Tag: ಕುಕ್

  • 10 ಅಂಕ ಕಳೆದುಕೊಂಡರೂ ಭಾರತ ನಂ.1 -7 ಅಂಕ ಪಡೆದು ನ್ಯೂಜಿಲೆಂಡ್ ಹಿಂದಿಕ್ಕಿದ ಇಂಗ್ಲೆಂಡ್

    10 ಅಂಕ ಕಳೆದುಕೊಂಡರೂ ಭಾರತ ನಂ.1 -7 ಅಂಕ ಪಡೆದು ನ್ಯೂಜಿಲೆಂಡ್ ಹಿಂದಿಕ್ಕಿದ ಇಂಗ್ಲೆಂಡ್

    ದುಬೈ: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-4 ರ ಅಂತದ ಮೂಲಕ ಮುಗ್ಗರಿಸಿದ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲೇ ಮುಂದುವರಿದಿದೆ.

    ಸರಣಿಯ ಅಂತಿಮ ಓವೆಲ್ ಟೆಸ್ಟ್ ಹೋರಾಟದಲ್ಲಿ ಕೆಎಲ್ ರಾಹುಲ್, ರಿಷಬ್ ಪಂತ್ ಹೋರಾಟದ ಬಳಿಕವೂ ಟೀಂ ಇಂಡಿಯಾ ಪಂದ್ಯದಲ್ಲಿ ಸೋಲುಂಡಿತು. ಆದರೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ 115 ಅಂಕಗಳ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಆದರೆ ಸರಣಿ ಸೋಲಿನ ಹಿನ್ನೆಲೆಯಲ್ಲಿ ಬರೋಬ್ಬರಿ 10 ಅಂಕಗಳನ್ನು ಕಳೆದುಕೊಂಡಿದೆ.

    ಇತ್ತ ಸರಣಿ ಗೆದ್ದ ಇಂಗ್ಲೆಂಡ್ 105 ಅಂಕಗಳನ್ನು ಪಡೆದು 4ನೇ ಸ್ಥಾನಕ್ಕೆ ಏರಿದೆ. 4ನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ 102 ಅಂಕ ಗಳಿಸಿದ್ದು 5ನೇ ಸ್ಥಾನಕ್ಕೆ ಕುಸಿದಿದೆ. ಟೀಂ ಇಂಡಿಯಾ ವಿರುದ್ಧದ ಟೂರ್ನಿಗೂ ಮುನ್ನ ಇಂಗ್ಲೆಂಡ್ 97 ಅಂಕಗಳನ್ನು ಹೊಂದಿತ್ತು.

    ಇಂಗ್ಲೆಂಡ್ ಪರ ವಿದಾಯ ಪಂದ್ಯವಾಡಿದ ಕುಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ವೃತ್ತಿ ಜೀವನದಲ್ಲಿ 33ನೇ ಶತಕ ಸಿಡಿದ ಕುಕ್‍ಗೆ ಇಂಗ್ಲೆಂಡ್ ತಂಡದ ಆಟಗಾರಾರರು 33 ಬೀಯರ್ ಬಟಲ್ ಗಿಫ್ಟ್ ನೀಡಿದ್ದಾರೆ.

    ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ತಲಾ 106 ಅಂಕಗಳಿಂದ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಮುಂದುವರಿದಿದೆ. ಅಕ್ಟೋಬರ್ ನಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಆಡಲಿದ್ದು, ಅಕ್ಟೋಬರ್ 4ರಿಂದ ರಾಜಕೋಟ್ ನಲ್ಲಿ ಪ್ರಥಮ ಟೆಸ್ಟ್ ಪಂದ್ಯ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ವಿರಾಟ್ ಗೋಲ್ಡನ್ ಡಕ್ – ಸಂಕಷ್ಟದಲ್ಲಿ ಟೀಂ ಇಂಡಿಯಾ

    ವಿರಾಟ್ ಗೋಲ್ಡನ್ ಡಕ್ – ಸಂಕಷ್ಟದಲ್ಲಿ ಟೀಂ ಇಂಡಿಯಾ

    ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸರಣಿ ಸೋಲುಂಡರೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳವ ನಿರೀಕ್ಷೆ ಇತ್ತು. ಆದರೆ ಅಂತಿಮ ಟೆಸ್ಟ್ 2ನೇ ಇನ್ನಿಂಗ್ಸ್‍ನಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ಔಟಾಗಿ ಗೋಲ್ಡನ್ ಡಕ್ ಆಗುವ ಮೂಲಕ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.

    https://twitter.com/DRVcricket/status/1039185894039871488?

    ಇದಕ್ಕೂ ಮುನ್ನ ವಿದಾಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಇಂಗ್ಲೆಂಡ್ ಭಾರೀ ಮುನ್ನಡೆ ಪಡೆಯಲು ಕಾರಣದ ಕುಕ್ ತಮ್ಮ ಕೊನೆಯ ಪಂದ್ಯವನ್ನು ಸ್ಮರಣೀಯವಾಗಿಸಿದರು. 147 ರನ್ ಸಿಡಿಸಿ ಕುಕ್ ಔಟಾಗುತ್ತಿದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ನೀಡಿದರು. ಇದರೊಂದಿಗೆ ವೃತ್ತಿ ಜೀವನದ 33ನೇ ಶತಕ ಪೂರೈಸಿದ ಕುಕ್ ಪಾದಾರ್ಪಣೆ ಪಂದ್ಯ ಹಾಗೂ ಅಂತಿಮ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ಹೆಗ್ಗಳಿಕೆ ಪಡೆದರು.

    ಎರಡನೇ ಇನ್ನಿಂಗ್ಸ್ ನಲ್ಲಿ 423 ರನ್ ಗಳಿಸಿದ ಇಂಗ್ಲೆಂಡ್ ಡಿಕ್ಲೇರ್ ನೀಡಿ ಟೀಂ ಇಂಡಿಯಾಗೆ 464 ರನ್ ಗುರಿ ನೀಡಿತು. ಇಂಗ್ಲೆಂಡ್ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ನಾಯಕ ರೂಟ್ (125) ಕೂಡ ಶತಕ ಸಿಡಿಸಿ ಮಿಂಚಿದರು. ಇತ್ತ ಇಂಗ್ಲೆಂಡ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 3 ರನ್ ಗಳಿಸುವಷ್ಟರಲ್ಲಿ ಆರಂಭಿಕ ಧವನ್ (1), ಪೂಜಾರ (0), ಕೊಹ್ಲಿ (0) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾ 58/3 ಕಳೆದುಕೊಂಡಿದ್ದು ಕೆಎಲ್ ರಾಹುಲ್ (46*), ರಹಾನೆ (10*) ರನ್  ಗಳಿಸಿ  ಕ್ರೀಸ್ ನಲ್ಲಿದ್ದಾರೆ. ಇಂಗ್ಲೆಂಡ್ ಪರ ಮಿಂಚಿನ ದಾಳಿ ನಡೆಸಿದ ಆ್ಯಂಡರ್ ಸನ್ 2, ಬ್ರಾಡ್ 1 ವಿಕೆಟ್ ಗಳಿಸಿದ್ದಾರೆ.

    https://twitter.com/DRVcricket/status/1039186174244528129

    https://twitter.com/DRVcricket/status/1039186681793077248