Tag: ಕಿಶನ್

  • ‘ಪೆನ್‌ ಡ್ರೈವ್‌’ಗಾಗಿ ಕಿಶನ್ ಜೊತೆ ಜಬರ್ದಸ್ತ್ ಕುಣಿದ ತನಿಷಾ ಕುಪ್ಪಂಡ

    ‘ಪೆನ್‌ ಡ್ರೈವ್‌’ಗಾಗಿ ಕಿಶನ್ ಜೊತೆ ಜಬರ್ದಸ್ತ್ ಕುಣಿದ ತನಿಷಾ ಕುಪ್ಪಂಡ

    ರ್‌ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ ‘ಬಿಗ್ ಬಾಸ್’ ಖ್ಯಾತಿಯ ತನಿಷಾ ಕುಪ್ಪಂಡ, ಕಿಶನ್ ಹಾಗೂ ಕನಸಿನ ರಾಣಿ ಮಾಲಾಶ್ರೀ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ‘ಪೆನ್ ಡ್ರೈವ್’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ವಿ.ನಾಗೇಂದ್ರಪ್ರಸಾದ್ ಹಾಡುಗಳನ್ನು ಬರೆದು ಸಂಗೀತ ನೀಡಿದ್ದಾರೆ. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಪದಾಧಿಕಾರಿಗಳಾದ ಶಿಲ್ಪ ಶ್ರೀನಿವಾಸ್, ಕುಶಾಲ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

    ‘ಪೆನ್ ಡ್ರೈವ್’ ಆರಂಭವಾಗಲು ನಿರ್ಮಾಪಕ ಲಯನ್ ವೆಂಕಟೇಶ್ ಕಾರಣ. ಅನಂತರ ಹನುಮಂತರಾಜು ಅವರು ನಿರ್ಮಾಣಕ್ಕೆ ಸಾಥ್ ನೀಡಿದರು. ನಿರ್ಮಾಪಕರು ಹಾಗೂ ಚಿತ್ರತಂಡದ ಸಹಕಾರದಿಂದ ಅಂದುಕೊಂಡ ಹಾಗೆ ಸಿನಿಮಾ ಮೂಡಿಬಂದಿದೆ. ವಿ.ನಾಗೇಂದ್ರಪ್ರಸಾದ್ ಸಂಗೀತ ನೀಡಿರುವ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿದೆ. ನನ್ನ ಹಿಂದಿನ ಚಿತ್ರಗಳಲ್ಲೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರವಿತ್ತು. ಇದರಲ್ಲೂ ಜನರು ಅದನ್ನು ನಿರೀಕ್ಷಿಸಬಹುದು. ‘ಪೆನ್ ಡ್ರೈವ್’, ಕಳೆದ ವರ್ಷ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದ ಪದ. ನಮ್ಮ ಚಿತ್ರಕ್ಕೆ ಈ ಶೀರ್ಷಿಕೆಯಿಟ್ಟ ಮೇಲೆ ಅನೇಕ ಅನಾಮಾಧೇಯ ಕರೆಗಳನ್ನು ಸ್ವೀಕರಿಸಿದ್ದೇನೆ. ಈ ಶೀರ್ಷಿಕೆ ಇಟ್ಟಿದ್ದು ಏಕೆ? ಎಂಬ ಪ್ರಶ್ನೆಯನ್ನು ಸಾಕಷ್ಟು ಜನ ಕೇಳಿದ್ದಾರೆ. ಸಾಕಷ್ಟು ಅಡೆತಡೆಗಳನ್ನು ದಾಟಿ ನಮ್ಮ ಚಿತ್ರ ಜುಲೈ 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ ಎಂದರು ನಿರ್ದೇಶಕ ಸೆಬಾಸ್ಟಿನ್ ಡೇವಿಡ್. ಇದನ್ನೂ ಓದಿ: ಟಾಕ್ಸಿಕ್ ನಟಿಗಾಗಿ ಬೆಂಗಳೂರಿನಿಂದ ಮುಂಬೈಗೆ ಲೊಕೇಶನ್ ಶಿಫ್ಟ್ !

    ನಾನು ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ. ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ್ದೇನೆ. ಕಿಶನ್ ಅವರ ಜೊತೆಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದೇನೆ ಎಂದು ನಟಿ ತನಿಷಾ ಕುಪ್ಪಂಡ ತಿಳಿಸಿದರು. ‘ಬಿಗ್ ಬಾಸ್’ ನಂತರ ನಾನು ನಟಿಸಿರುವ ಮೊದಲ ಚಿತ್ರವಿದು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಟ ಕಿಶನ್.

    ಹಾಡು ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಿರ್ಮಾಪಕರಾದ ಹನುಮಂತ ರಾಜು ಹಾಗೂ ಲಯನ್ ಎಸ್ ವೆಂಕಟೇಶ್ ಅವರು, ಚಂದನ್ ಫಿಲಂಸ್ ಮೂಲಕ ರಾಜ್ಯಾದ್ಯಂತ 150 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜುಲೈ 4 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿ. ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಎಂದರು. ಇದನ್ನೂ ಓದಿ: ಏನಿಲ್ಲ ಏನಿಲ್ಲ ಅನ್ನುತ್ತಲೇ ಒಂದೇ ಕಾರ್‌ನಲ್ಲಿ ಹೊರಟ ರಶ್ಮಿಕಾ, ದೇವರಕೊಂಡ

    ಸಂಗೀತ ನಿರ್ದೇಶಕ ಹಾಗೂ ಗೀತರಚನೆಕಾರ ವಿ.ನಾಗೇಂದ್ರಪ್ರಸಾದ್, ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿ, ಸಹ ನಿರ್ದೇಶಕ ನಾಗೇಶ್, ನಟ ಕರಿಸುಬ್ಬು, ಟೈಗರ್ ವೆಂಕಟೇಶ್ ಮುಂತಾದವರು ‘ಪೆನ್ ಡ್ರೈವ್’ ಕುರಿತು ಮಾತನಾಡಿದರು.

