Tag: ಕುನೊ ರಾಷ್ಟ್ರೀಯ ಉದ್ಯಾನವನ

  • ಚೀತಾಗಳ ಸಾವು ಉತ್ತಮ ಬೆಳವಣಿಗೆಯಲ್ಲ: ಸುಪ್ರೀಂ

    ಚೀತಾಗಳ ಸಾವು ಉತ್ತಮ ಬೆಳವಣಿಗೆಯಲ್ಲ: ಸುಪ್ರೀಂ

    ಭೋಪಾಲ್: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಚೀತಾ (Cheetah) ಸರಣಿ ಸಾವಿನ ಕುರಿತಂತೆ ಸುಪ್ರೀಂ ಕೋರ್ಟ್ (Supreme Court) ಗುರುವಾರ ಕೇಂದ್ರದ (Central Government) ಪ್ರತಿಕ್ರಿಯೆಯನ್ನು ಕೇಳಿದೆ. ಒಂದು ವರ್ಷದೊಳಗೆ ಸಂಭವಿಸಿರುವ 8 ಚೀತಾಗಳ ಸಾವು ಉತ್ತಮ ಬೆಳವಣಿಗೆಯಲ್ಲ ಎಂದು ಕೋರ್ಟ್ ಹೇಳಿದೆ.

    ಈ ವಿಚಾರಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ಕೇಂದ್ರಕ್ಕೆ ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಬೇಡಿ ಎಂದಿದೆ. ಅಲ್ಲದೇ ಮೇ ತಿಂಗಳಿನ ತನ್ನ ಶಿಫಾರಸ್ಸನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಈಗ ನೆಲೆಗೊಂಡಿರುವ ರಾಜ್ಯವನ್ನು ಲೆಕ್ಕಿಸದೆ ಅವುಗಳಿಗೆ ಪರ್ಯಾಯ ಆವಾಸ ಸ್ಥಾನಗಳ ಆಯ್ಕೆಗಳನ್ನು ಹುಡುಕಲು ಕೇಂದ್ರಕ್ಕೆ ಹೇಳಿದೆ. ಈ ವಿಚಾರದಲ್ಲಿ ಪ್ರತಿಕ್ರಿಯೆ ಸಲ್ಲಿಸುವುದಾಗಿ ಸರ್ಕಾರ ಹೇಳಿದೆ. ಇದೀಗ ಆಗಸ್ಟ್ 1 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಕಳವಳ ಉಂಟುಮಾಡಿದ ರೇಡಿಯೋ ಕಾಲರ್ – ಮತ್ತೊಂದು ಚೀತಾ ಕತ್ತಿನಲ್ಲಿ ತೀವ್ರ ಗಾಯಗಳು ಪತ್ತೆ

    ನಮಿಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ತರಲಾಗಿತ್ತು. ಕಳೆದ ನಾಲ್ಕು ತಿಂಗಳಲ್ಲಿ ಮೂರು ಮರಿಗಳು ಸೇರಿದಂತೆ ಒಟ್ಟು ಎಂಟು ಚೀತಾಗಳು ಸಾವನ್ನಪ್ಪಿವೆ. ಅವುಗಳಲ್ಲಿ ಎರಡು ಇತ್ತೀಚೆಗೆ ರೇಡಿಯೊ ಕಾಲರ್‌ಗಳಿಂದ ಉಂಟಾದ ಸೆಪ್ಟಿಸೆಮಿಯಾ ಎಂಬ ಚರ್ಮದ ಸೋಂಕಿನಿಂದ ಸಾವನ್ನಪ್ಪಿವೆ ಎನ್ನಲಾಗಿದೆ. ಇದು ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ನಿರ್ವಹಣೆ ಕುರಿತಂತೆ ಚರ್ಚೆಗೆ ಗ್ರಾಸವಾಗಿದೆ.

    ಈಗ ಪ್ರಸ್ತುತ ಉದ್ಯಾನವನದಲ್ಲಿ 15 ಚೀತಾಗಳಿವೆ. 4 ಆವರಣದಲ್ಲಿ ಮತ್ತು 11 ಕಾಡಿನಲ್ಲಿವೆ. ಒಂದು ಮರಿ ತನ್ನ ತಾಯಿಯಿಂದ ತಿರಸ್ಕಾರಕ್ಕೊಳಗಾಗಿದ್ದು ಅದನ್ನು ಅರಣ್ಯಾಧಿಕಾರಿಗಳು ಆರೈಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: 2 ಚೀತಾಗಳ ಸಾವಿಗೆ ಕಾರಣ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೃದಯ-ಶ್ವಾಸಕೋಶ ವೈಫಲ್ಯವೇ ಚೀತಾ ಸಾವಿಗೆ ಕಾರಣ: ವೈದ್ಯರ ಸ್ಪಷ್ಟನೆ

    ಹೃದಯ-ಶ್ವಾಸಕೋಶ ವೈಫಲ್ಯವೇ ಚೀತಾ ಸಾವಿಗೆ ಕಾರಣ: ವೈದ್ಯರ ಸ್ಪಷ್ಟನೆ

    ಭೋಪಾಲ್: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಹೃದಯ-ಶ್ವಾಸಕೋಶ ವೈಫಲ್ಯದಿಂದ (Cardio Pulmonary Failure) 2ನೇ ಚೀತಾ ಸಾವನ್ನಪ್ಪಿದೆ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

    ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ 12 ಚೀತಾಗಳ ಪೈಕಿ ಉದಯ್ ಹೆಸರಿನ ಗಂಡು ಚೀತಾ (Cheetah) ಭಾನುವಾರ ಸಾವನ್ನಪ್ಪಿತ್ತು. ಇದರಿಂದ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯ ಕೇಳಿಬಂದಿತ್ತು. ಈ ಬೆನ್ನಲ್ಲೇ ವೈದ್ಯರು (Doctors) ಚೀತಾ ಸಾವಿಗೆ ಕಾರಣವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ತರಿಸಿದ್ದ 12ರಲ್ಲಿ ಒಂದು ಚೀತಾ ಸಾವು!

    ಉದಯ್ ಹೆಸರಿನ ಚೀತಾದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಅದು ಹೃದಯ-ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ಜೆ.ಎಸ್ ಚೌಹಾಣ್ ತಿಳಿಸಿದ್ದಾರೆ.

    ಜಬಲ್‌ಪುರ ಮತ್ತು ಭೋಪಾಲ್‌ನ ತಲಾ ಒಬ್ಬ ವಿಧಿವಿಜ್ಞಾನ ತಜ್ಞರನ್ನೊಳಗೊಂಡ ಐವರು ತಜ್ಞರ ಸಮಿತಿ ಶವ ಪರೀಕ್ಷೆ ನಡೆಸಿತು. ಇದನ್ನೂ ಓದಿ: ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆ – ಇಂದು ಪ್ರಧಾನಿ ಮೋದಿ ಚಾಲನೆ

    ಚೀತಾದ ರಕ್ತ ಮತ್ತು ಇತರ ಪ್ರಮುಖ ಅಂಗಾಂಗಗಳ ಮಾದರಿಯನ್ನ ಜಬಲ್‌ಪುರದ ನಾನಾಜಿ ದೇಶ್‌ಮುಖ್ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ವನ್ಯಜೀವಿ ಫೊರೆನ್ಸಿಕ್ ವಿಭಾಗಕ್ಕೆ ಕಳುಹಿಸಲಾಗಿದೆ. ಸುಧಾರಿತ ಪರೀಕ್ಷೆಗಳ ಫಲಿತಾಂಶಗಳು ತಿಳಿದ ನಂತರವಷ್ಟೇ ಚೀತಾ ಸಾವಿನ ನಿಖರ ಕಾರಣ ಕಂಡುಹಿಡಿಯಬಹುದು ಎಂದು ವೈದ್ಯರು ಹೇಳಿದ್ದಾರೆ.

    ಶನಿವಾರ ಸಂಜೆಯವರೆಗೂ ಉದಯ್ ಚೀತಾ ಆರೋಗ್ಯವಾಗಿತ್ತು. ಮರುದಿನ ಬೆಳಗ್ಗೆ ಅಸ್ವಸ್ಥಗೊಂಡಿರುವುದನ್ನು ವೈದ್ಯರ ತಂಡ ಗಮನಿಸಿ, ಬೆಳಿಗ್ಗೆ 11 ಗಂಟೆಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿತ್ತು. ಆದರೆ ಸಂಜೆ 4 ಗಂಟೆಗೆ ಚೀತಾ ಸಾವನ್ನಪ್ಪಿತ್ತು. ಇದಕ್ಕೂ ಮುನ್ನ ನಮೀಬಿಯಾದಿಂದ ತಂದಿದ್ದ ಸಾಶಾ ಹೆಸರಿನ ಹೆಣ್ಣು ಚೀತಾ ಕಿಡ್ನಿ ಸೋಂಕಿನಿಂದ ಮೃತಪಟ್ಟಿತ್ತು.

    ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಚೀತಾಗಳು ಕಾಡಿನ ವಾತಾವರಣಕ್ಕೆ ಹೊಂದಿಕೊಂಡು ಸ್ವತಃ ಬೇಟೆಯಾಡಲು ಆರಂಭಿಸಿದ್ದವು. ಇದಾದ ತಿಂಗಳುಗಳ ಬಳಿಕ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳನ್ನು ಭಾರತಕ್ಕೆ ತರಿಸಲಾಯಿತು.

  • ಕಿಡ್ನಿ ಸೋಂಕು – ನಮೀಬಿಯಾದಿಂದ ತಂದಿದ್ದ 8ರಲ್ಲಿ ಒಂದು ಚಿರತೆ ಸಾವು

    ಕಿಡ್ನಿ ಸೋಂಕು – ನಮೀಬಿಯಾದಿಂದ ತಂದಿದ್ದ 8ರಲ್ಲಿ ಒಂದು ಚಿರತೆ ಸಾವು

    ಭೋಪಾಲ್‌: ಕಳೆದ ವರ್ಷ ನಮೀಬಿಯಾದಿಂದ (Namibia) ತಂದಿದ್ದ 8 ಚೀತಾಗಳ (Cheetahs) ಪೈಕಿ, ಕಿಡ್ನಿ ಸೋಂಕಿನಿಂದ (Kidney Ailment) ಬಳಲುತ್ತಿದ್ದ ಒಂದು ಚೀತಾ ಸಾವನ್ನಪ್ಪಿದೆ.

    ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಪರಿಚಯಿಸಲಾಗಿದ್ದ 8 ಚೀತಾಗಳ ಪೈಕಿ, ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಸಾಶಾ ಹೆಸರಿನ 3 ವರ್ಷದ ಚೀತಾ ಸೋಮವಾರ ಮೃತಪಟ್ಟಿದೆ. ಸಾಶಾ ಭಾರತಕ್ಕೆ ಕರೆತರುವ ಮುನ್ನವೇ ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶಕ್ಕೆ ಮಹಾಶಿವರಾತ್ರಿಯಂದು ಉಡುಗೊರೆ ಸಿಕ್ಕಿದೆ – ಚೀತಾಗಳ ಬಗ್ಗೆ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ

    ಈ ವರ್ಷದ ಜನವರಿ 23ರಂದು ಸಾಶಾ ಚೀತಾದಲ್ಲಿ ಅನಾರೋಗ್ಯ ಲಕ್ಷಣಗಳು ಕಂಡುಬಂದಿತ್ತು. ನಂತರ ಆ ಚೀತಾವನ್ನು ಚಿಕಿತ್ಸೆಗಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಇದನ್ನೂ ಓದಿ: ಭಾರತಕ್ಕೆ ಮತ್ತೆ 12 ಚೀತಾಗಳ ಆಗಮನ

    ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು (Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಚೀತಾಗಳು ಕಾಡಿನ ವಾತಾವರಣಕ್ಕೆ ಹೊಂದಿಕೊಂಡು ಸ್ವತಃ ಬೇಟೆಯಾಡಲು ಆರಂಭಿಸಿದ್ದವು.

    ಚೀತಾ ವಿಶೇಷತೆಯೇನು?
    ಮಚ್ಚೆ ಗುರುತಿನ ಚೀತಾಗಳ ಸಂತತಿಯನ್ನು 1952ರಲ್ಲಿ ಭಾರತದಲ್ಲಿ ಅಳಿದುಹೋದ ಸಂತತಿ ಎಂದು ಘೋಷಣೆ ಮಾಡಲಾಗಿತ್ತು. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿತ್ತು, ಆದರೆ ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಅದಾದ 75 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಚೀತಾಗಳಿಗೆ ಕುನೊ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ.