Tag: ಕುಕ್ಕರ್ ಬ್ಲಾಸ್ಟ್

  • ಗ್ರಾಮ ದೈವಗಳೇ ನಮ್ಮ ಊರನ್ನು ಕಾಪಾಡಿವೆ- ಕುಕ್ಕರ್ ಬ್ಲಾಸ್ಟ್ ಆದ ಆಟೋ ಚಾಲಕನ ಸಹೋದರನ ಮಾತು

    ಗ್ರಾಮ ದೈವಗಳೇ ನಮ್ಮ ಊರನ್ನು ಕಾಪಾಡಿವೆ- ಕುಕ್ಕರ್ ಬ್ಲಾಸ್ಟ್ ಆದ ಆಟೋ ಚಾಲಕನ ಸಹೋದರನ ಮಾತು

    ಮಂಗಳೂರು: ದೈವಕ್ಕೆ ಗಂಧಪ್ರಸಾದವನ್ನು ತಯಾರು ಮಾಡಿಕೊಡುವ ಕೆಲಸವನ್ನು ನಮ್ಮ ಕುಟುಂಬ ಮಾಡುತ್ತಿದೆ. ಹೀಗಾಗಿ ಗ್ರಾಮದ ದೈವಗಳೇ ನಮ್ಮ ಊರನ್ನು ಕಾಪಾಡಿವೆ. ಮಂಗಳೂರಿನಲ್ಲಿ ನಡೆಯಬಹುದಾಗಿದ್ದ ಒಂದು ದೊಡ್ಡ ಅನಾಹುತವನ್ನು ತಪ್ಪಿಸಿವೆ ಎಂದು ಕುಕ್ಕರ್ ಬ್ಲಾಸ್ಟ್ (Cooker Blast) ಆದ ಆಟೋ ಚಾಲಕನ ಸಹೋದರ ಹೇಳಿದ್ದಾರೆ.

    ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ (Mangaluru Cooker Bomb Blast) ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಆಟೋ ಚಾಲಕ ಪುರುಷೋತ್ತಮ್ ಸಹೋದರ ನಾಗೇಶ್ ಮಾತನಾಡಿ, ಕುಟುಂಬ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ದೊಡ್ಡ ಮಗಳಿಗೆ ಮೇ ತಿಂಗಳಲ್ಲಿ ಮದುವೆ ಫಿಕ್ಸ್ ಆಗಿದೆ. ಪುರುಷೋತ್ತಮ್ ಹಾರ್ಟ್ ಪೇಷಂಟ್ (Heart Patient) ಅವರಿಗೆ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ ಎಂದರು. ಇದನ್ನೂ ಓದಿ: ಮಂಗಳೂರು ಬಾಂಬ್ ಬ್ಲಾಸ್ಟ್‌ಗೆ ನಿಷೇಧಿತ PFI ಲಿಂಕ್ – ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ಕೆಚ್

    ಫ್ಯಾಮಿಲಿಯಿಂದ ಒಬ್ಬರನ್ನು ಮಾತ್ರ ಆಸ್ಪತ್ರೆಯ ಒಳಗೆ ಬಿಡುತ್ತಾರೆ. ಪೊಲೀಸ್ ಅಧಿಕಾರಿಗಳ ತನಿಖೆ ಆಗುವ ತನಕ ರಿಕ್ಷಾ ಕೂಡ ವಾಪಸ್ ಸಿಗುವುದು ಕಷ್ಟ. ಪುರುಷೋತ್ತಮ್ ಗೆ ಓಪನ್ ಹಾರ್ಟ್ ಸರ್ಜರಿಯಾಗಿತ್ತು. ಈಗ ಮೂರ್ ನಾಲ್ಕು ತಿಂಗಳಿಂದ ಆಟೋರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ಗ್ರಾಮದೈವ ಮಹಾಕಾಳಿ ಮತ್ತು ಕೊರಗಜ್ಜ ನಮ್ಮನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಿದರು.

    ನಮ್ಮ ಕುಟುಂಬ ಸನ್ನಿಧಾನದಲ್ಲಿ ಬೂಳ್ಯ ಕೊಡುವ ಕೆಲಸ ಮಾಡುತ್ತಿದೆ. ದೈವಸ್ಥಾನದ ಚಾಕರಿ ಮಾಡುವ ಕೆಲಸವನ್ನು ಮಾಡುತ್ತಾ ಬರುತ್ತಿದ್ದೇವೆ. ನಮ್ಮನ್ನ ಕಾಪಾಡಿದ್ದು, ದೊಡ್ಡ ಅನಾಹುತವನ್ನು ತಪ್ಪಿಸಿದ್ದು ಕೂಡ ಆ ದೈವಗಳೇ ಎಂದು ನಾಗೇಶ್ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಕುಕ್ಕರ್ ಬಾಂಬ್‍ಗೆ ಬಿಗ್ ಟ್ವಿಸ್ಟ್- ಸೂಸೈಡ್ ಬಾಂಬರ್ ಆಗಿದ್ದ ಉಗ್ರ ಶಾರೀಕ್!

    ಕುಕ್ಕರ್ ಬಾಂಬ್‍ಗೆ ಬಿಗ್ ಟ್ವಿಸ್ಟ್- ಸೂಸೈಡ್ ಬಾಂಬರ್ ಆಗಿದ್ದ ಉಗ್ರ ಶಾರೀಕ್!

    ಮಂಗಳೂರು: ನಗರದಲ್ಲಿ ಭಾನುವಾರ ನಡೆದ ಕುಕ್ಕರ್ ಬಾಂಬ್‍ (Cooker Bomb) ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೂಸೈಡ್ ಬಾಂಬರ್ ಆಗಿದ್ದ ಉಗ್ರ ಶಾರೀಕ್ ತನ್ನನ್ನು ತಾನೇ ಸ್ಫೋಟಿಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ್ದಾನೆ. ಜನನಿಬಿಡ ಪಂಪ್‍ವೆಲ್‍ (PumpWel) ನಲ್ಲಿ `ಆತ್ಮಾಹುತಿ ದಾಳಿ’ಗೆ ಸಂಚು ರೂಪಿಸಿದ್ದ ಎಂಬ ಮಾಹಿತಿ ಪಬ್ಲಿಕ್ ಟಿಗೆ ಲಭಿಸಿದೆ.

    ಬ್ಲಾಸ್ಟ್‍ಗೂ ಮುನ್ನ ನಾಗುರಿಯಲ್ಲಿರುವ ವೈನ್‍ಶಾಪ್‍ವೊಂದರಲ್ಲಿ ಶಾರೀಕ್ ಮದ್ಯ (Alcohol) ಖರೀದಿಸಿದ್ದ. ವೈನ್ ಶಾಪ್ ಬಳಿ ಶಾರೀಕ್ ಜೊತೆ ಇನ್ನೊಬ್ಬನೂ ಇದ್ದ. ಶಾರೀಕ್ ಒಂದರ ಮೇಲೊಂದು 3 ಶರ್ಟ್ ಹಾಕಿದ್ದನು. ಇತ್ತ ಕುಕ್ಕರ್ ಬಾಂಬ್ ಜೊತೆ ಶಾರೀಕ್ ಪಂಪ್‍ವೆಲ್ ಕಡೆ ಹೊರಟಿದ್ದ. ಆದರೆ ಆಕಸ್ಮಿಕವಾಗಿ ದಾರಿ ಮಧ್ಯೆಯೇ ಸ್ಫೋಟಗೊಂಡು ವಿಚಲಿತಗೊಂಡನು. ಅಲ್ಲದೆ ತನ್ನ ಕೃತ್ಯ ಸಫಲ ಆಗದಿರೋದಕ್ಕೆ ಚಡಪಡಿಸಿದ್ದನು. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ- ISIS ಉಗ್ರ ಪರ ಗೋಡೆ ಬರಹ ಬರೆದಿದ್ದ ಆರೋಪಿಯಿಂದ ಕೃತ್ಯ

    ಶಾರೀಕ್ ಯಾರು..? ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಬರೆದಿದ್ದ ಶಾರೀಕ್, ಶಿವಮೊಗ್ಗ ಗಲಭೆಯಲ್ಲೂ ಈತನ ಹೆಸರು ಕೇಳಿ ಬಂದಿದ್ದರಿಂದ ಎನ್‍ಐಎ (NIA) ಈತನಿಗಾಗಿ ಹುಡುಕಾಟ ನಡೆಸಿತ್ತು. ಹೀಗಾಗಿ ಎನ್‍ಐಎ ಗೆ ಸಿಕ್ಕಿ ಬೀಳೋದಕ್ಕಿಂತಲೂ `ಸೂಸೈಡ್ ಬಾಂಬರ್’ ಆಗಲು ನಿರ್ಧಾರ ಮಾಡಿದ್ದನು. ಇದೇ ಕಾರಣಕ್ಕೆ ಮಂಗಳೂರು ಬ್ಲಾಸ್ಟ್ ಗೆ ಪ್ಲಾನ್ ಮಾಡಿದ್ದ ಶಾರೀಕ್, ಇದಕ್ಕೂ ಮುನ್ನ ಹಲವೆಡೆ ಪ್ರಯೋಗಿಕ ಬಾಂಬ್ ಬ್ಲಾಸ್ಟ್ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ-  ISIS ಉಗ್ರ ಪರ ಗೋಡೆ ಬರಹ ಬರೆದಿದ್ದ ಆರೋಪಿಯಿಂದ ಕೃತ್ಯ

    ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ- ISIS ಉಗ್ರ ಪರ ಗೋಡೆ ಬರಹ ಬರೆದಿದ್ದ ಆರೋಪಿಯಿಂದ ಕೃತ್ಯ

    ಮಂಗಳೂರು: ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ (Cooker Blast) ಕರಾವಳಿಯನ್ನು ಬೆಚ್ಚಿ ಬೀಳಿಸಿದೆ. ಶಂಕಿತ ಉಗ್ರ ನಡೆಸಿದ ಪ್ರೀ ಪ್ಲಾನ್ ಫ್ಲಾಪ್ ಆಗಿ ಆತನಿಗೇ ಮಾರಕವಾಗಿ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮೈಸೂರಿನಿಂದ ಹೊರಟ ಶಂಕಿತ ಉಗ್ರ ಮಂಗಳೂರಿನಲ್ಲೇ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿದ್ದ. ಹಾಗಾದ್ರೆ ಆತ ಯಾಕೆ ಮಂಗಳೂರಿನಲ್ಲೇ ಬಾಂಬ್ ಬ್ಲಾಸ್ಟ್ ಗೆ ತಯಾರಿ ನಡೆಸಿದ್ದ ಅನ್ನೋ ಡಿಟೈಲ್ ಸ್ಟೋರಿ ಇಲ್ಲಿದೆ.

    ಕುಕ್ಕರ್ ಬಾಂಬ್ ಸ್ಟೋಟ ಮಾಡಲು ಶಂಕಿತ ಉಗ್ರ ಮಂಗಳೂರ (Mangaluru) ನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದ ಅನ್ನೋ ಸಾಕಷ್ಟು ಅನುಮಾನ ಮೂಡಿದೆ. ಈ ಹಿಂದೆ ಮಂಗಳೂರಿನ ಎರಡು ಕಡೆಗಳಲ್ಲಿ ಐಸಿಸಿ (ISIS) ಜಿಂದಾಬಾದ್ ಎಂದು ಉಗ್ರರ ಪರ ಗೋಡೆ ಬರಹ ಬರೆದಿದ್ದ ಶಿವಮೊಗ್ಗದ ತೀರ್ಥಹಳ್ಳಿ ನಿವಾಸಿ ಶಾರಿಕ್, ಈ ಬಾಂಬ್ ಬ್ಲಾಸ್ಟ್ ಗೆ ಪ್ಲಾನ್ ಮಾಡಿದ್ದ. ಶಾರಿಕ್ (Sharik) ಹಾಗೂ ಆತನ ಸ್ನೇಹಿತ ಮಾಝ್ ಮನೀರ್ ಅಹಮ್ಮದ್ ಮಂಗಳೂರಿನ ದೇರಳಕಟ್ಟೆ (Deralakatte) ಯ ಪಿ ಎ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕಲಿಯುತ್ತಿದ್ದಾಗಲೇ ಈ ಗೋಡೆ ಬರಹ ಬರೆದಿದ್ದರು. ಪೊಲೀಸರು ಅಂದು ಇಬ್ಬರೂ ವಿದ್ಯಾರ್ಥಿಗಳು ಎಂದು ಸಣ್ಣಪುಟ್ಟ ಕೇಸ್ ಜಡಿದು ಕೆಲವೇ ದಿನಗಳಲ್ಲಿ ಜಾಮೀನು ಸಿಗುವಂತೆ ಮಾಡಿದ್ದರು. ಆ ಬಳಿಕವೂ ಈ ಇಬ್ಬರೂ ಉಗ್ರ ಚಟುವಟಿಕೆಯಲ್ಲೇ ಇದ್ರೂ ಪೊಲೀಸರು ಮಾತ್ರ ಕ್ಯಾರೇ ಅನ್ನಲಿಲ್ಲ. ಇದರ ಪರಿಣಾಮವೇ ಇಂದಿನ ಬಾಂಬ್ ಬ್ಲಾಸ್ಟ್ ಪ್ರಕರಣ. ಇದನ್ನೂ ಓದಿ: ಉಗ್ರರ ಅಡಗುತಾಣವಾಗ್ತಿದ್ಯಾ ಮಂಗಳೂರು – ಕರಾವಳಿ ಜಿಲ್ಲೆಯಾದ್ಯಂತ ಹೈ ಅಲರ್ಟ್

    ಮಂಗಳೂರಿನ ಕೋರ್ಟ್ ಆವರಣ (Mangaluru Court Road) ಹಾಗೂ ಬಿಜೈ ಎಂಬಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಬಳಿಕ ಜಾಮೀನು ಪಡೆದಿದ್ದ ಈ ಇಬ್ಬರು ಮತ್ತೆ ಸುಮ್ಮನೆ ಇರಲಿಲ್ಲ. ಇಬ್ಬರೂ ಬಾಂಬ್ ತಯಾರಿಸಿ ಹಲವೆಡೆ ಬಾಂಬ್ ಸ್ಪೋಟದ ರಿಹರ್ಸಲ್ ಮಾಡುತ್ತಿದ್ದರು. ಇದ್ಯಾವುದೂ ಪೊಲೀಸರಿಗೆ ಗೊತ್ತೇ ಆಗಿಲ್ಲ. ಇತ್ತೀಚೆಗೆ ಶಿವಮೊಗ್ಗದ ಕೋಮು ಗಲಭೆಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿದ ಪ್ರಕರಣದಲ್ಲಿ ಈ ಇಬ್ಬರೂ ಭಾಗಿಯಾಗಿದ್ದರು. ಮಾಝ್ ಮುನೀರ್ ಅಹಮ್ಮದ್ ನನ್ನು ಎನ್‍ಐಎ (NIA) ಅಧಿಕಾರಿಗಳು ಬಂಧಿಸಿದ್ರೂ ಶಾರೀಕ್ ಮಾತ್ರ ಭೂಗತನಾಗಿದ್ದ. ಇದೀಗ ಅದೇ ದ್ವೇಷ ಇಟ್ಟುಕೊಂಡು ಮಂಗಳೂರಿನಲ್ಲೇ ಬಾಂಬ್ ಸ್ಫೋಟಿಸಿ ಉಗ್ರರನ್ನು ಬೆಂಬಲಿಸಲು ಪ್ಲಾನ್ ಮಾಡಿದ್ದ. ಹೀಗಾಗಿ ಈ ಹಿಂದಿನಿಂದಲೂ ಮಂಗಳೂರಿನಲ್ಲೇ ಎನ್‍ಐಎ ಘಟಕ ಸ್ಥಾಪಿಸಬೇಕೆಂಬ ಒತ್ತಾಯ ಇದ್ದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಬೇರೆಲ್ಲೋ ಸ್ಫೋಟವಾಗಬೇಕಿದ್ದ ಕುಕ್ಕರ್ ಬಾಂಬ್ ಹಂಪ್ಸ್ ಕಾರಣದಿಂದ ಆಟೋದಲ್ಲೇ ಬ್ಲಾಸ್ಟ್!

    ಬಾಂಬ್ ಸ್ಫೋಟ ನಡೆಸಿದ ಆರೋಪಿ ಮಂಗಳೂರಿನಲ್ಲೇ ಶಿಕ್ಷಣ ಮುಗಿಸಿದ್ದರಿಂದ ಮಂಗಳೂರಿನ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ. ಜೊತೆಗೆ ಕೋಮು ಸೂಕ್ಷ್ಮ ಪ್ರದೇಶದಲ್ಲೇ ಆತಂಕ ಮೂಡಿಸಿ ಉಗ್ರರ ಗಮನ ಸೆಳೆಯಲು ಮಂಗಳೂರನ್ನೇ ಟಾರ್ಗೆಟ್ ಮಾಡಿಕೊಂಡಿರೋ ಸಾಧ್ಯತೆ ಇದೆ. ಏನೇ ಇರಲಿ ಮಂಗಳೂರಿನಲ್ಲಿ ನಡೆಯಬೇಕಿದ್ದ ದೊಡ್ಡ ದುರಂತವೊಂದು ತಪ್ಪಿರೋದು ಎಲ್ಲರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. ಇದನ್ನೂ ಓದಿ: ತುಂಗಾ ನದಿಯಲ್ಲಿ ಸ್ಫೋಟ ಮಾಡಿ ಪರಾರಿಯಾದವನು ಮಂಗ್ಳೂರಲ್ಲಿ ಕುಕ್ಕರ್‌ ಬಾಂಬ್‌ ಸಿಡಿಸಿ ಸಿಕ್ಕಿಬಿದ್ದ

    Live Tv
    [brid partner=56869869 player=32851 video=960834 autoplay=true]