Tag: ಕಿಸ್ಸಿಂಗ್

  • ಅಡಲ್ಟ್ ಕಂಟೆಂಟ್ ವಿರುದ್ಧ ಗರಂ ಆದ ಸಲ್ಮಾನ್ ಖಾನ್

    ಅಡಲ್ಟ್ ಕಂಟೆಂಟ್ ವಿರುದ್ಧ ಗರಂ ಆದ ಸಲ್ಮಾನ್ ಖಾನ್

    ದೇ ಮೊದಲ ಬಾರಿಗೆ ಅಚ್ಚರಿಯ ಮಾತುಗಳನ್ನೂ ಆಡಿದ್ದಾರೆ ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Salman Khan). ಚಿತ್ರೋದ್ಯಮದ ಅನೇಕರಿಗೆ ವರದಾನವಾಗಿರುವ ಓಟಿಟಿ ಬಗ್ಗೆ ಅವರು ಗರಂ ಆಗಿದ್ದಾರೆ. ಈ ವೇದಿಕೆಯಲ್ಲಿ ಬರುವ ಸಿನಿಮಾ, ಸಾಕ್ಷ್ಯಚಿತ್ರ, ವೆಬ್ ಸಿರೀಸ್ ಗಳಿಗೆ ಸೆನ್ಸಾರ್ ಮಾಡಿಸಬೇಕು ಎಂದು ಅವರು ಮಾತನಾಡಿದ್ದಾರೆ. ಅದರಲ್ಲೂ ಅಡಲ್ಟ್ (Adult) ಕಂಟೆಂಟ್ ನಿಂದ ತುಂಬಿರುವ ಓಟಿಟಿಗಳನ್ನು ಕೂಡಲೇ ಭಾರತದಲ್ಲಿ ನಿಲ್ಲಿಸಬೇಕು ಎಂದು ಸಲಹೆ ಮಾಡಿದ್ದಾರೆ.

    ಕಿಸ್ಸಿಂಗ್ (Kissing), ಎಕ್ಸ್ ಪೋಸ್, ವಯಸ್ಕರ ಚಿತ್ರಗಳು, ನೀಲಿ ಚಿತ್ರಗಳು, ಅತಿಯಾದ ರೊಮ್ಯಾನ್ಸ್ ಹೊಂದಿದ ದೃಶ್ಯಗಳು ಓಟಿಟಿಯಲ್ಲಿ ಹೇರಳವಾಗಿ ಸಿಗುತ್ತಿವೆ. ನಮ್ಮ ಸುಸಂಸ್ಕೃತ ರಾಷ್ಟ್ರ, ನಾವು ಭಾರತದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಮರೆತು ಅಂತಹ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಅದು ಆಗಬಾರದು. ಕೂಡಲೇ ಅಂತಹ ಕಂಟೆಂಟ್ ಅನ್ನು ತಗೆದು ಹಾಕಬೇಕು ಎಂದಿದ್ದಾರೆ ಸಲ್ಲು. ಇದನ್ನೂ ಓದಿ: ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ ಶಂಕೆ

    ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಡಿಜಿಟಲ್ ಯುಗದ ಜೊತೆಗೆ ಯುವ ನಟರ ಬಗ್ಗೆಯೂ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಚಿತ್ರೋದ್ಯಮಕ್ಕೆ ಯುವ ಪ್ರತಿಭೆಗಳು ಬರುತ್ತಿವೆ. ಅವರೂ ಕಷ್ಟ ಪಡುತ್ತಿದ್ದಾರೆ. ಆದರೂ, ನಾವು ಐದಾರು ಜನ ಅವರಿಗೆ ಸ್ಪರ್ಧೆ  ಕೊಡುತ್ತಲೇ ಇರುತ್ತೇವೆ. ಈ ಹೊತ್ತಿನ ನಟರು ಒಂದೋ ಎರಡೋ ಸಿನಿಮಾ ಹಿಟ್ ಆದ ತಕ್ಷಣವೇ ಸಂಭಾವನೆ ಜಾಸ್ತಿ ಮಾಡಿಕೊಳ್ಳುತ್ತಾರೆ. ನಮ್ಮದು ಹಾಗಿರಲಿಲ್ಲ’ ಎಂದಿದ್ದಾರೆ.

    salman

    ಸಿನಿಮಾದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ವಿವೇಕವು ಎಲ್ಲರಿಗೂ ಇರಬೇಕು. ಸಮಾಜವನ್ನು ಹಾಳು ಮಾಡುವಂತಹ, ಜನರಿಗೆ ಮೋಸವಾಗದಂತಹ ವಿಷಯಗಳನ್ನು ಎತ್ತಿಕೊಂಡು ಸಿನಿಮಾ ಮಾಡಬೇಕಿದೆ. ಅದರಲ್ಲೂ ದೇಶಭಕ್ತಿ ಸಾರುವಂತಹ, ಸಮಾಜಗಳನ್ನು ಒಂದಾಗಿಸುವಂತಹ ಕಥೆಗಳು ಹೆಚ್ಚಾಗಿ ಬರಲಿ ಎಂದಿದ್ದಾರೆ ಸಲ್ಮಾನ್ ಖಾನ್.

  • ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್

    ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್

    ರೋಬ್ಬರಿ 16 ವರ್ಷಗಳ ನಂತರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ನಿರಾಳದ ನಿಟ್ಟುಸಿರಿಟ್ಟಿದ್ದಾರೆ. ಕಿಸ್ಸಿಂಗ್ (Kissing) ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಸೆಷನ್ ಕೋರ್ಟ್ ಅರ್ಜಿ ವಜಾ ಮಾಡಿದ್ದು, ಶಿಲ್ಪಾಗೆ ರಿಲೀಫ್ ಸಿಕ್ಕಿದೆ. ಈ ಮೂಲಕ 2007ರಲ್ಲಿ ನಡೆದ ಘಟನೆ ತಾರ್ಕಿಕ ಅಂತ್ಯಕಂಡಿದೆ.

    ರಾಜಸ್ಥಾನದಲ್ಲಿ (Rajasthan) 2007ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿಲ್ಪಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ಹಾಲಿವುಡ್ ನಟ ರಿಚರ್ಡ್ ಗಿಯರ್ (Richard Gere)  ಬಹಿರಂಗವಾಗಿಯೇ ವೇದಿಕೆಯ ಮೇಲೆ ಶಿಲ್ಪಾ ಶೆಟ್ಟಿಗೆ ಮುತ್ತಿಟ್ಟಿದ್ದ. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಭಾರೀ ಗದ್ದಲ ಸೃಷ್ಟಿ ಮಾಡಿತ್ತು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಶ್ಲೀಲತೆ ಮೆರೆದಿದ್ದಾರೆ ಎನ್ನುವ ಕಾರಣಕ್ಕಾಗಿ ಶಿಲ್ಪಾ ಶೆಟ್ಟಿ ಮೇಲೆ ದೂರು (Case) ದಾಖಲಾಗಿತ್ತು. ಇದನ್ನೂ ಓದಿ:ಇಬ್ರಾಹಿಂ ಅಲಿ ಖಾನ್ ಜೊತೆಗಿನ ಡೇಟಿಂಗ್ ಸುದ್ದಿ ನಿಜಾನಾ? ಪಾಲಕ್ ತಿವಾರಿ ಸ್ಪಷ್ಟನೆ

    ಶಿಲ್ಪಾ ಶೆಟ್ಟಿ ಕೆನ್ನೆಗೆ ಮುತ್ತಿಡುವ ದೃಶ್ಯ ಮತ್ತು ಫೋಟೋಗಳು ಕೋಲಾಹಲ ಸೃಷ್ಟಿಯಾಗಿದ್ದರಿಂದ ರಾಜಸ್ಥಾನದಲ್ಲಿ ಎರಡು ಹಾಗೂ ಗಜಿಯಾಬಾದ್ ನಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಮುಂಬೈ ಕೋರ್ಟಿಗೆ ವರ್ಗಾಯಿಸಲು 2017ರಲ್ಲಿ ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಈ ಎಲ್ಲ ಪ್ರಕರಣಗಳನ್ನು ಕೈ ಬಿಡುವಂತೆ ಶಿಲ್ಪಾ ಶೆಟ್ಟಿ ಮನವಿ ಮಾಡಿಕೊಂಡಿದ್ದರು.

    ಕಳೆದ ವರ್ಷವಷ್ಟೇ  ಈ ಪ್ರಕರಣವನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತಕಿ ಚವಾಣ್ ಅವರು  ರದ್ದು ಮಾಡಿದ್ದರು. ಇದನ್ನು ಸೆಷನ್ ಕೋರ್ಟ್ ನಲ್ಲಿ ಮತ್ತೆ ಪ್ರಶ್ನೆ ಮಾಡಲಾಗಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

  • ಕಿಸ್ಸಿಂಗ್ ಪಾತ್ರಗಳ ಬಗ್ಗೆ ರಾಖಿ ಸಾವಂತ್ ಬೇಸರ

    ಕಿಸ್ಸಿಂಗ್ ಪಾತ್ರಗಳ ಬಗ್ಗೆ ರಾಖಿ ಸಾವಂತ್ ಬೇಸರ

    ತ್ತಿನ ಪಾತ್ರಗಳ ಮೂಲಕವೇ ಫೇಮಸ್ ಆಗಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಕಿಸ್ಸಿಂಗ್ ದೃಶ್ಯಗಳ ಬಗ್ಗೆ ಬೇಸರಿಸಿಕೊಂಡಿದ್ದಾರೆ. ಈವರೆಗೂ ತಾವು ಮಾಡಿರುವ ಪಾತ್ರಗಳು ಅಂಥದ್ದೇ ಆಗಿದ್ದರ ಬಗ್ಗೆಯೂ ಅವರಿಗೆ ಬೇಸರವಿದೆಯಂತೆ. ತಮ್ಮೊಳಗೆ ಅದ್ಭುತ ಕಲಾವಿದೆ ಇದ್ದರೂ, ಎಕ್ಸ್ ಪೋಸ್ ಮಾಡುವಂತಹ ಮತ್ತು ಮಾದಕವಾಗಿ ಕಾಣುವಂತಹ ಪಾತ್ರಗಳನ್ನೇ ನಿರ್ದೇಶಕರು ನೀಡುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

    ಬೇರೆ ಬೇರೆ ಪಾತ್ರಗಳ ಮೂಲಕ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ನನಗೂ ಇದೆ. ಒಳ್ಳೆಯ ಪಾತ್ರಗಳನ್ನು ಕೊಡಿ, ಅದ್ಭುತವಾಗಿಯೇ ಅವುಗಳನ್ನು ನಿಭಾಯಿಸುತ್ತೇನೆ ಎಂದು ಅನೇಕ ನಿರ್ದೇಶಕರಿಗೆ ಹೇಳಿದ್ದೇನೆ. ಆದರೆ, ಅವರು ನನ್ನ ಮಾತುಗಳನ್ನು ಕೇಳುವುದೇ ಇಲ್ಲ. ಕೇವಲ ಕಿಸ್ಸಿಂಗ್ ದೃಶ್ಯಗಳು ಇದ್ದರೆ ಮಾತ್ರ ಕರೆಯುತ್ತಾರೆ. ಅವರು ನನ್ನನ್ನು ಅಷ್ಟಕ್ಕೇ ಸೀಮಿತ ಮಾಡಿಕೊಂಡಿದ್ದಾರೆ. ನಾನು ಅದರಾಚೆಗೂ ಕಠಿಣ ಪಾತ್ರಗಳನ್ನು ನಿಭಾಯಿಸಬಲ್ಲೆ ಎಂದಿದ್ದಾರೆ ರಾಖಿ ಸಾವಂತ್. ಇದನ್ನೂ ಓದಿ:`ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ

    ಮೈಸೂರು ಹುಡುಗ ಆದಿಲ್ ನನ್ನು ಪ್ರೀತಿಸಲು ಶುರು ಮಾಡಿದಾಗಿಂದ ರಾಖಿ ತುಂಬಾ ಬದಲಾಗಿದ್ದಾರಂತೆ. ತುಂಡು ಉಡುಗೆಗಳನ್ನು ತೊಡುತ್ತಿಲ್ಲವಂತೆ. ಚುಂಬಿಸುವಂತಹ, ಬೆಡ್ ರೂಮ್ ದೃಶ್ಯಗಳು ಇರುವಂತಹ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲವಂತೆ. ಆದಿಲ್ ಕುಟುಂಬಕ್ಕೆ ಅದೆಲ್ಲ  ಇಷ್ಟವಾಗದೇ ಇರುವ ಕಾರಣಕ್ಕಾಗಿ ಇಂತಹ ನಿರ್ಧಾರ ತಗೆದುಕೊಂಡಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ವರ್ಕೌಟ್ ವೇಳೆ ವೃದ್ಧ ದಂಪತಿ ಕಿಸ್ಸಿಂಗ್ ವೀಡಿಯೋ ವೈರಲ್

    ವರ್ಕೌಟ್ ವೇಳೆ ವೃದ್ಧ ದಂಪತಿ ಕಿಸ್ಸಿಂಗ್ ವೀಡಿಯೋ ವೈರಲ್

    ರ್ಕೌಟ್ ವೇಳೆ ವೃದ್ಧ ದಂಪತಿ ಚುಂಬಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    old couple

    ಸಾಮಾನ್ಯವಾಗಿ ಜನರು ವಕೌರ್ಟ್ ಮಾಡುವುದಕ್ಕೆ ಹರಸಹಾಸ ಮಾಡುತ್ತಾರೆ. ಆದರೆ ಇಲ್ಲೋರ್ವ ವೃದ್ಧ ದಂಪತಿ ಪುಲ್-ಅಪ್ ಬಾರ್ ವ್ಯಾಯಾಮ ಮಾಡುತ್ತಿರುವುದರ ಜೊತೆಗೆ ಕಿಸ್ ಮಾಡಿದ್ದಾರೆ. ಇನ್ನೂ ಈ ವೀಡಿಯೋವನ್ನು ಗುಡ್ ನ್ಯೂಸ್ ಮೂವ್‍ಮೆಂಟ್ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಇಲ್ಲಿಯವರೆಗೂ ಸುಮಾರು 1.4 ಮಿಲಿಯನ್‍ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ

    ವೀಡಿಯೋದಲ್ಲಿ ವೃದ್ಧ ದಂಪತಿ ಸಖತ್ ಬ್ಯಾಲೆನ್ಸಿಂಗ್ ಆಗಿ ಪುಲ್ ಅಪ್ ಮಾಡುತ್ತಾ ಒಬ್ಬರಿಗೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಚುಂಬಿಸುತ್ತಿರುವುದನ್ನು ನೋಡಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುವ ದಂಪತಿ ಸದಾ ಒಟ್ಟಿಗೆ ಇರುತ್ತಾರೆ ಎಂದು ಬರೆಯಲಾಗಿದೆ. ಇನ್ನೂ ಈ ವೀಡಿಯೋ ನೋಡಿ ನೆಟ್ಟಿಗರು ವೃದ್ಧ ದಂಪತಿಗಳ ಪ್ರೀತಿಗೆ ಫಿದಾ ಆಗಿದ್ದು, ಕೆಲವರು ಇಬ್ಬರ ನಡುವಿನ ಭಾಂದವ್ಯವನ್ನು ಮೆಚ್ಚಿದರೆ, ಇನ್ನೂ ಕೆಲವರು ಅವರ ಶಕ್ತಿಯನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ

  • ರಸ್ತೆಯಲ್ಲೇ ಮೈ ಮರೆತು ಪ್ರೇಮಿಗಳ ಚುಂಬನದಾಟ – ಪಡ್ಡೆ ಹುಡ್ಗರ ಮೊಬೈಲ್‍ನಲ್ಲಿ ಸೆರೆಯಾಯ್ತು

    ರಸ್ತೆಯಲ್ಲೇ ಮೈ ಮರೆತು ಪ್ರೇಮಿಗಳ ಚುಂಬನದಾಟ – ಪಡ್ಡೆ ಹುಡ್ಗರ ಮೊಬೈಲ್‍ನಲ್ಲಿ ಸೆರೆಯಾಯ್ತು

    ಹಾಸನ: ಕಾಫಿ ಶಾಪ್‍ಗೆ ಬಂದ ಪ್ರೇಮಿಗಳಿಬ್ಬರು ರಸ್ತೆಯಲ್ಲೇ ಮೈಮರೆತು ಪ್ರೇಮ ಸಲ್ಲಾಪ ನಡೆಸಿದ್ದು, ಆ ದೃಶ್ಯಾವಳಿಗಳು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿ ಇದೀಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ.

    ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿರುವ ಕಾಫಿ ಶಾಪ್ ಬಳಿ ಇಬ್ಬರು ಪ್ರೇಮಿಗಳು ರಸ್ತೆಯ ಪಕ್ಕದಲ್ಲಿಯೇ ಮೈಮರೆತು ಒಂದು ಗಂಟೆಗೂ ಹೆಚ್ಚು ಕಾಲ ಸರಸ ಸಲ್ಲಾಪದಲ್ಲಿ ತೊಡಗಿ ದಾರಿ ಹೋಕರ ಮುಜುಗರಕ್ಕೆ ಕಾರಣರಾಗಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಇಬ್ಬರು ಪ್ರೇಮಿಗಳು ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಮಾತನಾಡುತ್ತಿದ್ದ ನಿಂತಿದ್ದು, ಬಳಿಕ ಇಬ್ಬರು ಅಪ್ಪಿಕೊಂಡು ಪರಸ್ಪರ ಕಿಸ್ ಮಾಡಿದ್ದಾರೆ. ಮೊದಲಿಗೆ ಹುಡುಗ ಪ್ರೇಯಸಿಗೆ ಮುತ್ತು ಕೊಟ್ಟಿದ್ದಾನೆ. ಬಳಿಕ ಹುಡುಗಿ ಪ್ರಿಯತಮನನ್ನು ಅಪ್ಪಿಕೊಂಡಿದ್ದು, ಕಿಸ್ ಮಾಡಿದ್ದಾಳೆ. ಇದೇ ರೀತಿ ಇಬ್ಬರು ಮೈ ಮರೆತು ಇಬ್ಬರು ಸುಮಾರು ಒಂದು ಗಂಟೆಗಳ ಕಾಲ ಸರಸ ಸಲ್ಲಾಪವಾಡಿದ್ದಾರೆ. ಪ್ರೇಮಿಗಳು ರೊಮ್ಯಾನ್ಸ್ ನನ್ನು ಅವರ ಹಿಂದೆ ಇದ್ದ ಒಂದು ಬಿಲ್ಡಿಂಗ್ ಮೇಲೆ ನಿಂತು ಯಾರೋ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಪ್ರಣಯ ಪಕ್ಷಿಗಳ ಚುಂಬನದಾಟದ ವೇಳೆ ಸ್ಥಳೀಯರು ಮನೆಯಿಂದ ಹೊರಬರಲು ಮುಜುಗರ ಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ನಗರದ ನಡು ರಸ್ತೆಯಲ್ಲಿಯೇ ಇಂತಹ ದೃಶ್ಯಾವಳಿಗಳನ್ನು ನೋಡುತ್ತಿದ್ದರೇ ವಿದೇಶಿ ಸಂಸ್ಕೃತಿ ಹಾಸನಕ್ಕೆ ಕಾಲಿಟ್ಟಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

    ದಿನನಿತ್ಯ ಹಾಸನದಲ್ಲಿ ಒಂದಿಲ್ಲೊಂದು ಕಡೆಯಲ್ಲಿ ಇಂತಹ ಘಟನೆಗಳು ಕಾಣಬಹುದಾಗಿದೆ. ಇಂದಿನ ಯುವ ಪೀಳಿಗೆ ಸಂಸ್ಕೃತಿಯನ್ನು ಮರೆತು ನಡು ರಸ್ತೆಯಲ್ಲೇ ತಮ್ಮ ಮಾನವನ್ನ ತಾವೇ ಕಳೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವಮಾನವನ ಚುಂಬನಕ್ಕೆ ಮುಗಿಬೀಳ್ತಿದ್ದ ಮಹಿಳೆಯರು!- ಕೊನೆಗೂ ಕಿಸ್ಸಿಂಗ್ ಬಾಬಾ ಅರೆಸ್ಟ್

