Tag: ಕುಕ್ಕೆ

  • ಕುಕ್ಕೆಯಲ್ಲಿ ಆಶ್ಲೇಷ ಪೂಜೆ ಸಲ್ಲಿಸಿದ ತೆಲುಗು ಖ್ಯಾತ ನಟ ಪವನ್ ಕಲ್ಯಾಣ್

    ಕುಕ್ಕೆಯಲ್ಲಿ ಆಶ್ಲೇಷ ಪೂಜೆ ಸಲ್ಲಿಸಿದ ತೆಲುಗು ಖ್ಯಾತ ನಟ ಪವನ್ ಕಲ್ಯಾಣ್

    ತೆಲುಗಿನ ಸೂಪರ್ ಸ್ಟಾರ್, ರಾಜಕಾರಣಿ ಪವನ್ ಕಲ್ಯಾಣ್ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದರು. ಇಂದು ಅವರು ಕ್ಷೇತ್ರದಲ್ಲಿ ಆಶ್ಲೇಷ ಪೂಜೆ ಮತ್ತು ಆದಿ  ಸುಬ್ರಹ್ಮಣ್ಯದ ಹುತ್ತಕ್ಕೆ ವಸ್ತ್ರ ಸಮರ್ಪಣೆ ಮಾಡುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಪೂಜೆ ಪುನಸ್ಕಾರಗಳು ಮುಗಿದ ನಂತರ ಪವನ್ ಕಲ್ಯಾಣ್ ಅವರಿಗೆ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರಿಂದ ಸನ್ಮಾನ ಕೂಡ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಕ್ಷೇತ್ರದ ಸ್ವಚ್ಛತೆಯ ಬಗ್ಗೆ ಕೊಂಡಾಡಿದರು. ಇದನ್ನೂ ಓದಿ: ಮಿಡಲ್ ಫಿಂಗರ್ ತೋರಿಸಿದ ಪೂನಂ: ಕೈಯನ್ನ ತುಂಡು ತುಂಡಾಗಿ ಕತ್ತರಿಸ್ತೀನಿ ಎಂದ ನಟ ಆಲಿ 

    ‘ಲಕ್ಷಾಂತರ ಭಕ್ತರು ಬರುವ ಈ ದೇವಸ್ಥಾನದ ಪ್ರತೀ ಏಕಾದಶಿಯಂದು ದೇವಸ್ಥಾನದಲ್ಲಿ ನಡೆಸುವ ಸ್ವಚ್ಛತೆ ಕಂಡು ಬೆರಗಾಗಿದೆ. ಪರಿಸರ ಸ್ವಚ್ಛಾತಾ ಜಾಗೃತಿಗಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ಕಾರ್ಯ ಎಲ್ಲ ಕಡೆಗೂ ನಡೆಯಬೇಕು. ಪರಿಸರ ಸ್ವಚ್ಛತೆಯೇ ಆದ್ಯತೆ ಆಗಬೇಕು’ ಎಂದು ಪವನ್ ಕಲ್ಯಾಣ್.  ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ಕುಕ್ಕೆಗೆ ಪವನ್ ಕಲ್ಯಾಣ್ ಬರುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಪಾರ ಅಭಿಮಾನಿಗಳು ಅವರನ್ನು ನೋಡಲು ಆಗಮಿಸಿದ್ದರು. ಪೂಜೆ ಮುಗಿದ ನಂತರ ಪವನ್ ಅಭಿಮಾನಿಗಳೊಂದಿಗೆ ಬೆರೆತರು.

  • ಲಾಕ್‍ಡೌನ್: ರಾಜ್ಯದಲ್ಲೇ ನಂ.1 ಆಗಿದ್ದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆದಾಯವೇ ಇಲ್ಲ!

    ಲಾಕ್‍ಡೌನ್: ರಾಜ್ಯದಲ್ಲೇ ನಂ.1 ಆಗಿದ್ದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆದಾಯವೇ ಇಲ್ಲ!

    ಮಂಗಳೂರು: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಭಾರತದ ಪವಿತ್ರ ಪುಣ್ಯ ಕ್ಷೇತ್ರ. ಸರ್ಪ ಸಂಸ್ಕಾರ, ಆಶ್ಲೇಷ ಬಳಿ ಮುಂತಾದ ನಾಗ ದೇವರಿಗೆ ಸಂಬಂಧಿಸಿದ ವಿಶೇಷ ಪೂಜೆಗಳಿಗೆ ರಾಜ್ಯ ಮಾತ್ರವಲ್ಲದೇ ಇಡೀ ದೇಶದಿಂದ ಭಕ್ತರು ಆಗಮಿಸುತ್ತಾರೆ. ಅಷ್ಟೇ ಅಲ್ಲದೇ ಕರ್ನಾಟಕದಲ್ಲಿ ಹೆಚ್ಚು ಆದಾಯ ಕೊಡುವ ನಂಬರ್ 01 ದೇವಸ್ಥಾನ ಎಂಬ ಹೆಗ್ಗಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪಡೆದಿದೆ.

    ದಿನನಿತ್ಯ ಹತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ಕುಕ್ಕೆಗೆ ವಿಶೇಷ ದಿನಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಈ ಬಾರಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರು ಪ್ರವೇಶವನ್ನು ನಿಷೇಧ ಮಾಡಲಾಗಿದ್ದು, ಇದು ದೇವಾಲಯದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.

    ಕಳೆದ 2019ರ ಮಾರ್ಚ್‍ನಲ್ಲಿ 7,60,18,137.93 ರೂ, ಏಪ್ರಿಲ್ ನಲ್ಲಿ 6,57,33,223,.26 ರೂ ಹಾಗೂ ಮೇ ತಿಂಗಳಲ್ಲಿ 8,61,86,203.00 ರೂ ದೇವಸ್ಥಾನದ ಆದಾಯ ಆಗಿತ್ತು. ಒಟ್ಟಾಗಿ ಈ ಮೂರು ತಿಂಗಳ ಆದಾಯ 22,79,37,564.19 ರೂ ಆದಾಯ ಗಳಿಕೆಯಾಗಿತ್ತು. ಆದರೆ ಈ ಬಾರಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾವುದೇ ಆದಾಯ ಗಳಿಕೆಯಾಗಿಲ್ಲ. ಪರಿಣಾಮ ದೇಗುಲದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.

  • ಕೋಟೇಶ್ವರದಿಂದ ಕುಕ್ಕೆಗೆ ಹೊರಟ ಬ್ರಹ್ಮರಥ- ಉಡುಪಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ

    ಕೋಟೇಶ್ವರದಿಂದ ಕುಕ್ಕೆಗೆ ಹೊರಟ ಬ್ರಹ್ಮರಥ- ಉಡುಪಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ

    ಉಡುಪಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮರ್ಪಿತಗೊಳ್ಳುವ ಬ್ರಹ್ಮರಥ ಉಡುಪಿಯಿಂದ ಮೆರವಣಿಗೆ ಹೊರಟಿದೆ. ಕುಕ್ಕೆಯ ಬ್ರಹ್ಮರಥ ಬಹಳ ಹಳೆಯದಾಗಿದ್ದು, ಜೀರ್ಣಾವಸ್ಥೆಗೆ ತಲುಪಿತ್ತು. ಹೀಗಾಗಿ ದೇವಸ್ಥಾನ ಸಮಿತಿ ನೂತನ ರಥ ರಚನೆ ಮಾಡಬೇಕೆಂದು ತೀರ್ಮಾನಿಸಿತ್ತು.

    ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಮತ್ತು ಉದ್ಯಮಿ ಅಜಿತ್ ಶೆಟ್ಟಿಯವರು ತಾವು ರಥ ನಿರ್ಮಾಣ ಮಾಡಿ ಕೊಡುವುದಾಗಿ ಹೇಳಿದ್ದರು. ಉಡುಪಿಯ ಕೋಟೇಶ್ವರದ ಶಿಲ್ಪಗುರು, ರಾಷ್ಟ್ರಪ್ರಶಸ್ತಿ ವಿಜೇತ ಲಕ್ಷ್ಮೀನಾರಾಯಣ ಆಚಾರ್ಯ ನೇತೃತ್ವದ ತಂಡ ಒಂದೂವರೆ ವರ್ಷ ನಿರಂತರವಾಗಿ ಕೆತ್ತನೆ ಕೆಲಸ ಮಾಡಿರುವ ಬ್ರಹ್ಮರಥ ಇಂದು ಕುಕ್ಕೆಗೆ ಹೊರಟಿದೆ. ಕೋಟೆಶ್ವರದಿಂದ ಕುಕ್ಕೆಯವರೆಗೆ ಅಲ್ಲಲ್ಲಿ ರಥಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಆರತಿಯೆತ್ತಿ ಬರಮಾಡಿಕೊಳ್ಳಲಾಗುತ್ತದೆ.

    ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ರಥ ಅಕ್ಟೋಬರ್ 2ಕ್ಕೆ ಕುಕ್ಕೆ ಕ್ಷೇತ್ರವನ್ನು ತಲುಪಲಿದೆ. ಬೃಹತ್ ಗಾತ್ರದ ಟ್ರಕ್‍ನಲ್ಲಿ ರಥ ಮತ್ತು ಅದರ ಗಾಲಿಯನ್ನು ಉಡುಪಿಯಿಂದ ಕುಕ್ಕೆಗೆ ಸಾಗಿಸಲಾಯಿತು. ಮುತ್ತಪ್ಪ ರೈ ಪತ್ನಿ ಅನುರಾಧ ಉಡುಪಿಯ ಅಂಬಲಪಾಡಿಯಲ್ಲಿ ಆರತಿಯೆತ್ತಿ ಪೂಜೆ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವರ ಕೃಪೆಯಿಂದ ಕುಕ್ಕೆ ದೇವರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ದೇವರ ಸೇವೆ ಮಾಡುವ ಶಕ್ತಿ ನಮಗೆ ಸಿಗಲಿ ಎಂದು ಬೇಡಿಕೊಂಡಿದ್ದೇವೆ. ಅಲ್ಲಲ್ಲಿ ಜನ ಭಕ್ತಿ ತೋರಿ ಪೂಜೆ ಸಲ್ಲಿಸುತ್ತಿದ್ದಾರೆ. ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬ್ರಹ್ಮರಥ ಸಮರ್ಪಿಸುತ್ತೇವೆ ಎಂದರು. ದಕ್ಷಿಣ ಕನ್ನಡ ಜಿಲ್ಲೆ ಕಡಬದ ಉದ್ಯಮಿ ಅಜಿತ್ ಶೆಟ್ಟಿ ಕೂಡಾ ಬ್ರಹ್ಮ ರಥಕ್ಕೆ ದೇಣಿಗೆ ನೀಡಿದ್ದಾರೆ. ಕೋಟೇಶ್ವರದಿಂದ ಕುಕ್ಕೆಯವರೆಗೆ ತೆರಳುವ ಮೆರವಣಿಗೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ.

    ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ಈವರೆಗೆ ಸುಮಾರು 180 ರಥಗಳನ್ನು ಕೆತ್ತಿ ದೇವಸ್ಥಾನಗಳಿಗೆ ಕೊಟ್ಟಿದ್ದಾರೆ. 2006ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದು ಶಿಲ್ಪಗುರು ಎಂಬ ಬಿರುದು ಪಡೆದಿದ್ದರು. 2018ರ ಮಾರ್ಚ್ 15ರಂದು ಬ್ರಹ್ಮರಥದ ಕೆತ್ತನೆ ಕಾರ್ಯ ಆರಂಭ ಮಾಡಲಾಗಿತ್ತು. ಮಹಾಭಾರತ ಮತ್ತು ರಾಮಾಯಣದ ಕೆಲವು ಘಟನೆಗಳನ್ನು ರಥದಲ್ಲಿ ಕೆತ್ತಲಾಗಿದೆ.

  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಬ್ರಹ್ಮರಥೋತ್ಸವ – ರಾಜಮಾರ್ಗದಲ್ಲಿ ಭಕ್ತ ಸಾಗರ

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಬ್ರಹ್ಮರಥೋತ್ಸವ – ರಾಜಮಾರ್ಗದಲ್ಲಿ ಭಕ್ತ ಸಾಗರ

    ಮಂಗಳೂರು: ದಕ್ಷಿಣ ಕನ್ನಡದ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಉತ್ಸವ ಸಂಪನ್ನಗೊಂಡಿದೆ. ದೇವಳದ ರಾಜಮಾರ್ಗದಲ್ಲಿ ಯಶಸ್ವಿನಿ ಆನೆಯೊಂದಿಗೆ ರಥೋತ್ಸವ ಸಂಭ್ರಮ ನಡೆಯಿತು.

    ಕೋಟ್ಯಂತರ ಭಕ್ತರ ಆರಾಧ್ಯದೈವ ಸುಬ್ರಹ್ಮಣ್ಯ ಕೊನೆಯ ಬಾರಿಗೆ 400 ವರ್ಷಗಳ ಹಿಂದಿನ ಬ್ರಹ್ಮರಥದಲ್ಲಿ ರಥಾರೂಢನಾಗಿ ಭಕ್ತರಿಗೆ ದರ್ಶನ ನೀಡಿದ್ದಾನೆ. ಈ ಅಪರೂಪದ ಕ್ಷಣಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದಾರೆ. ಮುಂಜಾನೆ 6.41 ರ ವೃಶ್ಚಿಕ ಲಗ್ನದಲ್ಲಿ ಸುಬ್ರಹ್ಮಣ್ಯ ದೇವರು ರಥಾರೂಢವಾಗಿದ್ದು ವೈಭವ ಪೂರ್ಣವಾಗಿ ತೇರು ಉತ್ಸವ ನಡೆಯಿತು.

    ದೇವಸ್ಥಾನದ ಎದುರಿನ ರಥಬೀದಿಯಲ್ಲಿ ಮೊದಲು ಉಮಾಮಹೇಶ್ವರ ದೇವರ ಸಣ್ಣ ರಥ ಮುಂದೆ ಸಾಗಿದರೆ, ಅದರ ಹಿಂದೆ ಸುಬ್ರಹ್ಮಣ್ಯ ಬ್ರಹ್ಮರಥ ದಲ್ಲಿ ಸಾಗಿ ಅಸಂಖ್ಯಾತ ಭಕ್ತರಿಗೆ ದರ್ಶನ ನೀಡಿದ್ದಾನೆ. 400 ವರ್ಷಕ್ಕೂ ಹಳೆಯ ಬ್ರಹ್ಮರಥದಲ್ಲಿ ಕೊನೆಯ ಬಾರಿ ರಥೋತ್ಸವ ನಡೆದಿದ್ದು, ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಉದ್ಯಮಿ ಮುತ್ತಪ್ಪ ರೈ ಎರಡು ಕೋಟಿ ವೆಚ್ಚದಲ್ಲಿ ನೂತನ ಬ್ರಹ್ಮರಥ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ.

    ಲಕ್ಷಾಂತರ ಮಂದಿ ಭಕ್ತರು ಸುಬ್ರಹ್ಮಣ್ಯನ ಐತಿಹಾಸಿಕ ವಾರ್ಷಿಕ ಉತ್ಸವಕ್ಕೆ ಸಾಕ್ಷಿಯಾಗಿದ್ದಾರೆ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv