Tag: ಕುಡುಕರು

  • ಮಾನಸಿಕ ಅಸ್ವಸ್ಥನನ್ನು ರಕ್ಷಿಸಲು ಹೋದ ಪೊಲೀಸ್‍ಗೆ ಥಳಿಸಿದ ಕುಡುಕರು!

    ಮಾನಸಿಕ ಅಸ್ವಸ್ಥನನ್ನು ರಕ್ಷಿಸಲು ಹೋದ ಪೊಲೀಸ್‍ಗೆ ಥಳಿಸಿದ ಕುಡುಕರು!

    ಚೆನ್ನೈ: ಮಾನಸಿಕ ಅಸ್ವಸ್ಥನನ್ನು ರಕ್ಷಿಸಲು ತೆರಳಿದ ಪೊಲೀಸ್ ಕಾನ್ಸ್ ಸ್ಟೇಬಲ್‍ (Police Constable) ನನ್ನೇ ಕುಡುಕರಿಬ್ಬರು ಥಳಿಸಿದ ಘಟನೆ ತಮಿಳುನಾಡಿನ ಕನ್ಯಾಕುಮಾರಿ (Kanyakumari) ಯಲ್ಲಿ ನಡೆದಿದೆ.

    ಆರೋಪಿಗಳನ್ನು ಸ್ವರ್ಣರಾಜ್ ಹಾಗೂ ಜೆರಿನ್ ಎಂದು ಗುರುತಿಸಲಾಗಿದೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಕದ್ದ ಹಾಡು: ಪಾಕಿಸ್ತಾನಿ ಗಾಯಕನ ವಿಡಿಯೋ

    ಕುಡುಕರಿಬ್ಬರು ಮಾನಸಿಕ ಅಸ್ವಸ್ಥನ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಇದನ್ನು ಗಮನಿಸಿದ ಪೊಲೀಸ್ ಕಾನ್ಸ್ ಸ್ಟೇಬಲ್ ಅವರು ಆತನನ್ನು ಕುಡುಕರಿಂದ ರಕ್ಷಿಸಲು ತೆರಳಿದ್ದಾರೆ. ಇದರಿಂದ ಮತ್ತೆ ರೊಚ್ಚಿಗೆದ್ದ ಕುಡುಕರು ಪೊಲೀಸ್ (Police) ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ.

    ALCOHOL

    ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದನ್ನು ಗಮನಿಸಿದ ವಾಹನಸವಾರರು ಕೂಡಲೇ ಮಧ್ಯಪ್ರವೇಶ ಮಾಡಿದ್ದಾರೆ. ಅಲ್ಲದೆ ಕುಡುಕರಿಗೇ ಥಳಿಸಿದ್ದಾರೆ. ಸದ್ಯ ಮೂವರು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಆರೋಪಿಗಳ ವಿರುದ್ಧ ಕೀರಿಪಾರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಸವ ಜಯಂತಿ ಮೆರವಣಿಗೆಯಲ್ಲಿ ಕುಡುಕರ ಹಾಡು – ಸಾರ್ವಜನಿಕರಿಂದ ಟೀಕೆ

    ಬಸವ ಜಯಂತಿ ಮೆರವಣಿಗೆಯಲ್ಲಿ ಕುಡುಕರ ಹಾಡು – ಸಾರ್ವಜನಿಕರಿಂದ ಟೀಕೆ

    ದಾವಣಗೆರೆ: ಬಸವ ಜಯಂತಿಯಂದು ಕುಡುಕರ ಸಾಂಗ್ ಹಾಕಿ ಮೆರವಣಿಗೆಯಲ್ಲಿ ಬಸವಣ್ಣನವರಿಗೆ ಅವಮಾನ ಮಾಡಲಾಗಿದೆ.

    basavanna

    ಬಸವ ಜಯಂತಿ ಎಂದರೆ ಶ್ರದ್ಧಾ ಭಕ್ತಿಗಳಿಂದ ಬಸವಣ್ಣನವರ ವಚನಗಳನ್ನು ಅವರ ಅದರ್ಶಗಳನ್ನು ಜನರಿಗೆ ತಲುಪಿಸುವಂತಹ ಕೆಲಸ ಮಾಡಬೇಕು. ಆದರೆ ಜಿಲ್ಲೆಯ ಜಗಳೂರು ತಾಲೂಕಿನ ರಸ್ತೆಯ ಮಾಕುಂಟೆ ಗ್ರಾಮದಲ್ಲಿ ಬಸವಣ್ಣನವರಿಗೆ ಅವಮಾನ ಮಾಡುವ ರೀತಿ ಮೆರವಣೆಗೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

    ಪ್ರತಿ ವರ್ಷ ಬಸವ ಜಯಂತಿಯಂದು ಗ್ರಾಮದಲ್ಲಿ ಶ್ರೀ ಬಸವಣ್ಣನವರ ಭಾವಚಿತ್ರ ಹಿಡಿದು ಮೆರವಣೆಗೆ ಮಾಡುತ್ತಿರುವುದು ವಾಡಿಕೆ. ಆದರೆ ಮಾಕುಂಟೆ ಗ್ರಾಮದ ಮೆರವಣಿಗೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವ ಸಾಂಗ್‍ಗೆ ಬಾಟಲಿ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.

