Tag: ಕಿರುತೆರೆ

  • ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ನಟ ರವಿಶಂಕರ್

    ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ನಟ ರವಿಶಂಕರ್

    ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನದ ಮನರಂಜನೆಯಾಗಿ ಆರಂಭವಾದ ‘ಸುವರ್ಣ ಗೃಹಮಂತ್ರಿ’ ಎಂಬ ಹೊಸ ಬಗೆಯ ರಿಯಾಲಿಟಿ ಶೋ ಈಗಾಗಲೇ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಆದರೆ ಇದೀಗ ಮತ್ತಷ್ಟು ಮೆರುಗು ನೀಡಲು ಇದೇ ಮೊದಲ ಬಾರಿಗೆ ಸುವರ್ಣ ವಾಹಿನಿಯ ಮೂಲಕ ಖ್ಯಾತ ನಟ ರವಿಶಂಕರ್ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ಇನ್ಮುಂದೆ ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಟ ರವಿಶಂಕರ್ (Ravi Shankar)  ಹೊರಲಿದ್ದಾರೆ. ವರ್ಷಗಳ ಬಳಿಕ ನಟ ರವಿ ಶಂಕರ್ ಅವರನ್ನು ಗೃಹಮಂತ್ರಿ ಪ್ರೋಮೋದಲ್ಲಿ ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ವ್ಯಕ್ತ ಪಡಿಸಿದ್ದು, ‘ಸುವರ್ಣ ಗೃಹಮಂತ್ರಿ’ಯ ಸಂಚಿಕೆಯಲ್ಲಿ ರವಿಶಂಕರ್ ರವರ ನಿರೂಪಣೆಯನ್ನು ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ.

    ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು, ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ‘ಥ್ಯಾಂಕ್ ಯು’ ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಜೊತೆ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ “ಸುವರ್ಣ ಗೃಹಮಂತ್ರಿ” ಕಾರ್ಯಕ್ರಮದ ಶೈಲಿಯಾಗಿದೆ.

     

    ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಇನ್ಮುಂದೆ ನಟ ರವಿಶಂಕರ್ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆಯನ್ನು ಕೊಟ್ಟು ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ. ಇದೇ ಸೋಮವಾರದಿಂದ ಶನಿವಾರ ಮಧ್ಯಾಹ್ನ 1 ಗಂಟೆಗೆ ಈ ಸಂಚಿಕೆಗಳು ಪ್ರಸಾರವಾಗಲಿವೆ.

  • ಹಿಂದಿಯ ‘ಶ್ರೀಮದ್ ರಾಮಾಯಣ’ ಈಗ ಕನ್ನಡಕ್ಕೆ ಡಬ್- ಪ್ರಸಾರಕ್ಕೆ ಡೇಟ್ ಫಿಕ್ಸ್

    ಹಿಂದಿಯ ‘ಶ್ರೀಮದ್ ರಾಮಾಯಣ’ ಈಗ ಕನ್ನಡಕ್ಕೆ ಡಬ್- ಪ್ರಸಾರಕ್ಕೆ ಡೇಟ್ ಫಿಕ್ಸ್

    ಳೆದ ಮೂರೂವರೆ ದಶಕಗಳಿಂದ ತನ್ನದೆ ಸಾಮರ್ಥ್ಯವನ್ನು ಉಳಿಸಿಕೊಂಡು ಬರುತ್ತಿರುವ ಉದಯ ವಾಹಿನಿಯು ಈಗ ‘ಶ್ರೀಮದ್ ರಾಮಾಯಣ’ (Srimad Ramayana) ಧಾರವಾಹಿಯನ್ನು ವೀಕ್ಷಕರಿಗೆ ಉಣಬಡಿಸಲು ಸಿದ್ದತೆ ಮಾಡಿಕೊಂಡಿದೆ. ಅದ್ಬುತ ಕಾವ್ಯವನ್ನು ಹೊಸ ತಲೆಮಾರಿಗೆ ತಲುಪಿಸಲು ಮುಂದಾಗಿದೆ.

    ರಾಮಾಯಣ (Ramayana) ಭಾರತೀಯ ಸಂಸ್ಕೃತಿ ಪರಂಪರೆ ಪ್ರತಿಬಿಂಬಿಸಲಿರುವುದು ವಿಶೇಷ. ರಾಮನ ಜೀವನ ಬಹುತೇಕ ಭಾರತೀಯರಿಗೆ ಮಾದರಿಯಾಗಿದೆ. ಆತನ ರಾಜ್ಯ ಪರಿಪಾಲನೆಯು ಇಂದಿಗೂ ರಾಮರಾಜ್ಯ ಅನ್ನುವ ಪದ ಈಗಲೂ ಬಳಸಲಾಗುತ್ತಿದೆ. ರಾಮ ಮತ್ತು ಸೀತೆಯ ಪವಿತ್ರ ಪ್ರೇಮ, ಕಥೆಯಲ್ಲಿ ಧರ್ಮದ ಪಾಲನೆಯ ಮಾರ್ಗದಲ್ಲಿ ಎದುರಿಸಿದ ಅನೇಕ ಸವಾಲುಗಳು ಕುತೂಹಲಕಾರಿಯಾಗಿದೆ. ಸಂಪೂರ್ಣ ನೂತನ ದೃಶ್ಯ ವೈಭವಗಳು, ವೈವಿಧ್ಯಮಯ ನಟರ ತಂಡವು ಪೌರಾಣಿಕ ಪಾತ್ರಗಳಿಗೆ ಹೊಸ ಜೀವ ತುಂಬಲಿದೆ. ಇದನ್ನೂ ಓದಿ:ವಿಜಯ್ ದೇವರಕೊಂಡಗೆ ಸಾಯಿ ಪಲ್ಲವಿ ನಾಯಕಿ

    ಪ್ರತಿ ಸಂಚಿಕೆಯ 250 ವೀಕ್ಷಕರಿಗೆ ಒಟ್ಟು 2.5 ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ. ಸೀರಿಯಲ್ ವೀಕ್ಷಿಸಿ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಮಿಸ್ಡ್ ಕಾಲ್ ಮೂಲಕ ಸರಿ ಉತ್ತರ ನೀಡಿದವರಿಗೆ ತಲಾ ಒಂದು ಸಾವಿರ ಬಹುಮಾನವನ್ನು ಅಂದೇ ಸಂದಾಯವಾಗುವಂತೆ ಯೋಜನೆ ರೂಪಿಸಲಾಗಿದೆ. ಸೀರಿಯಲ್ ಸೋಮವಾರದಿಂದ ಶನಿವಾರದವರೆಗೆ ಮೇ 20ರಿಂದ ಸಂಜೆ 6 ಗಂಟೆಗೆ ಉದಯ ಟಿವಿದಲ್ಲಿ ಪ್ರಸಾರವಾಗಲಿದೆ.

  • ಕನ್ನಡದ ಕಿರುತೆರೆಯಲ್ಲಿ ಶಾರುಖ್ ನಟನೆಯ ‘ಜವಾನ್’ ಸಿನಿಮಾ

    ಕನ್ನಡದ ಕಿರುತೆರೆಯಲ್ಲಿ ಶಾರುಖ್ ನಟನೆಯ ‘ಜವಾನ್’ ಸಿನಿಮಾ

    ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾ ಕನ್ನಡದ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದು, ಮುಂದಿನ ದಿನಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ (TV) ಪ್ರಸಾರವಾಗಲಿದೆ. ಈಗಾಗಲೇ ವಾಹಿನಿಯು ಪ್ರೋಮೋ ಕೂಡ ರಿಲೀಸ್ ಮಾಡಿದೆ.

    ಜವಾನ್ ಸಿನಿಮಾ ಒಟ್ಟು ಕಲೆಕ್ಷನ್ 1103.27 ಕೋಟಿ ರೂಪಾಯಿ ಎಂದು ಸ್ವತಃ ನಿರ್ಮಾಣ ಸಂಸ್ಥೆಯೇ ಘೋಷಣೆ ಮಾಡಿದೆ. ಶಾರುಖ್ ಖಾನ್ ಅವರ ರೆಡ್ ಚಿಲ್ಲಿ ಎಂಟರ್ ಟೇನ್ಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೊಂದನ್ನು ಹಂಚಿಕೊಳ್ಳುವ ಮೂಲಕ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ. ಇದು ವಿಶ್ವದಾದ್ಯಂತ ಬಂದ ಒಟ್ಟು ಕಲೆಕ್ಷನ್ ಆಗಿದೆ.

    ವಿಶ್ವದಾದ್ಯಂತ ‘ಜವಾನ್’ ಸಿನಿಮಾ ದಾಖಲೆ ರೀತಿಯಲ್ಲಿ ಕಲೆಕ್ಷನ್ (Collection) ಮಾಡಿದರೆ, ಭಾರತದಲ್ಲೇ ಅದು ಗಳಿಸಿದ ಒಟ್ಟು ಮೊತ್ತ ಅಂದಾಜು 600 ಕೋಟಿ ರೂಪಾಯಿಗೂ ಹೆಚ್ಚು ಆಗಿದೆ. ಈ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿದ ಮೊದಲ ಹಿಂದಿ ಸಿನಿಮಾ ಎನ್ನುವ ದಾಖಲೆ ಕೂಡ ಬರೆದಿದೆ. ಇದೆಲ್ಲವೂ ಅಧಿಕೃತ ಘೋಷಣೆ ಎನ್ನುವುದು ವಿಶೇಷ.

    ಸಿನಿಮಾ ಭರ್ಜರಿ ಗೆಲುವು ಕಾಣುತ್ತಿದ್ದಂತೆಯೇ ಸಿನಿಮಾ ನಿರ್ದೇಶಕ ಅಟ್ಲಿ (Atli) ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಜವಾನ್’ ಯಶಸ್ಸಿನ ಬೆನ್ನಲ್ಲೇ ಅವರು ‘ಜವಾನ್ 2’ (Jawan 2) ಸಿನಿಮಾ ಮಾಡಲು ಮುಂದಾಗಿದ್ದು, ಇದರ ಜೊತೆಗೆ ಶಾರುಖ್ ಖಾನ್ (Shahrukh Khan) ಅಭಿಮಾನಿಗಳಿಗೆ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ.

     

    ಜವಾನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಿದೆ. ಈ ಖುಷಿಯಲ್ಲೇ ಅಟ್ಲಿ ಜವಾನ್ 2 ಸಿನಿಮಾ ಘೋಷಣೆ ಮಾಡಿದ್ದಾರೆ. ಜೊತೆಗೆ ಶಾರುಖ್ ಖಾನ್ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮಾಡುವ ಆಲೋಚನೆಯನ್ನೂ ಅವರು ಹೇಳಿಕೊಂಡಿದ್ದಾರೆ.

  • ಕಿರುತೆರೆಯ ಖ್ಯಾತನಟ ನಾಪತ್ತೆ: ಉದ್ದೇಶಿತ ಕೈವಾಡದ ಶಂಕೆ

    ಕಿರುತೆರೆಯ ಖ್ಯಾತನಟ ನಾಪತ್ತೆ: ಉದ್ದೇಶಿತ ಕೈವಾಡದ ಶಂಕೆ

    ಭಿಮಾನಿಗಳನ್ನು ಸದಾ ರಂಜಿಸುತ್ತಾ, ಮನೆಮಾತಾಗಿದ್ದ ಕಿರುತೆರೆಯ (Television) ಕಲಾವಿದ ನಾಪತ್ತೆಯಾಗಿದ್ದಾನೆ (Missing). ತನ್ನ ಮಗನನ್ನು ಹುಡುಕಿಕೊಡುವಂತೆ ಅವರ ಕುಟುಂಬ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದೆ. ತನ್ನ ಮಗ ಕಾಣೆಯಾಗಿರೋದಕ್ಕೆ ಉದ್ದೇಶಿತ ಕೈವಾಡದ ಶಂಕೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ.

    ಚಿತ್ರೀಕರಣಕ್ಕೆ ತೆರಳುತ್ತೇನೆಂದು ಮನೆಯಲ್ಲಿ ಹೇಳಿ ಮನೆಯಿಂದ ಹೊರಟ ತಾರಕ್ ಮೆಹ್ತಾ ಚಶ್ಮಾ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ಸಿಂಗ್ (Gurucharan) ನಾಪತ್ತೆಯಾಗಿದ್ದಾರೆ. ದೆಹಲಿಯಿಂದ ಮುಂಬೈಗೆ ತೆರಳಿದ್ದ ಅವರು ಏರ್ಪೋರ್ಟ್ನಿಂದ ಕಾಣೆಯಾಗಿದ್ದಾರೆ ಎಂದು ಅವರ ತಂದೆ ಹರ್ಜಿತ್ ಸಿಂಗ್ ದೂರು ದಾಖಲಿಸಿದ್ದಾರೆ.

     

    ಐವತ್ತರ ವಯಸ್ಸಿನ ನಟ ಮುಂಬೈ ತಲುಪಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಕುಟುಂಬಸ್ಥರು ಅವರ ಮೊಬೈಲ್ ಗೆ ಕಾಲ್ ಮಾಡಿದರೂ, ಸ್ವಿಚ್ ಆಫ್ ಬಂದಿರೋದು ಆತಂಕಕ್ಕೆ ಕಾರಣವಾಗಿದೆ. ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನಾಪತ್ತೆಯಾದ ನಟನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

  • ಕಿರುತೆರೆಗೆ ಬಂತು ಸೂಪರ್ ಹಿಟ್ ಚಿತ್ರ ‘ಸಲಾರ್’

    ಕಿರುತೆರೆಗೆ ಬಂತು ಸೂಪರ್ ಹಿಟ್ ಚಿತ್ರ ‘ಸಲಾರ್’

    ನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು (TV) ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು ನೀಡುತ್ತಾ ಬಂದಿದೆ. ವಿಶ್ವ-ವಿಖ್ಯಾತಿ ಪಡೆದ ಕಾಂತಾರ, ಹೊಯ್ಸಳ, ಜೇಮ್ಸ್ ನಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಪ್ರಸಾರ ಮಾಡಿ ಪ್ರೇಕ್ಷಕರ ಮನಗೆದ್ದ ಸುವರ್ಣ ವಾಹಿನಿಯಲ್ಲಿ ಇದೀಗ 2023ರ ಬ್ಲಾಕ್ ಬಸ್ಟರ್ ಹಿಟ್ ‘ಸಲಾರ್’ (Salaar) ಸಿನಿಮಾ ಪ್ರಸಾರವಾಗಲಿದೆ. ಜೊತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿಯು ನೀಡುತ್ತಿದೆ.

    ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾವು ಬಾಕ್ಸ್ ಆಫೀಸ್​ನಲ್ಲಿ 700 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಇದೀಗ ಈ ಸಿನಿಮಾವು ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಸುವರ್ಣ ವರ್ಲ್ಡ್ ಪ್ರೀಮಿಯರ್ ಆಗುತ್ತಿದ್ದು. ಈ ಸಿನಿಮಾದಲ್ಲಿ ವೀಕ್ಷಕರಿಗೆ ಪ್ರಭಾಸ್ ಅವರ ಲುಕ್ ಜೊತೆಗೆ ಸಿನಿಮಾದಲ್ಲಿ ಬಳಸಲಾಗಿದ್ದ ಬೈಕ್ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿ ಮಾಡಿತ್ತು. ಇದೀಗ ಆ ಬೈಕ್ ಗೆಲ್ಲೋ ಅವಕಾಶವನ್ನು ನೋಡುಗರಿಗೆ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯು ನೀಡುತ್ತಿದೆ. ‘ಸಲಾರ್’ ಸಿನಿಮಾ ನೋಡ್ತಾ ನೋಡ್ತಾ, ಅಲ್ಲಿ ಕೇಳೊ ಪ್ರಶ್ನೆಗಳಿಗೆ ಆದಷ್ಟು ಬೇಗ ಸರಿಯಾದ ಉತ್ತರ ಕೊಟ್ರೆ, ಅದೃಷ್ಟಶಾಲಿ ವಿಜೇತರಿಗೆ ‘ಸಲಾರ್’ ನಲ್ಲಿ ಪ್ರಭಾಸ್ ಬಳಸಿರೋ ಬೈಕ್ ಬಹುಮಾನವಾಗಿ ಸಿಗಲಿದೆ.

    ಕನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾವನ್ನು ನಿರ್ದೇಶಿಸಿದ್ದು, ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ನಿರ್ಮಿಸಿದೆ. ಇನ್ನು ಈ ಸಿನಿಮಾದ ಹಾಡುಗಳು ಅದ್ಭುತ ರೀತಿಯಲ್ಲಿ ಮೂಡಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿತ್ತು.

     

    ಬರ್ತಿದೆ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ “ಸಲಾರ್” ಇದೇ ಭಾನುವಾರ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ ಮಿಸ್ಸ್ ಮಾಡದೆ ಕಾಂಟೆಸ್ಟ್ ನಲ್ಲಿ ಭಾಗವಹಿಸಿ.

  • ‘ಕಾಟೇರ’ 100 ದಿನ: ನಾಳೆ ಟಿವಿಯಲ್ಲಿ ಪ್ರಸಾರ

    ‘ಕಾಟೇರ’ 100 ದಿನ: ನಾಳೆ ಟಿವಿಯಲ್ಲಿ ಪ್ರಸಾರ

    ರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಇಂದು ನೂರು ದಿನಗಳನ್ನು ಪೂರೈಸಿದೆ. ನೂರು ದಿನದ ಪೋಸ್ಟರ್ ಅನ್ನು ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೂರು ದಿನಗಳನ್ನು (Hundred Days) ಪೂರೈಸುವ ಬೆನ್ನಲ್ಲೇ ನಾಳೆ ಕಾಟೇರ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಯುಗಾದಿಗೂ ಎರಡು ದಿನ ಮುನ್ನ ಏಪ್ರಿಲ್ 7ಕ್ಕೆ ಸಂಜೆ 7ಕ್ಕೆ ಚಿತ್ರ ಪ್ರಸಾರವಾಗಲಿದೆ.

    ಕಾಟೇರ (Kaatera) ಸಿನಿಮಾ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ, ಒಟಿಟಿಯಲ್ಲೂ (OTT) ಸ್ಟ್ರೀಮಿಂಗ್ ಆಗುತ್ತಿತ್ತು. ಒಟಿಟಿಯಲ್ಲಿ ಕಾಟೇರ ಪ್ರದರ್ಶನ ಕಾಣುತ್ತಿರುವುದಕ್ಕೆ ಹುಬ್ಬಳ್ಳಿಯ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಬರಮಾಡಿಕೊಂಡಿದ್ದರು. ಆಳೆತ್ತರದ ಕಟೌಟ್ ಹಾಕಿ ಕಾಟೇರನನ್ನು ಸ್ವಾಗತಿಸಿದ್ದರು.

    ದರ್ಶನ್ ಸಿನಿಕರಿಯರ್ ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದ ಕಾಟೇರ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರದ ನಡುವೆಯೂ  ನಮ್ಮ ನೆಲದ ಕಥೆಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾವನ್ನು ಒಟಿಟಿಗೆ Zee5 ವಹಿವಾಟು ಮುಗಿಸಿತ್ತು.

    Zee5 ತಾನು ಖರೀದಿಸಿದ ಹೊಸ ಸಿನಿಮಾಗಳನ್ನು ಪ್ರತಿ ಶುಕ್ರವಾರ ಬಿಡುಗಡೆ ಮಾಡುತ್ತೆ. ಅಲ್ಲದೆ ನಿರ್ಮಾಪಕರು ಹಾಗೂ ಓಟಿಟಿ ಸಂಸ್ಥೆಯೊಂದಿಗೆ ಸಿನಿಮಾ ಬಿಡುಗಡೆಯಾದ 30 ರಿಂದ 40 ದಿನಗಳ ಅಂತರದಲ್ಲಿ ಓಟಿಟಿಯಲ್ಲಿ ಪ್ರೀಮಿಯರ್ ಮಾಡುವ ಬಗ್ಗೆ ಸಹಜವಾಗಿ ಒಪ್ಪಂದ ಆಗುತ್ತೆ. ‘ಕಾಟೇರ’ ಬಿಡುಗಡೆಯಾದ 40 ದಿನಗಳ ಬಳಿಕ ಓಟಿಟಿಯಲ್ಲಿ ರಿಲೀಸ್ ಮಾಡುವ ಮಾತುಕತೆ ನಡೆದಿದ್ದು, ಅದರಂತೆಯೇ ಫೆಬ್ರವರಿ 9ರಂದು  ಸಿನಿಮಾ ಪ್ರೀಮಿಯರ್ ಆಗಿದೆ.

     

    ಕಾಟೇರ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಮಾಲಾಶ್ರೀ ಪುತ್ರಿ ಆರಾಧನಾ ರಾಮ್ಗೂ ಕಾಟೇರ ದೊಡ್ಡ ಹಿಟ್ ನೀಡಿದೆ. ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಡೈಲಾಗ್ ಬರೆದ ಮಾಸ್ತಿಗೂ ಕಾಟೇರ ಸಿನಿಮಾ ಮರೆಯಲಾಗದ ಯಶಸ್ಸು ನೀಡಿದೆ.

  • ಕಿರುತೆರೆಗೆ ಎಂಟ್ರಿ ಕೊಟ್ಟ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್

    ಕಿರುತೆರೆಗೆ ಎಂಟ್ರಿ ಕೊಟ್ಟ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್

    ರ್ಶನ್ ಸೇರಿದಂತೆ ಹಲವು ಸ್ಟಾರ್ ನಟರಿಗೆ ಚಿತ್ರ ಮಾಡಿರುವ ತರುಣ್ ಸುಧೀರ್, ಇದೀಗ ಕಿರುತೆರೆಗೆ ಹಾರಿದ್ದಾರೆ. ಕಾಟೇರ ಸಕ್ಸಸ್ ನಂತರ ತರುಣ್ (Tharun Sudhir) ಮತ್ತ್ಯಾವ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಇತ್ತು. ಆದರೆ ದಿಢೀರ್ ಅಂತ ಕಿರುತೆರೆಗೆ ಹಾರಿದ್ದಾರೆ.

    ಹಾಗಂತ ಅವರು ಯಾವುದೇ ಧಾರಾವಾಹಿ ನಿರ್ದೇಶನವಾಗಲಿ, ನಟಿಸುವುದಕ್ಕಾಗಿ ಹೋಗಿಲ್ಲ. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿರುವ ಹೊಸ ರಿಯಾಲಿಟಿ ಶೋ ಮಹಾನಟಿಗೆ (Mahanati) ತೀರ್ಪುಗಾರರಾಗಿ ಭಾಗಿಯಾಗಲಿದ್ದಾರೆ. ಈಗಾಗಲೇ ರಿಯಾಲಿಟಿ ಶೋ ಆಡಿಷನ್ ಕೂಡ ಮುಗಿದಿದೆ. ಇನ್ನಷ್ಟೇ ಶುರುವಾಗಬೇಕಿದೆ.

     

    ಮಹಾನಟಿ ರಿಯಾಲಿಟಿ ಶೋಗೂ ಮತ್ತು ಸಿನಿಮಾ ರಂಗಕ್ಕೂ ನೇರ ಸಂಬಂಧವಿದೆ. ಆ ಕಾರಣಕ್ಕಾಗಿಯೇ ಕಾಟೇರ್ ಸೂಪರ್ ಹಿಟ್ ಸಿನಿಮಾದ ನಿರ್ದೇಶಕನನ್ನು ಜೀ ಕನ್ನಡ ವಾಹಿನಿಯು ಆಯ್ಕೆ ಮಾಡಿದೆ. ಈ ಹಿಂದೆಯೂ ಅನೇಕ ಸಿನಿಮಾ ನಟರನ್ನು ವಾಹಿನಿಯು ನಾನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ.

  • ನಾಳೆ ಕಿರುತೆರೆಯಲ್ಲಿ ಪ್ರಥಮ ಬಾರಿಗೆ ಸಪ್ತ ಸಾಗರದಾಚೆ ಎಲ್ಲೋ

    ನಾಳೆ ಕಿರುತೆರೆಯಲ್ಲಿ ಪ್ರಥಮ ಬಾರಿಗೆ ಸಪ್ತ ಸಾಗರದಾಚೆ ಎಲ್ಲೋ

    ರಡು ಭಾಗವಾಗಿ ಮೂಡಿ ಬಂದಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನಾಳೆ ಜೀ ಕನ್ನಡ ವಾಹಿನಿಯಲ್ಲಿ (Television) ಪ್ರಸಾರವಾಗಲಿದೆ. ಸಂಜೆ 7.30ಕ್ಕೆ ಪಾರ್ಟ್ ಎ ಅನ್ನು ಪ್ರಸಾರ ಮಾಡುವುದಾಗಿ ವಾಹಿನಿಯು ಪ್ರೊಮೋ ರಿಲೀಸ್ ಮಾಡಿದೆ. ಕಿರುತೆರೆಯಲ್ಲಿ ನೋಡಲು ಕಾಯುತ್ತಿದ್ದವರಿಗೆ ಸಹಜವಾಗಿಯೇ ಖುಷಿ ಆಗಿದೆ.

    ರಕ್ಷಿತ್ ಶೆಟ್ಟಿ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ ಬಿ ಒಟಿಟಿಯಲ್ಲಿ (OTT) ಲಭ್ಯವಿದೆ. ಜನವರಿ 25ರ ಮಧ್ಯರಾತ್ರಿಯಿಂದಲೇ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಚಿತ್ರವನ್ನು ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಈ ಸಿನಿಮಾದ ಎ ಮತ್ತು ಬಿ ಪಾರ್ಟ್ ಎರಡನ್ನೂ ಪ್ರೇಕ್ಷಕರು ಒಪ್ಪಿಕೊಂಡಿದ್ದರು. ಬಾಕ್ಸ್ ಆಫೀಸಿನಲ್ಲೂ ಗೆದ್ದಿದ್ದವು. ಹಾಗಾಗಿ ಕಿರುತೆರೆಯಲ್ಲಿ ಚಿತ್ರವನ್ನು ಪ್ರೇಕ್ಷಕರು ಹೇಗೆ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    ಕೇವಲ ಪ್ರೇಕ್ಷಕರು ಮಾತ್ರವಲ್ಲ, ಸೆಲೆಬ್ರಿಟಿಗಳು ಈ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಹೆಸರಾಂತ ನಟ ಪ್ರಕಾಶ್ ರಾಜ್ (Prakash Raj), ತಾವು ಮೆಚ್ಚಿದ ಸಿನಿಮಾಗಳ ಬಗ್ಗೆ ಆಗಾಗ್ಗೆ ಬರೆಯುತ್ತಲೇ ಇರುತ್ತಾರೆ. ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಿನಿಮಾ ಬಗ್ಗೆ, ‘ಸಪ್ತ ಸಾಗರದಾಚೆ ಎಲ್ಲೋ.. ಆಹಾ.. ಒಂದು ಸುಂದರ ದೃಶ್ಯಕಾವ್ಯ ಅನುಭವ. ಡೋಂಟ್ ಮಿಸ್’ ಎಂದು ಬರೆದುಕೊಂಡಿದ್ದರು.

    ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ಚೈತ್ರಾ ಆಚಾರ್ಯ, ರುಕ್ಮಿಣಿ, ಚರಣ್ ರಾಜ್ ಹೀಗೆ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರಿಗೆ ತಮ್ಮ ಬರಹವನ್ನು ಟ್ಯಾಗ್ ಮಾಡಿದ್ದರು. ಇಡೀ ತಂಡಕ್ಕೆ ಇಂಥದ್ದೊಂದು ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನೂ ಪ್ರಕಾಶ್ ರಾಜ್ ಅರ್ಪಿಸಿದ್ದರು.

    ಕೇವಲ ಕನ್ನಡದಲ್ಲಿ ಮಾತ್ರವಲ್ಲ,  ‘ಸಪ್ತಸಾಗರದಾಚೆ ಎಲ್ಲೋ’ (Sapta Sagaradacche Yello) ತೆಲುಗು ನೆಲದಲ್ಲೂ ಸದ್ದು ಮಾಡಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ ಈ ಸಿನಿಮಾ, ಈಗ ತೆಲುಗಿನಲ್ಲೂ (Tollywood) ಅತ್ಯುತ್ತಮ ಪ್ರತಿಕ್ರಿಯೆಯನ್ನು ಕಂಡಿತ್ತು. ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದರು. ಮನು- ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದರು.

     

    ‘ಕವಲುದಾರಿ’ ಖ್ಯಾತಿಯ ಹೇಮಂತ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಅವಿನಾಶ್ ಸೇರಿದಂತೆ ಹಲವರು ನಟಿಸಿದ್ದಾರೆ. ರಕ್ಷಿತ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

  • ಕೆಲವೇ ಗಂಟೆಗಳ ಅಂತರದಲ್ಲಿ ಪ್ರಾಣಬಿಟ್ಟ ಹಿಂದಿ ಕಿರುತೆರೆಯ ಸ್ಟಾರ್ ಸಿಸ್ಟರ್ಸ್

    ಕೆಲವೇ ಗಂಟೆಗಳ ಅಂತರದಲ್ಲಿ ಪ್ರಾಣಬಿಟ್ಟ ಹಿಂದಿ ಕಿರುತೆರೆಯ ಸ್ಟಾರ್ ಸಿಸ್ಟರ್ಸ್

    ಹಿಂದಿ ಕಿರುತೆರೆಯ ಸ್ಟಾರ್ ಸಿಸ್ಟರ್ಸ್ ಎಂದು ಖ್ಯಾತರಾಗಿದ್ದ ಡಾಲಿ ಸೋಹಿ (Dolly Sohi) ಮತ್ತು ಅಮನ್ ದೀಪ್ ಸೋಹಿ (Aman Deep Sohi) ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟಿದ್ದಾರೆ (Death). ಈ ಸುದ್ದಿ ಹಿಂದಿ ಕಿರುತೆರೆ ಲೋಕಕ್ಕೆ ಶಾಕ್ ನೀಡಿದೆ. ಅಮನ್ ದೀಪ್ ಅವರು ಜಾಂಡಿಸ್ ನಿಂದ ಬಳಲುತ್ತಿದ್ದರೆ, ಡಾಲಿ ಸೋಹಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.

    ಹಲವು ದಿನಗಳಿಂದ ಜಾಂಡಿಸ್ ಗಾಗಿ ಅಮನ್ ದೀಪ್ ಚಿಕಿತ್ಸೆ ಪಡೆಯುತ್ತಿದ್ದರು, ಕೊನೆಗೂ ಅವರಿಗೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಈ ಸುದ್ದಿ ಅವರ ಕುಟುಂಬಕ್ಕೆ ಆಘಾತ ಮೂಡಿಸಿತ್ತು. ನಿನ್ನೆ ಅಮನ್ ದೀಪ್ ನಿಧನರಾದ ಸುದ್ದಿಯನ್ನು ಅವರ ಸಹೋದರ ಬಹಿರಂಗ ಪಡಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲೇ ಡಾಲಿ ಕೂಡ ನಿಧನರಾಗಿದ್ದಾರೆ.

    2023ರಲ್ಲಿ ಡಾಲಿ ಗರ್ಭಕಂಠ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಅಂದಿನಿಂದ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಷ್ಟೇ ಅವರ ಆರೋಗ್ಯ ಹದಗೆಟ್ಟಿರಲಿಲ್ಲ ಎಂದು ಅವರ ಸಹೋದರ ತಿಳಿಸಿದ್ದಾರೆ. ಇಂದು ಇಬ್ಬರೂ ಸಹೋದರಿಯರ ಅಂತ್ಯಕ್ರಿಯೆ ನಡೆಯಲಿದೆ.

     

    ಕಲಾಶ್, ಸಿಂಧೂರ್ ಕಿ ಕಿಮತ್ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಈ ಸಹೋದರಿಯರು ನಟಿಸಿದ್ದಾರೆ. ಕಿರುತೆರೆಯಲ್ಲೇ ಹೆಚ್ಚೆಚ್ಚು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕಿರುತೆರೆಯ ಅನೇಕರು ಈ ಜೋಡಿ ಸಾವಿಗೆ ಕಂಬನಿ ಮಿಡಿದಿದ್ದಾರೆ.

  • KBC: ವಿದಾಯದ ಭಾಷಣ ಮಾಡಿ, ಭಾವುಕರಾದ ಅಮಿತಾಭ್

    KBC: ವಿದಾಯದ ಭಾಷಣ ಮಾಡಿ, ಭಾವುಕರಾದ ಅಮಿತಾಭ್

    ಕೌನ್ ಬನೇಗಾ ಕರೋರ್‍ಪತಿ ಸೀಸನ್ ಮುಗೀತಾ ಅಥವಾ ಅಮಿತಾಭ್ ಬಚ್ಚನ್ (Amitabh Bachchan) ಅವರೇ ಅಲ್ಲಿಂದ ನಿರ್ಗಮಿಸಿದ್ದಾರಾ ಗೊತ್ತಿಲ್ಲ. ಒಟ್ಟಿನಲ್ಲಿ ಅಮಿತಾಭ್ ಬಚ್ಚನ್ ಮಾಡಿದ ವಿದಾಯದ ಭಾಷಣ ಮಾತ್ರ ಸಾಕಷ್ಟು ಪ್ರಶ್ನೆಯನ್ನು ಹುಟ್ಟು ಹಾಕಿದೆ. ಬಿಬಿಎಸ್ ನ ಹಲವಾರು ಸೀಸನ್ ಗಳನ್ನು ಅಮಿತಾಭ್ ಮಾಡಿದ್ದಾರೆ. ಯಾವತ್ತೂ ಅವರು ಈ ರೀತಿಯ ವಿದಾಯ ಭಾಷಣ ಮಾಡಿಲ್ಲ. ಇದೇ ಮೊದಲ ಬಾರಿಗೆ ಮಾಡಿದ್ದರಿಂದ ಅಮಿತಾಭ್ ಇನ್ಮುಂದೆ ಕೌನ್ ಬನೇಗಾ ಕರೋರ್ ಪತಿ ಮಾಡುವುದಿಲ್ಲ ಎಂದೇ ಹೇಳಲಾಗುತ್ತಿದೆ.

    ಕೆಲವರು ಅವರು ಇನ್ಮುಂದೆ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದರೆ, ಇನ್ನೂ ಹಲವರು ಈ ಸೀಸನ್ ಮುಗಿದಿದೆ. ಕೊನೆಯ ಸಂಚಿಕೆಯ ಶೂಟಿಂಗ್ ಮುಗಿಸಿ, ವಿದಾಯದ ಮಾತುಗಳನ್ನು ಅಮಿತಾಭ್ ಆಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಈ ಕುರಿತಂತೆ ಯಾವುದೂ ಈವರೆಗೂ ಸ್ಪಷ್ಟತೆ ಕೊಟ್ಟಿಲ್ಲ.

     

    ನಿನ್ನೆ ನಡೆದ ಫೈನಲ್ ಎಪಿಸೋಡ್ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ವಿದ್ಯಾ ಬಾಲನ್, ಸಾರಾ ಅಲಿಖಾನ್, ಶರ್ಮಿಳಾ ಟ್ಯಾಗೋರ್ ಸೇರಿದಂತೆ ಅನೇಕರು ಸೀಸನ್ ನ ಕೊನೆಯ ಸಂಚಿಕೆಯಲ್ಲಿ ಭಾಗಿಯಾಗಿ ಕಾರ್ಯಕ್ರಮದ ಮೆರಗು ಹೆಚ್ಚಿಸಿದ್ದಾರೆ. ಆದರೆ, ಅಮಿತಾಭ್ ಆಡಿದ ಮಾತು ಮಾತ್ರ, ಈವರೆಗೂ ಸ್ಪಷ್ಟತೆ ನೀಡಿಲ್ಲ.