Tag: ಕುತುಬ್ ಮಿನಾರ್

  • ಕುತುಬ್ ಮಿನಾರ್ ಮಸೀದಿಯಲ್ಲಿ ನಮಾಜ್ ತಡೆಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಕೋರ್ಟ್ ನಕಾರ

    ಕುತುಬ್ ಮಿನಾರ್ ಮಸೀದಿಯಲ್ಲಿ ನಮಾಜ್ ತಡೆಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಕೋರ್ಟ್ ನಕಾರ

    ನವದೆಹಲಿ: ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಮೊಘಲ್ ಮಸೀದಿಯಲ್ಲಿ ನಮಾಜ್ ಮಾಡುವುದನ್ನು ನಿರ್ಬಂಧಿಸುವಂತೆ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

    ಸದ್ಯಕ್ಕೆ ಮನವಿ ಆಲಿಸುವ ತುರ್ತು ಇಲ್ಲ ಎಂದು ನ್ಯಾಯಮೂರ್ತಿಗಳಾದ ಮನೋಜ್ ಕುಮಾರ್ ಓಹ್ರಿ ಹಾಗೂ ಪೂನಂ ಎ ಬಂಬಾ ಅವರಿದ್ದ ರಜೆ ಕಾಲೀನ ಪೀಠವು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಹಲವು ದೇಶಗಳಲ್ಲಿ ಬ್ಯಾನ್ : ಭಾರತದ ಹೆಸರು ಕೆಡಿಸುವ ಹುನ್ನಾರ ಎಂದ ನಿರ್ದೇಶಕ

    ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೇ 6ರಂದು ಕೇವಲ 5 ಮಂದಿಗೆ ಮಸೀದಿಯಲ್ಲಿ ನಮಾಜ್ ಮಾಡಲು ಅನುಮತಿಸುವ ಮೂಲಕ ಪ್ರಾರ್ಥನೆಗೆ ಭಾಗಶಃ ತಡೆಯೊಡ್ಡಿತು. ನಂತರ ಮೇ 13ರಂದು ಅಧಿಕಾರಿಗಳು ಪ್ರಾರ್ಥನೆ ಸಂಪೂರ್ಣವಾಗಿ ನಿಲ್ಲಿಸಿದರು ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಂ.ಸುಫಿಯಾನ್ ಸಿದ್ದಿಕಿ ತಿಳಿಸಿದರು. ಇದನ್ನೂ ಓದಿ: ಜೂನ್ 13 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್

    ಯಾವುದೇ ಆದೇಶ ನೀಡದೆ ಮೌಖಿಕ ಸೂಚನೆಗಳ ಮೂಲಕವೇ ಜನರ ಪ್ರಾರ್ಥನೆಗೆ ತಡೆಯೊಡ್ಡಲಾಗಿದೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಕಾನೂನಾತ್ಮಕ ಆಡಳಿತವನ್ನು ಎತ್ತಿಹಿಡಿದು ರಕ್ಷಿಸಬೇಕು ಎಂದು ಸಿದ್ದಿಕ್ಕೆ ಮನವಿ ಮಾಡಿದ್ದರು.

    Qutub Minar

    ಶುಕ್ರವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ (ACJ) ವಿಪಿನ್ ಸಾಂಘಿ ಅವರಿದ್ದ ಪೀಠದೆದುರು ಅರ್ಜಿಯನ್ನು ಪ್ರಸ್ತಾಪಿಸಿದಾಗ ರಜೆಕಾಲೀನ ಪೀಠದೆದುರು ಮನವಿ ಸಲ್ಲಿಸುವಂತೆ ಪೀಠ ತಿಳಿಸಿತ್ತು.

    ನಂತರ ಮೊಘಲ್ ಮಸೀದಿಯು ದೆಹಲಿಯ ಮೊಘಲ್ ಉದ್ಯಾನದ ಎದುರು ಕುತುಬ್ ಸಂಕೀರ್ಣದ ಪ್ರವೇಶದ್ವಾರದಲ್ಲಿದೆ. ಕುತುಬ್ ಮಿನಾರ್ ಆವರಣದಲ್ಲಿರುವ ವಿವಾದಿತ ಕುವ್ವಾತ್-ಉಲ್-ಇಸ್ಲಾಂ ಮಸೀದಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಪೀಠ ಹೇಳಿ ವಿಚಾರಣೆ ನಿರಾಕರಿಸಿತು. ಇದನ್ನೂ ಓದಿ: 21ನೇ ಶತಮಾನದ ಭಾರತವು ಜನಕೇಂದ್ರಿತ ಆಡಳಿತದೊಂದಿಗೆ ಮುನ್ನಡೆಯುತ್ತಿದೆ: ಮೋದಿ

    Qutub Minar

    ಹಿನ್ನೆಲೆ ಏನು?
    ಕುವ್ವಾತ್- ಉಲ್- ಇಸ್ಲಾಂ ಮಸೀದಿಯಲ್ಲಿ ಹಲವು ಹಿಂದೂ ದೇವತೆಗಳ ಪ್ರತಿಮೆಗಳಿವೆ ಎಂದು ವಿವಿಧ ಹಿಂದುತ್ವವಾದಿ ಗುಂಪುಗಳು ವಾದಿಸಿದ್ದು ಹಿಂದೂ ಮತ್ತು ಜೈನ ದೇಗುಲಗಳನ್ನು ಧ್ವಂಸಗೊಳಿಸಿ ಇದನ್ನು ನಿರ್ಮಿಸಲಾಗಿದೆ. ಹೀಗಾಗಿ ಅಲ್ಲಿ ತಮಗೆ ಪ್ರಾರ್ಥನೆ ಸಲ್ಲಿಸುವ ಹಕ್ಕು ನೀಡಬೇಕು ಎಂದು ಆಗ್ರಹಿಸಿದ್ದವು.

  • ಜ್ಞಾನವಾಪಿ ಕೇಸ್ – ಮೇ 28, 29ಕ್ಕೆ 5 ಸಾವಿರ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಸಭೆ

    ಜ್ಞಾನವಾಪಿ ಕೇಸ್ – ಮೇ 28, 29ಕ್ಕೆ 5 ಸಾವಿರ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಸಭೆ

    ಲಕ್ನೋ: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 26 ರಿಂದ ಮಸೀದಿ ಪರ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಜಾಮಿಯತ್ ಉಲಮಾ-ಇ-ಹಿಂದ್ ಮುಸ್ಲಿಂ ಸಂಘಟನೆಯು ಮೇ 28, 29ರಂದು ಬೃಹತ್ ಸಮಾವೇಶಕ್ಕೆ ಕರೆ ನೀಡಿದೆ.

    ಉತ್ತರಪ್ರದೇಶದ ದೇವಬಂದ್‌ನಲ್ಲಿ ಬೃಹತ್ ಸಭೆ ನಡೆಯಲಿದ್ದು, ಸುಮಾರು 5 ಸಾವಿರ ಮುಸ್ಲಿಂ ಸಂಘಟನೆಗಳು ಭಾಗವಹಿಸಲಿವೆ. ಈ ಸಭೆಯಲ್ಲಿ ಜ್ಞಾನವಾಪಿ, ಮಥುರಾ ಹಾಗೂ ಕುತುಬ್ ಮಿನಾರ್‌ನಂತಹ ಸ್ಮಾರಕಗಳ ಸುತ್ತಮುತ್ತಲಿನ ಸಮಸ್ಯೆಗಳನ್ನು ಚರ್ಚಿಸಲು ಉದ್ದೇಶಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕುತುಬ್‌ ಮಿನಾರ್‌ ಬಳಿ ಹಿಂದೂ ಮೂರ್ತಿಗಳ ಪುನರ್‌ಸ್ಥಾಪನೆಗೆ ಮನವಿ – ತೀರ್ಪು ಕಾಯ್ದಿರಿಸಿದ ಕೋರ್ಟ್‌

    Gyanvapi mosque, 

    ಜಮಿಯತ್-ಉಲೇಮಾ-ಇ-ಹಿಂದ್ ಸಂಘಟನೆ ಮುಖ್ಯಸ್ಥ ಮೌಲಾನಾ ಮಹಮೂದ್ ಅಸಾದ್ ಮದನಿ ಅವರು ಈ ಹಿಂದೆ ಜ್ಞಾನವಾಪಿ ಪ್ರಕರಣದಲ್ಲಿ ಮಧ್ಯಪ್ರವೇಶಿಸದಂತೆ ಸಂಘಟನೆಗಳನ್ನು ಒತ್ತಾಯಿಸಿದ್ದರು. ಆದರೆ ಈಗ ಮಂದಿರ ಮಸೀದಿಗಳ ಚರ್ಚೆಯ ವಿರುದ್ಧ ಹಲವು ನಿರ್ಣಯಗಳನ್ನು ಅಂಗೀಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ

    ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಅವರು ಕುತುಬ್ ಮಿನಾರ್ ಅನ್ನು ಕುತುಬ್ ಉದ್‌ದಿನ್ ಐಬಕ್ ನಿರ್ಮಿಸಿದ್ದಲ್ಲ. ರಾಜಾ ವಿಕ್ರಮಾದಿತ್ಯ ನಿರ್ಮಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆ ನಂತರವೇ ವಿವಾದ ಭುಗಿಲೆದ್ದಿದೆ ಎಂದು ಸಂಘಟನೆಗಳು ಆರೋಪಿಸಿವೆ.

    Qutub Minar

    ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ವಕ್ತಾರ ವಿನೋದ್ ಬನ್ಸಾಲ್ ಸಹ, ಕುತುಬ್ ಮಿನಾರ್ ವಾಸ್ತವವಾಗಿ `ವಿಷ್ಣು ಸ್ತಂಭ’ ಮತ್ತು 27 ಹಿಂದೂ-ಜೈನ ದೇವಾಲಯಗಳನ್ನು ಕೆಡವಿ, ಅದರಿಂದ ಪಡೆದ ವಸ್ತುಗಳಿಂದ ಈ ಸ್ತಂಭವನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದರು.

  • ಕುತುಬ್‌ ಮಿನಾರ್‌ ಬಳಿ ಹಿಂದೂ ಮೂರ್ತಿಗಳ ಪುನರ್‌ಸ್ಥಾಪನೆಗೆ ಮನವಿ – ತೀರ್ಪು ಕಾಯ್ದಿರಿಸಿದ ಕೋರ್ಟ್‌

    ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದಲ್ಲಿ ಹಿಂದೂ ಮತ್ತು ಜೈನರ ಆರಾಧನಾ ಮೂರ್ತಿಗಳನ್ನು ಪುನರ್‌ಸ್ಥಾಪಿಸಲು ಕೋರಿರುವ ಮೇಲ್ಮನವಿಗೆ ಸಂಬಂಧಿಸಿದ ಆದೇಶವನ್ನು ದೆಹಲಿಯ ಸಾಕೇತ್ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ.

    ಮೆಹ್ರೌಲಿಯಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದೊಳಗೆ ಇರುವ ಕುವ್ವಾತ್-ಉಲ್-ಇಸ್ಲಾಂ ಮಸೀದಿಯನ್ನು ದೇವಾಲಯದ ಸಂಕೀರ್ಣದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಮೇಲ್ಮನವಿಯಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ

    court order law

    ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ನಿಖಿಲ್ ಚೋಪ್ರಾ ಅವರು ಮಂಗಳವಾರ ಮೇಲ್ಮನವಿ ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿದರು. ಮೇಲ್ಮನವಿಗೆ ಸಂಬಂಧಿಸಿದಂತೆ ಜೂನ್ 9ರಂದು ತೀರ್ಪು ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಮಹಮ್ಮದ್‌ ಘೋರಿ ಆಡಳಿತದಲ್ಲಿ ಸೇನಾ ನಾಯಕನಾಗಿದ್ದ ಕುತುಬುದ್ದೀನ್‌ ಐಬಕ್‌ 27 ದೇವಾಲಯಗಳನ್ನು ಭಾಗಶಃ ಧ್ವಂಸ ಮಾಡಿದ್ದು, ಇವುಗಳ ಸಾಮಗ್ರಿಗಳನ್ನು ಬಳಸಿ ಕುತುಬ್‌ ಮಿನಾರ್‌ ಸಂಕೀರ್ಣದೊಳಗೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಜೈನ ತೀರ್ಥಂಕರ ವೃಷಭದೇವ ಮತ್ತು ಹಿಂದೂ ದೇವರು ವಿಷ್ಣುವಿನ ಮೂರ್ತಿಯನ್ನು ಸಂಕೀರ್ಣದಲ್ಲಿ ಪುನರ್‌ ಪ್ರತಿಷ್ಠಾಪಿಸಬೇಕು ಎಂದು ಕೋರಲಾಗಿದೆ. ಇದನ್ನೂ ಓದಿ: ಕುತುಬ್ ಮಿನಾರ್ ಬಳಿ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ – ASI ಖಡಕ್ ಉತ್ತರ

    ಕುತುಬ್ ಮಿನಾರ್ ಬಳಿ ದೇವಸ್ಥಾನದ ಉತ್ಖನನ ನಡೆಸಲು ಒತ್ತಡ ಕೇಳಿ ಬಂದ ಬೆನ್ನಲ್ಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಾಕೇತ್ ಕೋರ್ಟ್‍ಗೆ ತನ್ನ ವರದಿಯನ್ನು ಸಲ್ಲಿಕೆ ಮಾಡಿದ್ದು, ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.

    ಕುತುಬ್ ಮಿನಾರ್ 1914 ರಿಂದ ಸಂರಕ್ಷಿತ ಸ್ಮಾರಕವಾಗಿದೆ. ಅದರ ರಚನೆಯನ್ನು ಈಗ ಬದಲಾಯಿಸಲಾಗುವುದಿಲ್ಲ. “ಸಂರಕ್ಷಿತ” ಸ್ಥಾನಮಾನವನ್ನು ನೀಡುವ ಸಮಯದಲ್ಲಿ ಅಂತಹ ಆಚರಣೆಯು ಪ್ರಚಲಿತದಲ್ಲಿರಲಿಲ್ಲ. ಈಗ ಸ್ಮಾರಕದಲ್ಲಿ ಆರಾಧನೆಯ ಪುನರುಜ್ಜೀವನವನ್ನು ಅನುಮತಿಸಲಾಗುವುದಿಲ್ಲ ಎಂದು ವರದಿಯಲ್ಲಿ ಎಎಸ್‍ಐ ಉಲ್ಲೇಖಿಸಿದೆ. ಇದನ್ನೂ ಓದಿ: ವಂದೇ ಮಾತರಂಗೂ ರಾಷ್ಟ್ರಗೀತೆಯಷ್ಟೇ ಗೌರವ ಕೋಡಿ – ದೆಹಲಿ ಹೈಕೋರ್ಟ್‌ಗೆ ಪಿಐಎಲ್

  • ಕುತುಬ್ ಮಿನಾರ್ ಬಳಿ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ – ASI ಖಡಕ್ ಉತ್ತರ

    ಕುತುಬ್ ಮಿನಾರ್ ಬಳಿ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ – ASI ಖಡಕ್ ಉತ್ತರ

    ನವದೆಹಲಿ: ಕುತುಬ್ ಮಿನಾರ್ ಬಳಿ ದೇವಸ್ಥಾನದ ಉತ್ಖನನ ನಡೆಸಲು ಒತ್ತಡ ಕೇಳಿ ಬಂದ ಬೆನ್ನಲೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಾಕೇತ್ ಕೋರ್ಟ್‍ಗೆ ತನ್ನ ವರದಿಯನ್ನು ಸಲ್ಲಿಕೆ ಮಾಡಿದ್ದು ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.

    ಕುತುಬ್ ಮಿನಾರ್ 1914 ರಿಂದ ಸಂರಕ್ಷಿತ ಸ್ಮಾರಕವಾಗಿದೆ. ಅದರ ರಚನೆಯನ್ನು ಈಗ ಬದಲಾಯಿಸಲಾಗುವುದಿಲ್ಲ “ಸಂರಕ್ಷಿತ” ಸ್ಥಾನಮಾನವನ್ನು ನೀಡುವ ಸಮಯದಲ್ಲಿ ಅಂತಹ ಆಚರಣೆಯು ಪ್ರಚಲಿತದಲ್ಲಿರಲಿಲ್ಲ. ಈಗ ಸ್ಮಾರಕದಲ್ಲಿ ಆರಾಧನೆಯ ಪುನರುಜ್ಜೀವನವನ್ನು ಅನುಮತಿಸಲಾಗುವುದಿಲ್ಲ ಎಂದು ವರದಿಯಲ್ಲಿ ಎಎಸ್‍ಐ ಉಲ್ಲೇಖಿಸಿದೆ.

    ಕೇಂದ್ರ ಸಂಸ್ಕøತಿ ಸಚಿವಾಲಯವು ತನ್ನ ಉತ್ಖನನ ವರದಿಯನ್ನು ಸಲ್ಲಿಸುವಂತೆ ಎಎಸ್‍ಐಗೆ ಈ ಹಿಂದೆ ತಿಳಿಸಿತ್ತು. ಅಲ್ಲದೇ ಮಸೀದಿಯಿಂದ 15 ಮೀಟರ್ ದೂರದಲ್ಲಿ ಮಿನಾರ್‍ನ ದಕ್ಷಿಣದಲ್ಲಿ ಉತ್ಖನನವನ್ನು ಪ್ರಾರಂಭಿಸಬಹುದು ಎಂದು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಮೇ 21 ರಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡರು.  ಇದನ್ನೂ ಓದಿ: 5ರೂ. ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಶಂಕರೇಗೌಡಗೆ ಹೃದಯಾಘಾತ