    ಗ್ರಾಮದ ಮುಖಂಡರು ಸ್ಥಳದಲ್ಲಿಯೇ ಇದ್ದರೂ ಅದನ್ನು ವಿರೋಧಿಸುವ ಬದಲು ಅವರು ಕೂಡ ಸಂಭ್ರಮಿಸಿದ್ದಾರೆ. ವೀಡಿಯೋಗೆ ಸಾರ್ವಜನಕರಿಂದ ಟೀಕೆ ವ್ಯಕ್ತವಾಗಿದೆ.

  • ಲಾಕ್‍ಡೌನ್ ಎಫೆಕ್ಟ್- ಮಳೆಯನ್ನೂ ಲೆಕ್ಕಿಸದೆ ಮದ್ಯದಂಗಡಿ ಮುಂದೆ ಕುಡುಕರ ಕ್ಯೂ

    ಲಾಕ್‍ಡೌನ್ ಎಫೆಕ್ಟ್- ಮಳೆಯನ್ನೂ ಲೆಕ್ಕಿಸದೆ ಮದ್ಯದಂಗಡಿ ಮುಂದೆ ಕುಡುಕರ ಕ್ಯೂ

    ರಾಯಚೂರು: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆ ನಾಳೆಯಿಂದ ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ನಗರಗಳಲ್ಲಿ ಒಂದು ವಾರ ಸಂಪೂರ್ಣ ಲಾಕ್‍ಡೌನ್ ಮಾಡಲಾಗುತ್ತಿದೆ. ಹೀಗಾಗಿ ಕುಡುಕರು ಮಳೆಯನ್ನೂ ಲೆಕ್ಕಿಸದೆ ಒಂದು ವಾರಕ್ಕಾಗುವಷ್ಟು ಮದ್ಯ ಖರೀದಿಸಲು ಸರತಿಯಲ್ಲಿ ನಿಂತಿದ್ದಾರೆ.

    ಒಂದು ವಾರ ಮದ್ಯದಂಗಡಿಗಳು ಸಹ ಬಂದ್ ಆಗುವ ಹಿನ್ನೆಲೆ ಮದ್ಯ ಪ್ರೀಯರಿಗೆ ಕಷ್ಟವಾಗಿದ್ದು, ಮಳೆಯನ್ನೂ ಲೆಕ್ಕಿಸದೆ ಮದ್ಯದ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ. ನಗರದ ಗಂಜ್ ರಸ್ತೆಯ ಎಂಎಸ್‍ಐಎಲ್ ಸೇರಿ ಬಹುತೇಕ ಕಡೆ ಮದ್ಯಕ್ಕಾಗಿ ದೊಡ್ಡ ಕ್ಯೂ ನಿಂತಿದ್ದು, ಒಂದು ವಾರಕ್ಕಾಗುವಷ್ಟು ಮದ್ಯ ಖರೀದಿಯಲ್ಲಿ ಕುಡುಕರು ಫುಲ್ ಬ್ಯುಸಿಯಾಗಿದ್ದಾರೆ.

    ನಾಳೆಯಿಂದ ರಾಯಚೂರು, ಸಿಂಧನೂರು ನಗರಗಳು ಸಂಪೂರ್ಣ ಬಂದ್ ಆಗಲಿದ್ದು, ಅಗತ್ಯ ಹಾಗೂ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮದ್ಯದಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ರಾಯಚೂರು ನಗರದಲ್ಲಿ ಸಂಜೆಯಿಂದ ಮಳೆ ಸುರಿಯುತ್ತಿದ್ದು, ರಸ್ತೆಯಲ್ಲಿ ನೀರು ಹರಿದು ವಾಹನ ಸವಾರರು ಪರದಾಡುವಂತಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇದಾವುದನ್ನೂ ಲೆಕ್ಕಿಸದ ಕುಡುಕರು ಮಳೆಯಲ್ಲೆ ಮದ್ಯದ ಅಂಗಡಿಗಳ ಮುಂದೆ ಕ್ಯೂ ನಿಂತು ಮದ್ಯ ಕೊಳ್ಳುತ್ತಿದ್ದಾರೆ.

