Tag: ಕುಕ್ಕರ್‌ ಬಾಂಬ್‌

  • ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಸೂತ್ರಧಾರ ದೆಹಲಿಯಲ್ಲಿ ಅರೆಸ್ಟ್‌

    ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಸೂತ್ರಧಾರ ದೆಹಲಿಯಲ್ಲಿ ಅರೆಸ್ಟ್‌

    ನವದೆಹಲಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ (Mangaluru Cooker Bomb Explosion Case) ಸಂಚು ರೂಪಿಸಿದ್ದ ಐಸಿಸ್ ಉಗ್ರ ಸಂಘಟನೆಯ ಸಂಚುಕೋರ, ಕರ್ನಾಟಕದ ಶಿವಮೊಗ್ಗ (Shivamogga) ಮೂಲದ ಅರಾಫತ್ ಅಲಿಯನ್ನು (Arafath Ali ) ರಾಷ್ಟ್ರೀಯ ತನಿಖಾದ ಸಂಸ್ಥೆ(NIA) ಬಂಧಿಸಿದೆ.

    ಕೀನ್ಯಾ ರಾಜಧಾನಿ ನೈರೋಬಿಯಿಂದ ಆತ ದೆಹಲಿಗೆ (Delhi) ಬಂದಿಳಿಯುತ್ತಿದ್ದಂತೆ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ. ಅಲಿ 2020 ರಿಂದ ಐಸಿಸ್ ಮೂಲಕ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ. ಭಾರತದಲ್ಲಿ ನೆಲೆಸದೇ ಇದ್ದರೂ ಐಎಸ್‌ನ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾವನ್ನು ಉತ್ತೇಜಿಸಲು ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದ.  ಇದನ್ನೂ ಓದಿ: ಗಗನ್, ಧನಂಜಯ್, ಚೈತ್ರಾ ಕುಂದಾಪುರ ಪರಿಚಯವಾಗಿದ್ದು ಹೇಗೆ?: ಡೀಲ್ ಕೇಸ್‍ನ ಸಂಪೂರ್ಣ ಕಥೆ ಬಿಚ್ಚಿಟ್ಟ ಚನ್ನನಾಯ್ಕ್

    ಐಸಿಸ್ ಸಂಘಟನೆಗೆ ಮುಸ್ಲಿಂ (Muslim) ಯುವಕರನ್ನು ನೇಮಿಸುವ ಕೆಲಸ ಈತ ಮಾಡುತ್ತಿದ್ದ. ನಂತರ ವಿವಿಧ ವಿಚಾರಗಳನ್ನು ಅವರ ತಲೆಗೆ ತುಂಬಿ ತೀವ್ರವಾದಿಗಳನ್ನಾಗಿ ಮಾಡುತ್ತಿದ್ದ ವಿಚಾರ ತನಿಖೆಯತಿಂದ ಬೆಳಕಿಗೆ ಬಂದಿತ್ತು.

    ಶಿವಮೊಗ್ಗ ತುಂಗಾ ತೀರದಲ್ಲಿ ನಡೆದ ಟ್ರಯಲ್‌ ಬ್ಲಾಸ್ಟ್‌ ಪ್ರಕರಣ (Shivamogga Trial Blast Case) ಮತ್ತು ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಪ್ರಮುಖ ಸಂಚನ್ನು ಈತನೇ ರೂಪಿಸಿದ್ದ. ಮಂಗಳೂರು ಸ್ಪೋಟದಲ್ಲಿ ಬಂಧಿತನಾಗಿರುವ ಶಾರೀಕ್‌ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕುಕ್ಕರ್‌ ಬಾಂಬ್‌ ಇಡಲು ರಿಕ್ಷಾದಲ್ಲಿ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಸ್ಫೋಟಗೊಂಡಿತ್ತು. ಅಲಿ ಈ ಎಲ್ಲ ಪ್ರಕರಣದ ಆರೋಪಿಗಳ ಜೊತೆ ನೇರ ಸಂಪರ್ಕದಲ್ಲಿದ್ದ. ಇದನ್ನೂ ಓದಿ: ವಿಶ್ವನಾಥ್ ಜೀ ಅಲಿಯಾಸ್ ಚನ್ನನಾಯ್ಕ್ ಪತ್ನಿಗೆ ಬೆದರಿಕೆ ಹಾಕಿದ್ದ ಚೈತ್ರಾ ಕುಂದಾಪುರ!

    2020 ರ ಮಂಗಳೂರು ಗೋಡೆಯ ಮೇಲೆ ಬರಹ ಪ್ರಕರಣದಲ್ಲೂ ಆಲಿಯ ಪಾತ್ರವಿದೆ. ಆತನ ಸೂಚನೆಯ ಮೇರೆಗೆ ಆರೋಪಿಗಳಾದ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ಅವರುಗೋಡೆಯ ಗೀಚು ಬರಹ ಬರೆದಿದ್ದರು.

    “ಸಂಘಗಳು ಹಾಗೂ ಮನುವಾದಿಗಳನ್ನು ನಿಗ್ರಹಿಸಲು ಲಷ್ಕರ್‌-ಎ-ತೊಯ್ದಾ ಮತ್ತು ತಾಲಿಬಾನಿಗಳನ್ನು ಆಹ್ವಾನಿಸುವಂತೆ ಮಾಡಬೇಡಿ. ಲಷ್ಕರ್ ಜಿಂದಾಬಾದ್” ಎಂದು ಗೋಡೆಯಲ್ಲಿ ಬರೆಯಲಾಗಿತ್ತು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕನ ಮನೆಗೆ ಬೆಳಕಾದ ಗುರು ಬೆಳದಿಂಗಳು ಟ್ರಸ್ಟ್

    ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕನ ಮನೆಗೆ ಬೆಳಕಾದ ಗುರು ಬೆಳದಿಂಗಳು ಟ್ರಸ್ಟ್

    ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ (Mangaluru Cooker Blast) ಗೊಂಡು ಅಮಾಯಕ ಆಟೋ ಚಾಲಕ (Auto Driver) ಅರೆಬರೆ ಸುಟ್ಟು ಹೋಗಿದ್ದು ಭಾರೀ ಸುದ್ದಿಯಾಗಿತ್ತು. ತನ್ನ ಮಗಳ ಮದುವೆ ಹಿನ್ನೆಲೆಯಲ್ಲಿ ಬಡಪಾಯಿ ಆಟೋ ಚಾಲಕ ರಾತ್ರಿ- ಹಗಲೆನ್ನದೆ ದುಡಿಯುತ್ತಿದ್ದಾಗಲೇ ದುರಂತ ಎದುರಾಗಿತ್ತು. ಬಾಂಬ್ ಸ್ಫೋಟದಿಂದಾಗಿ ದಿಕ್ಕೆಟ್ಟು ಹೋಗಿದ್ದ ಆಟೋ ಚಾಲಕನ ಬಾಳಿಗೆ ಈಗ ಗುರುಬೆಳದಿಂಗಳು ಫೌಂಡೇಶನ್ ಆಸರೆಯಾಗಿದೆ.

    ಅಂದು ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಸುಟ್ಟು ಹೋಗಿದ್ದ ಪುರುಷೋತ್ತಮ ಪೂಜಾರಿಗೆ ಬದುಕುವ ಭರವಸೆಯೇ ಇರಲಿಲ್ಲ. ಸಚಿವರು, ಶಾಸಕರು ಪರಿಹಾರದ ಭರವಸೆ ಇತ್ತರೂ, ಅವರ ಜೊತೆಗೆ ಗಟ್ಟಿಯಾಗಿ ನಿಂತಿದ್ದು ಬಿಲ್ಲವ ಮುಖಂಡರ ನೇತೃತ್ವದ ಗುರು ಬೆಳದಿಂಗಳು ಫೌಂಡೇಶನ್. ಒಂದೆಡೆ ಮಗಳ ಮದುವೆಯ ಚಿಂತೆ, ಬೀಳುವ ಸ್ಥಿತಿಯಲ್ಲಿದ್ದ ಹಳೆಯ ಮನೆಯ ಕುರಿತು ಚಿಂತಿಸಿಯೇ ಪುರುಷೋತ್ತಮ ಪೂಜಾರಿ ಕುಸಿದು ಹೋಗಿದ್ದರು. ಆದರೆ ನಾಲ್ಕೇ ತಿಂಗಳಲ್ಲಿ ಈ ಫೌಂಡೇಶನ್ ಆರು ಲಕ್ಷ ವೆಚ್ಚದಲ್ಲಿ ಮನೆಯನ್ನು ನವೀಕರಣಗೊಳಿಸಿದ್ದಾರೆ. ಯುಗಾದಿಯ ಶುಭ ದಿನದಂದೇ ಪುರುಷೋತ್ತಮ ಪೂಜಾರಿಗೆ ಹೊಸ ಮನೆಯನ್ನು ಹಸ್ತಾಂತರಿಸಿದ್ದಾರೆ.

    ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಚರ್ಚ್ ಧರ್ಮಗುರು ನೇತೃತ್ವದಲ್ಲಿ ಮನೆಯನ್ನು ಗುರು ಬೆಳದಿಂಗಳು ಹೆಸರಲ್ಲಿಯೇ ಅನಾವರಣ ಮಾಡಲಾಗಿದೆ. ಸರಳ ಕಾರ್ಯಕ್ರಮದಲ್ಲಿ ಪುರುಷೋತ್ತಮ ಪೂಜಾರಿಗೆ ಮನೆ ಹಸ್ತಾಂತರಗೊಂಡರೂ, ಸರ್ಕಾರದಿಂದ ಚಿಕ್ಕಾಸಿನ ಪರಿಹಾರ ಸಿಕ್ಕಿಲ್ಲ ಎಂಬ ಕೊರಗು ಇದೆ. ಚಿಕಿತ್ಸಾ ವೆಚ್ಚ ಎಂಟು ಲಕ್ಷ ಆಗಿದ್ದು, ಅದನ್ನು ಮಗಳ ಇಎಸ್‍ಐ ಸೌಲಭ್ಯದಿಂದ ಭರಿಸಲಾಗಿದೆ. ಬಾಂಬ್ ಸ್ಫೋಟ ಸಂದರ್ಭದಲ್ಲಿ ಸರ್ಕಾರದ ಪರಿಹಾರದ ಭರವಸೆ ನೀಡಿದ್ದರೂ, ಈವರೆಗೂ ಪರಿಹಾರ ಸಿಕ್ಕಿಲ್ಲ ಎಂದು ಪುರುಷೋತ್ತಮ ಪೂಜಾರಿ ಅಳಲು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಲಿನಲ್ಲಿ ಬಲವಿಲ್ಲದಿದ್ದರೂ ಮಂಗಳೂರಿನ ಯಶಸ್ವಿ ಫುಡ್ ಡೆಲಿವರಿ ಬಾಯ್!

    ಈಗಲೋ ಆಗಲೋ ಬಿದ್ದು ಹೋಗುವ ಭಯದಲ್ಲಿದ್ದ ಮನೆಯನ್ನು ನವೀಕರಣಗೊಳಿಸಲು ಮುಂದಾಗಿದ್ದು, ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ರಾಮಯ್ಯ. ಕಳೆದ ಮೂರು ವರ್ಷಗಳಿಂದ ಟ್ರಸ್ಟ್ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿರುವ ಪದ್ಮರಾಜ್ ಕಾರ್ಯ ಸರ್ವತ್ರ ಪ್ರಶಂಸೆಗೆ ಒಳಗಾಗಿದೆ. ಮೂರು ವರ್ಷದ ಹಿಂದೆ ಯುಗಾದಿಯಂದೇ ಸ್ಥಾಪನೆಯಾದ ಈ ಫೌಂಡೇಶನ್ ಇಂದು ಯುಗಾದಿಯಂದೇ ಮನೆ ಹಸ್ತಾಂತರಿಸಿದೆ. ಇದೇ ವೇಳೆ ಐದು ತಿಂಗಳು ಕಳೆದರೂ ಬಾಂಬ್ ಸ್ಫೋಟದ ಸಂತ್ರಸ್ತನಿಗೆ ಪರಿಹಾರ ಸಿಗದೇ ಇರುವುದನ್ನು ಪದ್ಮರಾಜ್ ಖಂಡಿಸಿದ್ದಾರೆ.

    ಒಟ್ಟಿನಲ್ಲಿ ಒಂದೆಡೆ ಯುಗಾದಿ (Ugadi 2023) ಶುಭದಿನದಂದೇ ಮನೆಯನ್ನು ನವೀಕರಣಗೊಳಿಸಿ ಹಸ್ತಾಂತರ ಮಾಡಿದರೆ, ಸಂತ್ರಸ್ತನಿಗೆ ಪರಿಹಾರ ಸಿಕ್ಕಿಲ್ಲ ಎಂಬ ಕೊರಗು ಎದ್ದಿರುವುದು ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರದ ಕಿವಿ ಹಿಂಡಿದಂತಾಗಿದೆ.

  • ಅಮಾಯಕ ಅವಾರ್ಡ್ ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ: ಅಶೋಕ್‍ಗೆ ಆಹ್ವಾನ ನೀಡಿದ ಡಿಕೆಶಿ

    ಅಮಾಯಕ ಅವಾರ್ಡ್ ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ: ಅಶೋಕ್‍ಗೆ ಆಹ್ವಾನ ನೀಡಿದ ಡಿಕೆಶಿ

    ಹುಬ್ಬಳ್ಳಿ: ಸಚಿವ ಆರ್. ಅಶೋಕ್ (R.Ashok) ನನಗೆ ಅಮಾಯಕನ ಅವಾರ್ಡ್ ಕೊಡುವುದಾಗಿ ಹೇಳಿದ್ದಾರೆ. ಅಮಾಯಕ ಅವಾರ್ಡ್ ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ. ಅಶೋಕ್ ಡೇಟ್, ಟೈಮ್ ಫಿಕ್ಸ್ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K Shivakumar)  ಸವಾಲು ಹಾಕಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಕ್ಕರ್ ಬ್ಲಾಸ್ಟ್ ವಿಚಾರದಲ್ಲಿ ನನ್ನ ಬಗ್ಗೆ ಯಾರು ಬೇಕಾದ್ರೂ, ಏನಾದ್ರು ಪ್ರಚಾರ ಮಾಡ್ಲಿ. ನಮ್ಮದು ಕಾಂಗ್ರೆಸ್ (Congress) ಪಕ್ಷ, ಭಯೋತ್ಪಾದನೆಯನ್ನು ವಿರೋಧಿಸುತ್ತಾ ಬಂದಿರುವ ಪಕ್ಷ. ಅಧಿಕಾರದಲ್ಲಿ ಇದ್ದಾಗೆಲ್ಲಾ ದೇಶದಲ್ಲಿ ಭಯೋತ್ಪಾದನೆ ದಮನ ಮಾಡಿದ್ದೇವೆ. ಭಯೋತ್ಪಾದನೆ ನಿಯಂತ್ರಿಸಲಾಗದ ಸರ್ಕಾರ ವಜಾ ಮಾಡಿದ್ದೇವೆ. ಮಂಗಳೂರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದೀವಿ. ಯುವಕನಿಗೆ ಪ್ರಜ್ಞೆ ಬರೋವರೆಗೆ ಏನೂ ಹೇಳಕ್ಕೆ ಆಗಲ್ಲಾ ಅಂತಾ ಪೊಲೀಸ್ ಕಮೀಷನರ್ ಹೇಳಿದ್ರು. ಮಂಗಳೂರು ಪೊಲೀಸರು ಹಿನ್ನೆಲೆ ತಿಳ್ಕೊಬೇಕು ಅಂತಾ ಮೊದಲು ಹೇಳಿಕೆ ಕೊಟ್ರು. ಆದರೆ ಡಿಜಿಪಿ ಘಟನೆಗೆ ಭಯೋತ್ಪಾದನೆಯ ನೆಪ ಕೊಟ್ರು. ಬಿಜೆಪಿಯ (BJP) ಭ್ರಷ್ಟಾಚಾರ, ಮತಗಳ್ಳತನ, ಬೋಗಸ್ ವೋಟರ್ ಸೃಷ್ಟಿಯನ್ನು ಮುಚ್ಚುವ ಯತ್ನವಿದು. ಬಿಜೆಪಿ ಭ್ರಷ್ಟಾಚಾರ ಮುಚ್ಚಿಕೊಳ್ಳಲಿಕ್ಕೆ ಕುಕ್ಕರ್ ಬ್ಲಾಸ್ಟ್ ಪ್ರಕರಣ ಮುಂದೆ ತಂದಿದ್ದಾರೆ. ಹೋಮ್ ಮಿನಿಸ್ಟರ್ ಈ ವಿಷಯವನ್ನು ರಾಜಕಾರಣ ಮಾಡುತ್ತಿದ್ದಾರೆ. ಎಂದು ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: 13 ಕೋಟಿ ರೂ. ಖರ್ಚು ಮಾಡಿ ಕಟ್ಟಿದ ಬ್ರಿಡ್ಜ್ ಉದ್ಘಾಟನೆಗೂ ಮುನ್ನ ಢಮಾರ್!

    ಸಿದ್ದರಾಮಯ್ಯ (Siddaramaiah) ಬಸ್ ಯಾತ್ರೆಗೆ ಕಂಡೀಷನ್ ಹಾಕಿದ್ದಾರೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಸ್‍ನಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಯಾತ್ರೆ ಪ್ರಾರಂಭವಾಗುತ್ತೆ. ಮಹದಾಯಿ ವಿಚಾರದಲ್ಲಿ ಜನವರಿ 2 ರಂದು ಹುಬ್ಬಳ್ಳಿಯಲ್ಲಿ ಹೋರಾಟ ಸಮಾವೇಶ ಮಾಡುತ್ತೇವೆ. ಯಾರೂ ಕಂಡೀಷನ್ ಹಾಕಲ್ಲ. ಪಕ್ಷದ ತೀರ್ಮಾನವೇ ಅಂತಿಮ. ಪ್ರತಿ ವಿಚಾರದಲ್ಲೂ ಸಿದ್ದರಾಮಯ್ಯ, ಹರಿಪ್ರಸಾದ್ ಸೇರಿದಂತೆ ಕಾರ್ಯಾಧ್ಯಕ್ಷರ ಜೊತೆಗೆ ಚರ್ಚಿಸುತ್ತಿದ್ದೇನೆ. ಈ ಬಾರಿ ಗೆಲ್ಲುವವರಿಗೆ ಪಕ್ಷ ಟಿಕೆಟ್ ಕೊಡುತ್ತೆ. ಕಷ್ಟ ಕಾಲದಲ್ಲಿ ನಮ್ಮೊಂದಿಗೆ ಇದ್ದವರಿಗೆ ಟಿಕೆಟ್ ಕೊಡುತ್ತೇವೆ. ಸಿದ್ದರಾಮಯ್ಯ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡುತ್ತಿದ್ದಾರೆ ಎನ್ನುವ ವಿಚಾರವಾಗಿ ಮಾತನಾಡಿ, ಸುರ್ಜೇವಾಲ್ ಜೊತೆ ಇವತ್ತು ಆ ಎಲ್ಲಾ ವಿಷಯಗಳ ಚರ್ಚೆಯಾಗುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜಾತಿ ಆಧಾರದಲ್ಲಿ ಸಿಎಂ ಆಯ್ಕೆ ಮಾಡಲ್ಲ- ಜಿ.ಪರಮೇಶ್ವರ್

    Live Tv
    [brid partner=56869869 player=32851 video=960834 autoplay=true]

  • ಡಿಕೆಶಿಗೆ ಮಂಗಳೂರು ಕುಕ್ಕರ್‌ನೊಂದಿಗೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ: ಯತ್ನಾಳ್ ವ್ಯಂಗ್ಯ

    ಡಿಕೆಶಿಗೆ ಮಂಗಳೂರು ಕುಕ್ಕರ್‌ನೊಂದಿಗೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ: ಯತ್ನಾಳ್ ವ್ಯಂಗ್ಯ

    ಕಲಬುರಗಿ: ಉಗ್ರಗಾಮಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರ ಬ್ರದರ್ಸ್. ಅವರಿಗೆ ಮಂಗಳೂರು (Mangaluru) ಕುಕ್ಕರ್ (Cooker) ಜೊತೆ ಬೆಳಗಾವಿಯ (Belagavi) ಕುಕ್ಕರ್ ಮೇಲೆ ಹೆಚ್ಚು ಪ್ರೀತಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basana Gowda Patil Yatnal) ವ್ಯಂಗ್ಯವಾಡಿದ್ದಾರೆ.

    ಉಗ್ರಗಾಮಿಗಳ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇ ಆರ್ ಆಲ್ ಮೈ ಬ್ರದರ್ಸ್ ಅಂತಾ ಡಿಕೆಶಿ ಹೇಳ್ತಿರ್ತಾರೆ. ಹಾಗಾಗಿ ಭಯೋತ್ಪಾದಕರು ಸಹ ಡಿಕೆಶಿಯ ಬ್ರದರ್ಸ್. ಡಿಕೆಶಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ ಇದೆ. ಮಂಗಳೂರು ಕುಕ್ಕರ್ ಜೊತೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ. ಒಟ್ಟಾರೆಯಾಗಿ ಡಿಕೆಶಿಗೆ ಕುಕ್ಕರ್ ಎಂದ್ರೆ ಬಹಳ ಪ್ರೀತಿ ಹಾಗಾಗಿ ಉಗ್ರ ಶಾರೀಕ್ ವಿಚಾರದಲ್ಲಿ ಆ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ. ಇದನ್ನೂ ಓದಿ: ಇವರಿಗೆ ಮಹಿಳೆಯರು ಹಿಜಬ್, ಬಿಕಿನಿ ಏನೇ ಧರಿಸಿದ್ರು ಸಮಸ್ಯೆ: ಪಠಾಣ್ ಪರ ನಿಂತ ನುಸ್ರತ್

    ಬಳಿಕ ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಚಿತ್ರದಲ್ಲಿ ನಟಿ ದೀಪಿಕಾ ಪಡಕೋಣೆ (Deepika Padukone)  ಕೇಸರಿ ಬಿಕಿನಿ (Bikini Controversy) ಧರಿಸಿದ ವಿಚಾರವಾಗಿ ಮಾತನಾಡಿ, ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣವನ್ನು ಅಪಮಾನ ಮಾಡಲಾಗ್ತಿದೆ. ಶೀಘ್ರವೇ ಶಾರುಖ್ ಖಾನ್ ಮಣ್ಣು ಮುಕ್ಕುತ್ತಾನೆ. ಈಗಾಗಲೇ ಅಮಿರ್ ಖಾನ್ ಸಿನಿಮಾ ಇಲ್ಲದೆ ಖಾಲಿ ಬಿದ್ದಿದ್ದಾನೆ. ಅದೇ ರೀತಿ ಶಾರುಖ್ ಖಾನ್ ಕೂಡ ಸಿನಿಮಾ ಇಲ್ಲದೆ ಕೂರುವ ಕಾಲ ಹತ್ತಿರವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಾರಿಕ್‌ನನ್ನು ವಶಕ್ಕೆ ಪಡೆದ NIA ಅಧಿಕಾರಿಗಳು

    Live Tv
    [brid partner=56869869 player=32851 video=960834 autoplay=true]

  • ಉಗ್ರ ಶಾರೀಕ್‍ಗೆ ಹರಿದು ಬರುತ್ತಿತ್ತು ಡಾಲರ್ ಮನಿ – ಕರೆನ್ಸಿ ವರ್ಗಾಯಿಸಿದ 40ಕ್ಕೂ ಅಧಿಕ ಜನರ ವಿಚಾರಣೆ

    ಉಗ್ರ ಶಾರೀಕ್‍ಗೆ ಹರಿದು ಬರುತ್ತಿತ್ತು ಡಾಲರ್ ಮನಿ – ಕರೆನ್ಸಿ ವರ್ಗಾಯಿಸಿದ 40ಕ್ಕೂ ಅಧಿಕ ಜನರ ವಿಚಾರಣೆ

    ಮಂಗಳೂರು: ನಗರದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಉಗ್ರ ಶಾರೀಕ್‍ನ (Mohammed Shariq)  ತನಿಖೆ ಮುಂದುವರೆದಿದೆ. ತನಿಖೆ ವೇಳೆ ಎನ್‍ಐಎ (NIA) ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳು ಸಿಕ್ತಾ ಇದೆ. ಆತನ ಹಣದ (Money) ಮೂಲ ಜಾಲಾಡಿದ ಅಧಿಕಾರಿಗಳಿಗೆ ಶಾಕ್ ಆಗಿದ್ದು ಹೆಚ್ಚಿನ ಹಣ ಡಾಲರ್ (Dollar Money) ಮೂಲಕ ಅಕೌಂಟ್‍ಗೆ ಬರುತ್ತಿದ್ದ ದಾಖಲೆ ಸಿಕ್ಕಿದೆ. ಮೈಸೂರಿನ (Mysuru) ನೂರಾರು ಮಂದಿಯ ಅಕೌಂಟ್‍ಗೆ ಡಾಲರ್ ಭಾರತೀಯ ಕರೆನ್ಸಿಯಾಗಿ ವರ್ಗಾವಣೆ ಆಗಿದ್ದು 40ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಲಾಗಿದೆ.

    ಉಗ್ರ ಮಹಮ್ಮದ್ ಶಾರೀಕ್‍ನ ಒಂದೊಂದೇ ಉಗ್ರ ಕೃತ್ಯಗಳು ಬೆಳಕಿಗೆ ಬರುತ್ತಿದೆ. ಆತನ ಉಗ್ರ ಕೃತ್ಯಕ್ಕೆ ವಿದೇಶದಿಂದ ಸಹಕಾರ ಮಾಡುತ್ತಿದ್ದವರು ಡಾಲರ್ ಮೂಲಕ ಆರ್ಥಿಕ ಸಹಾಯ ನೀಡುತ್ತಿರುವ ಬಗ್ಗೆ ಎನ್‍ಐಎ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‍ನನ್ನು ಎನ್‍ಐಎ ಅಧಿಕಾರಿಗಳು ನಿರಂತರ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಆತನ ಹಣದ ಮೂಲವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆತನ ಡಾರ್ಕ್ ವೆಬ್‍ನಲ್ಲಿರುವ (Dark Web) ಅಕೌಂಟ್‍ಗೆ ಡಾಲರ್‌ ರೂಪದಲ್ಲಿ ಸಾಕಷ್ಟು ಹಣ ಬಂದಿರುವ ದಾಖಲೆ ಲಭ್ಯವಾಗಿದ್ದು ಅಧಿಕಾರಿಗಳು ಅದರ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬ್ಲಾಸ್ಟ್ ಕೇಸ್‍ನಲ್ಲಿ NIAಗೆ ಸ್ಫೋಟಕ ಮಾಹಿತಿ- ಉಗ್ರನ ಅಕೌಂಟ್‍ಗೆ ಬರ್ತಿತ್ತು ಡಾಲರ್

    ಡಾರ್ಕ್ ವೆಬ್‍ನಲ್ಲಿರುವ ಶಾರೀಕ್ ಅಕೌಂಟ್‍ಗೆ ಲಕ್ಷಾನುಗಟ್ಟಲೇ ಮೌಲ್ಯದ ಡಾಲರ್ ಡೆಪೋಸಿಟ್ ಆಗಿದ್ದು, ಬಳಿಕ ಅದನ್ನು ಆತ ಭಾರತೀಯ ಕರೆನ್ಸಿಯಾಗಿ ವರ್ಗಾಯಿಸುತ್ತಿದ್ದ. ಭಾರತೀಯ ಕರೆನ್ಸಿಯನ್ನು ತನ್ನ ಪರಿಚಯಸ್ಥರ ಅಕೌಂಟ್‍ಗೆ ಹಾಕಿಸಿ ಅದನ್ನು ಉಪಯೋಗಿಸುತ್ತಿದ್ದ. ಮೈಸೂರಿನಲ್ಲಿ ತಾನೊಬ್ಬ ಹಿಂದೂ ಎಂದು ಹೇಳಿಕೊಂಡು ಸಾಕಷ್ಟು ಜನರನ್ನು ಪರಿಚಯ ಮಾಡಿಕೊಂಡಿದ್ದು, ಅವರ ಅಕೌಂಟ್‍ಗೆ ಹಣ ವರ್ಗಾವಣೆ ಮಾಡುತ್ತಿದ್ದ. ಸುಮಾರು 100 ಅಧಿಕ ಮೈಸೂರಿಗರ ಅಕೌಂಟ್‍ಗೆ ಹಣ ವರ್ಗಾವಣೆಯಾಗಿದ್ದು, ಎನ್‍ಐಎ ಅಧಿಕಾರಿಗಳು 40 ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ. ಈತನ ಕೃತ್ಯ ತಿಳಿಯದೇ ಇದ್ದ ಸಾಕಷ್ಟು ಜನ ಈತನ ಸ್ನೇಹವನ್ನು ನಂಬಿ ಅಕೌಂಟ್‍ಗೆ ಹಣ ಹಾಕಿ ಶಾರೀಕ್ ಹೇಳಿದ ಬೇರೆ, ಬೇರೆ ಅಕೌಂಟ್‍ಗೆ ವರ್ಗಾಯಿಸುತ್ತಿದ್ದರು. ಇದನ್ನೂ ಓದಿ: ಕೊಡಗಿನ ಹೋಂಸ್ಟೇಯಲ್ಲಿ ಇಬ್ಬರು ಮಹಿಳೆಯರೊಂದಿಗೆ ತಂಗಿದ್ದ ಶಾರೀಕ್!

    ಮೈಸೂರು ಮಾತ್ರವಲ್ಲದೆ ನೆರೆಯ ತಮಿಳುನಾಡು, ಕೇರಳ, ಮಧ್ಯ ಪ್ರದೇಶ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಅಕೌಂಟ್‍ಗೂ ಈತನ ಹಣ ವರ್ಗಾವಣೆ ಆಗಿದೆ. ಹೀಗಾಗಿ ಎನ್‍ಐಎ ಅಧಿಕಾರಿಗಳು ಈ ಎಲ್ಲಾ ರಾಜ್ಯದಲ್ಲೂ ತನಿಖೆ ಆರಂಭಿಸಿದ್ದು, ಉಗ್ರನ ಜಾಲ ಇಡೀ ದೇಶದಲ್ಲೇ ಪಸರಿಸಿದ ಆತಂಕ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನ ಹೋಂಸ್ಟೇಯಲ್ಲಿ ಇಬ್ಬರು ಮಹಿಳೆಯರೊಂದಿಗೆ ತಂಗಿದ್ದ ಶಾರೀಕ್!

    ಕೊಡಗಿನ ಹೋಂಸ್ಟೇಯಲ್ಲಿ ಇಬ್ಬರು ಮಹಿಳೆಯರೊಂದಿಗೆ ತಂಗಿದ್ದ ಶಾರೀಕ್!

    ಮಡಿಕೇರಿ: ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ (Karavali) ಶಂಕಿತ ಉಗ್ರ ಶಾರೀಕ್ ಆಟೋದಲ್ಲಿ ಕುಕ್ಕರ್ ಬಾಂಬ್ (Cooker Bomb) ಹಿಡಿದುಕೊಂಡು ಬಂದು ಭಾರೀ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿ ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದ. ಈ ಬಾಂಬ್ ಬ್ಲಾಸ್ಟ್ ಮಾಡುವ ಮೊದಲು ಕೊಡಗು ಜಿಲ್ಲೆಯ ಹೋಂಸ್ಟೇ ಒಂದಕ್ಕೆ ಆತ ಮತ್ತು ಇಬ್ಬರು ಮಹಿಳೆಯರು (Womens) ಸೇರಿ ಆತನ ತಂಡ ಬಂದು ಹೋಗಿತ್ತು ಎಂದು ಇದೀಗ ತನಿಖೆ ವೇಳೆ ತಿಳಿದು ಬಂದಿದೆ.

    ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ (Mohammed Shariq)  ಹಾಗೂ ಆತನ ಸಹಚರರು ಕೊಡಗು ಜಿಲ್ಲೆಗೂ ಭೇಟಿ ನೀಡಿದ್ರು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಹಾಗೂ ಮಂಗಳೂರು (Mangaluru) ಪೊಲೀಸರು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಸಮೀಪದ ನೆಮ್ಮಲೆ ಗ್ರಾಮದ ಓಟೆಕಾಡ್ ಹೋಂಸ್ಟೇಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಹೋಂಸ್ಟೇಗೆ ಶಾರೀಕ್ ಜೊತೆ ಅತನ ಸಹಚರರು ಸೇರಿದಂತೆ ಇಬ್ಬರು ಮಹಿಳೆಯರು ಬಂದು ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಸತತ 1 ವರ್ಷ ಡ್ರಮ್‌ನಲ್ಲಿತ್ತು ಮಹಿಳೆ ದೇಹದ ಪೀಸ್‌ಗಳು – ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕ ಶಾಕ್‌!

    ಹೀಗಾಗಿ ಎನ್‍ಐಎ ತನಿಖಾ ತಂಡ ಹಾಗೂ ಮಂಗಳೂರು ಪೊಲೀಸರು ಹೋಂಸ್ಟೇಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹೋಂಸ್ಟೇ ಮಾಲೀಕರನ್ನು ವಿಚಾರಣೆ ನಡೆಸಿದಾಗ ಶಾರೀಕ್ ಹಾಗೂ ಅವನೊಂದಿಗೆ ಸಹಚರರು ಹಾಗೂ ಇಬ್ಬರು ಮಹಿಳೆಯರು ಬಂದು ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಹೋಂಸ್ಟೇ ಮಾಲೀಕನನ್ನು ಮಂಗಳೂರಿಗೆ ಬರುವಂತೆ ಪೊಲೀಸರು ತಿಳಿಸಿ ಹೋಗಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬ್ಲಾಸ್ಟ್ ಕೇಸ್‍ನಲ್ಲಿ NIAಗೆ ಸ್ಫೋಟಕ ಮಾಹಿತಿ- ಉಗ್ರನ ಅಕೌಂಟ್‍ಗೆ ಬರ್ತಿತ್ತು ಡಾಲರ್

    ಈ ಓಟೆಕಾಡ್ ಹೋಂಸ್ಟೇ ಮಾಲೀಕರು ಪಂಚಾಯತ್‍ನಿಂದ ಕಳೆದ ಆರು ತಿಂಗಳ ಹಿಂದೆಯಿಂದ ಲೈಸೆನ್ಸ್ ತೆಗೆದುಕೊಳ್ಳದೆ ಹಾಗೂ ಹೋಂಸ್ಟೇ ಮಾರ್ಗಸೂಚಿ ಪಾಲನೆ ಮಾಡದೆ ಇರುವುದರಿಂದ ಹೋಂಸ್ಟೇಗೆ ಯಾರು ಬರುತ್ತಾರೆ, ಹೋಗುತ್ತಾರೆ ಅನ್ನೋದರ ಬಗ್ಗೆ ದಾಖಲೆಗಳು ಇಲ್ಲ ಅನ್ನೋದು ಎನ್‍ಐಎ ಆಧಿಕಾರಿಗಳಿಗೆ ತಿಳಿದು ಬಂದಿದೆ. ಈ ಬಗ್ಗೆ ಗ್ರಾಮಪಂ ಅಧ್ಯಕ್ಷೆ ಚೋಟ್ಟೆಯoಡಮಡ ಸರಿತಾ ಮಾತನಾಡಿ, ಉಗ್ರ ಶಾರೀಕ್ ನಮ್ಮ ಗ್ರಾಮಕ್ಕೂ ಬಂದು ಹೋಗಿರುವುದು ನಿಜಕ್ಕೂ ಗ್ರಾಮದ ಜನರಿಗೆ ಅತಂಕ ಉಂಟುಮಾಡಿದೆ. ಯಾರೇ ಹೋಂಸ್ಟೇ, ರೆಸಾರ್ಟ್ ನಡೆಸುವ ಮಾಲೀಕರು ಬರುವ ಪ್ರವಾಸಿಗರ ಮೂಲ ದಾಖಲೆ ಹಾಗೂ ಮಾಹಿತಿಗಳನ್ನು ತೆಗೆದುಕೊಂಡು ಅನುಮಾನ ಬರುವ ವ್ಯಕ್ತಿಗಳು ಕಂಡುಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೊಂದು ಉಗ್ರ ಸಂಘಟನೆಯ ಸ್ಥಾಪನೆಗೆ ವೇದಿಕೆಯಾಯ್ತಾ ಕರ್ನಾಟಕ?

    ಮತ್ತೊಂದು ಉಗ್ರ ಸಂಘಟನೆಯ ಸ್ಥಾಪನೆಗೆ ವೇದಿಕೆಯಾಯ್ತಾ ಕರ್ನಾಟಕ?

    ಬೆಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟ(Cooker Bomb Blast) ನಡೆದ ಬೆನ್ನಲ್ಲೇ ಮತ್ತೊಂದು ಉಗ್ರ ಸಂಘಟನೆಯ ಸ್ಥಾಪನೆಗೆ ಕರ್ನಾಟಕ(Karnataka) ವೇದಿಕೆಯಾಯ್ತಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

    ಮಂಗಳೂರು ಕೃತ್ಯದ ಹೊಣೆಯನ್ನು ಹೊತ್ತುಕೊಂಡ ಬಳಿಕ Islamic Resistance Council(IRC) ಹೊಸ ಉಗ್ರ ಸಂಘಟನೆಯೇ ಎಂಬ ಪ್ರಶ್ನೆಗೆ ತನಿಖಾ ಸಂಸ್ಥೆಗಳ ಉನ್ನತ ಮೂಲಗಳು ಹೌದು ಎನ್ನುತ್ತಿವೆ.

    ಈ ಹಿಂದೆ ಭಟ್ಕಳದ ಯಾಸಿನ್‌(Yasin Bhatkal) ಹಾಗೂ ರಿಯಾಜ್ ಭಟ್ಕಳ (Riyaz Bhatkal) ಇಂಡಿಯನ್ ಮುಜಾಹಿದ್ದೀನ್(Indian Mujahideen) ಸಹ ಸಂಸ್ಥಾಪಕರಾಗಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಂಘಟನೆ ಭೀತಿ ಹುಟ್ಟಿಸಿತ್ತು. ಈಗ ಅದೇ ಸಾಲಿಗೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಸೇರ್ಪಡೆಯಾಗುವತ್ತಾ ಸಾಗಿದೆ.

    ಇದೇ ಮೊದಲ ಬಾರಿಗೆ ಬಹಿರಂಗವಾಗಿ ಈ ಸಂಘಟನೆಯ ಹೆಸರು ಪ್ರಕಟವಾಗಿದ್ದುಇದಕ್ಕಾಗಿ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಇದರ ಮೂಲ ಹುಡುಕಲು ಆರಂಭಿಸಿದ್ದಾರೆ.

    ತೀರ್ಥಹಳ್ಳಿ ಮೂಲದವರಿಂದ ಈ ಸಂಘಟನೆ ಶುರುವಾಗಿದೆ ಎಂಬ ಅನುಮಾನ ಬಂದಿದ್ದು ಅರಾಫತ್ ಅಲಿ, ಮತೀನ್ ಶಾರೀಕ್‌, ಎಲ್ಲರೂ ಇದರಲ್ಲಿ ಸಕ್ರಿಯರಾಗಿದ್ದಾರೆ. ಇವರಲ್ಲದೇ ಈಗಾಗಲೇ ಇನ್ನು ಹಲವರನ್ನು ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ನೇಮಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಇದರ ಜಾಡು ರಾಷ್ಟ್ರೀಯ ತನಿಖಾದಳ ತನಿಖೆ ಆರಂಭಿಸಿದೆ. ಇದನ್ನೂ ಓದಿ: ರೂಮಿನ ಹತ್ರ ಬಂದಾಗ ಸಡನ್ ಲಾಕ್ – ಕನ್ನಡಕ ಧರಿಸಿ ಓಡಾಟ

    ಐಆರ್‌ಸಿ ಹೇಳಿದ್ದು ಏನು?
    ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಮಿಕ್‌ ರೆಸಿಸ್ಟೆನ್ಸ್ ಕೌನ್ಸಿಲ್ ಸಂಘಟನೆ ಅರೆಬಿಕ್‌ ಭಾಷೆಯಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ನಮ್ಮ ದಾಳಿ ಕದ್ರಿ ದೇವಸ್ಥಾನ(Kadri Temple) ಆಗಿತ್ತು. ಆದರೆ ಉದ್ದೇಶಿತ ಗುರಿಯನ್ನು ತಲುಪುವ ಮೊದಲೇ ಬಾಂಬ್‌ ಸ್ಫೋಟಗೊಂಡಿದೆ. ರಾಜ್ಯದಲ್ಲಿ ಗುಂಪು ಹತ್ಯೆ, ದಬ್ಬಾಳಿಕೆಯ ಕಾನೂನುಗಳು ಮತ್ತು ಶಾಸನಗಳು ಮತ್ತು ಧರ್ಮದಲ್ಲಿ ಹಸ್ತಕ್ಷೇಪದ ನಡೆಯುವ ಮೂಲಕ ನಮ್ಮ ಮೇಲೆ ಯುದ್ಧ ಸಾರಲಾಗಿದೆ. ಈ ಯುದ್ಧಕ್ಕೆ ಪ್ರತಿಯಾಗಿ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿಕೊಂಡಿತ್ತು.

    ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಅನುಭವಿಸುತ್ತೀರಿ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ.

  • ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ದಿನ  ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್‌ ಫೋನ್‌

    ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ದಿನ ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್‌ ಫೋನ್‌

    ಮಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ(Mangaluru Blast Case) ಮುನ್ನ ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ (Satellite Phone) ರಿಂಗಣಿಸಿದ ವಿಚಾರ ಈಗ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ಹೌದು. ನವೆಂಬರ್‌ 19 ಶನಿವಾರ ಸಂಜೆ  ಸ್ಫೋಟ ನಡೆದಿದ್ದರೆ ನ.18ರಂದು ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ(Kakkinje) ಸ್ಯಾಟಲೈಟ್ ಫೋನ್ ಮೂಲಕ ಕರೆ ಹೋಗಿದೆ.

    ಅರಣ್ಯ ಪ್ರದೇಶದಲ್ಲಿ ನಿಷೇಧಿತ ತುರಾಯ (Thuraya) ಕಂಪನಿಯ ಸ್ಯಾಟಲೈಟ್ ಫೋನ್ ಬಳಸಲಾಗಿರುವ ಮಾಹಿತಿ ಈಗ ಸಿಕ್ಕಿದೆ. ಸ್ಯಾಟಲೈಟ್ ಫೋನ್ ಜಾಗವನ್ನು ಬೇಹುಗಾರಿಕಾ ಏಜೆನ್ಸಿಗಳು ಪತ್ತೆ ಮಾಡಿದ್ದು ಪೊಲೀಸರು ಈಗ ಈ ಕೋನದಲ್ಲೂ ತನಿಖೆ ಆರಂಭಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಎರಡು, ಉಡುಪಿ ಒಂದು ಕಡೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಕರೆ ಹೋಗಿದೆ. ಸುಮಾರು 5 ವರ್ಷಗಳಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಸ್ಯಾಟಲೈಟ್ ಫೋನ್ ಸದ್ದು ಮಾಡುತ್ತಿವೆ.

    ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮೂಲದ ತುರಾಯ ಕಂಪನಿ ಯುರೋಪ್, ಮಧ್ಯಪ್ರಾಚ್ಯ, ಉತ್ತರ, ಮಧ್ಯ ಮತ್ತು ಪೂರ್ವ ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 161 ದೇಶಗಳಿಗೆ ಧ್ವನಿ ಸೇವೆಗಳನ್ನು ನೀಡುತ್ತಿದೆ. ಇದನ್ನೂ ಓದಿ: ರೂಮಿನ ಹತ್ರ ಬಂದಾಗ ಸಡನ್ ಲಾಕ್ – ಕನ್ನಡಕ ಧರಿಸಿ ಓಡಾಟ

    ಸ್ಯಾಟಲೈಟ್‌ ಫೋನ್‌ ಬಳಕೆಗೆ ನಿಷೇಧ:
    ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಭಾರತದಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

    ವೈರ್‌ಲೆಸ್ ಕಾಯ್ದೆಯ ಸೆಕ್ಷನ್ 6 ಮತ್ತು ಇಂಡಿಯನ್ ಟೆಲಿಗ್ರಾಫ್ ಆಕ್ಟ್‌ನ ಸೆಕ್ಷನ್ 20ರ ಅಡಿಯಲ್ಲಿ ಭಾರತದಲ್ಲಿ ತುರಾಯ/ಇರಿಡಿಯಮ್ ಸ್ಯಾಟಲೈಟ್ ಫೋನ್‌ಗಳ ಬಳಕೆಯನ್ನು ಕಾನೂನುಬಾಹಿರ ಎಂದು ಘೋಷಿಸಿದೆ

    ಭಾರತಕ್ಕೆ ಪ್ರಯಾಣಿಸುವ ಎಲ್ಲಾ ವ್ಯಕ್ತಿಗಳಿಗೆ ತುರಾಯ/ಇರಿಡಿಯಮ್ ಸ್ಯಾಟಲೈಟ್ ಫೋನ್‌ಗಳ ಬಳಕೆಯನ್ನು ಭಾರತದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಸಲಹೆ ನೀಡಲಾಗುತ್ತದೆ. ವಿದೇಶಿಯರು ಭಾರತಕ್ಕೆ ಉಪಗ್ರಹ ಫೋನ್‌ಗಳನ್ನು ತರುವುದಕ್ಕೂ ನಿಷೇಧ ಹೇರಲಾಗಿದೆ. ಭಾರತಕ್ಕೆ ಬರುವಾಗ ಉಪಗ್ರಹ ಫೋನ್‌ಗಳಿದ್ದರೆ ಪ್ರಯಾಣಿಕರನ್ನು ಬಂಧಿಸಲಾಗುತ್ತದೆ. ಅಷ್ಟೇ ಅಲ್ಲದೇ ಟೆಲಿಗ್ರಾಫ್ ಕಾಯಿದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ವಿರೋಧಪಕ್ಷ ಮತಕ್ಕೋಸ್ಕರ ಭಯೋತ್ಪಾದನೆಗೆ ಸಪೋರ್ಟ್ ಮಾಡ್ತಿದೆ: ಪ್ರಮೋದ್ ಮುತಾಲಿಕ್

    ವಿರೋಧಪಕ್ಷ ಮತಕ್ಕೋಸ್ಕರ ಭಯೋತ್ಪಾದನೆಗೆ ಸಪೋರ್ಟ್ ಮಾಡ್ತಿದೆ: ಪ್ರಮೋದ್ ಮುತಾಲಿಕ್

    ರಾಮನಗರ: ಮಂಗಳೂರು ಕುಕ್ಕರ್ ಸ್ಫೋಟಕ್ಕೆ (Mangaluru Cooker bomb Blast) ತಮಿಳುನಾಡಿನ ಎಸ್‌ಡಿಪಿಐ ಲಿಂಕ್ ಸಿಗುತ್ತಿದೆ. ಕರಾವಳಿ ಭಾಗದಲ್ಲಿ ಇಸ್ಲಾಮಿಕ್ ಗೂಂಡಾ ಶಕ್ತಿ ಬೆಳೆಯುತ್ತಿದೆ. ಇದು ಪೊಲೀಸರಿಗೂ ಗೊತ್ತು. ಆದರೆ ಈ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಘಟನೆ ಆದಾಗ ಮಾತ್ರ ಕಾರ್ಯಾಚರಣೆ ಮಾಡ್ತಾರೆ. ರಾಜ್ಯ ಸರ್ಕಾರ ಜಾಗೃತವಾಗಬೇಕು. ಘಟನೆ ಆದ ಬಳಿಕ ತನಿಖೆ ಮಾಡಿ ಪ್ರಯೋಜನ ಇಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಂಕಿತ ಉಗ್ರ ಶಾರೀಕ್ (Shariq) ಈ ಹಿಂದೆ ಬಂಧನವಾಗಿದ್ದ ವ್ಯಕ್ತಿ. ಆತನ ಬಿಡುಗಡೆ ಮಾಡದಿದ್ದರೆ ಈ ಬಾಂಬ್ ಸ್ಫೋಟ ಆಗುತ್ತಿರಲಿಲ್ಲ. ಸರ್ಕಾರ ಕೇವಲ ಚುನಾವಣೆ, ಅಧಿಕಾರ ಅಂತ ಕೂರಬಾರದು. ವಿರೋಧ ಪಕ್ಷ ಕೂಡಾ ಟೀಕೆ ಮಾಡಿ ಕೂರಬಾರದು. ವೋಟ್‌ಗೋಸ್ಕರ ಭಯೋತ್ಪಾದಕತೆಗೆ ಸಪೋರ್ಟ್ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ನಿಮ್ಮ ನೀಚ ಬುದ್ದಿ ಬಿಡಿ. ಸರ್ಕಾರ ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇರಳ ಹಾಗೂ ತಮಿಳುನಾಡು ಗಡಿ ಭಾಗಗಳಲ್ಲಿ ಎಚ್ಚರಿಕೆ ವಹಿಸಿ. ಸೂಕ್ಷ್ಮ ಪ್ರದೇಶಗಳಲ್ಲಿ ಎನ್‌ಐಎ ಶಾಖೆ ಸ್ಥಾಪನೆ ಮಾಡಬೇಕು. ದೇಶ, ರಾಜ್ಯದ ರಕ್ಷಣೆ ಬಗ್ಗೆ ಚಿಂತನೆ ಮಾಡಿ ಎಂದರು. ಇದನ್ನೂ ಓದಿ: ಕುಕ್ಕರ್‌ ಬಾಂಬರ್‌ ಶಾರೀಕ್‌ ಗುಣಮುಖನಾಗಲು 25 ದಿನ ಬೇಕು

    ರಾಮನಗರ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಯುತ್ತಿದೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ಕನಕಪುರದಲ್ಲಿ ಮತಾಂತರ ನಡೆಯುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೆಚ್ಚಿಸಲು ಮತಾಂತರ ಮಾಡಲಾಗುತ್ತಿದೆ. ಇಲ್ಲಿ ಕಾನೂನು ಬಾಹಿರ ಚರ್ಚ್ಗಳು ತಲೆ ಎತ್ತುತ್ತಿವೆ. ಅವರಿಗೆ ಕುಮ್ಮಕ್ಕು ನೀಡಲು ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ಮಾಡಲು ಹೊರಟಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಕ್ರಮವಹಿಸಿಲ್ಲ. ಈ ಬಗ್ಗೆ ಎಸ್‌ಪಿ, ಡಿಸಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೆಹಲಿಯ ಶ್ರದ್ಧಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹಿಂದೂ ಹುಡುಗಿಯರು ಎಚ್ಚರಿಕೆ ವಹಿಸಿ. ಆತುರದಲ್ಲಿ ಪ್ರೀತಿಗೆ ಮೋಸ ಹೋಗಿ ಪೀಸ್ ಪೀಸ್ ಆಗಬೇಡಿ. ದೆಹಲಿಯ ಘಟನೆಯಿಂದ ಎಲ್ಲರೂ ಎಚ್ಚೆತ್ತುಕೊಳ್ಳಿ. ಪ್ರೀತಿ ಮಾಡುವ ಮುನ್ನ ಯೋಚಿಸಿ. ಪೋಷಕರು ಕೂಡಾ ಈ ಬಗ್ಗೆ ಜಾಗೃತಿ ವಹಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಫ್ತಾಬ್ ನನ್ನನ್ನು ಕೊಂದು ಪೀಸ್ ಪೀಸ್ ಮಾಡ್ತಾನೆ – 2 ವರ್ಷದ ಹಿಂದೆಯೇ ಪೊಲೀಸರಿಗೆ ಪತ್ರ ಬರೆದಿದ್ದ ಶ್ರದ್ಧಾ

    Live Tv
    [brid partner=56869869 player=32851 video=960834 autoplay=true]

  • ಕೊಯಮತ್ತೂರು ಬಾಂಬ್‌ ಸ್ಫೋಟ, ಪಿಎಫ್‌ಐ ನಾಯಕರ ಜೊತೆ ಬಾಂಬರ್‌ ಶಾರೀಕ್‌ಗೆ ನಂಟು

    ಕೊಯಮತ್ತೂರು ಬಾಂಬ್‌ ಸ್ಫೋಟ, ಪಿಎಫ್‌ಐ ನಾಯಕರ ಜೊತೆ ಬಾಂಬರ್‌ ಶಾರೀಕ್‌ಗೆ ನಂಟು

    ಮಂಗಳೂರು: ಉಗ್ರರ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದಲ್ಲಿ ಭಾಗಿಯಾಗಿ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಸಂಘಟನೆಯ ನಾಯಕರ ಜೊತೆ ಶಾರೀಕ್(Shariq) ನಂಟು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ಆಟೋರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌(Mangaluru Blast Case) ಸ್ಫೋಟಿಸಿದ ಪ್ರಕರಣದ ಆರೋಪಿ ಮೊಹಮ್ಮದ್‌ ಶಾರೀಕ್‌ಗೂ ತಮಿಳುನಾಡಿನ ಕೊಯಮತ್ತೂರಿನಲ್ಲಿ(Coimbatore) ದೀಪಾವಳಿ ಸಮಯದಲ್ಲಿ ಅ.23 ರಂದು ಸಂಗಮೇಶ್ವರ ದೇವಸ್ಥಾನ ಬಳಿಯ ನಡೆದಿದ್ದ ಕಾರು ಬಾಂಬ್‌ ಸ್ಫೋಟ ಪ್ರಕರಣಕ್ಕೂ(Car Bomb Blast)ನಂಟು ಇರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಅನುಮಾನ ಯಾಕೆ?
    ಸಂಗಮೇಶ್ವರ ದೇವಸ್ಥಾನ ಬಳಿ ಸ್ಫೋಟ ಸಂಭವಿಸುವುದಕ್ಕೆ ಒಂದೂವರೆ ತಿಂಗಳ ಮೊದಲು ಶಾರೀಕ್‌ ಕೊಯಮತ್ತೂರಿಗೆ ಹೋಗಿದ್ದ ವಿಚಾರ ಬೆಳಕಿಗೆ ಬಂದಿದೆ. ಅಲ್ಲೂ ಸುಳ್ಳು ಮಾಹಿತಿ ನೀಡಿ ಹಿಂದೂ ಎಂದು ಪರಿಚಯಿಸಿಕೊಂಡು ಮೂರು ನಾಲ್ಕು ದಿನ ಅಲ್ಲಿಯೇ ಬಾಡಿಗೆ ಕೊಠಡಿಯಲ್ಲಿ ನೆಲೆಸಿದ್ದ. ಇಲ್ಲಿ ಬಳ್ಳಾರಿಯ ಸಂಡೂರಿನ ಅರುಣ್‌ ಕುಮಾರ್‌ ಗಾವಳಿ ಅವರ ಆಧಾರ್‌ ಕಾರ್ಡ್‌ ನೀಡಿದ್ದ. ಅರುಣ್‌ ಕುಮಾರ್‌ ಗಾವಳಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಅವರ ಆಧಾರ್‌ ಕಾರ್ಡ್ 6 ತಿಂಗಳ ಹಿಂದೆ ಕಳವಾಗಿದ್ದು ಗೊತ್ತಾಗಿತ್ತು. ಅವರು ಕೊಯಮತ್ತೂರಿಗೆ ಹೋಗಿಯೇ ಇರಲಿಲ್ಲ ವಿಚಾರ ದೃಢಪಟ್ಟಿತ್ತು.

    ಕೊಯಮತ್ತೂರು ಬಾಂಬ್‌ ಸ್ಫೋಟದ ಆರೋಪಿಗಳಿಗೂ ಶಾರಿಕ್‌ಗೂ ನಂಟು ಇರುವ ಬಗ್ಗೆ ಪೊಲೀಸರಿಗೆ ಈಗ ಬಲವಾದ ಸಂಶಯ ಇದೆ. ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಶಾರೀಕ್‌ ಗಾಯಗೊಂಡ ಮಾಹಿತಿ ಸಿಗುತ್ತಿದ್ದಂತೆಯೇ ಕೊಯಮತ್ತೂರು ಪೊಲೀಸರ ತಂಡವೂ ಮಂಗಳೂರಿಗೆ ಆಗಮಿಸಿದೆ.

    ಕೊಯಮತ್ತೂರು ನಂಟು ಏನು?
    ಕೊಯಮತ್ತೂರಿನಲ್ಲಿ ಪಿಎಫ್‌ಐ ನಾಯಕರನ್ನು ಶಾರೀಕ್ ಭೇಟಿಯಾಗಿದ್ದ ಶಂಕೆ ವ್ಯಕ್ತವಾಗಿದೆ. ಜೊತೆಗೆ 1998ರ ಕೊಯಮತ್ತೂರು ಬಾಂಬ್ ಬ್ಲಾಸ್ಟ್ ರೂವಾರಿ ಎಸ್‌‌.ಎ.ಬಾಷಾ ಸಂಬಂಧಿ ಮುಹಮ್ಮದ್ ತಲ್ಕನನ್ನು ಭೇಟಿಯಾದ ಅನುಮಾನ ಬಂದಿದೆ. ಮೋಸ್ಟ್ ವಾಂಟೆಡ್‌ ಅಬ್ದುಲ್ ಮತೀನ್‌ನಿಂದ ಮುಹಮ್ಮದ್ ತಲ್ಕ ಪರಿಚಯವಾಗಿರಬಹುದು ಎನ್ನಲಾಗುತ್ತಿದೆ. ತಮಿಳುನಾಡು ಹಿಂದೂ ಮುಖಂಡನ ಹತ್ಯೆಯಲ್ಲಿ ಮತೀನ್ ಹೆಸರು ಕೇಳಿ ಬಂದಿತ್ತು. ತಮಿಳುನಾಡಿನ ಹಲವು ಉಗ್ರ ಜಾಲ ಹೊಂದಿದ್ದವರ ಜೊತೆ ಮತೀನ್‌ಗೆ ಸಂಪರ್ಕ ಇದ್ದು ಆತನೇ ಶಾರೀಕ್‌ಗೆ ಪರಿಚಯ ಮಾಡಿದ್ದಾನೆ ಎಂಬ ಅನುಮಾನ ಬಂದಿದೆ. ಈ ಅನುಮಾನ ಬಂದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೇ ಶಾರೀಕ್‌ ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿ ತಂಗಲು ಪಿಎಫ್‌ಐ ನಾಯಕರು ಶಾರೀಕ್‌ಗೆ ಸಹಾಯ ಮಾಡಿರಬಹುದು ಎಂಬ ಶಂಕೆ ಬಂದಿದೆ. ಇದನ್ನೂ ಓದಿ: ಉಗ್ರ ಕೃತ್ಯಕ್ಕೆ ಹಿಂದುತ್ವ ಹಣೆಪಟ್ಟಿಗೆ ಸಂಚು – ಮುಂಬೈ ಕಸಬ್‌ನಂತೆ ದಾಳಿಗೆ ಬಾಂಬರ್‌ ಶಾರೀಕ್ ಸ್ಕೆಚ್‌

    ಮಾಧ್ಯಮಗಳ ಜೊತೆ ಮಾತನಾಡಿದ್ದ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌, ಕೊಯಮತ್ತೂರಿನ ಸ್ಫೋಟ ಪ್ರಕರಣದ ಆಯಾಮದಲ್ಲೂ ತನಿಖೆ ನಡೆಯಲಿದೆ. ಮಂಗಳೂರಿನ ಘಟನೆ ನಡೆಯುವುದಕ್ಕೆ ಮುನ್ನ ಆರೋಪಿ ಯಾವೆಲ್ಲ ಪ್ರದೇಶಗಳಿಗೆ ಭೇಟಿ ನೀಡಿದ್ದ, ಯಾರನ್ನೆಲ್ಲ ಭೇಟಿ ಮಾಡಿದ್ದ ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದಿದ್ದರು.

    ತಮಿಳಿನಲ್ಲಿ ಮಾತನಾಡುತ್ತಿದ್ದ:
    ಮೈಸೂರಿನಲ್ಲಿ ಮೊಬೈಲ್‌ ತರಬೇತಿ ಕೇಂದ್ರದಲ್ಲಿದ್ದಾಗ ಶಾರೀಕ್‌ ಮೊಬೈಲ್‌ನಲ್ಲಿ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದ. ಧಾರವಾಡ ಮೂಲದ ನಿನಗೆ ತಮಿಳು ಹೇಗೆ ಬರುತ್ತದೆ ಎಂದು ಪ್ರಶ್ನಿಸಿದ್ದಕ್ಕೆ ಆತ ನಾನು ಕೆಲ ಸಮಯ ತಮಿಳುನಾಡಿನಲ್ಲಿ ನೆಲೆಸಿದ್ದೆ. ಅಲ್ಲೂ ನನಗೆ ಸ್ನೇಹಿತರಿದ್ದಾರೆ. ಅವರ ಜೊತೆ ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿದ್ದ.

    1998ರಲ್ಲಿ ಏನಾಗಿತ್ತು?
    ಫೆ.14 ಶನಿವಾರ ಕೊಯಮತ್ತೂರಿನ 11 ಜಾಗದಲ್ಲಿ 12 ಬಾಂಬ್‌ ಸ್ಫೋಟಗೊಂಡಿತ್ತು. ಈ ದಾಳಿಯಲ್ಲಿ 58 ಮಂದಿ ಮೃತಪಟ್ಟಿದ್ದರೆ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 12 ಕಿ.ಮೀ ಅಂತರದಲ್ಲಿ ಸ್ಫೋಟ ಸಂಭವಿಸಿತ್ತು.

    Live Tv
    [brid partner=56869869 player=32851 video=960834 autoplay=true]