Tag: ಕಿಶನ್

  • ಚಂದನಾ ನಂತ್ರ ಭೂಮಿ ಕೆನ್ನೆಗೆ ಕಿಶನ್ ಕಿಸ್

    ಚಂದನಾ ನಂತ್ರ ಭೂಮಿ ಕೆನ್ನೆಗೆ ಕಿಶನ್ ಕಿಸ್

    ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಕಿಶನ್ ಕೆಲವು ದಿನಗಳ ಹಿಂದೆ ಚಂದನಾ ಅವರನ್ನು ಅಪ್ಪಿಕೊಂಡು ಮುತ್ತು ನೀಡಿದ್ದರು. ಆದರೆ ಈಗ ಕಿಶನ್ ಮತ್ತೊಬ್ಬ ಸ್ಪರ್ಧಿಗೆ ಮುತ್ತು ಕೊಟ್ಟಿದ್ದಾರೆ.

    ಸ್ಪರ್ಧಿಗಳಾದ ಭೂಮಿ ಶೆಟ್ಟಿ, ಕಿಶನ್, ಜೈ ಜಗದೀಶ್, ಪ್ರಿಯಾಂಕಾ, ಫೃಥ್ವಿ, ರಾಜು ತಾಳಿಕೋಟೆ, ಕುರಿ ಪ್ರತಾಪ್, ಹರೀಶ್ ರಾಜ್ ಮತ್ತು ಚಂದನ್ ಆಚಾರ್ ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಯಾರು ಬರುತ್ತಾರೆ ಎಂದು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಪ್ರಿಯಾಂಕಾ, ವೈಲ್ಡ್ ಕಾರ್ಡ್ ಮೂಲಕ ಹುಡುಗಿ ಬಂದರೆ ಕಿಶನ್ ಮುತ್ತು ಕೊಡಬೇಕು ಎಂದು ಹೇಳಿದ್ದಾರೆ. ಇದ್ದನ್ನೂ ಓದಿ: ಚಂದನಾ ಕೆನ್ನೆಗೆ ಮುತ್ತು ಕೊಟ್ಟ ಕಿಶನ್

    ಈ ಬಗ್ಗೆ ಮಾತನಾಡಿದ ಪ್ರಿಯಾಂಕಾ, ಈ ಮನೆಯಲ್ಲಿ ಎಲ್ಲಾ ಹುಡುಗಿಯರಿಗೂ ಮುತ್ತು ಕೊಟ್ಟಿದ್ದೀರಿ ಅಲ್ವಾ. ಚಂದನಾ, ಭೂಮಿ, ದೀಪಿಕಾ, ರಶ್ಮಿ, ಸುಜಾತ, ಚೈತ್ರಾ ವಾಸುದೇವನ್ ಹಾಗೂ ಚೈತ್ರಾ ಕೊಟ್ಟೂರು ಅವರಿಗೆ ಕಿಸ್ ಮಾಡಿದ್ದೀರಾ ಎಂದು ಕೇಳಿದರು. ಆಗ ಕಿಶನ್ ಸುಜಾತಾ ಅವರಿಗೆ ನಾನು ಮುತ್ತು ಕೊಟ್ಟಿಲ್ಲ. ಆದರೆ ದೀಪಿಕಾ ಅವರಿಗೆ ಮುತ್ತು ಕೊಡುವುದು ತುಂಬಾ ಕಷ್ಟವಾಯಿತು. ಆದರೂ ಅವರಿಗೂ ಕೊಟ್ಟಿದ್ದೀನಿ ಎಂದರು. ಇದ್ದನ್ನೂ ಓದಿ: ಚಂದನಾಗೆ ಕಿಸ್ ಕೊಡು ಎಂದ ಶೈನ್ – ಓಡಿ ಹೋಗಲು ಮುಂದಾದ ವಾಸುಕಿ

    ಬಳಿಕ ಪ್ರಿಯಾಂಕಾ ಕುರಿ ಪ್ರತಾಪ್‍ಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದಾಗ ಕಿಶನ್ ಇಲ್ಲ ಕೊಟ್ಟಿಲ್ಲ ಎಂದು ಉತ್ತರಿಸಿದರು. ರಾಜು ತಾಳಿಕೋಟೆ ಮತ್ತು ಭೂಮಿ ಮಧ್ಯೆ ಕಿಶನ್ ಕುಳಿತಿದ್ದರು. ಈ ವೇಳೆ ರಾಜು ಅವರು ಕಿಶನ್‍ಗೆ ಮುತ್ತು ಕೊಟ್ಟು ಪಾಸ್ ಮಾಡು ಎಂದರು. ತಕ್ಷಣ ಕಿಶನ್, ಭೂಮಿ ಕೆನ್ನೆಗೆ ಎಲ್ಲರ ಮುಂದೆಯೇ ಕಿಸ್ ಮಾಡಿದ್ದಾರೆ. ಈ ವಿಡಿಯೋ ಟಿವಿಯಲ್ಲಿ ಪ್ರಸಾರವಾಗಿಲ್ಲ. ಅನ್‍ಸೀನ್‍ನಲ್ಲಿ ಈ ವೀಡಿಯೋವನ್ನು ನೋಡಬಹುದಾಗಿದೆ.

    ಈ ಹಿಂದೆಯೇ ಕಿಶನ್ ಚಂದನಾರನ್ನು ಅಪ್ಪಿಕೊಂಡು ಕಿಶ್ ಮಾಡಿದ್ದರು. ಒಂದು ಟಾಸ್ಕ್ ಮಾಡುವಾಗ ಚಂದನಾ, ಕಿಶನ್‍ಗೆ ಗಾಯ ಮಾಡಿದ್ದರು. ಹೀಗಾಗಿ ಎಲ್ಲರ ಜೊತೆ ಮಾತನಾಡುತ್ತಿದ್ದ ಕಿಶನ್‍ಗೆ ದೂರದಿಂದ ನಿಂತುಕೊಂಡು ಸಾರಿ ಕೇಳಿದ್ದಾರೆ. ಆಗ ಕಿಶನ್ ಚಂದನಾ ಬಳಿ ಬಂದು ಆಕೆಯನ್ನು ಅಪ್ಪಿಕೊಂಡು ಪರವಾಗಿಲ್ಲ ಬಿಡಿ ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದನ್ನು ಹರೀಶ್ ರಾಜ್ ನೋಡಿ ನಕ್ಕಿದ್ದರು. ಕೊನೆಗೆ ಮನೆಯರು ಏನಾಯ್ತು ಎಂದು ಕೇಳಿದ್ದರು. ಆಗ ಹರೀಶ್ ರಾಜ್ ಪ್ರೀತಿಯಿಂದ ಕಿಶನ್ ಚಂದನಾ ಅವರಿಗೆ ಮುತ್ತು ಕೊಟ್ಟಿದ್ದಾರೆ ಎಂದು ಹೇಳಿದ್ದರು.

  • ಚಂದನಾ ಕೆನ್ನೆಗೆ ಮುತ್ತು ಕೊಟ್ಟ ಕಿಶನ್

    ಚಂದನಾ ಕೆನ್ನೆಗೆ ಮುತ್ತು ಕೊಟ್ಟ ಕಿಶನ್

    ಬೆಂಗಳೂರು: ಬಿಗ್ ಬಾಸ್ ಸೀಸನ್-7 ಕಾರ್ಯಕ್ರಮದಲ್ಲಿ ಸ್ಪರ್ಧಿ ಡ್ಯಾನ್ಸರ್ ಕಿಶನ್ ಅವರು ಚಂದನಾ ಅವರನ್ನು ಅಪ್ಪಿಕೊಂಡು ಮುತ್ತು ನೀಡಿದ್ದಾರೆ.

    ಮಂಗಳವಾರ ಬಿಗ್‌ಬಾಸ್ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಿದ್ದು, ಇದರಲ್ಲಿ ಸ್ಪರ್ಧಿಗಳು ಸ್ಪರ್ಧಿಗಳು ಎರಡು ಗುಂಪುಗಳಾಗಿ, ಗಾಳಿಯಲ್ಲಿ ಗೋಪುರ ಕಟ್ಟಬೇಕಿತ್ತು. ಈ ಟಾಸ್ಕ್ ಮಾಡುವಾಗ ಎರಡು ಗುಂಪುಗಳ ನಡುವೆ ಜೋರಾಗಿ ಜಗಳ ನಡೆದಿದೆ.

    ಸ್ಪರ್ಧಿಗಳು ಜಗಳವಾಡುತ್ತಿರುವುದನ್ನು ನೋಡಿದ ಬಿಗ್‌ಬಾಸ್ ಕೊನೆಗೆ ಮನೆ ಮಂದಿಗೆ ಈ ಟಾಸ್ಕ್ ನಿಂದ ಸ್ಪಲ್ಪ ಬ್ರೇಕ್ ಕೊಟ್ಟಿದ್ದರು. ಈ ವೇಳೆ ಮನೆಯ ಮಂದಿ ಅಡುಗೆ ಮನೆಯಲ್ಲಿ ಕುಳಿತು ಟಾಸ್ಕ್ ವೇಳೆ ನಡೆದ ಜಗಳದ ಬಗ್ಗೆ ಮಾತನಾಡುತ್ತಿದ್ದರು.

    ಈ ಟಾಸ್ಕ್ ಮಾಡುವಾಗ ಚಂದನಾ, ಕಿಶನ್ ಅವರಿಗೆ ಗಾಯ ಮಾಡಿದ್ದರು. ಹೀಗಾಗಿ ಎಲ್ಲರ ಜೊತೆ ಮಾತನಾಡುತ್ತಿದ್ದ ಕಿಶನ್‌ಗೆ ದೂರದಿಂದ ನಿಂತುಕೊಂಡು ‘ಸಾರಿ’ ಕೇಳಿದ್ದಾರೆ. ಚಂದನಾ ಕ್ಷಮೆ ಕೇಳುತ್ತಿದ್ದಂತೆ ಅವರ ಬಳಿ ಬಂದಿದ್ದಾರೆ.

    ಚಂದನಾರ ಬಳಿ ಬಂದ ಕಿಶನ್ ಅಪ್ಪಿಕೊಂಡು ಪರವಾಗಿಲ್ಲ ಬಿಡಿ ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದನ್ನು ಹರೀಶ್ ರಾಜ್ ನೋಡಿ ನಕ್ಕಿದ್ದಾರೆ. ಕೊನೆಗೆ ಮನೆಯರು ಏನಾಯ್ತು ಎಂದು ಕೇಳಿದ್ದಾರೆ. ಆಗ ಹರೀಶ್ ರಾಜ್ ಪ್ರೀತಿಯಿಂದ ಕಿಶನ್, ಚಂದನಾ ಅವರಿಗೆ ಮುತ್ತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

    ನಾಲ್ಕನೇ ವಾರ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ರಾಜ ತಾಳಿಕೋಟೆ, ಚಂದನ್ ಆಚಾರ್, ಚೈತ್ರಾ ಕೊಟ್ಟೂರು ಮತ್ತು ದೀಪಿಕಾ ದಾಸ್ ನಾಮಿನೇಟ್ ಆಗಿದ್ದಾರೆ.

  • ಜೈ ಜಗದೀಶ್ ಬಳಿ ಕ್ಷಮೆ ಕೇಳಿದ ಕಿಶನ್

    ಜೈ ಜಗದೀಶ್ ಬಳಿ ಕ್ಷಮೆ ಕೇಳಿದ ಕಿಶನ್

    ಬೆಂಗಳೂರು: ಬಿಗ್ ಬಾಸ್ ಸೀಸನ್-7ನ ಸ್ಪರ್ಧಿ ಡ್ಯಾನ್ಸರ್ ಕಿಶನ್ ಹಿರಿಯ ನಟ ಜೈ ಜಗದೀಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ.

    ಕಿಶನ್ ಸೋಮವಾರ ಜೈ ಜಗದೀಶ್ ಅವರ ಜೊತೆ ಜಗಳವಾಡಿದ್ದರು. ಇದಾದ ಬಳಿಕ ಮನೆಯ ಸದಸ್ಯರು ಹಿರಿಯರನ್ನು ಎಲ್ಲರ ಮುಂದೆ ಈ ರೀತಿ ಪ್ರಶ್ನಿಸಬಾರದು ಇದು ಅವರನ್ನು ಅವಮಾನ ಮಾಡಿದಂತೆ ಎಂದು ಕಿಶನ್ ಬಳಿ ಹೇಳಿದ್ದರು. ಹೀಗಾಗಿ ಕಿಶನ್ ಮಂಗಳವಾರ ಜೈ ಜಗದೀಶ್ ಅವರ ಬಳಿ ಹೋಗಿ ಕ್ಷಮೆ ಕೇಳಿದ್ದಾರೆ.

    ಜೈ ಜಗದೀಶ್ ಅಡುಗೆ ಮನೆಯಲ್ಲಿದ್ದ ವೇಳೆ ಕಿಶನ್ ನಾನು ಆ ರೀತಿ ಮಾತನಾಡಬಾರದಿತ್ತು. ನನ್ನನ್ನು ಕ್ಷಮಿಸಿ. ಈ ವಿಷಯ ಇಷ್ಟು ದೊಡ್ಡದಾಗುತ್ತೆ ಎಂದು ನನಗೆ ತಿಳಿದಿರಲಿಲ್ಲ. ನಾನು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದು ಹೇಳಿದ್ದಾರೆ.

    ಕಿಶನ್ ಮಾತು ಕೇಳಿದ ಜೈ ಜಗದೀಶ್ ಅವರು ನೀನು ನನ್ನನ್ನು ಪ್ರಶ್ನೆ ಮಾಡಬೇಕೆಂದರೆ ಪ್ರತ್ಯೇಕವಾಗಿ ಕರೆದು ಕೇಳಬೇಕಿತ್ತು. ಅದನ್ನು ಬಿಟ್ಟು ಎಲ್ಲರ ಮುಂದೆ ಕೇಳಿ ನನಗೆ ಅವಮಾನ ಮಾಡಿದೆ. ಈಗ ಬಂದು ಕ್ಷಮೆ ಕೇಳುತ್ತಿದ್ದೀಯಾ. ಸರಿ ಎಂದು ಜೈ ಜಗದೀಶ್ ಕೋಪದಲ್ಲಿಯೇ ಪ್ರತಿಕ್ರಿಯಿಸಿದರು.

    ಕಿಶನ್ ಕ್ಷಮೆ ಕೇಳುತ್ತಿದ್ದಂತೆ ಮನೆಯಲ್ಲಿದ್ದ ಸದಸ್ಯರು ಎಲ್ಲವನ್ನು ಮರೆತು ಆತನನ್ನು ಕ್ಷಮಿಸಿ ಎಂದು ಜೈ ಜಗದೀಶ್ ಅವರಿಗೆ ಹೇಳಿದ್ದಾರೆ. ಮನೆಯ ಸದಸ್ಯರ ಮಾತು ಕೇಳಿ ಜೈ ಜಗದೀಶ್, ಕಿಶನ್‍ನನ್ನು ಕ್ಷಮಿಸಿದ್ದಾರೆ.

    ಕಿಶನ್ ಹೇಳಿದ್ದೇನು?
    ಸೋಮವಾರ ಕಿಶನ್, ಜೈ ಜಗದೀಶ್ ಅವರ ಬಳಿ ಹೋಗಿ ನೀವು ಎಲ್ಲರನ್ನು ಕೆಟ್ಟದಾಗಿ ನಿಂದಿಸುತ್ತೀರಿ. ತುಂಬಾ ಜನಕ್ಕೆ ಬೇಜಾರು ಮಾಡಿದ್ದೀರಿ. ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಜೈ ಜಗದೀಶ್ ವಿರುದ್ಧ ಗರಂ ಆಗಿದ್ದರು. ಈ ವೇಳೆ ಜಗದೀಶ್ ನೀನು ಇಷ್ಟು ದಿನ ಇರಲಿಲ್ಲ. ನಾನು ಯಾರಿಗೂ ಬೇಜಾರು ಮಾಡಿಲ್ಲ. ನಾನು ನೇರವಾಗಿ ಎಲ್ಲರ ಜೊತೆ ಮಾತನಾಡುತ್ತೇನೆ. ನೀನು ಇಷ್ಟು ದಿನಗಳಿಂದ ಇಲ್ಲಿ ಇರಲಿಲ್ಲ. ಹಾಗಾಗಿ ನಿನಗೆ ಸಂಪೂರ್ಣ ವಿಷಯ ಗೊತ್ತಿಲ್ಲ. ನೀನು ನನಗೆ ಬುದ್ಧಿ ಹೇಳಲು ಬರಬೇಡ ಎಂದು ಜೈ ಜಗದೀಶ್ ಕೋಪದಲ್ಲಿಯೇ ಉತ್ತರಿಸಿದ್ದರು.

  • ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ

    ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್-7’ ಶುರುವಾಗಿ ಎರಡು ವಾರಗಳಾಗಿದೆ. ಈಗಾಗಲೇ ಮನೆಯಲ್ಲಿ ಜಗಳ ಶುರುವಾಗಿದ್ದು, ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ ಆಗಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿಗಳು ಮನೆಯ ಹೊರಗೆ ಕುಳಿತಿರುತ್ತಾರೆ. ಈ ವೇಳೆ ಕಿಶನ್, ಜೈ ಜಗದೀಶ್ ಅವರ ಬಳಿ ಹೋಗಿ ನೀವು ಎಲ್ಲರನ್ನು ಕೆಟ್ಟದಾಗಿ ನಿಂದಿಸುತ್ತೀರಿ. ತುಂಬಾ ಜನಕ್ಕೆ ಬೇಜಾರು ಮಾಡಿದ್ದೀರಿ. ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಜೈಜಗದೀಶ್ ವಿರುದ್ಧ ಗರಂ ಆಗಿದ್ದಾರೆ.

    ಈ ವೇಳೆ ಜಗದೀಶ್ ನೀನು ಇಷ್ಟು ದಿನ ಇರಲಿಲ್ಲ. ನಾನು ಯಾರಿಗೂ ಬೇಜಾರು ಮಾಡಿಲ್ಲ. ನಾನು ನೇರವಾಗಿ ಎಲ್ಲರ ಜೊತೆ ಮಾತನಾಡುತ್ತೇನೆ. ನೀನು ಇಷ್ಟು ದಿನಗಳಿಂದ ಇಲ್ಲಿ ಇರಲಿಲ್ಲ. ಹಾಗಾಗಿ ನಿನಗೆ ಸಂಪೂರ್ಣ ವಿಷಯ ಗೊತ್ತಿಲ್ಲ. ನೀನು ನನಗೆ ಬುದ್ಧಿ ಹೇಳಲು ಬರಬೇಡ ಎಂದು ಜೈ ಜಗದೀಶ್ ಕೋಪದಲ್ಲಿಯೇ ಉತ್ತರಿಸಿದ್ದಾರೆ.

    ಬಳಿಕ ಚೈತ್ರ ವಾಸುದೇವ್ ಅವರು ಕೂಡ ಕಣ್ಣೀರು ಹಾಕಿ, ನಾನು ಊಟಕ್ಕೆಂದು ಬಂದಿಲ್ಲ. ಬೇರೆಯವರ ಬಳಿ ನಾನು ಕಿತ್ತುಕೊಂಡು ತಿಂದಿಲ್ಲ. ನಾನು ತಿನ್ನುವುದಕ್ಕೆ ಬಂದಿರಲಿಲ್ಲ. ಕೆಲಸ ಹುಡುಕುತ್ತಿದ್ದೆ. ನಾನು ಕೇವಲ ಬಿಸ್ಕೇಟ್ ನೋಡುತ್ತಿದ್ದೆ. ಅದನ್ನು ತಿನ್ನಲು ಹೋಗಲಿಲ್ಲ ಎಂದು ಹೇಳಿದ್ದಾರೆ.

    ಕಿಶನ್ ಹಾಗೂ ಜೈ ಜಗದೀಶ್ ನಡುವೆ ಜಗಳ ಜಾಸ್ತಿ ಆಗುತ್ತಿದ್ದಂತೆ ನಟ ಹರೀಶ್ ರಾಜ್, ಸುಜಾತ ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಕಿಶನ್ ಜಗಳವಾಡುತ್ತಿರುವುದನ್ನು ನೋಡಿ ಹರೀಶ್, ಇದು ಜೈ ಜಗದೀಶ್ ಅವರ ಆಡುಭಾಷೆ. ನಿನಗೆ ಹಾಗೆ ಅನಿಸಿರಬಹುದು ಎಂದು ಕಿಶನ್ ಹಾಗೂ ಜೈ ಜಗದೀಶ್ ಅವರನ್ನು ಸಮಾಧಾನಪಡಿಸಿದ್ದಾರೆ.

    ಗಲಾಟೆಯ ಬಳಿಕ ಅಡುಗೆ ವಿಭಾಗದಲ್ಲಿದ್ದ ಜೈ ಜಗದೀಶ್ ಅವರು ಈ ವಾರದ ಕ್ಯಾಪ್ಟನ್ ಆಗಿದ್ದ ರಶ್ಮಿ ಅವರನ್ನು ಕರೆದಿದ್ದಾರೆ. ರಶ್ಮಿ ಅವರನ್ನು ಕರೆದು ನನಗೆ ಅಡುಗೆ ಡಿಪಾರ್ಟ್ ಮೆಂಟ್ ಬೇಡ. ನನಗೆ ಬೇರೆ ಡಿಪಾರ್ಟ್ ಮೆಂಟ್ ಬೇಕು ಎಂದು ಹೇಳಿದ್ದಾರೆ.

  • ಬಿಗ್ ಮನೆಯಿಂದ ಹೊರಬಂದ ಸ್ಪರ್ಧಿ ಕಿಶನ್

    ಬಿಗ್ ಮನೆಯಿಂದ ಹೊರಬಂದ ಸ್ಪರ್ಧಿ ಕಿಶನ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್ ಸೀಸನ್-7’ ಕಾರ್ಯಕ್ರಮ ಶುರುವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಆದರೆ ಇಷ್ಟು ಬೇಗ ಡ್ಯಾನ್ಸರ್ ಕಿಶನ್ ಬಿಗ್‍ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

    ಕಿಶನ್ ಬಿಗ್ ಬಾಸ್ ಮನೆಯಿಂದ ಶುಕ್ರವಾರ ಹೊರ ಹೋಗಿದ್ದಾರೆ. ಆದರೆ ಅವರು ಔಟಾಗಿ ಹೊರ ಹೋಗಿಲ್ಲ ಬದಲಾಗಿ ಚಿಕಿತ್ಸೆ ಪಡೆಯಲು ಹೊರ ಹೋಗಿದ್ದಾರೆ. ಕಿಶನ್ ಜಾಂಡೀಸ್‍ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ.

    ಶುಕ್ರವಾರ ರಾತ್ರಿ ಬಿಗ್‍ ಬಾಸ್ ಕೊಟ್ಟಿದ್ದ ಟಾಸ್ಕ್ ಅನ್ನು ಮುಗಿಸಿದ ಕಿಶನ್ ಕನ್ಫೇಶನ್ ರೂಮಿಗೆ ಹೋಗಿದ್ದಾರೆ. ಈ ವೇಳೆ ಬಿಗ್‍ಬಾಸ್ ಅವರಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವಂತೆ ಹೇಳಿ ಜಾಂಡೀಸ್ ಕುರಿತ ಹೆಚ್ಚಿನ ತಪಾಸಣೆಗಾಗಿ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ.

    ಕಿಶನ್‍ಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ಹೀಗಾಗಿ ನಾಲ್ಕನೇ ದಿನದ ರಾತ್ರಿ ಡ್ಯಾನ್ಸರ್ ಕಿಶನ್ ರನ್ನ `ಬಿಗ್ ಬಾಸ್’ ಆಸ್ಪತ್ರೆಗೆ ಕಳುಹಿಸಿದ್ದಾರೆ. ಒಂದು ವೇಳೆ ಕಿಶನ್‍ಗೆ ಜಾಂಡೀಸ್ ಹೆಚ್ಚಾಗಿದ್ದರೆ, ಶೋನಲ್ಲಿ ಮುಂದುವರಿಯುವುದು ಕಷ್ಟವಾಗಬಹುದು. ಕಿಶನ್ ಮೊದಲ ವಾರವೇ ಸೇಫ್ ಆಗಿದ್ದಾರೆ.