Tag: ಕುಕನೂರು

  • ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯ ಭೀಕರ ಹತ್ಯೆ

    ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯ ಭೀಕರ ಹತ್ಯೆ

    ಕಲಬುರಗಿ: ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ಕುಕನೂರು (Kukanur) ಗ್ರಾಮದಲ್ಲಿ ನಡೆದಿದೆ.

    ಕುಕನೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಗುರುಬಸಮ್ಮ ಹುಚ್ಚಡ (65) ಕೊಲೆಯಾದ ಮಹಿಳೆ. ಗುರುವಾರ ಬೆಳಗ್ಗೆ ಜಮೀನಿಗೆ ತೆರಳಿದ್ದ ಗುರುಬಸಮ್ಮ ಸಂಜೆಯಾದರೂ ವಾಪಸ್ ಮನೆಗೆ ಬಂದಿರಲಿಲ್ಲ. ಸಂಜೆ ವೇಳೆ ಇವರ ಕುಟುಂಬಸ್ಥರು ಜಮೀನಿಗೆ ತೆರಳಿ ನೋಡಿದಾಗ ಗುರುಬಸಮ್ಮ ಕೊಲೆಯಾಗಿ ಬಿದ್ದಿದ್ದರು. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ದುಷ್ಕರ್ಮಿಗಳು ಅವರ ಶವವನ್ನು ಜಮೀನಿನಲ್ಲೇ ಅರೆ ಬರೆಯಾಗಿ ಹೂತಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಮುಖಂಡರ ಮಧ್ಯೆ ಗಲಾಟೆ – ಕೈ ಮುಖಂಡನಿಗೆ ಚಾಕು

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡ್ರಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಪಘಾತವಾಗಿ ಗಂಟೆ ಕಳೆದರೂ ಬಾರದ ಅಂಬುಲೆನ್ಸ್ – ನಡುರಸ್ತೆಯಲ್ಲೇ ನರಳಾಡಿ ಪ್ರಾಣ ಬಿಟ್ಟ ಯುವಕ

  • ಮಹಿಳೆಯೊಂದಿಗೆ ಅನುಚಿತ ವರ್ತನೆ-ಥಳಿಸಿ ಪೊಲೀಸರ ವಶಕ್ಕೆ ನೀಡಿದ ಗ್ರಾಮಸ್ಥರು

    ಮಹಿಳೆಯೊಂದಿಗೆ ಅನುಚಿತ ವರ್ತನೆ-ಥಳಿಸಿ ಪೊಲೀಸರ ವಶಕ್ಕೆ ನೀಡಿದ ಗ್ರಾಮಸ್ಥರು

    -ಕೈ ಕಾಲು ಕಟ್ಟಿ ಹಿಮ್ಮುಖವಾಗಿ ಮಲಗಿಸಿ ಥಳಿತ

    ಕೊಪ್ಪಳ: ಮಹಿಳೆಯೊಂದಿಗೆ ಅನುಚಿತ ವರ್ತಿಸಿದ ವ್ಯಕ್ತಿಯನ್ನು ಥಳಿಸಿ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ ಘಟನೆ ಜಿಲ್ಲೆಯ ಕುಕನೂರ ತಾಲೂಕಿನ ತಳಕಲ್ ಗ್ರಾಮದಲ್ಲಿ ನಡೆದಿದೆ.

    ಕುಕನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲರ್ಕ್ ಹನುಮಂತಪ್ಪ ಥಳಿತಕ್ಕೊಳಗಾದ ವ್ಯಕ್ತಿ. ಮದ್ಯದ ನಶೆಯಲ್ಲಿ ಹನುಮಮಂತಪ್ಪ ಗ್ರಾಮದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದ ಹಿನ್ನೆಲೆ ಗ್ರಾಮಸ್ಥರು ಥಳಿಸಿದ್ದಾರೆ. ಹನುಮಂತಪ್ಪನ ಕೈ ಕಾಲು ಕಟ್ಟಿ ಹಿಮ್ಮುಖವಾಗಿ ಮಲಗಿಸಿ ನಡು ರಸ್ತೆಯಲ್ಲಿ ಥಳಿಸಿದ್ದಾರೆ. ಥಳಿಸುತ್ತಿರುವ ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.

    ಮತ್ತೊಂದು ವಿಡಿಯೋದಲ್ಲಿ ಗ್ರಾಮಸ್ಥರು ಸತ್ಯ ಒಪ್ಪಿಕೊ ಎಂದು ಹೇಳುತ್ತಿದ್ದರೆ ಆರೋಪಿ ನಾನು ಏನು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾನೆ. ಕೊನೆಗೆ ಗ್ರಾಮಸ್ಥರು ಆರೋಪಿಯನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ. ಸದ್ಯ ಹನುಮಂತಪ್ಪನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.