Tag: ಕಿವಿ ಮೇಲೆ ಹೂ

  • ಡಿಕೆಶಿ ಕಿವಿಯಿಂದ ಹೂ ತೆಗೆದ ಯಡಿಯೂರಪ್ಪ

    ಡಿಕೆಶಿ ಕಿವಿಯಿಂದ ಹೂ ತೆಗೆದ ಯಡಿಯೂರಪ್ಪ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಕಿವಿ ಮೇಲಿದ್ದ ಹೂವನ್ನು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ತೆಗೆದ ಪ್ರಸಂಗ ಇಂದು ನಡೆಯಿತು.

    ಬಜೆಟ್‌ ಭಾಷಣದ ಬಳಿಕ ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್‌ ಬರುತ್ತಿದ್ದಾಗ ಯಡಿಯೂರಪ್ಪ ಎದುರು ಸಿಕ್ಕಿದರು. ಈ ವೇಳೆ ಡಿಕೆ ಶಿವಕುಮಾರ್‌ ಅವರನ್ನು ನಕ್ಕು ಎಡ ಕಿವಿ ಮೇಲಿದ್ದ ಚೆಂಡು ಹೂವನ್ನು ತೆಗೆದು ಅಲ್ಲಿದ್ದ ಒಬ್ಬರ ಕೈಗೆ ಕೊಟ್ಟು ನಕ್ಕರು. ಇದನ್ನೂ ಓದಿ: ಕಿವಿ ಮೇಲೆ ಹೂ ಇಟ್ಟುಕೊಂಡು ಬಂದ ಕೈ ನಾಯಕರು: ಬಜೆಟ್‌ ಮಂಡನೆಗೂ ಮುನ್ನವೇ ಗದ್ದಲ

    ಯಡಿಯೂರಪ್ಪ ಅವರು ಹೂವು ತೆಗೆದಿದ್ದನ್ನು ನೋಡಿ ನಕ್ಕ ಡಿಕೆಶಿ ಬಳಿಕ ಮತ್ತೆ ಹೂವನ್ನು ಕಿವಿಗೆ ಹಾಕಿ ತೆರಳಿದರು.

    ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಬಜೆಟ್‌ (Budget) ಮಂಡನೆಯ ದಿನ ಕಾಂಗ್ರೆಸ್‌ ನಾಯಕರು ಕಿವಿ ಮೇಲೆ ಚೆಂಡು ಹೂ ಇಟ್ಟುಕೊಂಡು ಸದನ ಪ್ರವೇಶಿಸಿದ್ದು ವಿಶೇಷವಾಗಿತ್ತು. ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದು ಯಾವುದು ಕಾರ್ಯ ರೂಪಕ್ಕೆ ಬರುವುದಿಲ್ಲ. ಜನರ ಮೇಲೆ ಹೂ ಇಡುತ್ತಿದೆ ಎಂದು ಹೇಳಿದ ಕೈ ನಾಯಕರು ಸಿಎಂ ಬಜೆಟ್‌ ಭಾಷಣವನ್ನು ಹೂ ಮುಡಿದುಕೊಂಡೇ ಕೇಳಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಿವಿ ಮೇಲೆ ಹೂ ಇಟ್ಟುಕೊಂಡು ಬಂದ ಕೈ ನಾಯಕರು: ಬಜೆಟ್‌ ಮಂಡನೆ ಮುನ್ನವೇ ಗದ್ದಲ

    ಕಿವಿ ಮೇಲೆ ಹೂ ಇಟ್ಟುಕೊಂಡು ಬಂದ ಕೈ ನಾಯಕರು: ಬಜೆಟ್‌ ಮಂಡನೆ ಮುನ್ನವೇ ಗದ್ದಲ

    ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಬಜೆಟ್‌ (Budget) ಮಂಡನೆಯ ದಿನ ಕಾಂಗ್ರೆಸ್‌ ನಾಯಕರು ಕಿವಿ ಮೇಲೆ ಚೆಂಡು ಹೂ ಇಟ್ಟುಕೊಂಡು ಸದನ ಪ್ರವೇಶಿಸಿದ್ದು ವಿಶೇಷವಾಗಿತ್ತು.

    ಕೇಸರಿ ಬಣ್ಣದ ಹೂವು ಇಟ್ಟುಕೊಂಡು ಸದನಕ್ಕೆ ಬಂದಿದ್ದರಿಂದ ಕೆಲಹೊತ್ತು ಕಲಾಪದಲ್ಲಿ ಗದ್ದಲ ಉಂಟಾಯಿತು. ಸಿದ್ಧರಾಮಯ್ಯ (Siddaramaiah) ಅವರು ಕಿವಿ ಮೇಲೆ ಹೂವು (Kiwi Mele Hoova) ಇಟ್ಟುಕೊಂಡು ಬಂದಿದ್ದಕ್ಕೆ ಸಚಿವ ಅಶೋಕ ಆಕ್ಷೇಪ ವ್ಯಕ್ತಪಡಿಸಿದರು.

    ಈ ವೇಳೆ ಸಿಎಂ ಬೊಮ್ಮಾಯಿ (CM Bommai) ಅವರು, ಇಷ್ಟು ದಿನ ಅವರು ಜನರ ಕಿವಿ ಮೇಲೆ ಹೂ ಇಟ್ಟಿದ್ದರು. ಈಗ ಅವರೇ ಕಿವಿ ಮೇಲೆ ಹೂವು ಇಟ್ಟುಕೊಂಡಿದ್ದಾರೆ. ಮುಂದೆ ಜನ ಇವರ ಕಿವಿ ಮೇಲೆ ಹೂ ಇಡುತ್ತಾರೆ ಎಂದು ಛೇಡಿಸಿದರು.

    ಬೊಮ್ಮಾಯಿ ಮಾತಿಗೆ ಗರಂ ಆದ ಸಿದ್ದರಾಮಯ್ಯ, ನೀವು ಜನರ ಕಿವಿ ಮೇಲೆ ಹೂವಿಡುತ್ತಿದ್ದೀರಿ. ಈ ಬಜೆಟ್‌ ಮೂಲಕ ಇವರು 7 ಕೋಟಿ ಜನರ ಕಿವಿ ಮೇಲೆ ಹೂ ಇಡುತ್ತಿದ್ದಾರೆ ಎಂದು ತಿಳಿಸಲು ನಾವು ಹೂ ಇಟ್ಟುಕೊಂಡು ಬಂದಿದ್ದೇವೆ ಎಂದು ಸರ್ಕಾರದ ವಿರುದ್ಧ ಸಿಟ್ಟು ಹೊರ ಹಾಕಿದರು.  ಇದನ್ನೂ ಓದಿ: ಸರ್ಕಾರಿ ಪಿಯು, ಡಿಗ್ರಿ ಕಾಲೇಜಿನಲ್ಲಿ ಉಚಿತ ಶಿಕ್ಷಣ – 8 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ

    ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ಭಾರೀ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್‌ ನಾಯಕರು ತಿರುಗೇಟು ನೀಡಿದ್ದರಿಂದ ಬಜೆಟ್‌ ಮಂಡನೆಗೂ ಮೊದಲೇ ಗದ್ದಲ ಉಂಟಾಯಿತು.

    ಈ ಸಂದರ್ಭದಲ್ಲಿ ಸ್ಪೀಕರರ್‌ ಕಾಗೇರಿ, ಇಷ್ಟುದಿನ ಸಿದ್ದರಾಮಯ್ಯ ಕೇಸರಿ ಬಣ್ಣ ನಿಮ್ಮ ಪಕ್ಷದ್ದು ಎನ್ನುತ್ತಿದ್ದರು. ಆದರೆ ಇಂದು ಇಂದು ಕೇಸರಿ ಬಣ್ಣದ ಹೂ ಇಟ್ಟುಕೊಂಡು ಬಂದಿದ್ದಾರೆ ಎಂದು ಹೇಳಿ ಕಾಲೆಳೆದರು. ಕೊನೆಗೆ ಸ್ಪೀಕರ್‌ ಎರಡೂ ಕಡೆಯ ಸದಸ್ಯರನ್ನು ಸಮಾಧಾನ ಪಡಿಸಿ ಬಜೆಟ್‌ ಮಂಡನೆಗೆ ಅವಕಾಶ ಕಲ್ಪಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k