Tag: ಕಿರುಬೆರಳು

  • ಕಿರುಬೆರಳನ್ನೇ ಕತ್ತರಿಸಿ ಪೆಂಡೆಂಟ್ ಮಾಡ್ಕೊಂಡು ನೆಕ್ಲೆಸ್‍ನೊಂದಿಗೆ ಧರಿಸಿದ್ಳು!

    ಕಿರುಬೆರಳನ್ನೇ ಕತ್ತರಿಸಿ ಪೆಂಡೆಂಟ್ ಮಾಡ್ಕೊಂಡು ನೆಕ್ಲೆಸ್‍ನೊಂದಿಗೆ ಧರಿಸಿದ್ಳು!

    ಲಂಡನ್: ಬೆರಳುಗಳ ಮಾಲೆ ಧರಿಸಿದ್ದ ಅಂಗುಲಿಮಾಲನ ಕಥೆಯನ್ನ ನೀವು ಕೇಳಿರ್ತೀರ. ಅದನ್ನೇ ನೆನಪಿಸುವಂತೆ ಇಲ್ಲೊಬ್ಬಳು ಮಹಿಳೆ ತನ್ನ ಕಿರುಬೆರಳನ್ನೇ ಕತ್ತರಿಸಿ ಪೆಂಡೆಂಟ್‍ನಂತೆ ಮಾಡಿಕೊಂಡು ಕುತ್ತಿಗೆಗೆ ನೆಕ್ಲೆಸ್ ಜೊತೆ ಧರಿಸಿದ್ದಾಳೆ.

    ಇಂಗ್ಲೆಂಡಿನ ಎಸ್ಸೆಕ್ಸ್ ನಗರದ ನಿವಾಸಿ ಟಾರ್ಸ್ ರೆನಾಲ್ಡ್ಸ್(30) ತನ್ನ ಎಡಗೈ ಕಿರುಬೆರಳನ್ನ ಮರಗಟ್ಟುವಂತೆ ಮಾಡಿ ನಂತರ ಬೋಲ್ಟ್ ಕಟ್ಟರ್‍ನಿಂದ ಅರ್ಧ ಬೆರಳನ್ನೇ ತುಂಡು ಮಾಡಿದ್ದಾಳೆ.

    ವೃತ್ತಿಯಲ್ಲಿ ಬಾಡಿ ಪಿಯರ್ಸರ್ ಆಗಿರೋ ಈಕೆ ಈ ಬಗ್ಗೆ ಮಾತನಾಡಿ, ನಾನು ಮೊದಲಿಗೆ ಬೆರಳನ್ನ ಫ್ರೀಜರ್‍ನಲ್ಲಿ ಬಟಾಣಿಯ ಜೊತೆ ಇಟ್ಟು ಮರೆತುಬಿಟ್ಟಿದ್ದೆ ಎಂದು ಹೇಳಿದ್ದಾಳೆ. ಆದ್ರೆ ನಂತರ ಆಕೆ ಅದನ್ನ ಆಗಾಗ ನೆಕ್ಲೇಸ್ ಜೊತೆ ಹೇಕಿಕೊಳ್ಳಲು ಮದ್ಯದ ದ್ರಾವಣದ ಜೊತೆ ಹಾಕಿ ಚಿಕ್ಕ ಗಾಜಿನ ಬಾಟಲಿಯಲ್ಲಿ ತುಂಬಿಸಿ ಪೆಂಡೆಂಟ್ ಮಾಡಿಕೊಂಡಿದ್ದಾಳೆ.

    ಈ ಐಡಿಯಾ ತುಂಬಾ ಕ್ಯೂಟ್ ಅನ್ನಿಸ್ತು. ಹಲವಾರು ವರ್ಷಗಳಿಂದ ಇದನ್ನ ಮಾಡಬೇಕೆಂದುಕೊಂಡಿದ್ದೆ ಎಂದು ಟಾರ್ಸ್ ಹೇಳಿದ್ದಾಳೆ. ತುಂಡರಿಸಿದ ಬೆರಳಿಗೆ ವಿಗ್ಗಲ್ಸ್ ಎಂದು ಹೆಸರಿಟ್ಟಿದ್ದಾಳೆ.

    ನಾನು ಅದನ್ನ ಮರೆತೇಬಿಟ್ಟಿದ್ದೆ. ಅದನ್ನ ವೇಸ್ಟ್ ಮಾಡುವ ಬದಲು ನೆಕ್ಲೇಸ್ ಮಾಡಿಕೊಂಡರೆ ಹೇಗೆ ಅನ್ನಿಸಿತು. ನೆಕ್ಲೇಸ್ ಮಾಡುವುದು ತುಂಬಾ ಸುಲಭ ಎಂದೆನಿಸಿತು. ವಿಗ್ಗಲ್ಸ್ ನ ಮೊದಲ ಹುಟ್ಟುಹಬ್ಬಕ್ಕೆ ಏನಾದ್ರೂ ಮಾಡಬೇಕು ಎಂದುಕೊಂಡಿದ್ದೆ ಎಂದು ಹೇಳಿದ್ದಾಳೆ.

    ಇತ್ತೀಚೆಗೆ ಟಾರ್ಸ್ ವಿಗ್ಗಲ್ಸ್ ಹುಟ್ಟುಹಬ್ಬಕ್ಕೆ ಅದರ ಜೊತೆ ಫೋಟೋಶೂಟ್ ಕೂಡ ಮಾಡಿಸಿದ್ದಾಳೆ. ಆಕೆಯ ಬಾಯ್‍ಫ್ರೆಂಡ್ ತುಂಡಾದ ಕಿರುಬೆರಳಿಗೆ ತೊಡಿಸಲು ಪುಟಾಣಿ ಟೋಪಿಯನ್ನೂ ತಂದುಕೊಟ್ಟಿದ್ದಾನೆ. ವಿಗ್ಗಲ್ಸ್ ನ ಹುಟ್ಟುಹಬ್ಬಕ್ಕೆ ನನ್ನ ಬಾಯ್‍ಫ್ರೆಂಡ್ ಟೋಪಿಗಳನ್ನ ಉಡುಗೊರೆಯಾಗಿ ಕೊಟ್ಟ. ಇದು ತುಂಬಾ ಅದ್ಭುತ ಉಡುಗೊರೆ ಎಂದು ಟಾರ್ಸ್ ಹೇಳಿದ್ದಾಳೆ.

    ತನ್ನ ಸ್ನೇಹಿತರೊಬ್ಬರು ಕೂಡ ಇದೇ ರೀತಿ ಮಾಡಿದ್ದು ನೋಡಿದ ನಂತರ ಬೆರಳನ್ನ ತುಂಡು ಮಾಡಿದ್ದಾಗಿ ಆಕೆ ಹೇಳಿದ್ದಾಳೆ. ಬೆರಳನ್ನ ಕಟ್ ಮಾಡುವ ಮುನ್ನ, ಎಡಗೈನಲ್ಲಿ ಕೇವಲ ಅರ್ಧ ಕಿರುಬೆರಳಿದ್ದರೆ ಹೇಗಿರುತ್ತದೆ ಎಂದು ತಿಳಿಯಲು ಬೆರಳನ್ನ ಹಿಂದಕ್ಕೆ ಬಗ್ಗಿಸಿ ಪ್ರಾಕ್ಟೀಸ್ ಮಾಡಿದ್ದಳಂತೆ.

    ಟಾರ್ಸ್ ಈ ರೀತಿಯ ವಿಚಿತ್ರ ನಡೆವಳಿಕೆಗಳ ಇತಿಹಾಸ ಹೊಂದಿದ್ದಾಳೆ. ಈ ಹಿಂದೆ ಈಕೆಯ ಬಾಯ್‍ಫ್ರೆಂಡ್ ಮೋಸ ಮಾಡಿದನೆಂದು ಆತನ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ತನ್ನ ಕೈ ಮೇಲಿನ ಟ್ಯಾಟೂವನ್ನೇ ಕತ್ತರಿಸಿ ಪೋಸ್ಟ್‍ನಲ್ಲಿ ಕಳಿಸಿದ್ದಳು ಎಂದು ವರದಿಯಾಗಿದೆ.

    ಅದು ನಿಜವಾಗ್ಲೂ ಉಡುಗೊರೆಯಂತೆ ಕಾಣುವ ರೀತಿ ಪ್ಯಾಕ್ ಮಾಡಿದ್ದೆ. ಇದನ್ನ ಕಳಿಸುತ್ತಿರೋದು ನಾನೇ ಎಂದು ಗೊತ್ತಾಗಬಾರದೆಂದು ಬೇರೆ ರೀತಿಯ ಬರವಣಿಗೆ ಬಳಸಿದ್ದೆ. ಆತನ ಪ್ರತಿಕ್ರಿಯೆ ಹೇಗಿತ್ತು ಎಂದು ಊಹಿಸಿಕೊಳ್ಳಲು ಕೂಡ ಆಗಲ್ಲ. ಅದನ್ನ ನೋಡಲು ನಾನು ಅಲ್ಲಿರಬೇಕಿತ್ತು ಎಂದಿದ್ದಾಳೆ.

  • ಎಂಎಲ್‍ಎ ಮಗಳ ಬೆರಳನ್ನೇ ಕತ್ತರಿಸಿದ ವಿದ್ಯಾರ್ಥಿ!

    ಎಂಎಲ್‍ಎ ಮಗಳ ಬೆರಳನ್ನೇ ಕತ್ತರಿಸಿದ ವಿದ್ಯಾರ್ಥಿ!

    ಪುಣೆ: ವಿದ್ಯಾರ್ಥಿಯೋರ್ವ ಬಿಜೆಪಿ ಶಾಸಕರೊಬ್ಬರ ಮಗಳ ಬೆರಳನ್ನೇ ಕತ್ತರಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಬಿಜೆಪಿ ಶಾಸಕ ಸಂಜೀವ್‍ರೆಡ್ಡಿ ಬೋದ್ಕುವಾರ್ ಅವರ ಮಗಳಾದ 22 ವರ್ಷದ ಅಶ್ವಿನಿ ಮೇಲೆ ಆಕೆಯ ಸಹಪಾಠಿಯಾದ ರಾಜೇಶ್ ಬಕ್ಷಿ(23) ದಾಳಿ ನಡೆಸಿ ಕಿರುಬೆರಳನ್ನೇ ಕತ್ತರಿಸಿದ್ದಾನೆ. ಅಲ್ಲದೆ ಅಶ್ವಿನಿಯ ಇತರೆ ಮೂರು ಕೈಬೆರಳುಗಳು, ಆಕೆಯ ಅಂಗೈ ಹಾಗೂ ತುಟಿಯ ಮೇಲೂ ಗಾಯಗಳಾಗಿವೆ.

    ಸದ್ಯ ಆರೋಪಿ ರಾಜೇಶ್ ಬಕ್ಷಿಯನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಹಾಗೂ 354ಡಿ(ಹಿಂಬಾಲಿಸುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ. ರಾಜೇಶ್ ಮೂಲತಃ ಹರ್ಯಾಣದವನಾಗಿದ್ದು ವಕಡ್‍ನಲ್ಲಿ ನೆಲೆಸಿದ್ದ ಎಂದು ತಿಳಿದುಬಂದಿದೆ.

    ಅಶ್ವಿನಿ ವಕಡ್ ಬಳಿಯ ತಾತೇವಾಡದಲ್ಲಿರುವ ಶ್ರೀ ಬಾಲಾಜಿ ಸೊಸೈಟಿಯ ಸಂಸ್ಥೆಯೊಂದರಲ್ಲಿ ಮೊದಲನೇ ವರ್ಷದ ಎಂಬಿಎ ವ್ಯಾಸಂಗ ಮಾಡ್ತಿದ್ದರು. ಅಶ್ವಿನಿಗೆ 6 ತಿಂಗಳಿಂದ ರಾಜೇಶ್‍ನ ಪರಿಚಯವಿತ್ತು. ರಾಜೇಶ್ ಅಶ್ವಿನಿಗೆ ಕೆಲ ದಿನಗಳಿಂದ ಕಿರುಕುಳ ನೀಡುತ್ತಿದ್ದರಿಂದ ಆಕೆ ಆತನೊಂದಿಗೆ ಮಾತನಾಡುವುದನ್ನ ಬಿಟ್ಟಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

    ಘಟನಾ ಸ್ಥಳ

    ಕಳೆದ ಭಾನುವಾರ ಅಶ್ವಿನಿ ಕಾಲೇಜು ಅಧಿಕಾರಿಗಳಿಗೆ ರಾಜೇಶ್ ವಿರುದ್ಧ ದೂರು ನೀಡಿದ್ದರು. ನಂತರ ಶ್ರೀ ಬಾಲಾಜಿ ಸೊಸೈಟಿಯ ಅಧ್ಯಕ್ಷರಾದ ಬಾಲಸುಬ್ರಮಣಿಯನ್ ರಾಜೇಶ್‍ಗೆ ಎಚ್ಚರಿಕೆ ನೀಡಿದ್ರು. ಇನ್ಮುಂದೆ ಅಶ್ವಿನಿಯೊಂದಿಗೆ ಮಾತನಾಡುವುದಿಲ್ಲ ಎಂದು ರಾಜೇಶ್‍ನಿಂದ ಮುಚ್ಚಳಿಕೆ ಬರೆಸಿಕೊಂಡಿದ್ದರು. ಹೀಗೆ ಬರೆದುಕೊಟ್ಟ ಕೆಲವೇ ಗಂಟೆಗಳಲ್ಲಿ ರಾಜೇಶ್ ಅಶ್ವಿನಿ ಮೇಲೆ ದಾಳಿ ನಡೆಸಿದ್ದಾನೆ ಎಂದು ವಕಡ್ ಪೊಲೀಸರೊಬ್ಬರು ಹೇಳಿಕೆ ನೀಡಿದ್ದಾರೆ.

    ಅಶ್ವಿನಿ ಎಂಜಿನಿಯರಿಂಗ್ ಮುಗಿಸಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನಿಂದ ಸ್ವಲ್ಪ ದೂರದಲ್ಲೇ ಇದ್ದ ಖಾಸಗಿ ಹಾಸ್ಟೆಲ್‍ವೊಂದರಲ್ಲಿ ತಂಗಿದ್ದರು. ಸೋಮವಾರದಂದು ಅಶ್ವಿನಿ ತನ್ನ ಸ್ನೇಹಿತರೊಂದಿಗೆ ಎಟಿಎಂಗೆ ಹೋಗುತ್ತಿದ್ದ ವೇಳೆ ರಾಜೇಶ್ ಅಲ್ಲಿಗೆ ಬಂದು ಆಕೆಯೊಡೆನೆ ಮಾತನಾಡಲು ಪ್ರಯತ್ನಿಸಿದ್ದಾನೆ. ಆದ್ರೆ ಆಕೆ ನಿರಾಕರಿಸಿದಾಗ ಆತ ಕೋಪಗೊಂಡು ಆಕೆಯ ಮೇಲೆ ಚೂಪಾದ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಅಶ್ವಿನಿಯ ಕಿರುಬೆರಳು ಕಟ್ ಆಗಿದೆ. ಅಲ್ಲದೆ ಆಕೆಯ ಮೂರು ಹಲ್ಲುಗಳೂ ಕೂಡ ಮುರಿದಿವೆ.

    ಈ ವೇಳೆ ಅಶ್ವಿನಿಯ ರಕ್ಷಣೆಗೆ ಬಂದ ವಿದ್ಯಾರ್ಥಿಯ ಮೇಲೂ ರಾಜೇಶ್ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದರೂ ಆ ವಿದ್ಯಾರ್ಥಿ ರಾಜೇಶ್ ಕೈಯ್ಯಲ್ಲಿದ್ದ ಆಯುಧವನ್ನು ಕಿತ್ತು ಎಸೆದಿದ್ದಾನೆ. ಬಳಿಕ ಮತ್ತೊಬ್ಬ ವಿದ್ಯಾರ್ಥಿ ಬಂದಿದ್ದು ಇಬ್ಬರೂ ಸೇರಿ ರಾಜೇಶ್‍ನನ್ನು ಹಿಡಿದಿದ್ದಾರೆ. ಹಲ್ಲೆಗೊಳಗಾದ ಅಶ್ವಿನಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಕಟ್ ಆಗಿದ್ದ ಅಶ್ವಿನಿಯ ಕಿರುಬೆರಳು ಅರ್ಧ ಗಂಟೆಯ ಹುಡುಕಾಟದ ನಂತರ ಸ್ಥಳದಲ್ಲೇ ಸಿಕ್ಕಿದೆ ಎಂದು ವರದಿಯಾಗಿದೆ.