Tag: ಕುಂಟ

  • ಕುಂಟ ಅಂತ ರೇಗಿಸಿದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆಗೈದ ರಿಕ್ಷಾ ಚಾಲಕ

    ಕುಂಟ ಅಂತ ರೇಗಿಸಿದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆಗೈದ ರಿಕ್ಷಾ ಚಾಲಕ

    ಮುಂಬೈ: ಕುಂಟ ಎಂದು ರೇಗಿಸಿದ್ದಕ್ಕೆ 32 ವರ್ಷದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ರಿಕ್ಷಾ ಚಾಲಕ ಹತ್ಯೆಗೈದಿರುವ ಘಟನೆ ಮುಂಬೈನ (Mumbai) ಗೋರೆಗಾಂವ್‍ನಲ್ಲಿ (Goregaon) ನಡೆದಿದೆ.

    ಗೋರೆಗಾಂವ್ (ಪೂರ್ವ)ದ ಮುಲುಂಡ್ ಲಿಂಕ್ ರಸ್ತೆಯ ಹನುಮಾನ್ ಟೆಕ್ಡಿಯಲ್ಲಿರುವ ಚೈನೀಸ್ ಫುಡ್ ಹೋಟೆಲ್ ಎದುರಿಗೆ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಮುಖೇಶ್ ಝಂಜರೆ (32) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕಾಶ್ಮೀರದಲ್ಲಿ ಹಿಂದೂಗಳೇ ಇರುವುದಿಲ್ಲ: ಫಾರೂಕ್ ಅಬ್ದುಲ್ಲಾ

    ಮುಖೇಶ್ ಝಂಜರೆ ಕುಳಿದ್ದ ವೇಳೆ ಆಹಾರ ತೆಗೆದುಕೊಂಡು ಹೋಗಲು 45 ವರ್ಷದ ಆರೋಪಿ ರಿಕ್ಷಾ ಚಾಲಕ ತೇಜ್ ಬಹದ್ದೂರ್ ಮೋರಿಯಾ ಹೋಟೆಲ್‍ಗೆ ಬಂದಿದ್ದನು. ಅಪಘಾತದಿಂದಾಗಿ ಬಲಗಾಲು ಅಂಗವೈಕಲ್ಯ ಹೊಂದಿದ್ದ ತೇಜ್ ಬಹದ್ದೂರ್ ಕುಂಟುತ್ತಾ ನಡೆಯುತ್ತಿದ್ದರು. ಇದನ್ನು ಕಂಡು ಮುಖೇಶ್ ಝಂಜರೆ ಚುಡಾಯಿಸಿ, ನಿಂದಿಸಲು ಆರಂಭಿಸಿದ್ದಾನೆ. ನಂತರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ನಂತರ ರೊಚ್ಚಿಗೆದ್ದ ಮೋರಿಯಾ ಜೇಬಿನಿಂದ ಚಾಕುವನ್ನು ತೆಗೆದು, ಮುಖೇಶ್ ಎದೆ, ಹೊಟ್ಟೆ, ಕಿವಿ ಮತ್ತು ಕಣ್ಣಿನ ಮೇಲೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಂತರ ಘಟನೆಯಲ್ಲಿ ಗಾಯಗೊಂಡ ಮುಖೇಶ್ ಅವರನ್ನು ಟ್ರಾಮಾ ಕೇರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಬುಧವಾರ ಮಧ್ಯರಾತ್ರಿ 12.35ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಇದೀಗ ಪೊಲೀಸರು ಆರೋಪಿ ತೇಜ್ ಬಹದ್ದೂರ್ ಮೋರಿಯಾ ಅನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಕಾಶ ಏರ್‌ಗೆ ಬಡಿದ ಹಕ್ಕಿ – ತಪ್ಪಿದ ದುರಂತ, ವಿಮಾನದ ಮೂತಿಗೆ ಹಾನಿ

    Live Tv
    [brid partner=56869869 player=32851 video=960834 autoplay=true]