Tag: ಕುಡುಗೋಲು

  • ಹಾಡಹಗಲೇ ವಕೀಲೆ ಮೇಲೆ ದುಷ್ಕರ್ಮಿಯಿಂದ ಕುಡುಗೋಲಿನಲ್ಲಿ ಅಟ್ಯಾಕ್

    ಹಾಡಹಗಲೇ ವಕೀಲೆ ಮೇಲೆ ದುಷ್ಕರ್ಮಿಯಿಂದ ಕುಡುಗೋಲಿನಲ್ಲಿ ಅಟ್ಯಾಕ್

    ಚೆನ್ನೈ: ಹಾಡಹಗಲಲ್ಲೇ ಮಹಿಳಾ ವಕೀಲೆಯೊಬ್ಬರ(Woman advocate) ಮೇಲೆ ದುಷ್ಕರ್ಮಿಯೋರ್ವ ಕುಡುಗೋಲಿನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಮಹಿಳೆಯ ಮುಖ ಹಾಗೂ ಕೈಗಳಿಗೆ ಗಂಭೀರವಾಗಿ ಗಾಯವಾಗಿ ರಕ್ತಸ್ರಾವವಾಗಿದೆ.

    ತಮಿಳುನಾಡಿನ(Tamil Nadu) ತಿರುಪ್ಪೂರ್ ಜಿಲ್ಲೆಯಲ್ಲಿ (Tiruppur district) ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಮಹಿಳೆಯನ್ನು  ಕುಮಾರನ್ ಸಲೈನಲ್ಲಿರುವ (mahila court in Kumaran Salai) ಮಹಿಳಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಜಮೀಲಾ ಬಾನು (Jameela Banu) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇಂದು ಬ್ರಿಟನ್ ರಾಣಿ ಎಲಿಜಬೆತ್-2 ಅಂತ್ಯಕ್ರಿಯೆ – ದ್ರೌಪದಿ ಮುರ್ಮು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿ

    ತಾವು ನಿರ್ವಹಿಸುತ್ತಿರುವ ಹಿಂದಿನ ಪ್ರಕರಣಗಳ (Case) ಬಗ್ಗೆ ಕೆಲವು ಫೈಲ್‍ಗಳನ್ನು ತೆಗೆದುಕೊಳ್ಳಲು ಅವರು ತಮ್ಮ ಮಗಳೊಂದಿಗೆ ವಕೀಲರ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಏಕಾಏಕಿ ಕಚೇರಿಗೆ ನುಗ್ಗಿದ ವ್ಯಕ್ತಿಯೋರ್ವ ಜಮೀಲಾ ಬಾನು ಅವರ ಮೇಲೆ ಕುಡುಗೋಲಿನಿಂದ(sickle) ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ತಾಯಿಯನ್ನು ರಕ್ಷಿಸಲು ಬಂದ ಮಗಳು ಕೂಡ ಗಾಯಗೊಂಡಿದ್ದಾರೆ(Injured). ಇದನ್ನೂ ಓದಿ: ಕಾರಿಗೆ ನಾಯಿಯನ್ನು ಕಟ್ಟಿ ನಡುರಸ್ತೆಯಲ್ಲಿ ಎಳೆದಾಡಿದ – ಕ್ರೂರಿ ವೈದ್ಯನ ವಿರುದ್ಧ ಕೇಸ್

    ನಂತರ ಜಮೀಲಾ ಬಾನು ಅಳುತ್ತಿರುವ ಶಬ್ಧ ಕೇಳಿಸಿಕೊಂಡು ಸ್ಥಳೀಯರು ಆಗಮಿಸಿದಾಗ, ಆರೋಪಿ ತನ್ನ ಕುಡುಗೋಲನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ನಂತರ ತಲೆ ಮತ್ತು ಕೈಗಳಿಗೆ ಗಾಯಗೊಂಡಿದ್ದ ಜಮೀಲಾರನ್ನು ಚಿಕಿತ್ಸೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕುಡುಗೋಲು ಹಿಡಿದು ಫಿಲ್ಮಂ ಸ್ಟೈಲ್‍ನಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿದ ಕೌನ್ಸಿಲರ್ ಪತಿ

    ಕುಡುಗೋಲು ಹಿಡಿದು ಫಿಲ್ಮಂ ಸ್ಟೈಲ್‍ನಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿದ ಕೌನ್ಸಿಲರ್ ಪತಿ

    ಚೆನ್ನೈ: ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕೌನ್ಸಿಲರ್ ಒಬ್ಬರ ಪತಿ ಹಾಡಹಗಲೇ ಫಿಲ್ಮಿಂ ರೀತಿಯಲ್ಲಿ ಕುಡುಗೋಲು ಹಿಡಿದು ವ್ಯಕ್ತಿಗಳ ಗುಂಪನ್ನು ಬೆನ್ನಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಈ ವ್ಯಕ್ತಿಯನ್ನು ವೆಟ್ರಿಚೆಲ್ವನ್ ಎಂದು ಗುರುತಿಸಲಾಗಿದ್ದು, ಮನಚನೆಲ್ಲೂರ್ ಬ್ಲಾಕ್‍ನ ದಕ್ಷಿಣ ತಥಮಂಗಲಂನ ಡಿಎಂಕೆ ಕೌನ್ಸಿಲರ್ ಆಗಿರುವ ನಿತ್ಯಾ ಅವರ ಪತಿಯಾಗಿದ್ದಾರೆ. ವೆಟ್ರಿಚೆಲ್ವನ್ ಅವರು ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೋರೇಷನ್ ಲಿಮಿಟೆಡ್ (TASMAC) ಮದ್ಯದ ಘಟಕವನ್ನು ನಡೆಸುತ್ತಿದ್ದಾರೆ. ಇದೀಗ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಗುಣಶೇಖರನ್ ಮತ್ತು ಅವರ ಸಹೋದರಿಗೆ ಕುಡುಗೋಲಿನಿಂದ ಬೀಸುತ್ತಾ ವೆಟ್ರಿಚೆಲ್ವನ್ ಬೆನ್ನಟ್ಟಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಇನ್ಮುಂದೆ ಮಾಸ್ಕ್ ಧರಿಸಿಲ್ಲ ಅಂದ್ರೆ ಮತ್ತೆ 500ರೂ. ಫೈನ್

    ವೆಟ್ರಿಚೆಲ್ವನ್ ಅವರು ಗುಣಶೇಖರ್ ಎಂಬುವವರಿಂದ ವೆಟ್ರಿಚೆಲ್ವನ್ 2.60 ಲಕ್ಷ ಸಾಲ ಪಡೆದು ವಾಪಸ್ ನೀಡಿರಲಿಲ್ಲ. ಅಲ್ಲದೇ ವೆಟ್ರಿಚೆಲ್ವನ್ ಗುಣಶೇಖರ್ ಅವರಿಗೆ ಈ ಹಿಂದೆ ಬೆದರಿಕೆಯೊಡ್ಡಿದ್ದರು. ಹೀಗಾಗಿ ಆತನನ್ನು ಹೆದರಿಸಲು ಬುಧವಾರ ಗುಣಶೇಖರ್ ಅವರ ಸಹೋದರರೊಂದಿಗೆ ಹೋಗಿದ್ದರು. ಈ ವೇಳೆ ವೆಟ್ರಿಚೆಲ್ವನ್ ಕುಡುಗೋಲು ಹಿಡಿದುಕೊಂಡು ಏಕಾಏಕಿ ಗುಣಶೇಖರ್ ಹಾಗೂ ಅವರ ಸಹೋದರರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    Live Tv
    [brid partner=56869869 player=32851 video=960834 autoplay=true]

  • ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ ಅಳಿಯ, ಮಗಳನ್ನ ಕುಡುಗೋಲಿನಿಂದ ಕೊಚ್ಚಿ ಕೊಂದ ತಂದೆ

    ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ ಅಳಿಯ, ಮಗಳನ್ನ ಕುಡುಗೋಲಿನಿಂದ ಕೊಚ್ಚಿ ಕೊಂದ ತಂದೆ

    ಚೆನ್ನೈ: ತನ್ನ ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದಕ್ಕೆ ಅಳಿಯ ಮತ್ತು ಮಗಳನ್ನು ಟುಟಿಕೋರಿನ್ ಜಿಲ್ಲೆಯ ತಂದೆಯೊಬ್ಬ ಕುಡುಗೋಲಿನಲ್ಲಿ ಕೊಚ್ಚಿ ಕೊಂದಿದ್ದಾನೆ.

    ಟುಟಿಕೋರಿನ್ ಜಿಲ್ಲೆಯ ಕೋವಿಲ್‍ಪಟ್ಟಿ ನಗರದ ಸಮೀಪದ ವೀರಪಟ್ಟಿ ಗ್ರಾಮದ ನಿವಾಸಿ ಮುತ್ತುಕುಟ್ಟಿ(50) ಆರೋಪಿಯಾಗಿದ್ದಾನೆ. ಆತನ ಪುತ್ರಿ ರೇಷ್ಮಾ(20) ಕೋವಿಲ್‍ಪಟ್ಟಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಇದನ್ನೂ ಓದಿ: ಎಸಿ ರೈಲಿನ ಒಳಗಡೆಯೇ ಛತ್ರಿ ಹಿಡಿದು ಕುಳಿತ ಪ್ರಯಾಣಿಕರು 

    ಅದೇ ಪ್ರದೇಶದ ದಿನಗೂಲಿ ಕಾರ್ಮಿಕ ಮಾಣಿಕರಾಜ್(26)ನನ್ನು ರೇಷ್ಮಾ ಪ್ರೀತಿಸುತ್ತಿದ್ದಳು. ಮುತ್ತುಕುಟ್ಟಿಗೆ ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದಾರೆ. ಆದರೆ ಮುತ್ತುಕುಟ್ಟಿ ಒಪ್ಪಿಕೊಂಡಿಲ್ಲ. ಪರಿಣಾಮ ಇಬ್ಬರು ಓಡಿ ಹೋಗಿ ಮದುವೆ ಮಾಡಿಕೊಂಡು ಮತ್ತೆ ಹಳ್ಳಿಗೆ ವಾಪಸ್ ಬಂದಿದ್ದರು.

    ಮುತ್ತುಕುಟ್ಟಿ ಅವರ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದನು. ಆದರೆ ಗ್ರಾಮ ಪಂಚಾಯತಿ ಮೂಲಕ ಇಬ್ಬರಿಗೂ ಗ್ರಾಮದಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಡಲಾಯಿತು. ಈ ಕಾರಣ ಮಗಳ ಮೇಲೆ ಮುತ್ತುಕುಟ್ಟಿಗೆ ಸಿಟ್ಟು ಹೆಚ್ಚುವಂತೆ ಮಾಡಿತು. ಸೋಮವಾರ ಸಂಜೆ ಮನೆಯಲ್ಲಿ ರೇಷ್ಮಾ ಮತ್ತು ಆಕೆಯ ಪತಿ ಮಾಣಿಕರಾಜ್ ಇಬ್ಬರೇ ಇದ್ದಾಗ ಮುತ್ತುಕುಟ್ಟಿ ಅಲ್ಲಿಗೆ ಹೋಗಿ ಇಬ್ಬರನ್ನೂ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ‘ಶೈಕ್ಷಣಿಕ ದತ್ತು ಕಾರ್ಯಕ್ರಮ’ ಅನುಷ್ಠಾನ 

    MARRIAGE

    ಘಟನೆಯ ಬಗ್ಗೆ ಮಾಹಿತಿಯನ್ನು ಆಧರಿಸಿ, ಎಟ್ಟಾಯಪುರಂ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಸುತ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಟುಟಿಕೋರಿನ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

    ಪ್ರಸುತ ಮುತ್ತುಕುಟ್ಟಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]