Tag: ಕುಟುಂಬ ಕಲಹ

  • Bengaluru | ಕುಟುಂಬ ಕಲಹದಿಂದ ಮಾನಸಿಕವಾಗಿ ನೊಂದು ಟೆಕ್ಕಿ ಆತ್ಮಹತ್ಯೆ

    Bengaluru | ಕುಟುಂಬ ಕಲಹದಿಂದ ಮಾನಸಿಕವಾಗಿ ನೊಂದು ಟೆಕ್ಕಿ ಆತ್ಮಹತ್ಯೆ

    ಬೆಂಗಳೂರು: ಕುಟುಂಬ ಕಲಹದಿಂದ (Family Dispute) ಮಾನಸಿಕವಾಗಿ ನೊಂದು ಟೆಕ್ಕಿಯೊಬ್ಬರು (Techie) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಖಾಸಗಿ ಕಂಪನಿಯ ಹಿರಿಯ ಉದ್ಯೋಗಿ ಪ್ರಶಾಂತ್ ನಾಯರ್ (40) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಚಿಕ್ಕಬಾಣಾವರದ (Chikkabanavara) ಡಿ.ಎಕ್ಸ್ ಸ್ಮಾರ್ಟ್ ನೆಸ್ಟ್ ಅಪಾರ್ಟ್ಮೆಂಟ್‌ನಲ್ಲಿ ಟೆಕ್ಕಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 12 ವರ್ಷದ ಹಿಂದೆ ಪೂಜಾ ಎಂಬಾಕೆಯನ್ನು ಪ್ರಶಾಂತ್ ಮದುವೆಯಾಗಿದ್ದರು. ಪ್ರಶಾಂತ್ ದಂಪತಿಗೆ 8 ವರ್ಷದ ಮಗಳು ಸಹ ಇದ್ದಾಳೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪೂಜಾ ನಾಯರ್ ದಂಪತಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿತ್ತು. ಬಳಿಕ ಡಿವೋರ್ಸ್ ಕೂಡ ಆಗಿದೆ ಎಂಬ ಮಾಹಿತಿ ಲಭಿಸಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಇದನ್ನೂ ಓದಿ: ಬಿಜೆಪಿ ಅಸ್ತಿತ್ವಕ್ಕಾಗಿ ಜನಾಕ್ರೋಶ ಯಾತ್ರೆ ಮಾಡ್ತಿದೆ ಅಂದವರು ಅಯೋಗ್ಯರು: ವಿಜಯೇಂದ್ರ ಕಿಡಿ

    ಹಲವು ಬಾರಿ ಕರೆ ಮಾಡಿದರೂ ಟೆಕ್ಕಿ ಪ್ರಶಾಂತ್ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡ ಪ್ರಶಾಂತ್ ತಂದೆ ಮನೆ ಬಳಿ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರು ದೊಡ್ಡ ನಗರ, ಅಲ್ಲೊಂದು-ಇಲ್ಲೊಂದು ಕಿರುಕುಳ ಘಟನೆ ಆಗುತ್ತೆ: ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ

  • ಕುಟುಂಬ ಕಲಹ – ವಿದ್ಯುತ್ ಹೈಟೆನ್ಷನ್ ಟವರ್ ಏರಿ ವ್ಯಕ್ತಿ ಹೈಡ್ರಾಮಾ

    ಕುಟುಂಬ ಕಲಹ – ವಿದ್ಯುತ್ ಹೈಟೆನ್ಷನ್ ಟವರ್ ಏರಿ ವ್ಯಕ್ತಿ ಹೈಡ್ರಾಮಾ

    ಹುಬ್ಬಳ್ಳಿ: ಕುಟುಂಬ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯುತ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದ ವ್ಯಕ್ತಿಯನ್ನು ಹೆಸ್ಕಾಂ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಇಲ್ಲಿನ ಬಿಡ್ನಾಳದ 11 ಕೆವಿ ಹೈಟೆನ್ಷನ್ ಟವರ್ ಮೇಲೆ ಏರಿ ರಾಘವೇಂದ್ರ ಬಳ್ಳಾರಿ ಎಂಬಾತ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಹೆಸ್ಕಾಂ ಕಚೇರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ವ್ಯಕ್ತಿ ಹತ್ತಿರುವುದು ಯಾವ ಲೈನ್ ಟವರ್ ಮೇಲೆ ಎಂಬುವುದು ಖಾತ್ರಿಯಾಗಿರಲಿಲ್ಲ. ಕೂಡಲೇ ಎಚ್ಚೆತ್ತುಕೊಂಡ ಗ್ರಾಮೀಣ ಉಪವಿಭಾಗದ ಕಾರ್ಯಾನಿರ್ವಾಹಕ ಅಭಿಯಂತರ ಕಿರಣಕುಮಾರ್, ಆ ಮಾರ್ಗದಲ್ಲಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಇತ್ತ ರಾಘವೇಂದ್ರ ವಿದ್ಯುತ್ ತಂತಿಯನ್ನು ಸ್ಪರ್ಶಿಸುತ್ತಿದ್ದಂತೆ ಅತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಇದರಿಂದ ರಾಘವೇಂದ್ರನ ಪ್ರಾಣ ಉಳಿದಿದೆ.‌ ಇದನ್ನೂ ಓದಿ: ರಾಷ್ಟ್ರಧ್ವಜ ರಕ್ಷಣಾ ಅಭಿಯಾನ ಆರಂಭಿಸಿದ ಯೂತ್ ಕಾಂಗ್ರೆಸ್ – ಜಗದೀಶ್ ಶೆಟ್ಟರ್‌ಗೆ ಧ್ವಜ ಕಾಣಿಕೆ ನೀಡಿ ಚಾಲನೆ

    ಬಳಿಕ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಾಘವೇಂದ್ರನಿಗೆ ಬುದ್ದಿ ಹೇಳಿ ಮನೆಗೆ ಕಳುಹಿಸಿದ್ದಾರೆ. ಕ್ಷಣದಲ್ಲೇ ಕಾರ್ಯಪ್ರವೃತರಾದ ಹೆಸ್ಕಾಂ ಸಿಬ್ಬಂದಿಗೆ ಪೊಲೀಸರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ತವ್ಯ ನಿರತ ಕೊಡಗಿನ ಯೋಧ ವಿಡಿಯೋ ಮಾಡಿ ಉತ್ತರಾಖಂಡದಲ್ಲಿ ಆತ್ಮಹತ್ಯೆ

    ಕರ್ತವ್ಯ ನಿರತ ಕೊಡಗಿನ ಯೋಧ ವಿಡಿಯೋ ಮಾಡಿ ಉತ್ತರಾಖಂಡದಲ್ಲಿ ಆತ್ಮಹತ್ಯೆ

    ಮಡಿಕೇರಿ: ನನಗೆ ತೀವ್ರ ತೊಂದರೆ ಕೊಡುತ್ತಿದ್ದೀಯಾ, ನನ್ನ ನೆಮ್ಮದಿಯನ್ನು ಹಾಳು ಮಾಡಿದ್ದೀಯ, ನಿನಗೆ ಹಣ ಅಷ್ಟೇ ಮುಖ್ಯವಲ್ಲವೇ ಎಂದು ಸೈನಿಕನೊಬ್ಬ ತನ್ನ ಪತ್ನಿ ವಿರುದ್ಧ ಆರೋಪಿಸಿ 25 ನಿಮಿಷಗಳ ಕಾಲ ವಿಡಿಯೋ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕುಶಾಲನಗರದ ಗೊಂದಿಬಸವನಹಳ್ಳಿ ಗ್ರಾಮದ ನಾಗರಾಜು ಮತ್ತು ಜಗದಾಂಬ ದಂಪತಿ ಮಗ, 16 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ ಪ್ರಜು (35) ಉತ್ತರಾಖಂಡದಲ್ಲಿ ಶುಕ್ರವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಪ್ರಜು ಆತ್ಮಹತ್ಯೆಗೂ ಮುನ್ನ ಉತ್ತರಾಖಂಡದಲ್ಲಿ ಕುಳಿತು ನೀನು ಹಣಕ್ಕಾಗಿ ನನ್ನನ್ನು ಪೀಡಿಸುತ್ತಿದ್ದೀಯಾ. ನನ್ನ ನೆಮ್ಮದಿಯನ್ನು ಹಾಳು ಮಾಡಿದ್ದೀಯಾ ಎಂದು ನೊಂದು ನುಡಿಯುತ್ತಾ ತನ್ನ ಪತ್ನಿಗೆ ವಿಡಿಯೋ ಕಳುಹಿಸಿದ್ದಾರೆ. ಈ ವಿಡಿಯೋವನ್ನು ಕುಟುಂಬದ ಸದಸ್ಯರಿಗೂ ಕಳುಹಿಸಿ ಬಳಿಕ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕುಶಾಲನಗರದ ಸಮೀಪದ ಮುಳ್ಳುಸೋಗೆಯ ನವ್ಯ ಎಂಬುವವರನ್ನು ಕಳೆದ 12 ವರ್ಷಗಳ ಹಿಂದೆ ಪ್ರಜು ವಿವಾಹವಾಗಿದ್ದರು. ಮದುವೆಯಾಗಿ ಮುದ್ದಿನ ಇಬ್ಬರು ಮಕ್ಕಳನ್ನು ಪಡೆದು ಆರೇಳು ವರ್ಷದ ನಂತರ ಪತಿ ಪ್ರಜು ಅವರಿಗೆ ಪತ್ನಿ ನವ್ಯ ಅವರ ಮೇಲೆ ಇನ್ನಿಲ್ಲದ ಅನುಮಾನ ಶುರುವಾಗಿದೆ. ಹೀಗಾಗಿ ನವ್ಯ ಅವರಿಗೆ ಯಾವಾಗ ಫೋನ್ ಮಾಡಿದರೂ ತುಂಬಾ ಟಾರ್ಚರ್ ಕೊಡುತ್ತಿದ್ದರೆಂದು ಪ್ರಜು ಮೇಲೆ ಆರೋಪಿಸಿದ್ದಾರೆ.

    ಜೊತೆಗೆ ಪ್ರಜು ರಜೆ ಮೇಲೆ ಊರಿಗೆ ಬಂದಾಗಲೆಲ್ಲಾ ನವ್ಯ ಅವರಿಗೆ ದೈಹಿಕ ಹಲ್ಲೆ ನಡೆಸುತ್ತಿದ್ದರಿಂದ ಬೇಸತ್ತಿದ್ದ ನವ್ಯ ತನಗೆ ರಕ್ಷಣೆ ಕೊಡುವಂತೆ ಕುಶಾಲನಗರ ಪಟ್ಟಣ ಪೊಲೀಸರ ಮೊರೆ ಹೋಗಿದ್ದರು. ಕಳೆದ ಒಂದು ವರ್ಷದ ಹಿಂದೆ ಬಂದಾಗ ನವ್ಯ ಅವರ ಕೈಯನ್ನು ಬೆಂಕಿಯಿಂದ ಪ್ರಜು ಸುಟ್ಟಿದ್ದರು. ಈ ಘಟನೆ ನಂತರ ನವ್ಯ ತನಗೆ ಪತಿಯೇ ಬೇಡವೆಂಬ ನಿರ್ಧಾರಕ್ಕೆ ಬಂದು ಮಹಿಳಾ ಆಯೋಗಕ್ಕೂ ದೂರು ನೀಡಿದ್ದರು. ನಂತರ ಮನಸ್ಸು ಬದಲಾಯಿಸಿಕೊಂಡ ನವ್ಯ ನೀಡಿದ್ದ ದೂರನ್ನು ವಾಪಸ್ ಪಡೆದು ಮನೆಗೆ ಬರುವಾಗಲೇ ಮಾರ್ಗ ಮಧ್ಯೆ ಪ್ರಜು ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ.

    ಕಳೆದ ತಿಂಗಳಷ್ಟೇ ಊರಿಗೆ ಬಂದಿದ್ದ ಪ್ರಜು ನವ್ಯ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು. ನೀನು ಯಾರೊಂದಿಗೆ ಫೋನ್ ನಲ್ಲಿ ತುಂಬಾ ಮಾತನಾಡುತ್ತಿದ್ದೀಯ. ನಿನಗೆ ಆ್ಯಸಿಡ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ 2021 ಫೆಬ್ರವರಿಯಲ್ಲೂ ಪೊಲೀಸರಿಗೆ ಮತ್ತೆ ದೂರು ನೀಡಿದ್ದರು. ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಜು ಅವರು ಇದ್ದಕ್ಕಿದ್ದಂತೆ ನಾನು ಡ್ಯೂಟಿಗೆ ಹೋಗಬೇಕಿದೆ ಎಂದು ಉತ್ತರಖಂಡಕ್ಕೆ ತೆರಳಿದ್ದಾರೆ. ಹೀಗೆ ಹೋದವರು ಉತ್ತರಖಂಡದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ನವ್ಯ ಮಾತ್ರ ನಮ್ಮ ಸಂಸಾರ ಹಾಳಾಗುವುದಕ್ಕೆ ನನ್ನ ಪತಿಯ ಸ್ನೇಹಿತರಾದ ಕೆಲವರು ನೇರ ಕಾರಣ ಎಂದು ಆರೋಪ ಮಾಡಿದ್ದಾರೆ.