  • ನಮ್ರತಾ ಗೌಡ ಜೊತೆ ಕಿಶನ್ `ನವಿಲೇ’ ಡ್ಯಾನ್ಸ್

    ನಮ್ರತಾ ಗೌಡ ಜೊತೆ ಕಿಶನ್ `ನವಿಲೇ’ ಡ್ಯಾನ್ಸ್

    ಟಿಯರ ಜೊತೆ ಡ್ಯಾನ್ಸ್ ರೀಲ್ಸ್ ಮಾಡುವ ಡ್ಯಾನ್ಸರ್ ಕಿಶನ್ (Kishan) ಈಗ ಲಾಂಗ್ ಗ್ಯಾಪ್ ಆದ್ಮೇಲೆ ಮತ್ತೆ ನಮ್ರತಾ ಗೌಡ (Namratha Gowda) ಜೊತೆ ಸೇರಿ ರೀಲ್ಸ್ (Reels) ಮಾಡಿದ್ದಾರೆ. ಅಚ್ಚುಕಟ್ಟಾಗಿ ಪ್ಲ್ಯಾನ್‌ ಮಾಡಿ ರೀಲ್ಸ್ ಮಾಡುವ ಡ್ಯಾನ್ಸಿಂಗ್ ಜೋಡಿ ಇದು. ಇವ್ರಿಬ್ಬರ ಹಿಂದಿನ ರೀಲ್ಸ್‌ಗಳು ಭರ್ಜರಿ ಹಿಟ್ ಆಗಿದ್ವು. ಇದೀಗ ಬಹಳ ಗ್ಯಾಪ್ ಬಳಿಕ ರವಿಚಂದ್ರನ್ (Ravichandran) ಅವರ ಫೇಮಸ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಬಿಗ್ ಅಪ್‌ಡೇಟ್

     

    View this post on Instagram

     

    A post shared by Kishen Bilagali (@kishenbilagali)


    ಕಲಾವಿದ ಚಿತ್ರದ `ಹೇ ನವಿಲೇ ಹೆಣ್ಣವಿಲೇ’ ಹಾಡಿಗೆ ಸೊಗಸಾಗಿ ಹೆಜ್ಜೆ ಹಾಕಿದ ಜೋಡಿ ರೊಮ್ಯಾಂಟಿಕ್ ಆಗಿ ಕಾಣಿಸ್ಕೊಂಡಿದೆ. ಕತ್ತಲೆಯ ಬೆಳಕಿನಲ್ಲಿ ಸುಂದರವಾದ ಬ್ಯಾಕ್‌ಗ್ರೌಂಡ್ ಮಧ್ಯೆ ನಟಿ ನಮ್ರತಾ ಗೌಡ ಹಾಗೂ ಕಿಶನ್ ಹಿಟ್ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಇದನ್ನೂ ಓದಿ: `ಮನೆ ಒಳಗೆ ಬಿಟ್ಟುಕೊಳ್ತಿಲ್ಲ ಪತ್ನಿ’ – ಪೊಲೀಸರ ಮೊರೆ ಹೋದ ಜಯಂ ರವಿ

    ಬಿಳಿ ಸೀರೆಯುಟ್ಟು ನಮ್ರತಾ ಗೌಡ ಕಂಗೊಳಿಸಿದ್ದಾರೆ. ಕುಣಿಯುವ ನಮಿಲುಗಳ ಡಾನ್ಸ್‌ ರೀಲ್ಸ್‌ಗೆ ಅಪ್‌ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಭರ್ಜರಿ ವೀವ್ಸ್ ಕೂಡ ಬರ್ತಿದೆ. ಈ ಹಿಂದೆ ನಮ್ರತಾ ಹಾಗೂ ಕಿಶನ್ ಸೇರಿ ರೀಲ್ಸ್ ಮಾಡಿರುವ 90ರ ದಶಕದ ಹಿಟ್ ಪ್ರೇಮಗೀತೆಗಳಿಗೆ ಭರ್ಜರಿ ಹೊಗಳಿಕೆ ಬಂದ ಬೆನ್ನಲ್ಲೇ ಜೋಡಿ ಅದೇ ಕಾಯಕ ಮುಂದುವರೆಸಿದೆ.

     

  • ಕಿಶನ್ ಕಣ್ಣೀರು ಹಾಕ್ತಿದ್ದಂತೆ ಜಾಕೆಟ್ ಬಿಚ್ಚಿ ಕೊಟ್ಟ ಕಿಚ್ಚ

    ಕಿಶನ್ ಕಣ್ಣೀರು ಹಾಕ್ತಿದ್ದಂತೆ ಜಾಕೆಟ್ ಬಿಚ್ಚಿ ಕೊಟ್ಟ ಕಿಚ್ಚ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ಡ್ಯಾನ್ಸರ್ ಕಿಶನ್ ವೇದಿಕೆಯ ಮೇಲೆ ಕಣ್ಣೀರು ಹಾಕಿದ ತಕ್ಷಣ ನಟ ಸುದೀಪ್ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಗಿಫ್ಟ್ ಆಗಿ ಕೊಟ್ಟಿದ್ದಾರೆ.

    ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವು ವಾರಗಳಲ್ಲಿ ಫೈನಲ್ ಹಂತ ತಲುಪಲಿದೆ. ಈ ವಾರ ಬಿಗ್‍ಬಾಸ್ ಮನೆಯಿಂದ ಡ್ಯಾನ್ಸರ್ ಕಿಶನ್ ಹೊರ ಬಂದಿದ್ದಾರೆ. ಈ ವೇಳೆ ಕಿಶನ್ ವೇದಿಕೆಯಲ್ಲಿ ತಮ್ಮ ಬಿಗ್‍ಬಾಸ್ ಜರ್ನಿಯ ವಿಡಿಯೋವನ್ನು ನೋಡಿದ್ದಾರೆ. ಅದನ್ನು ನೀಡಿದ ತಕ್ಷಣ ಕಿಶನ್ ಕಣ್ಣೀರು ಹಾಕಿದ್ದಾರೆ. ಆಗ ಸುದೀಪ್ ಅವರನ್ನು ಅಪ್ಪಿಕೊಂಡು ಸಮಾಧಾನ ಮಾಡಿದ್ದಾರೆ.

    ಈ ವೇಳೆ ಮಾತನಾಡಿದ ಕಿಶನ್, “ಸ್ವಲ್ಪ ಬೇಜಾರುತ್ತಿದೆ, ಪ್ರತಿಯೊಂದು ದಿನವೂ ಚೆನ್ನಾಗಿ ಆಡಿದ್ದೀನಿ ತುಂಬಾ ಸಂತಸವಾಗಿದೆ. ಬಿಗ್‍ಬಾಸ್ ಮನೆಯಲ್ಲಿ ನನ್ನನ್ನು ನಾನೇ ಅರ್ಥ ಮಾಡಿಕೊಂಡೆ. ಕುಟುಂಬ ಅಂದರೆ ಏನು ಅಂತ ಅರ್ಥವಾಯಿತು. ಬಿಗ್‍ಬಾಸ್ ಮನೆಯಲ್ಲಿ ಮಾತನಾಡುವುದು ತುಂಬಾ ಮುಖ್ಯ ಅನ್ನಿಸುತ್ತದೆ. ಹೇಗೆ ಮಾತನಾಡುತ್ತಾರೆ ಎಂಬುದು ಮುಖ್ಯ ಆಗುತ್ತದೆ. ಅದು ಶೈನ್ ಶೆಟ್ಟಿಗೆ ಗೊತ್ತಿತ್ತು” ಎಂದರು.

