Tag: ಕಿರುತೆರೆ

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಸ್ವಾತಿ ಎಚ್‌ವಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಸ್ವಾತಿ ಎಚ್‌ವಿ

    ಕಿರುತೆರೆಯ ಸಾಕಷ್ಟು ಧಾರಾವಾಹಿ ಮೂಲಕ ಗುರುತಿಸಿಕೊಂಡಿರುವ ಸ್ವಾತಿ ಹೆಚ್ ವಿ(Swathi Hv) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ನಾಗಾರ್ಜುನ ರವಿ(Nagarjuna Ravi) ಜೊತೆ ನಟಿ ಹಸೆಮಣೆ ಏರಿದ್ದಾರೆ.

    ಶುಭವಿವಾಹ, ಪುಟ್ಟಗೌರಿ ಮದುವೆ, ಗಂಗಾ, ರಂಗನಾಯಕಿ ಸೀರಿಯಲ್‌ಗಳ ಮೂಲಕ ಮೋಡಿ ಮಾಡಿರುವ ನಟಿ ಸ್ವಾತಿ ದಾಂಪತ್ಯ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಸ್ವಾತಿ ಮತ್ತು ನಾಗಾರ್ಜುನ ರವಿ ಮದುವೆ ನಡೆದಿದೆ. ಈ ಸಂಭ್ರಮದಲ್ಲಿ ಶಿಲ್ಪಾ ಶೆಟ್ಟಿ, ನಂದಿನಿ, ಅನಿಕಾ ಸಿಂಧ್ಯ, ಅಭಿಷೇಕ್ ದಾಸ್ ಹೀಗೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

    ಡಿಪ್ಲೋಮಾ ಇನ್ ಜ್ಯುವೆಲ್ಲರಿ ಡಿಸೈನ್ ಮಾಡುತ್ತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಟಿ ಅನಿರೀಕ್ಷಿತವಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ದಂಡುಪಾಳ್ಯ, ಬಿಡಲಾರೆ ನಿನ್ನ, ವಾರಸ್ಧಾರ, ಉಡ, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ ಹೊಸ ಬಾಳಿಗೆ ಕಾಲಿಟ್ಟಿರುವ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿಶ್ಚಿತಾರ್ಥದ ಸಂಭ್ರಮದಲ್ಲಿ `ಸತ್ಯ’ ಧಾರಾವಾಹಿ ಹೀರೋ ಸಾಗರ್-ಸಿರಿ

    ನಿಶ್ಚಿತಾರ್ಥದ ಸಂಭ್ರಮದಲ್ಲಿ `ಸತ್ಯ’ ಧಾರಾವಾಹಿ ಹೀರೋ ಸಾಗರ್-ಸಿರಿ

    ಕಿರುತೆರೆಯ ನಂಬರ್ ಒನ್ `ಸತ್ಯ'(Sathya Serial) ಸೀರಿಯಲ್ ಹೀರೋ ತಮ್ಮ ಫೀಮೇಲ್ ಫ್ಯಾನ್ಸ್‌ಗೆ ಹಾರ್ಟ್ ಬ್ರೇಕಿಂಗ್ ಸುದ್ದಿಯೊಂದನ್ನ ಕೊಟ್ಟಿದ್ದಾರೆ. `ಸತ್ಯ’ ಧಾರಾವಾಹಿಯ ಅಮುಲ್ ಬೇಬಿಯಾಗಿ ಮಿಂಚ್ತಿರುವ ಸಾಗರ್(Sagar Gowda) ಇಂದು ಬಹುಕಾಲದ ಗೆಳತಿ ಸಿರಿ ರಾಜು(Siri Raju) ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಏಂಗೇಜ್‌ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Siri ???? (@sirri_raju)

    `ಸತ್ಯ’ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರಧಾರಿಯಾಗಿ ಅಪಾರ ಅಭಿಮಾನಿಗಳ ಮನಗೆದ್ದ ನಟ ಸಾಗರ್ ಗೌಡ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಮುಲ್ ಬೇಬಿ(Amul Baby) ಎಂದೇ ಫೇಮಸ್ ಆಗಿದ್ದ ನಟ ಇದೀಗ ನಟಿ, ಕಮ್ ಮಾಡೆಲ್ ಸಿರಿ ರಾಜು ಅವರನ್ನು ಮದುವೆಯಾಗುತ್ತಿದ್ದಾರೆ. ಐದು ವರ್ಷಗಳಿಂದ ಸ್ನೇಹಿತರಾಗಿದ್ದ ಈ ಜೋಡಿ ಗುರುಹಿರಿಯರನ್ನ ಒಪ್ಪಿಸಿ ಹೊಸ ಬಾಳಿಗೆ ಕಾಲಿಡುವ ತವಕದಲ್ಲಿದ್ದಾರೆ.

    ಸಾಕಷ್ಟು ಸಮಯದಿಂದ ಸಾಗರ್ ಮತ್ತು ಸಿರಿ ರಾಜು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಸೂಕ್ತ ಸಮಯ ಎಂದೇನಿಸಿ ರೊಮ್ಯಾಂಟಿಕ್ ಶೇರ್ ಮಾಡುವ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿಯನ್ನ ಇತ್ತೀಚೆಗಷ್ಟೇ ತಿಳಿಸಿದ್ದರು. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಏಂಗೇಜ್‌ಮೆಂಟ್(Engagement) ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ʻಸತ್ಯʼ ಧಾರಾವಾಹಿ ತಂಡ ಕೂಡ ಸಾಕ್ಷಿಯಾಗಿದೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಿಕ್ಕಿ ಗಲ್ರಾನಿ ದಂಪತಿ

    ಇನ್ನೂ ಸಿರಿ ರಾಜು ಕೂಡ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ(Vijay Raghavendra) ಅಭಿನಯದ ಹೊಸ ಚಿತ್ರದಲ್ಲಿ ಸಿರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಗರ್ ಮತ್ತು ಸಿರಿ, ಈ ತಾರಾ ಜೋಡಿ ಹಸೆಮಣೆ ಏರುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ನಿಶ್ವಿತಾರ್ಥ ಮಾಡಿಕೊಂಡಿರುವ ಈ ಜೋಡಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ನಿರ್ದೇಶಕ, ನಟ ಸಯ್ಯದ್ ಅಶ್ರಫ್ ಹೃದಯಾಘಾತದಿಂದ ನಿಧನ

    ಕನ್ನಡದ ನಿರ್ದೇಶಕ, ನಟ ಸಯ್ಯದ್ ಅಶ್ರಫ್ ಹೃದಯಾಘಾತದಿಂದ ನಿಧನ

    ಕನ್ನಡ ಕಿರುತೆರೆ ನಿರ್ದೇಶಕ, ನಟ ಸಯ್ಯದ್ ಅಶ್ರಫ್ ಇಂದು ಬೆಳಗ್ಗೆ 3 ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ 42ರ ವಯಸ್ಸಿನ ಸಯ್ಯದ್ ಕನ್ನಡ ಕಿರುತೆರೆಯಲ್ಲಿ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಅದರಲ್ಲೂ ಕನ್ನಡ ಕಿರುತೆರೆ ಜಗತ್ತಿಗೆ ಭಕ್ತಿ ಪ್ರಧಾನ ಮತ್ತು ಫ್ಯಾಂಟಿಸಿ ಧಾರಾವಾಹಿಗಳನ್ನು ಕೊಟ್ಟ ಹೆಗ್ಗಳಿಕೆ ಇವರದ್ದು.

    ಅಮ್ಮ ನಾಗಮ್ಮ, ನಾಗಮಣಿ, ಪಾಂಡುರಂಗ, ಚಕ್ರವಾಕ, ತಕಧಿಮಿತಾ, ಅಳುಗುಳಿಮನೆ ಸೇರಿದಂತೆ ಸಾವಿರಾರು ಕಂತುಗಳಲ್ಲಿ ಪ್ರಸಾರವಾಗಿರುವ ಧಾರಾವಾಹಿಗಳಿಗೆ ಇವರು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಬಿ.ಸುರೇಶ ಅವರ ಸಾರಥ್ಯದಲ್ಲಿ ಮೂಡಿ ಬಂದ ಹಲವಾರು ಧಾರಾವಾಹಿಗಳಿಗೆ ಇವರದ್ದೇ ನಿರ್ದೇಶನವಿದೆ. ಮೀಡಿಯಾ ಹೌಸ್ ಸ್ಟುಡಿಯೋ ನಿರ್ಮಾಣದಲ್ಲಿ ಹತ್ತು ವರ್ಷಗಳ ಕಾಲ ಧಾರಾವಾಹಿಗಾಗಿ ದುಡಿದಿದ್ದಾರೆ. ಇದನ್ನೂ ಓದಿ:ವಿರಹ ಮುಂದುವರೆಯಲಿ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ

    ಸಯ್ಯದ್ ಅಶ್ರಫ್ ನಿಧನಕ್ಕೆ ಬಿ.ಸುರೇಶ, ಶೈಲಜಾ ನಾಗ್ ಹಾಗೂ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಸೇರಿದಂತೆ ಹಲವರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಮಧ್ಯಾಹ್ನದವರೆಗೂ ಅಶ್ರಫ್ ಅವರ ಸ್ವಗೃಹದಲ್ಲಿ ಅವರ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ನಂತರ ಅಂತ್ಯ ಸಂಸ್ಕಾರ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರತಕ್ಷತೆ ಪಾರ್ಟಿಯಲ್ಲಿ ಮಿಂಚಿದ ಗೇಬ್ರಿಯೆಲ್ಲಾ -ನಟ ಸುಹಾಸ್

    ಆರತಕ್ಷತೆ ಪಾರ್ಟಿಯಲ್ಲಿ ಮಿಂಚಿದ ಗೇಬ್ರಿಯೆಲ್ಲಾ -ನಟ ಸುಹಾಸ್

    `ಕಮಲಿ'(Kamali Serial) ಧಾರಾವಾಹಿ ಮೂಲಕ ಖಳನಾಯಕಿಯಾಗಿ ಮಿಂಚಿದ ಅನಿಕಾ ಅಲಿಯಾಸ್ ಗೇಬ್ರಿಯೆಲ್ಲಾ (Gabriella) ಮತ್ತು ನಟ ಸುಹಾಸ್(Suhas) ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ಸ್ನೇಹಿತರ ಜೊತೆ ಅದ್ದೂರಿ ಆರತಕ್ಷತೆ ನೆರವೇರಿಸಿಕೊಂಡಿದ್ದಾರೆ. ಸದ್ಯ ರಿಸೆಪ್ಷನ್‌(Reception) ಫೋಟೋ ಸಖತ್ ವೈರಲ್ ಆಗುತ್ತಿದೆ.

    ಕಿರುತೆರೆ ಜನಪ್ರಿಯ ಸೀರಿಯಲ್ `ಕಮಲಿ’ ಕಲಾವಿದರಾದ ಅನಿಕಾ ಮತ್ತು ಸುಹಾಸ್ ಇದೀಗ ರಿಯಲ್ ಲೈಫ್‌ನಲ್ಲಿ ಒಂದಾಗಿದ್ದಾರೆ. ಈ ಸೀರಿಯಲ್ ಮೂಲಕ ಪರಿಚಿತರಾದ ಗೇಬ್ರಿಯೆಲ್ಲಾ, ಸುಹಾಸ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು.

     

    View this post on Instagram

     

    A post shared by Suhas Athreyas (@suhas_athreyas)

    ಇದೀಗ ಗುರು ಹಿರಿಯರ ಸಮ್ಮತಿಯ ಮೇರೆಗೆ ಸರಳವಾಗಿ ರಿಜಿಸ್ಟರ್‌ ಮ್ಯಾರೇಜ್(Wedding) ಆಗಿದ್ದಾರೆ. ಇದೀಗ ಕುಟುಂಬಸ್ಥರು, ಚಿತ್ರರಂಗದ ಸ್ನೇಹಿತರಿಗಾಗಿ ಆರತಕ್ಷತೆ ಆಯೋಜಿಸಿದ್ದಾರೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಟಿ ಕೀರ್ತಿ ಸುರೇಶ್

    ನವಜೋಡಿಗೆ ಶುಭಹಾರೈಸಲು `ಕಮಲಿ’ ಸೀರಿಯಲ್ ತಂಡ ಮತ್ತು ವಾಹಿನಿಯ ಇತರೆ ಸೀರಿಯಲ್‌ನ ಕಲಾವಿದರು ಆರತಕ್ಷತೆಗೆ ಆಗಮಿಸಿ ಶುಭಹಾರೈಸಿದ್ದಾರೆ. ಇನ್ನೂ ನೆಚ್ಚಿನ ಜೋಡಿಗೆ ಸಾಮಾಜಿಕ ಜಾಲತಾಣದ ಮೂಲಕ ಫ್ಯಾನ್ಸ್ ವಿಶ್ಸ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಡ ಹೆಂಡತಿ ಜಗಳ: ಪ್ರಖ್ಯಾತ ಧಾರಾವಾಹಿ ನಟ ಆತ್ಮಹತ್ಯೆ

    ಗಂಡ ಹೆಂಡತಿ ಜಗಳ: ಪ್ರಖ್ಯಾತ ಧಾರಾವಾಹಿ ನಟ ಆತ್ಮಹತ್ಯೆ

    ನಪ್ರಿಯ ಟೆಲಿವಿಷನ್ ನಟ, ಬಾಲ ಕಲಾವಿದನಾಗಿಯೂ ಫೇಮಸ್ ಆಗಿದ್ದ ಲೋಕೇಶ್ ರಾಜೇಂದ್ರನ್ (Lokesh Rajendran)  ಆತ್ಮಹತ್ಯೆಗೆ ಶರಣಾಗಿದ್ದಾರೆ. 34 ವರ್ಷದ ಈ ತಮಿಳು (Tamil) ಕಿರುತೆರೆ ನಟನ ಆತ್ಮಹತ್ಯೆಗೆ (Suicide) ಕೌಟುಂಬಿಕ ಕಲಹವೇ ಕಾರಣ ಎಂದಿದ್ದಾರೆ ಲೋಕೇಶ್ ತಂದೆ ರಾಜೇಂದ್ರನ್.  ನನ್ನ ಸೊಸೆ ಹಾಗೂ ಮಗನ ನಡುವೆ ಕೆಲವು ತಪ್ಪು ತಿಳುವಳಿಕೆಗಳು ಇದ್ದವು. ಈ ಕಾರಣದಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

    ಮರ್ಮದೇಶಂ ಧಾರಾವಾಹಿಯ ಮೂಲಕ ಬಾಲ ಕಲಾವಿದನಾಗಿ (Child Actor) ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದ ಲೋಕೇಶ್, 150ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ನಾಲ್ಕು ದಿನಗಳ ಹಿಂದೆಯೇ ಪತ್ನಿಯಿಂದಲೇ ವಿಚ್ಛೇದನಕ್ಕೆ (Divorce) ಲೀಗಲ್ ನೋಟಿಸ್ ಬಂದಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅವರ ತಂದೆ ತಿಳಿಸಿದ್ದಾರೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಮಧ್ಯಮಗಳ ಜೊತೆ ಮಾತನಾಡಿರುವ ಲೋಕೇಶ್ ತಂದೆ, ಕಳೆದ ಶುಕ್ರವಾರವಷ್ಟೇ ಮಗನನ್ನು ಮಾತನಾಡಿಸಿದ್ದೇನೆ. ಅವರು ನನ್ನ ಬಳಿ ಹಣ ಕೇಳಿದರು. ಮಗನಿಗಾಗಿ ನಾನೂ ಹಣ ಕಳುಹಿಸಿದ್ದೆ. ಈಗ ನೋಡಿದರೆ, ಮಗನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ನನ್ನ ಮಗ ಕಿರುತೆರೆಯಲ್ಲಿ ಮಾತ್ರವಲ್ಲ, 15 ಸಿನಿಮಾಗಳಲ್ಲೂ ಲೋಕೇಶ್ ನಟಿಸಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೀರಿಯಲ್‌ನಲ್ಲಿ ಕೆಲಸ ಸಿಗದೇ ಕಾಲ್ ಸೆಂಟರ್ ಉದ್ಯೋಗಕ್ಕೆ ಸೇರಿದ ನಟಿ ಏಕ್ತಾ

    ಸೀರಿಯಲ್‌ನಲ್ಲಿ ಕೆಲಸ ಸಿಗದೇ ಕಾಲ್ ಸೆಂಟರ್ ಉದ್ಯೋಗಕ್ಕೆ ಸೇರಿದ ನಟಿ ಏಕ್ತಾ

    ಚಿತ್ರರಂಗದಲ್ಲಿ ನಟಿ ಗಟ್ಟಿಯಾಗಿ ನೆಲೆ ನಿಲ್ಲುವುದು ತುಂಬಾ ಕಷ್ಟ. ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಕಲಾವಿದರು ಮತ್ತು ತೆರೆಯ ಹಿಂದೆ ಕೆಲಸ ಮಾಡುವವರು ಸಂಕಷ್ಟ ಎದುರಿಸಿದ್ದರು. ಕೆಟ್ಟ ಸಮಯವನ್ನ ಎದುರಿಸಲಾಗದೇ ಕೆಲ ನಟಿಯರು ಆತ್ಮಹತ್ಯೆ ಮಾಡಿಕೊಂಡಿದ್ದೂ ಇದೆ. ಜೊತೆಗೆ ಹಲವರು ಕೆಟ್ಟ ದಾರಿ ತುಳಿದ ನಿದರ್ಶನವೂ ಇದೆ. ಇದೀಗ ಹಿಂದಿ ಕಿರುತೆರೆ ನಟಿ ಏಕ್ತಾ ಶರ್ಮಾ (Ekta Sharma) ತಮಗೆ ನಟಿಸಲು ಅವಕಾಶವಿಲ್ಲದೇ ಇದ್ದಾಗ ಧೈರ್ಯಗೆಡದೇ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡ್ತಿದ್ದಾರೆ.

    ಏಕ್ತಾ ಶರ್ಮಾ(Ekta Sharma) ಕಳೆದ ಸಾಕಷ್ಟು ವರ್ಷಗಳಿಂದ ಹಿಂದಿ ಕಿರುತೆರೆ(Hindi Serials) ಮತ್ತು ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ನಟಿ, ಲಾಕ್‌ಡೌನ್‌ನಿಂದ(Lockdown) ಕೆಲಸವಿಲ್ಲದೇ 1 ವರ್ಷ ಮನೆಯಲ್ಲಿಯೇ ಕುಳಿತ ನಟಿ ಏಕ್ತಾ, ಬಳಿಕ ಕಾಲ್ ಸೆಂಟರ್‌ನಲ್ಲಿ ಕೆಲಸ ಆರಂಭಿಸಿದ್ದರು. ನಟನೆಯ ಜೊತೆಗೆ ಶಿಕ್ಷಣ ಕೂಡ ಪಡೆದಿರುವ ಏಕ್ತಾ ಕಾಲ್ ಸೆಂಟರ್ ಉದ್ಯೋಗಕ್ಕೆ ಜಾಯಿನ್ ಆಗಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಕಿರುತೆರೆಯಿಂದ ಯಾವುದೇ ಅವಕಾಶ ಬರದಿದ್ದಾಗ ತಮ್ಮ ಬಂಗಾರ ಮಾರಿ ಒಂದು ವರ್ಷ ಜೀವನ ನಡೆಸಿದ್ದರು. ಬಳಿಕ ಹೊಸ ಉದ್ಯೋಗಕ್ಕೆ ಸೇರಿಕೊಂಡರು. ಸಾಕಷ್ಟು ಸಂಕಷ್ಟದ ನಡುವೆ ನಟನೆಗೆ ಅವಕಾಶ ಸಿಗದಿದ್ದರೂ ಜೀವಿಸಬಲ್ಲೆ ಎಂಬ ಆತ್ಮವಿಶ್ವಾಸದಿಂದ ನಟಿ ಜೀವನ ಸಾಗಿಸುತ್ತಿದ್ದಾರೆ. ಏಕ್ತಾ ಶರ್ಮಾ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಮಗಳು ಜಾನಕಿ’ ಸೀರಿಯಲ್ ಖ್ಯಾತಿಯ ಕಿರುತೆರೆಯ ಖ್ಯಾತ ಕಲಾವಿದ ಮಂಡ್ಯ ರವಿ ನಿಧನ

    ‘ಮಗಳು ಜಾನಕಿ’ ಸೀರಿಯಲ್ ಖ್ಯಾತಿಯ ಕಿರುತೆರೆಯ ಖ್ಯಾತ ಕಲಾವಿದ ಮಂಡ್ಯ ರವಿ ನಿಧನ

    ನ್ನಡ ಕಿರುತೆರೆಯ (Television)  ಲೋಕದ ಖ್ಯಾತ ಕಲಾವಿದ (Actor) ಮಂಡ್ಯ ರವಿ (Mandya Ravi) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರವಿ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ. ರವಿ ನಿಧನಕ್ಕೆ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಧ್ಯಕ್ಷರಾದ ಎಸ್.ವಿ. ಶಿವಕುಮಾರ್ ಸೇರಿದಂತೆ ಟೆಲಿವಿಷನ್ ಉದ್ಯಮದ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

    ರವಿ ಪೂರ್ಣ ಹೆಸರು ರವಿ ಪ್ರಸಾದ್ ಎಂ. ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುತ್ತಲೇ ಮಂಡ್ಯ ರವಿ ಆಗಿ ಫೇಮಸ್ ಆದವರು. ರವಿ ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಾ, ನಂತರ ಬಣ್ಣದ ಲೋಕದತ್ತ ಒಲವು ಬೆಳೆಸಿಕೊಂಡವರು. ಓದಿದ್ದು ಎಂಎ ಇಂಗ್ಲಿಷ್ ಮತ್ತು ಎಲ್‍ಎಲ್‍ಬಿ ಆದರೂ, ಆಯ್ಕೆ ಮಾಡಿಕೊಂಡ ವೃತ್ತಿ ಮಾತ್ರ ನಟನೆ. 1996ರಲ್ಲಿ ಜನದನಿ ಹವ್ಯಾಸಿ ನಾಟಕ ತಂಡ ಸೇರಿ, ಅಲ್ಲಿಂದ ಟಿ.ಎಸ್. ನಾಗಾಭರಣ ನಿರ್ದೇಶನದ ‘ಮಹಾಮಾಯಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟರು. ಇದನ್ನೂ ಓದಿ:‘ಮದುವೆ’ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆದ ಮಹಾಲಕ್ಷ್ಮಿ ರವೀಂದರ್

    ಅನೇಕ ಧಾರಾವಾಹಿಗಳಲ್ಲಿ ರವಿ ನಟಿಸಿದ್ದರು, ಮೊದಲು ಬ್ರೇಕ್ ನೀಡಿದ ಧಾರಾವಾಹಿ ಮಿಂಚು, ನಂತರ ಮುಕ್ತಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಸ್ಟೋರ್ಸ್  ಸೇರಿದಂತೆ ಸಾಕಷ್ಟು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಪ್ರಸಾರವಾದ ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ (Chandu Bhargi) ಪಾತ್ರದ ಮೂಲಕ ರವಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು.  ಅಲ್ಲದೇ, ಕಾಫಿತೋಟ ಸೇರಿದಂತೆ ಹಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಕನಿಷ್ಕಾ ಸೋನಿ ತನ್ನನ್ನು ತಾನೇ ಮದುವೆ ಆಗಿದ್ದಕ್ಕೆ ಕಾರಣ ಸ್ಟಾರ್ ನಟನ ಕಿರುಕುಳವಂತೆ

    ನಟಿ ಕನಿಷ್ಕಾ ಸೋನಿ ತನ್ನನ್ನು ತಾನೇ ಮದುವೆ ಆಗಿದ್ದಕ್ಕೆ ಕಾರಣ ಸ್ಟಾರ್ ನಟನ ಕಿರುಕುಳವಂತೆ

    ನ್ನನ್ನು ತಾನೇ ಮದುವೆ ಆಗಿರುವುದಾಗಿ ಘೋಷಿಸಿರುವ ಹಿಂದಿ ಕಿರುತೆರೆಯ ಹೆಸರಾಂತ ನಟಿ ಕನಿಷ್ಕಾ ಸೋನಿ, ತಾವು ಆ ನಿಲುವನ್ನು ತಾಳಿದ್ದಕ್ಕೆ ಕಾರಣ ತನ್ನ ಮೇಲೆ ಆಗಿರುವಂತಹ ದೌರ್ಜನ್ಯ ಎಂದು ಹೇಳಿಕೊಂಡಿದ್ದಾರೆ. ಬಣ್ಣದ ಪ್ರಪಂಚಕ್ಕೆ ಕಾಲಿಡಲು ಮುಂಬೈಗೆ ಬಂದಾಗಿನಿಂದ ಈವರೆಗೂ ಸಾವಿರಕ್ಕೂ ಹೆಚ್ಚು ಹುಡುಗರು ಈಕೆಗೆ ಪ್ರಪೋಸ್ ಮಾಡಿದ್ದಾರಂತೆ. ಆ ಎಲ್ಲ ಪ್ರಸ್ತಾಪಗಳನ್ನು ತಾವು ತಿರಸ್ಕರಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

    ಪ್ರಪೋಸ್ ಮಾಡಿದ ವ್ಯಕ್ತಿಗಳಲ್ಲಿ ಹೆಸರಾಂತ ನಟನೊಬ್ಬನಿದ್ದನಂತೆ. ಮದುವೆಗೂ ಅವನು ಪ್ರಪೋಸ್ ಮಾಡಿದ್ದ. ಆ ವ್ಯಕ್ತಿ ಹೇಗೆ ಎನ್ನುವುದು ತಮಗೆ ಮೂರು ತಿಂಗಳಲ್ಲೇ ಗೊತ್ತಾಯಿತಂತೆ. ಸಿಕ್ಕಾಪಟ್ಟೆ ಹಿಂಸೆ ಮಾಡುತ್ತಿದ್ದನಂತೆ. ಕ್ಷಣ ಕ್ಷಣಕ್ಕೂ ಕೋಪ ಮಾಡಿಕೊಳ್ಳುತ್ತಿದ್ದನಂತೆ. ಹಾಗಾಗಿ ಮೂರೇ ತಿಂಗಳಲ್ಲೇ ಅವನಿಂದ ಆಚೆ ಬಂದರಂತೆ ಕನಿಷ್ಕಾ. ಆ ನೋವಿನಿಂದ ಆಚೆ ಬರಲು ಅವರಿಗೆ ಮೂರು ವರ್ಷಗಳು ಬೇಕಾದವು ಎಂದಿದ್ದಾರೆ.  ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಎ ಗ್ರೇಡ್ ಸಿನಿಮಾದಲ್ಲಿ ನಟಿಸಲು ಅವಕಾಶವೊಂದು ಹುಡುಕಿಕೊಂಡು ಬಂದಿದ್ದ ವಿಷಯವನ್ನೂ ಹಂಚಿಕೊಂಡಿರುವ ಅವರು, ‘ನನ್ನ ಹೊಟ್ಟೆಯನ್ನು ನೋಡಲು ನನ್ನ ರೂಮ್ ಗೆ ಬಾ ಎಂದು ನಿರ್ಮಾಪಕರು ಕರೆದರಂತೆ. ಇವರನ್ನು ಅದಕ್ಕೆ ನಿರಾಕರಿಸಿದರಂತೆ. ನನ್ನ ಮುಂದೆಯೇ ನೀನು ಹೊಟ್ಟೆ ತೋರಿಸಲ್ಲ ಅಂತಿಯಾ, ನಿನ್ನ ಕ್ಯಾಮೆರಾ ಮುಂದೇ ಹೇಗೆ ತೋರಿಸ್ತಿಯಾ ಎಂದು ಅವಮಾನ ಮಾಡಿದರಂತೆ. ಇದರಿಂದ ಬೇಸತ್ತು, ಅವರು ತಮ್ಮನ್ನು ತಾವೇ ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿರಂತೆ.

    ಈ ರೀತಿಯ ಕಿರುಕುಳದಿಂದ ಬೇಸತ್ತು ಅವರು ತಮ್ಮನ್ನು ತಾವು ಮದುವೆ ಆಗುವ ನಿರ್ಧಾರ ಮಾಡಿದರಂತೆ. ಈಗ ನನ್ನನ್ನು ನಾನೇ ಗೆಲ್ಲುವ ಶಕ್ತಿ ಬಂದಿದೆ. ನಾನೇ ಶಕ್ತಿ ಸ್ವರೂಪಿಣಿ. ಎಲ್ಲವನ್ನೂ ನನಗೆ ನಾನೇ ಪೂರೈಸಿಕೊಳ್ಳುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಲ್ಕು ಗೋಡೆ ಮ‌ಧ್ಯೆ ಜಗಳವಾಡಿರೋದು, ಬೀದಿಗೆ ತರಬಾರದು: ಅನಿರುದ್ಧ್

    ನಾಲ್ಕು ಗೋಡೆ ಮ‌ಧ್ಯೆ ಜಗಳವಾಡಿರೋದು, ಬೀದಿಗೆ ತರಬಾರದು: ಅನಿರುದ್ಧ್

    ನ್ಮುಂದೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರುವುದಿಲ್ಲವೆಂದು ಜೀ ಕನ್ನಡ ವಾಹಿನಿಯೂ ಸ್ಪಷ್ಟ ಪಡಿಸಿದ ಬೆನ್ನಲ್ಲೇ ನಟ ಅನಿರುದ್ಧ್  ಪ್ರತಿಕ್ರಿಯೆ ನೀಡಿದ್ದು, ನಾಲ್ಕು ಗೋಡೆ ಮಧ್ಯೆ ಜಗಳವಾಡಿರೋದು ಬೀದಿಗೆ ತರಬಾರದು ಎಂದು ಬೇಸರ ವ್ಯಕ್ತಪಡಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಲಸ ಮಾಡ್ತಿರೋ ಯಾವುದೇ ಕ್ಷೇತ್ರವಾಗಿರಬಹುದು ಅಥವಾ ಜೊತೆ ಜೊತೆಯಲಿ ಸೀರಿಯಲ್ ಸೆಟ್‍ಲ್ಲಿ ಅಹಂಕಾರ ನೋಡಿದ್ದೀರಾ, ಸೆಟ್‍ನಲ್ಲಿ ಕೆಲಸಕ್ಕಾಗಿ ಜಗಳ ಮಾಡಿದ್ದೀನಿ. ಮನುಷ್ಯನಿಗೆ ಕೋಪ ಸಹಜ. ನಾನು ಸಾಮಾಜಿಕ ಕೆಲಸ ಮಾಡುತ್ತೇನೆ. ಕಸದ ಹತ್ತಿರ ನಿಂತು ವಿಡಿಯೋ ಮಾಡಿದ್ದೀನಿ. ದುರಂಹಕಾರ ಇದ್ದಿದ್ರೆ ಈ ರೀತಿ ಮಾಡ್ತಿದ್ನಾ ಎಂದು ಪ್ರಶ್ನಿಸಿದರು.

    ಟೀಮ್ ವರ್ಕ್ ಹಾಗೂ ಜನರ ಹಾರೈಕೆ ಸಿಕ್ಕಿರೋ ಯಶಸ್ಸಾಗಿದೆ. ಇದಕ್ಕಿಂತ ಹಿಂದೆ ಸಿನಿಮಾಗಳಿಗೂ ಯಶಸ್ಸು ಸಿಕ್ಕಿದೆ. ನನ್ನ ಅಭಿನಯಕ್ಕೆ ತುಂಬಾ ಜನ ಒಳ್ಳೆಯ ಮಾತು ಹೇಳಿದ್ದಾರೆ. ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ. ಇದಕ್ಕಿಂತ ಯಶಸ್ಸು ಬೇಕಾ, 20 ದಾಖಲೆಗಳನ್ನ ಸೃಷ್ಟಿ ಮಾಡಿದ್ದೀನಿ. ಇದು ಯಶಸ್ಸಾಗಿದೆ. ಈ ರೀತಿ ಸಾಕಷ್ಟು ಯಶಸ್ಸು ಇದೆ. ಇಂತಹ ಯಶಸ್ಸು ಕೊಟ್ಟಿರೋದು ದೇವರು ಎಂದರು. ಇದನ್ನೂ ಓದಿ:  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರಲ್ಲ: ವಾಹಿನಿ ಸ್ಪಷ್ಟನೆ

    ನಾನು ಶ್ರದ್ಧೆಯಿಂದ ಕೆಲಸ ಮಾಡಿದ್ದೀನಿ. ಅಭಿಮಾನಿಗಳ ಪ್ರೀತಿ, ಕುಟುಂಬದರ ಹಾರೈಕೆ ಇದೆ. ನನಗೆ ಕೆಲಸ ಸಿಕ್ಕೇ ಸಿಗುತ್ತದೆ. ನನಗೆ ಇನ್‍ಸೆಕ್ಯೂರಿಟಿ ಬರಲು ಸಾಧ್ಯವೇ ಇಲ್ಲ. ಸಿನಿಮಾಗಳಲ್ಲಿ ಕೆಲ ವರ್ಷ ಕೆಲಸ ಇರಲಿಲ್ಲ. ಅಗಲೇ ಆರಾಮಾಗಿ ಇದ್ದೇ ಇವಾಗ ಕೆಲಸ ಸಿಗಲ್ವಾ ಎಂದು ಕೇಳಿದರು.

    ಅವರು ನನ್ನ ಹತ್ತಿರ ಬಂದು ಚರ್ಚೆ ಮಾಡಬಹುದಿತ್ತು. ಅವರು ನೇರವಾಗಿ ನನ್ನ ಹತ್ತಿರ ಕೇಳಬಹುದಿತ್ತು. ಜೊತೆ ಜೊತೆಯಲಿ ತಂಡದ ಕಲಾವಿದರು ನನ್ನ ಜೊತೆ ಇದ್ದೇವೆ ಅಂತ ಹೇಳಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ಜೊತೆ ಜೊತೆಯಲಿ’ ಶೂಟಿಂಗ್ ಗೆ ನಾನು ಹೋಗಲು ರೆಡಿ : ನಟ ಅನಿರುದ್ಧ

    ನಾನು ಕ್ಯಾರೆವನ್ ಕೇಳಕ್ಕೆ ಹುಚ್ಚನಾ, ಹೆಣ್ಣುಮಕ್ಕಳಿಗೋಸ್ಕರ ಕೇಳಿರೋದು. ನನ್ನ ಕೇಳದೆ ಎರಡು ವರ್ಷ ಯಾವ ಚಾನೆಲ್‍ನಲ್ಲೂ ಆ್ಯಕ್ಟ್ ಮಾಡಬಾರದು ಅಂತ ನಿರ್ಬಂಧ ಹಾಕಿದ್ದಾರೆ. ಓನ್ ಸೈಡ್ ಮಾಡ್ತಿದ್ದಾರೆ. ಭಾರತಿ ವಿಷ್ಣುವರ್ಧನ್ ಸಹ ಹೇಳಿದ್ರು, ವಿಷ್ಣುಗಾಗಿರೋದೆ ನಿನಗಾಗಿರೋದು. ಅವರದೇ ನೆನಪು ಬಂತು ಅಂದರು. ನಮ್ಮ ಕುಟುಂಬಕ್ಕೆ ಹೋರಾಟ ಹೊಸದಲ್ಲ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರಲ್ಲ: ವಾಹಿನಿ ಸ್ಪಷ್ಟನೆ

    ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರಲ್ಲ: ವಾಹಿನಿ ಸ್ಪಷ್ಟನೆ

    ನ್ಮುಂದೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರುವುದಿಲ್ಲವೆಂದು ಜೀ ಕನ್ನಡ ವಾಹಿನಿಯೂ ಸ್ಪಷ್ಟ ಪಡಿಸಿದೆ. ಇಂದು ಸಂಜೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಧಾರಾವಾಹಿಯ ನಿರ್ಮಾಪಕ ಆರೂರು ಜಗದೀಶ್, ಸೀರಿಯಲ್ ನಿಂದ ಅನಿರುದ್ಧ ಅವರನ್ನು ಕೈ ಬಿಡುವ ವಿಚಾರವಾಗಿ ವಾಹಿನಿಯು ಕೂಡ ಒಪ್ಪಿಕೊಂಡಿದ್ದು, ಇನ್ಮುಂದೆ ನಮ್ಮ ಧಾರಾವಾಹಿಯಲ್ಲಿ ಅನಿರುದ್ದ ಅವರು ನಟಿಸುವುದಿಲ್ಲವೆಂದು ಸ್ಪಷ್ಟ ಪಡಿಸಿದರು.

    ಚಾನೆಲ್ ಮತ್ತು ಧಾರಾವಾಹಿ ತಂಡ ಒಪ್ಪಿದರೆ, ನಾನು ನಟಿಸಲು ಸಿದ್ಧವೆಂದು ಕೆಲ ಗಂಟೆಗಳ ಹಿಂದೆಯಷ್ಟೇ ಅನಿರುದ್ಧ ಮಾತನಾಡಿದ್ದರು. ಆದರೆ, ಈ ಮಾತಿಗೆ ವಾಹಿನಿಯಾಗಲಿ, ಧಾರಾವಾಹಿ ತಂಡವಾಗಲಿ ಮನ್ನಣೆ ನೀಡಿಲ್ಲ. ಧಾರಾವಾಹಿಯಿಂದ ಅವರನ್ನು ತಗೆದು ಹಾಕುವಂತಹ ಅಂತಿಮ ತೀರ್ಮಾನವನ್ನೇ ತಗೆದುಕೊಂಡಿದೆ. ಹಾಗಾಗಿ ಆರ್ಯವರ್ಧನ್ ಪಾತ್ರಧಾರಿ ಮುಂದಿನ ದಿನಗಳಲ್ಲಿ ಬದಲಾಗಲಿದ್ದಾರೆ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿ ಪಂಚಾಯಿತಿ ನಡೆಯುವುದಿಲ್ಲವೆಂದೂ ಆರೂರು ಜಗದೀಶ್ ಸ್ಪಷ್ಟಪಡಿಸಿದ್ದಾರೆ.

    ಇದರ ಜೊತೆಗೆ ಮತ್ತೆ ಅನಿರುದ್ಧ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಜಗದೀಶ್, ‘ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಹೆಚ್ಚು ಹಣಕ್ಕೆ ಒತ್ತಡ ಮಾಡಿದ್ರು. ಮಹಾ ಸಂಗಮ ಎಪಿಸೋಡ್ ನಲ್ಲಿ ದೊಡ್ಡಮಟ್ಟದ ಗಲಾಟೆ ಮಾಡಿದ್ರು. ಪ್ರತಿ ಗಲಾಟೆ ಆದಾಗಲೂ ಚಾನಲ್ ಗೆ ನಾನು ಗಮನಕ್ಕೆ ತಂದಿದ್ದೇನೆ. ನನಗೆ ಸಾಕಾಗಿ ಇನ್ನು ನಾನು ಆರೋಗ್ಯ ಕೆಡಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಅವರನ್ನು ಕೈಬಿಡುವ ನಿರ್ಧಾರ ಮಾಡಿರುವುದಾಗಿ ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್, ಹಿರಿಯ ನಟ ಸಿಹಿಕಹಿ ಚಂದ್ರು, ವಾಹಿನಿಯ ಪ್ರತಿನಿಧಿ ಸುಧೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಪ್ರಕರಣವು ಈ ರೀತಿಯಲ್ಲಿ ತೊಂದರೆ ಕೊಡುವವರಿಗೆ ಮಾದರಿಯಾಗಲಿ ಎಂದರು ಸಂಘದ ಅಧ್ಯಕ್ಷ ಭಾಸ್ಕರ್.

    Live Tv
    [brid partner=56869869 player=32851 video=960834 autoplay=true]