    ಸಂಸ್ಕೃತಿ ಸಚಿವಾಲಯದ ಸೂಚನೆ ಮೇರೆಗೆ ವರದಿ ನೀಡಿರುವ ಎಎಸ್‍ಐ ಹಿಂದೂ ಅರ್ಜಿದಾರರ ಮನವಿಯನ್ನು ಕಾನೂನಾತ್ಮಕವಾಗಿ ನಿರ್ವಹಿಸಲಾಗುವುದಿಲ್ಲ ಎಂದು ಹೇಳಿದೆ. ಕುತುಬ್ ಮಿನಾರ್ ಸಂಕೀರ್ಣವನ್ನು ನಿರ್ಮಿಸಲು ಹಳೆಯ ದೇವಾಲಯಗಳನ್ನು ನಾಶಪಡಿಸುವುದು ಐತಿಹಾಸಿಕ ಸಂಗತಿಯಾಗಿದೆ. ಕುತುಬ್ ಮಿನಾರ್ ಸಂಕೀರ್ಣವು ಜೀವಂತ ಸ್ಮಾರಕವಾಗಿದೆ. ಇದನ್ನು 1914 ರಿಂದ ರಕ್ಷಿಸಲಾಗಿದೆ. ಸಂಕೀರ್ಣದ ಮೇಲೆ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಖಡಕ್ ಆಗಿ ಉತ್ತರಿಸಿದೆ.

    ಸ್ಮಾರಕವನ್ನು ರಕ್ಷಣೆಯಲ್ಲಿ ಇರಿಸುವ ಸಮಯದಲ್ಲಿ ಯಾವುದೇ ಪೂಜೆಯ ಆಚರಣೆ ಇಲ್ಲವಾದ್ದರಿಂದ ನಾವು ಸಂರಕ್ಷಿತ ಪ್ರದೇಶದ ಸ್ವರೂಪವನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಈಗ ಪೂಜೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಎಎಸ್‍ಐ ತಿಳಿಸಿದೆ.  ಇದನ್ನೂ ಓದಿ: ಪರಿಷತ್‌ ಚುನಾವಣೆ – ಶರವಣಗೆ ಜೆಡಿಎಸ್‌ ಟಿಕೆಟ್‌

    ಈ ತಿಂಗಳ ಆರಂಭದಲ್ಲಿ, ಮಹಾಕಾಲ್ ಮಾನವ್ ಸೇವಾ ಮತ್ತು ಇತರ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟ ಕುತುಬ್ ಮಿನಾರ್‍ನಲ್ಲಿ ಭಾರೀ  ಪೊಲೀಸ್ ನಿಯೋಜನೆಯ ಮಧ್ಯೆ, ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದರು. ಐಕಾನಿಕ್ ಸ್ಮಾರಕ ಕುತುಬ್ ಮಿನಾರ್ ‘ವಿಷ್ಣು ಸ್ತಂಭ’ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.

  • ಕುತುಬ್ ಮಿನಾರ್ ವಿವಾದ – ಸದ್ಯಕ್ಕಿಲ್ಲ ಉತ್ಖನನ

    ಕುತುಬ್ ಮಿನಾರ್ ವಿವಾದ – ಸದ್ಯಕ್ಕಿಲ್ಲ ಉತ್ಖನನ

    ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ(ಎಎಸ್‌ಐ) ಕೇಂದ್ರ ಸಂಸ್ಕೃತಿ ಸಚಿವಾಲಯ ಆದೇಶಿಸಿದೆ ಎಂಬ ವರದಿ ಹೊರಬಂದಿತ್ತು. ಆದರೆ ಈ ಬಗ್ಗೆ ಸಂಸ್ಕೃತಿ ಸಚಿವರೇ ಅಂತಹ ನಿರ್ದೇಶನ ನೀಡಲಾಗಿಲ್ಲ ಎಂದಿದ್ದಾರೆ.

    ಕುತುಬ್ ಮಿನಾರ್ ಸಂಕೀರ್ಣದ ಉತ್ಖನನದ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ, ಅಂತಹ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ. ಉತ್ಖನನ ನಡೆಸುವಂತೆ ಎಎಸ್‌ಐಗೆ ಯಾವುದೇ ನಿರ್ದೇಶನ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ – ಹೀಗಿದೆ ಇಂದಿನ ದರ

    ವಿವಾದವೇನು?
    ಕುತುಬ್ ಮಿನಾರ್ ವಿವಾದ ಪ್ರಸ್ತುತ ಜ್ಞಾನವಾಪಿ ಮಸೀದಿ ವಿವಾದಕ್ಕೆ ಹೋಲಿಕೆಯಾಗುತ್ತದೆ. ಕುತುಬ್ ಮಿನಾರ್ ಅನ್ನು ಕುತುಬ್ ಅಲ್-ದೀನ್ ಐಬಕ್ ನಿರ್ಮಿಸಿಲ್ಲ. ಬದಲಾಗಿ ಹಿಂದೂ ಚಕ್ರವರ್ತಿ ರಾಜಾ ವಿಕ್ರಮಾದಿತ್ಯ ನಿರ್ಮಿಸಿದ್ದಾರೆ ಎಂದು ಎಎಸ್‌ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಹೇಳಿಕೆ ನೀಡಿದ್ದರು.

    ರಾಜಾ ವಿಕ್ರಮಾದಿತ್ಯ ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ಕುತುಬ್ ಮಿನಾರ್ ಅನ್ನು ನಿರ್ಮಿಸಿದ್ದಾರೆ. ಇದು ಹತ್ತಿರದಲ್ಲಿರುವ ಮಸೀದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇದು ಸ್ವತಂತ್ರ್ಯ ರಚನೆ ಎಂದು ತಿಳಿಸಿದ್ದರು. ಕುತುಬ್ ಮಿನಾರ್ ಅನ್ನು ಹಿಂದೂ ರಾಜ ನಿರ್ಮಿಸಿರುವುದಾಗಿ ಹೇಳಿಕೆ ನೀಡಿದ ಬಳಿಕ ವಿವಾದ ಭುಗಿಲೆದ್ದಿದೆ. ಇದನ್ನೂ ಓದಿ: ವಿಧಾನಸಭೆಯ ಮೇಲೆ ಹೊಸದಾಗಿ ನಿರ್ಮಿಸಿದ್ದ 70 ಟನ್ ತೂಕದ ಉಕ್ಕಿನ ಗುಮ್ಮಟ ಕುಸಿತ

    ಇತ್ತೀಚೆಗೆ ವಿಶ್ವ ಹಿಂದೂ ಪರಿಷತ್(ವಿಹೆಚ್‌ಪಿ) ವಕ್ತಾರ ವಿನೋದ್ ಬನ್ಸಾಲ್, ಕುತುಬ್ ಮಿನಾರ್ ಮೂಲತಃ ವಿಷ್ಣು ಸ್ಥಂಭ. 13ನೇ ಶತಮಾನದಲ್ಲಿ ಹಿಂದೂ-ಜೈನ ದೇವಾಲಯಗಳನ್ನು ಕೆಡವಿ, ಪಡೆದ ವಸ್ತುಗಳಿಂದ ಈ ರಚನೆಯನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದರು.

    ಕುತುಬ್ ಮಿನಾರ್ ಸಂಕೀರ್ಣದಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಕಂಡುಬಂದಿವೆ ಎನ್ನಲಾಗಿದೆ. ಶನಿವಾರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್, 3 ಇತಿಹಾಸಕಾರರು, 4 ಎಎಸ್‌ಐ ಅಧಿಕಾರಿಗಳು ಹಾಗೂ ಸಂಶೋಧಕರು ಸ್ಥಳಕ್ಕೆ ಭೇಟಿ ನೀಡಿದ್ದರು. 1991ರಿಂದ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ಕಾರ್ಯ ನಡೆದಿಲ್ಲ ಎಂದು ಎಎಸ್‌ಐ ಅಧಿಕಾರಿಗಳು ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.

