Tag: ಕುಂ.ವೀರಭದ್ರಪ್ಪ

  • ಬಲಿಷ್ಠ ಸಮುದಾಯ 2ಎ ಮೀಸಲಾತಿ ಕೇಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರ: ಲೇಖಕ ಕುಂ.ವೀರಭದ್ರಪ್ಪ ಕಿಡಿ

    ಬಲಿಷ್ಠ ಸಮುದಾಯ 2ಎ ಮೀಸಲಾತಿ ಕೇಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರ: ಲೇಖಕ ಕುಂ.ವೀರಭದ್ರಪ್ಪ ಕಿಡಿ

    ರಾಯಚೂರು: ಯಾವುದೇ ಮೀಸಲಾತಿ ಸಂವಿಧಾನ ಪ್ರಕಾರ 50% ಮೀರುವ ಹಾಗಿಲ್ಲ. ಶೇ.97 ಜನ ಹಿಂದುಳಿದ ಮತ್ತು ಉತ್ಪಾದಕ ಸಮುದಾಯದವರು. ಇವರ ಮೀಸಲಾತಿಯನ್ನು ಬಲಿಷ್ಠ ಸಮುದಾಯ ಕೇಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರ ಎಂದು ಲೇಖಕ ಕುಂ.ವೀರಭದ್ರಪ್ಪ (Kum. Veerabhadrappa) ಖಂಡಿಸಿದ್ದಾರೆ.

    ರಾಯಚೂರಿನಲ್ಲಿ (Raichuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ವಿಚಾರವಾಗಿ, ಆ ಸಮುದಾಯದಲ್ಲಿ ಲ್ಯಾಂಡ್ ಲಾರ್ಡ್ಸ್ ಇದ್ದಾರೆ, ಸಿಎಂ ಆಗಿದ್ದಾರೆ, ದೊಡ್ಡ ಪದವಿ ಅನುಭವಿಸಿದ್ದಾರೆ. ಅದು ಬಹಳ ಮುಂದುವರೆದ ಸಮುದಾಯ. ಸ್ವಾಮೀಜಿ ಬಸವಣ್ಣಕಲ್ಯಾಣ, ಕೂಡಲಸಂಗಮ ಶ್ರೀ ಎಂದು ತಮ್ಮ ನಾಮವಾಚಕದಲ್ಲಿ ಬಳಸಬಾರದು. ಬಸವಣ್ಣ ಹಿಂದುಳಿದ ಸಮುದಾಯಗಳಿಗಾಗಿ ಶ್ರಮಿಸಿದ್ದಾರೆ, ಅವರನ್ನು ದುರುಪಯೋಗ ಮಾಡಿಕೊಳ್ಳಬಾರದು. ಮೀಸಲಾತಿ ಕೇಳಲು ಹಿಂಸೆಯನ್ನು ಪ್ರಚೋದಿಸಬಾರದು ಎಂದು ಜಯಮೃತ್ಯುಂಜಯ ಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿ 3 ಸಾವಿರ ಹೊಸ ಅಂಗನವಾಡಿ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ- ಲಕ್ಷ್ಮಿ ಹೆಬ್ಬಾಳ್ಕರ್

    ಸ್ವಾಮೀಜಿಯೂ ಸಹ ರಾಜಕಾರಣಿಯ ಒಂದು ಮುಖ. ಅವರು ಪೂರ್ಣ ಪ್ರಮಾಣದ ಸ್ವಾಮೀಜಿ ಅಲ್ಲ. ಆ ಸಮುದಾಯದ ಚುಕ್ಕಾಣಿ ಹಿಡಿಯಲು, ಪ್ರಸಿದ್ಧಿಯಾಗಲಿಕ್ಕೆ ದುರುಪಯೋಗ ಮಾಡಿಕೊಳ್ಳಬಾರದು. ಪಂಚಮಸಾಲಿ ಸಮುದಾಯ ಅತ್ಯಂತ ನಿರುಪದ್ರವಿ ಸಮುದಾಯ. ಸಮುದಾಯದ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಜಯಮೃತ್ಯಂಜಯ ಸ್ವಾಮಿಗೆ ಕೂಡಲಸಂಗಮ ಹೆಸರು ಬಳಸಲು, ಬಸವಣ್ಣನ ಹೆಸರು ಹೇಳಲು ಹಕ್ಕಿಲ್ಲ. ತಮ್ಮ ಖುರ್ಚಿಗಾಗಿ ಅವಾಂತರಗಳನ್ನು ಸೃಷ್ಟಿಸಬಾರದು. ವಚನಾನಂದ ಸ್ವಾಮಿ ಸೇರಿ ಸಮುದಾಯದ ಎರಡು ಸ್ವಾಮಿಗಳ ತಿಕ್ಕಾಟ ನಡೆಯುತ್ತಿದೆ. ಇದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತಿದೆ, ಇದು ಸರಿಯಲ್ಲ ಎಂದರು.

    ಇನ್ನೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಮಾತನಾಡಿ, ಬಸವಣ್ಣನವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ರಾಜಕಾರಣಿಯನ್ನು ಒಳಗೆ ಹಾಕಬೇಕು, ಚಳುವಳಿಯಿಂದ ದೂರ ಇಡಬೇಕು, ಲಿಂಗಾಯತ ಸಮುದಾಯದಿಂದ ಬಹಿಷ್ಕಾರ ಮಾಡಬೇಕು. ಯಾರೇ ಆಗಲಿ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಬಾರದು. ಅವರನ್ನು ಕ್ಷಮಿಸುವುದು ಸಮಾಜದ ದೊಡ್ಡ ದೌರ್ಬಲ್ಯ, ಲಿಂಗಾಯತ ಸಮುದಾಯ ಒಂದು ಜಾತಿಗೆ ಸೀಮಿತವಾದದ್ದಲ್ಲ. ಹಿಂದುಳಿದ ಸಮುದಾಯಗಳ ಒಕ್ಕೂಟ ಲಿಂಗಾಯತ. ಹಿಂದುಳಿದ ಸಮುದಾಯಗಳ ಒಕ್ಕೂಟದ ಸ್ವಾಯತ್ತತೆಯನ್ನ ಕಾಪಾಡುವ ಕೆಲಸವನ್ನ ಸ್ವಾಮಿಗಳು ರಾಜಕಾರಣಿಗಳು ಮಾಡಬೇಕು ಎಂದು ಕುಂ.ವೀರಭದ್ರಪ್ಪ ಹೇಳಿದರು.ಇದನ್ನೂ ಓದಿ: ಕೇರಳ ಮಾದರಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಹೆಚ್ಚಳ ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

  • ವ್ಯಕ್ತಿಗಳ ಬ್ರೈನ್ ವಾಷ್ ಮಾಡಿ ಆಯುಧ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ: ಕುಂ.ವೀರಭದ್ರಪ್ಪ

    ವ್ಯಕ್ತಿಗಳ ಬ್ರೈನ್ ವಾಷ್ ಮಾಡಿ ಆಯುಧ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ: ಕುಂ.ವೀರಭದ್ರಪ್ಪ

    ಬೆಂಗಳೂರು: ಸಾಹಿತಿಗಳಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯ ಬಂಧನದ ವಿಚಾರ ತಿಳಿದು ಬಹಳ ಸಂತೋಷವಾಗಿದೆ. ಆತನನ್ನು ಬ್ರೈನ್ ವಾಷ್ ಮಾಡಿ ಆಯುಧವಾಗಿ ಸಿದ್ಧಮಾಡಿದ ವ್ಯವಸ್ಥೆ ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ (Kum Veerabhadrappa) ತಿಳಿಸಿದ್ದಾರೆ.

    `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಆರೋಪಿ ಪ್ರತಿ ಸಲ ಪತ್ರ ಬರೆಯುವಾಗ ನಾನು ಅದನ್ನ ಬೆದರಿಕೆ ಪತ್ರ ಎಂದುಕೊಳ್ಳುತ್ತಿರಲಿಲ್ಲ. ಬದಲಿಗೆ ಪ್ರೇಮ ಪತ್ರ ಎಂದು ತಿಳಿದುಕೊಳ್ಳುತ್ತಿದ್ದೆ. ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಿಸಿಬಿ (CCB) ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ – ದಾವಣಗೆರೆ ಮೂಲದ ಹಿಂದೂ ಸಂಘಟನೆಯ ಸಂಚಾಲಕ ಅರೆಸ್ಟ್‌

    ಬೆದರಿಕೆ ಪತ್ರ ಬಂದಾಗ ನನ್ನ ಮನೆಯವರಿಗೆ ಹಾಗೂ ಪತ್ನಿಗೆ ಹೆಚ್ಚು ಆತಂಕವಾಗುತ್ತಿತ್ತು. ಹೊರಗಡೆ ಹೋಗದಂತೆ ಕುಟುಂಬ ಒತ್ತಡ ಹೇರುತ್ತಿತ್ತು. ಈಗ ಆರೋಪಿಯ ಬಂಧನವಾಗಿದೆ. ಆತನ ಬಗ್ಗೆ ನನಗೆ ಯಾವ ದ್ವೇಷವೂ ಇಲ್ಲ. ಸಾಹಿತಿಗಳು ಸಂವಿಧಾನದ ಪರವಾಗಿ ಮಾತನಾಡಬೇಕು. ಅದು ಸಾಹಿತಿಗಳ ಕೆಲಸ ಕೂಡ, ಅದಕ್ಕೆ ಬೆದರಿಕೆ ಹಾಕಿದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

    ಪತ್ರದಲ್ಲಿ ನಮ್ಮ ತಿಥಿ ದಿನಾಂಕ ಸೇರಿದಂತೆ, ಸಿಎಂಗೆ ಸಿದ್ದರಾಮಯ್ಯ ಅವರನ್ನು ಕಂಸನಿಗೆ ಹೋಲಿಸಿ ಪತ್ರ ಬರೆಯುತ್ತಿದ್ದ. ನಮ್ಮ ಭಾಷಣದ ಅಂಶಗಳನ್ನೇ ಇಟ್ಟುಕೊಂಡು ಪತ್ರ ಬರೆಯುತ್ತಿದ್ದ. ಒಮ್ಮೆ ಸಾವರ್ಕರ್ ಬಗ್ಗೆ ಭಾಷಣ ಮಾಡಿದ್ದಕ್ಕೆ ಪತ್ರ ಬರೆದು ಸಾವರ್ಕರ್ ಬಗೆಗಿನ ಪುಸ್ತಕಗಳನ್ನು ಕಳಿಸಿಕೊಟ್ಟಿದ್ದರು. ಸರ್ಕಾರ ಸಾಹಿತಿಗಳಿಗೆ ಸೂಕ್ತ ಭದ್ರತೆ ಒದಗಿಸಿ ಮನು ಪರಿಣಿತ ಸಂಘಟನೆಗಳನ್ನು ಮಟ್ಟ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಲೋಕ ಸಮರಕ್ಕೆ ತಯಾರಿ – ಸಿಎಂ ಪುತ್ರ ಯತೀಂದ್ರಗೆ ಸಿಗುತ್ತಾ ಟಿಕೆಟ್?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋಲ್ವಾಳ್ಕರ್, ಸಾವರ್ಕರ್ ಇತ್ಯಾದಿ ಹುಸಿ ದೇಶ ಭಕ್ತರ ಪಾಠ ತೆಗೆಯಬೇಕು: ಸಾಹಿತಿ ಕುಂ.ವೀರಭದ್ರಪ್ಪ

    ಗೋಲ್ವಾಳ್ಕರ್, ಸಾವರ್ಕರ್ ಇತ್ಯಾದಿ ಹುಸಿ ದೇಶ ಭಕ್ತರ ಪಾಠ ತೆಗೆಯಬೇಕು: ಸಾಹಿತಿ ಕುಂ.ವೀರಭದ್ರಪ್ಪ

    ಚಾಮರಾಜನಗರ: ಗೋಲ್ವಾಳ್ಕರ್ (Golwalkar), ಸಾವರ್ಕರ್ (Savarkar) ಇತ್ಯಾದಿ ಹುಸಿ ದೇಶ ಭಕ್ತರ ಪಾಠ ತೆಗೆಯಬೇಕು. ಈ ಪಾಠಗಳನ್ನು ಮಕ್ಕಳಿಗೆ ಬೋಧಿಸಬಾರದು. ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ (Kum Veerabhadrappa) ಆಗ್ರಹಿಸಿದರು.

    ಚಾಮರಾಜನಗರದಲ್ಲಿ (Chamarajanagara) ಮಾತನಾಡಿದ ಅವರು, ಹಿಂದಿನ ಸರ್ಕಾರ ಮನುಷ್ಯ ವಿರೋಧಿ, ದೇಶ ವಿರೋಧಿ, ಸಮಾಜ ವಿರೋಧಿ ಪಠ್ಯ ಅಳವಡಿಸಿದ್ದು ತಪ್ಪು. ಇದು ನಮ್ಮ ಸಂವಿಧಾನಕ್ಕೆ ಮಾಡಿದ ಅಪಮಾನ. ಹೊಸ ಸರ್ಕಾರ ಇದನ್ನು ಬದಲಿಸಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

    ಬರಗೂರು ರಾಮಚಂದ್ರಪ್ಪ ನೇತೃತ್ವ ಸಮಿತಿಯ ಪಠ್ಯಕ್ರಮ ಮುಂದುವರಿಸಲಿ. ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಬಸವಣ್ಣನ ತತ್ವ ಪಾಲಿಸಬೇಕು. ಇದು ಸರ್ಕಾರದ ಕರ್ತವ್ಯ ಎಂದು ಅವರು ಹೇಳಿದರು.

    ನನಗೆ ಈಗ್ಲೂ ಬೆದರಿಕೆ ಪತ್ರ ಬರುತ್ತಿವೆ. ಇದೀಗ 16 ನೇ ಬೆದರಿಕೆ ಪತ್ರ ಬಂದಿದೆ. ಸನಾತನ ಮೌಲ್ಯ, ಹಿಂದುತ್ವ ವಿರೋಧಿಸಿದಾಗ ಈ ರೀತಿಯ ಪ್ರೇಮ ಪತ್ರಗಳು ಬರುತ್ತವೆ. ನಾನು ಇವುಗಳನ್ನು ಬೆದರಿಕೆ ಪತ್ರ ಅಂದುಕೊಂಡಿಲ್ಲ, ಪ್ರೇಮ ಪತ್ರ ಅಂದ್ಕೊಡಿದ್ದೀನಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಬಹುಕೋಟಿ ವೆಚ್ಚದ BRTS ಬಸ್‌ಗಳಲ್ಲಿ ಇಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ

    ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಜಾರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೋದಿ ಸರ್ಕಾರ ಕಾರ್ಪೋರೇಟ್ ಕುಳಗಳಿಗೆ 10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಬಡವರಿಗೆ 10 ಕೆಜಿ ಅಕ್ಕಿ ಕೊಟ್ರೆ ಪ್ರಳಯವಾಗುತ್ತಾ? ರಾಜ್ಯದಲ್ಲಿ ಬಡವರಿಗೆ 50 ಸಾವಿರ ಕೋಟಿ ಅಷ್ಟೇ ಖರ್ಚಾಗುತ್ತೆ. ಇದು ದೊಡ್ಡದಲ್ಲ. ಬಡವರು, ಮಹಿಳೆಯರಿಗೆ ಕೊಡ್ತಿದ್ದಾರೆ. ಎಲ್ಲಾ ಲೇಖಕರು ಕೂಡಾ ಇದನ್ನು ಬೆಂಬಲಿಸಬೇಕು ಎಂದರು.

  • ಕುಂ.ವೀರಭದ್ರಪ್ಪ ಕಥೆಯಾಧಾರಿತ ‘ಕುಬುಸ’ ಚಿತ್ರಕ್ಕೆ ಯು ಸರ್ಟಿಫಿಕೇಟ್

    ಕುಂ.ವೀರಭದ್ರಪ್ಪ ಕಥೆಯಾಧಾರಿತ ‘ಕುಬುಸ’ ಚಿತ್ರಕ್ಕೆ ಯು ಸರ್ಟಿಫಿಕೇಟ್

    ಕುಂ.ವೀರಭದ್ರಪ್ಪ ‘ಕುಬುಸ’ ಕಥೆ ಆಧಾರಿಸಿ ರಘು ರಾಮಚರಣ್ ಹೂವಿನ ಹಡಗಲಿ ‘ಕುಬುಸ’ ಸಿನಿಮಾ ನಿರ್ದೇಶಿಸಿದ್ದಾರೆ.  ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ಈ ಚಿತ್ರ ಜನವರಿ ಕೊನೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ತಾಯಿ ಮಗನ ಸೆಂಟಿಮೆಂಟ್ ಹೊತ್ತ ಈ ಸಿನಿಮಾ ಸೆನ್ಸಾರ್ ಅಂಗಳದಲ್ಲಿ ಪಾಸ್ ಆಗಿದ್ದು ‘ಯು’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ.  ‘ಕುಬುಸ’ ಆರ್. ಚಂದ್ರು ಶಿಷ್ಯ ರಘು ರಾಮಚರಣ್ ಹೂವಿನ ಹಡಗಲಿ ನಿರ್ದೇಶನದ ಮೊದಲ ಸಿನಿಮಾ. ನಿರ್ದೇಶಕರಾದ ಟಿ.ಎಸ್. ನಾಗಾಭರಣ, ಪ್ರೇಮ್, ಸತ್ಯ ಪ್ರಕಾಶ್ ಸಿನಿಮಾಗಳಲ್ಲೂ ಸಹಾಯಕ ನಿರ್ದೇಶಕನಾಗಿ, ಕಲಾವಿದನಾಗಿ ಗುರುತಿಸಿಕೊಂಡಿರುವ ಇವರು ‘ಕುಬುಸ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

    ಕಲ್ಲು ಒಡೆದು ಹಳ್ಳಿಯಲ್ಲಿ ಜೀವನ ಸಾಗಿಸುವ ತಾಯಿ ತನ್ನ ಮಗನನ್ನು ದೂರದ ಊರಿನಲ್ಲಿ ಓದಿಸುತ್ತಿರುತ್ತಾಳೆ. ಯಾವತ್ತೂ ಬೇರೆ ಊರಿಗೆ ಪಯಣ ಬೆಳೆಸದ, ಬಸ್ಸು ಕೂಡ ಹತ್ತಿರದ ಆಕೆಯನ್ನು ಮಗ ಕೆಲಸ ಸಿಕ್ಕ ಮೇಲೆ ನಗರಕ್ಕೆ ಕರೆದುಕೊಂಡು ಬರುತ್ತಾನೆ. ಮೊದಲಿನಿಂದಲೂ ಕುಬುಸ ಧರಿಸಿ ಅಭ್ಯಾಸವಿರದ ಆಕೆ ಈ ಕಾರಣದಿಂದ ನಗರಕ್ಕೆ ಬಂದಾಗ ಹೇಗೆಲ್ಲ ಜನರಿಂದ ಮುಜುಗರಕ್ಕೆ ಒಳಗಾಗುತ್ತಾಳೆ, ಮುಂದೆ ಏನಾಗುತ್ತೆ ಅನ್ನೋದು ಸಿನಿಮಾದ ಕಹಾನಿ. ತಾಯಿ ಮಗನ ಸೆಂಟಿಮೆಂಟ್ ಇರುವ ಈ ಚಿತ್ರದಲ್ಲಿ ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್. ಎಸ್. ಭಟ್, ರಂಗಭೂಮಿ ಕಲಾವಿದೆ ಹನುಮಕ್ಕ ಮರಿಯಮ್ಮನ ಹಳ್ಳಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟರಾಜ್. ಎಸ್. ಭಟ್ ಚಿತ್ರದಲ್ಲಿ ಎರಡು ಶೇಡ್ ನಲ್ಲಿ ನಟಿಸಿದ್ದು, ಆರ್ಯ ಮೈಸೂರು, ಅನಿಕ ರಮ್ಯ, ಮಹಾಲಕ್ಷ್ಮೀ ಕೂಡ ಚಿತ್ರದ ಲೀಡ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ದೊಡ್ಡ ಪಾತ್ರವೊಂದನ್ನು ಪೋಷಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಹಾಗೂ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಗುಂಡಿ ರಮೇಶ್ ಹಾಗೂ ಪತ್ನಿ ಗುಂಡಿ ಭಾರತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹೊನ್ನಾವರ ಸ್ವಾಮಿ, ಹುಲಿಗಪ್ಪ ಕಟ್ಟೋಮನಿ, ಕನ್ನಡ ಕಲಾ ಸಂಘ ಹೊಸಪೇಟೆ ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ.  ಕಲಾತ್ಮಕ ಸಿನಿಮಾಗಳಿಗಿಂತ ಭಿನ್ನವಾದ ಹೊಸತನ ಒಳಗೊಂಡ ಸಿನಿಮಾ ‘ಕುಬುಸ’. ಚಿತ್ರದಲ್ಲಿ ಮೂಲ ಕಥೆಯಲ್ಲಿರುವಂತೆ ಬಳ್ಳಾರಿ ಭಾಷೆಯ ಸೊಗಡನ್ನು ಕಾಣಬಹುದಾಗಿದೆ. ಮ್ಯೂಸಿಕಲ್ ಸಿನಿಮಾ ಕೂಡ ಆಗಿದ್ದು ಸನ್ನಿವೇಶಕ್ಕೆ ತಕ್ಕ ಹಾಗೆ ನಾಲ್ಕು ಹಾಡುಗಳಿದ್ದು ನಾಲ್ಕು ಬಿಟ್ ಗಳಿವೆ. ಜೋಗಿ ಪ್ರೇಮ್, ವಾಸುಕಿ ವೈಭವ್, ಶೃತಿ.ವಿ.ಎಸ್, ಶಿಲ್ಪ ಮುಡ್ಬಿ, ಪ್ರದೀಪ್ ಚಂದ್ರ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ.

    ಪ್ರದೀಪ್ ಚಂದ್ರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮಾ. ಎ ಕ್ಯಾಮೆರಾ ವರ್ಕ್, ಶಿವಮೂರ್ತಿ ಡೋಣಿಮಲೈ ಸಹ ನಿರ್ದೇಶನ ಚಿತ್ರಕ್ಕಿದೆ. ವಿ. ಶೋಭಾ ಸಿನಿಮಾಸ್ ಬ್ಯಾನರ್ ನಡಿ ವಿ. ಶೋಭಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ ಚಿತ್ರತಂಡ.

    Live Tv
    [brid partner=56869869 player=32851 video=960834 autoplay=true]

  • ಗೌರವಾನ್ವಿತ ಮುಠ್ಠಾಳರನ್ನು ಪಠ್ಯ ಸಮಿತಿಗೆ ನೇಮಕ ಮಾಡಿದ್ದೇ ತಪ್ಪು: ಕುಂ.ವೀರಭದ್ರಪ್ಪ ಆಕ್ರೋಶ

    ಗೌರವಾನ್ವಿತ ಮುಠ್ಠಾಳರನ್ನು ಪಠ್ಯ ಸಮಿತಿಗೆ ನೇಮಕ ಮಾಡಿದ್ದೇ ತಪ್ಪು: ಕುಂ.ವೀರಭದ್ರಪ್ಪ ಆಕ್ರೋಶ

    ರಾಯಚೂರು: ಪರಿಷ್ಕೃತ ಪಠ್ಯದ ಬಗ್ಗೆ ಲೇಖಕ, ಚಿಂತಕ ಕುಂ.ವೀರಭದ್ರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನ ಕೂಡಲೇ ಬಂಧಿಸಬೇಕು, ಶಿಕ್ಷಣ ಸಚಿವ ನಾಗೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಗೌರವಾನ್ವಿತ ಮುಠ್ಠಾಳರನ್ನ ಪಠ್ಯ ಸಮಿತಿಗೆ ನೇಮಕ ಮಾಡಿರುವುದೇ ತಪ್ಪು. ಸರ್ಕಾರದ ಅಧಿಕೃತ ಆದೇಶವಿಲ್ಲದೆ ಟ್ಯೂಟೋರಿಯಲ್ ನಡೆಸುವಂತವರಿಗೆ ಪಠ್ಯ ರಚನೆ‌ ನೀಡಿರುವುದು ಸರಿಯಲ್ಲ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನೇ ತಿರುಚುವಂತ ಹೀನ ವ್ಯಕ್ತಿ ಪಠ್ಯ ರಚನೆ ಮಾಡುವುದು ಸರಿಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಬಗ್ಗೆ ಆಸಕ್ತಿ ಇದ್ದವರು ದೇಶ ಸೇವೆ ಮಾಡಿ ಅಂದ್ರೆ ಇವರಿಗ್ಯಾಕೆ ಇಷ್ಟೊಂದು ಉರಿತಿದೆ:  ಬಿ.ಶ್ರೀರಾಮುಲು

    ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ರೋಹಿತ್ ಚಕ್ರತೀರ್ಥ ಅಪಮಾನ ಮಾಡಿದ್ದಾರೆ. ಬಸವಣ್ಣ ಸೇರಿ ಅನೇಕ ದಾರ್ಶನಿಕರಿಗೆ ಅವಹೇಳನ ಮಾಡಿದ್ದಾರೆ. ಕೂಡಲೇ ರೋಹಿತ್ ಚಕ್ರತೀರ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ʼ777 ಚಾರ್ಲಿʼ ಸಿನಿಮಾದ ನಾಯಿಯ ನಟನೆ ಮೆಚ್ಚಿ ಕಣ್ಣೀರಿಟ್ಟು, ತೆರಿಗೆ ವಿನಾಯಿತಿ ನೀಡಿದ್ದಾರೆ. ಇಷ್ಟೊಂದು ಹೃದಯ ವೈಶಾಲ್ಯತೆ ಮೆರೆಯುವ ಸಿಎಂ ಅವರಿಗೆ ಪರಿಷ್ಕೃತ ಪಠ್ಯ ಪುಸ್ತಕದ ಅವಾಂತರಗಳು‌ ಕಾಣಿಸುತ್ತಿಲ್ಲವೆ? ಕೂಡಲೇ ಶಿಕ್ಷಣ ಸಚಿವ ನಾಗೇಶರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇಲ್ಲಿ ಕೈದಿಗಳನ್ನ ನೋಡಬೇಕಂದ್ರೂ ಜೈಲರ್‌ಗಳಿಗೆ ಲಂಚ ಕೊಡಬೇಕು – ವೀಡಿಯೋ ವೈರಲ್

    Live Tv

  • `ಜೈ ಹಿಂದೂರಾಷ್ಟ್ರ’ ಹೆಸರಿನಲ್ಲಿ ಸಾಹಿತಿ ಕುಂವೀ, ನಟ ಪ್ರಕಾಶ್ ರೈ ಸೇರಿ 16 ಮಂದಿಗೆ ಬೆದರಿಕೆ ಪತ್ರ

    `ಜೈ ಹಿಂದೂರಾಷ್ಟ್ರ’ ಹೆಸರಿನಲ್ಲಿ ಸಾಹಿತಿ ಕುಂವೀ, ನಟ ಪ್ರಕಾಶ್ ರೈ ಸೇರಿ 16 ಮಂದಿಗೆ ಬೆದರಿಕೆ ಪತ್ರ

    ವಿಜಯನಗರ: ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, ನಟ ಪ್ರಕಾಶ್ ರೈ ಸೇರಿದಂತೆ 16 ಮಂದಿಗೆ ಬೆದರಿಕೆ ಪತ್ರ ಬಂದಿರುವುದು ಬೆಳಕಿಗೆ ಬಂದಿದೆ.

    ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರೋ ಸಾಹಿತಿ ಕುಂ. ವೀರಭದ್ರಪ್ಪ ಅವರಿಗೆ 3ನೇ ಬಾರಿಗೆ ಬೆದರಿಕೆ ಪತ್ರ ಬಂದಿದೆ. ಈ ಹಿಂದೆಯೂ ಭದ್ರಾವತಿಯಿಂದ ಮತ್ತು ಚಿತ್ರದುರ್ಗದಿಂದ ಬೆದರಿಕೆ ಪತ್ರ ಬಂದಿತ್ತು. ಇದೀಗ `ಜೈ ಹಿಂದೂರಾಷ್ಟ್ರ, ಸಹಿಷ್ಣು ಹಿಂದೂ’ ಹೆಸರಿನಲ್ಲಿ 3ನೇ ಬೆದರಿಕೆ ಪತ್ರ ಬಂದಿದೆ. ಇದನ್ನೂ ಓದಿ; ಚಿನ್ನ, ಬೆಳ್ಳಿಯಲ್ಲ ಈಗ ನಿಂಬೆಹಣ್ಣಿನ ಮೇಲೆ ಕಳ್ಳರ ಕಣ್ಣು- 12 ಮೂಟೆ ನಿಂಬೆಹಣ್ಣು ಕಳವಾಗಿದ್ದೇಗೆ?

    BLY LETTER

    ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರಿಗೆ ಬೆದರಿಕೆ ಪತ್ರ ಬಂದಿತ್ತು. ಮೊದಲ ಪತ್ರ ಬಂದಾಗ, ವಿಜಯನಗರ ಎಸ್ಪಿ ಡಾ.ಕೆ.ಅರುಣ್ ಅವರನ್ನು ಭೇಟಿಯಾಗಿ ರಕ್ಷಣೆಗಾಗಿ ಸಾಹಿತಿ ಕುಂವಿ ಮನವಿ ಮಾಡಿದ್ದರು. ಇದೀಗ ಮತ್ತೆ ಬೆದರಿಕೆ ಪತ್ರ ಬಂದಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ರಾಜ್ ಠಾಕ್ರೆ ಬೊಗಳುವ ನಾಯಿ – ಪರೋಕ್ಷವಾಗಿ ಅಕ್ಬರುದ್ದೀನ್ ಟಾಂಗ್

    KGF 2 Prakash raj (4)

    `ಮಿಸ್ಟರ್ ಕುಂ. ವೀರಪ್ಪನವರೇ, ನನಗೆ ಪೇಪರ್ ಹುಲಿ ಆಗುವುದಕ್ಕೆ ಇಷ್ಟವಿದ್ದರೇ ಅಥವಾ ಪ್ರಚಾರದ ಗೀಳು ಇದ್ದರೇ, ನಿಮ್ಮ ಮೇಲೆ ನೇರವಾಗಿ ದಾಳಿ ಮಾಡಿ ನಾನೇ ಪೊಲೀಸರಿಗೆ ಸೆರೆಂಡರ್ ಆಗುತ್ತಿದೆ. ಆದರೆ ನನಗೆ ನಿಮ್ಮಥರ ಪೇಪರ್ ಹುಲಿ, ಸಿಂಹ ಇತ್ಯಾದಿ ಆಗುವ ಅವಶ್ಯಕತೆಯಿಲ್ಲ. ಒಬ್ಬಂಟಿಯಾಗಿ ಹೋರಾಟ ಮಾಡುತ್ತಿದ್ದೇನೆ’ ಎಂದೂ ಪತ್ರದಲ್ಲಿ ಎಚ್ಚರಿಸಲಾಗಿದೆ.

  • ಸಿನಿಮಾವಾಗ್ತಿದೆ ಖ್ಯಾತ ಕಥೆಗಾರ ಕುಂವೀ ಕುಬುಸ ಕಥೆ

    ಸಿನಿಮಾವಾಗ್ತಿದೆ ಖ್ಯಾತ ಕಥೆಗಾರ ಕುಂವೀ ಕುಬುಸ ಕಥೆ

    ರಾಮಾ ರಾಮಾ ರೇ ಸಿನಿಮಾ ಖ್ಯಾತಿಯ ನಟರಾಜ್ ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ವಿಶೇಷ ಅಂದರೆ, ಕನ್ನಡದ ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ ಬರೆದ ಕುಬುಸ ಕಥೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಿನಿಮಾ ‘ಕುಬುಸ’ ಹೆಸರಿನಲ್ಲೇ ಮೂಡಿ ಬರಲಿದೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ನಟರಾಜ್ ನಾಯಕನಾಗಿ ಬಣ್ಣ ಹಚ್ಚಿದ್ದು, ಈ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಮೇಶ್ ರೇಣುಕಾ ರಾಮ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಸಿನಿಮಾದ ಫಸ್ಟ್ ಲುಕ್ ನಟರಾಜ್ ಬರ್ತ್ ಡೇಗೆ ರಿಲೀಸ್ ಆಗಿದೆ. ನಟರಾಕ್ಷಸ ಡಾಲಿ ಧನಂಜಯ್ ಫಸ್ಟ್ ಲುಕ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಂದಹಾಗೇ ಕುಬುಸ ಸಿನಿಮಾಗೆ ವಿ ಶೋಭಾ ಶರ್ಮಾ ಬಂಡವಾಳ ಹಾಕಿದ್ದು, ಚೇತನ್ ಶರ್ಮಾ ಕ್ಯಾಮೆರಾ, ಪ್ರವೀಣ್ ಚಂದ್ರ ಮ್ಯೂಸಿಕ್ ಚಿತ್ರಕ್ಕಿದೆ. ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..

    ನಟರಾಜ್.. ಮೂಲತಃ ಚಿಕ್ಕಮಗಳೂರಿನ ಕಡೂರಿನವರಾದ ನಟರಾಜ್ ಕಾನೂನು ಪದವೀದರರು. ಕಾನೂನು ಪದವಿ ಪಡೆದು ವಕೀಲ ವೃತ್ತಿಗಿಂತ ಅವರನ್ನು ಸೆಳೆದಿದ್ದು ಸಿನಿಮಾಲೋಕ. ಹೀಗಾಗಿ ಸಿನಿಮಾ ಕಡೆ ಬಂದ ನಟರಾಜ್ ಹೊಸ ಸಿನಿಮಾಗಳ ಪೋಸ್ಟರ್ ಜೊತೆಗೆ ಮತ್ತೆರೆಡು ಸಿನಿಮಾಗೂ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  • ಕಮಲದಲ್ಲಿ ‘ಮಲ’ವೂ ಇದೆ, ಸಂವಿಧಾನ ವಿರೋಧಿಸಿದ ಬಾಯಿಬುಡಕರು ಸಂಸದರಾಗಿದ್ದಾರೆ – ಕುಂವೀ

    ಕಮಲದಲ್ಲಿ ‘ಮಲ’ವೂ ಇದೆ, ಸಂವಿಧಾನ ವಿರೋಧಿಸಿದ ಬಾಯಿಬುಡಕರು ಸಂಸದರಾಗಿದ್ದಾರೆ – ಕುಂವೀ

    ಚಿತ್ರದುರ್ಗ: ಕಮಲದಲ್ಲಿ ‘ಮಲ’ವೂ ಇದೆ, ಕಮಲವು ಇದೆ ಎಂದು ಚಿತ್ರದುರ್ಗದಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ದೊಡ್ಡ ಮಟ್ಟದಲ್ಲಿ ವಿರೋಧಿಸಿದ ಬಾಯಿಬಡುಕರು ಈಗ ಸಂಸದರಾಗಿದ್ದಾರೆ. ಇದು ಪ್ರಜಾಪ್ರಭುತ್ವದ ವೇಷದಲ್ಲಿ ಸರ್ವಾಧಿಕಾರಿ ಶಕ್ತಿಗಳು ಪ್ರವೇಶ ಮಾಡುತ್ತಿದೆ. ಒಂದಾನೊಂದು ಕಾಲದಲ್ಲಿ ನನಗೆ ಕಮಲದ ಮೇಲೆ ಗೌರವ ಇತ್ತು. ಕಮಲದಲ್ಲಿ ಎರಡು ಪದ ಇದೆ. ಒಂದು ಕಮಲದಲ್ಲಿ ‘ಮಲ’ವೂ ಇದೆ, ಕಮಲವು ಇದೆ ಎಂದು ಹೇಳಿ ವ್ಯಂಗ್ಯವಾಡಿದರು.

    ಈಗ ಮಲಬದ್ಧತೆ ಆದರೆ ದೇಹದ ಆರೋಗ್ಯ ಹಾಳಾಗುತ್ತದೆ. ಹಾಗೆಯೇ ಕಮಲ ಒಂದು ದೇಶಕ್ಕೆ ಅಪಾಯವಾಗಲಿದೆ. ಅಲ್ಲದೆ ಮಲಬದ್ಧತೆಯಿಂದ ದೇಹದ ಆರೋಗ್ಯ ನಾಶವಾಗುತ್ತೋ, ದೇಹದ ಸಮತೋಲನ ಏರುಪೇರಾಗುತ್ತಾದೋ ಹಾಗೆಯೇ ಕಮಲದಿಂದ ಒಂದು ದೇಶದ ಆಡಳಿತ ವ್ಯವಸ್ಥೆ ಹಾಳಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಮ್ಮ ಪ್ರಾದೇಶಿಕ ಭಾಷೆಗಳು ಬಹಳ ಅಭದ್ರ ಸ್ಥಿತಿಯಲ್ಲಿ ಇದೆ. ಇಲ್ಲಿ ಕನ್ನಡ ಇದೆ, ಕರ್ನಾಟಕದಲ್ಲಿ ಅಸ್ಮಿತೆಯನ್ನು ನಾವು ಕಾಪಾಡಬೇಕು. ಆದರೆ ಈ ಪ್ರಾದೇಶಿಕ ಭಾಷೆಗಳ ಅಸ್ಮಿತೆಯನ್ನು ಧಕ್ಕೆ ತರುವಂತಹ ಒಂದು ವಾತಾವರಣವನ್ನು ಹಿಂದಿ ಭಾಷೆಯನ್ನು ಹೇರುವ ಮೂಲಕ ಕೇಂದ್ರ ಸರ್ಕಾರ ನಿರ್ಮಾಣ ಮಾಡುತ್ತಿದೆ ಎಂದು ದೂರಿದರು.

  • ಕುಮಾರಸ್ವಾಮಿ ಮಕ್ಕಳು, ಮೊಮ್ಮಕ್ಕಳು ಮಾತ್ರ ಶಾಸಕರಾಗಬೇಕೇ- ಸಾಹಿತಿ ವೀರಭದ್ರಪ್ಪ ಪ್ರಶ್ನೆ

    ಕುಮಾರಸ್ವಾಮಿ ಮಕ್ಕಳು, ಮೊಮ್ಮಕ್ಕಳು ಮಾತ್ರ ಶಾಸಕರಾಗಬೇಕೇ- ಸಾಹಿತಿ ವೀರಭದ್ರಪ್ಪ ಪ್ರಶ್ನೆ

    ಧಾರವಾಡ: ಕುಟುಂಬ ರಾಜಕಾರಣದ ವಿರುದ್ಧ ಸಾಹಿತಿ ಕುಂ. ವೀರಭದ್ರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಕ್ಕಳು, ಮೊಮ್ಮಕ್ಕಳು ಮಾತ್ರ ಶಾಸಕರು ಆಗಬೇಕಾ? ರಾಜಕಾರಣ, ವಿಧಾನಸಭೆ ಅಂದ್ರೆ ಅವರಪ್ಪನ ಮನೆ ಆಸ್ತಿಯೇ ಎಂದು ಪ್ರಶ್ನೆ ಮಾಡಿದ್ದಾರೆ.

    ನಗರದಲ್ಲಿ ನಡೆದ ‘ಪ್ರತ್ಯೇಕ ರಾಜ್ಯ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನನಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯಿದೆ. ಆದರೆ ಅವರೇ ವಿಧಾನಸೌಧದಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಬೇರೆಯವರಿಗೆ ಸ್ಪರ್ಧಿಸುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ ಅವರು, ಯುವಕರು ಅಧಿಕಾರಕ್ಕೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

    ವಿಧಾನಸೌಧ ಬಿಗ್ ಬಜಾರ್ ಹಾಗೂ ಮಾಲ್ ಹಂತಕ್ಕೆ ತಲುಪಿ, ಶಾಸಕರನ್ನು ಖರೀದಿಸುವ ಮಾರುಕಟ್ಟೆಯಾಗಿದೆ. ಯಾರು ಬೇಕಾದರೂ 20 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣ ನೀಡಿ ಅಧಿಕಾರದ ಗದ್ದುಗೆ ಏರಬಹುದು. ಶಾಸಕರನ್ನು ಬಚ್ಚಿಟ್ಟು ರಾಜಕಾರಣ ಮಾಡಿದರೆ, ರಾಜ್ಯ ಉದ್ದಾರ ಆಗುವುದಿಲ್ಲ. ಬಚ್ಚಿ ಇಡಲು ಶಾಸಕರು ಕುರಿ, ಕೋಳಿ, ನಾಯಿಗಳೇ ಎಂದು ವ್ಯಂಗ್ಯವಾಡಿದರು.

    ಬೆಂಗಳೂರಿನ ಸದಾಶಿವ ನಗರ, ಡಾಲರ್ಸ್ ಕಾಲನಿಗಳಲ್ಲಿ ಉತ್ತರ ಕರ್ನಾಟಕ ಭಾಗದ ಮುಟ್ಟಾಳ ಜನಪ್ರತಿನಿಧಿಗಳೇ ತುಂಬಿದ್ದಾರೆ. ಅವರು ಉತ್ತರ ಕರ್ನಾಟಕ ಅಭಿವೃದ್ಧಿಗೆ ಬರುವ ಅನುದಾನವನ್ನು ಹಂಚಿಕೊಂಡು, ಅಲ್ಲಿ ಹೋಗಿ ಮನೆ ಮಾಡುತ್ತಿದ್ದಾರೆ. ಒಬ್ಬೊಬ್ಬ ಶಾಸಕರಿಗೆ ಕನಿಷ್ಠ ಹತ್ತು ಸೈಟ್‍ಗಳಿವೆ. ಹೀಗೆ ಬಿಟ್ಟರೆ ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ರಾಜಕಾರಣಿಗಳೇ ತುಂಬಿಕೊಳ್ಳುತ್ತಾರೆ. ನಮ್ಮ ಭಾಗದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹೇಳಿದರು.

    ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಅವರ ಕೊರಳ ಪಟ್ಟಿ ಹಿಡಿದು, ಕಪಾಳಕ್ಕೆ ಹೊಡೆಯುವ ಅಧಿಕಾರ ಜನರಿಗೆ ಕೊಡಬೇಕಿದೆ. ರಾಜಕಾರಣಿಗಳು ಇಂದು ನಮಗೆ ದುಸ್ವಪ್ನಗಳಾಗಿ ಕಾಡುತ್ತಿದ್ದಾರೆ. ಅವರ ಕಾಟವಿಲ್ಲದೆ ನೆಮ್ಮದಿಯಿಂದ ಮಲಗಬೇಕಾದರೆ ಒಂದು ಕ್ವಾಟರ್ ಹಾಕಲೇಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನಗೂ ಬೆದರಿಕೆ ಕರೆಗಳು ಬರುತ್ತಿವೆ, ನಾನು ಹೆದರಲ್ಲ: ಕುಂ.ವೀರಭದ್ರಪ್ಪ

    ನನಗೂ ಬೆದರಿಕೆ ಕರೆಗಳು ಬರುತ್ತಿವೆ, ನಾನು ಹೆದರಲ್ಲ: ಕುಂ.ವೀರಭದ್ರಪ್ಪ

    ರಾಯಚೂರು: ನನಗೂ ಬೆದರಿಕೆ ಕರೆಗಳು ಬರುತ್ತಿದ್ದು ಅದಕ್ಕೆ ನಾನು ಹೆದರುವುದಿಲ್ಲ. ಹೆದರಿ ನಾನು ಯಾರನ್ನೂ ರಕ್ಷಣೆ ಕೇಳಿಲ್ಲ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಾನು ಎಂದೂ ನಡೆದುಕೊಳ್ಳುವುದಿಲ್ಲ. ಎಡಪಂಥಿಯ ವಿಚಾರಧಾರೆಯೇ ಗೌರಿ ಲಂಕೇಶ್ ಹತ್ಯೆಗೆ ಕಾರಣ. ಪ್ರಜಾಸತ್ತಾತ್ಮಕ ವ್ಯವಸ್ಥೆ ದುರ್ಬಲಗೊಳಿಸುವ ಮುನ್ಸೂಚನೆಯಿದು ಎಂದು ಹೇಳಿದರು.

    ರಾಜಕಾರಣಿಗಳು, ಸಾಕ್ಷಿ ಮಹಾರಾಜ್ ರಂತ ಸಂತರು ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಹಿಂಸಾತ್ಮಕ ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆ. ಇಂಥ ಕೊಲೆಗಳಿಗೆ ಪ್ರಚೋದಕ ಹೇಳಿಕೆಗಳೆ ಕಾರಣವಾಗುತ್ತಿವೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಬೇಗ ಮುಗಿಯಲಿ. ಒಂದು ಹತ್ಯೆ ಇನ್ನೊಂದು ಹತ್ಯೆಗೆ ದಾರಿ ಮಾಡಿಕೊಡಬಾರದು ಎಂದು ಅವರು ಅಭಿಪ್ರಾಯಪಟ್ಟರು.

    ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಚುನಾವಣೆ ಬಳಿಕವೂ ಮುಂದುವರಿಯುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಗಿಮಿಕ್ ಇಲ್ಲ. ಶೋಷಿತ ಒಕ್ಕೂಟಗಳ ಸಮುದಾಯವೇ ಲಿಂಗಾಯತ ಸಮಾಜ. ವೀರಶೈವ ಹಾಗೂ ಲಿಂಗಾಯತ ಬೇರೆ ಬೇರೆ. ವೀರಶೈವದಲ್ಲಿ ಪಾದ ಪೂಜೆ, ಸತ್ತವರ ತಲೆ ಮೇಲೆ ಕಾಲಿಡುವ ಪದ್ದತಿಗಳಿವೆ. ಇದು ಸ್ಥಾವರದ ಸಂಕೇತ. ವೀರಶೈವ ಸ್ಥಗಿತವಾದ ಧರ್ಮ ಹೀಗಾಗಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗಬೇಕು ಎಂದು ಅವರು ಆಗ್ರಹಿಸಿದರು.

    https://youtu.be/9HkIMBshyw8

    https://www.youtube.com/watch?v=xUHQ0QzTWJo

    https://www.youtube.com/watch?v=5W9fExnZhM4

    https://www.youtube.com/watch?v=9i4m_pe6Ir4

    https://www.youtube.com/watch?v=JatNCXlFzmo

    https://www.youtube.com/watch?v=E-2vEpV_WFE