Tag: ಕುಣಿಗಲ್ ಗಿರಿ

  • ಬೆಂಗ್ಳೂರಲ್ಲಿ ತಡರಾತ್ರಿ ಸಿಸಿಬಿ ಭರ್ಜರಿ ಬೇಟೆ – 250 ಡ್ಯಾನ್ಸ್ ಗರ್ಲ್ಸ್, 5 ಲಕ್ಷ, ಕಾರು ಸೀಜ್

    ಬೆಂಗ್ಳೂರಲ್ಲಿ ತಡರಾತ್ರಿ ಸಿಸಿಬಿ ಭರ್ಜರಿ ಬೇಟೆ – 250 ಡ್ಯಾನ್ಸ್ ಗರ್ಲ್ಸ್, 5 ಲಕ್ಷ, ಕಾರು ಸೀಜ್

    – ಬರ್ತ್‍ಡೇ ಗುಂಗಲ್ಲಿದ್ದ ರೌಡಿಶೀಟರ್ ಎಸ್ಕೇಪ್

    ಬೆಂಗಳೂರು: ಶುಕ್ರವಾರ ತಡ ರಾತ್ರಿ ಸಿಸಿಬಿ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ. ಏಕಕಾಲದಲ್ಲಿ ಐದು ಪಬ್ ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 5 ಲಕ್ಷ ನಗದು ವಶಕ್ಕೆ ಪಡೆದು, 250 ಡ್ಯಾನ್ಸ್ ಗರ್ಲ್ಸ್ ಗಳನ್ನು ರಕ್ಷಣೆ ಮಾಡಿದ್ದಾರೆ.

    ನಗರದ ರೆಸಿಡೆನ್ಸಿ ರಸ್ತೆಯ ಟೈಮ್ಸ್ ಬಿಲ್ಡಿಂಗ್ ನಲ್ಲಿರುವ ಪಬ್ ಮತ್ತು ಲೈವ್ ಬ್ಯಾಂಡ್ ನಲ್ಲಿ ನಟೋರಿಯಸ್ ರೌಡಿಶೀಟರ್ ಹುಟ್ಟುಹಬ್ಬದ ಪಾರ್ಟಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕುಣಿಗಲ್ ಗಿರಿ ಅಸೋಸಿಯಟ್ಸ್ ವತಿಯಿಂದ ಬರೋಬ್ಬರಿ 250 ಮಹಿಳಾ ಡ್ಯಾನ್ಸರ್ಸ್ ಗಳ ಸಮ್ಮುಖದಲ್ಲಿ ಸಂಭ್ರಮಾಚರಣೆಗೆ ವೇದಿಕೆ ರೆಡಿಯಾಗಿತ್ತು.

    ರೌಡಿಶೀಟರ್ ಕುಣಿಗಲ್ ಗಿರಿಯ ಆಡಂಭರದ ಬರ್ತ್ ಡೇ ಸಂಭ್ರಮಾಚರಣೆಯ ವಿಚಾರ ತಿಳಿದು ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದ 50ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ ಮಾಡಿದೆ. ದಾಳಿಯ ವೇಳೆ 250 ಡ್ಯಾನ್ಸ್ ಗರ್ಲ್ಸ್ ಗಳನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಪ್ರತ್ಯೇಕ ಪ್ರಕರಣ ದಾಖಲಿಸಿ ಒಟ್ಟು 200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಸಿಸಿಬಿ ದಾಳಿ ಮಾಡುತ್ತಿದ್ದಂತೆಯೇ ಬರ್ತ್ ಡೇ ಬಾಯ್ ರೌಡಿಶೀಟರ್ ಕುಣಿಗಲ್ ಗಿರಿ ಕಟ್ಟಡ ಹಾರಿ ಎಸ್ಕೇಪ್ ಆಗಿದ್ದಾನೆ.

    ಕೆ.ಎ 05 ,5656 ನಂಬರ್ ಇನೋವಾ ಕಾರ್ ಬಿಟ್ಟು ಗಿರಿ ಪರಾರಿಯಾಗಿದ್ದಾನೆ. ಸದ್ಯ ಬರ್ತ್ ಡೇ ಪಾರ್ಟಿಗೆ ತಂದಿದ್ದ ಗಿರೀಶ್ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಳಿಯ ವೇಳೆ ಒಟ್ಟು ಐದು ಲಕ್ಷ ಹಣವನ್ನೂ ಸಿಸಿಬಿಯವರು ವಶಪಡಿಸಿಕೊಂಡಿದ್ದಾರೆ.

    ಪ್ರಕರಣದ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ರೌಡಿಶೀಟರ್ ಕುಣಿಗಲ್ ಗಿರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಗೌರಿ ಲಂಕೇಶ್ ಹತ್ಯೆ ಕೇಸ್: ಕುಣಿಗಲ್ ಗಿರಿ ಸಹಚರರು ಸೇರಿ ಹಲವರ ವಿಚಾರಣೆ

    ಗೌರಿ ಲಂಕೇಶ್ ಹತ್ಯೆ ಕೇಸ್: ಕುಣಿಗಲ್ ಗಿರಿ ಸಹಚರರು ಸೇರಿ ಹಲವರ ವಿಚಾರಣೆ

    – ಸ್ಕಾಟ್‍ಲ್ಯಾಂಡ್ ಪೊಲೀಸರಿಂದಲೂ ತನಿಖೆ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೇಸ್‍ನಲ್ಲಿ ಎಸ್‍ಐಟಿ ತನಿಖೆ ಚುರುಕಾಗಿದ್ದು, ಗೌರಿ ಲಂಕೇಶ್ ಮನೆ ಸುತ್ತಮುತ್ತಲ ಏರಿಯಾದ ಸಿಸಿಟಿವಿ ದೃಶ್ಯದಲ್ಲಿ ರೌಡಿಗಳ ಚಲನವಲನ ಪತ್ತೆಯಾಗಿದೆ.

    ಸಿಸಿಟಿವಿಯಲ್ಲಿ ರೌಡಿ ಕುಣಿಗಲ್ ಗಿರಿ ಸಹಚರರ ಚಲನವಲನ ಪತ್ತೆಯಾಗಿದೆ. ಈಗಾಗಲೇ ಗಿರಿಯ ಹಲವು ಸಹಚರರನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಜೊತೆಗೆ ಇದುವರೆಗೂ ಗೌರಿ ಹತ್ಯೆ ಪ್ರಕರಣದಲ್ಲಿ 100 ಮಂದಿಯನ್ನು ವಿಚಾರಣೆ ಮಾಡಿದ್ದಾರೆ.

    ರಾಮನಗರ ಕೋರ್ಟ್‍ನಲ್ಲಿರುವ ಕುಣಿಗಲ್ ಗಿರಿಯನ್ನು ಕೋರ್ಟ್ ಅನುಮತಿ ಪಡೆದು ವಶಕ್ಕೆ ಪಡೆಯಲು ಎಸ್‍ಐಟಿ ತಂಡ ನಿರ್ಧಾರ ಮಾಡಿದೆ. ಅತ್ತ ಮಹಾರಾಷ್ಟ್ರದಲ್ಲೂ ತನಿಖೆ ಚುರುಕುಗೊಳಿಸಿರುವ ಎಸ್‍ಐಟಿ ಟೀಂ, ಸನಾತನ ಸಂಸ್ಥೆ ಸದಸ್ಯರು ಸೇರಿದಂತೆ ಹಲವರನ್ನು ಪ್ರಶ್ನೆ ಮಾಡ್ತಿದೆ.

    ಗೌರಿ ಹತ್ಯೆ ಕೇಸ್‍ನಲ್ಲಿ ಮಹತ್ವದ ಸುಳಿವು ಪತ್ತೆಯಾಗಿದೆ. ಆದ್ರೆ ಯಾವುದೇ ಸುಳಿವು ಬಿಟ್ಟುಕೊಡಲ್ಲ ಅಂತಾ ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿರೋದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

    ಇಷ್ಟೆಲ್ಲದ್ರ ಮಧ್ಯೆ ಗೌರಿ ಲಂಕೇಶ್ ಮರ್ಡರ್ ಕೇಸ್ ತನಿಖೆಗೆ ಸ್ಕಾಟ್‍ಲ್ಯಾಂಡ್ ಪೊಲೀಸರೂ ಸಾಥ್ ಕೊಟ್ಟಿದ್ದು, ಗುರುವಾರದಂದು ಇಬ್ಬರು ಸ್ಕಾಟ್‍ಲ್ಯಾಂಡ್ ಪೊಲೀಸರು ಬೆಂಗಳೂರಿಗೆ ಬಂದು ತನಿಖೆ ಶುರು ಮಾಡಿದ್ದಾರೆ.