  • ರಾಜ್ಯದಲ್ಲಿ ಕೊರೊನಾಗೆ ಮೂವರು ಬಲಿ – ಮದ್ಯ ಸಿಗದಕ್ಕೆ 13 ಸಾವು

    ರಾಜ್ಯದಲ್ಲಿ ಕೊರೊನಾಗೆ ಮೂವರು ಬಲಿ – ಮದ್ಯ ಸಿಗದಕ್ಕೆ 13 ಸಾವು

    ಬೆಂಗಳೂರು: ಕುಡುಕರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿರೋದು, ಕೊರೊನಾ ವೈರಸ್ ಲಾಕ್‍ಡೌನ್ ವೇಳೆ ಉದ್ಭವಿಸಿರುವ ಮತ್ತೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

    ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ದೇಶ ಲಾಕ್‍ಡೌನ್ ಆಗಿದೆ. ಹೀಗಾಗಿ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಮದ್ಯದಂಗಡಿಗಳು ಬಂದ್ ಆಗಿವೆ. ಇದರಿಂದ ಕುಡಿಯಲು ಮದ್ಯ ಸಿಗದೇ ಖಿನ್ನತೆಗೆ ಒಳಗಾಗಿ ಕಳೆದ ಆರು ದಿನಗಳಲ್ಲಿ ರಾಜ್ಯದ ಹಲವೆಡೆ ಒಟ್ಟು 13 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇಂದು ಮೂವರು ಮದ್ಯ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿವಮೊಗ್ಗ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮಲ್ಲೆಕುಪ್ಪ ಗ್ರಾಮದ ಎಂ.ಶಂಕರ (36) ಮದ್ಯೆ ಸಿಗದೆ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಬಂಗಾರಪೇಟೆ ತಾಲೂಕಿನ ದೊಡ್ಡೂರು ಕರಪನಹಳ್ಳಿಯ 30 ವರ್ಷದ ಆನಂದ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

    ಉಡುಪಿ ಜಿಲ್ಲೆ ಒಂದರಲ್ಲೇ ಆರು ಮಂದಿ ಕುಡುಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಇಬ್ಬರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೋಲಾರ, ಹುಬ್ಬಳ್ಳಿ ಮತ್ತು ಬೀದರ್ ನಲ್ಲಿ ತಲಾ ಒಬ್ಬೊಬ್ಬರು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಮುಳಬಾಗಿಲಿನ ಮುದಿಗೆರೆ ಮತ್ತು ತುಮಕೂರಿನಲ್ಲಿ ತಲಾ ಒಬ್ಬರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ಈ ಮಧ್ಯೆ ಕುಡುಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಸಿಎಂ ಪಿಣರಯ್ ವಿಜಯನ್, ವೈದ್ಯರ ಚೀಟಿ ತಂದರೆ ಮದ್ಯ ವಿತರಣೆ ಮಾಡಿ ಎಂದು ಆದೇಶ ಹೊರಡಿಸಿದ್ದಾರೆ.

