Tag: ಕಿರುತೆರೆ ನಟ

  • ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್

    ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್

    ತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್‌ನ್ನು (Ashish Kapoor) ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    ಈ ಕುರಿತು ಸಂತ್ರಸ್ತೆ ನಟ ಆಶಿಶ್ ಕಪೂರ್ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಶಿಶ್ ಕಪೂರ್ ಹಾಗೂ ನಾನು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದು, ಬಳಿಕ ಆಗಸ್ಟ್ ತಿಂಗಳಲ್ಲಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯೊಂದಕ್ಕೆ ಆಹ್ವಾನಿಸಿದ್ದರು. ಹೀಗಾಗಿ ನಾನು ಪಾರ್ಟಿಗೆ ಹೋಗಿದ್ದೆ. ಈ ವೇಳೆ ವಾಶ್ ರೂಂನಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಜೊತೆಗೆ ವಿಡಿಯೋ ಚಿತ್ರೀಕರಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ದರ್ಶನ್ ಜೈಲಲ್ಲಿರೋದಕ್ಕೆ ಬರ್ತ್‌ಡೇ ಸೆಲೆಬ್ರೇಷನ್ ಬೇಡವೆಂದ ಧನ್ವೀರ್

    ಪೊಲೀಸರ ಮಾಹಿತಿ ಪ್ರಕಾರ, ಸಂತ್ರಸ್ತೆ ದೂರಿನ ಆಧಾರದ ಮೇಲೆ ಆ.11ರಂದು ಆಶಿಶ್, ಆತನ ಸ್ನೇಹಿತ, ಸ್ನೇಹಿತನ ಪತ್ನಿ ಹಾಗೂ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಆಶಿಶ್ ಮತ್ತು ಆತನ ಸ್ನೇಹಿತ ಅತ್ಯಾಚಾರ ಎಸಗಿದ್ದು, ಓರ್ವ ಮಹಿಳೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆ.18ರಂದು ಸಂತ್ರಸ್ತೆ ಮತ್ತೊಂದು ಹೇಳಿಕೆ ನೀಡಿದ್ದರು. ಅದಾದ ಬಳಿಕ ಆ.21ರಂದು ಆಶಿಶ್ ಸ್ನೇಹಿತ ಹಾಗೂ ಆತನ ಪತ್ನಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

    ತನಿಖೆ ನಡೆಯುತ್ತಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಇವುಗಳ ಆಧಾರದ ಮೇಲೆ ಸಂತ್ರಸ್ತೆ ಹಾಗೂ ಕಪೂರ್ ಪಾರ್ಟಿ ನಡೆದ ದಿನ ವಾಶ್‌ರೂಮ್‌ಗೆ ಪ್ರವೇಶಿಸಿದ್ದಾರೆ. ಇವರಿಬ್ಬರು ಕೆಲಕಾಲ ಹೊರಗೆ ಬರದಿದ್ದಾಗ ಅವರ ಸ್ನೇಹಿತರು ಬಾಗಿಲು ಬಡಿಯಲು ಪ್ರಾರಂಭಿಸಿದ್ದಾಗಿ ತಿಳಿದುಬಂದಿದೆ.

    ಸದ್ಯ ನಟ ಆಶಿಶ್ ಕಪೂರ್‌ನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.ಇದನ್ನೂ ಓದಿ: ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

  • ಲೈಂಗಿಕ ದೌರ್ಜನ್ಯ ಆರೋಪ – `ಮುದ್ದುಲಕ್ಷ್ಮಿ’ ಸೀರಿಯಲ್ ನಟ ಚರಿತ್ ಬಾಳಪ್ಪ ಬಂಧನ

    ಲೈಂಗಿಕ ದೌರ್ಜನ್ಯ ಆರೋಪ – `ಮುದ್ದುಲಕ್ಷ್ಮಿ’ ಸೀರಿಯಲ್ ನಟ ಚರಿತ್ ಬಾಳಪ್ಪ ಬಂಧನ

    ಬೆಂಗಳೂರು: ಗೆಳತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಕಿರುತೆರೆ ನಟ ಚರಿತ್ ಬಾಳಪ್ಪ (Charith Balappa) ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಕನ್ನಡದ ಮುದ್ದುಲಕ್ಷ್ಮಿ, ಲವಲವಿಕೆ, ಸರ್ಪಸಂಬಂಧ ಸೇರಿದಂತೆ ತೆಲುಗಿನ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಚರಿತ್ ಬಾಳಪ್ಪ ಖ್ಯಾತಿ ಪಡೆದಿದ್ದರು.ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಪ್ರಕರಣ – ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು; ಮೃತರ ಸಂಖ್ಯೆ 3ಕ್ಕೆ ಏರಿಕೆ

    ನಟ ಚರಿತ್‌ನನ್ನು ಆರ್‌ಆರ್ ನಗರ (RR Nagar) ಪೊಲೀಸರು ಬಂಧಿಸಿದ್ದು, ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ ಹಾಗೂ ಹಲ್ಲೆ ಮಾಡಿರುವುದಾಗಿ ನಟನ ವಿರುದ್ಧ ಯುವತಿ ಆರೋಪಿಸಿದ್ದಾರೆ.

    ನಿನ್ನನ್ನ ಪ್ರೀತಿಸುತ್ತೇನೆ ಎಂದು ಹೇಳಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. ಜೊತೆಗೆ ಯುವತಿ ವಾಸ ಮಾಡುತ್ತಿದ್ದ ಮನೆಗೆ ನುಗ್ಗಿ ಸಹಚರರ ಜೊತೆ ಕಿರುಕುಳ ನೀಡಿದ್ದಾನೆ. ಹಣಕ್ಕೂ ಬೇಡಿಕೆಯಿಟ್ಟಿದ್ದು, ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವೀಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

    ಇದಕ್ಕೂ ಮುನ್ನ ನಟ ಚರಿತ್ ಹಾಗೂ ಪತ್ನಿ ಮಂಜುಶ್ರೀ ಡಿವೋರ್ಸ್ ಪಡೆದಿದ್ದರು. ಕೋರ್ಟ್ ಆಜ್ಞೆಯಂತೆ ಡಿವೋರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಬೆದರಿಕೆ ಹಾಕಿದ್ದಾರೆಂದು ಚರಿತ್ ವಿರುದ್ಧ ಪತ್ನಿ ಮಂಜುಶ್ರೀ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.ಇದನ್ನೂ ಓದಿ: ಎಲ್‌ಐಸಿ ಹಣಕ್ಕಾಗಿ ತಂದೆಯನ್ನೆ ಕೊಂದ ಮಗ – ಸಾವಿನ ಸುದ್ದಿ ತಿಳಿದು ಇನ್ನೊಬ್ಬ ಮಗ ಆತ್ಮಹತ್ಯೆ!

  • ನಟ ಆದಿತ್ಯ ಸಿಂಗ್ ರಜಪೂತ್ ಮನೆಯ ಬಾತ್‌ರೂಮಿನಲ್ಲಿ ಶವವಾಗಿ ಪತ್ತೆ

    ನಟ ಆದಿತ್ಯ ಸಿಂಗ್ ರಜಪೂತ್ ಮನೆಯ ಬಾತ್‌ರೂಮಿನಲ್ಲಿ ಶವವಾಗಿ ಪತ್ತೆ

    ಮುಂಬೈ: ನಟ (Actor), ಮಾಡೆಲ್, ಫೋಟೋಗ್ರಾಫರ್ ಆದಿತ್ಯ ಸಿಂಗ್ ರಜಪೂತ್ (Aditya Singh Rajput) (32) ಸಾವನ್ನಪ್ಪಿದ್ದಾರೆ.

    ಮೇ 22 ರಂದು ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿರುವ (Mumbai Apartment) ತಮ್ಮ ಮನೆಯ ಬಾತ್‌ರೂಮ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಫೌಂಡೇಶನ್ ನಿಂದ 5,000 ಪದವಿ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ವಿದ್ಯಾರ್ಥಿವೇತನ!

    ಮುಂಬೈನ ಅಂಧೇರಿಯ ಅಪಾರ್ಟ್‌ಮೆಂಟ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ವಾಸಿಸುತ್ತಿದ್ದರು. ಬಾತ್‌ರೂಮ್‌ನಲ್ಲಿ ಬಿದ್ದಿದ್ದ ಆದಿತ್ಯ ಸಿಂಗ್ ರಜಪೂತ್ ಅವರನ್ನ ಸ್ನೇಹಿತರೊಬ್ಬರು ಹಾಗೂ ಅಪಾರ್ಟ್‌ಮೆಂಟ್‌ನ ವಾಚ್‌ಮ್ಯಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಆಸ್ಪತ್ರೆ ತಲುಪುವ ಮುನ್ನವೇ ಆದಿತ್ಯ ಸಿಂಗ್ ರಜಪೂತ್ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ರಜಪೂತ್‌ ಸಾವಿನ ಬಗ್ಗೆ ಅನುಮಾನಾಸ್ಪದವಾಗಿ ಯಾವುದೂ ಕಂಡುಬಂದಿಲ್ಲ. ಆಕಸ್ಮಿಕ ಸಾವಿನಂತೆ ಕಂಡುಬಂದಿದೆ. ಅವರ ದೇವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: FAME II ಸಬ್ಸಿಡಿ ಕಡಿತ; ಜೂನ್ 1ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ದುಬಾರಿ

    ಕಾರಣ ಏನು?
    ಮುಂಬೈನಲ್ಲಿ ಕಾಸ್ಟಿಂಗ್ ಕೋ-ಆರ್ಡಿನೇಟರ್ ಆಗಿಯೂ ಕೆಲಸ ಮಾಡುತ್ತಿರುವ ಆದಿತ್ಯ ಸಿಂಗ್ ರಜಪೂತ್ ನಟ ಹಾಗೂ ಮಾಡೆಲ್ ಕೂಡ ಹೌದು. ಅಂಧೇರಿಯ ಅಪಾರ್ಟ್‌ಮೆಂಟ್‌ನಲ್ಲಿನ 11ನೇ ಮಹಡಿಯಲ್ಲಿ ಆದಿತ್ಯ ಸಿಂಗ್ ರಜಪೂತ್ ವಾಸಿಸುತ್ತಿದ್ದರು. ಮನೆಯ ಬಾತ್‌ರೂಮ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದಾರೆ. ವರದಿಗಳ ಪ್ರಕಾರ, ಡ್ರಗ್ಸ್ ಓವರ್‌ಡೋಸ್‌ನಿಂದಾಗಿ ಆದಿತ್ಯ ಸಿಂಗ್ ರಜಪೂತ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

  • ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟ ಸಮೀರ್ ಶರ್ಮಾ ಮೃತದೇಹ ಪತ್ತೆ

    ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟ ಸಮೀರ್ ಶರ್ಮಾ ಮೃತದೇಹ ಪತ್ತೆ

    – ಎರಡು ದಿನಗಳ ಹಿಂದೆಯೇ ಆತ್ಮಹತ್ಯೆ?

    ಮುಂಬೈ: ಕಿರುತೆರೆಯ ಪ್ರತಿಭಾನ್ವಿತ ನಟ ಸಮೀರ್ ಶರ್ಮಾ (44) ತಮ್ಮ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಸಮೀರ್ ಶರ್ಮಾ ಮುಂಬೈನ ಪಶ್ಚಿಮ ಮಲಾಡ್‍ನ ರಸ್ತೆಯಲ್ಲಿರುವ ನೇಹಾ ಸಿಹೆಚ್‍ಎಸ್ ಬಿಲ್ಡಿಂಗ್‍ನ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ಆದರೆ ಬುಧವಾರ ರಾತ್ರಿ ಫ್ಲ್ಯಾಟ್‍ನ ಅಡುಗೆ ಮನೆಯಲ್ಲಿ ನೇಣು ಬಿಗಿದ ಸೀತಿಯಲ್ಲಿ ಪತ್ತೆಯಾಗಿದ್ದಾರೆ.

    ಸಮೀರ್ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆ ನಿವಾಸಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಸಮೀರ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವನ್ನಪ್ಪಿದ ಎರಡು ದಿನ ಮೇಲಾಗಿದ್ದರಿಂದ ಶವ ಕೊಳೆಯಲಾರಂಭಿಸಿತ್ತು.

    ಕಳೆದ ಫೆಬ್ರವರಿಯಲ್ಲಿ ಅವರು ಈ ಫ್ಲ್ಯಾಟನ್ನು ಬಾಡಿಗೆಗೆ ಪಡೆದಿದ್ದರು. ಸಮೀರ್ ದೇಹದ ಸ್ಥಿತಿಯನ್ನು ನೋಡಿದರೆ ಅವರು ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದು, ಸಮೀರ್ ಮನೆಯಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ನೆರೆಹೊರೆಯವರ ಪ್ರಕಾರ ಸಮೀರ್ ಕಳೆದ ಕೆಲ ದಿನಗಳಿಂದ ಒಂಟಿಯಾಗಿರುತ್ತಿದ್ದರು. ಹೊರಗಡೆ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಮೀರ್ ಸೂಪರ್ ಹಿಟ್ ಧಾರಾವಾಹಿಗಳಾದ ‘ದಿಲ್ ಕ್ಯಾ ಚಾಹ್ತಾ’, ‘ಕಹಾನಿ ಘರ್ ಘರ್ ಕೀ’, ‘ಸಾಸ್ ಕಭೀ ಬಹು ಥೀ’ ಗಳಲ್ಲಿ ನಟಿಸಿದ್ದರು. ‘ಯೇ ರಿಶ್ತೆ ಹೈ ಪ್ಯಾರ್ ಕೇ’ ಧಾರಾವಾಹಿಯ ಶೌರ್ಯ ಪಾತ್ರ ಸಮೀರ್ ಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿತ್ತು.

  • 7 ವರ್ಷದಿಂದ ನಟಿ ಮೇಲೆ ನಿರಂತರ ಅತ್ಯಾಚಾರ – ಕಿರುತೆರೆ ನಟ ಅರೆಸ್ಟ್

    7 ವರ್ಷದಿಂದ ನಟಿ ಮೇಲೆ ನಿರಂತರ ಅತ್ಯಾಚಾರ – ಕಿರುತೆರೆ ನಟ ಅರೆಸ್ಟ್

    – ಎಂಜಿನಿಯರಿಂಗ್ ಓದುತ್ತಿದ್ದಾಗ ಸಲುಗೆ
    – ಖಾಸಗಿ ಫೋಟೋ ಅಪ್ಲೋಡ್ ಮಾಡ್ತೀನಿ
    – ಮುಖಕ್ಕೆ ಆ್ಯಸಿಡ್ ಹಾಕ್ತೀನಿ
    – ಯುವತಿಗೆ ದೂರು ನೀಡದಂತೆ ಬೆದರಿಕೆ

    ಚಿಕ್ಕಬಳ್ಳಾಪುರ: 7 ವರ್ಷಗಳ ನಂತರ ಮೈಸೂರು ಮೂಲದ ನಟನ ವಿರುದ್ಧ ಬೆಂಗಳೂರಿನ ನಟಿ ಅತ್ಯಾಚಾರ ದೂರು ನೀಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯಲ್ಲಿ ನಟಿಸಿರುವ ನಟಿ ಕಿರುತೆರೆಯಲ್ಲಿ ನಟ ಹಾಗೂ ಪ್ರೊಡೆಕ್ಷನ್ ಮ್ಯಾನೆಜರ್ ಆಗಿರುವ ತೇಜಸ್ ಗೌಡ ಅಲಿಯಾಸ್ ಅಭಿಗೌಡ ವಿರುದ್ಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ತಾನು 2012ರಲ್ಲಿ ಚಿಕ್ಕಬಳ್ಳಾಪುರ ನಗರ ಹೊರವಲಯದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಾಗ ತನ್ನ ಸಹಪಾಠಿಯಾಗಿದ್ದ ತೇಜಸ್ ಗೌಡ ತನ್ನನ್ನು ಪರಿಚಯ ಮಾಡಿಕೊಂಡು ಪ್ರೀತಿಸುವುದಾಗಿ ಸಲುಗೆಯಿಂದ ವರ್ತಿಸಿದ್ದ. ಆ ಸಮಯದಲ್ಲಿ ತನ್ನೊಂದಿಗೆ ತನ್ನ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ. ಇದನ್ನು ನಾನು ವಿರೋಧಿಸಿದ್ದಕ್ಕೆ, ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಮತ್ತೆ ಆನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ.

    ಇದೇ ರೀತಿ ಅವಕಾಶ ಸಿಕ್ಕಾಗಲೆಲ್ಲಾ ನನ್ನ ಜೊತೆ ಅಭಿಗೌಡ ದೈಹಿಕ ಸಂಪರ್ಕ ಬೆಳೆಸುತ್ತಿದ್ದನು. ನಂತರ ಇಬ್ಬರು ಖಾಸಗಿ ವಾಹಿನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆವು. ಆ ಸಮಯದಲ್ಲಿ ನನಗೆ ಬೇರೋಬ್ಬರ ಜೊತೆ ಸಂಬಂಧ ಇದೆ ಹೇಳಿ ತುಂಬಾ ಗಲಾಟೆ ನಡೆಸಿ ನನ್ನ ಮೇಲೆ ಹಲ್ಲೆ ನಡೆಸಿದ್ದ. ಆಗಲೂ ನಾನು ಆತನ ವಿರುದ್ಧ ದೂರು ನೀಡಿರಲಿಲ್ಲ. ಒಂದು ವಾರದ ನಂತರ ಅಂದರೆ ಡಿಸೆಂಬರ್ 2018ರಲ್ಲಿ ನಾನು ರೂಮಿನಲ್ಲಿದ್ದಾಗ ಮತ್ತೆ ಬಂದು ನಿನ್ನನ್ನು ಮದುವೆಯಾಗವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಇದರಿಂದ ನಾನು ಗರ್ಭಿಣಿಯಾದೆ.

    ನಾನು ಗರ್ಭಿಣಿಯಾಗಿದ್ದೇನೆ ಎಂಬ ವಿಷಯ ತೇಜಸ್‍ಗೆ ತಿಳಿಸಿದರೆ, ನೀನು ಯಾರೊಂದಿಗೋ ಇದ್ದು ಗರ್ಭಿಣಿಯಾಗಿದ್ದೀಯಾ. ನನ್ನ ಜೊತೆ ಯಾಕೆ ಹೇಳುತ್ತೀಯಾ ಎಂದು ಗಲಾಟೆ ಮಾಡಿ ಮಾತ್ರೆ ತಿನ್ನು ಸರಿ ಹೋಗುತ್ತೆ ಎಂದು ಹೇಳಿ ಬೈದಿದ್ದಾನೆ. ನಂತರ ನಾನು ಬೆಂಗಳೂರು ನಗರದ ಆಸ್ಪತ್ರೆಯೊಂದರಲ್ಲಿ ಗರ್ಭಪಾತ ಮಾಡಿಸಿಕೊಂಡಿರುತ್ತೇನೆ. ಇಷ್ಟೆಲ್ಲ ಆದರೂ ಅಭಿಗೌಡ ನನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿ ಇಷ್ಟು ದಿನ ಸುಮ್ಮನಿದ್ದೆ. ಆದರೆ ಈಗ ಆತ ಬೇರೆ ಹುಡುಗಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ.

    ಈ ಬಗ್ಗೆ ನಾನು ಗಲಾಟೆ ಮಾಡಿದ್ದಕ್ಕೆ ಏನ್ ಮಾಡಿಕೊಳ್ಳುತ್ತಿಯೋ ಮಾಡಿಕೋ. ಎಲ್ಲವನ್ನು ನಾನು ಎದುರಿಸುತ್ತೇನೆ. ನೀನೇನಾದರೂ ದೂರು ಕೊಟ್ಟರೆ ನಮ್ಮಿಬ್ಬರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ. ನೀನು ಸೀರಿಯಲ್‍ನಲ್ಲಿ ನಟಿಸೋಕೆ ಆಗದಂತೆ ಮುಖಕ್ಕೆ ಆ್ಯಸಿಡ್ ಹಾಕಿ ಸಾಯಿಸುತ್ತೇನೆ ಎಂದು ಹೆದರಿಸಿದ್ದಾನೆ. ಹೀಗಾಗಿ 2012ರಿಂದಲೂ ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ಮಾಡಿ ಈಗ ನನಗೆ ಮೋಸ ಮಾಡಿ ಬೇರೆ ಹುಡುಗಿಯೊಂದಿಗೆ ಮದುವೆಯಾಗಲು ಮುಂದಾಗಿರುವ ಅಭಿಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ತೇಜಸ್ ಗೌಡ ಅಲಿಯಾಸ್ ಅಭಿಗೌಡನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ಮನೆ ಕಟ್ಟೋಕೆ ಮೆಟೀರಿಯಲ್ ಕೊಡಿಸ್ತೀನೆಂದು ಕಿರುತೆರೆ ನಟನಿಂದ ಮೋಸ

    ಮನೆ ಕಟ್ಟೋಕೆ ಮೆಟೀರಿಯಲ್ ಕೊಡಿಸ್ತೀನೆಂದು ಕಿರುತೆರೆ ನಟನಿಂದ ಮೋಸ

    ಬೆಂಗಳೂರು: ಸಿನಿಮಾ ಮತ್ತು ಕಿರುತೆರೆಯಲ್ಲಿ ನಟಿಸಲು ಚಾನ್ಸ್ ಕೊಡಿಸುತ್ತೇನೆ ಎಂದು ಕೆಲವರು ಮೋಸ ಮಾಡುತ್ತಾರೆ. ಆದರೆ ಇಲ್ಲೊಬ್ಬ ನಟ ಮನೆ ಕಟ್ಟುವುದಕ್ಕೆ ಮೆಟೀರಿಯಲ್ ಕೊಡಿಸುತ್ತೇನೆ ಎಂದು ಮೋಸ ಮಾಡಿದ್ದಾನೆ.

    ಆಕರ್ಶ್ ಆದಿತ್ಯ ಬ್ಯುಸಿನೆಸ್ ಹೆಸರಲ್ಲಿ ವಂಚನೆ ಮಾಡಿರುವ ಕಿರುತರೆ ನಟ. ಈತ ‘ಮಮತೆಯ ಕರೆಯೋಲೆ’ ಸೇರಿ ಹಲವು ಧಾರವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾನೆ. ಆದರೆ ಇದೀಗ ಮನೆ ಕಟ್ಟುವುದಕ್ಕೆ ಮೆಟೀರಿಯಲ್ ಕೊಡಿಸುತ್ತೇನೆ ಎಂದು ಹೇಳಿ ಮೋಸ ಮಾಡಿದ್ದಾನೆ.

    ಆಕರ್ಶ್ ಆದಿತ್ಯ, ಮಹಿಳೆಯೊಬ್ಬಳ ಜೊತೆ ಪಾರ್ಟ್ನರ್‌ ಆಗಿ ನಂದಿನಿ ಲೇಔಟ್‍ನಲ್ಲಿ ವೋವ್ ಎಂಟರ್ಪ್ರೈಸ್ ನಡೆಸುತ್ತಿದ್ದರು. ವೋವ್ ಎಂಟರ್ಪ್ರೈಸ್ ಮೂಲಕ ಕಾಮಗಾರಿ ಮೆಟೀರಿಯಲ್ ಡೀಲ್ ಮಾಡಿಸುವ ಕೆಲಸ ಮಾಡಿಸುತ್ತಿರುತ್ತಾರೆ. ಬಿಲ್ಡರ್ಸ್ ಫಸ್ಟ್ ಕಂಪನಿಯ ಮಾಲೀಕ ವೈಭವ್ ಕುಮಾರ್ ಅಗರ್ವಾಲ್ ಕಡೆಯಿಂದ ಲಕ್ಷಾಂತರ ರೂಪಾಯಿಯ ಕಾಮಗಾರಿ ಮೇಟಿರಿಯಲ್ ಗಳನ್ನು ಕೊಡಿಸಿದ್ದಾನೆ. ಆದರೆ ಹಣ ಕೊಡದೆ ಮೋಸ ಮಾಡಿದ್ದಾನೆ.

    ಸುಮಾರು 5 ತಿಂಗಳ ಹಿಂದೆ ಮನೆ ಕಟ್ಟುವವರಿಗೆ ಮೆಟೀರಿಯಲ್ ಖರೀದಿ ಮಾಡಿಕೊಡಿಸಿದ್ದಾರೆ. ಆದರೆ ಹಣವನ್ನು ನಟನ ಬಳಿ ಕೇಳಿದಾಗ ಆತ ಉಡಾಫೆಯ ಉತ್ತರ ನೀಡುತ್ತಿದ್ದಾನೆ. ಇಬ್ಬರ ಫೋನ್ ಕೋಡ ಸ್ವಿಚ್ಛ್ ಆಫ್ ಆಗಿದೆ. ಅತ್ತ ಮನೆ ಮಾಲೀಕರ ಬಳಿ ಹಣ ಪಡೆದು ಮನೆ ಮೆಟೀರಿಯಲ್ ಡಿಸೈನ್ ಮಾಡಿಸದೆ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಅಗರ್ವಾಲ್ ಹೇಳಿದ್ದಾರೆ.

    ಸದ್ಯಕ್ಕೆ ಕಿರುತರೆ ನಟನ ಮತ್ತು ಜೊತೆಗಾರ್ತಿ ಮಹಿಳೆಯ ವಿರುದ್ಧ ಮಾಲೀಕ ಅಗರ್ವಾಲ್ ಪೀಣ್ಯ ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್ ದಾಖಲಿಸಿದ್ದಾರೆ. ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡು ಕಿರುತರೆ ನಟನನ್ನು ಸಂಪರ್ಕ ಮಾಡಿದರೆ ಆತ ಕಥೆ ಹೇಳಿಕೊಂಡು ಕಾಲ ದೂಡುತ್ತಿದ್ದಾನೆಂದು ಅಗರ್ವಾಲ್ ಆರೋಪಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸ್ನೇಹಿತೆಯನ್ನು ಅನುಚಿತವಾಗಿ ಮುಟ್ಟಿದ್ದ ವ್ಯಕ್ತಿ ಮೇಲೆ ಹಲ್ಲೆ- ಕಿರುತೆರೆ ನಟ ಅರೆಸ್ಟ್

    ಸ್ನೇಹಿತೆಯನ್ನು ಅನುಚಿತವಾಗಿ ಮುಟ್ಟಿದ್ದ ವ್ಯಕ್ತಿ ಮೇಲೆ ಹಲ್ಲೆ- ಕಿರುತೆರೆ ನಟ ಅರೆಸ್ಟ್

    ಮುಂಬೈ: ತನ್ನ ಸ್ನೇಹಿತೆಯನ್ನು ಅನುಚಿತವಾಗಿ ಸ್ಪರ್ಶಿಸಿದ ಸೆಲೂನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಅಡಿ ಕಿರುತೆರೆ ನಟನನ್ನು ಪೊಲೀಸರು ಬಂಧಿಸಿದ್ದಾರೆ.

    ಅಭಿಮನ್ಯು ಚೌಧರಿ ಬಂಧನಕ್ಕೊಳಗಾದ ನಟ. ಹೆಡ್ ಮಸಾಜ್ ಮಾಡುವ ನೆಪದಲ್ಲಿ ಸೆಲೂನ್ ಸಿಬ್ಬಂದಿ ಅಭಿಮನ್ಯು ಗೆಳತಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಈ ವಿಷಯವನ್ನು ಯುವತಿ ತನ್ನ ಗೆಳೆಯ ಅಭಿಮನ್ಯು ಬಳಿ ಹೇಳಿಕೊಂಡಿದ್ದಾಳೆ. ವಿಚಾರ ತಿಳಿದು ಕೋಪಗೊಂಡ ಅಭಿಮನ್ಯು ತನ್ನ ಸ್ನೇಹಿತನ ಜೊತೆ ಸೇರಿ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

    ನಾವು ಅಭಿಮನ್ಯು ಹಾಗೂ ಆತನ ಗೆಳೆಯನನ್ನು ಬಂಧಿಸಿದ್ದೇವೆ. ಅಲ್ಲದೆ ಇಬ್ಬರನ್ನು ಸೆಲೂನ್‍ಗೆ ಕರೆಸಿಕೊಂಡಿದ್ದ ಯುವತಿ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಯುವತಿ ಮೇ 16ರಂದು ತನ್ನ ಗೆಳೆಯ ಅಭಿಮನ್ಯುನನ್ನು ಕರೆಸಿ ಸಿಬ್ಬಂದಿಯ ವರ್ತನೆಯ ಬಗ್ಗೆ ಹೇಳಿದ್ದಾಳೆ. ಆಗ ಅಭಿಮನ್ಯು ತನ್ನ ಗೆಳೆಯನ ಜೊತೆ ಸೇರಿ ಸಿಬ್ಬಂದಿಯನ್ನು ಥಳಿಸಿ, ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

    ಅಭಿಮನ್ಯು ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಅಭಿಮನ್ಯು ಹಾಗೂ ಸಿಬ್ಬಂದಿಯ ಜಗಳದ ನಡುವೆ ಅಲ್ಲಿದ್ದ ಬೇರೆ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಭಿಮನ್ಯು ಗೆಳೆಯ ನೀಡಿದ ದೂರಿನ ಮೇರೆಗೆ ಪೊಲೀಸರು ಸೆಲೂನ್ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕರಣ್ ಒಬೆರಾಯ್ ಅತ್ಯಾಚಾರ ಪ್ರಕರಣ – ದೂರು ಕೊಟ್ಟ ರೂಪದರ್ಶಿಗೆ ಚಾಕು ಇರಿತ

    ಕರಣ್ ಒಬೆರಾಯ್ ಅತ್ಯಾಚಾರ ಪ್ರಕರಣ – ದೂರು ಕೊಟ್ಟ ರೂಪದರ್ಶಿಗೆ ಚಾಕು ಇರಿತ

    ಮುಂಬೈ: ಕಿರುತೆರೆ ನಟ ಮತ್ತು ನಿರೂಪಕ ಕರಣ್ ಒಬೆರಾಯ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡಿದ್ದ ಮಾಡೆಲ್‍ಗೆ ಶನಿವಾರ ಬೆಳಗ್ಗೆ ಇಬ್ಬರು ಅಪರಿಚಿತರು ಚಾಕು ಹಾಕಿ ಪರಾರಿಯಾಗಿದ್ದಾರೆ.

    ಶನಿವಾರ ಬೆಳಗ್ಗೆ ವಾಕಿಂಗ್ ಎಂದು ಹೋಗಿದ್ದ 34 ವರ್ಷದ ಮಾಡೆಲ್‍ಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೈಯನ್ನು ಹರಿತವಾದ ಅಯುಧದಿಂದ ಇರಿದು ಆಸಿಡ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

    2017ರಲ್ಲಿ ನನ್ನ ಮೇಲೆ ಕರಣ್ ಅತ್ಯಾಚಾರ ಮಾಡಿದ್ದಾನೆ ಎಂದು ಮಾಡೆಲ್ ಮೇ 6 ರಂದು ದೂರು ನೀಡಿದ್ದಳು. ಈ ದೂರಿನ ಪ್ರಕಾರ ಕರಣ್ ಪೋಲಿಸರು ಬಂಧಿಸಿದ್ದು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಪ್ರಕರಣ ಕೋರ್ಟ್‍ನಲ್ಲಿ ಇರುವಾಗಲೇ ಲೋಖಂಡ್ವಾಲಾ ರಸ್ತೆಯಲ್ಲಿ ಬೆಳಗ್ಗೆ 6.30ಕ್ಕೆ ವಾಕಿಂಗ್ ಹೋಗಿದ್ದ ಮಾಡೆಲ್ ಮೇಲೆ ಇಬ್ಬರು ಅಪರಿಚಿತ ದಾಳಿ ಮಾಡಿ ಚಾಕುವಿನಿಂದ ಇರಿದು ಹೋಗುವಾಗ ಒಂದು ಪತ್ರವನ್ನು ಎಸೆದು ಹೋಗಿದ್ದಾರೆ. ಇದನ್ನು ಓದಿ: ಅತ್ಯಾಚಾರ ಕೇಸ್‍ನಲ್ಲಿ ಕಿರುತೆರೆ ನಟ ಅರೆಸ್ಟ್

    ಈ ಸಮಯದಲ್ಲಿ ಮಾಡೆಲ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಇಬ್ಬರು ಮಹಿಳೆಯರು ಬಂದು ಸಹಾಯ ಮಾಡಿದ್ದಾರೆ. ನಂತರ ಒಶಿವಾರದ ಹಿರಿಯ ಪೊಲೀಸ್ ಅಧಿಕಾರಿ ಶೈಲೇಶ್ ಪಸಲ್ವಾರ್ ಅವರಿಗೆ ಮಾಡೆಲ್ ದೂರು ನೀಡಿದ್ದು ತನಿಖೆ ಮಾಡಲಾಗುತ್ತಿದೆ.

    ಏನಿದು ಪ್ರಕರಣ?
    ಕರಣ್ ಮಾಡೆಲ್‍ನನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅತ್ಯಾಚಾರವೆಸಗಿ ಮೋಸ ಮಾಡಿದ್ದ. ಕರಣ್ ಅತ್ಯಾಚಾರ ಮಾಡಿದಲ್ಲದೇ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅಲ್ಲದೆ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಮಾಡೆಲ್‍ಗೆ ಬೆದರಿಕೆ ಹಾಕಿದ್ದ. ಈ ಸಂಬಂಧ ಕರಣ್ 2017ರಲ್ಲಿ ಮುಂಬೈನ ಓಸ್ವಿಪುರದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಾಡೆಲ್ ದೂರು ನೀಡಿದ್ದಳು. ಈ ದೂರಿನ ಮೇರೆಗೆ ಓಸ್ವಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಹಾಗೂ 384 ರ ಆಡಿ ಪ್ರಕರಣ ದಾಖಲಾಗಿದ್ದು ಕರಣ್ ನನ್ನು ಪೊಲೀಸರು ಬಂಧಿಸಿದ್ದರು.

  • ಅತ್ಯಾಚಾರ ಕೇಸ್‍ನಲ್ಲಿ ಕಿರುತೆರೆ ನಟ ಅರೆಸ್ಟ್

    ಅತ್ಯಾಚಾರ ಕೇಸ್‍ನಲ್ಲಿ ಕಿರುತೆರೆ ನಟ ಅರೆಸ್ಟ್

    ಮುಂಬೈ: ಅತ್ಯಾಚಾರ ಮಾಡಿ ವಿಡಿಯೋ ಮಾಡಿದ ಕೇಸ್‍ನಲ್ಲಿ ಹಿಂದಿ ಕಿರುತೆರೆ ನಟ ಕರಣ್ ಒಬೆರಾಯ್‍ನನ್ನು ಮುಂಬೈನ ಓಸ್ವಿಪುರದ ಪೊಲೀಸರು ಬಂಧಿಸಿದ್ದಾರೆ.

    ಕರಣ್ ಮಾಡಲ್, ನಟಿಯನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅತ್ಯಾಚಾರವೆಸಗಿ ಮೋಸ ಮಾಡಿದ್ದ. ಕರಣ್ ಅತ್ಯಾಚಾರ ಮಾಡಿದಲ್ಲದೇ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅಲ್ಲದೆ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಮಾಡೆಲ್‍ಗೆ ಬೆದರಿಕೆ ಹಾಕಿದ್ದ.

    ಕರಣ್ 2017ರಲ್ಲಿ ಮುಂಬೈನ ಓಸ್ವಿಪುರದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಾಡೆಲ್ ದೂರು ನೀಡಿದ್ದಳು. ಈ ಸಂಬಂಧ ಓಸ್ವಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಹಾಗೂ 384 ಅಡಿ ಪ್ರಕರಣ ದಾಖಲಾಗಿದ್ದು, ಕರಣ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಕರಣ್ ‘ಸ್ವಾಭಿಮಾನ’ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ. ಇದಾದ ಬಳಿಕ ಆತ ‘ಸಾಯಾ ಆಂಡ್ ಜಸ್ಸಿ ಜೈಸೇ ಕೋಹಿ ನಹೀ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ.

  • ಮನೆ ಬಾಡಿಗೆ ಕೇಳಿದ್ದಕ್ಕೆ ಮಾಲೀಕನಿಗೇ ಸುನಾಮಿ ಕಿಟ್ಟಿ ಅವಾಜ್

    ಮನೆ ಬಾಡಿಗೆ ಕೇಳಿದ್ದಕ್ಕೆ ಮಾಲೀಕನಿಗೇ ಸುನಾಮಿ ಕಿಟ್ಟಿ ಅವಾಜ್

    ಬೆಂಗಳೂರು: ಕಿಡ್ನಾಪ್ ಆಯ್ತು, ಒರಾಯಾನ್ ಮಾಲ್ ಗಲಾಟೆಯಾಯ್ತು, ಇದೀಗ ಮತ್ತೊಂದು ವಿಚಾರಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಸುನಾಮಿ ಕಿಟ್ಟಿ ಕಿರಿಕ್ ಮಾಡಿದ್ದಾನೆ.

    ಹೌದು. ಸುನಾಮಿ ಕಿಟ್ಟಿ ನಗರದ ಶಂಕರ ಮಠದಲ್ಲಿರೋ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದನು. ಆದ್ರೆ ಇತ್ತೀಚೆಗೆ ಆತ ಬಾಡಿಗೆ ಹಣವನ್ನು ನೀಡುತ್ತಿರಲಿಲ್ಲ. ಹೀಗಾಗಿ ಮನೆ ಮಾಲೀಕ ಶಿವಣ್ಣ ಬಾಡಿಗೆ ನೀಡುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಕಿಟ್ಟಿ, ಶಿವಣ್ಣ ಅವರಿಗೆ ಅವಾಜ್ ಹಾಕಿದ್ದಾನೆ.

    ಬಾಡಿಗೆ ಎಷ್ಟು?:
    ಕಿಟ್ಟಿ ತಿಂಗಳಿಗೆ 22 ಸಾವಿರದಂತೆ ಶಿವಣ್ಣ ಅವರ ಮನೆಯಲ್ಲಿ ವಾಸವಾಗಿದ್ದನು. ಆದ್ರೆ 4 ತಿಂಗಳ ಬಾಡಿಗೆ 88 ಸಾವಿರ ಕೊಡದೆ ಮನೆ ಮಾಲೀಕನಿಗೆ ಕಿಟ್ಟಿ ಸತಾಯಿಸುತ್ತಿದ್ದನು. ಹೀಗಾಗಿ ಈ ಹಣವನ್ನು ಮನೆ ಮಾಲೀಕ ಕೇಳಿದಾಗ ಕಿಟ್ಟಿ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.

    ಈ ಸಂಬಂಧ ಕಿಟ್ಟಿ ವಿರುದ್ಧ ಮಾಲೀಕ ಶಿವಣ್ಣ ಮಹಾಲಕ್ಷಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸದ್ಯ ಪೊಲೀಸರು ಕಿಟ್ಟಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

    ಕಿಟ್ಟಿ ವಿರುದ್ಧ ಮಹಾಲಕ್ಷೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews