Tag: ಕಿವಿಯೋಲೆ

  • ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಗಳ ಕಿವಿಯೋಲೆ ಕಳವು – ಬೌರಿಂಗ್ ಆಸ್ಪತ್ರೆಯ ವಿರುದ್ಧ ದೂರು

    ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಗಳ ಕಿವಿಯೋಲೆ ಕಳವು – ಬೌರಿಂಗ್ ಆಸ್ಪತ್ರೆಯ ವಿರುದ್ಧ ದೂರು

    – ಡಿಕೆಶಿ ವಿರುದ್ಧ ಆಕ್ರೋಶ ಹೊರ ಹಾಕಿದ ದಿವ್ಯಾಂಶಿ ತಾಯಿ ಅಶ್ವಿನಿ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ (Chinnaswamy Stadium Stampede) ಮೃತಪಟ್ಟಿದ್ದ ದಿವ್ಯಾಂಶಿ ತಾಯಿ ಅಶ್ವಿನಿ ಇಂದು ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮರಣೋತ್ತರ ಪರೀಕ್ಷೆ  ವೇಳೆ ಮಗಳ ಮೃತದೇಹದಿಂದ ಕಿವಿಯೋಲೆ (Earrings) ಕಳುವಾಗಿದೆ ಎಂದು ದೂರು ನೀಡಿದ್ದಾರೆ.

    ದೂರು ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ತಾಯಿ ಅಶ್ವಿನಿ, ಮರಣೋತ್ತರ ಪರೀಕ್ಷೆಯ ಬಳಿಕ ಮಗಳ ಕಿವಿಯೋಲೆ ನಾಪತ್ತೆಯಾಗಿದೆ. ಹಾಗಾಗಿ ಬೌರಿಂಗ್ ಆಸ್ಪತ್ರೆಯ (Bowring Hospital) ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ತಿಳಿಸಿದರು.

    ದಿವ್ಯಾಂಶಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಆಕೆಯ ಮಾವ ಓಲೆಯನ್ನು ಉಡುಗೊರೆಯಾಗಿ ನೀಡಿದ್ದರು. ಆ ಓಲೆಯ ಮೇಲೆ ಆಕೆಗೆ ತುಂಬಾ ಅಟ್ಯಾಚ್ಮೆಂಟ್ ಇತ್ತು. ಹಾಗಾಗಿ ಅದು ನನಗೆ ಬೇಕು ಅಂಥ ಕೇಳಿದ್ದೇನೆ ಎಂದರು. ಇದನ್ನೂ ಓದಿ: ಎಂಟ್ರಿ ಫ್ರೀ ಅಂತಾ ಹೇಳಿ ಸ್ಟೇಡಿಯಂ ಗೇಟ್ ಓಪನ್ ಮಾಡಿಲ್ಲ ಯಾಕೆ? ದಿವ್ಯಾಂಶಿ ತಾಯಿ ಪ್ರಶ್ನೆ

     

    ಮಗಳು ತುಂಬಾ ಆಸೆ ಪಟ್ಟು ಅದನ್ನು ಹಾಕಿಕೊಂಡಿದ್ದಳು. ಒಂದೂವರೆ ವರ್ಷದಿಂದ ಕಿವಿ ಓಲೆ ಬಿಚ್ಚಿರಲಿಲ್ಲ. ಹಾಗಾಗಿ ಅದು ನನಗೆ ಬೇಕು ಎಂದು ಕೇಳಿದ್ದೇನೆ. ಆಸ್ಪತ್ರೆಯಿಂದ ಯಾರು ಸರಿಯಾಗಿ ಪ್ರತಿಕ್ರಿಯೆ ನೀಡದ್ದಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

    ಡಿಕೆಶಿ ವಿರುದ್ಧ ಆಕ್ರೋಶ
    ದಿವ್ಯಾಂಶಿ ಕಿವಿಯೋಲೆ ಕಳವು ವಿಚಾರಕ್ಕೆ ದೂರು ನೀಡಿದ ನಂತರ ತಾಯಿ ಅಶ್ವಿನಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಬಳಿಕ ಶವಾಗಾರದ ಬಳಿ ದಿವ್ಯಾಂಶಿ ಅಜ್ಜಿಗೆ ಒಳ್ಳೆಯ ಚಿಕಿತ್ಸೆಯನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ಅಜ್ಜಿ ಜೊತೆ ಮಾತನಾಡುವ ಫೋಟೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಡಿಸಿಎಂ ತಮ್ಮ ಅಧಿಕೃತ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದರು. ಶವಾಗಾರದ ಬಳಿ ಕುಳಿತುಕೊಂಡು ಟ್ರೀಟ್ಮೆಂಟ್ ಬಗ್ಗೆ ಮಾತಾಡ್ತಾರೆ. ಶವಾಗಾರದಲ್ಲಿ ಏನ್ ಟ್ರೀಟ್ಮೆಂಟ್ ಕೊಡುತ್ತಾರೆ ಎಂದು ಪ್ರಶ್ನಿಸಿದರು.

  • Fashion | ಮತ್ತೆ ಟ್ರೆಂಡ್ ಸೆಟ್ ಮಾಡುತ್ತಿದೆ ‘ಮಾಟಿ’ ಕರ್ಣಾಭರಣ!

    Fashion | ಮತ್ತೆ ಟ್ರೆಂಡ್ ಸೆಟ್ ಮಾಡುತ್ತಿದೆ ‘ಮಾಟಿ’ ಕರ್ಣಾಭರಣ!

    – ಈ ಮಾಟಿಗಳು ಮಾಡ್ರನ್ ಗೂ ಸೈ, ಎತ್ನಿಕ್ ಗೂ ಸೈ

    ಗಿನ ಫ್ಯಾಶನ್‌ ಲೋಕದಲ್ಲಿ ಹುಡುಗಿರು ಡಿಫರೆಂಟ್‌ ಆಗಿ ಕಾಣಲು ಬಯಸುತ್ತಾರೆ. ಇತ್ತೀಚೆಗೆ ಚಿನ್ನದ ಆಭರಣಗಳನ್ನು ಇಷ್ಟ ಪಡದೆ ಹೆಚ್ಚಾಗಿ ಆರ್ಟಿಫೀಶಿಯಲ್‌ ಜ್ಯುವೆಲ್ಲರಿಗಳನ್ನು ಹಾಕಲು ಬಯಸುತ್ತಾರೆ. ಮಾರುಕಟ್ಟೆಗೆ ವಿವಿಧ ಬಗೆಯ ಆಭರಣಗಳು ಲಗ್ಗೆ ಇಟ್ಟಿವೆ. ಫ್ಯಾಶನ್‌ ಪ್ರಿಯರು ಆರ್ಟಿಫೀಶಿಯಲ್‌ ಜ್ಯುವೆಲ್ಲರಿಗಳನ್ನು ಪಾರ್ಟಿ, ಇತರ ಸಮಾರಂಭಗಳಿಗೆ ಧರಿಸಲು ಈ ಆಭರಣಗಳನ್ನು ಇಷ್ಟ ಪಡುತ್ತಾರೆ.

    ಇತ್ತೀಚೆಗೆ ಫ್ಯಾಷನ್ ಲೋಕದಲ್ಲಿ ಸಂಸ್ಕೃತಿಯ ಛಾಯೆ ಕಳೆದುಕೊಳ್ಳದೆ ಆಧುನಿಕತೆಯನ್ನು ತೋರಿಸುವ ಶೈಲಿ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ. ಆ ಶೈಲಿಯ ಉತ್ತಮ ಉದಾಹರಣೆ ಎಂದರೆ ಮಾಟಿ ಆಭರಣಗಳೊಂದಿಗೆ ಮಾಡ್ರನ್ ಡ್ರೆಸ್‌ಗಳ ಕಾಂಬಿನೇಷನ್.

    ಮಾಟಿ ಆಭರಣಗಳು ಮತ್ತೆ ಫ್ಯಾಷನ್ ಲೋಕದಲ್ಲಿ ಗಮನ ಸೆಳೆಯುತ್ತಿವೆ. ಇವು ಸಾಂಪ್ರದಾಯಿಕ ಸೀರೆಗಳಿಂದ ಹಿಡಿದು ಆಧುನಿಕ ಉಡುಪುಗಳವರೆಗೆ ಎಲ್ಲದಕ್ಕೂ ಒಪ್ಪುತ್ತದೆ. ಇತ್ತೀಚೆಗೆ, ಎರಡು ಅಥವಾ ಮೂರು ಎಳೆಯ ಮಾಟಿಗಳು ಹೆಚ್ಚು ಜನಪ್ರಿಯವಾಗಿವೆ. ಏಕೆಂದರೆ ಇವು ಮುಖದ ಆಕರ್ಷಕತೆಯನ್ನು ಹೆಚ್ಚಿಸುತ್ತವೆ ಅಲ್ಲದೇ ಹೆವಿ ವರ್ಕ್‌ಗಳಿರುವ ಮಾಟಿಗಳು ಗ್ರ್ಯಾಂಡ್ ಲುಕ್ ನೀಡುತ್ತವೆ. ಅಲ್ಲದೇ ಸ್ಟೋನ್ ಅಥವಾ ಮುತ್ತಿನ ಕೆಲಸದ ಮಾಟಿಗಳು ವಿಶೇಷವಾಗಿ ಆಕರ್ಷಕವಾಗಿವೆ.

    ಟ್ರೆಂಡಿಂಗ್ ಮಾಟಿಗಳನ್ನು ಧರಿಸುವುದರಿಂದ ದೊಡ್ಡ ನೆಕ್ಲೆಸ್‌ ಧರಿಸುವ ಅಗತ್ಯವಿಲ್ಲದೆ ರಿಚ್ ಲುಕ್ ಪಡೆಯಬಹುದು. ಚಿನ್ನದ ಜೊತೆಗೆ ಬೆಳ್ಳಿ ಮಾಟಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿಭಿನ್ನ ಆಯ್ಕೆಗಳನ್ನು ನೀಡುತ್ತವೆ. 2025ರಲ್ಲಿ ಮಾಟಿ ಆಭರಣಗಳು ಮತ್ತೆ ಫ್ಯಾಷನ್‌ನಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಹಳೆಯ ಕಾಲದ ಮಾಟಿಗಳು ಈಗ ನವೀಕೃತ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸಾಂಪ್ರದಾಯಿಕ ಹಾಗೂ ಆಧುನಿಕ ಉಡುಪುಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

    ಸೀರೆ, ಗ್ರ್ಯಾಂಡ್‌ ಸೆಲ್ವಾರ್ ಅಥವಾ ಸ್ಕರ್ಟ್‌-ಬ್ಲೌಸ್‌ ಧರಿಸಿದಾಗ ಮಾಟಿ ಆಭರಣಗಳು ರಿಚ್‌ ಲುಕ್‌ ನೀಡುತ್ತವೆ. ಇವು ಫ್ರೀ ಹೇರ್ ಅಥವಾ ಬನ್‌ ಹೇರ್‌ಸ್ಟೈಲ್‌ಗೂ ಚೆನ್ನಾಗಿ ಹೊಂದುತ್ತವೆ. ಸಾಂಪ್ರದಾಯಿಕ ಉಡುಗೆಗಳಿಗೂ ವಿಭಿನ್ನ ರೀತಿಯ ಸ್ಟೈಲಿಶ್ ಮಾಟಿಗಳು ಹೊಸ ಲುಕ್ ಅನ್ನು ನೀಡುತ್ತದೆ. ಒಂದೆಳೆಯ ಮಾಟಿಗಳಿಂದ ಹಿಡಿದು ಎರಡು-ಮೂರೆಳೆಯ ಮಾಟಿಗಳವರೆಗೆ ವಿವಿಧ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಜೆಟ್‌ ಮತ್ತು ಶೈಲಿಗೆ ಅನುಗುಣವಾಗಿ ಆಯ್ಕೆಮಾಡಬಹುದು. ಹೀಗಾಗಿ, ಮಾಟಿ ಆಭರಣಗಳು ಇಂದಿನ ಫ್ಯಾಷನ್‌ ಪ್ರಿಯರಿಗೆ ಹೊಸ ಆಯ್ಕೆಯಾಗಿ ಹೊರಹೊಮ್ಮಿವೆ.

    ಅದರಲ್ಲೂ ಫ್ಯಾಷನ್‌ ಕ್ಷೇತ್ರದಲ್ಲಿರುವ ಮಾಡೆಲ್‌ಗಳು, ಸೆಲೆಬ್ರೆಟಿಗಳು ಅತಿ ಹೆಚ್ಚಾಗಿ ಇಂತಹ ಆಭರಣಗಳನ್ನು ಧರಿಸುತ್ತಾರೆ. ಫೋಟೋಶೂಟ್‌ನಲ್ಲಿ ಧರಿಸುವ ಮಾಟಿ ಇಯರಿಂಗ್ ಇಡೀ ಲುಕ್‌ ಅನ್ನು ಬದಲಿಸುತ್ತವೆ ಹಾಗೂ ನೋಡಲು ಆಕರ್ಷಕವಾಗಿ ಬಿಂಬಿಸುತ್ತವೆ. ಈಗಿನ ಟ್ರೆಂಡ್‌ಗೆ ಮ್ಯಾಚ್‌ ಆಗುವಂತಾ ಮಾಟಿಗಳನ್ನು ಡಿಸೈನರ್ಸ್ ಮಾರುಕಟ್ಟೆಗೆ ಪರಿಚಯಿಸಿದ್ದಾರೆ

    ಮಾಡ್ರನ್ ಡ್ರೆಸ್‌ಗಳಿಗೆ ಒಪ್ಪುವ ಮಾಟಿಗಳು

    ಸಿಂಪಲ್ ಡ್ರೆಸ್‌ಗಳು, ಶರ್ಟ್ಸ್ ಅಥವಾ ವೆಸ್ಟರ್ನ್ ಗೌನ್ಸ್‌ಗಳಿಗೆ ಸ್ಟೈಲಿಶ್ ಮಾಟಿಗಳು ಎತ್ನಿಕ್ ಟಚ್ ಕೊಡುತ್ತವೆ. ಹಾಗೆಯೇ ಯುನೀಕ್ ಆಗಿ ಕೂಡ ಕಾಣಿಸುತ್ತದೆ. ಕಚೇರಿ, ಕಾಲೇಜು ಅಥವಾ ಕಾಫಿ ಡೇಟ್‌ಗೆ ಬಳಸಬಹುದಾದ ಮಾಟಿಗಳು ಲಭ್ಯವಿವೆ. ಹ್ಯಾಂಡ್‌ಪೈಂಟೆಡ್ ಅಥವಾ ಪ್ಯಾಟ್‌ಟರ್ನ್ಡ್ ಮಾಟಿಗಳು ಶರ್ಟ್‌ ಡ್ರೆಸ್‌ಗಳಿಗೆ ತುಂಬಾ ಆಕರ್ಷಕವಾಗಿ ಕಾಣುತ್ತದೆ.

    ಮಾಟಿ ಆಭರಣಗಳ ತೂಕವು ಕಡಿಮೆಯಿದ್ದು, ವಿನ್ಯಾಸದ ವೈವಿಧ್ಯತೆ ಹೆಚ್ಚಾಗಿದೆ. ಜೀನ್ಸ್‌-ಟಾಪ್‌ ಅಥವಾ ಜಂಪ್‌ಸೂಟ್‌ ಜೊತೆ ಕಲರ್ ಫುಲ್ ಮಾಟಿಗಳು ಹಾಗೂ ಮ್ಯಾಚಿಂಗ್ ಬಳೆ ಹಾಕಿದರೆ ಕ್ಲಾಸೀ ಲುಕ್ ನೀಡುತ್ತದೆ. ಈ ಸ್ಟೈಲ್‌ಗಳನ್ನು ಬಳಸುವುದರಿಂದ ನವೀನತೆಯ ಜೊತೆಗೆ ಸಂಸ್ಕೃತಿಯ ಹಳೆಯ ಆಭರಣಗಳ ವಿನ್ಯಾಸಗಳೂ ಚಾಲ್ತಿಯಲ್ಲಿರುತ್ತದೆ.

    ಸ್ಟೋನ್‌ ಅಥವಾ ಮುತ್ತಿನ ಮಾಟಿ

    ಸ್ಟೋನ್‌ ಅಥವಾ ಮುತ್ತಿನ (Pearl) ಮಾಟಿ ತುಂಬಾನೇ ಆಕರ್ಷಕವಾಗಿ ಕಾಣುವುದು. ಮುತ್ತಿನ ಡಿಸೈನ್‌ಗಳ ಮಾಟಿಗಳು ಸೀರೆ, ಲಂಗ ದಾವಣಿಗೆ ಹೇಳಿ ಮಾಡಿಸಿದ ಆಭರಣವಾಗಿದೆ. ಇದು ಉಡುಪಿನ ರೂಪುರೇಷೆಯನ್ನೇ ಬದಲಾಯಿಸುತ್ತದೆ. ಹಾಗಾಗಿ ತುಂಬಾ ಜನ ಮುತ್ತಿನ ಡಿಸೈನ್‌ನಲ್ಲಿ ಮಾಟಿ ಖರೀದಿಸಲು ಇಷ್ಟಪಡುತ್ತಾರೆ.

     ಮಾಟಿ ಆಭರಣಗಳು ನಾವಿನ್ಯತೆಯೊಂದಿಗೆ ಸಂಸ್ಕೃತಿಯ ಸೌಂದರ್ಯವನ್ನೂ ಪ್ರತಿಬಿಂಬಿಸುತ್ತವೆ. ವಿಭಿನ್ನ ವಿನ್ಯಾಸಗಳೊಂದಿಗೆ ಆಧುನಿಕ ಫ್ಯಾಶನ್‌ಗೂ ಸೂಕ್ತವಾಗಿವೆ. ಸ್ಟೈಲಿಶ್ ಆಯ್ಕೆಯಾಗಿರುವ ಈ ಆಭರಣಗಳು ನಿತ್ಯ ಉಡುಪುಗಳಿಗೆ ಆಕರ್ಷಕವಾಗಿವೆ. ನೀವು ಸಾಂಪ್ರದಾಯಿಕ ಉಡುಗೆ ಹಾಗೂ ಮಾಡನ್ ಡ್ರೆಸ್ ಗಳಲ್ಲಿ ರಿಚ್ ಲುಕ್ ನಲ್ಲಿ ಕಾಣಿಸಿಕೊಳ್ಳಬೇಕೆಂದರೆ ಇಂತಹ ಆಧುನಿಕ ಮಾಟಿಗಳನ್ನ ಬಳಸಿ.

  • ಕಿವಿಯೋಲೆಗಾಗಿ ಪತ್ನಿಯನ್ನೇ ಕೊಂದು ವಾರಣಾಸಿಗೆ ಪರಾರಿಯಾದ

    ಕಿವಿಯೋಲೆಗಾಗಿ ಪತ್ನಿಯನ್ನೇ ಕೊಂದು ವಾರಣಾಸಿಗೆ ಪರಾರಿಯಾದ

    ಮುಂಬೈ: ಚಿನ್ನದ ಕಿವಿಯೋಲೆಯನ್ನು (Gold Earring) ಕೊಟ್ಟಿಲ್ಲವೆಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿ ಪತ್ನಿಯನ್ನೇ (Wife) ಕೊಂದು ಪತಿಯೊಬ್ಬ (Husband) ಪರಾರಿಯಾಗಿದ್ದಾರೆ,

    32 ವರ್ಷದ ವ್ಯಕ್ತಿಯನ್ನು ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇತ್ತೀಚೆಗೆ ಆತ ತನ್ನ ತಾಯಿಯ ಅಂತ್ಯಸಂಸ್ಕಾರದ ನಂತರದ ವಿಧಿವಿಧಾನಗಳನ್ನು ಮಾಡಲು ಹಣ ಕಡಿಮೆ ಇರುವುದರಿಂದ ಪತ್ನಿ ಬಳಿ ತನ್ನ ಚಿನ್ನದ ಕಿವಿಯೋಲೆಗಳನ್ನು ನೀಡಲು ಒತ್ತಾಯಿಸಿದ್ದಾನೆ. ಅದರೆ ಚಿನ್ನದ ಕಿವಿಯೋಲೆಯನ್ನು ನೀಡಲು ಆಕೆ ನಿರಾಕರಿಸಿದ್ದಾಳೆ. ಇದನ್ನೂ ಓದಿ: ಬೇರೆಯವಳು ಕಾಲ್ ಪಿಕ್ ಮಾಡಿದ್ದಕ್ಕೆ ಬಾಯ್‍ಫ್ರೆಂಡ್ ಮನೆಗೆ ಬೆಂಕಿ ಇಟ್ಲು

    ಇದರಿಂದ ಕೋಪಗೊಂಡ ಪತಿ ನ.19ರಂದು ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿ ಮಹಾರಾಷ್ಟç ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಈ ವೇಳೆ ಆರೋಪಿ ವಾರಣಾಸಿಗೆ ಪರಾರಿಯಾಗುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಮೀರಾ ಭಯಂದರ್ ವಸಾಯಿ ವಿರಾರ್ (ಎಂಬಿವಿವಿ) ಪೊಲೀಸರ ತಂಡವು ಲಲಿತ್‌ಪುರಕ್ಕೆ ಧಾವಿಸಿ ರೈಲಿನಲ್ಲಿ ಬಂಧಿಸಿದೆ. ಇದನ್ನೂ ಓದಿ: ಪತ್ನಿಯನ್ನು ಕೊಂದು ಆಕೆಯ ಶವವನ್ನು ತುಂಡರಿಸಿ ವಿಕೃತಿ ಮೆರೆದ ಪತಿ

    Live Tv
    [brid partner=56869869 player=32851 video=960834 autoplay=true]

  • ಫ್ಯಾಶನ್ ಅಂತಾ ಕಿವಿ ಚುಚ್ಚಿಸಿಕೊಳ್ಳುವವರಿಗೆ ಅದರ ಪ್ರಯೋಜನ ತಿಳಿದಿದ್ಯಾ?

    ಫ್ಯಾಶನ್ ಅಂತಾ ಕಿವಿ ಚುಚ್ಚಿಸಿಕೊಳ್ಳುವವರಿಗೆ ಅದರ ಪ್ರಯೋಜನ ತಿಳಿದಿದ್ಯಾ?

    ಫ್ಯಾಶನ್ ಎಂಬ ಮಾತ್ರಕ್ಕೆ ಅಲ್ಲ, ಕಿವಿ ಚುಚ್ಚಿಸಿಕೊಳ್ಳುವುದರಿಂದ ಆರೋಗ್ಯದ ಲಾಭವೂ ಇದೆ ಎಂಬುದು ಸತ್ಯ ಸಂಗತಿ. ಕಿವಿ ಚುಚ್ಚಿಸಿಕೊಳ್ಳುವುದು ಪ್ರಾಚೀನ ಭಾರತೀಯ ಪದ್ಧತಿಯಾಗಿದ್ದು, ಇದನ್ನು ಕರ್ಣವೇದ ಎಂತಲೂ ಕರೆಯುತ್ತಾರೆ.

    ಕಿವಿಯ ಬೇರೆ ಬೇರೆ ಮೂಲೆಗಳಲ್ಲಿ ಚುಚ್ಚಿಸಿಕೊಳ್ಳುವುದರಿಂದ ಅದರದೇ ಆದ ಪ್ರಯೋಜನಗಳಿವೆ ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಇವು ಕಿವಿಯ ಅಂದವನ್ನು ಹೆಚ್ಚಿಸುವುದರೊಂದಿಗೆ ಆರೋಗ್ಯವನ್ನೂ ವೃದ್ಧಿಸುತ್ತದೆ. ಕಿವಿಯ ಪ್ರತಿಯೊಂದು ಮೂಲೆ ದೇಹದ ಇತರ ಭಾಗಗಳೊಂದಿಗೆ ಸಂಪರ್ಕ ಹೊಂದಿರುತ್ತದೆ ಎಂಬುದೇ ಇದಕ್ಕೆ ಸಾಕ್ಷಿ. ಕಿವಿ ಚುಚ್ಚುವಿಕೆಯ ಪ್ರಯೋಜನವೇನೆಂಬುದನ್ನು ನಾವಿಲ್ಲಿ ನೋಡೋಣ.

    ಡೈತ್:
    ಕಿವಿಯ ಚಿಕ್ಕ ಮಡಿಕೆಯೇ ಡೈತ್. ಇತ್ತೀಚೆಗೆ ಜನರು ಕಿವಿಯ ಈ ಭಾಗದಲ್ಲಿ ಚುಚ್ಚಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಇದು ಅತ್ಯಂತ ವಿಭಿನ್ನವಾಗಿಯೂ ಕಾಣಿಸುತ್ತದೆ. ಹೆಚ್ಚಿನ ಜನರು ಮೈಗ್ರೇನ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಡೈತ್ ಚುಚ್ಚುವಿಕೆ ಇದಕ್ಕೆ ಪರಿಹಾರವಾಗಿದೆ ಎಂಬುದು ಸಾಬೀತಾಗಿದೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ಶಂಖ:
    ಇದು ಒಂದು ಬಗೆಯ ಕಿವಿ ಚುಚ್ಚಿಸುವಿಕೆಯಾಗಿದ್ದು, ಇದು ಆಕರ್ಷಕ ಚುಚ್ಚಿಸುವಿಕೆಗಳಲ್ಲಿ ಒಂದು. ಈ ಭಾಗದ ಚುಚ್ಚಿಸುವಿಕೆ ದೇಹದ ಸ್ನಾಯುವಿನ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಮುಖ್ಯವಾಗಿ ಮಾದಕ ವ್ಯಸನಿಗಳು ಈ ರೀತಿಯಲ್ಲಿ ಕಿವಿಯನ್ನು ಚುಚ್ಚಿಸಿಕೊಂಡರೆ ಚಟವನ್ನು ಬಿಡಿಸಲು ಇದು ಸಹಾಯ ಮಾಡುತ್ತದೆ ಎಂದೂ ಹೇಳಲಾಗುತ್ತದೆ.

    ಫಾರ್ವರ್ಡ್ ಹೆಲಿಕ್ಸ್:
    ಕಿವಿ ಹಾಗೂ ಮುಖವನ್ನು ಒಂದುಗೂಡಿಸುವ ಕಿವಿಯ ಮುಂದಿನ ಚಿಕ್ಕ ಭಾಗವೇ ಮುಂಭಾಗದ ಹೆಲಿಕ್ಸ್. ಇದು ಸ್ನಾಯು ಸೆಳೆತವನ್ನು ನಿವಾರಿಸಲು, ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮುಖದ ಮೇಲಿನ ಸುಕ್ಕು ಗೋಚರವಾಗುವುದನ್ನು ಕಡಿಮೆ ಮಾಡಲೂ ಇದನ್ನು ಚುಚ್ಚಿಸಲಾಗುತ್ತದೆ.

    ಹೆಲಿಕ್ಸ್:
    ಕಿವಿ ಮೇಲಿನ ಹೊರಭಾಗದ ಮಡಿಕೆಯೇ ಹೆಲಿಕ್ಸ್. ಇದು ಅತ್ಯಂತ ಪ್ರಸಿದ್ಧ ಹಾಗೂ ಸಾಂಪ್ರದಾಯಿಕ ಚುಚ್ಚಿಸುವಿಕೆಗಳಲ್ಲೂ ಒಂದಾಗಿದೆ. ಇದು ಗಂಟಲು ನೋವು ಹಾಗೂ ಹಲವು ಅಲರ್ಜಿಗಳನ್ನು ನಿವಾರಿಸುತ್ತದೆ. ನಿದ್ರಾಹೀನತೆಗೂ ಇದು ಪರಿಹಾರವಾಗಿದೆ. ಇದನ್ನೂ ಓದಿ: ಕ್ಯೂಟ್ ಆಗಿ ಕಾಣಿಸಲು ಬಳಸಿ ಈ ಹೇರ್ ಆ್ಯಕ್ಸಸರೀಸ್

    ಲೋಬ್:
    ಇದು ಸಾಮಾನ್ಯ ಹಾಗೂ ಮಕ್ಕಳಿಗೆ ಮೊದಲ ಬಾರಿ ಚುಚ್ಚಿಸುವ ಕಿವಿಯ ಭಾಗವಾಗಿದೆ. ಈ ಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಚುಚ್ಚಿಸಿಕೊಳ್ಳುವುದು ಮೊದಲಿನಿಂದಲೂ ಫ್ಯಾಶನ್. ಲೋಬ್ ಭಾಗದ ಚುಚ್ಚಿಸುವಿಕೆ ದೃಷ್ಟಿಯನ್ನು ಸುಧಾರಿಸುತ್ತದೆ ಎನ್ನಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಲ್ಲೊಂದು ವಿಚಿತ್ರ ಘಟನೆ- ಹೆಣದ ಒಡವೆ ಕಿತ್ತುಕೊಂಡ್ರಾ ಆಸ್ಪತ್ರೆ ಸಿಬ್ಬಂದಿ..?

    ಬೆಂಗ್ಳೂರಲ್ಲೊಂದು ವಿಚಿತ್ರ ಘಟನೆ- ಹೆಣದ ಒಡವೆ ಕಿತ್ತುಕೊಂಡ್ರಾ ಆಸ್ಪತ್ರೆ ಸಿಬ್ಬಂದಿ..?

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಹೆಣದ ಕಿವಿಯೋಲೆ ಮಾಯವಾಗಿದ್ದು, ಸತ್ತವರನ್ನೂ ಆಸ್ಪತ್ರೆ ಸಿಬ್ಬಂದಿ ಬಿಡಲ್ವಾ ಅನ್ನೋ ಪ್ರಶ್ನೆ ಎದ್ದಿದೆ.

    ಹೌದು. ತ್ರಿವೇಣಿ ರೋಡ್ ನಲ್ಲಿ ವಾಸವಿರುವ ರುಕ್ಮಿಣಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಅಲ್ಲಿ ಹೋದಾಗ ರುಕ್ಮಿಣಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ದಂತ ವೈದ್ಯರ ಎಡವಟ್ಟು – ಚಿಕಿತ್ಸೆ ಪಡೆದ ನಟಿಯ ಮುಖ ಸಂಪೂರ್ಣ ಚೇಂಚ್

    ಅದಾದ ಬಳಿಕ ರುಕ್ಮಿಣಿಯನ್ನು ಎಮರ್ಜೆನ್ಸಿಗೆ ವೈದ್ಯರು ಕರೆದುಕೊಂಡು ಹೋದರು. ನಂತರ ಅಂಬುಲೆನ್ಸ್ ಗೆ ಶಿಫ್ಟ್ ಮಾಡಲು ಹೇಳಿದರು. ಅಂತೆಯೇ ಶಿಫ್ಟ್ ವೇಳೆ ಕಿವಿ ಹರಿದಂತೆ ಕಂಡಿದ್ದು, ರಕ್ತ ಸುರಿಯುತ್ತಿತ್ತು. ಅಲ್ಲದೆ ಕಿವಿಯೋಲೆ ಇಲ್ಲವಾಗಿತ್ತು. ಕೂಡಲೇ ಅನುಮಾನಗೊಂಡ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಕೆಲಕಾಲ ವಾಗ್ವಾದ ನಡೆದ ಬಳಿಕ ಸೆಕ್ಯೂರಿಟಿ ಸಿಬ್ಬಂದಿ ಕಿವಿಯೋಲೆ ತಂದು ಕೊಟ್ಟ ಪ್ರಸಂಗ ನಡೆದಿದೆ.

    ರುಕ್ಮಿಣಿ ಮಗಳು ಕವಿತಾ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿ, ಕಿವಿಯೋಲೆಯಲ್ಲೂ ಪೂರ್ತಿ ಕೊಟ್ಟಿಲ್ಲ. ಅಲ್ಲದೆ ನಾಲ್ಕು ತಾಳಿಯ ಮಾಂಗಲ್ಯ ಸರ ಕೂಡ ನಾಪತ್ತೆಯಾಗಿದೆ. ಸತ್ತ ಹೆಣನಾ ಹೀಗೆ ಕುಯ್ದು ಚಿನ್ನ ಎತ್ತಿಕೊಳ್ತಾರೆ ಅಂದ್ರೆ ಆಸ್ಪತ್ರೆಯವರನ್ನು ಹೇಳೋರು ಕೇಳೋರು ಯಾರು ಇಲ್ವಾ..?, ನಾವು ಕಳೆದುಕೊಂಡ ನೋವಲ್ಲಿ ಇರುತ್ತೇವೆ. ಅಂಥದ್ದರಲ್ಲಿ ಈ ರೀತಿಯ ವರ್ತನೆ ನಿಜಕ್ಕೂ ಕಣ್ಣೀರು ಬಂತು. ಕಿವಿಯನ್ನು ರಕ್ತ ಬರೋ ತರ ಎಳೆದು ಓಲೆ ಕಿತ್ತುಕೊಂಡಿದ್ದಾರೆ. ನಾವು ಸ್ಟೇಷನ್ ಗೆ ದೂರು ಕೊಡ್ತೀವಿ ಎಂದು ಕಣ್ಣೀರಾಕಿದ್ದಾರೆ.

    Live Tv

  • ಬಂಗಾರದ ಕಿವಿಯೋಲೆಗಾಗಿ 4ರ ಬಾಲಕಿ ಜೀವ ತೆಗೆದ ಆಂಟಿಯರು

    ಬಂಗಾರದ ಕಿವಿಯೋಲೆಗಾಗಿ 4ರ ಬಾಲಕಿ ಜೀವ ತೆಗೆದ ಆಂಟಿಯರು

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಒಂದು ಜೊತೆ ಬಂಗಾರದ ಕಿವಿಯೋಲೆಗಾಗಿ ನೆರೆಮನೆಯ ಇಬ್ಬರು ಮಹಿಳೆಯರು 4 ವರ್ಷದ ಬಾಲಕಿ ಜೀವವನ್ನೇ ತೆಗೆದಿದ್ದಾರೆ.

    ಮುರ್ಷಿದಾಬಾದ್ ಜಿಲ್ಲೆಯ ಖಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 4 ವರ್ಷದ ಬಾಲಕಿ ತನ್ನ ಕುಟುಂಬಸ್ಥರೊಂದಿಗೆ ಖಾರ್‍ಗ್ರಾಮದಲ್ಲಿ ವಾಸಿಸುತ್ತಿದ್ದಳು. ಬಾಲಕಿಯ ನೆರೆಮನೆಯಲ್ಲಿದ್ದ ಇಬ್ಬರು ಮಹಿಳೆಯರು ಆಕೆಯ ಮನೆಯವರು ಜೊತೆ ಒಳ್ಳೆಯ ಸ್ನೇಹ ಬೆಳೆಸಿದ್ದರು. ಆದರೆ ಬಾಲಕಿ ಕಿವಿಯಲ್ಲಿದ್ದ ಬಂಗಾರ ಓಲೆ ಮೇಲೆ ಮಹಿಳೆಯರಿಗೆ ಕಣ್ಣಿತ್ತು. ಹೀಗಾಗಿ ಬಂಗಾರದ ಆಸೆ ಪುಟ್ಟ ಜೀವವನ್ನೇ ಮಹಿಳೆಯರು ಬಲಿ ಪಡೆದಿದ್ದಾರೆ.

    ಮಂಗಳವಾರ ಬಾಲಕಿ ಮನೆಯಿಂದ ಕಾಣೆಯಾಗಿದ್ದಳು. ಈ ಬಗ್ಗೆ ಪೋಷಕರು ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಆದರೆ ಬುಧವಾರ ರಕ್ತದ ಮಡುವಿನಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿ ಮಹಿಳೆಯರು ಸಿಕ್ಕಿಬಿದ್ದಾರೆ. ಮಹಿಳೆಯರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

    ಬಾಲಕಿ ಕಿವಿಯಲ್ಲಿದ್ದ ಬಂಗಾರದ ಓಲೆಗಾಗಿ ಆಕೆಯನ್ನು ಕೊಲೆ ಮಾಡಿದೆವು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕೃತ್ಯದಲ್ಲಿ ಬೇರೆ ಯಾರು ಭಾಗಿಯಾಗಿಲ್ಲ, ಕೇವಲ ಕಿವಿಯೋಲೆಗಾಗಿ ನಾವು ಕೊಲೆ ಮಾಡಿದ್ದೇವೆ ಎಂದು ಮಹಿಳೆಯರು ಹೇಳಿದ್ದಾರೆ.

    ಸದ್ಯ ಈ ಸಂಬಂಧ ಪೊಲೀಸರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದು, ಬುಧವಾರವೇ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

  • `ಕೈ’ ಸ್ಟಾರ್ ಪ್ರಚಾರಕಿ ನಟಿ ಖುಷ್ಬೂ `ಕಮಲ’ದ ಕಿವಿಯೋಲೆ ಫುಲ್ ವೈರಲ್!

    `ಕೈ’ ಸ್ಟಾರ್ ಪ್ರಚಾರಕಿ ನಟಿ ಖುಷ್ಬೂ `ಕಮಲ’ದ ಕಿವಿಯೋಲೆ ಫುಲ್ ವೈರಲ್!

    ಬೆಂಗಳೂರು: ಕೈ ಸ್ಟಾರ್ ಪ್ರಚಾರಕಿ, ಬಹುಭಾಷಾ ನಟಿ, ಕಾಂಗ್ರೆಸ್ ವಕ್ತಾರೆ ನಟಿ ಖುಷ್ಬೂ ಅವರ ಕಿವಿಯೋಲೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಶನಿವಾರ ನಡೆದ ಕೆಪಿಸಿಸಿ ಸಭೆಗೆ ಖುಷ್ಬೂ ಕಮಲದ ಹೂವಿನ ಕಿವಿಯೋಲೆ ಧರಿಸಿದ್ದು, ಸದ್ಯ ಈಗ ಸಾಕಷ್ಟು ವೈರಲ್ ಆಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನರಲ್ಲಿ ಭಾರೀ ಕುತೂಹಲ ಉಂಟಾಗಿದೆ.

    ಇದಕ್ಕೂ ಮೊದಲು ಬಿಜೆಪಿ ಖುಷ್ಬೂ ಅವರ ಮೂಲ ಹೆಸರನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ದಾಳಿ ಆರಂಭಿಸಿತ್ತು. ಖುಷ್ಬೂ ತಮ್ಮ ಗುರುತನ್ನು ಮರೆಮಾಚುತ್ತಿದ್ದು, ತಮ್ಮ ಧರ್ಮವನ್ನು ಕೀಳಾಗಿ ನೋಡುತ್ತಿದ್ದಾರೆ. ಅಷ್ಟೇ ಅಲ್ಲದೇ ಹೆಸರನ್ನು ಮುಚ್ಚಿಡುತ್ತಿದ್ದಾರೆ ಎಂದು ಬಿಜೆಪಿ ಫಾಲೋವರ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡತೊಡಗಿದರು.

    ಈ ಟೀಕೆಯ ಬಳಿಕ ಖುಷ್ಬೂ ಅವರು ಟ್ವೀಟರ್ ಖಾತೆಯಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಖುಷ್ಬೂ ಸುಂದರ್ ಜೊತೆಗೆ ಬಿಜೆಪಿಗಾಗಿ ನಖಟ್ ಖಾನ್ ಎಂದು ಬರೆದುಕೊಂಡಿದ್ದಾರೆ.

    ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಸಮಸ್ಯೆಗಳನ್ನು ಪರಿಹರಿಸಬೇಕಾದವರು ಬೇರೆಯವರ ವೈಯಕ್ತಿಕ ಜೀವನದಲ್ಲಿ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ. ನನ್ನ ಪೋಷಕರು ನಖಟ್ ಎಂದು ಹೆಸರನ್ನು ಇಟ್ಟಿದ್ದರು. ಬಿಜೆಪಿಯವರಿಗೆ ಬುದ್ಧಿ ಕಲಿಸಲು ನಾನು ಹೆಸರು ಬದಲಾಯಿಸಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

  • ಶಾಕಿಂಗ್: ಯುವತಿಯ ಕಿವಿಯಲ್ಲಿ ಸಿಲುಕಿಕೊಳ್ತು ಹೆಬ್ಬಾವು!

    ಲಾಸ್ ಏಂಜಲಿಸ್: ಕೆಲವೊಮ್ಮೆ ಕಿವಿಯೊಳಗೆ ಇರುವೆಯೋ, ಜಿರಲೆಯೋ ಹೋಗಿ ಸಿಲುಕಿಕೊಂಡಿರೋ ಘಟನೆ ಬಗ್ಗೆ ಕೇಳಿರ್ತೀವಿ. ಆದ್ರೆ ಅಮೆರಿಕದಲ್ಲಿ ಯುವತಿಯೊಬ್ಬಳ ಕಿವಿಯ ರಂಧ್ರದಲ್ಲಿ ಹೆಬ್ಬಾವೊಂದು ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ.

    ನಂಬಲು ಅಸಾಧ್ಯವಾದ್ರೂ ಇದು ನಿಜ. ಇಲ್ಲಿನ ಒರೆಗಾನ್ ನಿವಾಸಿಯಾದ 17 ವರ್ಷದ ಆಶ್ಲೀ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಆಕೆ ಸಾಕಿದ್ದ ಬಾಲ್ ಪೈಥಾನ್ ಜಾತಿಯ ಬಾರ್ಟ್ ಎಂಬ ಹೆಬ್ಬಾವು ಕಿವಿಯಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಆಕೆ ಗಾಬರಿಗೊಂಡು ಹಾವನ್ನು ಹೊರಗೆಳೆಯಲು ಹರಸಾಹಸ ಪಟ್ಟಿದ್ದಾಳೆ. ಆದ್ರೆ ಅದು ಸಾಧ್ಯವಾಗದಿದ್ದಾಗ ಎಮರ್ಜೆನ್ಸಿ ನಂಬರ್ ಗೆ ಕರೆ ಮಾಡಿದ್ದಾಳೆ. ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದಿದ್ದು, ಅವರೂ ಕೂಡ ಹಾವನ್ನು ತೆಗೆಯಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು, ವೈದ್ಯರು ಆಕೆಯ ಕಿವಿಯನ್ನು ಮರಗಟ್ಟುವಂತೆ ಔಷಧಿ ನೀಡಿ ಹಾವನ್ನು ಹೊರತೆಗೆದಿದ್ದಾರೆ.

    ಕಿವಿಯ ರಂಧ್ರದೊಳಗೆ ಹಾವು ಹೋಗಲು ಹೇಗೆ ಸಾಧ್ಯ?: ಕಿವಿಯಲ್ಲಿ ದೊಡ್ಡದಾದ ರಂಧ್ರವಾಗುವಂತೆ ಕಿವಿ ಚುಚ್ಚಿಸುವುದು ಇತ್ತೀಚಿನ ಫ್ಯಾಶನ್. ಇದಕ್ಕೆ ಸ್ಟ್ರೆಚ್ ಪಿಯರ್ಸಿಂಗ್ ಅಂತಾರೆ. ರಿಂಗ್‍ವೊಂದನ್ನು ಕಿವಿಯ ಆಲೆಗೆ ಹಾಕಲಾಗಿರುತ್ತದೆ. ಆಶ್ಲೀ ಕೂಡ ಇದೇ ರೀತಿ ಕಿವಿ ಚುಚ್ಚಿಸಿಕೊಂಡಿದ್ದರಿಂದ ಹಾವು ಒಳಗೆ ಸಿಲುಕಿ ಈ ಫಜೀತಿ ಅನುಭವಿಸಬೇಕಾಯ್ತು.