  • ಕುತುಬ್ ಮಿನಾರ್ ನಿರ್ಮಿಸಿದ್ದು ಕುತುಬ್ ಅಲ್-ದಿನ್ ಐಬಕ್ ಅಲ್ಲ

    ನವದೆಹಲಿ: 5ನೇ ಶತಮಾನದಲ್ಲಿ ರಾಜಾ ವಿಕ್ರಮಾದಿತ್ಯ ಸೂರ್ಯನ ಬದಲಾಗುವ ಸ್ಥಾನವನ್ನು ವೀಕ್ಷಿಸಲು ಕುತುಬ್ ಮಿನಾರ್ ಅನ್ನು ನಿರ್ಮಿಸಿದ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಭಾರತೀಯ ಸ್ಮಾರಕಗಳ ಬಗೆಗಿನ ಗೊಂದಲದ ಬಿಸಿ ಹೆಚ್ಚುತ್ತಿದ್ದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣೆ(ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಇದೀಗ ಐತಿಹಾಸಿಕ ಸ್ಮಾರಕ ಕುತುಬ್ ಮಿನಾರ್ ರಾಜ ವಿಕ್ರಮಾದಿತ್ಯನಿಂದ ನಿರ್ಮಿಸಲಾಗಿದೆ ಹಾಗೂ ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ಕುತುಬ್ ಅಲ್-ದಿನ್ ಐಬಕ್ ನಿರ್ಮಿಸಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ

    ಕುತುಬ್ ಮಿನಾರ್‌ನ ಗೋಪುರ 25 ಇಂಚಿನಷ್ಟು ವಾಲಿದೆ. ಇದು ಸೂರ್ಯನನ್ನು ವೀಕ್ಷಿಸಲು ಮಾಡಲ್ಪಟ್ಟಿದೆ. ಜೂನ್ 21 ರಂದು, ಅಯನ ಸಂಕ್ರಾಂತಿಯ ನಡುವೆ, ಆ ಪ್ರದೇಶದ ಮೇಲೆ ಕನಿಷ್ಠ ಅರ್ಧ ಗಂಟೆ ನೆರಳು ಬೀಳುವುದಿಲ್ಲ. ಇದು ವಿಜ್ಞಾನ ಹಾಗೂ ಪುರಾತತ್ವ ಶಾಸ್ತ್ರದ ಸತ್ಯ ಎಂದಿದ್ದಾರೆ. ಇದನ್ನೂ ಓದಿ: ಪುರುಷರು ಮೊದಲಿಗಿಂತಲೂ ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದಾರೆ: ಆರೋಗ್ಯ ಸಮೀಕ್ಷಾ ವರದಿ

    ಕುತುಬ್ ಮಿನಾರ್ ಒಂದು ಸ್ವತಂತ್ರ ರಚನೆ. ಅದು ತನ್ನ ಸಮೀಪವಿರುವ ಮಸೀದಿಗೆ ಸಂಬಂಧಪಟ್ಟಿಲ್ಲ. ಕುತುಬ್ ಮಿನಾರ್‌ನ ಬಾಗಿಲನ್ನು ಉತ್ತರ ದಿಕ್ಕಿಗೆ ಮುಖ ಮಾಡಿರುವಂತೆ ನಿರ್ಮಿಸಲಾಗಿದೆ. ಇದು ರಾತ್ರಿ ಹೊತ್ತು ಆಕಾಶದಲ್ಲಿ ಧ್ರುವ ನಕ್ಷತ್ರವನ್ನು ನೋಡಲು ಸಹಾಯಕವಾಗಿದೆ ಎಂದು ತಿಳಿಸಿದರು.

  • ಕುತುಬ್ ಮಿನಾರ್‌ಗೆ ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಲು ಆಗ್ರಹಿಸಿ ಪ್ರತಿಭಟನೆ

    ಕುತುಬ್ ಮಿನಾರ್‌ಗೆ ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಲು ಆಗ್ರಹಿಸಿ ಪ್ರತಿಭಟನೆ

    ನವದೆಹಲಿ: ವಿಶ್ವವಿಖ್ಯಾತ ಕುತುಬ್ ಮಿನಾರ್‌ನ್ನು ವಿಷ್ಣು ಸ್ತಂಭ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸುತ್ತಿದ್ದ ಹಿಂದೂ ಸಂಘಟನೆಯ ಸದಸ್ಯರನ್ನು ಕುತುಬ್ ಮಿನಾರ್ ಬಳಿ ವಶಕ್ಕೆ ಪಡೆಯಲಾಯಿತು.

    13ನೇ ಶತಮಾನದ ಸ್ಮಾರಕವು ಮೂಲತಃ ವಿಷ್ಣು ಸ್ತಂಭವಾಗಿದೆ. ಐತಿಹಾಸಿಕ ಸ್ಮಾರಕವನ್ನು ವಿಷ್ಣು ಸ್ಮಾರಕವೆಂದು ಬದಲಿಸಬೇಕು ಎಂದು ಆಗ್ರಹಿಸಿ ಕುತುಬ್ ಮಿನಾರ್ ಮುಂದೆ ಹಿಂದೂ ಕಾರ್ಯಕರ್ತರು ಹನುಮಾನ್ ಚಾಲೀಸಾವನ್ನು ಪಠಿಸಿ ಪ್ರತಿಭಟನೆ ಮಾಡಿದ್ದಾರೆ.