    ದೇವಮಾನವನ ಚುಂಬನಕ್ಕೆ ಮುಗಿಬೀಳ್ತಿದ್ದ ಮಹಿಳೆಯರು!- ಕೊನೆಗೂ ಕಿಸ್ಸಿಂಗ್ ಬಾಬಾ ಅರೆಸ್ಟ್

    ದಿಸ್ಪುರ್: ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿ, ಮಹಿಳೆಯರನ್ನು ತಬ್ಬಿಕೊಂಡು ಮುತ್ತಿಕ್ಕುತ್ತಿದ್ದ ಸ್ವಯಂಘೋಷಿತ ದೇವ ಮಾನವನೊಬ್ಬನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

    ರಾಮ್ ಪ್ರಕಾಶ್ ಚೌಹಾಣ್ ಬಂಧಿತ ಆರೋಪಿ. ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಭೂರಾಲ್ತುಪ್ ಗ್ರಾಮದಲ್ಲಿದ್ದ ರಾಮ್ ಪ್ರಕಾಶ್, ತನ್ ಬಳಿಕೆ ಸಮಸ್ಯೆ ಹೇಳಿಕೊಂಡು ಬರುತ್ತಿದ್ದ ಮಹಿಳೆಯರಿಗೆ ಮುತ್ತಿಕ್ಕುವುದು ಹಾಗೂ ತಬ್ಬಿಕೊಳ್ಳುವುದನ್ನು ಮಾಡುತ್ತಿದ್ದ ಎಂದು ವರದಿಯಾಗಿದೆ.

    ತನ್ನ ‘ಚಮತ್ಕಾರ ಚುಂಬನ’ದಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಪರಿಹಾರ ಸಿಗುತ್ತವೆ. ತನ್ನ ಚುಂಬನದಲ್ಲಿ ಅದ್ಭುತ ಶಕ್ತಿಯಿದೆ. ಈ ಶಕ್ತಿಯನ್ನು ಭಗವಾನ್ ವಿಷ್ಣುವಿನಿಂದ ವರದಿಂದ ಪಡೆದಿದ್ದಾಗಿ, ಸಹಾಯ ಬಯಸುವ ಮಹಿಳೆಯರಿಗೆ ಹಾಗೂ ವೈವಾಹಿಕ ಸಮಸ್ಯೆ ನಿವಾರಣೆಗೆ ತನ್ನ ಶಕ್ತಿಯನ್ನು ಬಳಸುತ್ತಿರುವುದಾಗಿ ರಾಮ್ ಪ್ರಕಾಶ್ ಹೇಳಿಕೊಂಡಿದ್ದನು. ಈತನ ಮಾತು ಕೇಳಿ ಪ್ರಭಾವಿತರಾಗುತ್ತಿದ್ದ ಮಹಿಳೆಯರು ಚುಂಬಿಸಲು ಅನುಮತಿ ನೀಡುತ್ತಿದ್ದರು.

    ರಾಮ್ ಪ್ರಸಾದ್ ಬಗ್ಗೆ ಪ್ರಚಾರ ಮಾಡಲು ಸ್ಥಳೀಯರು ಮುಂದಾಗಿದ್ದರು, ಆದರೆ ಆತ ಅದನ್ನು ತಿರಸ್ಕರಿಸಿದ್ದನು. ಅಲ್ಲದೆ ಆತನಿಗೆ ಮಾಂತ್ರಿಕ ಶಕ್ತಿಯಿದೆ ಎಂದು ನಂಬಿಸಲಾಗಿತ್ತು. ಆತನ ತಾಯಿ, ತಮ್ಮ ಮಗನ ಬಳಿ ಚಿಕಿತ್ಸಕ ಗುಣವಿದೆ ಎಂದು ತನಿಖೆಯ ವೇಳೆ ಹೇಳಿದ್ದಾಳೆ.

    ಮೊರಿಗಾಂವ್ ಜಿಲ್ಲೆಯ ಕೆಲವು ಭಾಗದಲ್ಲಿ ವಾಮಾಚಾರಿಗಳ ಸಂಖ್ಯೆ ಹೆಚ್ಚಾಗಿದ್ದು, ತಾವು ವಿಷ್ಣುವಿನ ಅನುಗ್ರಹ ಪಡೆದಿದ್ದಾಗಿ ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv