Tag: ಕುಂಟೆ

  • ಕುಂಟೆಯಲ್ಲಿ ಈಜಲು ಹೋದ ನಾಲ್ವರು ಮಕ್ಕಳು ಜಲಸಮಾಧಿ?

    ಕುಂಟೆಯಲ್ಲಿ ಈಜಲು ಹೋದ ನಾಲ್ವರು ಮಕ್ಕಳು ಜಲಸಮಾಧಿ?

    – ಇಬ್ಬರು ಮೃತದೇಹ ಪತ್ತೆ, ಉಳಿದ ಇಬ್ಬರಿಗಾಗಿ ಶೋಧ

    ಚಿಕ್ಕಬಳ್ಳಾಪುರ: ಕುಂಟೆಯಲ್ಲಿ ಈಜಲು ಹೋದ ನಾಲ್ವರು ಮಕ್ಕಳು ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಜ್ಜವಾರಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರ ಮೃತದೇಹಕ್ಕಾಗಿ ಆಗ್ನಿ ಶಾಮಕದಳ ಸಿಬ್ಬಂದಿ ಶೋಧಕಾರ್ಯ ಮುಂದುವರೆಸಿದ್ದಾರೆ. ಮೃತರು ಸಾಲಮಾಕಲಹಳ್ಳಿಯ 13 ವರ್ಷದ ಬದ್ರೀನಾಥ್ ಹಾಗೂ ಆಂಧ್ರಪ್ರದೇಶ ವದ್ದಿವಾಂಡ್ಲಪಲ್ಲಿಯ ವರುಣ್ ಮೃತರು ಅಂತ ತಿಳಿದುಬಂದಿದೆ. ಪತ್ತೆಯಾಗಬೇಕಾದ ಮಹೇಶ್ ಹಾಗೂ ಸಂತೋಷ್ ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

    ಕುಂಟೆಯ ಮೇಲ್ಭಾಗದ ದಡದಲ್ಲಿ ನಾಲ್ವರು ಬಟ್ಟೆಗಳು ಪತ್ತೆಯಾಗಿವೆ. ದಡದ ಮೇಲೆ ಬಟ್ಟೆಗಳು ಹಾಗೂ ಕುಂಟೆಯಲ್ಲಿ ಓರ್ವ ಬಾಲಕನ ಮೃತದೇಹ ತೇಲಾಡುತ್ತಿದ್ದನ್ನು ಕಂಡು ಪ್ರಕರಣ ಬೆಳಕಿಗೆ ಬಂದಿದೆ. ಅಂದಹಾಗೆ ಊದವಾರಪಲ್ಲಿಯ ಅನಸೂಯಮ್ಮನವರ ಮನೆಗೆ ತವರು ಮನೆಯಿಂದ ಶಾಲೆಗಳಿಗೆ ರಜೆ ಇದ್ದ ಕಾರಣ ಸಂಬಂಧಿಗಳಾದ ವರುಣ್, ಸಂತೋಷ್ ಹಾಗೂ ಆಂಧ್ರದ ವದ್ದಿವಾಂಡ್ಲಪಲ್ಲಿಯ ಬದ್ರೀನಾಥ್ ಬಂದಿದ್ದರು.

    ಈ ವೇಳೆ ಅನಸೂಯಮ್ಮನ ಮಗ ಮಹೇಶ್ ಜೊತೆ ಸೇರಿ ನಾಲ್ವರು ಹಸು ಕರೆದುಕೊಂಡು ತೋಟದ ಬಳಿ ಹೋಗಿದ್ದಾರೆ. ಈ ವೇಳೆ ಹಸು ಕಟ್ಟಿ ಹಾಕಿ ನಾಲ್ವರು ಕುಂಟೆಯಲ್ಲಿ ಈಜಲು ತೆರಳಿದ್ದರು ಎನ್ನಲಾಗಿದೆ. ಈ ಸಂಬಂಧ ಸದ್ಯ ಆಗ್ನಿಶಾಮಕ ದಳ ಸಿಬ್ಬಂದಿ ಕುಂಟೆ ನೀರನ್ನು ಹೊರ ಹಾಕಿ ಉಳಿದ ಇಬ್ಬರ ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸಲಿದ್ದಾರೆ. ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಕುಂಟೆಯಲ್ಲಿ ಈಜಲು ಹೋದ ನಾಲ್ವರು ಮಕ್ಕಳು ಜಲಸಮಾಧಿ

  • ದೇವರ ಪ್ರಸಾದ ತಿಂದು ಕೈ ತೊಳೆಯಲು ಹೋಗಿ ಸಾವನ್ನಪ್ಪಿದ ಬಾಲಕರು

    ದೇವರ ಪ್ರಸಾದ ತಿಂದು ಕೈ ತೊಳೆಯಲು ಹೋಗಿ ಸಾವನ್ನಪ್ಪಿದ ಬಾಲಕರು

    ಚಿಕ್ಕಬಳ್ಳಾಪುರ: ಆಂಜನೇಯ ದೇವರ ದರ್ಶನ ಪಡೆದು, ಪ್ರಸಾದ ತಿಂದು ಬಾಲಕರಿಬ್ಬರು ಕೈ ತೊಳೆಯಲು ಕುಂಟೆಗೆ ಹೋದವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭೈರನಾಯಕನಹಳ್ಳಿ ಗೇಟ್ ಬಳಿ ನಡೆದಿದೆ.

    ಅನೂರು ಗ್ರಾಮದ ಗಾಯಿತ್ರಿ ನಟರಾಜು ದಂಪತಿಯ ಮಗನಾದ ಯಶವಂತ್(12) ಹಾಗೂ ಅನಿತಾ ಮನೋಹರ್ ದಂಪತಿ ಪುತ್ರ ಪ್ರೀತಮ್ ಗೌಡ(08) ಮೃತ ದುರ್ದೈವಿಗಳು. ದೇವಸ್ಥಾನಕ್ಕೆ ಆಗಮಿಸಿದ ಬಾಲಕರಿಬ್ಬರು ಅಲ್ಲಿ ನೀಡಿದ್ದ ಪ್ರಸಾದ ತಿಂದಿದ್ದಾರೆ. ನಂತರ ಕೈ ತೊಳೆಯಲೆಂದು ಹತ್ತಿರದ ಕುಂಟೆಗೆ ತೆರಳಿದ್ದಾರೆ. ಈ ವೇಳೆ ಬಾಲಕರಿಬ್ಬರು ಕುಂಟೆಯಲ್ಲಿ ಜಾರಿಬಿದ್ದು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ಅಲ್ಲೇ ಇದ್ದ ಇನ್ನೊಬ್ಬ ಬಾಲಕ ತಕ್ಷಣ ಗ್ರಾಮದಲ್ಲಿ ವಿಷಯ ತಿಳಿಸಿದ್ದಾನೆ.

    ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೀರಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಪ್ರದೀಪ್ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.