Tag: ಕುಂದಗೋಳ

  • ದೇವರ ಹೆಸರೇಳಿ ಕೊಟ್ಟ ಪ್ರಸಾದ ಸೇವಿಸಿದ ಮಹಿಳೆಯ ಮಾತೇ ನಿಂತೋಯ್ತು!

    ದೇವರ ಹೆಸರೇಳಿ ಕೊಟ್ಟ ಪ್ರಸಾದ ಸೇವಿಸಿದ ಮಹಿಳೆಯ ಮಾತೇ ನಿಂತೋಯ್ತು!

    ಹುಬ್ಬಳ್ಳಿ: ದೇವರ ಹೆಸರಿನಲ್ಲಿ ಅಪರಿಚಿತನೊಬ್ಬ ನೀಡಿದ ತೀರ್ಥ ಹಾಗೂ ಪ್ರಸಾದ ಸೇವಿಸಿದ ಮಹಿಳೆಯೊಬ್ಬರ (Woman) ಮಾತೇ ನಿಂತುಹೋದ ಘಟನೆ ಕುಂದಗೋಳದ (Kundgol) ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಭಿಕ್ಷುಕನೊಬ್ಬ ಕೊಟ್ಟ ಭಸ್ಮ ಹಾಗೂ ಹಾಲನ್ನು ಸೇವಿಸಿದ ಗ್ರಾಮದ ಮಹಿಳೆ ಮೀನಾಕ್ಷಿ ಎಂಬವರಿಗೆ ಮಾತು ನಿಂತುಹೋಗಿದೆ. ಮನೆ ಬಳಿ ಬಂದಿದ್ದ ಭಿಕ್ಷುಕನಿಗೆ ಮಹಿಳೆ 5 ರೂ. ನೀಡಿದ್ದಾರೆ. ಈ ವೇಳೆ ಆತ ಪ್ರಸಾದ ಹಾಗೂ ತೀರ್ಥ ಎಂದು ಭಸ್ಮ ಮತ್ತು ಹಾಲನ್ನು ನೀಡಿದ್ದಾನೆ. ಇದನ್ನು ಸೇವಿಸಿದ ಬಳಿಕ ಮಹಿಳೆಗೆ ಈ ಸಮಸ್ಯೆ ಉಂಟಾಗಿದೆ. ಇದನ್ನೂ ಓದಿ: ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷಗಿರಿಗೆ ಬ್ರಿಜ್ ಭೂಷಣ್ ಬೆಂಬಲಿತ ಅಭ್ಯರ್ಥಿ ಆಯ್ಕೆ

    ಮಹಿಳೆಯನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಬಳಿಕವೂ ಮಹಿಳೆಗೆ ಮಾತನಾಡಲು ಬರುತ್ತಿಲ್ಲ. ಗ್ರಾಮಸ್ಥರು ಭಿಕ್ಷುಕನ ಹುಡುಕಾಟ ನಡೆಸಿದ್ದಾರೆ.

    ಕುಂದಗೋಳ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಸಂಸದರಿಗೇ ರಕ್ಷಣೆ ಇಲ್ಲ, ಬೇರೆಯವ್ರಿಗೆ ಹೇಗೆ ಎಂದು ಪ್ರಶ್ನಿಸಿದ ನಮ್ಮನ್ನೂ ಅಮಾನತು ಮಾಡಿದ್ರು: ಡಿಕೆ‌ ಸುರೇಶ್

  • ನಿಮ್ಮ ಕಾಲಿಗೆ ಬೀಳ್ತಿನಿ, ಟಿಕೆಟ್ ಕೊಡಿ- ಸಮಾರಂಭದಲ್ಲಿ ಮಂಡಿಯೂರಿ ಮಾಜಿ ಶಾಸಕನ ಅಳಲು

    ನಿಮ್ಮ ಕಾಲಿಗೆ ಬೀಳ್ತಿನಿ, ಟಿಕೆಟ್ ಕೊಡಿ- ಸಮಾರಂಭದಲ್ಲಿ ಮಂಡಿಯೂರಿ ಮಾಜಿ ಶಾಸಕನ ಅಳಲು

    ಹುಬ್ಬಳ್ಳಿ: ಬಿಜೆಪಿ (BJP) ಟಿಕೆಟ್ ಕೈ ತಪ್ಪುವ ಭೀತಿ ಹಿನ್ನೆಲೆಯಲ್ಲಿ ಮಾಜಿ ಶಾಸಕ ಹಾಗೂ ಯಡಿಯೂರಪ್ಪ (B.S.Yediyurappa) ಆಪ್ತ ಎಸ್ ಐ ಚಿಕ್ಕನಗೌಡರ (Chikkanagoudar) ಜನ್ಮ ದಿನದ ಸಮಾರಂಭದಲ್ಲಿ ಗೋಳಾಡಿ ಬಿಕ್ಕಿ ಬಿಕ್ಕಿ ಜನರೆದುರು ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.

    ಈ ಬಾರಿ ಬಿಜೆಪಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದ್ದು, ಜನ್ಮ ದಿನದ ಸಮಾರಂಭದಲ್ಲಿ ಗೋಳಾಡಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. ನನ್ನ ಪರಿಸ್ಥಿತಿ ಸರಿ ಇಲ್ಲ, ಆದರೂ ಇದು ಕಡೆ ಸಲ ಚುನಾವಣೆಗೆ ಸ್ಪರ್ಧಿಸುತ್ತೇನೆ. ನಿಮಗೆ ಕಾಲಿಗೆ ಬೀಳ್ತಿನಿ, ಕೈ ಮುಗಿತೀನಿ ಇದೊಂದು ಸಲ ಟಿಕೆಟ್ ನೀಡಿ ಅಂತ ಬಿಜೆಪಿ ವರಿಷ್ಠರನ್ನು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಇತ್ತೀಚೆಗೆ ಕುಂದಗೋಳದಲ್ಲಿ ನಡೆದ ತಮ್ಮ ಜನ್ಮದಿನದ ಸಮಾರಂಭದಲ್ಲಿ ಗೋಳಾಡಿ ಮತ್ತೆ ಟಿಕೆಟ್ ನೀಡುವಂತೆ ಸಾವಿರಾರು ಜನರ ಮುಂದೆ ವೇದಿಕೆ ಮೇಲೆ ಮಂಡಿಯೂರಿ ನಮಸ್ಕಾರ ಮಾಡಿದ್ದಾರೆ. ಇದನ್ನೂ ಓದಿ: ಬೇನಾಮಿ ಆಸ್ತಿ ಗಳಿಕೆ- ಸುನಿಲ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ಮುತಾಲಿಕ್ ದೂರು

    ಕುಂದಗೋಳ (Kundgol) ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‍ಗಾಗಿ ಇಬ್ಬರ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು, ಮಾಜಿ ಸಿಎಂ ಬಿಎಸ್‍ವೈ ಸಂಬಂಧಿ ಚಿಕ್ಕನಗೌಡರ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆಪ್ತ ಎಮ್.ಆರ್.ಪಾಟೀಲ್ (M.R.Patil) ನಡುವೆ ಟಿಕೆಟ್‍ಗಾಗಿ ತೀವ್ರ ಪೈಪೋಟಿಯಿದೆ. ಟಿಕೆಟ್ ಪಾಟೀಲ್ ಗೆ ಬಹುತೇಕ ಖಚಿತವಾಗಿರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಚಿಕ್ಕನಗೌಡರ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಈ ಹಿಂದೆ ಒಟ್ಟು ಮೂರು ಬಾರಿ ಬಿಜೆಪಿಯಿಂದಲೇ ವಿಧಾನ ಸಭೆಗೆ ಆಯ್ಕೆಯಾಗಿದ್ದ ಚಿಕ್ಕನಗೌಡರ, ಕಳೆದ ಎರಡು ಬಾರಿ ಕಡಿಮೆ ಅಂತರದಿಂದ ಸೋಲು ಕಂಡಿದ್ದರು. ಇದನ್ನೂ ಓದಿ: ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡ್ಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗ್ಲಿ: ಸಿಎಂ

  • ನಕಲಿ ವೈದ್ಯರ ಹಾವಳಿ- ಕ್ಲಿನಿಕ್ ಸೀಜ್ ಮಾಡಿದ ತಹಶೀಲ್ದಾರ್

    ನಕಲಿ ವೈದ್ಯರ ಹಾವಳಿ- ಕ್ಲಿನಿಕ್ ಸೀಜ್ ಮಾಡಿದ ತಹಶೀಲ್ದಾರ್

    ಹುಬ್ಬಳ್ಳಿ: ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಈ ಅಕ್ರಮಕ್ಕೆ ಬ್ರೇಕ್ ಹಾಕಲು ಮುಂದಾದ ಅಧಿಕಾರಿಗಳು ಕ್ಲಿನಿಕ್ ಒಂದನ್ನು ಸೀಜ್ ಮಾಡಿದ್ದಾರೆ.

    ಕುಂದಗೋಳ ತಾಲೂಕಿನಾದ್ಯಂತ ನಕಲಿ ವೈದ್ಯರ ಕ್ಲಿನಿಕ್‍ಗಳ ಮೇಲೆ ತಹಶೀಲ್ದಾರ್ ಹಾಗೂ ಇನ್ಸ್‌ಪೆಕ್ಟರ್ ದಾಳಿ ನಡೆಸಿದ್ದಾರೆ. ಕುಂದಗೋಳದ ಹಲವು ಗ್ರಾಮಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತಹಶೀಲ್ದಾರ್ ಬಸವರಾಜ ಮೆಳವಂಕಿ ಹಾಗೂ ಕುಂದಗೋಳ ಇನ್ಸ್‌ಪೆಕ್ಟರ್ ನವೀನ್ ಜಕ್ಕಲಿ ನೇತೃತ್ವದಲ್ಲಿ ದಾಳಿ ಮಾಡಲಾಯಿತು.

    ಈ ವೇಳೆ ವೈದ್ಯನೆಂದು ಹೇಳಿಕೊಂಡು ಕ್ಲಿನಿಕ್ ನಡೆಸುತ್ತಿದ್ದ ಅಬ್ದುಲ್ ನಜೀಮ್ ಮುಲ್ಲಾ ಎಂಬಾತನ ಕ್ಲಿನಿಕ್ ಅನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ದಾಳಿ ನಡೆಸಿದಾಗ ನಜೀಮ್ ಮುಲ್ಲಾ ನಕಲಿ ವೈದ್ಯ ಎಂದು ಪತ್ತೆಯಾಗಿದ್ದು, ಆತನ ಬಳಿ ಯಾವುದೇ ವೈದ್ಯಕೀಯ ದಾಖಲೆಗಳಿಲ್ಲ ಹಾಗೂ ಕ್ಲಿನಿಕ್‍ಗೆ ಸಂಬಂಧಿಸಿದಂತೆಯೂ ಯಾವುದೇ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ.

  • ಕಾಂಗ್ರೆಸ್‍ನಲ್ಲಿ ಏಕೆ ಇರ್ತೀರಿ, ಬಿಜೆಪಿಗೆ ಬಂದ್ಬಿಡಿ ಬ್ರದರ್-ಡಿಕೆಶಿಗೆ ಆಫರ್!

    ಕಾಂಗ್ರೆಸ್‍ನಲ್ಲಿ ಏಕೆ ಇರ್ತೀರಿ, ಬಿಜೆಪಿಗೆ ಬಂದ್ಬಿಡಿ ಬ್ರದರ್-ಡಿಕೆಶಿಗೆ ಆಫರ್!

    ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಕರೆಯಿಸಿಕೊಂಡಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ನಾಯಕರಿಂದ ಆಫರ್ ಬಂದಿತ್ತು ಎಂಬ ಮಾಹಿತಿ ಲಭಿಸಿದೆ.

    `ನೀವು ಕಾಂಗ್ರೆಸ್‍ನಲ್ಲಿ ಏಕೆ ಇರ್ತೀರಿ.. ಬಿಜೆಪಿಗೆ ಬಂದ್ಬಿಡಿ ಬ್ರದರ್’ ಎಂದು ಬಿಜೆಪಿ ಪಕ್ಷದ ಪ್ರಭಾವಿ ಶಾಸಕರೆ ಡಿಕೆ ಶಿವಕುಮಾರ್ ಅವರಿಗೆ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಆಫರ್ ಗೆ ಡಿಕೆ ಶಿವಕುಮಾರ್ ಅವರು ಒಪ್ಪಿಗೆ ನೀಡಿಲ್ಲ ಎಂಬ ಮಾಹಿತಿಯೂ ಲಭಿಸಿದೆ.

    ಕುಂದಗೋಳ ಉಪಚುನಾವಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಹೊರಟ ಡಿಕೆ ಶಿವಕುಮಾರ್ ಅವರಿಗೆ ಆಫರ್ ನೀಡಲಾಗಿತ್ತು. ಈ ಬಗ್ಗೆ ಡಿಕೆ ಶಿವಕುಮಾರ್ ಅವರೇ ಮಾತನಾಡಿದ್ದು, ಕುಂದಗೋಳ ಚುನಾವಣೆಯಲ್ಲಿ ಗೆಲ್ಲಲು ಏನ್ ಮಾಡ್ಬೇಕೋ ಅದನ್ನೆಲ್ಲಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮಾಡಿದ್ದಾರೆ. ಕ್ಷೇತ್ರದಲ್ಲಿ 30 ಸಾವಿರ ಮತಗಳ ಅಂತರದಲ್ಲಿ ನಾವೇ ಗೆಲ್ಲುತ್ತೇವೆ ಎಂದಿದ್ದರು. ಅಲ್ಲದೇ ನೀವು ಬಿಜೆಪಿಗೆ ಬಂದು ಬಿಡಿ ಎಂದು ಹೇಳಿದ್ದರು ಎಂದು ಹುಬ್ಬಳ್ಳಿ ಸಭೆಯಲ್ಲಿ ಹೇಳಿದ್ದಾರೆ.

    ಬಿಜೆಪಿ ಆಫರ್ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್ ಅವರು, ನಾನು ಆ ಬಿಜೆಪಿ ಶಾಸಕರ ಹೆಸರು ಹೇಳಲ್ಲ. ಬಿಜೆಪಿಯವರು ಎಷ್ಟು ರಾಜಕೀಯ ಮಾಡುತ್ತಾರೆ ಅದಕ್ಕಿಂತ ಎರಡು ಪಟ್ಟು ರಾಜಕಾರಣವನ್ನು ನಾವು ಮಾಡುತ್ತೇವೆ ಎಂದರು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು. ಅಲ್ಲದೇ ಉಪಚುನಾವಣೆಯಲ್ಲಿ ಕುಂದಗೋಳದ ಜನರು ಸರಿಯಾದ ಉತ್ತರ ನೀಡಿದ್ದೀರಿ. ಡಿಕೆಶಿ ಯಾರಿಗೂ ಹೆದರುವ ಮಗ ಅಲ್ಲಾ.. ಹೆದುರಿಸೋ ಮಗಾ… ಎಂದು ಎದುರಾಳಿಗಳಿಗೆ ಎಚ್ಚರಿಕೆ ಕೊಟ್ಟಿದ್ದೀರಿ ಎಂದು ಹೇಳಿದರು.

    ಡಿಕೆಶಿ ಕಣ್ಣೀರು: ಇದೇ ವೇಳೆ ಶಿವಳ್ಳಿ ಅವರನ್ನು ನೆನೆದ ಸಚಿವರು, ನಾನು ಎಂದೂ ಕಣ್ಣೀರು ಹಾಕಿಲ್ಲ. ಆದರೆ ಅಂದು ಸ್ನೇಹಿತ, ಆಪ್ತಮಿತ್ರನನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದೆ. ಈ ಬಗ್ಗೆ ಬಿಜೆಪಿ ಅವರು ಏನೆಲ್ಲಾ ಟೀಕೆ ಮಾಡಿದರು ಎಂಬುವುದರ ಬಗ್ಗೆ ಅರಿವಿದೆ ಎಂದು ಭಾವುಕರಾದರು. ಅಲ್ಲದೇ ಈ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಇಲ್ಲೇ ಪಕ್ಷದ ಕಚೇರಿಯನ್ನು ತೆರೆದು ಜನರಿಗೆ ಸ್ಪಂಧಿಸುತ್ತೇನೆ. ನಿಮ್ಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕಮಿಷನ್ ಪಡೀತಿರಾ? ಡಿಕೆಶಿ ಪ್ರಶ್ನೆಗೆ ಹೌದು ಎಂದ ಅಧಿಕಾರಿ

    ಕಮಿಷನ್ ಪಡೀತಿರಾ? ಡಿಕೆಶಿ ಪ್ರಶ್ನೆಗೆ ಹೌದು ಎಂದ ಅಧಿಕಾರಿ

    – ಸಿ.ಎಸ್.ಶಿವಳ್ಳಿ, ಅವ್ರ ಪತ್ನಿ ಹಸು ಇದ್ದಂಗೆ, ನಾನು ಹಾಗಲ್ಲ
    – ಅಧಿಕಾರಿಗಳಿಗೆ ಸಚಿವರಿಂದ ಕ್ಲಾಸ್

    ಹುಬ್ಬಳ್ಳಿ: ಕಮಿಷನ್ ಪಡೀತಿರಾ ಎಂಬ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರಶ್ನೆಗೆ ಅಧಿಕಾರಿಯೊಬ್ಬರು ಹೌದು ಎಂದು ಉತ್ತರಿಸಿದ ಪ್ರಸಂಗ ಇಂದು ಕುಂದಗೊಳದಲ್ಲಿ ನಡೆಯಿತು.

    ಕುಂದಗೋಳ ತಾಲೂಕಿನ ಸವಾಯಿ ಗಂಧರ್ವ ಭವನದಲ್ಲಿ ಇಂದು ಸಚಿವರು ಹಲವು ಇಲಾಖೆಗಳ ಅಧಿಕಾರಗಳ ಜೊತೆಗೆ ಸಭೆ ನಡೆಸಿದರು. ಈ ವೇಳೆ ಸೂಕ್ತ ಮಾಹಿತಿ ನೀಡದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.

    ವಿವಿಧ ಯೋಜನೆಗಳ ಅಡಿ ಸರ್ಕಾರದಿಂದ ಬಡವರಿಗೆ ಮನೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಮನೆ ನಿರ್ಮಾಣ ಮಾಡಿಕೊಡಲು ಅಧಿಕಾರಿಗಳು ಎಷ್ಟು ಕಮಿಷನ್ ಪಡೆಯುತ್ತಾರಾ ಎಂದು ಸಚಿವರು ಕುಂದಗೊಳ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮೇಟಿ ಅವರಿಗೆ ಪ್ರಶ್ನಿಸಿದರು. ಈ ವೇಳೆ ಅಧಿಕಾರಿ ಮೇಟಿ ಅವರು ಹೌದು ಎಂದು ಉತ್ತರಿಸಿದರು. ನೋಡಿ ನೀವು ಎಷ್ಟು ಹಣ ಪಡೆಯುತ್ತಿರಾ ಎಂಬ ಎಲ್ಲ ರೀತಿಯ ಮಾಹಿತಿಯೂ ನನ್ನ ಬಳಿಯಿದೆ. ಆಡಿಯೋ ಇದೆ, ಪ್ಲೇ ಮಾಡ್ಲಾ ಎಂದು ಸಚಿವರು ಕ್ಲಾಸ್ ತೆಗೆದುಕೊಂಡರು.

    ಜಿಲ್ಲಾ ಪ್ರಗತಿ ಬಗ್ಗೆ ವರದಿ ನೀಡುತ್ತಿದ್ದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೊರವರ್ ಅವರನ್ನು ತಡೆದ ಡಿ.ಕೆ.ಶಿವಕುಮಾರ್ ಅವರು, ನೋಡಪ್ಪಾ ನೀನು ಜಿಲ್ಲಾ ಮಟ್ಟದ ಅಧಿಕಾರಿ ಆಗಿರುವುದಕ್ಕೆ ನಾಲಾಯಕ್. ನಾನು ಇಲ್ಲಿಗೆ ಹೊಸಬ. ಹೀಗಾಗಿ ಎಷ್ಟು ಪಂಚಾಯತ್‍ಗಳಿವೆ. ಯೋಜನೆ ಯಾವುದು ಎಂಬ ಮಾಹಿತಿ ವರದಿ ವಾಚನ ಮಾಡಬೇಕು. ಅದನ್ನು ಬಿಟ್ಟು ಏಕಾಏಕಿ ಯೋಜನೆಗೆ ಖರ್ಚು ಮಾಡಿದ ಹಣದ ಮಾಹಿತಿ ನೀಡುವುದಲ್ಲ ಎಂದು ಗುಡುಗಿದರು.

    ಮಾಜಿ ಸಚಿವ ಸಿ.ಎಸ್.ಶಿವಳ್ಳಿ ಮತ್ತು ಶಾಸಕಿ ಕುಸುಮಾ ಶಿವಳ್ಳಿ ಅವರು ಹಸು ಇದ್ದಂಗೆ. ಆದರೆ ನಾನು ಹಾಗಲ್ಲ. ನನಗೆ ಎಲ್ಲ ರೀತಿ ಲೆಕ್ಕ ನೀಡಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಅಧಿಕಾರಿಗಳು ಸರಿಯಾದ ಮಾಹಿತಿ ಇಟ್ಟುಕೊಂಡು ಮಾತನಾಡಬೇಕು. ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿಯೇ ಸಚಿವನಾಗಿದ್ದೇನೆ. ಎಲ್ಲಾ ಇಲಾಖೆ ಬಗ್ಗೆ ಗೊತ್ತು. ನೀವು ನೀಡುವ ಮಾಹಿತಿ ಕೊರತೆ ಇರಬಾರದು. ಅಧಿಕಾರಿಗಳು ಫಲಾನುಭವಿಗಳ ಅಂಕಿ ಸಂಖ್ಯೆ ಸಹಿತ ಮಾಹಿತಿ ಕೊಡಬೇಕು. ನಾನು ಇಲ್ಲಿ ಹಾರ ತುರಾಯಿ ಹಾರಿಸಿಕೊಂಡು ಜೈಕಾರ ಹಾಕಿಸಿಕೊಂಡು ಊಟ ಮಾಡಿ ಹೋಗುವುದಕ್ಕೆ ಬಂದಿಲ್ಲ. ಎಚ್ಚರಿಕೆಯಿಂದ ಮಾಹಿತಿ ಕೊಡಿ. ಮಾಧ್ಯಮದವರಿದ್ದಾರೆ ಎಂದು ಸಭೆ ಆರಂಭಕ್ಕೂ ಮುನ್ನವೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

    ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರಾದ ಯುಟಿ ಖಾದರ್, ಎಂಟಿಬಿ ನಾಗರಾಜ, ಜಯಮಾಲಾ, ಶಾಸಕಿ ಕುಸುಮಾ ಶಿವಳ್ಳಿ ಉಪಸ್ಥಿತರಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕುಂದಗೋಳದಲ್ಲಿ ಶೇ.82.42, ಚಿಂಚೋಳಿಯಲ್ಲಿ ಶೇ.70.75 ಮತದಾನ

    ಕುಂದಗೋಳದಲ್ಲಿ ಶೇ.82.42, ಚಿಂಚೋಳಿಯಲ್ಲಿ ಶೇ.70.75 ಮತದಾನ

    ಕುಂದಗೋಳ/ಚಿಂಚೋಳಿ: ಕರ್ನಾಟಕದಲ್ಲಿ ಜಿದ್ದಾಜಿದ್ದಿನ ಕಣಗಳಾಗಿದ್ದ ಕುಂದಗೋಳ ಮತ್ತು ಚಿಂಚೋಳಿಯಲ್ಲಿ ಮತದಾನ ಅಂತ್ಯವಾಗಿದೆ. ಕುಂದಗೋಳದಲ್ಲಿ ಶೇ.82.42 ಮತ್ತು ಚಿಂಚೋಳಿಯಲ್ಲಿ ಶೇ.70.75 ರಷ್ಟು ಮತದಾನವಾಗಿದೆ.

    ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,56,128 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮಾಜಿ ಸಚಿವ ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್‍ನಿಂದ ಕುಸುಮಾ ಶಿವಳ್ಳಿ, ಬಿಜೆಪಿಯಿಂದ ಎಸ್.ಐ.ಚಿಕ್ಕನಗೌಡರ ಸೇರಿದಂತೆ 8 ಜನ ಸ್ಪರ್ಧೆಯಲ್ಲಿದ್ದಾರೆ. 2018ರ ಚುನಾವಣೆಯಲ್ಲಿ ಶೇ.79.9ರಷ್ಟು ಮತದಾನವಾಗಿತ್ತು.  ಇದನ್ನೂ ಓದಿ: ಕುಂದಗೋಳ ಉಪ ಕದನ: ಕೈ, ಕಮಲ ಅಭ್ಯರ್ಥಿಗಳ ಪ್ಲಸ್, ಮೈನಸ್ ಏನು? 2018 ಫಲಿತಾಂಶ ಏನಿತ್ತು?

    ಮತದಾರರು (2018ರ ಪ್ರಕಾರ)
    ಒಟ್ಟು ಮತದಾರರು: 1,84,730
    ಪುರುಷ ಮತದಾರರು: 95,628
    ಮಹಿಳಾ ಮತದಾರರು: 89,102

    ಇತ್ತ ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಮತದಾನ ನಡೆದಿದ್ದು, ಶೇ70.75ರಷ್ಟು ಜನ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಕಣದಲ್ಲಿ ಒಟ್ಟು 17 ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್‍ನಿಂದ ಸುಭಾಷ್ ರಾಠೋಡ್ ಮತ್ತು ಬಿಜೆಪಿಯಿಂದ ಅವಿನಾಶ್ ಜಾಧವ್ ಕಣದಲ್ಲಿದ್ದಾರೆ. 2018ರ ಚುನಾವಣೆಯಲ್ಲಿ ಶೇ.69.6ರಷ್ಟು ಮತದಾನವಾಗಿತ್ತು. ಇದನ್ನೂ ಓದಿ:  ಚಿಂಚೋಳಿ ಉಪಕದನ: ಕೈ, ಬಿಜೆಪಿ ಅಭ್ಯರ್ಥಿಗಳು ಪ್ಲಸ್, ಮೈನಸ್ ಏನು? 2018ರ ಫಲಿತಾಂಶ ಏನಾಗಿತ್ತು?


    ಮತದಾರರು (2018ರ ಪ್ರಕಾರ)
    ಒಟ್ಟು ಮತದಾರರು: 1,90,976
    ಪುರುಷ ಮತದಾರರು: 97,243
    ಮಹಿಳಾ ಮತದಾರರು: 93,718

  • ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ ಪೂಜೆ ಮಾಡಿದ ಬಿಜೆಪಿ ಕಾರ್ಯಕರ್ತರು!

    ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ ಪೂಜೆ ಮಾಡಿದ ಬಿಜೆಪಿ ಕಾರ್ಯಕರ್ತರು!

    ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಬಿಜೆಪಿ ಕಾರ್ಯಕರ್ತರು ಮತಗಟ್ಟೆಗೆ ಪೂಜೆ ಸಲ್ಲಿಸಿದ್ದಾರೆ.

    ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಪರವಾಗಿ ಪೂಜೆ ಸಲ್ಲಿಸಿದ್ದಾರೆ. ಅದರಗುಂಚಿ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 65ಕ್ಕೆ ಪೂಜೆ ಮಾಡಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಆಶಿಸಿದ್ದಾರೆ. ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ, ತೋರಣದ ರೀತಿಯಲ್ಲಿ ಹೂವಿನ ಮಾಲೆ ಹಾಕಿ, ಬಳಿಕ ಹೊಸಲಿನ ಬಳಿ ತೆಂಗಿನಕಾಯಿ ಒಡೆದು ಪೂಜೆ ಮಾಡಲಾಗಿದೆ. ಅಲ್ಲದೆ ಮತಗಟ್ಟೆಯಲ್ಲಿದ್ದ ಮತ ಯಂತ್ರಕ್ಕೂ ಕೂಡ ಆರತಿ ಬೆಳಗಿ ಕಾರ್ಯಕರ್ತರು ಪೂಜೆ ಮಾಡಿದ್ದಾರೆ.

    ಇಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಚುನಾವಣೆ ಜೊತೆಗೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತದಾನ ನಡೆಯುತ್ತಿದೆ. ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ, ಉಮೇಶ್ ಜಾಧವ್ ರಾಜೀನಾಮೆಯಿಂದ ಖಾಲಿಯಾದ ಚಿಂಚೋಳಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ ಸೇರಿದಂತೆ 8 ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಸೂಕ್ಷ್ಮ 33 ಹಾಗೂ ಅತಿ ಸೂಕ್ಷ್ಮ 38 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ.

    ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಸೇರಿದಂತೆ ಒಟ್ಟು 17 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 241 ಮತಗಟ್ಟೆಗಳಿದ್ದು, ಅವುಗಳಲ್ಲಿ 60 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 181 ಸಾಮಾನ್ಯ ಮತಗಟ್ಟೆಗಳಿವೆ.

  • ಉಪ ಕದನ ಫೈಟ್- ಚಿಂಚೋಳಿ, ಕುಂದಗೋಳದಲ್ಲಿ ಮತದಾನ

    ಉಪ ಕದನ ಫೈಟ್- ಚಿಂಚೋಳಿ, ಕುಂದಗೋಳದಲ್ಲಿ ಮತದಾನ

    ಹುಬ್ಬಳ್ಳಿ/ ಕಲಬುರಗಿ: ಭಾನುವಾರ ಲೋಕಸಭೆ ಅಂತಿಮ ಹಂತದ ಚುನಾವಣೆ ಜೊತೆಗೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ, ಉಮೇಶ್ ಜಾಧವ್ ರಾಜೀನಾಮೆಯಿಂದ ಖಾಲಿಯಾದ ಚಿಂಚೋಳಿ ಕ್ಷೇತ್ರಕ್ಕೆ ಭಾನುವಾರ ಮತದಾನ ನಡೆಯಲಿದೆ.

    ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ ಸೇರಿದಂತೆ 8 ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಸೂಕ್ಷ್ಮ 33 ಹಾಗೂ ಅತಿ ಸೂಕ್ಷ್ಮ 38 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. ಇದನ್ನೂ ಓದಿ: ಕುಂದಗೋಳ ಉಪ ಕದನ: ಕೈ, ಕಮಲ ಅಭ್ಯರ್ಥಿಗಳ ಪ್ಲಸ್, ಮೈನಸ್ ಏನು? 2018 ಫಲಿತಾಂಶ ಏನಿತ್ತು?

    ಕುಂದಗೋಳ ಕ್ಷೇತ್ರದಲ್ಲಿ ಒಟ್ಟು 1,89,437 ಮತದಾರರಿದ್ದು, ಅದರಲ್ಲಿ ಪುರುಷರು, 97,526, ಮಹಿಳೆಯರು 9,1907 ಹಾಗೂ 4 ಮಂದಿ ತೃತೀಯ ಲಿಂಗಿಗಳಿದ್ದಾರೆ. ಕ್ಷೇತ್ರದಲ್ಲಿ 2 ಸಖಿ ಮತಗಟ್ಟೆಗಳನ್ನು ಮಾಡಲಾಗಿದೆ. ಚುನಾವಣೆಗೆ 54 ಸೂಕ್ಷ್ಮ ವೀಕ್ಷಕಕರು, 18 ಸೆಕ್ಟೆರ್ ಅಧಿಕಾರಿಗಳು ಸೇರಿದಂತೆ 1,113 ಸಿಬ್ಬಂದಿಯನ್ನು ಜಿಲ್ಲಾಡಳಿತ ಮತದಾನಕ್ಕೆ ನಿಯೋಜನೆ ಮಾಡಿದೆ. ಹೆಚ್ಚುವರಿಯಾಗಿ 44 ಇವಿಎಂ ಹಾಗೂ 157 ವಿವಿಪ್ಯಾಟ್ ಬಳಕೆ ಮಾಡಲಾಗುತ್ತಿದೆ.

    ಈ ಕ್ಷೇತ್ರದ 2,487 ವಿಕಲಚೇತನ ಮತದಾರರಿಗೆ, 134 ವಾಹನಗಳ ವ್ಯವಸ್ಥೆ ಮಾಡಲಾಗಿದೆ. 259 ಮಂದಿ ಸೇವಾ ಮತದಾರರು ಕೆಲಸ ಮಾಡಲಿದ್ದಾರೆ. ಮೇ 17 ರಿಂದ ಮೇ 20ರ ಸಂಜೆ 6 ಗಂಟೆವರೆಗೂ ಡ್ರೈ ಡೇ ಘೋಷಣೆ ಮಾಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚುನಾವಣಾ ಹಿನ್ನೆಲೆಯಲ್ಲಿ ಭದ್ರತೆಗಾಗಿ ಡಿವೈಎಸ್‍ಪಿ 2, ಸಿಪಿಐ 6, ಪಿಎಸ್‍ಐ 17, ಎಎಸ್‍ಐ 41, ಎಚ್‍ಸಿ 114, ಪಿಸಿ 144, ಹೋಮಗಾರ್ಡ್ 260 ಹಾಗೂ 272 ಅರೆಸೇನಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

    ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಸೇರಿದಂತೆ ಒಟ್ಟು 17 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಒಟ್ಟು 241 ಮತಗಟ್ಟೆಗಳಿದ್ದು, ಅವುಗಳಲ್ಲಿ 60 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 181 ಸಾಮಾನ್ಯ ಮತಗಟ್ಟೆಗಳಿವೆ. ಇದನ್ನೂ ಓದಿ:  ಚಿಂಚೋಳಿ ಉಪಕದನ: ಕೈ, ಬಿಜೆಪಿ ಅಭ್ಯರ್ಥಿಗಳು ಪ್ಲಸ್, ಮೈನಸ್ ಏನು? 2018ರ ಫಲಿತಾಂಶ ಏನಾಗಿತ್ತು?

    ಚಿಂಚೋಳಿ ಕ್ಷೇತ್ರದಲ್ಲಿ ಒಟ್ಟು 1,93,782 ಮತದಾರರಿದ್ದು, ಅವರಲ್ಲಿ ಪುರುಷರು 98,994 ಹಾಗೂ ಮಹಿಳೆಯರು 94,772 ಇದ್ದಾರೆ. ಚುನಾವಣೆಗೆ ಜಿಲ್ಲಾಡಳಿತವು ಒಟ್ಟು 1,112 ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ. ಚುನಾವಣಾ ಹಿನ್ನೆಲೆಯಲ್ಲಿ ಭದ್ರತೆಗಾಗಿ ಡಿವೈಎಸ್‍ಪಿ 1, ಡಿಎಸ್‍ಪಿ 3, ಸಿಪಿಐ 12, ಪಿಎಸ್‍ಐ 18, ಎಎಸ್‍ಐ 44, ಕೆಎಸ್‍ಆರ್ ಪಿ 2 ತಂಡ, ಡಿಆರ್ 12 ತಂಡ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಬಿಎಸ್‍ಎಫ್‍ನ ನಾಲ್ಕು ತುಕಡಿ ಭದ್ರತೆ ನಿಯೋಜನೆಗೊಂಡಿದೆ.

  • ನನ್ನಿಂದ್ಲೇ ಪ್ರೇರಣೆ ಪಡೆದು ಮೈತ್ರಿ ನಾಯಕರು ಅಳ್ತಿದ್ದಾರೆ- ನಟಿ ಶೃತಿ

    ನನ್ನಿಂದ್ಲೇ ಪ್ರೇರಣೆ ಪಡೆದು ಮೈತ್ರಿ ನಾಯಕರು ಅಳ್ತಿದ್ದಾರೆ- ನಟಿ ಶೃತಿ

    ಹುಬ್ಬಳ್ಳಿ: ನನ್ನಿಂದಲೇ ಪ್ರೇರಣೆಗೊಂದು ಇಂದು ಅನೇಕರು ಅಳುತ್ತಿದ್ದಾರೆ ಎಂದು ಮೈತ್ರಿ ಸರ್ಕಾರದ ವಿರುದ್ಧ ನಟಿ ಶೃತಿ ಕಿಡಿಕಾರಿದ್ದಾರೆ.

    ಕುಂದಗೋಳ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಅತ್ತು ಅತ್ತು ಹೆಸರು ಮಾಡಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನನ್ನಿಂದಲೇ ಪ್ರೇರಣೆ ಪಡೆದು ಇಂದು ಅನೇಕರು ಅಳುತ್ತಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಲೇವಡಿ ಮಾಡಿದ್ದಾರೆ.

    ನಾನು ಅತ್ತು ಅಭಿಮಾನಿಗಳನ್ನು ಮಾಡಿಕೊಂಡಿದ್ದೇನೆ ಎಂದು ಜನ ಅಂದಿದ್ದಕ್ಕಾಗಿಯೇ ಜೆಡಿಎಸ್ ಕಾಂಗ್ರೆಸ್ ನಲ್ಲಿ ಬಹಳ ಜನ ಇಂದು ಅಳುತ್ತಿದ್ದಾರೆ. ಆದರೆ ನಮಗೆ ಅಳುವ ನಾಯಕರು ಬೇಕಾಗಿಲ್ಲ. ಕಣ್ಣೀರು ಒರೆಸುವ ನಾಯಕರು ಬೇಕಾಗಿದ್ದಾರೆ ಎಂದು ಹೇಳುವ ಮೂಲಕ ಸಿಎಂಗೆ ಟಾಂಗ್ ನೀಡಿದರು.

    ಸರ್ಕಾರದ ವಿರುದ್ಧ ಬಿಎಸ್‍ವೈ ಕಿಡಿ:
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಕುಂದಗೋಳ, ಚಿಂಚೊಳಿ ಗೆದ್ದರೆ ನಾವು 106 ಆಗ್ತೀವಿ. ಇಬ್ಬರು ಪಕ್ಷೇತರರು ನಮ್ಮ ಜೊತೆಗೆ ಇದ್ದಾರೆ. ಇನ್ನೂ ಎರಡ್ಮೂರು ಜನ ಬಂದರೆ ಮುಂದೆ ನಮ್ಮದೇ ಸರ್ಕಾರ ಬರುತ್ತದೆ ಎಂದು ಹೇಳಿದ್ದಾರೆ.

    ಕುಮಾರಸ್ವಾಮಿ ಮತ್ತು ಅವರ ಕಂಪನಿಯನ್ನು ಮನೆಗೆ ಕಳುಹಿಸಬೇಕಿದೆ. 166 ತಾಲೂಕಿನಲ್ಲಿ ಭೀಕರ ಬರಗಾಲ ಇದೆ. ಆದರೂ ಸಚಿವ, ಮುಖ್ಯಮಂತ್ರಿ ಬರಗಾಲ ಪ್ರದೇಶಕ್ಕೆ ಹೋಗಿಲ್ಲ. ಅದಕ್ಕಾಗಿಯೇ ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಆರು ಸಾವಿರ ಕೊಡುವ ಯೋಜನೆ ಮೋದಿ ಮಾಡಿದ್ದಾರೆ. ಹೆಣ್ಣುಮಕ್ಕಳು ಹುಟ್ಟಿದರೆ ಕಣ್ಣೀರು ಹಾಕುವ ಕಾಲ ಇತ್ತು. ಅದರೆ ನಾನು ಭಾಗ್ಯಲಕ್ಷ್ಮಿ ಯೋಜನೆ ಕೊಟ್ಟ ಬಳಿಕ ಹೆಣ್ಣು ಮಕ್ಕಳ ನೋಡುವ ದೃಷ್ಟಿ ಬದಲಾಯಿತು. ಆದರೆ ಕುಮಾರಸ್ವಾಮಿ ಆ ಯೋಜನೆ ಚಿವುಟಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕಂಪನಿ ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡದೇ ಹೋದರೆ, ಅಧಿವೇಶನ ಆರಂಭವಾದಾಗ ಕುಮಾರಸ್ವಾಮಿ ಮೂಗು ಹಿಡಿದು ಕೇಳುತ್ತೇನೆ. ಸಾಲ ಮನ್ನಾ ಮಾಡು ಇಲ್ಲವೇ ಅಧಿಕಾರ ಬಿಟ್ಟು ತೊಲಗು ಎಂದು ಹೇಳುತ್ತೇನೆ. ರೈತರ ಸಾಲಮನ್ನಾ ಆಗುವವರೆಗೂ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

  • ಚಿಂಚೋಳಿ, ಕುಂದಗೋಳದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

    ಚಿಂಚೋಳಿ, ಕುಂದಗೋಳದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

    – ಮತದಾರರನ್ನು ಸೆಳೆಯಲು ಕೊನೆ ಕಸರತ್ತು

    ಕಲಬುರಗಿ, ಧಾರವಾಡ: ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಯ ಬಹಿರಂಗ ಪ್ರಚಾರ ಇಂದು ಕೊನೆಯ ದಿನ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಪಕ್ಷದ ನಾಯಕರು ಅಬ್ಬರಿಸಲಿದ್ದಾರೆ.

    ಚಿಂಚೋಳಿಯಲ್ಲಿ ಇಂದು ಸಂಜೆ 6 ಗಂಟೆಗೆ ಬಿಜೆಪಿ ಬಹಿರಂಗ ಸಮಾವೇಶ ನಡೆಸಲಿದೆ. ಶಾಸಕ ವಿ ಸೋಮಣ್ಣ, ಅರವಿಂದ ಲಿಂಬಾವಳಿ, ಮಾಲೀಕಯ್ಯ ಗುತ್ತೆದಾರ್ ನೇತೃತ್ವದಲ್ಲಿ ನಗರದಲ್ಲಿ ಅಬ್ಬರದ ಸಮಾವೇಶ ನಡೆಯಲಿದೆ.

    ಅತ್ತ ಕಾಂಗ್ರೆಸ್‍ನಿಂದ ಅಂತಿಮ ದಿನದ ಕಣದಲ್ಲಿ ಘಟಾನುಘಟಿ ನಾಯಕರೇ ಭಾಗಿಯಾಗಲಿದ್ದಾರೆ. ಡಿಸಿಎಂ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ನೇತೃತ್ವದಲ್ಲಿ ಸವಿತಾ ಸಮಾಜದ ಮುಖಂಡರ ಮತ್ತು ಸಮಾಜದ ಮಠಾಧೀಶರ ಸಭೆ ನಡೆಯಲಿದೆ. ಮಧ್ಯಾಹ್ನ ಚಿಂಚೋಳಿಯ ಪ್ರಮುಖ ಏರಿಯಾಗಳಲ್ಲಿ ಪ್ರಿಯಾಂಕ್ ಖರ್ಗೆ ರೋಡ್ ಶೋ ನಡೆಸಲಿದ್ದಾರೆ.

    ಕುಂದಗೋಳ ಉಪಚುನಾವಣೆಗೂ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸೇರಿದಂತೆ ಹಲವಾರು ನಾಯಕರು ಮತಯಾಚನೆ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರು ಪರ ಕಮಲ ನಾಯಕರು ಮತಯಾಚನೆ ಮಾಡಲಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಪ್ರಲ್ಹಾದ್ ಜೋಶಿ ಕ್ಯಾಂಪೇನ್ ಮಾಡಲಿದ್ದಾರೆ.