Tag: ಕುಟುಂಬ ಯೋಜನೆ

  • ಒಡಿಶಾ ಸರ್ಕಾರದಿಂದ ನವ ವಿವಾಹಿತರಿಗೆ ಕಾಂಡೋಮ್, ಪ್ರೆಗ್ನೆನ್ಸಿ ಟೂಲ್ ಹೊಂದಿದ `ವೆಡ್ಡಿಂಗ್ ಕಿಟ್’ ಗಿಫ್ಟ್

    ಒಡಿಶಾ ಸರ್ಕಾರದಿಂದ ನವ ವಿವಾಹಿತರಿಗೆ ಕಾಂಡೋಮ್, ಪ್ರೆಗ್ನೆನ್ಸಿ ಟೂಲ್ ಹೊಂದಿದ `ವೆಡ್ಡಿಂಗ್ ಕಿಟ್’ ಗಿಫ್ಟ್

    ಭುವನೇಶ್ವರ: ಜನಸಂಖ್ಯೆ ನಿಯಂತ್ರಣಾ ಕ್ರಮಗಳ ಭಾಗವಾಗಿ ಒಡಿಶಾ ಸರ್ಕಾರವು ಹೊಸ ಉಪಕ್ರಮವನ್ನು ಪರಿಚಯಿಸುತ್ತಿದೆ. ಕಾಂಡೋಮ್ ಸೇರಿದಂತೆ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಇತರ ಅಗತ್ಯ ವಸ್ತುಗಳನ್ನು ಹೊಂದಿರುವ `ವೆಡ್ಡಿಂಗ್ ಕಿಟ್’ಗಳನ್ನು ಉಡುಗೊರೆಯಾಗಿ ನೀಡಲು ಸರ್ಕಾರ ಸಿದ್ಧವಾಗಿದೆ. ಇದು ಕುಟುಂಬ ಯೋಜನೆ (ಫ್ಯಾಮಿಲಿ ಪ್ಲ್ಯಾನಿಂಗ್) ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.

    ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಹೆಚ್‌ಎಂ) ಅಡಿಯಲ್ಲಿ `ನಯಿ ಪಹಲ್ ಯೋಜನೆ’ ಅಥವಾ `ನಬದಂಪತಿ ಕಿಟ್’ ವಿತರಿಸುವ ಹೊಸ ಉಪಕ್ರಮವನ್ನು ಜಾರಿಗೆ ತರುತ್ತಿದೆ. ಇದು ಯುವ ಜೋಡಿಗಳು ತಾತ್ಕಾಲಿಕ ಅಥವಾ ಶಾಶ್ವತ ಕುಟುಂಬ ಯೋಜನೆಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನೂ ಸರ್ಕಾರ ಹೊಂದಿದೆ. ಇದನ್ನೂ ಓದಿ: ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಿಜೆಪಿ, ಆರ್‌ಎಸ್‍ಎಸ್‍ನ ಯಾವುದೇ ಪಾತ್ರವಿಲ್ಲ: ಸತೀಶ್ ಜಾರಕಿಹೊಳಿ

    ವೆಡ್ಡಿಂಗ್ ಕಿಟ್‌ನಲ್ಲಿ ಏನಿರಲಿದೆ?
    ವಿವಾಹದ ಕಿಟ್‌ನಲ್ಲಿ ಕುಟುಂಬ ಮದುವೆ ನೋಂದಣಿ ನಮೂನೆ (ಅರ್ಜಿ), ಕಾಂಡೋಮ್‌ಗಳು, ಗರ್ಭನಿರೋಧಕ (ಒಸಿಪಿ) ಹಾಗೂ ತುರ್ತು ಗರ್ಭನಿರೋಧಕ ಮಾತ್ರೆಗಳು (ಇಸಿಪಿ) ಹಾಗೂ ಕುಟುಂಬ ಯೋಜನೆ ಮತ್ತು ಅದರ ಪ್ರಯೋಜನಗಳನ್ನು ತಿಳಿಸುವ ಒಂದು ಕಿರುಪುಸ್ತಿಕೆಯನ್ನು ಒಳಗೊಂಡಿರುತ್ತದೆ. ಇದರ ಹೊರತಾಗಿ, ಗರ್ಭಧಾರಣೆ ಪರೀಕ್ಷಾ ಕಿಟ್ (ಫ್ರೆಗ್ನೆನ್ಸಿ ಕಿಟ್), ಟವೆಲ್, ಬಾಚಣಿಗೆ, ಬಿಂದಿ, ಉಗುರು ಕತ್ತಿರಿಸುವ ಸಾಧನ (ನೇ‌ಲ್ಸ್‌ ಕಟ್ಟರ್‌) ಹಾಗೂ ಕನ್ನಡಿ ಸೇರಿದಂತೆ ಇತರ ಸಾಮಗ್ರಿಗಳನ್ನು ಸಹ ಒಳಗೊಂಡಿರುತ್ತದೆ. ಇದನ್ನೂ ಓದಿ: ಡ್ರಗ್ಸ್ ಸೇವಿಸಿ ಕಾರು ಅಪಘಾತ ಮಾಡಿಕೊಂಡಿದ್ದ ಖ್ಯಾತ ನಟಿ ಕೊನೆಗೂ ಉಳಿಯಲಿಲ್ಲ: ನಟಿಯ ನಿಧನಕ್ಕೆ ಹಾಲಿವುಡ್ ಕಂಬನಿ

    ಈ ವರ್ಷದ ಸೆಪ್ಟಂಬರ್ ತಿಂಗಳಿನಿಂದ ನವ ವಿವಾಹಿತರಿಗೆ ವೆಡ್ಡಿಂಗ್ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾನ್ಯತೆ ಪಡೆದ ಆಶಾ ಕಾರ್ಯಕರ್ತರಿಗೆ ವಿತರಿಸುವ ಜವಾಬ್ದಾರಿ ನೀಡಲಾಗುತ್ತದೆ. ಅವರು ವಿವಾಹ ನಡೆಯುವ ಮನೆಗಳಿಗೆ ತೆರಳಿ ವೆಡ್ಡಿಂಗ್ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಕುಟುಂಬ ಯೋಜನಾ ನಿರ್ದೇಶಕ ಡಾ. ಬಿಜಯ್ ಪಾಣಿಗ್ರಾಹಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಲಸಿಗ ಮುಸ್ಲಿಮರು ಕುಟುಂಬ ಯೋಜನೆ ನೀತಿಯನ್ನು ಅಳವಡಿಸಿಕೊಳ್ಳಬೇಕು – ಅಸ್ಸಾಂ ಸಿಎಂ

    ವಲಸಿಗ ಮುಸ್ಲಿಮರು ಕುಟುಂಬ ಯೋಜನೆ ನೀತಿಯನ್ನು ಅಳವಡಿಸಿಕೊಳ್ಳಬೇಕು – ಅಸ್ಸಾಂ ಸಿಎಂ

    ದಿಸ್ಪುರ: ವಲಸಿಗ ಅಲ್ಪಸಂಖ್ಯಾತರು ಕುಟುಂಬ ಯೋಜನೆ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಸಲಹೆ ನೀಡಿದ್ದಾರೆ.

    ಅಸ್ಸಾಂ ಸರ್ಕಾರಕ್ಕೆ 1 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಳದಿಂದಾಗಿ ಅಲ್ಪಸಂಖ್ಯಾತರಲ್ಲಿ ಬಡತನ ಹೆಚ್ಚಾಗುತ್ತಿದೆ. ಹೀಗಾಗಿ ಬಡತನವನ್ನು ಕಡಿಮೆ ಮಾಡಲು ಸಮುದಾಯದ ಜನ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ನಾವು ಈಗಾಗಲೇ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಜನಸಂಖ್ಯಾ ನೀತಿಯನ್ನು ಜಾರಿಗೆ ತಂದಿದ್ದೇವೆ. ಜನಸಂಖ್ಯೆಯ ಹೊರೆಯನ್ನು ಕಡಿಮೆ ಮಾಡಲು ನಾವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ ಎಂದು ಅವರು ಹೇಳಿದರು.

    ನಮ್ಮ ಸರ್ಕಾರ ಸಮುದಾಯದ ಮಹಿಳೆಯರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಇದರಿಂದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು ಎಂದು ಶರ್ಮಾ ಹೇಳಿದರು. ಇದನ್ನೂ ಓದಿ: ಅಸ್ಸಾಂನಲ್ಲಿ ಮದರಸಾ, ಸಂಸ್ಕೃತ ಶಾಲೆಗಳು ಬಂದ್

    ನಾವು ಜನಸಂಖ್ಯೆಯನ್ನು ನಿಯಂತ್ರಿಸಿದರೆ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

  • ಮದ್ವೆಗೂ ಮುನ್ನ ವಧುವಿನಿಂದ ಷರತ್ತು – ಕಂಡಿಷನ್ ಕೇಳಿ ನಾಚಿ ನೀರಾದ ವರ

    ಮದ್ವೆಗೂ ಮುನ್ನ ವಧುವಿನಿಂದ ಷರತ್ತು – ಕಂಡಿಷನ್ ಕೇಳಿ ನಾಚಿ ನೀರಾದ ವರ

    ಪಾಟ್ನಾ: ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುಂಚೆ ವಧು ಷರತ್ತು ಹಾಕುವುದು ಸಾಮಾನ್ಯವಾಗಿದೆ. ಅದೇ ರೀತಿ ವಧುವೊಬ್ಬಳು ತಾನು ಮದುವೆಯಾಗುವ ವರನಿಗೆ ಎರಡು ಷರತ್ತುಗಳನ್ನು ವಿಧಿಸಿ ಸುದ್ದಿಯಾಗಿದ್ದಾಳೆ.

    ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ ನವೆಂಬರ್ 19 ರಂದು ಅಂದರೆ ನಾಳೆ ವರ ಕೈಸರ್ ಹಾಗೂ ವಧು ಸೋನಿ ಜೋಡಿಯ ಮದುವೆ ನಿಶ್ಚಯವಾಗಿದೆ. ಆದರೆ ವಧು ಮದುವೆಗೂ ಮುನ್ನ ವರನಿಗೆ ಎರಡು ಷರತ್ತುಗಳನ್ನು ಹಾಕಿದ್ದಾಳೆ.

    ಮನೆಯಲ್ಲಿ ಶೌಚಾಲಯ ನಿರ್ಮಾಣವಾಗಬೇಕು. ಇದು ಆಕೆಯ ಮೊದಲನೇಯ ಷರತ್ತು. ಮದುವೆಯ ಪತ್ರಿಕೆಯಲ್ಲಿ ಕುಟುಂಬ ಯೋಜನೆ (ಫ್ಯಾಮಿಲಿ ಪ್ಲ್ಯಾನಿಂಗ್) ಬಗ್ಗೆ ಸಂದೇಶ ನೀಡಬೇಕು ಎರಡನೇ ಷರತ್ತು ಹಾಕಿದ್ದಾಳೆ. ಎರಡನೇ ಕಂಡೀಷನ್ ಕೇಳಿ ವರ ನಾಚಿಕೊಂಡು ನಕ್ಕಿದ್ದಾನೆ.

    ವಧು ಸೋನುವಿನ ಎರಡು ಷರತ್ತಿಗೂ ವರ ಒಪ್ಪಿಗೆ ಸೂಚಿಸಿದ್ದಾನೆ. ಅಷ್ಟೇ ಅಲ್ಲದೇ ವಧು ಮದುವೆ ಕಾರ್ಡ್ ನಲ್ಲಿ ಕುಟುಂಬ ಯೋಜನೆ ಸ್ಲೋಗನ್ ಜೊತೆ ಸ್ವಚ್ಛತೆ ಬಗ್ಗೆ ಜಾಗೃತಿ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಬಗ್ಗೆ ಸಂದೇಶ ಹಾಕಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ.

    ವರ ಕೈಸರ್ ಭಾವಿ ಪತ್ನಿಯ ಎಲ್ಲ ಮನವಿ ಹಾಗೂ ಷರತ್ತಿಗೂ ಖುಷಿಯಾಗಿ ಒಪ್ಪಿಕೊಂಡಿದ್ದಾನೆ. ವಧು ಸೋನು ಈ ರೀತಿಯ ಜಾಗೃತಿಯ ಸಂದೇಶವನ್ನು ಸಾರಲು ಮುಂದಾಗಿದ್ದಕ್ಕೆ ವರ ಕೈಸರ್ ತುಂಬಾ ಸಂತಸವನ್ನು ವ್ಯಕ್ತಪಡಿಸಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews