Tag: ಕಿಲಿ ಪೌಲ್

  • ಯಶ್ ನಟನೆಯ ‘ಟಾಕ್ಸಿಕ್’ ಚಿತ್ರತಂಡ ಸೇರಿಕೊಂಡ ಅಮೆರಿಕದ ನಟ

    ಯಶ್ ನಟನೆಯ ‘ಟಾಕ್ಸಿಕ್’ ಚಿತ್ರತಂಡ ಸೇರಿಕೊಂಡ ಅಮೆರಿಕದ ನಟ

    ಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದ ತಾರಾಗಣ ದಿನದಿಂದ ದಿನಕ್ಕೆ ಹಿರಿದಾಗುತ್ತಲೇ ಇದೆ. ತಮಿಳು ನಟ ನಯನತಾರಾ, ಬ್ರಿಟೀಷ್ ನಟ ಡ್ಯಾರೆಲ್ ಡಿಸಿಲ್ವಾ, ಅಕ್ಷಯ್ ಒಬೆರಾಯ್ ಚಿತ್ರತಂಡ ಸೇರಿಕೊಂಡ ಬಳಿಕ ಅಮೆರಿಕದ ನಟ ಕಿಲಿ ಪೌಲ್ (Kyle Paul) ‘ಟಾಕ್ಸಿಕ್’ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಇಂತಹದೊಂದು ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Abir Roy (@1abirroy)

    ಈಗಾಗಲೇ ಯಶ್ ಸಿನಿಮಾಗೆ ನಯನತಾರಾ ಎಂಟ್ರಿ ಕೊಟ್ಟಿದಾಗಿದೆ. ಬೆಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಭರದಿಂದ ನಡೆಯುತ್ತಿದೆ. ಇದರ ನಡುವೆ ಅಮೆರಿಕದ ಖ್ಯಾತ ನಟ ಕಿಲಿ ಪೌಲ್ ‘ಟಾಕ್ಸಿಕ್’ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ತಂಡದಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ

    ಅಂದಹಾಗೆ, ಯಶ್ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಸಂಸ್ಥೆ ನಿರ್ಮಾಣಕ್ಕೆ ಸಾಥ್ ನೀಡಿದೆ.

  • ಪ್ರಧಾನಿ ನರೇಂದ್ರ ಮೋದಿ ನೆಚ್ಚಿನ ಸೆನ್ಸೇಷನ್ ಕಲಾವಿದ ಕಿಲಿ ಪೌಲ್ ಮೇಲೆ ಮಾರಣಾಂತಿಕ ಹಲ್ಲೆ

    ಪ್ರಧಾನಿ ನರೇಂದ್ರ ಮೋದಿ ನೆಚ್ಚಿನ ಸೆನ್ಸೇಷನ್ ಕಲಾವಿದ ಕಿಲಿ ಪೌಲ್ ಮೇಲೆ ಮಾರಣಾಂತಿಕ ಹಲ್ಲೆ

    ಸೋಷಿಯಲ್ ಮೀಡಿಯಾಗಳು ಮೂಲಕ, ಅದರಲ್ಲೂ ಲಿಪ್ ಸಿಂಕ್ ಕಲಾವಿದನಾಗಿದ್ದ ಕಿಲಿ ಪೌಲ್ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಆಫ್ರಿಕಾದ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಆಗಿರುವ ಕಿಲಿ ಪೌಲ್, ಹೆಚ್ಚೆಚ್ಚು ರೀಲ್ಸ್ ಮತ್ತು ಲಿಪ್ ಸಿಂಕ್ ಹಾಡುಗಳ ಮೂಲಕ ಫೇಮಸ್ ಆಗಿದ್ದವರು. ಕನ್ನಡದ ಕೆಜಿಎಫ್ 2 ಸಿನಿಮಾದ ಹಾಡಿಗೂ ಅವರು ಲಿಪ್ ಸಿಂಕ್ ಮಾಡಿದ್ದರು. ಕಚ್ಚಾ ಬಾದಾಮ್ ಸೇರಿದಂತೆ ಹಲವು ಗೀತೆಗಳಿಗೆ ತುಟಿಚಲನೆ ಕೂಡಿಸಿ ಫೇಮಸ್ ಆದವರು. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

    ತಮ್ಮ ಮೇಲಿನ ದಾಳಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಿಲಿ ಪೌಲ್, ‘ಐದು ಜನ ದುಷ್ಕರ್ಮಿಗಳು ಏಕಾಏಕಿ ನನ್ನ ಮೇಲೆ ದಾಳಿ ಮಾಡಿದ್ದಾರೆ. ಕೈಗೆ ಪೆಟ್ಟಾಗಿದೆ. ದೇಹದ ವಿವಿಧ ಭಾಗಗಳಿಗೂ ಏಟಾಗಿದೆ. ಹಾಗಾಗಿ ನನಗಾಗಿ ಪ್ರಾರ್ಥಿಸಿ ಎಂದು ಅವರು ಕೇಳಿಕೊಂಡಿದ್ದಾರೆ. ಅಲ್ಲದೇ ಅವರು ಬಚಾವ್ ಆಗಿದ್ದು ಹೇಗೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ಇಬ್ಬರೂ ಭಾರತದ ಅದೆಷ್ಟೋ ಹಾಡುಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಭಾರತೀಯ ನಾನಾ ಭಾಷೆಗಳ ಹಾಡಿಗೆ ಅವರು ಸಂಭ್ರಮಿಸಿದ್ದಾರೆ. ಈ ಜೋಡಿಯ ಬಹುತೇಕ ಹಾಡುಗಳು ಫೇಮಸ್ ಕೂಡ ಆಗಿವೆ. ಅದರಲ್ಲೂ ಇನ್ಸ್ಟಾದಲ್ಲಿ ಅವರು ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ

    ಇವರ ಜನಪ್ರಿಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಾತನಾಡಿದ್ದರು. ಮನ್ ಕಿ ಬಾತ್ ನಲ್ಲಿ ಮಾತನಾಡಿದ್ದ ಪ್ರಧಾನಿಗಳು ಕನ್ನಡದ ಹಾಡಿಗೂ ಲಿಪ್ ಸಿಂಕ್ ಮಾಡುವಂತೆ ಕೇಳಿದ್ದರು. ಪ್ರಧಾನಿ ಮನವಿ ಮೇರೆಗೆ ಭಾರತೀಯ ಭಾಷೆಯ ಅನೇಕ ಗೀತೆಗಳನ್ನು ಹಾಡಿದ್ದರು.

    ತಮ್ಮ ಮೇಲಿನ ಹಲ್ಲೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಷ್ಟೇ ಅಲ್ಲ, ವಿಡಿಯೋ ಸಮೇತ ಶೇರ್ ಮಾಡಿದ್ದಾರೆ. ಅವರ ಬೆರಳಿಗೆ ಮತ್ತು ಇತರ ಕಡೆ ಗಾಯಗಳಾಗಿವೆ. ಅವರೇ ಹೇಳುವಂತೆ ಚಾಕುವಿನಿಂದ ಮತ್ತು ದೊಣ್ಣೆಯಿಂದಲೂ ಹಲ್ಲೆ ಮಾಡಲಾಗಿದೆಯಂತೆ. ಕೈಗೆ ಐದು ಹೊಲಿಗೆ ಹಾಕಲಾಗಿದೆ ಎಂದು ಬರೆದುಕೊಂಡಿದ್ದಾರೆ.

  • ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್‍ಗೆ ಭಾರತೀಯ ಹೈ ಕಮಿಷನ್ ಗೌರವ

    ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್‍ಗೆ ಭಾರತೀಯ ಹೈ ಕಮಿಷನ್ ಗೌರವ

    ನವದೆಹಲಿ: ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್‍ಗೆ ಭಾರತೀಯ ಹೈ ಕಮಿಷನ್ ಗೌರವ ಸಲ್ಲಿಸಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್ ಸಿಂಕ್ ಮತ್ತು ಡ್ಯಾನ್ಸ್ ಮಾಡುವ ವೀಡಿಯೋಗಳಿಗೆ ಹೆಸರುವಾಸಿಯಾಗಿರುವ ತಾಂಜಾನಿಯಾದ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪಾಲ್ ಅವರನ್ನು ತಾಂಜಾನಿಯಾದಲ್ಲಿರುವ ಭಾರತದ ಹೈಕಮಿಷನ್ ಗೌರವಿಸಿದೆ. ತಾಂಜಾನಿಯಾದ ಭಾರತೀಯ ಹೈಕಮಿಷನರ್ ಬಿನಯಾ ಪ್ರಧಾನ್ ಅವರು ಕಿಲಿ ಪೌಲ್ ಅವರನ್ನು ಗೌರವಿಸಿರುವ  ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆ- ವೆಲ್ಲೂರಿನಲ್ಲಿ ತೃತೀಯಲಿಂಗಿಗೆ ಗೆಲುವು

    ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್‍ಸಿಂಕ್ ಮತ್ತು ನೃತ್ಯ ಮಾಡುವ ಮೂಲಕ ಲಕ್ಷಾಂತರ ಭಾರತೀಯರ ಪ್ರೀತಿ ಗಳಿಸಿರುವ ಕಿಲಿ ಪೌಲ್ ಭಾರತೀಯ ಹೈಕಮಿಷನರ್ ಕಚೇರಿಗೆ ಆಗಮಿಸಿದ್ದರು. ಅವರನ್ನು ಗೌರವಿಸಲಾಗಿದೆ ಎಂದು ಬಿನಯಾ ಪ್ರಧಾನ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಇನ್‍ಸ್ಟಾಗ್ರಾಮ್ ಸ್ಟೋರೀಸ್‍ನಲ್ಲಿ ಪ್ರತಿಕ್ರಿಯೆ ನೀಡಿರುವ ಕಿಲಿ ಪೌಲ್, ಭಾರತದ ಹೈಕಮಿಷನರ್‌ಗೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    Kili Paul

    ಕಿಲಿ ಪೌಲ್ ಅವರನ್ನು ಬಾಲಿವುಡ್‍ನ ರಿಚಾ ಚಡ್ಡಾ, ಗುಲ್ ಪನಾಗ್, ಆಯುಷ್ಮಾನ್ ಖುರಾನಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಇನ್‍ಸ್ಟಾಟಾದಲ್ಲಿ ಫಾಲೋ ಮಾಡುತ್ತಿದ್ದಾರೆ.   ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಶೇರ್ ಷಾ ಚಿತ್ರದ ಹಾಡೊಂದಕ್ಕೆ ಲಿಪ್‍ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದರು.

  • ಕೆಜಿಎಫ್ ಸಿನಿಮಾದ ಹಾಡಿಗೆ ಕಿಲಿ ಪೌಲ್ ಮಸ್ತ್ ಸ್ಟೆಪ್ಸ್

    ಕೆಜಿಎಫ್ ಸಿನಿಮಾದ ಹಾಡಿಗೆ ಕಿಲಿ ಪೌಲ್ ಮಸ್ತ್ ಸ್ಟೆಪ್ಸ್

    ಮುಂಬೈ: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಹಿಂದಿ ವರ್ಷನ್‍ನ ಪಾಪುಲರ್  ಸಾಂಗ್‍ಗೆ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಹೆಜ್ಜೆ ಹಾಕಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Kili Paul

    ಒಂದೊಂದೇ ಹೆಜ್ಜೆ ಇಡುತ್ತಾ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ರಾಕಿಂಗ್ ಸ್ಟಾರ್ ಹವಾ ಭಾರತದಲ್ಲಿ ಮಾತ್ರವಲ್ಲ ಇದೀಗ ಆಫ್ರಿಕಾದಲ್ಲಿಯೂ ಭಾರೀ ಸದ್ದು ಮಾಡುತ್ತಿದೆ. ಯಶ್ ಅಭಿನಯಿಸಿದ್ದ ಸೂಪರ್ ಡೂಪರ್ ಹಿಟ್ ಕೆಜಿಎಫ್ ಚಾಪ್ಟರ್-1 ಸಿನಿಮಾದ ಹಿಂದಿ ವರ್ಷನ್ ಗಲಿಗಲಿ ಮೇ ಸಾಂಗ್ ಬಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡಿತ್ತು. ಇನ್ನೂ ಈ ಹಾಡಿನಲ್ಲಿ ಯಶ್‍ಗೆ ಬಾಲಿವುಡ್ ನಟಿ ಮೌನಿ ರಾಯ್ ಜೋಡಿಯಾಗಿದ್ದರು. ಇದೀಗ ಇದೇ ಹಾಡಿಗೆ ಕಿಲಿ ಪೌಲ್ ನೃತ್ಯ ಮಾಡಿದ್ದು, ಈ ವೀಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ:   ಉದ್ದೇಶಪೂರ್ವಕವಾಗಿಯೇ ಕೋವಿಡ್ ಸೋಂಕು ತಗುಲಿಸಿಕೊಂಡು ಗಾಯಕಿ ನಿಧನ

     

    View this post on Instagram

     

    A post shared by Kili Paul (@kili_paul)

    ಕಿಲಿ ಪೌಲ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸುಮಾರು 13 ಲಕ್ಷಕ್ಕೂ ಹೆಚ್ಚು ಮಂದಿ ಕಿಲಿ ಪೌಲ್ ಅವರನ್ನು ಮಾಡುತ್ತಿದ್ದಾರೆ. ಆಗಾಗ ಭಾರತೀಯ ಚಲನ ಚಿತ್ರಗಳ ಫೇಮಸ್ ಹಾಡುಗಳಿಗೆ ನೃತ್ಯ ಮಾಡುವ ಕಿಲಿ ಪೌಲ್ ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅಭಿನಯದ ಉ ಅಂಟವಾ ಮಾಮ ಹಾಡಿಗೆ ಸ್ಟೇಪ್ಸ್ ಹಾಕುವ ಮೂಲಕ ಭಾರೀ ಸದ್ದು ಮಾಡಿದ್ದರು. ಈಗ ಕೆಜಿಎಫ್ ಚಿತ್ರದ ಗಲಿ ಗಲಿ ಮೇ ಹಾಡಗೆ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: ಡಾನ್ಸ್ ಮಾಡಿದ ವಧುವಿನ ಕೆನ್ನೆಗೆ ಹೊಡೆದ ವರ- ಮದುವೆ ಮುರಿದು ಬಿತ್ತು

     

    View this post on Instagram

     

    A post shared by Kili Paul (@kili_paul)

    ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಕಿಲಿಪೌಲ್ ಅವರು, ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಅಭಿನಯದ ಬ್ಲಾಕ್ ಬಾಸ್ಟರ್ ಸಿನಿಮಾ ಕೆಜಿಎಫ್. ಐ ಲವ್ ದಿಸ್ ಮಾಸ್ಟರ್ ಪೀಸ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 10ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಅನೇಕ ಕಾಮೆಂಟ್‍ಗಳ ಸುರಿಮಳೆಯೇ ಹರಿದುಬಂದಿದೆ.