Tag: ಕಿಶೋರ್ ಪತ್ತಿಕೊಂಡ

  • ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆರೋಗ್ಯ ಸ್ವಲ್ಪ ಗಂಭೀರ : ವೈದ್ಯರ ಮಾಹಿತಿ ಏನು?

    ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆರೋಗ್ಯ ಸ್ವಲ್ಪ ಗಂಭೀರ : ವೈದ್ಯರ ಮಾಹಿತಿ ಏನು?

    ರಡು ದಿನಗಳ ಹಿಂದೆ ಬಿಪಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿದ್ದರೂ, ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದಿದ್ದಾರೆ ಅಪೋಲೊ ಆಸ್ಪತ್ರೆ ವೈದ್ಯರು. ಹಾಗಾಗಿ ಇನ್ನೂ ಒಂದು ವಾರ ಕಿಶೋರ್ ಐಸಿಯುನಲ್ಲೇ ಇರಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವೈದ್ಯರು, ‘ ಆಸ್ಪತ್ರೆಗೆ ಕಿಶೋರ್ ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಲೆಫ್ಟ್ ಬ್ರೈನ್ ಬಳಿ ಬ್ಲಡ್ ಕ್ಲಾಟ್ ಆಗಿತ್ತು. ಇಮಿಡಿಯೇಟ್ ಸರ್ಜರಿ ಮಾಡಿದೆವು. ಸದ್ಯ ಅವರಿಗೆ ಪ್ರಜ್ಞೆ ಬಂದಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆದರೆ, ಒಂದು ವಾರ ಕಾಲ ಐಸಿಯುನಲ್ಲೇ ಇರಬೇಕಾಗುತ್ತದೆ.  ವೆಂಟಿಲೇಟರ್ ತೆಗೆಯಲು ನೋಡಿದ್ವಿ. ಆದ್ರೆ ಸದ್ಯಕ್ಕಿನ್ನೂ ಆಗ್ತಿಲ್ಲ. ತುಂಬಾ ರೆಸ್ಟ್ ಲೇಸ್ ಆಗಿರೋದ್ರಿಂದ ಈ ರೀತಿ ಆಗಿದೆ. ಅವರು ತುಂಬಾ ರೆಸ್ಟ್ ಮಾಡಬೇಕಾಗುತ್ತೆ’ ಎಂದಿದ್ದಾರೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ಕಿಶೋರ್ ಅವರು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದರೂ, ಕೆಲ ತಿಂಗಳುಗಳ ಕಾಲ ಅವರು ಹಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದೂ ವೈದ್ಯರು ಹೇಳಿದ್ದಾರೆ. ‘ಲೆಫ್ಟ್ ಬ್ರೈನ್ ಆಗಿರೋದ್ರಿಂದ ಮಾತನಾಡೋದಕ್ಕೆ ಸ್ವಲ್ಪ‌ ಸಮಯವಾಗಬಹುದು. ಫಿಸಿಯೋತೆರಪಿ ಮಾಡಸಿಕೊಂಡರೆ ಸರಿ ಹೋಗುತ್ತದೆ. ಸ್ಟ್ರೋಕ್ ನಿಂದ ರೈಟ್ ಸೈಡ್ ಸ್ವಲ್ಪ ಸ್ವಾಧೀನ ಕಳೆದುಕೊಂಡಿದ್ದಾರೆ. ಈಗಲೂ ಕೂಡ ಸ್ವಲ್ಪ ಅವರ ಆರೋಗ್ಯ ಸ್ಥಿತಿ ಗಂಭೀರವೆ ಇದೇ. ಇನ್ನೂ ಒಂದು ವಾರ ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಯಲಿದೆ’ ಎಂದಿದ್ದಾರೆ ವೈದ್ಯರು. ಈಗಾಗಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಕಿಶೋರ್ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಜೇಮ್ಸ್’ ಸಿನಿಮಾ ನಿರ್ಮಾಪಕನಿಗೆ ಮೆದುಳು ಸರ್ಜರಿ : ಚೇತರಿಸಿಕೊಳ್ಳುತ್ತಿದ್ದಾರೆ ಕಿಶೋರ್ ಪತ್ತಿಕೊಂಡ

