Tag: ಕುನೂರು

  • ಬ್ರಿಟಿಷರ ರೈಲಿನಲ್ಲಿ ಊಟಿ ರೌಂಡ್ಸ್‌!

    ಬ್ರಿಟಿಷರ ರೈಲಿನಲ್ಲಿ ಊಟಿ ರೌಂಡ್ಸ್‌!

    ಬುಲೆಟ್‌ ರೈಲು ಬಗ್ಗೆ ನೀವು ಕೇಳಿರಬಹುದು. ಸೆಮಿ-ಹೈ-ಸ್ಪೀಡ್‌ ರೈಲಿನಲ್ಲಿ ನೀವು ಸಂಚರಿಸಿರಬಹುದು. ಆದರೆ ಮೀಟರ್‌ ಗೇಜ್‌ ರೈಲಿನಲ್ಲಿ ಸಂಚರಿಸಬೇಕಿದ್ದಲ್ಲಿ ನೀವು ಊಟಿಗೆ ಬರಬೇಕು. ಮೀಟರ್‌ ಗೇಜ್‌ ರೈಲಿನಲ್ಲಿ ಪ್ರಯಾಣಿಸಿದರೆ ಮಾತ್ರ ಊಟಿ ಪ್ರವಾಸ ಕಂಪ್ಲೀಟ್‌ ಆಗಿದೆ ಅಂತ ಹೇಳಬಹುದು.

    ಈಗ ನಾವೆಲ್ಲ ಸಂಚರಿಸುತ್ತಿರುವುದು ಬ್ರಾಡ್‌ ಗೇಜ್‌ ರೈಲಿನಲ್ಲಿ. ಈ ರೈಲಿನ ಹಳಿಯ ಅಗಲ1.676 ಮೀಟರ್‌(5.4 ಅಡಿ). ಆದರೆ ಮೀಟರ್‌ ಗೇಜ್‌ ಹಳಿಯ ಅಗಲ ಕೇವಲ 1 ಮೀಟರ್‌(3.2 ಅಡಿ) ಮಾತ್ರ. ಊಟಿಯಿಂದ ಮೆಟ್ಟುಪಾಳ್ಯಂವರೆಗೆ ಈ ಮೀಟರ್‌ ಗೇಜ್‌ ರೈಲು ಸಂಚರಿಸುತ್ತದೆ. ಕೂನೂರಿನಲ್ಲಿರುವ ಪ್ರವಾಸಿ ತಾಣಕ್ಕೆ ತೆರಳಲು ವಾಹನದ ಮೂಲಕ ಹೋಗಬಹುದಾದರೂ ಈ ರೈಲಿನಲ್ಲಿ ಸಂಚರಿಸಿದರೆ ಸಿಗುವ ಮಜಾವೇ ಬೇರೆ.

    ಊಟಿ ಪ್ರವಾಸ ಯಶಸ್ವಿಯಾಗಬೇಕಾದರೆ ಮೊದಲೇ ನೀವು ಬಹಳ ಮುಖ್ಯವಾದ ಕೆಲಸ ಮಾಡಬೇಕು. ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಹೋಗಿ 15-20 ದಿನದ ಮೊದಲೇ ಟಿಕೆಟ್‌ ಬುಕ್ಕಿಂಗ್‌ ಮಾಡಬೇಕಾಗುತ್ತದೆ. ಊಟಿ-ಕೂನೂರು-ಊಟಿಗೆ ಒಬ್ಬರಿಗೆ 325 ರೂ. ಟಿಕೆಟ್‌ ದರವಿದೆ.

    ಊಟಿಯಿಂದ ಕುನೂರಿಗೆ 21 ಕಿ.ಮೀ ದೂರವಿದೆ. ಒಟ್ಟು 1:15 ನಿಮಿಷ ಪ್ರಯಾಣ. ರೈಲಿನಲ್ಲಿ ಎದುರು ಬದುರು ಕುಳಿತುಕೊಳ್ಳಬೇಕು. ಒಂದು ಸೀಟ್‌ನ ಸಾಲಿನಲ್ಲಿ 4 ಜನ ಮಾತ್ರ ಕುಳಿತುಕೊಳ್ಳಬಹುದು. ಸಣ್ಣದಾಗಿರುವ 3 ಸುರಂಗದಲ್ಲಿ ಸಾಗುವ ಈ ರೈಲಿನಲ್ಲಿ ಟೀ ಎಸ್ಟೇಟ್‌ಗಳನ್ನು ನೋಡಬಹುದು. ನೇರವಾಗಿ ಬೆಳೆದಿರುವ ನೀಲಗಿರಿ ಮರಗಳಿರುವ ಕಾಡನ್ನು ವೀಕ್ಷಿಸುವುದು ಕಣ್ಣಿಗೆ ಹಬ್ಬ. ಪ್ರಕೃತಿ ಸೌಂದರ್ಯವನ್ನು ಅನುಭವಿಸುವವರ ನೆನಪಿನಲ್ಲಿ ಉಳಿಯುವ ರೈಲು ಪ್ರಯಾಣ ಇದು ಆಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

    ಕೂನೂರು ರೈಲ್ವೇ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಬಾಡಿಗೆ ಕಾರು ಚಾಲಕರು ಬರುತ್ತಾರೆ. ಇಂಟರ್‌ನೆಟ್‌ನಲ್ಲಿ ಚೆಕ್‌ ಮಾಡಿದರೆ ಕೂನೂರು ಸಮೀಪವೇ ಬಹಳಷ್ಟು ಪ್ರವಾಸಿ ತಾಣಗಳಿವೆ. ಇವುಗಳನ್ನು ನೋಡಲು ಒಂದು ದಿನ ಪೂರ್ತಿ ಬೇಕಾದಿತು. ಹೆಚ್ಚಿನ ಜನರು ʼಡಾಲ್ಫಿನ್‌ ನೋಸ್‌ʼ ನೋಡಲು ತೆರಳುತ್ತಾರೆ. ಎತ್ತರದ ಘಾಟಿ ರಸ್ತೆಗಳಲ್ಲಿ ನಿಂತು ನೋಡಿದಾಗ ಹೇಗೆ ಪರಿಸರ ಕಾಣುತ್ತದೆ ಆ ರೀತಿ ವ್ಯೂ ನಿಮಗೆ ಇಲ್ಲೂ ಕಾಣುತ್ತದೆ. ಈ ಜಾಗ ವೀಕ್ಷಣೆ ಮಾಡಿದ ಟೀ ಫ್ಯಾಕ್ಟರಿಗೆ ಹೋಗಬಹುದು.

    ದೇಶದ ಮೊದಲ ಸೇನಾ ಪಡೆಗಳ ಮುಖ್ಯಸ್ಥ(ಸಿಡಿಎಸ್‌) ಬಿಪಿನ್‌ ರಾವತ್‌ರಿಂದಾಗಿ ಕೂನೂರು ಸುದ್ದಿಯಲ್ಲಿತ್ತು. ರಾವತ್‌ ಅವರಿದ್ದ ಹೆಲಿಕಾಪ್ಟರ್‌ ಪತನಗೊಂಡ ಜಾಗ ಈ ಕೂನೂರು ತಾಲೂಕಿನಲ್ಲೇ ಬರುತ್ತದೆ. ರಾವತ್‌ ಅವರಿಂದ ಹೆಲಿಕಾಪ್ಟರ್‌ ಪತನಕ್ಕೆ ತಾಂತ್ರಿಕ ದೋಷ ಕಾರಣವಲ್ಲ. ಹವಾಮಾನ ವೈಪರೀತ್ಯದಿಂದ ದುರಂತ ಸಂಭವಿಸಿದೆ ಎಂದು ಸೇನೆಯ ತನಿಖಾ ತಂಡ ವರದಿ ನೀಡಿತ್ತು. ಈ ವರದಿ ನಿಜವೂ ಹೌದು. ಇಲ್ಲಿನ ಹವಾಮಾನ ಹೇಗೆ ದಿಢೀರ್‌ ಬದಲಾಗುತ್ತದೆ ಅಂದರೆ ಒಮ್ಮೆ ಬೆಟ್ಟ ದೂರದಿಂದ ಕಾಣುತ್ತಿರುತ್ತದೆ. ಕೆಲ ನಿಮಿಷದಲ್ಲಿ ಆ ಬೆಟ್ಟ ನಿಮ್ಮ ಕಣ್ಣಿನಿಂದ ಮರೆ ಆಗಿರುತ್ತದೆ. ಅಷ್ಟೊಂದು ಮಂಜು ಆವರಿಸಿರುತ್ತದೆ. ಇದನ್ನೂ ಓದಿ: ರಾವತ್ ಹೆಲಿಕಾಪ್ಟರ್ ಪತನಕ್ಕೆ ಮೋಡ ಕಾರಣ: ಭಾರತೀಯ ವಾಯುಪಡೆ

    ಮುಗಿಸುವ ಮುನ್ನ ಈ ಮೀಟರ್‌ ಗೇಜ್‌ ರೈಲನ್ನು ಆರಂಭಿಸಿದವರು ಬ್ರಿಟಿಷರು. 1854ರಿಂದ ಕಾಮಗಾರಿ ಆರಂಭವಾದರೂ ಪೂರ್ಣಗೊಂಡದ್ದು 1899ಕ್ಕೆ. 2005ರಲ್ಲಿ ಯುನೆಸ್ಕೋ ನೀಲಗಿರಿ ರೈಲ್ವೇಯನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಿದೆ. ಮೀಟರ್‌ ಗೇಜ್‌ ರೈಲು ಊಟಿಯಲ್ಲಿ ಮಾತ್ರ ಇಲ್ಲ. ಭಾರತದ ಹಲವು ಕಡೆ ಸೇವೆಯಲ್ಲಿದೆ.

    – ಅಶ್ವಥ್‌ ಸಂಪಾಜೆ

    Live Tv
    [brid partner=56869869 player=32851 video=960834 autoplay=true]

  • ಹೆಲಿಕಾಪ್ಟರ್ ದುರಂತ- ಪ್ರಾಣ ಕಳೆದುಕೊಂಡ ವಿವೇಕ್ ಕುಮಾರ್‌ಗಿದೆ 2 ತಿಂಗಳ ಪುಟ್ಟ ಕಂದಮ್ಮ

    ಹೆಲಿಕಾಪ್ಟರ್ ದುರಂತ- ಪ್ರಾಣ ಕಳೆದುಕೊಂಡ ವಿವೇಕ್ ಕುಮಾರ್‌ಗಿದೆ 2 ತಿಂಗಳ ಪುಟ್ಟ ಕಂದಮ್ಮ

    ಚೆನ್ನೈ: ತಮಿಳುನಾಡಿನ ಕುನೂರಿನಲ್ಲಿ ದುರಂತಕ್ಕೀಡಾದ ಹೆಲಿಕಾಪ್ಟರ್ ನಲ್ಲಿ 13 ಮಂದಿ ಹುತಾತ್ಮರಾಗಿದ್ದು, ಇದರಲ್ಲಿ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಕೂಡ ಒಬ್ಬರಾಗಿದ್ದಾರೆ.

    ಕೇವಲ 29 ವರ್ಷ ವಯಸ್ಸಿನ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜೈಸಿಂಗ್‍ಪುರ ಪ್ರದೇಶದ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರಿಗೆ 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದೆ. ಸದ್ಯ ಇವರಿಗೆ 2 ತಿಂಗಳ ಪುಟ್ಟ ಕಂದಮ್ಮ ಇದೆ. ಇದೀಗ ವಿವೇಕ್ ಕಳೆದುಕೊಂಡು ಕುಟುಂಬ ಕಣ್ಣೀರಾಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇದನ್ನೂ ಓದಿ: ತೀರಾ ಕೆಳಮಟ್ಟದಲ್ಲೇ ಹಾರಾಡ್ತಿದ್ದ ಹೆಲಿಕಾಪ್ಟರ್ ಕೊನೆಯ ದೃಶ್ಯ ಲಭ್ಯ

    ವಿವೇಕ್ ಅವರು ರಕ್ಷಣಾ ಪಡೆಯ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರ ಪಿಎಸ್‍ಒ ಆಗಿದ್ದರು. ಸೈನಿಕನಾಗಿ ಸೇನೆಗೆ ಸೇರಿದ್ದ ವಿವೇಕ್, ಪ್ರಸ್ತುತ ಪ್ಯಾರಾ ಕಮಾಂಡೋ ಆಗಿದ್ದರು. ರಾವತ್ ಅವರೊಂದಿಗೆ ತಮಿಳುನಾಡಿಗೆ ತೆರಳುತ್ತಿರುವ ಬಗ್ಗೆ ವಿವೇಕ್ ತಮ್ಮ ಪತ್ನಿಗೆ ಫೋನ್ ಕರೆ ಮೂಲಕ ತಿಳಿಸಿದ್ದರು. ಅದಾದ ಕೆಲ ಗಂಟೆಗಳಲ್ಲೇ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತಕ್ಕೆ ಬಲಿಯಾಗಿರುವ ಸಾಯಿ ತೇಜ್‍ಗೆ 27 ವರ್ಷ!

    ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತರಾಗಿದ್ದಾರೆ. ಅಲ್ಲದೆ ವಿವೇಕ್ ಅವರಂತೆ ಕೇವಲ 27 ವರ್ಷದ ಆಂಧ್ರಪ್ರದೇಶ ಮೂಲದ ಲ್ಯಾನ್ಸ್ ನಾಯಕ್ ಸಾಯಿ ತೇಜ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ದೆಹಲಿಯಿಂದ ಸೇನಾ ವಿಮಾನದಲ್ಲಿ ತಮಿಳುನಾಡಿಗೆ ಬಿಪಿನ್ ರಾವತ್ ವೆಲ್ಲಿಂಗ್ಟನ್‍ನ ಮಿಲಿಟರಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಹೊರಟಿದ್ದರು. ಸೂಳೂರಿನಿಂದ ಊಟಿಯ ವೆಲ್ಲಿಂಗ್ಟನ್‍ಗೆ ಸೇನಾ ಹೆಲಿಕಾಪ್ಟರ್‍ನಲ್ಲಿ 14 ಮಂದಿ ಪಯಣ ಆರಂಭಿಸಿದ್ದರು. ಬುಧವಾರ ಮಧ್ಯಾಹ್ನ 12.22ಕ್ಕೆ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ವೆಲ್ಲಿಂಗ್ಟನ್‍ಗೆ 7 ಕಿ.ಮೀ ದೂರದ ಕಟ್ಟೇರಿ ಪರ್ವತ ಪ್ರದೇಶದ ಟೀ ಎಸ್ಟೇಟ್‍ನಲ್ಲಿ ದೊಡ್ಡ ಶಬ್ಧದೊಂದಿಗೆ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿ 13 ಮಂದಿ ಹುತಾತ್ಮರಾಗಿದ್ದಾರೆ.

    ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರವನ್ನು ರವಾನಿಸಲಾಗುತ್ತಿದೆ. ಸೇನಾ ವಿಮಾನದಲ್ಲಿ ರಾವತ್, ಪತ್ನಿ ಮೃತದೇಹ ದೆಹಲಿಗೆ ರವಾನೆಯಾಗಲಿದೆ. ನಾಳೆ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ದೆಹಲಿಯ ರಾವತ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬಳಿಕ ಕಾಮ್‍ರಾಜ್ ಮಾರ್ಗದಿಂದ ಅಂತಿಮಯಾತ್ರೆ ನಡೆಯಲಿದ್ದು, ದೆಹಲಿ ಕಂಟೋನ್‍ಮೆಂಟ್‍ನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸದ್ಯ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರರವಿದೆ.