ಲಿಸಿದ ʻತೇಜಸ್‌ʼ- 4 ತಿಂಗಳಲ್ಲಿ 7ನೇ ಚೀತಾ ಸಾವು!

    ಮಂಗಳವಾರವಷ್ಟೇ ಮತ್ತೊಂದು ಗಂಡು ಚೀತಾ ತೇಜಸ್ ಶವವಾಗಿ ಪತ್ತೆಯಾಗಿತ್ತು. ಕೆಲ ದಿನಗಳ ಹಿಂದೆ ಹೆಣ್ಣು ಚೀತಾದೊಂದಿಗೆ ಕಾದಾಟ ನಡೆಸಿದ್ದು, ಬಳಿಕ ಅದು ಚೇತರಿಸಿಕೊಳ್ಳಲು ಸಾಧ್ಯವಾಗದೇ ಸಾವನ್ನಪ್ಪಿದೆ ಎಂಬುದು ಶವಪರೀಕ್ಷೆಯಲ್ಲಿ ಬಹಿರಂಗವಾಗಿದೆ.

    75 ವರ್ಷಗಳ ಬಳಿಕ ಮೊದಲ ಬಾರಿ ಭಾರತಕ್ಕೆ ಬಂದ ಚೀತಾಗಳಲ್ಲಿ ಮೊದಲನೆಯದು ಮಾರ್ಚ್ 27ರಂದು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಹೆಣ್ಣು ಚೀತಾ ಸಾಶಾ ಮೂತ್ರಪಿಂಡದ ಕಾಯಿಲೆಯಿಂದ ಬಳಲಿ ಸಾವನ್ನಪ್ಪಿತ್ತು. ಅದೇ ಸಮಯದಲ್ಲಿ ಸಿಯಾಯಾ ಎಂಬ ಚೀತಾ 4 ಮರಿಗಳಿಗೆ ಜನ್ಮ ನೀಡಿತ್ತು. ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಗಂಡು ಚೀತಾ ಉದಯ್ ಹೃದಯ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪಿತು. ಮೇ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದ ದಕ್ಷ ಎಂಬ ಹೆಣ್ಣು ಚೀತಾ 2 ಗಂಡು ಚೀತಾಗಳೊಂದಿಗೆ ಕಾದಾಟ ನಡೆಸಿ ಸಾವನ್ನಪ್ಪಿತು. ಇದನ್ನೂ ಓದಿ: Chandrayaan-3: ಚಂದ್ರನೂರಿಗೆ ಹಾರಿದ ರಾಕೆಟ್‌

    ಕಳೆದ ವರ್ಷ ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಭಾರತಕ್ಕೆ 8 ಚೀತಾಗಳನ್ನು ತಂದು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಬಳಿಕ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚೀತಾಗಳನ್ನು ತರಿಸಲಾಗಿತ್ತು. ಅವುಗಳಲ್ಲಿ 6 ಕಾಡಿನಲ್ಲಿದ್ದು, ಉಳಿದವು ಕುನೋ ಉದ್ಯಾನದ ವಿವಿಧ ಆವರಣಗಳಲ್ಲಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹಾರಾಟ ನಿಲ್ಲಿಸಿದ ʻತೇಜಸ್‌ʼ- 4 ತಿಂಗಳಲ್ಲಿ 7ನೇ ಚೀತಾ ಸಾವು!

    ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹಾರಾಟ ನಿಲ್ಲಿಸಿದ ʻತೇಜಸ್‌ʼ- 4 ತಿಂಗಳಲ್ಲಿ 7ನೇ ಚೀತಾ ಸಾವು!

    ಭೋಪಾಲ್: ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಗಿದ್ದ ಚೀತಾಗಳ ಪೈಕಿ ʻತೇಜಸ್‌ʼ (Tejas) ಹೆಸರಿನ ಮತ್ತೊಂದು ಗಂಡು ಚೀತಾ (Cheetah) ಸಾವನ್ನಪ್ಪಿದ್ದು, 4 ತಿಂಗಳಲ್ಲಿ ಇದು 7ನೇ ಪ್ರಕರಣವಾಗಿದೆ.

    ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಚಿರತೆಯ ಕತ್ತಿನ ಮೇಲ್ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿದೆ. ಇದನ್ನು ಗಮನಿಸಿದ ಮೇಲ್ವಿಚಾರಣಾ ತಂಡ ತಕ್ಷಣ ವೈದ್ಯರಿಗೆ (Doctors) ಮಾಹಿತಿ ನೀಡಿದೆ. ನಂತರ ವೈದ್ಯರು ಪ್ರಾಣಿಯನ್ನ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ʻತೇಜಸ್‌ʼ ಮೃತಪಟ್ಟಿದೆ. ಕಳೇಬರವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪ್ರಧಾನ ಅರಣ್ಯ ಸರಂಕ್ಷಣಾಧಿಕಾರಿ ಜೆ.ಎಸ್‌ ಚೌಹಾಣ್‌ ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಸ್ಥಳಾಂತರಿಸಿದ್ದ ಮತ್ತೊಂದು ಚೀತಾ ಸಾವು

    ಕಳೆದ ಮಾರ್ಚ್‌ 27ರಂದು ಸಾಶಾ ಹೆಸರಿನ ಹೆಣ್ಣು ಚೀತಾ ಕಿಡ್ನಿ ಸೋಂಕಿನಿಂದ ಸಾವನ್ನಪ್ಪಿತ್ತು, ಏಪ್ರಿಲ್‌ 23ರಂದು ಉದಯ್‌ ಹೆಸರಿನ ಗಂಡು ಚೀತಾ ಶ್ವಾಸಕೋಶದ ವೈಫಲ್ಯದಿಂದ, ಮೇ 9ರಂದು ದಕ್ಷಾ0 ಹೆಸರಿನ ಹೆಣ್ಣು ಚೀತಾ ಬೇಟೆಯಾಡುವ ವೇಳೆ ಗಾಯಗೊಂಡು ಮೃತಪಟ್ಟಿತ್ತು. ಆ ನಂತರ ವಿವಿಧ ಕಾರಣದಿಂದ ಮೂರು ಚೀತಾ ಮರಿಗಳು ಮೃತಪಟ್ಟಿದ್ದವು. ಒಟ್ಟು 6 ಚೀತಾ ಸಾವನ್ನಪ್ಪಿದರೂ ಅರಣ್ಯ ಇಲಾಖೆ ಹಾಗೂ ಸರ್ಕಾರ ಆರೋಪಗಳನ್ನ ತಳ್ಳಿಹಾಕಿತ್ತು. ಇದೀಗ 7ನೇ ಚೀತಾ ಸಾವನ್ನಪ್ಪಿದೆ. ಇದನ್ನೂ ಓದಿ: ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಇನ್ನೆರಡು ಚೀತಾ ಮರಿಗಳ ಸಾವು – ಕಳೆದ ಎರಡು ತಿಂಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳ

    ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು (Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಚೀತಾಗಳು ಕಾಡಿನ ವಾತಾವರಣಕ್ಕೆ ಹೊಂದಿಕೊಂಡು ಸ್ವತಃ ಬೇಟೆಯಾಡಲು ಆರಂಭಿಸಿದ್ದವು. ಇದನ್ನೂ ಓದಿ: ನಮೀಬಿಯಾ-ದಕ್ಷಿಣ ಆಫ್ರಿಕಾ ಚೀತಾಗಳ ನಡುವೆ ರಣರೋಚಕ ಕಾದಾಟ – ʻಅಗ್ನಿʼಗೆ ಗಾಯ

    ಚೀತಾ ವಿಶೇಷತೆಯೇನು?
    ಮಚ್ಚೆ ಗುರುತಿನ ಚೀತಾಗಳ ಸಂತತಿಯನ್ನು 1952ರಲ್ಲಿ ಭಾರತದಲ್ಲಿ ಅಳಿದುಹೋದ ಸಂತತಿ ಎಂದು ಘೋಷಣೆ ಮಾಡಲಾಗಿತ್ತು. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿತ್ತು, ಆದರೆ ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಅದಾದ 75 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಚೀತಾಗಳಿಗೆ ಕುನೊ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮೀಬಿಯಾ-ದಕ್ಷಿಣ ಆಫ್ರಿಕಾ ಚೀತಾಗಳ ನಡುವೆ ರಣರೋಚಕ ಕಾದಾಟ – ʻಅಗ್ನಿʼಗೆ ಗಾಯ

    ನಮೀಬಿಯಾ-ದಕ್ಷಿಣ ಆಫ್ರಿಕಾ ಚೀತಾಗಳ ನಡುವೆ ರಣರೋಚಕ ಕಾದಾಟ – ʻಅಗ್ನಿʼಗೆ ಗಾಯ

    ಭೋಪಾಲ್:‌ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ತೆರೆದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ಚೀತಾಗಳ (Cheetah) ನಡುವೆ ರೋಚಕ ಕಾದಾಟ ನಡೆದಿದೆ. ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಚೀತಾಗಳ ಎರಡು ಗುಂಪಿನ ನಡುವೆ ಸಂಘರ್ಷ ನಡೆದಿದ್ದು, ಪರಿಣಾಮ ಆಫ್ರಿಕಾದ ಗಂಡು ಚೀತಾ ʻಅಗ್ನಿʼ ಗಾಯಗೊಂಡಿದೆ.

    ಅಗ್ನಿ ಚೀತಾ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚೀತಾ ಆರೋಗ್ಯವಾಗಿದ್ದು ಆತಂಕ ಪಡಬೇಕಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನ 15 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುವುದಾಗಿ 100ರ ವೃದ್ಧೆ ಘೋಷಣೆ

    ನಮೀಬಿಯಾದಿಂದ ತಂದಿದ್ದ ಗೌರವ್‌ ಮತ್ತು ಶೌರ್ಯ, ದಕ್ಷಿಣ ಆಫ್ರಿಕಾದಿಂದ (South Africa) ತಂದಿದ್ದ ಅಗ್ನಿ ಮತ್ತು ವಾಯು ಚೀತಾಗಳ ನಡುವೆ ಕಾದಾಟ ನಡೆದಿತ್ತು. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ 4 ಚೀತಾಗಳ ನಡುವೆ ರೋಚಕ ಕಾದಾಟ ನಡೆದಿತ್ತು. ಈ ವೇಳೆ ಅಧಿಕಾರಿಗಳು ಸೈರನ್‌ ಹಾಗೂ ಪಟಾಕಿ ಸಿಡಿಸಿ ಕಾದಾಟ ನಿಲ್ಲಿಸಿದರು.

    ಈ ವೇಳೆ ಗಾಯಗೊಂಡ ಸ್ಥಿತಿಯಲ್ಲಿದ್ದ ಅಗ್ನಿಯನ್ನು ಚೀತಾ ʻಅಗ್ನಿʼ ಕಂಡು ತಜ್ಞರೊಂದಿಗೆ ಸ್ಥಳಕ್ಕಾಮಿಸಿದ ಸಿಬ್ಬಂದಿ, ಚಿಕಿತ್ಸೆಗಾಗಿ ಕುನೋದಲ್ಲಿನ ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆ ಬಳಿಕ ಅಗ್ನಿ ಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಸ್ಥಳಾಂತರಿಸಿದ್ದ ಮತ್ತೊಂದು ಚೀತಾ ಸಾವು

    ಮಚ್ಚೆ ಗುರುತಿನ ಚೀತಾಗಳ ಸಂತತಿಯನ್ನು 1952ರಲ್ಲಿ ಭಾರತದಲ್ಲಿ ಅಳಿದುಹೋದ ಸಂತತಿ ಎಂದು ಘೋಷಣೆ ಮಾಡಲಾಗಿತ್ತು. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿತ್ತು, ಆದರೆ ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಅದಾದ 75 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಚೀತಾಗಳಿಗೆ ಕುನೊ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಯಿತು. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಯಿತು. ಕಳೆದ ವರ್ಷದ ಸೆಪ್ಟೆಂಬರ್‌ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದಂದೇ ಕುನೋ ಪಾರ್ಕ್‌ಗೆ ಚೀತಾಗಳನ್ನು ಬಿಡಲಾಗಿತ್ತು.

    ನಮೀಬಿಯಾದಿಂದ 8 ಚೀತಾಗಳನ್ನು ತರಿಸಿದ ಕೆಲ ತಿಂಗಳ ನಂತರ ದಕ್ಷಿಣ ಆಫ್ರಿಕಾದಿಂದಲೂ 12 ಚೀತಾಗಳನ್ನ ತರಿಸಲಾಗಿತ್ತು. ಅವುಗಳನ್ನು ಕ್ವಾರಂಟೈನ್‌ ಮಾಡಿ, ಪ್ರದೇಶಲ್ಲೇ ಒಗ್ಗಿಕೊಂಡ ನಂತರ ತೆರೆದ ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು. ಅವುಗಳಲ್ಲಿ ದಕ್ಷಿಣ ಆಫ್ರಿಕಾದಿಂದ ತಂದಿದ್ದ ಚೀತಾಗಳ ಪೈಕಿ ಉದಯ್‌ ಹೆಸರಿನ ಗಂಡು ಚೀತಾ ಹೃದಯ-ಶ್ವಾಸಕೋಶ ವೈಫಲ್ಯದಿಂದ ಮೃತಪಟ್ಟರೆ, ದಕ್ಷ ಹೆಸರಿನ ಗಂಡು ಚೀತಾ ಗಾಯಗೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]