    ‘ಜೇಮ್ಸ್’ ಸಿನಿಮಾ ನಿರ್ಮಾಪಕನಿಗೆ ಮೆದುಳು ಸರ್ಜರಿ : ಚೇತರಿಸಿಕೊಳ್ಳುತ್ತಿದ್ದಾರೆ ಕಿಶೋರ್ ಪತ್ತಿಕೊಂಡ

    ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿನ್ನೆ ರಾತ್ರಿ ಬಿಪಿ ಹೆಚ್ಚಾದ ಕಾರಣದಿಂದಾಗಿ ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಶೇಷಾದ್ರಿ ಪುರಂ ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರ ಮೆದುಳು ಸರ್ಜರಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಪಿಬಿ ಹೆಚ್ಚಾದ ಜೊತೆಗೆ ಅವರಿಗೆ ಸ್ಟ್ರೋಕ್ ಕೂಡ ಆಗಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿಯೇ ಅವರಿಗೆ ಪಿಬಿ ಹೆಚ್ಚಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಜ್ಞೆ ತಪ್ಪಿದ ಕಾರಣದಿಂದಾಗಿ ಸಹಜವಾಗಿಯೇ ಆತಂಕ ಕೂಡ ಮನೆಮಾಡಿತ್ತು. ಇದೀಗ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿರುವುದಾಗಿ ನಟ ಧೀರೇನ್ ರಾಮ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ:ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ಗೆ ಕರ್ನಾಟಕದಲ್ಲಿ ಧರ್ಮ ಸಂಕಟ

    ಪುನೀತ್ ರಾಜ್ ಕುಮಾರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿರುವ ಕಿಶೋರ್ ಪತ್ತಿಕೊಂಡ, ಮೊದಲ ಸಿನಿಮಾದಲ್ಲೇ ಗೆಲುವು ಕಂಡವರು. ಮತ್ತಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ಒಳ್ಳೆಯ ನಿರ್ಮಾಪಕ ಎಂದೂ ಗುರುತಿಸಿಕೊಂಡಿರುವ ಕಿಶೋರ್ ಅವರ ಆರೋಗ್ಯ ಬೇತ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಮತ್ತು ಹಿತೈಷಿಗಳು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ನಿರ್ಮಾಪಕ ಆಸ್ಪತ್ರೆಗೆ ದಾಖಲು

    ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ನಿರ್ಮಾಪಕ ಆಸ್ಪತ್ರೆಗೆ ದಾಖಲು

    ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್’ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಬಿಪಿ ಹೆಚ್ಚಾದ ಕಾರಣದಿಂದಾಗಿ ಅವರು ಪ್ರಜ್ಞೆ ತಪ್ಪಿದ್ದರಂತೆ. ಕೂಡಲೇ ಬೆಂಗಳೂರಿನ ಶೇಷಾದ್ರಿ ಪುರಂ ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಪಿಬಿ ಹೆಚ್ಚಾದ ಜೊತೆಗೆ ಅವರಿಗೆ ಸ್ಟ್ರೋಕ್ ಕೂಡ ಆಗಿದೆ ಎಂದು ಹೇಳಲಾಗುತ್ತಿದ್ದು, ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರಂತೆ. ನಿನ್ನೆ ರಾತ್ರಿಯೇ ಅವರಿಗೆ ಪಿಬಿ ಹೆಚ್ಚಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಾಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ಆಪ್ತರು ತಿಳಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವುದರಿಂದ ಯಾರೂ ಆತಂಕ ಪಡಬೇಕಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಪುನೀತ್ ರಾಜ್ ಕುಮಾರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿರುವ ಕಿಶೋರ್ ಪತ್ತಿಕೊಂಡ, ಮೊದಲ ಸಿನಿಮಾದಲ್ಲೇ ಗೆಲುವು ಕಂಡವರು. ಮತ್ತಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರು. ಒಳ್ಳೆಯ ನಿರ್ಮಾಪಕ ಎಂದೂ ಗುರುತಿಸಿಕೊಂಡಿದ್ದ ಕಿಶೋರ್, ಆದಷ್ಟು ಬೇಗ ಗುಣಮುಖರಾಗಲಿ ಎಂದು ಪುನೀತ್ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಿ ಕಾಶ್ಮೀರ್ ಫೈಲ್ಸ್ ನಿಂದ ಜೇಮ್ಸ್ ಚಿತ್ರಕ್ಕೆ ತೊಂದರೆ ಇಲ್ಲ : ಶಿವರಾಜ್ ಕುಮಾರ್

    ದಿ ಕಾಶ್ಮೀರ್ ಫೈಲ್ಸ್ ನಿಂದ ಜೇಮ್ಸ್ ಚಿತ್ರಕ್ಕೆ ತೊಂದರೆ ಇಲ್ಲ : ಶಿವರಾಜ್ ಕುಮಾರ್

    ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಕನ್ನಡದ ಜೇಮ್ಸ್ ಚಿತ್ರಕ್ಕೆ ತೊಂದರೆ ಆಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಮತ್ತು ಪುನೀತ್ ಅವರ ಅಭಿಮಾನಿಗಳು ಹೋರಾಟ ಮಾಡುತ್ತಿರುವಾಗಲೇ ನಟ ಶಿವರಾಜ್ ಕುಮಾರ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಜೇಮ್ಸ್ ಚಿತ್ರಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದು ಅಚ್ಚರಿಕೆ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

    ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಶಿವರಾಜ್ ಕುಮಾರ್, ‘ನಾನು ರಾಜಕಾರಣಿಯಾಗಿ ಈ ಮಾತನ್ನು ಹೇಳುತ್ತಿಲ್ಲ. ನಿಜ ಹೇಳುತ್ತಿರುವೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಜೇಮ್ಸ್ ಚಿತ್ರಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗಿಲ್ಲ. ಕನ್ನಡ ಸಿನಿಮಾಗಳ ವಿಚಾರದಲ್ಲಿ ನಾನು ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಕನ್ನಡ ಚಿತ್ರಗಳಿಗೆ ತೊಂದರೆಯಾದಾಗ ಧ್ವನಿ ಎತ್ತಿದ್ದೇನೆ. ಒಳ್ಳೆಯ ಕಲೆಕ್ಷನ್ ಆಗುತ್ತಿರುವ ಜೇಮ್ಸ್ ಥಿಯೇಟರ್ ನಿಂದ ತಗೆಯುವುದು ಸರಿಯಾದದ್ದು’ ಅಲ್ಲ ಅಂದಿದ್ದಾರೆ. ಇದನ್ನೂ ಓದಿ : ಬಸವರಾಜ ಬೊಮ್ಮಾಯಿಯನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?

    ಈ ವಾರ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ರಿಲೀಸ್ ಆಗುತ್ತಿದೆ. 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಸಹಜವಾಗಿಯೇ ಜೇಮ್ಸ್ ಚಿತ್ರಕ್ಕೆ ಥಿಯೇಟರ್ ಕೊರತೆ ಎದುರಾಗಲಿದೆ. ಹೀಗಾಗಿ ಜೇಮ್ಸ್ ಸಿನಿಮಾ ಉಳಿಸಿಕೊಳ್ಳಲು ನಿರ್ಮಾಪಕರು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಇದನ್ನೂ ಓದಿ : ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ

    ಬೆಳಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವ ಚಿತ್ರತಂಡ, ಜೇಮ್ಸ್ ಸಿನಿಮಾಗೆ ತೊಂದರೆ ಆಗದಂತೆ ಸಹಾಯ ಮಾಡಿ ಎಂದು ಕೇಳಿಕೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಚಿತ್ರತಂಡದ ಜತೆ ನಿಲ್ಲುವುದಾಗಿ ಹೇಳಿದ್ದಾರಂತೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್

    ನಟ ಶಿವರಾಜ್ ಕುಮಾರ್ ಅವರು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಬೊಮ್ಮಾಯಿ ಅವರ ರೇಸ್‍ವೀವ್ ನಿವಾಸದಲ್ಲಿ ಭೇಟಿ ಮಾಡಿದ ಶಿವರಾಜ್ ಕುಮಾರ್, ‘ಜೇಮ್ಸ್’ ಸಿನಿಮಾದ ಕುರಿತಾಗಿ ಎದ್ದಿರುವ ಗೊಂದಲದ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಸಹೋದರ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾವನ್ನು ವೀಕ್ಷಿಸಲು ಆಹ್ವಾನ ಕೂಡ ನೀಡಿದ್ದಾರೆ.

  • ಬಸವರಾಜ ಬೊಮ್ಮಾಯಿಯನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?

    ಬಸವರಾಜ ಬೊಮ್ಮಾಯಿಯನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?

    ನಟ ಶಿವರಾಜ್ ಕುಮಾರ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಬೊಮ್ಮಾಯಿ ಅವರ ರೇಸ್‍ವೀವ್ ನಿವಾಸದಲ್ಲಿ ಭೇಟಿ ಮಾಡಿದ ಶಿವರಾಜ್ ಕುಮಾರ್, ‘ಜೇಮ್ಸ್’ ಸಿನಿಮಾದ ಕುರಿತಾಗಿ ಎದ್ದಿರುವ ಗೊಂದಲದ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಸಹೋದರ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾವನ್ನು ವೀಕ್ಷಿಸಲು ಆಹ್ವಾನ ಕೂಡ ನೀಡಿದ್ದಾರೆ. ಇದನ್ನೂ ಓದಿ : ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ

    ಕೆಲವು ಕಡೆ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ‘ಜೇಮ್ಸ್’ ತಗೆದು, ಆ ಥಿಯೇಟರ್ ನಲ್ಲಿ ‘ದಿ ಕಾಶೀರ್ ಫೈಲ್ಸ್’ ಸಿನಿಮಾವನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸುದ್ದಿ ಆಗಿತ್ತು. ಹಲವು ಕಡೆ ಜೇಮ್ಸ್ ಚಿತ್ರಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಸ್ವತಃ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಹೇಳಿಕೊಂಡಿದ್ದರು. ಈ ವಿಷಯವನ್ನೂ ಮುಖ್ಯಮಂತ್ರಿಗಳ ಜತೆ ಶಿವರಾಜ್ ಕುಮಾರ್ ಚರ್ಚೆ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್

    ನೆನ್ನೆಯಷ್ಟೇ ಜೇಮ್ಸ್ ಸಿನಿಮಾಗೆ ಯಾರೂ ತೊಂದರೆ ಮಾಡಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಪುನೀತ್ ಅವರ ಕೊನೆ ಸಿನಿಮಾವನ್ನು ಎಲ್ಲರೂ ವೀಕ್ಷಿಸಲು ಅವಕಾಶ ಸಿಗಬೇಕು ಎಂದಿದ್ದರು. ಈ ಮಾತಿನ ಬೆನ್ನಲ್ಲೆ ಸಿಎಂ ಮತ್ತು ಶಿವರಾಜ್ ಕುಮಾರ್ ಭೇಟಿ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ:  ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!

    ಸಿಎಂ ಭೇಟಿ ವೇಳೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್,  ಜೇಮ್ಸ್ ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ನಿರ್ಮಾಪಕ ಶ್ರೀಕಾಂತ್ ಜತೆಯಿದ್ದರು. ಈ ವೇಳೆ ಸ್ವತಃ ಶಿವರಾಜ್ ಕುಮಾರ್ ಅವರು ಕಾರ್ ಡ್ರೈವ್ ಮಾಡಿಕೊಂಡು ಬಂದಿದ್ದು ವಿಶೇಷವಾಗಿತ್ತು.