    ಕುತುಬ್ ಮಿನಾರ್‌ನ್ನು ರಾಜಾ ವಿಕ್ರಮಾದಿತ್ಯ ನಿರ್ಮಾಣ ಮಾಡಿದ್ದರು. ಇದನ್ನು ವಿಷ್ಣು ಸ್ಥಂಭವೆಂದು ಕರೆಯಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಕುತುಬ್‍ದ್ದೀನ್ ಐಬಕ್ ಇದರ ಸ್ಥಾಪನೆಯನ್ನು ತಾನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

    POLICE JEEP

    ಕುತುಬ್ ಮಿನಾರ್ ಮೂಲತಃ ದೇವಾಲಯವಾಗಿತ್ತು ಮತ್ತು ಸಂಕೀರ್ಣದಲ್ಲಿ ಹಲವಾರು ವಿಗ್ರಹಗಳಿವೆ. ಕುತುಬ್-ಉದ್ದೀನ್-ಐಬಕ್ ಸಾಯಿ, ಹಿಂದೂ, ಜೈನ ದೇವಾಲಯಗಳನ್ನು ಒಡೆದು ಕುತುಬ್ ಮಿನಾರ್ ಅನ್ನು ನಿರ್ಮಿಸಿದನು. ಅವರು ಕಂಬದ ಮೇಲೆ ಕುತುಬ್ ಮಿನಾರ್ ಬರೆದಿದ್ದಾರೆ. ಇಂದಿಗೂ, ನಮ್ಮ ದೇವರು ಮತ್ತು ದೇವತೆಗಳ ವಿಗ್ರಹಗಳು ಇನ್ನೂ ಸಂಕೀರ್ಣದ ಒಂದು ಭಾಗ ಅಲ್ಲಿದೆ. ಇವೇ ಕುತುಬ್ ಮಿನಾರ್ ಮಾಡಲು ನಮ್ಮ ಹಿಂದೂ ದೇವಾಲಯಗಳನ್ನು ಒಡೆಯಲಾಗಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದು ಕಾರ್ಯಕರ್ತರು ತಿಳಿಸಿದರು. ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ

    ಬಿಜೆಪಿ ಮುಖಂಡ ಜೈ ಭಗವಾನ್ ಗೋಯಲ್ ಅವರು ಮಾತನಾಡಿ, ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದ ಬಗ್ಗೆ ಸ್ಥಳೀಯ ಪೊಲೀಸ್ ಕಮಿಷನರ್‍ಗೆ ತಿಳಿಸಿದ್ದೇವೆ. ಆದರೆ ಎಸಿಪಿ ಮತ್ತು ಎಸ್‍ಎಚ್‍ಒ ಸುಮಾರು 50 ಪೊಲೀಸರೊಂದಿಗೆ ನನ್ನ ಮನೆಗೆ ಬಂದು ನನ್ನನ್ನು ಗೃಹಬಂಧನದಲ್ಲಿ ಇರಿಸಿದರು ಎಂದು ಆರೋಪಿಸಿದರು.

    ಕುತುಬ್ ಮಿನಾರ್ ಸಂಕೀರ್ಣದೊಳಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಮತ್ತು ಯಾರಿಗೂ ಸಂಕೀರ್ಣವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಸಂಕೀರ್ಣದ ಹೊರಗೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಇದನ್ನೂ ಓದಿ:  ಚಾರ್ಮಾಡಿ ಘಾಟ್‍ನ ದೇವಿ ಹೇಳಿದ ಜಾಗದಲ್ಲೇ ಸಿಕ್ತು ಮೂಲ ವಿಗ್ರಹ 

    ಘಟನೆಗೆ ಸಂಬಂಧಿಸಿದಂತೆ 50 ಪ್ರತಿಭಟನಾಕಾರರಲ್ಲಿ 44 ಮಂದಿಯನ್ನು ದೆಹಲಿ ಪೊಲೀಸರು ವಶ ಪಡಿಸಿಕೊಂಡರು. ನಂತರ ಅವರೆಲ್ಲರನ್ನೂ ಬಿಡುಗಡೆ ಮಾಡಲಾಯಿತು. ಆದರೆ ಅವರ ವಿರುದ್ಧ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ.