Tag: ಕುಕ್ಕರ್ ಬಾಂಬ್ ಸ್ಫೋಟ

  • ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ – ಅಧಿಕೃತವಾಗಿ ಎನ್‌ಐಎ ತನಿಖೆಗೆ ಹಸ್ತಾಂತರ

    ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ – ಅಧಿಕೃತವಾಗಿ ಎನ್‌ಐಎ ತನಿಖೆಗೆ ಹಸ್ತಾಂತರ

    ಮಂಗಳೂರು: ನಗರದಲ್ಲಿ ನಡೆದ ಕುಕ್ಕರ್ ಸ್ಫೋಟ (Cooker Bomb Blast) ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿದೆ. ಘಟನೆಯ ಹಿಂದೆ ಭಯೋತ್ಪಾದನೆಯ (Terrorism) ದೊಡ್ಡ ಪಿತೂರಿಯಿರುವುದು ತಿಳಿದುಬರುತ್ತಲೇ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಲು ಒತ್ತಾಯಿಸಲಾಗಿತ್ತು. ಇದೀಗ ಪ್ರಕರಣದ ತನಿಖೆಗೆ ಎನ್‌ಐಎಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ.

    ಇಂದು ಎನ್‌ಐಎ ಅಧಿಕಾರಿಗಳು ಮಂಗಳೂರು (Mangaluru) ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ್ದು, ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಕುಕ್ಕರ್ ಸ್ಫೋಟ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿದ್ದಾರೆ. ಎನ್‌ಐಎ ಇಂದಿನಿಂದಲೇ ಪ್ರಕರಣದ ಬಗ್ಗೆ ತನಿಖೆಯನ್ನು ನಡೆಸಲಿದೆ.

    ಕುಕ್ಕರ್ ಬಾಂಬ್ ಅನ್ನು ಸ್ಫೋಟಿಸಿರುವ ಶಾರೀಕ್ (Shariq) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ಶಾರೀಕ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಶಾರೀಕ್ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆ ಮಂಗಳೂರು ಪೊಲೀಸರು ಈಗಾಗಲೇ ವಿಚಾರಣೆಯನ್ನು ನಡೆಸಿದ್ದಾರೆ. ಇದನ್ನೂ ಓದಿ: ಶಾಲೆಗೆ ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿ – ನೋ ಎಂಟ್ರಿ ಎಂದ ಶಿಕ್ಷಕರು

    ಪೊಲೀಸರು ಈಗಾಗಲೇ ಶಂಕಿತ ಉಗ್ರ ಶಾರೀಕ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಖುದ್ದು ಪೊಲೀಸ್ ಕಮಿಷನರ್ ನೇತೃತ್ವದಲ್ಲೇ ತನಿಖಾ ತಂಡ ಶಾರೀಕ್ ಹೇಳಿಕೆಯನ್ನು ವೀಡಿಯೋ ರೆಕಾರ್ಡ್ ಮಾಡಿಕೊಂಡಿದೆ. ಶಾರೀಕ್‌ಗೆ 100ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಗಿದೆ. ಇಂದಿನಿಂದ ಪ್ರತ್ಯೇಕವಾಗಿ ಎನ್‌ಐಎ ಅಧಿಕಾರಿಗಳು ಶಾರೀಕ್‌ನ ಹೇಳಿಕೆಯನ್ನು ಪಡೆಯಲಿದ್ದಾರೆ. ಇದನ್ನೂ ಓದಿ: ಗಾಳಿಯಲ್ಲಿ ಗುಂಡುಹಾರಿಸಿ ಹಿಡಿಯಲು ಮುಂದಾದ ಅರಣ್ಯಾಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಗಂಧಚೋರರು

    Live Tv
    [brid partner=56869869 player=32851 video=960834 autoplay=true]

  • ಬಾಂಬ್ ತಂದಿದ್ದು ಒಬ್ಬನ್ನಲ್ಲ, ಇಬ್ಬರು- ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು

    ಬಾಂಬ್ ತಂದಿದ್ದು ಒಬ್ಬನ್ನಲ್ಲ, ಇಬ್ಬರು- ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು

    – ಪೊಲೀಸರ ನಿದ್ದೆಗೆಡಿಸಿದ ತನಿಖೆಯ ಆಳ

    ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ದ ರೂವಾರಿ ಮಹಮ್ಮದ್ ಶಾರೀಕ್ (Mohammad Shariq) ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ. ಇದೀಗ ಪೊಲೀಸರ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ವಿಷಯ ಬಯಲಾಗ್ತಿದೆ. ಮಂಗಳೂರಿಗೆ ಬಾಂಬ್ ಜೊತೆಗೆ ಬಂದಿದ್ದು ಕೇವಲ ಶಾರೀಕ್ ಮಾತ್ರ ಅಲ್ಲ. ಮತ್ತೊಬ್ಬ ವ್ಯಕ್ತಿ ಇದ್ದ ಅನ್ನುವ ಆತಂಕಕಾರಿ ಮಾಹಿತಿಯೂ ಬಯಲಾಗಿದೆ.

    ಹೌದು.. ನವೆಂಬರ್ 19ರಂದು ಮಂಗಳೂರಿನ ನಾಗುರಿಯಲ್ಲಿ ನಡೆದ ಆಟೋ ಬಾಂಬ್ ಬ್ಲಾಸ್ಟ್ ಗೂ ಮುನ್ನ ಮೈಸೂರಿನಿಂದ ಮಂಗಳೂರಿಗೆ ಬಂದಿದ್ದ ಶಾರೀಕ್ ಜೊತೆಗೆ ಇನ್ನಿಬ್ಬರು ಇದ್ದರು ಎನ್ನುವ ವಿಚಾರ ಬಯಲಾಗಿದೆ. ಪಡೀಲ್‍ನಲ್ಲಿ ಬಸ್‍ನಿಂದ ಇಳಿದ ಶಾರೀಕ್ ನಾಗುರಿ ಬಳಿಯ ವೈನ್ ಶಾಪ್‍ (Wine Shop) ಗೆ ತೆರಳಿದ್ದು, ಅಲ್ಲಿ ಮದ್ಯ ಖರೀದಿಸಿದ್ದಾನೆ. ಈ ವೇಳೆ ಶಾರೀಕ್ ಜೊತೆ ಮತ್ತೊಬ್ಬ ಇದ್ನಂತೆ. ಈ ವಿಚಾರವಾಗಿ ವೈನ್ ಶಾಪ್‍ನ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸಿದಾಗ ಇಬ್ಬರು ಬ್ಯಾಗ್ ಧರಿಸಿ ವೈನ್ ಶಾಪ್‍ನಿಂದ ಹೊರ ಬರುವ ದೃಶ್ಯ ಸಿಕ್ಕಿದೆ. ಇದನ್ನೂ ಓದಿ: ಝಾಕೀರ್‌ ನಾಯ್ಕ್‌ The Real Inspiration – ಐಸಿಸ್‌ ಉಗ್ರರಂತೆ ಪೋಸ್‌ ನೀಡಿ ಪ್ರತೀಕಾರದ ಪ್ರತಿಜ್ಞೆ

    ಇನ್ನೊಂದೆಡೆ, ಮಂಗಳೂರು ಬಾಂಬ್ ಸ್ಪೋಟದ ಹೊಣೆ ಹೊತ್ತ ಐಆರ್‍ಸಿ ಉಗ್ರ ಸಂಘಟನೆ ಬಿಡುಗಡೆ ಮಾಡಿದ ಪೋಸ್ಟರ್ ಕೂಡಾ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಪೋಸ್ಟರ್ ನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಜೊತೆಗೆ ನಿಮ್ಮ ಖುಷಿ ಬಹಳ ದಿನಗಳ ಕಾಲ ಉಳಿಯೋದಿಲ್ಲ ಅಂತಾ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಈ ಬಗ್ಗೆ ಕದ್ರಿ ಠಾಣೆ (Kadri Police Station) ಯಲ್ಲಿ ದೂರು ದಾಖಲಾಗಿದೆ. ಎಲ್ಲಾ ಊಹಾಪೋಹಗಳು ಸುಳ್ಳು ಅಂತಾ ಹೇಳಿದ್ದಾರೆ.

    ಒಟ್ಟಿನಲ್ಲಿ ಶಾರೀಕ್ ಪೊಲೀಸರ ಸರ್ಪಗಾವಲಿನಲ್ಲಿದ್ದರೂ ಯಾವಾಗ ಏನು ಆಗುತ್ತೆ ಅನ್ನೋ ಆತಂಕ ಎದುರಾಗಿದೆ. ಹಾಗೆ ಉಗ್ರರ ಬೆದರಿಕೆಯನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನಲ್ಲಿ ದುಷ್ಕೃತ್ಯಕ್ಕೆ ಮಾಸ್ಟರ್ ಪ್ಲಾನ್- ಶಾರಿಕ್ ವಿಚಾರಣೆಗೆ ಎನ್‍ಐಎ ಸಿದ್ಧತೆ

    ಮಂಗಳೂರಿನಲ್ಲಿ ದುಷ್ಕೃತ್ಯಕ್ಕೆ ಮಾಸ್ಟರ್ ಪ್ಲಾನ್- ಶಾರಿಕ್ ವಿಚಾರಣೆಗೆ ಎನ್‍ಐಎ ಸಿದ್ಧತೆ

    ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಶಾರಿಕ್ (Shariq) ಪ್ಲಾನ್ ಮಾಡಿದ್ದು, ಉಗ್ರನ ಚೈನ್ ಲಿಂಕ್ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಗುಮಾನಿ ಬಂದಿದೆ. ಈತನೊಂದಿಗೆ ಮತ್ತಷ್ಟು ಯುವಕರು ಇರುವ ಸಾಧ್ಯತೆ ಇದ್ದು, ಎಲ್ಲಾ ಆಯಾಮಗಳ ತನಿಖೆ ಆರಂಭಗೊಂಡಿದೆ.

    ಬಾಂಬ್ ಸ್ಫೋಟಿಸಿದ ಉಗ್ರ ಶಾರಿಕ್ ಪೊಲೀಸ್ ವಶದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ನಡುವೆ ಬಾಂಬ್ ಸ್ಫೋಟದ ಕೃತ್ಯ ಶಾರಿಕ್ ಒಬ್ಬನ ಪ್ಲ್ಯಾನ್ ಆಗಿರಲು ಸಾಧ್ಯವೇ ಇಲ್ಲ. ಈ ಸ್ಫೋಟದ ಹಿಂದೆ ದೊಡ್ಡ ಒಂದು ಜಾಲ ಇದೆ ಎಂಬ ಗುಮಾನಿ ಪೊಲೀಸರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರು ಕೃತ್ಯದ ಬೆನ್ನು ಬಿದ್ದಿದ್ದಾರೆ.

    ಬಾಂಬ್ ತಯಾರಿಸಿ ಅಟ್ಟಹಾಸ ಮೆರೆಯುವುದು ಅಷ್ಟು ಸುಲಭದ ಕೆಲಸ ಅಲ್ಲ. ಇದರ ಹಿಂದೆ ಒಂದು ವ್ಯವಸ್ಥಿತವಾದ ಷಡ್ಯಂತ್ರ ಇದ್ದೇ ಇರುತ್ತದೆ. ದೊಡ್ಡ ಗುಂಪೊಂದು ಇದರ ಹಿಂದೆ ಕೆಲಸ ಮಾಡ್ತಿರುತ್ತದೆ. ದುಷ್ಕೃತ್ಯಕ್ಕೆ ಆರ್ಥಿಕ ಬಲವನ್ನ ತುಂಬಲಾಗಿರುತ್ತದೆ. ಬಾಂಬ್ ತಯಾರಿ, ಅದರ ಪ್ರಯೋಗ, ಎಲ್ಲಿ ಸ್ಫೋಟ ಮಾಡಬೇಕು ಎಂಬ ಬಗ್ಗೆ ವರ್ಷಗಳಿಗಿಂತ ಹೆಚ್ಚು ತಯಾರಿ ಬೇಕಾಗುತ್ತದೆ ಎಲ್ಲಾ ಆಯಾಮಗಳಲ್ಲಿ ರಾಷ್ಟ್ರೀಯ ತನಿಖಾದಳ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಮುಂದೆ ಆಗಬಹುದಾದ ಸಂಭಾವ್ಯ ಅವಘಡಗಳನ್ನು ತಪ್ಪಿಸಲು ರಾಜ್ಯ ಹಾಗೂ ಕೇಂದ್ರ ಪೊಲೀಸ್ ಇಲಾಖೆ ರಾತ್ರಿ ಹಗಲು ಕೆಲಸ ಮಾಡುತ್ತಿದೆ.

    ಫಾದರ್ ಮುಲ್ಲರ್ಸ್ ಆಸ್ಪತ್ರೆ (Father Muller Hospital) ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಉಗ್ರ ಶಾರೀಕ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ದಳ ಹೊಂಚು ಹಾಕಿ ಕುಳಿತಿದೆ. ಒಮ್ಮೆ ಡಿಸ್ಚಾರ್ಜ್ ಆದ್ರೆ ಹಲವಾರು ಆತಂಕಕಾರಿ ವಿಚಾರಗಳು ಉಗ್ರನ ಬಾಯಿಯಿಂದ ಹೊರ ಬೀಳಲಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್- ಜಾಗತಿಕ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿದ್ದ ಶಾರೀಕ್: ಅಲೋಕ್‌ಕುಮಾರ್

    Live Tv
    [brid partner=56869869 player=32851 video=960834 autoplay=true]

  • ಬೇರೆಲ್ಲೋ ಸ್ಫೋಟವಾಗಬೇಕಿದ್ದ ಕುಕ್ಕರ್ ಬಾಂಬ್ ಹಂಪ್ಸ್ ಕಾರಣದಿಂದ ಆಟೋದಲ್ಲೇ ಬ್ಲಾಸ್ಟ್!

    ಬೇರೆಲ್ಲೋ ಸ್ಫೋಟವಾಗಬೇಕಿದ್ದ ಕುಕ್ಕರ್ ಬಾಂಬ್ ಹಂಪ್ಸ್ ಕಾರಣದಿಂದ ಆಟೋದಲ್ಲೇ ಬ್ಲಾಸ್ಟ್!

    ಮಂಗಳೂರು: ನಗರದ ಪಂಪ್‌ವೆಲ್ ವೃತ್ತದ ಬಳಿ ಶನಿವಾರ ಸಂಜೆ ಕುಕ್ಕರ್ ಬಾಂಬ್ ಸ್ಫೋಟಗೊಂಡಿರುವ ಘಟನೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಮಾಹಿತಿಗಳು ಬಯಲಾಗುತ್ತಲೇ ಇವೆ. ಈಗ ಬಾಂಬ್ ಬೇರೆಲ್ಲೋ ಸ್ಫೋಟವಾಗಬೇಕಿದ್ದ ಬಾಂಬ್ ಹಂಪ್ಸ್‌ನಿಂದಾಗಿ ಆಟೋ ರಿಕ್ಷಾದಲ್ಲಿ ಸ್ಫೋಟವಾಗಿರಬಹುದು ಎಂಬ ಶಂಕೆ ಎದ್ದಿದೆ.

    ಕುಕ್ಕರ್ ಬ್ಲಾಸ್ಟ್ ಆಗಿರುವ ಸ್ಥಳದ ಬಳಿ ದಾರಿಯಲ್ಲಿ ಹಂಪ್ಸ್ ಇದ್ದಿದ್ದು, ಆ ಹಂಪ್ಸ್‌ನಲ್ಲಿ ಆಟೋವನ್ನು ಹತ್ತಿಸಿದ್ದರಿಂದ ಕುಕ್ಕರ್ ಬಾಂಬ್ ಸ್ಫೋಟಗೊಂಡಿರಬಹುದು ಎಂಬ ಅನುಮಾನ ಎದ್ದಿದೆ.

    ಶನಿವಾರ ಸಂಜೆ ಮಂಗಳೂರಿನ ಪಂಪ್‌ವೆಲ್‌ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿದೆ. ಇದಕ್ಕೂ ಮುನ್ನ ದಾರಿ ಮಧ್ಯೆ ಪ್ರಯಾಣಿಕನೊಬ್ಬ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದ. ಆತ ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಎದುರು ಆಟೋದ ಒಳಗೆ ಕುಕ್ಕರ್ ಬಾಂಬ್ ಸ್ಫೋಟಗೊಂಡಿದೆ. ಶಂಕಿತನ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿದೆ. ಇದನ್ನೂ ಓದಿ: ತುಂಗಾ ನದಿಯಲ್ಲಿ ಸ್ಫೋಟ ಮಾಡಿ ಪರಾರಿಯಾದವನು ಮಂಗ್ಳೂರಲ್ಲಿ ಕುಕ್ಕರ್‌ ಬಾಂಬ್‌ ಸಿಡಿಸಿ ಸಿಕ್ಕಿಬಿದ್ದ

    ಕುಕ್ಕರ್ ಬಾಂಬ್ ಅನ್ನು ಜನಜಂಗುಳಿಯಿದ್ದ ಪ್ರದೇಶದಲ್ಲಿ ಟೈಮರ್ ಇಟ್ಟು ಸ್ಫೋಟಿಸುವ ಹುನ್ನಾರವನ್ನು ಮಾಡಲಾಗಿದೆ. ಮಾತ್ರವಲ್ಲದೇ ನಿನ್ನೆ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳೂರಿಗೆ ಭೇಟಿ ನೀಡಿದ್ದ ಬೆನ್ನಲ್ಲೇ ಸ್ಫೋಟ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕುಕ್ಕರ್ ಸ್ಫೋಟ ಪ್ರಕರಣ – ನಕಲಿ ಆಧಾರ್ ಕಾರ್ಡ್‌ನ ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆ

    Live Tv
    [brid partner=56869869 player=32851 video=960834 autoplay=true]