  • ಎಣ್ಣೆ ಇಲ್ಲದೇ ಕುಡುಕರು ಕಂಗಾಲಾಗಿದ್ದಾರೆ: ಆಯನೂರು ಮಂಜುನಾಥ್

    ಎಣ್ಣೆ ಇಲ್ಲದೇ ಕುಡುಕರು ಕಂಗಾಲಾಗಿದ್ದಾರೆ: ಆಯನೂರು ಮಂಜುನಾಥ್

    ಶಿವಮೊಗ್ಗ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಭಾರತ 21 ದಿನಗಳ ಕಾಲ ಲಾಕ್‍ಡೌನ್ ಆಗಿದೆ. ಇದರ ಪರಿಣಾಮ ಮದ್ಯದ ಅಂಗಡಿಗಳು ಬಂದ್ ಆಗಿವೆ. ಆದರೆ ಎಣ್ಣೆಗೆ ದಾಸರಾಗಿರುವವರು ಎಣ್ಣೆ ಸಿಗದೇ ಕಂಗಾಲಾಗಿದ್ದು ಅವರ ಕಥೆ ಹೇಳತೀರದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕೊರೊನಾ ವೈರಸ್ ಕುರಿತು ಜಿಲ್ಲಾಡಳಿತ ಕೈಗೊಂಡಿರು ಮುಂಜಾಗ್ರತಾ ಕ್ರಮದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಆಯನೂರು ಮಂಜುನಾಥ್ ಅವರು, ಸಿ.ಎಲ್-2 ಅಂಗಡಿಗಳು ತೆರೆಯಲು ಸೂಚನೆ ಇದ್ದರೂ ಅವರು ತೆಗೆಯುತ್ತಿಲ್ಲ. ಇದರ ಪರಿಣಾಮ ಕುಡಿಯುವವರ ಮನೆಯಲ್ಲಿ ಸಮಸ್ಯೆಯಾಗಿದೆ ಎಂದು ಕೇಳಲ್ಪಟ್ಟಿದ್ದೇನೆ. ಎಣ್ಣೆ ಸಿಗದೇ ಪ್ರತಿದಿನ ಕುಡಿಯುವವರು ಹೇಗೇಗೋ ಆಡ್ತಿದ್ದಾರೆ ಎಂದು ಕುಡುಕರ ಸಮಸ್ಯೆ ಬಗ್ಗೆ ಮಾತನಾಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು, ವೈನ್ ಶಾಪ್‍ಗಳಿಗೆ ಸೀಲ್ ಮಾಡುವ ಮುನ್ನವೇ ಅಂಗಡಿಗಳಿಂದ ಮದ್ಯ ಹೊರಗೆ ಸಾಗಿಸಲಾಗಿದೆ ಎಂದು ಆರೋಪಿಸಿದರು. ಅಬಕಾರಿ ಇಲಾಖೆ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದು, ಅಂಗಡಿಗಳಿಂದ ಮದ್ಯವನ್ನು ಮನೆಗಳಿಗೆ ಹಾಗೂ ಇತರೆ ಅಂಗಡಿಗಳಿಗೆ ಸಾಗಿಸಿ, ಅಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಗಮನವೇ ಹರಿಸುತ್ತಿಲ್ಲ. ಜನರು ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಸ್ಥಳಗಳಲ್ಲಿ ಗುಂಪು ಗುಂಪಾಗಿ ಸೇರುತ್ತಿದ್ದಾರೆ ಎಂದು ಕಿಡಿಕಾರಿದರು.

  • ಕುಡುಕರಿಗಿಲ್ಲ ಕೊರೊನಾ ಭಯ- ಕುಡಿದು ಬಾರ್‌ನಲ್ಲಿ ದಾಂಧಲೆ

    ಕುಡುಕರಿಗಿಲ್ಲ ಕೊರೊನಾ ಭಯ- ಕುಡಿದು ಬಾರ್‌ನಲ್ಲಿ ದಾಂಧಲೆ

    ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆದೇಶ ಹೊರಡಿಸುತ್ತಿದ್ದಂತೆಯೇ ರಾಜ್ಯದ ಜನ ಮುಂಜಾಗ್ರತಾ ಕ್ರಮವಾಗಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಆದರೆ ಕುಡುಕರಿಗೆ ಮಾತ್ರ ಈ ಕೊರೊನಾದ ಭಯವೇ ಇಲ್ಲದಂತಾಗಿದೆ.

    ಹೌದು. ಬಾರ್ ಗಳಲ್ಲಿ ಕುಡುಕರು ಎಣ್ಣೆ ಕುಡಿದುಕೊಂಡು ಕುಳಿತಿದ್ದಾರೆ. ಈ ಮೂಲಕ ಅವರಲ್ಲಿ ಕೊರೊನಾ ಭಯ ಕಾಣುತ್ತಿಲ್ಲ. ಸರ್ವ ರೋಗಕ್ಕೂ ಸಾರಾಯಿ ಮದ್ದು ಅನ್ನೋ ಹಾಗೆ ಕುಡುಕರು ಮಾತ್ರ ಬಾರ್ ಗಳಲ್ಲಿ ಠಿಕಾಣಿ ಹೂಡುತ್ತಿದ್ದಾರೆ.

    ಇದಕ್ಕೆ ಸಾಕ್ಷಿಯಾಗಿ ನಗರದ ಕುಂದಹಳ್ಳಿಯ ಬಾರೊಂದರಲ್ಲಿ ಕಂಠಪೂರ್ತಿ ಕುಡಿದು ಗೂಂಡಾಗಿರಿ ನಡೆಸಿದ್ದಾರೆ. ಕುಂದಲಹಳ್ಳಿ ಸೆಂದಿಲ್, ಅನಿಲ್, ರಾಜ, ಗುಂಡು ಮಣಿ ಕುಡಿದು 1800 ರೂಪಾಯಿ ಬಿಲ್ ಮಾಡಿದ್ದರು. ಆದರೆ ಈ ಬಿಲ್ ಕೇಳಿದ್ದಕ್ಕೆ ಬಿಯರ್ ಬಾಟಲ್ ಒಡೆದು ಹಾಕಿದ್ದಾರೆ. ಅಲ್ಲದೆ ಕ್ಯಾಶಿಯರ್ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಘಟನೆ ಸಂಬಂಧ ಹೆಚ್ ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯದ ಕಲಬುರಗಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ಮೊದಲ ಬಲಿ ಪಡೆದ ಹಿನ್ನೆಲೆಯಲ್ಲಿ ರಾಜ್ಯವೇ ತಲ್ಲಣಗೊಂಡಿದೆ. ಈ ಮಾರಣಾಂತಿಕ ವೈರಸ್ ನಿಂದ ರಾಜ್ಯವನ್ನ ಉಳಿಸಲು ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಒಂದು ವಾರಗಳ ಕಾಲ ಮಾಲ್, ಸಿನಿಮಾ ಮಂದಿರ, ಜಿಮ್, ಸ್ಪೋಟ್ರ್ಸ್ ಕ್ಲಬ್, ಪಬ್, ನೈಟ್ ಕ್ಲಬ್ ಗಳನ್ನ ಬಂದ್ ಮಾಡುವಂತೆ ಆದೇಶ ಹೊರಡಿಸಿದೆ.

    ಸಾರ್ವಜನಿಕರು ಹೆಚ್ಚಾಗಿ ಸೇರೋ ಜಾತ್ರೆ, ಮದುವೆ, ಸೆಮಿನಾರ್ ಸೇರಿದಂತೆ ಅನೇಕ ಸಮಾರಂಭಗಳನ್ನ ಒಂದು ವಾರಗಳ ಕಾಲ ಮುಂದೂಡುವಂತೆ ತಿಳಿಸಿದೆ. ಹೀಗಾಗಿ ಜನರಿಂದ ತುಂಬಿರುತ್ತಿದ್ದ ಬಸ್ ನಿಲ್ದಾಣಗಳು, ರೈಲ್ವೇ ನಿಲ್ದಾಣಗಳು, ಮೆಟ್ರೋ ಟ್ರೈನ್ ಸೇರಿದಂತೆ ಜನರಿಲ್ಲದೆ ಖಾಲಿ ಖಾಲಿಯಾಗಿ ಕೊರೊನಾ ವೈರಸ್ ಜನರಲ್ಲಿ ಭಯ ಭೀತಿ ಉಂಟುಮಾಡಿದೆ.

  • ಕೊರೊನಾ ಬರುತ್ತೆ ಊದಲ್ಲ ಅಂದ್ರೆ ಊದಲ್ಲ- ಕುಡುಕರ ಪಟ್ಟು

    ಕೊರೊನಾ ಬರುತ್ತೆ ಊದಲ್ಲ ಅಂದ್ರೆ ಊದಲ್ಲ- ಕುಡುಕರ ಪಟ್ಟು

    ಬೆಂಗಳೂರು: ಕೊರೊನಾ ಎಫೆಕ್ಟ್, ಕುಡುಕರಿಗೂ ತಟ್ಟಿದ್ದು, ಮದ್ಯಪಾನ ಮಾಡಿ ವಾಹನ ಓಡಿಸುವವರು ಟ್ರಾಫಿಕ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಸರ್.. ನಮ್ಮನ್ನ ಬಿಟ್ಬಿಡಿ. ಡ್ರಿಂಕ್ ಆಂಡ್ ಡ್ರೈವ್ ಮಷೀನ್‍ಗೆ ಊದಿದ್ರೆ ನಮ್ಗೂ ಕೊರೊನಾ ವೈರಸ್ ಬರುವ ಸಾಧ್ಯತೆ ಇದೆ. ನಾವು ಊದಲ್ಲ ಅಂದ್ರೆ ಊದಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ಬೆಂಗಳೂರಿನ ಹಲಸೂರು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳ ಕುರಿತು ತಪಾಸಣೆ ಮಾಡುತ್ತಿದ್ದ ವೇಳೆ ಕೆಲವರು ಈ ರೀತಿ ಹೇಳುತ್ತಿದ್ದರು. ಕೆಲವರು ಮಷೀನ್‍ಗೆ ಊದಿ ಪೊಲೀಸರಿಗೆ ಸಹಕರಿಸಿದರೆ, ಇನ್ನೂ ಕೆಲವರು ಬಿಟ್ಬಿಡಿ ಸರ್.. ಊದಿದರೆ ನಮಗೂ ಕೊರೊನಾ ಬರುವ ಸಾಧ್ಯತೆ ಇದೆ ಎನ್ನುತ್ತಿದ್ದರು.

    ಉಸಿರಾಟ ಹಾಗೂ ಸ್ಪರ್ಶದಿಂದ ವೈರಸ್ ಹರಡಬಹುದು ಎಂಬ ಆತಂಕದಿಂದ ತಪಾಸಣಾ ಮಷೀನ್ ಗೆ ಊದಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ದಿನಗಳಿಂದ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಯನ್ನು ಸಂಚಾರಿ ಪೊಲೀಸರು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಹೀಗಾಗಿ ಕೆಲ ಕುಡುಕರು ಫುಲ್ ಬಿಂದಾಸ್ ಆಗಿದ್ದರು. ಆದರೆ ಸಂಚಾರಿ ಪೊಲೀಸರು ಇದೀಗ ಮತ್ತೆ ಫೀಲ್ಡ್ ಗೆ ಇಳಿದಿದ್ದು, ವಾಹನ ಸವಾರರು ಸಂಚಾರಿ ಪೊಲೀಸರಿಗೆ ಸಹಕರಿಸುತ್ತಿಲ್ಲ. ಹೀಗಾಗಿ ರಾತ್ರಿ ಕುಡುಕರನ್ನು ಮನವೋಲಿಸಿ ಊದಿಸೋದೇ ಸಂಚಾರಿ ಪೊಲೀಸರಿಗೆ ದೊಡ್ಡ ಕೆಲಸವಾಗಿದೆ.

  • 190 ಪುರುಷರನ್ನು ರೇಪ್‍ಗೈದಿದ್ದ ಸಲಿಂಗಕಾಮಿಗೆ ಶಿಕ್ಷೆ ಪ್ರಕಟ

    190 ಪುರುಷರನ್ನು ರೇಪ್‍ಗೈದಿದ್ದ ಸಲಿಂಗಕಾಮಿಗೆ ಶಿಕ್ಷೆ ಪ್ರಕಟ

    – ಕುಡಿದು ತೂರಾಡುವವರೇ ಇವನ ಟಾರ್ಗೆಟ್
    – ಶಿಕ್ಷಣಕ್ಕಾಗಿ ಬಂದವನ ಬಣ್ಣ ಬಯಲು

    ಲಂಡನ್: ಪುರುಷರನ್ನು ಅತ್ಯಾಚಾರಗೈದು, ಲೈಂಗಿಕ ಕಿರುಕುಳ ನೀಡಿದ್ದ 36 ವರ್ಷದ ರೆನ್ಹಾರ್ಡ್ ಸಿನಾಗಾಗೆ ಇಂಗ್ಲೆಂಡ್ ನ್ಯಾಯಾಲಯ ಜೀವಾವಧಿ ಶಿಕ್ಷೆಯ ತೀರ್ಪನ್ನು ನೀಡಿದೆ. ಸುದೀರ್ಘವಾಗಿ ಪ್ರಕರಣದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಸಿನಾಗಾ ಅನೇಕರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈತನನ್ನು ಅಪರಾಧಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.

    ಎರಡೂವರೆ ವರ್ಷದ ಅವಧಿಯಲ್ಲಿ ಸಿನಾಗಾ ಹಲವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹಲವರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡೋದಾಗಿ ಕರೆ ತರುತ್ತಿದೆ. ಕೆಲವೊಮ್ಮೆ ಮೊಬೈಲ್ ಚಾರ್ಜ್ ಗೆ ಸಹಾಯ ಮಾಡುವ ನೆಪದಲ್ಲಿ ಕರೆ ತಂದು ಅತ್ಯಾಚಾರ ಎಸಗುತ್ತಿದ್ದನು ಎಂದು ವರದಿಯಾಗಿದೆ.

    ಬಾರ್ ಗಳಿಂದ ಕುಡಿದು ತೂರಾಡುತ್ತಾ ಹೊರ ಬರುವ ಯುವಕರನ್ನೇ ಸಿನಾಗಾ ಟಾರ್ಗೆಟ್ ಮಾಡುತ್ತಿದ್ದನು. ನಶೆಯಲ್ಲಿ ಇರುವ ಯುವಕರನ್ನು ಮನೆಗೆ ಕರೆ ತಂದು ರೇಪ್ ಮಾಡುತ್ತಿದ್ದನು. ಬೆಳಗ್ಗೆ ನಶೆಯಲ್ಲಿದ್ದ ನಿಮಗೆ ಆಶ್ರಯ ನೀಡಿದ್ದೇನೆ ಎಂದು ಹೇಳಿ ಕಳುಹಿಸುತ್ತಿದ್ದನು. 2017 ಜುಲೈನಲ್ಲಿ ನಶೆಯಲ್ಲಿದ್ದ 18 ವರ್ಷದ ಯುವಕನನ್ನು ಮನೆಗೆ ಕರೆ ತಂದಿದ್ದಾನೆ. ಸೆಕ್ಸ್ ಮಾಡುತ್ತಿದ್ದ ವೇಳೆ ಯುವಕ ಎಚ್ಚರಗೊಂಡಿದ್ದಾನೆ. ಕೂಡಲೇ ಆತನ ಮನೆಯಿಂದ ಹೊರ ಬಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

    ದೂರು ದಾಖಲಿಸಿಕೊಂಡ ತನಿಖೆಗಳಿದ ಪೊಲೀಸರು ಸಿನಾಗಾನನ್ನ ಬಂಧಿಸಿದ್ದಾರೆ. ಆತನ ಮೊಬೈಲ್ ನಲ್ಲಿ ಹಲವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ಫೋಟೋ ಮತ್ತು ವಿಡಿಯೋಗಳು ಲಭ್ಯವಾಗಿವೆ. ಇಷ್ಟು ಮಾತ್ರವಲ್ಲದೇ ತಾನು ಅತ್ಯಾಚಾರಗೈದ ಯುವಕರ ಹೆಸರು ಮತ್ತು ವಿಳಾಸದ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದನು. ಮ್ಯಾಂಚೆಸ್ಟರ್ ನಗರದಲ್ಲಿ 48 ಜನರ ಮೇಲೆ ಅತ್ಯಾಚಾರಗೈದಿರುವುದು ದೃಢಪಟ್ಟಿದೆ. ಆತನ ಮೊಬೈಲಿನಲ್ಲಿ ವಿಡಿಯೋ ಆಧರಿಸಿ ಸುಮಾರು 70 ಸಂತ್ರಸ್ತರನ್ನು ಪೊಲೀಸರು ಹುಡುಕುತ್ತಿದ್ದಾರೆ.

    ಪೊಲೀಸರ ಪ್ರಕಾರ ಸಿನಾಗಾ ಬರೋಬ್ಬರಿ 190 ಜನರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಹುತೇಕರಿಗೆ ತಮ್ಮ ಮೇಲೆ ನಡೆದ ಅತ್ಯಾಚಾರ ನಡೆದಿರೋದು ತಿಳಿಯದ ಕಾರಣ ಪ್ರಕರಣ ಹೊರ ಬಂದಿರಲಿಲ್ಲ. ಇಂಡೋನೇಷ್ಯಾ ಮೂಲದವನಾದ ಸಿನಾಗಾ, ಶಿಕ್ಷಣಕ್ಕಾಗಿ 2007ರಲ್ಲಿ ಇಂಗ್ಲೆಂಡ್ ಗೆ ಆಗಮಿಸಿದ್ದನು. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರದಲ್ಲಿ ಪದವಿ ಸಹ ಪಡೆದುಕೊಂಡಿದ್ದಾರೆ. ಭೂಗೋಳ ಶಾಸ್ತ್ರದಲ್ಲಿ ಡಾಕ್ಟರೇಟ್ ಮಾಡುತ್ತಿದ್ದಾಗ ಸಿನಾಗಾನ ಬಂಧನವಾಗಿದೆ.

  • ಕುಡುಕರಿಗೆ ಬೆಂಗಳೂರು ಪೊಲೀಸ್ರಿಂದ ‘ಐಲ್ಯಾಂಡ್’ನಲ್ಲಿ ರಾಜ ಮರ್ಯಾದೆ

    ಕುಡುಕರಿಗೆ ಬೆಂಗಳೂರು ಪೊಲೀಸ್ರಿಂದ ‘ಐಲ್ಯಾಂಡ್’ನಲ್ಲಿ ರಾಜ ಮರ್ಯಾದೆ

    ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆ ಬಳಿಕ ಕುಡಿದು ರಸ್ತೆಯಲ್ಲಿ ತೂರಾಡುವ ಮಂದಿಗೆ ಬೆಂಗಳೂರು ಪೊಲೀಸ್ರು ರಾಜ ಮರ್ಯಾದೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.

    ಕುಡಿದು ರಸ್ತೆಯಲ್ಲಿ ತೂರಾಡುವ ಎಣ್ಣೆ ಪ್ರಿಯರಿಗೆ ಸುರಕ್ಷಿತವಾಗಿ ಕಳುಹಿಸಿಕೊಡಲು ಐಲ್ಯಾಂಡ್ ವ್ಯವಸ್ಥೆ ಮಾಡಲಾಗಿದೆ. ಐಲ್ಯಾಂಡ್ ನಲ್ಲಿ ಸುವ್ಯವಸ್ಥಿತವಾಗಿರುವ ಬೆಡ್ ವ್ಯವಸ್ಥೆ, ಕುಡಿದ ಮತ್ತಿನಲ್ಲಿ ಬಿದ್ದು ಗಾಯಗೊಂಡರೆ ಪ್ರಥಮ ಚಿಕಿತ್ಸೆ ಮಾಡುವ ವ್ಯವಸ್ಥೆ ಹಾಗೂ ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಇದನ್ನು ಓದಿ: ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ ಕೊಡ್ತೀವಿ – ಅಬಕಾರಿ ಸಚಿವ

    ಅಷ್ಟೇ ಅಲ್ಲದೇ ರಾತ್ರಿ ಐಲ್ಯಾಂಡ್ ನಲ್ಲಿ ಎಣ್ಣೆ ಕಿಕ್ ಇಳಿದ ಮೇಲೆ ಸುರಕ್ಷಿತವಾಗಿ ಕಳಿಸಿಕೊಡಲು ಒಲಾ, ಉಬರ್, ವ್ಯವಸ್ಥೆ ಮಾಡಿದ್ದಾರೆ. ಸಂಬಂಧ ಪಟ್ಟವರ ಹೆಸರು, ವಿಳಾಸ ಪಡೆದು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯ ಹಾಟ್ ಜೋನ್ ಹಾಗೂ ಪಬ್‍ಗಳು ಇರುವ ಜಾಗದಲ್ಲಿ ಸುಮಾರು ಆರಕ್ಕೂ ಹೆಚ್ಚು ಐಲ್ಯಾಂಡ್‍ಗಳ ವ್ಯವಸ್ಥೆಯನ್ನು ಬೆಂಗಳೂರು ಪೊಲೀಸರು ಮಾಡಿದ್ದಾರೆ. ವಿಶೇಷ ಎಂದರೆ ಕುಡಿದು ರಸ್ತೆಯಲ್ಲಿ ತೂರಾಡುವ ಯುವತಿಯರಿಗೆ ಹೆಚ್ಚು ಪ್ರಾಶಸ್ತ್ಯ ಕೊಡಲು ಪೊಲೀಸ್ರು ಚಿಂತಿಸಿದ್ದಾರೆ.

  • ಬೆಂಗ್ಳೂರಿನಲ್ಲಿ ಮಧ್ಯರಾತ್ರಿ ಕುಡುಕರ ರಂಪಾಟ – ಆಟೋದಲ್ಲಿ ಬಂದು ಹಣ ನೀಡದೇ ಅವಾಜ್

    ಬೆಂಗ್ಳೂರಿನಲ್ಲಿ ಮಧ್ಯರಾತ್ರಿ ಕುಡುಕರ ರಂಪಾಟ – ಆಟೋದಲ್ಲಿ ಬಂದು ಹಣ ನೀಡದೇ ಅವಾಜ್

    ಬೆಂಗಳೂರು: ಮಧ್ಯರಾತ್ರಿ ಕುಡುಕರು ರಂಪಾಟ ನಡೆಸಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

    ಇಬ್ಬರು ಯುವಕರು ಆಟೋದಲ್ಲಿ ಮೆಜೆಸ್ಟಿಕ್‍ನಿಂದ ನರ್ಗತರ ಪೇಟೆಗೆ ಬರುತ್ತಾರೆ. ಈ ವೇಳೆ ನೂರು ರೂಪಾಯಿ ಆಟೋ ಚಾರ್ಜ್ ನೀಡದೆ ದರ್ಪ ತೋರಿದ್ದಾರೆ. ಆಟೋ ಬಾಡಿಗೆ ಕೇಳಿದ್ದಕ್ಕೆ, ನೀನೇ ಕೊಡು ಎಂದು ಗಲಾಟೆ ಮಾಡಿದ್ದಾರೆ.

    ಯುವಕರು ಮೊದಲು ಐವತ್ತು ಕೊಟ್ಟು, ಉಳಿದ 50 ಕೊಡು ಎಂದು ಕಿರಿಕ್ ಮಾಡುತ್ತಾರೆ. ಕುಡುಕರ ರಂಪಾಟದಿಂದ ಆಟೋ ಚಾಲಕ ಬೇಸತ್ತು ಹೋದರು. ಬಳಿಕ ಪೊಲೀಸರ ಸಹಾಯದಿಂದ ಚಾಲಕ ಕುಡುಕರಿಂದ ಆಟೋ ಬಾಡಿಗೆ ಪಡೆದಿದ್ದಾರೆ.

    ಈ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.