    ನನಗೆ ಇಷ್ಟು ದಿನ ಹೇಗೆ ಮುಗಿಯಿತು ಎಂಬುದೇ ಗೊತ್ತಾಗಲಿಲ್ಲ. ಈ ಮನೆಗೆ ಏನು ಬೇಕೋ ಅದನ್ನು ನಾನು 100 ಪರ್ಸೆಂಟ್ ಕೊಟ್ಟಿದ್ದೀನಿ. ತುಂಬಾನೆ ಸಾಧನೆ ಮಾಡಿದ್ದೀನಿ. ಏನನ್ನು ಮಿಸ್ ಮಾಡಿಕೊಂಡಿಲ್ಲ. ಮನೆಯಲ್ಲಿ ನಾನು ನಾನಾಗಿ, ಪ್ರಾಮಾಣಿಕವಾಗಿದ್ದೆ. ಈ ಮನೆಯಲ್ಲಿ ನಾನು ಎಲ್ಲರಿಗೂ ಪ್ರೀತಿ ಕೊಟ್ಟಿದ್ದೀನಿ. ಆದರೆ ಅವರಿಂದ ಅಷ್ಟೇ ಪ್ರೀತಿ ಸಿಕ್ಕಿಲ್ಲ ಎಂದರು.

    ನಮ್ಮ ತಂದೆ ಬಂದಿದ್ದು ನನಗೆ ಖುಷಿ ಆಯಿತು. ನನಗೆ ಬಟ್ಟೆ ಎಂದರೆ ಇಷ್ಟ, ಪ್ರಿಯಾಂಕಾಗೆ ಜಾಕೆಟ್ ಕೊಟ್ಟಾಗ ಎಮೋಷನಲ್ ಆದೆ ಎಂದು ಕಣ್ಣೀರು ಹಾಕಿದರು. ತಕ್ಷಣ ಸುದೀಪ್ ವೇದಿಕೆ ಮೇಲೆ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಕಿಶನ್‍ಗೆ ಹಾಕಿದ್ದಾರೆ. ನಂತರ ಕಿಶನ್ ತೊಟ್ಟಿದ್ದ ಜಾಕೆಟ್ ಅನ್ನು ಸುದೀಪ್ ಹಾಕಿಕೊಂಡರು. ಕೊನೆಗೆ ಆ ಜಾಕೆಟ್ ನಿಮಗೆ ಗಿಫ್ಟ್ ಎಂದು ಸುದೀಪ್ ಹೇಳಿದರು.

  • ಎಲಿಮಿನೇಟ್ ಮುನ್ನ ಕಿಚ್ಚನಿಂದ ಕಿಶನ್‍ಗೆ ಕ್ಲಾಸ್

    ಎಲಿಮಿನೇಟ್ ಮುನ್ನ ಕಿಚ್ಚನಿಂದ ಕಿಶನ್‍ಗೆ ಕ್ಲಾಸ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವು ವಾರಗಳಲ್ಲಿ ಫೈನಲ್ ಹಂತ ತಲುಪಲಿದೆ. ಈ ವಾರ ಬಿಗ್‍ಬಾಸ್ ಮನೆಯಿಂದ ಡ್ಯಾನ್ಸರ್ ಕಿಶನ್ ಹೊರ ಬಂದಿದ್ದಾರೆ. ಆದರೆ ಕಿಶನ್ ಎಲಿಮಿನೇಟ್ ಆಗುವ ಮುನ್ನ ಸುದೀಪ್ ಕ್ಲಾಸ್ ತೆಗೆದುಕೊಂಡರು.

    ಕಿಶನ್ ಬಿಗ್‍ಬಾಸ್ ಮನೆಗೆ ಬಂದಾಗಿನಿಂದ ತಮಾಷೆ ಮಾಡಿಕೊಂಡು, ಹುಡುಗಿಯರಿಗೆ ಮುತ್ತು ಕೊಟ್ಟುಕೊಂಡು ಚೆನ್ನಾಗಿ ಆಟವಾಡುತ್ತಿದ್ದರು. ಅಷ್ಟೇ ಅಲ್ಲದೇ ಈ ವಾರ ಉತ್ತಮವಾಗಿ ಆಟವಾಡಿ ಗೋಲ್ಡ್ ಮೆಡಲ್ ಕೂಡ ಪಡೆದುಕೊಂಡಿದ್ದರು. ಆದರೆ ಅನಿರೀಕ್ಷಿತವಾಗಿ ಈ ವಾರ ಕಿಶನ್ ಮನೆಯಿಂದ ಹೊರ ಬಂದಿದ್ದಾರೆ. ಎಲಿಮಿನೇಟ್ ಆಗುವ ಮುನ್ನ ಕಿಶನ್‍ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು.

    ಈ ವಾರ ಕಿಶನ್ ಆಟವಾಡುವಾಗ ಜೋರಾಗಿ ಭೂಮಿಯನ್ನು ತಳ್ಳಿದ್ದರು. ಇದರಿಂದ ಭೂಮಿ ಕಾಲಿಗೆ ಪೆಟ್ಟಾಯಿತು. ಆದರೆ ಕೂದಲೆಳೆ ಅಂತರದಲ್ಲಿ ಭೂಮಿ ದೊಡ್ಡ ಅಪಾಯದಿಂದ ಪಾರಾಗಿದ್ದರು. ಈ ಬಗ್ಗೆ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ಗೆಲ್ಲುವುದಕ್ಕೆ ಏನ್ ಬೇಕೋ ಅದನ್ನು ಮಾಡಿ. ಆಟವಾಡೋದಕ್ಕೆ ಅಂತಾ ಅಷ್ಟು ದೊಡ್ಡ ಬೌಂಡರಿ ಕೊಟ್ಟಿದ್ದರು. ಆದರೆ ನೀವು ತಳ್ಳಿದ್ದು ತಪ್ಪು. ಈ ರೀತಿ ಆಟವಾಡಿದರೆ ನಾವು ಬೇರೆ ಯಾವ ರೀತಿಯ ಗೇಮ್ ಕೊಡಬೇಕು ಎಂದು ಯೋಚನೆ ಮಾಡಬೇಕಾಗುತ್ತದೆ.

    ಟಾಸ್ಕ್ ಆಡುವಾಗ ಅಗ್ರೆಷನ್ ಬೇಕೆಬೇಕು. ಆದರೆ ನಿಮ್ಮ ಜೀವಕ್ಕೆ ಅಪಾಯ ಮಾಡಿಕೊಳ್ಳುವ ಹಂತಕ್ಕೆ ಬೇಡ ಎಂದು ಕಿಶನ್‍ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಆಗ ಕಿಶನ್ ಕ್ಷಮೆ ಕೇಳಿದ್ದಾರೆ. ಅದಕ್ಕೆ ತಪ್ಪು ಮಾಡಿದರೆ ಮಾತ್ರ ಕಲಿಯಬಹುದು. ಆದರೆ ಮಾಡಿದ ತಪ್ಪನ್ನೇ ರಿಪೀಟ್ ಮಾಡಬೇಡಿ, ಹೊಸ ತಪ್ಪು ಮಾಡಿ. ಆದರೆ ನೀವು ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತಿದ್ದೀರಾ ಎಂದು ಸುದೀಪ್ ಕಿಶನ್‍ಗೆ ಕ್ಲಾಸ್ ತೆಗೆದುಕೊಂಡರು.

  • ಬಿಗ್ ಮನೆಯಲ್ಲಿ ಶೈನ್ ಹೀರೋ- ವಿಲನ್ ಆದ ಕಿಶನ್

    ಬಿಗ್ ಮನೆಯಲ್ಲಿ ಶೈನ್ ಹೀರೋ- ವಿಲನ್ ಆದ ಕಿಶನ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ಒಂದು ಸಿನಿಮಾ ಮಾಡಿದರೆ, ಹೀರೋ ಆಗಿ ಶೈನ್ ಆಯ್ಕೆಯಾಗಿದ್ದಾರೆ. ಇನ್ನೂ ಅದೇ ಸಿನಿಮಾಗೆ ವಿಲನ್ ಆಗಿ ಡ್ಯಾನ್ಸರ್ ಕಿಶನ್ ಆಯ್ಕೆಯಾಗಿದ್ದಾರೆ.

    ಬಿಗ್‍ಬಾಸ್ ಈ ವಾರ ಸ್ಪರ್ಧಿಗಳಿಗೆ ಒಂದು ಗೇಮ್ ಕೊಟ್ಟಿದ್ದಾರೆ. ಅದೇನೆಂದರೆ ಮನೆಯ ಲಿವಿಂಗ್ ಏರಿಯಾದಲ್ಲಿ ಒಂದು ಬಜಾರ್ ಇಡಲಾಗಿದೆ. ಬಿಗ್‍ಬಾಸ್ ಸೈರನ್ ಮಾಡಿದ ತಕ್ಷಣ ಯಾರು ಮೊದಲು ಆ ಬಜಾರ್ ಒತ್ತುತ್ತಾರೋ ಅವರಿಗೆ ಬಿಗ್‍ಬಾಸ್ ಒಂದು ಚಟುವಟಿಕೆ ಕೊಡುತ್ತಾರೆ. ಆ ಸ್ಪರ್ಧಿ ಬಿಗ್‍ಬಾಸ್ ನೀಡುವ ಚಟುವಟಿಕೆಯನ್ನು ಮುಗಿಸಿ, ಮನೆಯ ಇತರೆ ಸ್ಪರ್ಧಿಗಳಲ್ಲಿ ಐದು ಸ್ಪರ್ಧಿಗಳು ಲೈಕ್ ಕೊಡಬೇಕು. ಹಾಗೇ ಮಾಡಿದರೆ ಅವರಿಗೆ 100 ಪಾಯಿಂಟ್ಸ್ ಸಿಗುತ್ತದೆ.

    ಗುರುವಾರದ ಸಂಚಿಕೆಯಲ್ಲಿ ಚಂದನಾ ಬಜಾರ್ ಒತ್ತಿದ್ದರು. ಅವರಿಗೆ ಬಿಗ್‍ಬಾಸ್ ಒಂದು ಚಟುವಟಿಕೆ ಕೊಟ್ಟಿದ್ದರು. ಅದೇನಂದರೆ ಇಷ್ಟು ದಿನ ಬಿಗ್‍ಬಾಸ್ ಪ್ರಯಾಣದಲ್ಲಿ ಎಲ್ಲಾ ಸ್ಪರ್ಧಿಗಳನ್ನು ನೋಡಿದ್ದೀರಿ. ಹೀಗಾಗಿ ಒಂದು ಸಿನಿಮಾ ಮಾಡಿದರೆ ಯಾರಿಗೆ ಯಾವ ಪಾತ್ರ ಕೊಡುತ್ತೀರ ಅಂತಾ ಕಾರಣ ಸಹಿತ ವಿವರಿಸಬೇಕು ಎಂದು ಕೊಡಲಾಗಿತ್ತು. ಆಗ ಚಂದನಾ, ದೀಪಿಕಾ ಅವರು ತುಂಬಾ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುತ್ತಾರೆ ಎಂದು ಅವರಿಗೆ ಹೀರೋಯಿನ್ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಇನ್ನೂ ಹೀರೋ ಆಗಿ ಶೈನ್‍ರನ್ನು ಆಯ್ಕೆ ಮಾಡಿದ್ದಾರೆ.

    ಹೀರೋ ಸ್ನೇಹಿತನಾಗಿ ವಾಸುಕಿ ವೈಭವ್, ಹೀರೋಯಿನ್ ಸಹೋದರಿಯಾಗಿ ಪ್ರಿಯಾಂಕಾ, ಕಾಮಿಡಿಯನ್ ಆಗಿ ಕುರಿ ಪ್ರತಾಪ್, ಜ್ಯೂನಿಯರ್ ಆರ್ಟಿಸ್ಟ್ ಆಗಿ ಚಂದನ್ ಆಚಾರ್, ಅಮ್ಮನ ರೀತಿ ಕೇರ್ ಮಾಡುತ್ತಾರೆ ಎಂದು ಅಮ್ಮನ ಪಾತ್ರಕ್ಕೆ ಭೂಮಿ ಶೆಟ್ಟಿ, ಅತಿಥಿ ಪಾತ್ರಕ್ಕೆ ಹರೀಶ್ ರಾಜ್ ಮತ್ತು ವಿಲನ್ ಪಾತ್ರಕ್ಕೆ ಕಿಶನ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ರೀತಿ ಪ್ರತಿಯೊಬ್ಬರಿಗೂ ಒಂದೊಂದು ಕ್ಯಾರೆಕ್ಟರ್ ಕೊಟ್ಟಿದ್ದಾರೆ. ಸ್ಪರ್ಧಿಗಳಿಗೆ ತಮ್ಮ ಪಾತ್ರ ಇಷ್ಟವಾಗಿದ್ದು, ಎಂಟು ಮಂದಿ ಲೈಕ್ಸ್ ಕೊಟ್ಟಿದ್ದಾರೆ. ಹೀಗಾಗಿ ಬಿಗ್‍ಬಾಸ್ ನೀಡಿದ್ದ ಗೇಮಿನಲ್ಲಿ ಗೆದ್ದು ಚಂದನಾ 100 ಪಾಯಿಂಟ್ಸ್ ಪಡೆದುಕೊಂಡಿದ್ದಾರೆ.

  • ನನಗೆ 15 ಹುಡುಗಿಯರು ಬೇಕು, ಸಾವಿರ ಮುತ್ತು ಕೊಡಬೇಕು: ಕಿಶನ್

    ನನಗೆ 15 ಹುಡುಗಿಯರು ಬೇಕು, ಸಾವಿರ ಮುತ್ತು ಕೊಡಬೇಕು: ಕಿಶನ್

    ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಕಿಶನ್ ನನಗೆ 15 ಹುಡುಗಿಯರು ಬೇಕು. ನಾನು ಅವರಿಗೆ ಸಾವಿರ ಮುತ್ತು ಕೊಡಬೇಕು ಹಾಗೂ ಅವರು ಕೊಡಬೇಕು ಎಂದು ಹೇಳಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿಗಳನ್ನು ತಂಡಗಳನ್ನು ಮಾಡಿ ಟಾಸ್ಕ್ ನೀಡಿದ್ದರು. ಒಂದು ತಂಡದ ಕ್ಯಾಪ್ಟನ್ ಕಿಶನ್ ಆದರೆ, ಮತ್ತೊಂದು ತಂಡಕ್ಕೆ ಶೈನ್ ಶೆಟ್ಟಿ ನಾಯಕರಾಗಿದ್ದಾರೆ. ಮಂಗಳವಾರ ಬಿಗ್ ಬಾಸ್ ಮನೆಯ ಮಂದಿಗೆ ‘ಬಿಗ್ ಬಾಸ್ ಟ್ರಾನ್ಸ್ ಪೋರ್ಟ್’ ಎಂಬ ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಡುವೆ ಕಿಶನ್ ಹಾಗೂ ಅವರ ತಂಡದವರು ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಕಿಶನ್ ನನಗೆ 15 ಹುಡುಗಿಯರು ಬೇಕು, ಸಾವಿರ ಮುತ್ತು ಕೊಡಬೇಕು ಎಂದು ಹೇಳಿದ್ದಾರೆ.

    ಪ್ರಿಯಾಂಕಾ, ಕಿಶನ್ ಹಾಗೂ ಚಂದನ್ ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಕಿಶನ್, ‘ಅನಾಥ ಮಗುವಾದೆ ನಾನು ಪ್ರೀತಿಯೂ, ಹುಡುಗಿಯೂ ಇಲ್ಲ, ಕಾಯಿನೂ ಗೋಣಿಚೀಲನೂ ಇಲ್ಲ, ಏನೂ ಮಾಡಕ್ಕೂ ಇಲ್ಲ’ ಎಂದು ಹಾಡು ಹೇಳುತ್ತಿರುತ್ತಾರೆ. ಇದನ್ನು ಕೇಳಿದ ಹರೀಶ್ ನಿನಗೆ ಏನೂ ಬೇಕು ಹೇಳು ನಾನು ಕೊಡುತ್ತೇನೆ ಎಂದರು. ಆಗ ಕಿಶನ್ ನನಗೆ 15 ಹುಡುಗಿಯರು ಬೇಕು, ಅವರಿಗೆ ನಾನು ಸಾವಿರ ಮುತ್ತು ಕೊಡಬೇಕು ಹಾಗೂ ಅವರು ಕೂಡ ನನಗೆ ಮುತ್ತು ಕೊಡಬೇಕು. ಆಗ ನಾನು ಸಂತೋಷವಾಗಿರುತ್ತೇನೆ ಎಂದು ಹೇಳಿದ್ದಾರೆ.

    ಕಿಶನ್ ಮಾತು ಕೇಳಿ ಹರೀಶ್ ನೀವು ಈಗ ಟಾಸ್ಕ್ ಆಡಲು ಬನ್ನಿ ಎಂದು ಹೇಳಿದ್ದಾರೆ. ಪಕ್ಕದಲ್ಲೇ ಇದ್ದ ಚಂದನ್ ನಮಗೆಲ್ಲಾ ಟಾಸ್ಕ್ ಚಿಂತೆ ಆದರೆ ನಮ್ಮ ಕ್ಯಾಪ್ಟನ್‍ಗೆ ಬೇರೆಯೇ ಚಿಂತೆ ಆಗಿದೆ. ಟಾಸ್ಕ್ ಕಡೆ ಗಮನ ಕೊಡಿ ಎಂದು ಹೇಳಿದ್ದಾರೆ. ಈ ಸಂಚಿಕೆ ವಾಹಿನಿಯಲ್ಲಿ ಪ್ರಸಾರವಾಗಿಲ್ಲ ಬದಲಾಗಿ ಅನ್‍ಸೀನ್‍ನಲ್ಲಿ ಪ್ರಸಾರವಾಗಿದೆ.

    ಈಗಾಗಲೇ ಕಿಶನ್‍ಗೆ ಕಿಸ್ಸಿಂಗ್ ಸ್ಟಾರ್ ಎಂಬ ಬಿರುದು ಸಿಕ್ಕಿದೆ. ಇತ್ತೀಚೆಗೆ ದೀಪಿಕಾ ದಾಸ್ ಅವರನ್ನು ನಿರಂತರವಾಗಿ ತಬ್ಬಿಕೊಂಡು ಹಗ್ಗಿಂಗ್ ಸ್ಟಾರ್ ಎಂಬ ಬಿರುದನ್ನು ಸಹ ಪಡೆದುಕೊಂಡಿದ್ದಾರೆ.

  • ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಕಿಶನ್

    ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಕಿಶನ್

    ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಕಿಶನ್ ವ್ಯಕ್ತಿಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ರಹಸ್ಯವನ್ನು ಕಿರುತೆರೆ ನಟಿ ಪ್ರಿಯಾಂಕಾ ಬಿಚ್ಚಿಟ್ಟಿದ್ದಾರೆ.

    ಕಿಶನ್ ವ್ಯಕ್ತಿಯಿಂದ 16ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು. ಸೋಮವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್‍ವೊಂದನ್ನು ನೀಡಿದ್ದರು. ಈ ಟಾಸ್ಕ್‍ನಲ್ಲಿ ಜೋಡಿಗಳಗಾಗಿ ಸ್ಪರ್ಧಿಗಳು ಭಾಗವಹಿಸಿದ್ದರು. ಅಲ್ಲದೆ ಬಿಗ್ ಬಾಸ್ ತಮ್ಮ ಜೋಡಿಯ ವೈಯಕ್ತಿಕ ಜೀವನದ ಬಗ್ಗೆ ಮನೆ ಮಂದಿಗೆಲ್ಲಾ ತಿಳಿಸಬೇಕು ಎಂದು ಹೇಳಿದ್ದರು. ಆಗ ಕಿಶನ್‍ಗೆ ಜೋಡಿಯಾಗಿದ್ದ ಪ್ರಿಯಾಂಕಾ ಮನೆ ಮಂದಿ ಮುಂದೆ ರಹಸ್ಯ ಬಿಚ್ಚಿಟ್ಟಿದ್ದಾರೆ.

    ಕಿಶನ್‍ಗೆ ಡ್ಯಾನ್ಸರ್ ಆಗಬೇಕು ಎಂಬ ಆಸೆ ಯಾವತ್ತೂ ಇರಲಿಲ್ಲ. ಆದರೆ ಅವರು ಡ್ಯಾನ್ಸರ್ ಆಗಬೇಕು ಎಂಬುದು ಅವರ ತಾಯಿಯ ಆಸೆ. ಕಿಶನ್ ಶಾಲೆಗೆ ಹೋಗುವ ಸಂದರ್ಭದಲ್ಲಿ ಅವರ ತಾಯಿ ನೀನು ಡ್ಯಾನ್ಸರ್ ಆಗಬೇಕು ಎಂದು ಬಾಂಬೆಗೆ ಕಳುಹಿಸಿದ್ದರು. ಹಾಗೆಯೇ ಕಿಶನ್ ತಮ್ಮ ತಾಯಿಗೋಸ್ಕರ ತಮ್ಮ ಎಲ್ಲ ಆಸೆಯನ್ನು ಬಿಟ್ಟು 16ನೇ ವಯಸ್ಸಿಗೆ ಬಾಂಬೆಗೆ ಹೋಗುತ್ತಾರೆ. ಆ ಸಮಯದಲ್ಲಿ ಯಾರೇ ಡ್ಯಾನ್ಸರ್, ಆ್ಯಕ್ಟರ್ ಆಗುತ್ತೇನೆ ಎಂದರೆ ಕಿಶನ್ ಅವರ ಜೊತೆ ಹೋಗುತ್ತಿದ್ದರು ಎಂದು ಪ್ರಿಯಾಂಕಾ ಹೇಳಿದರು.

    ಹೀಗೆ ಒಬ್ಬ ವ್ಯಕ್ತಿ ನಿನ್ನನ್ನು ಡ್ಯಾನ್ಸರ್ ಮಾಡುತ್ತೇನೆ ಎಂದು ಕಿಶನ್‍ನನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅವರು ಕಿಶನ್‍ಗೆ ಲೈಂಗಿಕ ಕಿರುಕುಳಕ್ಕೆ ನೀಡಿದ್ದರು. ಆದರೆ ಆ ವಯಸ್ಸಿನಲ್ಲಿ ಕಿಶನ್ ಗೆ ಅದನ್ನು ಹೇಗೆ ತಡೆಯಬೇಕು ಎಂಬುದು ಗೊತ್ತಿರಲಿಲ್ಲ. ಪ್ರತಿ ಬಾರಿ ಆ ವ್ಯಕ್ತಿಯ ಕಿರುಕುಳ ನೀಡುತ್ತಿದ್ದಾಗ ಕಿಶನ್ ತಪ್ಪಿಸಿಕೊಂಡಿದ್ದರು. ಕಳೆದ ವರ್ಷವೂ ಕಿಶನ್ ಗೆ ಹೀಗೆ ಆಗಿದ್ದು, ಅದನ್ನು ತಡೆದರು ಎಂದರು.

    ಕಿಶನ್ ಈ ವಿಷಯವನ್ನು ತಮ್ಮ ಲಾಸ್ಟ್ ಗರ್ಲ್ ಫ್ರೆಂಡ್ ಜೊತೆ ಹಂಚಿಕೊಂಡಿದ್ದರು. ಕಿಶನ್ ತುಂಬಾ ಹುಡುಗಿಯರೊಂದಿಗೆ ಡೇಟ್ ಮಾಡಿದ್ದು, ಅದರಲ್ಲಿ ಇಬ್ಬರು ನಿನ್ನ ಬಳಿ ಏನು ಇದೆ ಎಂದು ಅವಮಾನ ಮಾಡಿದ್ದರು. ಕಿಶನ್ ಈ ಮನೆಗೆ ಬಂದ ಮೇಲೆ ಶೈನ್, ವಾಸುಕಿ ಹಾಗೂ ಚಂದನಾ ಜೊತೆ ಕ್ಲೋಸ್ ಆಗಿದ್ದರು. ಹೀಗಿದ್ದರೂ ಅವರು ಏಕಾಂಗಿ ಆಗಿಯೇ ಇರುತ್ತಾರೆ ಎಂದು ಪ್ರಿಯಾಂಕಾ ಮನೆ ಮಂದಿಗೆ ತಿಳಿಸಿದರು.

  • ಮುತ್ತು ಕೊಟ್ಟ ಕಿಶನ್‍ಗೆ ಚಂದನಾ ಶಾಕ್

    ಮುತ್ತು ಕೊಟ್ಟ ಕಿಶನ್‍ಗೆ ಚಂದನಾ ಶಾಕ್

    ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಡ್ಯಾನ್ಸರ್ ಕಿಶನ್ ಸ್ಪರ್ಧಿ ಚಂದನಾರಿಗೆ ಮುತ್ತು ನೀಡಿದ್ದಾರೆ. ಮುತ್ತು ನೀಡಿದ್ದ ಕಿಶನ್‍ಗೆ ಡೈರೆಕ್ಟ್ ನಾಮಿನೇಟ್ ಮಾಡುವ ಮೂಲಕ ಚಂದನಾ ಶಾಕ್ ಕೊಟ್ಟಿದ್ದಾರೆ.

    ಸೋಮವಾರ ಡೈನಿಂಗ್ ಏರಿಯಾದಲ್ಲಿ ವಾಸುಕಿ, ದೀಪಿಕಾ, ಚೈತ್ರಾ ಕೊಟ್ಟೂರು ಹಾಗೂ ಶೈನ್ ಶೆಟ್ಟಿ ಕುಳಿತಿರುತ್ತಾರೆ. ಈ ವೇಳೆ ಚಂದನಾ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಿಶನ್ ಹಾಗೂ ಚೈತ್ರಾರ ರೊಮ್ಯಾಂಟಿಕ್ ದೃಶ್ಯ ಸೆರೆ ಹಿಡಿಯುತ್ತಿದ್ದರು. ಆಗ ವಾಸುಕಿ, ಕಿಶನ್ ಅವರನ್ನು ಕರೆದು ಚಂದನಾರಿಗೆ ಮುತ್ತು ನೀಡುವಂತೆ ಹೇಳುತ್ತಾರೆ.

    ವಾಸುಕಿ ಮಾತನ್ನು ಕೇಳಿ ಕಿಶನ್, ಚಂದನಾರಿಗೆ ಮುತ್ತು ಕೊಟ್ಟು ಓಡಿ ಹೋಗುತ್ತಾರೆ. ವಾಸುಕಿ ಮುತ್ತು ನೀಡಲು ಹೇಳಿದರೂ ಹಾಗಾಗಿ ನೀಡಿದೆ ಎಂದು ಕಿಶನ್ ಹೇಳಿದ್ದರು. ಕಿಶನ್ ಮಾತು ಕೇಳಿ ಚಂದನಾ, ಕೋಪದಿಂದ ವಾಸುಕಿರನ್ನು ನೋಡಿದರು.

    ಇದಾದ ಬಳಿಕ ಬಿಗ್ ಬಾಸ್ ನಾಮಿನೇಶನ್ ಪ್ರಕ್ರಿಯೆ ನಡೆಸಿದ್ದರು. ಈ ವೇಳೆ ಮನೆಯ ಕ್ಯಾಪ್ಟನ್ ಆಗಿದ್ದ ಚಂದನಾ ಅವರಿಗೆ ಡೈರೆಕ್ಟ್ ನಾಮಿನೇಟ್ ಮಾಡಲು ಹೇಳಿದರು. ಆಗ ಚಂದನಾ, ಕಿಶನ್‍ರನ್ನು ಡೈರೆಕ್ಟ್ ನಾಮಿನೇಟ್ ಮಾಡಿದ್ದಾರೆ. ಚಂದನಾ ಡೈರೆಕ್ಟ್ ನಾಮಿನೇಟ್ ಮಾಡಿದಕ್ಕೆ ಕಿಶನ್ ಬೇಸರಗೊಂಡು ಅಲ್ಲಿಂದ ಹೊರಟು ಹೋಗುತ್ತಾರೆ.

    ಈ ವಾರ ಮನೆಯಿಂದ ಹೊರಹೋಗಲು ಕಿಶನ್ ಜೊತೆಗೆ ಶೈನ್ ಶೆಟ್ಟಿ, ವಾಸುಕಿ ವೈಭವ್, ರಾಜು ತಾಳಿಕೋಟೆ, ಭೂಮಿ ಶೆಟ್ಟಿ, ಚಂದನ್ ಅಚಾರ್, ಚೈತ್ರಾ ನಾಮಿನೇಟ್ ಆಗಿದ್ದಾರೆ.

  • ಮುತ್ತು ನೀಡ್ತಿದ್ದ ಕಿಶನ್‍ಗೆ ಸಿಕ್ತು ರೊಮ್ಯಾಂಟಿಕ್ ಕಿಸ್

    ಮುತ್ತು ನೀಡ್ತಿದ್ದ ಕಿಶನ್‍ಗೆ ಸಿಕ್ತು ರೊಮ್ಯಾಂಟಿಕ್ ಕಿಸ್

    ಬೆಂಗಳೂರು: ಬಿಗ್ ಬಾಸ್ ಸೀಸನ್-7ರ ಸ್ಪರ್ಧಿ ಕಿಶನ್, ಕಿರುತೆರೆ ನಟಿ ಭೂಮಿ ಅವರಿಂದ ಮುತ್ತು ಪಡೆದು ಸ್ವಿಮ್ಮಿಂಗ್ ಪೂಲ್‍ಗೆ ಹಾರಿದ್ದಾರೆ.

    ಸ್ಪರ್ಧಿಗಳಾದ ಭೂಮಿ, ಕಿಶನ್, ಪ್ರಿಯಾಂಕಾ, ವಾಸುಕಿ ವೈಭವ್ ಹಾಗೂ ಕುರಿ ಪ್ರತಾಪ್ ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಅಲ್ಲಿ ಮಳೆ ಬರುತ್ತಿದ್ದು, ಸ್ಪರ್ಧಿಗಳು ಈ ಬಗ್ಗೆ ಮಾತನಾಡುತ್ತಾರೆ. ಆಗ ಕಿಶನ್ ನನ್ನ ಸ್ವಿಮ್ಮಿಂಗ್ ಪೂಲ್ ಒದ್ದೆ ಆಗುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಪ್ರಿಯಾಂಕಾ ನೀನು ಈಗ ಸ್ವಿಮ್ಮಿಂಗ್ ಪೂಲ್‍ಗೆ ಹೋಗಿ ಹಾರಬೇಡ ಎಂದು ಹೇಳಿದ್ದಾರೆ. ಬಳಿಕ ಭೂಮಿ ಸ್ವಿಮ್ಮಿಂಗ್ ಪೂಲ್‍ಗೆ ಜಂಪ್ ಮಾಡು ಎಂದಿದ್ದಾರೆ.

    ಭೂಮಿ ಹಾಗೂ ಪ್ರಿಯಾಂಕಾ ಮಾತು ಕೇಳಿದ ಕಿಶನ್, ಯಾರಾದರೂ ಮುತ್ತು ಕೊಟ್ಟರೆ ನಾನು ಸ್ವಿಮ್ಮಿಂಗ್ ಪೂಲ್‍ಗೆ ಹಾರುತ್ತೇನೆ ಎಂದಿದ್ದಾರೆ. ಕಿಶನ್ ಈ ರೀತಿ ಹೇಳುತ್ತಿದ್ದಂತೆ ಅವರಿಗೆ ಮುತ್ತು ನೀಡುವಂತೆ ಪ್ರಿಯಾಂಕಾ, ಭೂಮಿಗೆ ಹೇಳುತ್ತಾರೆ. ಪ್ರಿಯಾಂಕಾ ಮಾತು ಕೇಳಿ ಭೂಮಿ, ಕಿಶನ್‍ನ ಎರಡು ಕೆನ್ನೆಗೆ ಮುತ್ತು ನೀಡಿದ್ದಾರೆ. ಮುತ್ತು ಪಡೆದ ತಕ್ಷಣ ಕಿಶನ್ ಮಳೆ ಬರುತ್ತಿದ್ದರೂ ಸಹ ಸ್ವಿಮ್ಮಿಂಗ್ ಪೂಲ್‍ಗೆ ಹಾರಿದ್ದಾರೆ. ಕಿಶನ್ ಈಜುಕೋಳದಲ್ಲಿ ಹಾರಿದ್ದನು ನೋಡಿ ಅಲ್ಲಿದ್ದ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಭೂಮಿ, ಕಿಶನ್‍ಗೆ ಮುತ್ತು ನೀಡಿದ ಸಂಚಿಕೆ ವಾಹಿನಿಯಲ್ಲಿ ಪ್ರಸಾರವಾಗಿಲ್ಲ.

    ಈ ಹಿಂದೆ ಪ್ರಿಯಾಂಕಾ ಈ ಮನೆಯಲ್ಲಿ ಎಲ್ಲಾ ಹುಡುಗಿಯರಿಗೂ ಮುತ್ತು ಕೊಟ್ಟಿದ್ದೀರಿ ಅಲ್ವಾ. ಚಂದನಾ, ದೀಪಿಕಾ, ಭೂಮಿ, ಸುಜಾತ, ರಶ್ಮಿ, ಚೈತ್ರಾ ಕೊಟ್ಟೂರು ಮತ್ತು ಚೈತ್ರಾ ವಾಸುದೇವನ್ ಅವರಿಗೆ ಕೊಟ್ಟಿದ್ದೀರಾ ಎಂದು ಕಿಶನ್‍ಗೆ ಕೇಳಿದ್ದರು. ಅದಕ್ಕೆ ಕಿಶನ್ ಸುಜಾತಾ ಅವರಿಗೆ ಕೊಟ್ಟಿಲ್ಲ. ಆದರೆ ತುಂಬಾ ಕಷ್ಟವಾಗಿದ್ದು ದೀಪಿಕಾ, ಅವರಿಗೂ ಕೊಟ್ಟಿದ್ದೀನಿ ಎಂದಿದ್ದರು. ಈ ವೇಳೆ ರಾಜು ತಾಳಿಕೋಟೆ ಮತ್ತು ಭೂಮಿ ಮಧ್ಯೆ ಕಿಶನ್ ಕುಳಿತ್ತಿದ್ದರು. ಆಗ ರಾಜು ಅವರು ಕಿಶನ್‍ಗೆ ಮುತ್ತು ಕೊಟ್ಟು ಪಾಸ್ ಮಾಡು ಎಂದರು. ತಕ್ಷಣ ಕಿಶನ್ ಭೂಮಿ ಕೆನ್ನೆಗೆ ಎಲ್ಲರ ಮುಂದೆಯೇ ಕಿಸ್ ಮಾಡಿದ್ದಾರೆ. ಈ ಸಂಚಿಕೆ ಕೂಡ ಟಿವಿಯಲ್ಲಿ ಪ್ರಸಾರವಾಗಿರಲಿಲ್ಲ. ಅನ್‍ಸೀನ್‍ನಲ್ಲಿ ಈ ವಿಡಿಯೋ ಪ್ರಸಾರವಾಗಿತ್ತು.

  • ದೀಪಿಕಾನ ಅಪ್ಪಿಕೊಂಡು ಪೂಲ್‍ಗೆ ಬಿದ್ದ ಕಿಶನ್

    ದೀಪಿಕಾನ ಅಪ್ಪಿಕೊಂಡು ಪೂಲ್‍ಗೆ ಬಿದ್ದ ಕಿಶನ್

    ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಕಿಶನ್ ಟಾಸ್ಕ್ ವೇಳೆ ದೀಪಿಕಾರನ್ನು ಅಪ್ಪಿಕೊಂಡು ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದಿದ್ದಾರೆ.

    ಸೋಮವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಮನರಂಜನೆ ಸಲುವಾಗಿ ‘ಚಕ್ರವ್ಯೂಹ’ ಎಂಬ ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಕ್ಯಾಪ್ಟನ್ ಶೈನ್ ಗಾರ್ಡನ್ ಏರಿಯಾದಲ್ಲಿ ಇರಿಸಲಾಗಿದ್ದ ಚಕ್ರವನ್ನು ತಿರುಗಿಸಬೇಕಿತ್ತು. ಈ ವೇಳೆ ಮುಳ್ಳಿನ ಬಳಿ ಯಾರ ಹೆಸರು ನಿಲ್ಲುತ್ತದೋ ಅವರು ಮನೆಯ ಸದಸ್ಯರು ಹೇಳುವಂತೆ ಮಾಡಬೇಕು ಎಂದು ಹೇಳಿದ್ದರು. ಇದ್ದನ್ನೂ ಓದಿ: ಚಂದನಾ ನಂತ್ರ ಭೂಮಿ ಕೆನ್ನೆಗೆ ಕಿಶನ್ ಕಿಸ್

    ಶೈನ್ ಮೊದಲು ಚಕ್ರ ತಿರುಗಿಸಿದಾಗ ಚಂದನಾ ಅವರ ಹೆಸರು ಬಂತು. ಆಗ ಮನೆಯ ಸದಸ್ಯರು ಚಂದನಾರಿಗೆ ಕುಡಿದ ನಶೆಯಲ್ಲಿ ಇರುವಂತೆ ನಟಿಸಬೇಕು ಎಂದಿದ್ದರು. ಚಂದನಾ ಮನೆಯ ಸದಸ್ಯರು ಹೇಳಿದಂತೆ ಮಾಡಿದ್ದರು. ಇದಾದ ಬಳಿಕ ಚಕ್ರ ತಿರುಗಿಸಿದಾಗ ದೀಪಿಕಾ ಅವರ ಹೆಸರು ಬಂತು. ಈ ವೇಳೆ ಮನೆಯ ಸದಸ್ಯರು ದೀಪಿಕಾ ಅವರಿಗೆ ಸ್ವಿಮ್ಮಿಂಗ್ ಪೂಲ್‍ನಲ್ಲಿ ಸ್ವಿಮ್ ಮಾಡಿ ನಂತರ ನಾಟಿ ಟೀಚರ್ ಆಗಿ ಮನೆ ಮಂದಿಗೆ ಪಾಠ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಚಂದನಾ ಕೆನ್ನೆಗೆ ಮುತ್ತು ಕೊಟ್ಟ ಕಿಶನ್

    ದೀಪಿಕಾ ಮನೆಯ ಸದಸ್ಯರ ಮಾತಿನಂತೆ ಈಜುಕೊಳದಲ್ಲಿ ಸ್ವಿಮ್ಮಿಂಗ್ ಮಾಡಿ ಬಳಿಕ ಎಲ್ಲರಿಗೂ ಪಾಠ ಮಾಡುತ್ತಿದ್ದರು. ಈ ವೇಳೆ ದೀಪಿಕಾ, ನಾನು ಏನು ಪಾಠ ಮಾಡುತ್ತಿದ್ದೆ ಎಂದು ಕೇಳಿದಾಗ ಕಿಶನ್ ಟೀ-ಶರ್ಟ್ ಮೇಲೆ ಎತ್ತುವುದನ್ನು ಹೇಳಿಕೊಡುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ. ಆಗ ದೀಪಿಕಾ, ಕಿಶನ್ ಅವರ ಮೈಕ್ ತೆಗೆದು ಅವರನ್ನು ಸ್ವಿಮ್ಮಿಂಗ್ ಪೂಲ್‍ನಲ್ಲಿ ಬೀಳಿಸಲು ಮುಂದಾಗಿದ್ದಾರೆ. ಈ ವೇಳೆ ಕಿಶನ್ ತಕ್ಷಣ ದೀಪಿಕಾ ಅವರನ್ನು ಅಪ್ಪಿಕೊಂಡು ಸ್ವಿಮ್ಮಿಂಗ್ ಪೂಲ್‍ನಲ್ಲಿ ಬಿದ್ದಿದ್ದಾರೆ. ಇದ್ದನ್ನೂ ಓದಿ: ಚಂದನಾಗೆ ಕಿಸ್ ಕೊಡು ಎಂದ ಶೈನ್ – ಓಡಿ ಹೋಗಲು ಮುಂದಾದ ವಾಸುಕಿ

    ಸ್ವಿಮ್ಮಿಂಗ್ ಪೂಲ್‍ನಲ್ಲಿ ಬೀಳುವಾಗ ದೀಪಿಕಾ ಮೈಕ್ ಧರಿಸಿದ್ದರು. ಆದರೆ ಇದನ್ನು ಅರಿಯದ ಕಿಶನ್ ತಕ್ಷಣ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಮನೆಯ ಸದಸ್ಯರು ಮೈಕ್ ಎಂದು ಕಿರುಚಿದ್ದಾರೆ. ಬಳಿಕ ಆ ಮೈಕ್ ಹಾಳಾಗಿದ್ದು, ಬಿಗ್ ಬಾಸ್ ಮನೆಯಲ್ಲಿದ್ದ ಸಕ್ಕರೆ ಡಬ್ಬವನ್ನು ತೆಗೆದುಕೊಂಡಿದ್ದಾರೆ. ಇದೆಲ್ಲಾ ಆದ ಬಳಿಕ ಕಿಶನ್ ಕ್ಯಾಮೆರಾ ಮುಂದೆ ಹೋಗಿ ಬಿಗ್ ಬಾಸ್ ಬಳಿ ಕ್ಷಮೆ ಕೇಳಿದ್ದಾರೆ.