Tag: ಕಿರೀಟ

  • ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!

    ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!

    ಗಾಂಧೀನಗರ: 11 ಕೋಟಿ ರೂ. ಮೌಲ್ಯದ ಕಿರೀಟವನ್ನು  ರಾಮಲಲ್ಲಾ ಮೂರ್ತಿಗೆ ಗುಜರಾತ್‍ನ ಸೂರತ್ ಮೂಲದ ವಜ್ರ ವ್ಯಾಪಾರಿ (Gujarat diamond trader) ದೇಣಿಗೆ ನೀಡಿದ್ದಾರೆ.

    ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿ ಮಾಲೀಕರಾದ ಮುಕೇಶ್ ಪಟೇಲ್ (Mukesh Patel) ದೇಣಿಗೆ ನೀಡಿರುವ ವ್ಯಕ್ತಿ. ಸೂರತ್‍ನಲ್ಲಿ ವಜ್ರ ವ್ಯಾಪಾರಿಯಾಗಿರುವ ಮುಕೇಶ್ ಅವರು ಪ್ರಭು ಶ್ರೀರಾಮನಿಗಾಗಿ 6 ಕೆ.ಜಿ ತೂಕದ ಚಿನ್ನ ಮತ್ತು ವಜ್ರಗಳಿಂದ ತಯಾರಿಸಿರುವ ಕಿರೀಟವನ್ನು ಕೊಡುಗೆಯಾಗಿ ನೀಡಿದ್ದಾರೆ.

    ನಿನ್ನೆಯಷ್ಟೇ ನಡೆದ ಅಯೋಧ್ಯೆಯ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ (Ram Lalla Pran Prathistha ceremony) ಇಡೀ ದೇಶವೇ ಸಾಕ್ಷಿಯಾಗಿತ್ತು. ಪ್ರಭು ಶ್ರೀರಾಮ ಚಿನ್ನದ ಅಭರಣಗಳಿಂದ ಕಂಗೊಳಿಸುತ್ತಿದ್ದನು. ಇದೇ ಹೊತ್ತಲ್ಲಿ ಸೂರತ್‍ನ (Surat) ವಜ್ರ ವ್ಯಾಪಾರಿ ನೀಡಿರುವ 11 ಕೋಟಿ ರೂಪಾಯಿ ಮೌಲ್ಯ ಬೆಲೆ ಬಾಳುವ ಚಿನ್ನ ಮತ್ತು ವಜ್ರಗಳಿಂದ ತಯಾರಿಸಿರುವ ಕಿರೀಟ ದಾನ ಮಾಡಿದ್ದಾರೆ . ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!

    ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಮುಕೇಶ್ ಪಟೇಲ್ ಅಯೋಧ್ಯೆಗೆ (Ayodhya Ram Mandir) ಆಗಮಿಸಿದ್ದರು. ಬಳಿಕ ಖುದ್ದಾಗಿ ಮಂದಿರದ ಪ್ರಧಾನ ಅರ್ಚಕರು ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಗಳಿಗೆ ಸೂಕ್ಷ್ಮವಾಗಿ ರಚಿಸಲಾದ ಕಿರೀಟವನ್ನು ಹಸ್ತಾಂತರ ಮಾಡಿದ್ದಾರೆ.

    ಹಲವಾರು ಸಂಶೋಧನೆಯ ಬಳಿಕ ಮುಕೇಶ್ ಅವರು ಚಿನ್ನ ಮತ್ತು ವಜ್ರದ ಕಿರೀಟವನ್ನು ನೀಡಲು ನಿರ್ಧರಿಸಿದ್ದರು. ನಂತರ ಕಂಪನಿಯ ಇಬ್ಬರು ಉದ್ಯೋಗಿಗಳನ್ನು ರಾಮನ ಪ್ರತಿಮೆಯನ್ನು ಅಳೆಯಲು ಅಯೋಧ್ಯೆಗೆ ಕಳುಹಿಸಿದ್ದರು. ಆ ಅಧಾರದ ಮೇರೆಗೆ ಕಿರೀಟವನ್ನು ತಯಾರಿಸಲಾಗಿದೆ. ಉದ್ಘಾಟನೆಯಾದ ರಾಮಮಂದಿರದ ಶ್ರೀರಾಮನಿಗೆ ಇನ್ನಿತರ ಕೆಲವು ಆಭರಣಗಳನ್ನೂ ಮುಕೇಶ್ ಪಟೇಲ್ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಖಜಾಂಚಿ ದಿನೇಶ್ ಭಾಯಿ ನವಿಯಾ ತಿಳಿಸಿದ್ದಾರೆ.

    ಕಿರೀಟದ ವಿಶೇಷತೆ?: ಕಿರೀಟ ಒಟ್ಟು ಆರು ಕೆ.ಜಿ ಇದೆ. ವಿವಿಧ ಗಾತ್ರದ ವಜ್ರಗಳು, ಮಾಣಿಕ್ಯಗಳು, ಮುತ್ತುಗಳು ಮತ್ತು ನೀಲಮಣಿಗಳ ಜೊತೆಗೆ ನಾಲ್ಕು ಕೆಜಿಗಳಷ್ಟು ಚಿನ್ನವನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಕಿರೀಟದ ಮೌಲ್ಯ ಬರೋಬ್ಬರಿ 11 ಕೋಟಿ ರೂಪಾಯಿಗಳಾಗಿವೆ.

  • ನಕಲು ಮಾಡ್ಬಾರ್ದು ಅಂತ ಚಿತ್ರ ವಿಚಿತ್ರ ಕಿರೀಟ ಹಾಕಿಸಿ ಪರೀಕ್ಷೆ ಬರೆಸಿದ್ರು

    ನಕಲು ಮಾಡ್ಬಾರ್ದು ಅಂತ ಚಿತ್ರ ವಿಚಿತ್ರ ಕಿರೀಟ ಹಾಕಿಸಿ ಪರೀಕ್ಷೆ ಬರೆಸಿದ್ರು

    ಮನಿಲ: ಪರೀಕ್ಷೆಯ (Exam) ಸಮಯದಲ್ಲಿ ನಕಲು (Copy) ಮಾಡುವುದು ವಿದ್ಯಾರ್ಥಿಗಳ (Students) ಸಾಮಾನ್ಯ ಅಭ್ಯಾಸವಾಗಿದೆ. ಇಲ್ಲೊಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಬಾರದು ಎಂದು ಅವರಿಗೆ ಚಿತ್ರ ವಿಚಿತ್ರ ಕಿರೀಟ (Headgears) ಹಾಕಿಸಿದ್ದಾರೆ. ಈ ರೀತಿ ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯಲ್ಲಿ ಪರೀಕ್ಷೆ ಬರೆಸಿರುವ ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

    ಫಿಲಿಪೈನ್ಸ್‌ನ ಬಿಕಾಲ್ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ವಿದ್ಯಾರ್ಥಿಗಳಿಗೆ ಈ ರೀತಿಯಾಗಿ ಕಿರೀಟಗಳನ್ನು ಧರಿಸಿ ಪರೀಕ್ಷೆ ಬರೆಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಬಾರದು ಎಂದಾದರೆ ಇದೊಂದು ಒಳ್ಳೆಯ ಹಾಗೂ ವಿಭಿನ್ನವಾದ ಉಪಾಯವಾಗಿದೆ ಎಂದು ಅಲ್ಲಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪ್ರಾಧ್ಯಾಪಕ ಮೇರಿ ಜಾಯ್ ಮಂಡನೆ ಒರ್ಟಿಜ್ ಹೇಳಿದ್ದಾರೆ.

    ವರದಿಗಳ ಪ್ರಕಾರ ಒರ್ಟಿಜ್ ತನ್ನ ವಿದ್ಯಾರ್ಥಿಗಳಳಿಗೆ ಪರೀಕ್ಷೆಗಾಗಿ ಕಿರೀಟಗಳನ್ನು ತಾವೇ ತಯಾರಿಸುವಂತೆ ಕೇಳಿದ್ದಾರೆ. ಬಳಿಕ ಪರೀಕ್ಷೆಗೆ ತಯಾರಾಗಿ ಬಂದ ವಿದ್ಯಾರ್ಥಿಗಳು ತಾವೇ ತಯಾರಿಸಿದ ಭಿನ್ನ ವಿಭಿನ್ನ ರೀತಿಯ ಕಿರೀಟಗಳೊಂದಿಗೆ ಹಾಜರಾಗಿದ್ದಾರೆ. ಪರೀಕ್ಷೆಯ ಒತ್ತಡದ ನಡುವೆಯೂ ವಿದ್ಯಾರ್ಥಿಗಳು ತಮ್ಮ ಮಾತಿಗೆ ಬೆಲೆ ನೀಡಿ, ಕಿರೀಟಗಳನ್ನು ತಾವೇ ತಯಾರಿಸಿ ಬಂದಿದ್ದಕ್ಕೆ ಪ್ರಾಧ್ಯಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ನನ್ನ ತಂದೆ ಬಗ್ಗೆ ಮಾತ್ರ ಯೋಚಿಸುತ್ತೇನೆ – ಗ್ರೌಂಡ್‌ನಲ್ಲೇ ಕಣ್ಣೀರಿಟ್ಟ ಪಾಂಡ್ಯ

    ಕೆಲ ವರ್ಷಗಳ ಹಿಂದೆ ಥೈಲ್ಯಾಂಡ್‌ನಲ್ಲಿಯೂ ವಿದ್ಯಾರ್ಥಿಗಳು ನಕಲು ಮಾಡಬಾರದು ಎಂದು ಇದೇ ರೀತಿಯ ಉಪಾಯ ಮಾಡಲಾಗಿತ್ತು. ಬ್ಯಾಂಕಾಕ್‌ನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಕಿರೀಟಗಳನ್ನು ಧರಿಸಿ ಪರೀಕ್ಷೆ ಬರೆದಿದ್ದ ಫೋಟೋಗಳು ವೈರಲ್ ಆಗಿದ್ದವು. ಇದನ್ನೂ ಓದಿ: ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ: ಮೋದಿ

    Live Tv
    [brid partner=56869869 player=32851 video=960834 autoplay=true]

  • ಮಿಸ್ ಧಾರವಾಡ ವರ್ಷಿಣಿ ಈಗ ಮಿಸ್ ಊರ್ವಶಿ

    ಮಿಸ್ ಧಾರವಾಡ ವರ್ಷಿಣಿ ಈಗ ಮಿಸ್ ಊರ್ವಶಿ

    ಧಾರವಾಡ: ವಿದ್ಯಾಕಾಶಿಯ ಸುಂದರಿ ಮಿಸ್ ಧಾರವಾಡ (Dharwad) ವರ್ಷಿಣಿ ರಾಮಡಗಿ(Varshini Ramadagi) ಈಗ ಮಿಸ್ ಊರ್ವಶಿ(Miss Urvashi) ಎನ್ನುವ ಅತ್ಯಾಕರ್ಷಕ ಕಿರೀಟ ಧರಿಸುವುದರೊಂದಿಗೆ ದೇಶದ ನವ ಸುಂದರಿಯ ಪಟ್ಟ ಅಲಂಕರಿದ್ದಾರೆ.

    ಈಗಷ್ಟೇ 20 ಈ ನವತರುಣಿಯಾಗಿರುವ ವರ್ಷಿಣಿ(Varshini), ಧಾರವಾಡದ ಕೆಸಿಡಿ ಕಾಲೇಜ್‍ನಲ್ಲಿ ಟ್ರಾವೆಲ್ ಆ್ಯಂಡ್ ಟೂರಿಸಂ ಕೋರ್ಸ್‍ನಲ್ಲಿ(Travel and Tourism Course) 2ನೇ ವರ್ಷದಲ್ಲಿ ಓದುತ್ತಿದ್ದಾರೆ. ಇತ್ತೀಚೆಗೆ ಜೈಪುರದಲ್ಲಿ(Jaipura) ಮಿಸ್ ಇಂಟರ್ ಕ್ವಾಂಟಿನೇಂಟಲ್ ಹಾಗೂ ಎಲೀಟ್ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ (Beauty Pageants) ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅಲ್ಲದೇ ಅಲ್ಲಿ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಮಿಸ್ ಊರ್ವಶಿ ಕಿರೀಟವನ್ನು(Crown) ಮುಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಸೀಟ್ ಬೆಲ್ಟ್ ಕಡ್ಡಾಯ – ಧರಿಸದಿದ್ದರೆ 1,000ರೂ. ದಂಡ

    ಇತ್ತೀಚೆಗೆ ಕರ್ನಾಟಕದಲ್ಲಿ ಆಡಿಷನ್(Audition) ನಡೆಸಿ ಕರ್ನಾಟಕದಿಂದ ವರ್ಷಿಣಿ ಈ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಒಟ್ಟು 25 ರಾಜ್ಯಗಳಿಂದ 18 ರಿಂದ 25 ವರ್ಷದೊಳಗಿನ 25 ಮಾಡೆಲ್‍ಗಳು(Models) ಈ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ಈ ಮೂಲಕ ಮಿಸ್ ಊರ್ವಶಿ ಕಿರೀಟವನ್ನು ಕರ್ನಾಟಕಕ್ಕೆ(Karnataka) ತಂದು ಕೊಡುವುದರ ಜೊತೆಗೆ ಮುಂದೆ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ(International Computation) ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದನ್ನೂ ಓದಿ: 5.47 ಕೋಟಿ ಮೌಲ್ಯದ 2.43 ಲಕ್ಷ ಎಣ್ಣೆ ಬಾಟ್ಲಿಗಳ ಮೇಲೆ ಹರಿಯಿತು ರೋಡ್ ರೋಲರ್!

    ವಿದ್ಯಾಭ್ಯಾಸದ ಜೊತೆಗೆ ಸೌಂದರ್ಯ ಸ್ಪರ್ಧೆಯಲ್ಲಿ ಮೊದಲಿನಿಂದಲೂ ತನ್ನ ಪ್ರತಿಭೆ ತೋರಿಸುವಲ್ಲಿ ಪರಿಣಿತರಾಗಿರುವ ವರ್ಷಿಣಿ ಈಗಾಗಲೇ ಎರಡು ಸಲ ಮಿಸ್ ಧಾರವಾಡ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಧಾರವಾಡ ಗ್ಲ್ಯಾಮ್ ಬ್ಯೂಟಿ ಆಗಿಯೂ ವಿಜೇತರಾಗಿದ್ದರು. 2019ರಲ್ಲಿ ಮಿಸ್ ಕರ್ನಾಟಕ ಫೈನಲಿಸ್ಟ್ ಆಗಿದ್ದರು. ಸದ್ಯ ಈ ಕಿರೀಟ ಗೆದ್ದ ನಂತರ ಸಂತಸ ವ್ಯಕ್ತಪಡಿಸಿದ ವರ್ಷಿಣಿ, ಮುಂದೆ ಯಾವುದೇ ಸೌಂದರ್ಯ ಸ್ಪರ್ಧೆ ಇದ್ದರೆ ಭಾಗವಹಿಸಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿ ಹುಡುಗಿಗೆ ಇಂಡಿಯಾ ಟಾಪ್ ಮಾಡೆಲ್ಸ್ ಕಿರೀಟ

    ಹುಬ್ಬಳ್ಳಿ ಹುಡುಗಿಗೆ ಇಂಡಿಯಾ ಟಾಪ್ ಮಾಡೆಲ್ಸ್ ಕಿರೀಟ

    ಹುಬ್ಬಳ್ಳಿ: ಹುಬ್ಬಳ್ಳಿ ಮೂಲದ ಪ್ರಿಯಾಂಕ ಕೊಲವೇಕರ ಎಂಬ ರೂಪದರ್ಶಿ ಇಂಡಿಯಾ ಟಾಪ್ ಮಾಡೆಲ್ಸ್-2022 ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತ ಕಿರೀಟವನ್ನು ತಮ್ಮ
    ಮುಡಿಗೇರಿಸಿಕೊಂಡಿದ್ದಾರೆ.

    ಮೇ 29ರಂದು ದಿಲ್ಲಿಯಲ್ಲಿ ಸಂದೀಪ್ ಗೋಸ್ವಾಮಿ, ಸೋನಿಯಾ ಖಟಾನಾ ಆಯೋಜಿಸಿದ್ದ ಪ್ರತಿಷ್ಠಿತ ರೂಪದರ್ಶಿಗಳ ಸ್ಪರ್ಧೆಯಲ್ಲಿ ಪ್ರಿಯಾಂಕ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಈ ಹಿಂದೆ ಗೋವಾದಲ್ಲಿ ನಡೆದ 2019ರ ರಾಯಲ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಗಿ ಹೊರಹೊಮ್ಮಿದ್ದರು. 2018ರಲ್ಲಿ ಇಂಡಿ ರಾಯಲ್ ಪ್ರೈಡ್ ಆಫ್ ನೇಷನ್ ಎಲೈಟ್, 2016ರಲ್ಲಿ ಮಿಸ್ ಇಂಡಿಯಾ ಸೌಥ್ ಬ್ಯೂಟಿಫೂಲ್ ಸ್ಮೈಲ್, 2015 ಮಿಸ್ ಇಂಡಿಯಾ ಅಡ್ವೆಂಚರ್ ಅವಾರ್ಡ್‍ಗಳನ್ನು ಸಹ ಗೆದ್ದಿದ್ದಾರೆ. ಇದನ್ನೂ ಓದಿ: ಉಡುಪಿಯ ಯುಪಿಸಿಎಲ್‍ಗೆ ಹಸಿರುಪೀಠ ಚಾಟಿ – ಅವಾಂತರಕ್ಕೆ 52 ಕೋಟಿ ರೂ. ದಂಡ

    ಪ್ರಿಯಾಂಕ ಮೂಲತಃ ಕಾರವಾರದಲ್ಲಿ ಹುಟ್ಟಿ ಬೆಳೆದಿದ್ದು, ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯಲ್ಲಿ ಮಾಡಿದ್ದಾರೆ. ಅವರ ತಂದೆ ಗಣಪತಿ ಅಕ್ಕಸಾಲಿಗರಾಗಿದ್ದು, ತಾಯಿ ಮಂಗಳ ನಿವೃತ್ತ ಶಿಕ್ಷಕಿಯಾಗಿದ್ದಾರೆ. ಯಾರ ಸಹಾಯವಿಲ್ಲದೆ, ಫಿಟ್ನೆಸ್, ಕಾಸ್ಟ್ಯೂಮ್, ವಾಕಿಂಗ್ ಸ್ಟೈಲ್ ಎಲ್ಲವನ್ನು ಇಂಟರ್‌ನೆಟ್‍ನಲ್ಲಿ ನೋಡಿ ಪ್ರಿಯಾಂಕ ಮಾಡೆಲಿಂಗ್ ಕಲಿತುಕೊಂಡಿದ್ದಾರೆ. ಇದನ್ನೂ ಓದಿ: 23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    ಪ್ರಾಣಿ ಪ್ರಿಯರಾಗಿರುವ ಪ್ರಿಯಾಂಕ ಹುಬ್ಬಳ್ಳಿಯಲ್ಲಿ ಪ್ರತಿದಿನ ಬೆಳಗ್ಗೆ 7ರಿಂದ 10ಗಂಟೆವೆರೆಗೆ ವಿದ್ಯಾನಗರ, ಗೋಕುಲ ರಸ್ತೆಯಲ್ಲಿರುವ ಸುಮಾರು 50 ರಿಂದ 70 ಬೀದಿ ನಾಯಿಗಳಿಗೆ ಆಹಾರ ಹಾಕುವ ಹವ್ಯಾಸಹೊಂದಿದ್ದಾರೆ. ಇದರ ಜೊತೆಗೆ ಗೋವುಗಳಿಗೆ, ಬೀದಿ ನಾಯಿ ಸೇರಿದಂತೆ ಯಾವುದೇ ಪ್ರಾಣಿಗಳ ಸಂಕಷ್ಟಕ್ಕೆ ಮರಗುವ ಗುಣವನ್ನು ಪ್ರಿಯಾಂಕ ಹೊಂದಿದ್ದಾರೆ. ಇವರ ಈ ಸೇವೆಯನ್ನು ಮೆಚ್ಚಿ 2018ರಲ್ಲಿ ಅನಿಶ್ ಚಿಂಚೊರೆ ಮೆಮೊರಿಯಲ್ ಫೌಂಡೆಷನ್ ವತಿಯಿಂದ ಆನಿಮಲ್ ಆಕ್ಟಿವಿಸ್ಟ್ ಎಂಬ ಅವಾರ್ಡ್ ಸಹ ದೊರಕಿದೆ.

  • ರಾಣಿ ಎಲಿಜಬೆತ್ 2ರ ಬಳಿಕ ಕೊಹಿನೂರು ಯಾರಿಗೆ ಸಿಗಲಿದೆ?

    ಲಂಡನ್: 800 ವರ್ಷಗಳ ಭಾರತದ ಇತಿಹಾಸ ಹೊಂದಿರುವ ಕೊಹಿನೂರು ವಜ್ರ 1937ರಲ್ಲಿ ಬ್ರಿಟಿಷ್ ರಾಣಿಯ ಕಿರೀಟ ಸೇರಿತ್ತು. ಈ ಬೆಲೆಬಾಳುವ ವಜ್ರ ಹೊಂದಿರುವ ಕಿರೀಟ ರಾಣಿ ಎಲಿಜಬೆತ್ 2ರ ಬಳಿಕ ಯಾರಿಗೆ ಹಸ್ತಾಂತರಿಸಲಿದ್ದಾರೆ ಎಂಬುದರ ಬಗ್ಗೆ ಇತ್ತೀಚೆಗೆ ವರದಿಯಾಗಿದೆ.

    ರಾಣಿ ಎಲಿಜಬೆತ್ ಅವರ ಹಿರಿಯ ಪುತ್ರ ಪ್ರಿನ್ಸ್ ಚಾಲ್ರ್ಸ್ ಮುಂದಿನ ವರ್ಷ ಉತ್ತರಾಧಿಕಾರವನ್ನು ವಹಿಸಿಕೊಳ್ಳಿದ್ದು, ಅವರ ಪತ್ನಿ ಡಚೆಸ್ ಆಫ್ ಕಾರ್ನ್‍ವಾಲ್ ಕ್ಯಾಮಿಲ್ಲಾ ವಿಶ್ವಪ್ರಸಿದ್ಧ ಕೊಹಿನೂರು ವಜ್ರವಿರುವ ಕಿರೀಟವನ್ನು ತೊಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಶುಭ ಸುದ್ದಿ – ಅಂತಿಮ ಹಂತದಲ್ಲಿದೆ 5ಜಿ ನೆಟ್ವರ್ಕ್

    ಇಂಗ್ಲೆಂಡ್ ರಾಣಿಗೆ ಸೇರಿರುವ ಕಿರೀಟ ಪ್ಲಾಟಿನಂ ನಿಂದ ಮಾಡಲ್ಪಟ್ಟಿದೆ. ವಿಶ್ವ ವಿಖ್ಯಾತ ಕೊಹಿನೂರು ವಜ್ರದೊಂದಿಗೆ 2,800 ವಜ್ರಗಳು ಈ ಕಿರೀಟದಲ್ಲಿದೆ. ಈ ಕಿರೀಟವನ್ನು 1937ರಲ್ಲಿ ಕಿಂಗ್ ಜಾರ್ಜ್ 6 ರ ಪಟ್ಟಾಭಿಷೇಕಕ್ಕಾಗಿ ಮಾಡಲಾಗಿತ್ತು. 105-ಕ್ಯಾರೆಟ್ ಹೊಂದಿರುವ ಕೊಹಿನೂರು ವಜ್ರವನ್ನು ಕಿರೀಟದ ಮುಂಭಾಗದಲ್ಲಿರುವ ಶಿಲುಬೆಗೆ ಜೋಡಿಸಲಾಗಿದೆ. ಇದನ್ನೂ ಓದಿ: ಸಂವಿಧಾನವೇ ನನಗೆ ಭಗವದ್ಗೀತೆ, ಭಾವನೆಗಳ ಆಧಾರದಲ್ಲಿ ಆದೇಶ ಕೊಡಲು ಆಗಲ್ಲ: ಹಿಜಬ್‌ ವಿವಾದ ಕೋರ್ಟ್‌ನಲ್ಲಿ ಏನಾಯ್ತು?

    ಪ್ರಿನ್ಸ್ ಚಾಲ್ರ್ಸ್ ರಾಜನಾದಾಗ ಡಚೆಸ್ ಕ್ಯಾಮಿಲ್ಲಾಗೆ ರಾಣಿ ಪತ್ನಿ ಎಂಬ ಬಿರುದನ್ನು ನೀಡಲಾಗುವುದು ಎಂದು ಇಂಗ್ಲೆಂಡ್ ರಾಣಿ ಇತ್ತೀಚೆಗೆ ಘೋಷಿಸಿದರು. ಪ್ರಿನ್ಸ್ ಚಾಲ್ರ್ಸ್‍ನ ಪಟ್ಟಾಭಿಷೇಕದ ಸಮಯದಲ್ಲಿ ರಾಣಿ ಪತ್ನಿಯಾಗಿ ಕ್ಯಾಮಿಲ್ಲಾಗೆ ಕೊಹಿನೂರ್ ಕಿರೀಟವನ್ನು ಹಸ್ತಾಂತರಿಸಲಾಗುತ್ತದೆ.

  • ಶಬರಿಮಲೆ ಅಯ್ಯಪ್ಪನಿಗೆ ವಜ್ರದ ಕಿರೀಟ ಕಾಣಿಕೆ ಕೊಟ್ಟ ಭಕ್ತ

    ಶಬರಿಮಲೆ ಅಯ್ಯಪ್ಪನಿಗೆ ವಜ್ರದ ಕಿರೀಟ ಕಾಣಿಕೆ ಕೊಟ್ಟ ಭಕ್ತ

    ತಿರುವನಂತಪುರಂ: ಶಬರಿಮಲೆ ಅಯ್ಯಪ್ಪನಿಗೆ ಆಂಧ್ರಪ್ರದೇಶದ ಭಕ್ತರೊಬ್ಬರು ವಜ್ರದ ಕಿರೀಟವನ್ನು ಕಾಣಿಕೆಯಾಗಿ ಕೊಟ್ಟು ಹರಕೆಯನ್ನು ತೀರಿಸಿಕೊಂಡಿದ್ದಾರೆ.

    ಕರ್ನೂಲ್ ಜಿಲ್ಲೆಯ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರ ಹೊದಿಕೆಯ ಚಿನ್ನದ ಕಿರೀಟ ನೀಡಿದ್ದಾರೆ. ಕೇರಳ ಹೈಕೋರ್ಟ್ ವಕೀಲರೊಬ್ಬರ ನೆರವಿನೊಂದಿಗೆ ಶುಕ್ರವಾರ ಕಿರೀಟವನ್ನು ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ:  ಯೋಗಿ ಗೋರಖ್‍ಪುರದಲ್ಲಿಯೇ ಇರಲಿ, ಮತ್ತೆ ಬರುವುದು ಬೇಡ : ಅಖಿಲೇಶ್ ಯಾದವ್

    ವೆಂಕಟಸುಬ್ಬಯ್ಯ ಅವರು ಅಯ್ಯಪ್ಪನ ಭಕ್ತರಾಗಿದ್ದಾರೆ. ಕಳೆದ 30 ವರ್ಷಗಳಿಂದ ಶಬರಿಗಿರಿಗೆ ಭೇಟಿ ನೀಡುತ್ತಿದ್ದಾರೆ. ವೆಂಕಟಸುಬ್ಬಯ್ಯ ಅವರು ಕಳೆದ ವರ್ಷ ಕೊರೊನಾ ಸೋಂಕಿಗೆ ಒಳಗಾಗಿದ್ದರು. 15 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಸಾವು-ಬದುಕಿನ ನಡುವೆ ಹೋರಾಡಿ ಬದುಕುಳಿದಿದ್ದರು. ಇದನ್ನೂ ಓದಿ: ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ

    ಚೇತರಿಸಿಕೊಂಡಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟವನ್ನ ನೀಡುವುದಾಗಿ ಹರಕೆ ಹೊತ್ತಿದ್ದರು. ಅದೇ ರೀತಿಯಾಗಿ ಆ ಹರಕೆಯ ಭಾಗವಾಗಿ ಚಿನ್ನದ ಕಿರೀಟವನ್ನ ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಅಯ್ಯಪ್ಪನ ಆಶೀರ್ವಾದಿಂದಲೇ ನಾನು ಮತ್ತೆ ಬದುಕಲು ಸಾಧ್ಯವಾಯಿತು ಎಂದು ವೆಂಕಟಸುಬ್ಬಯ್ಯ ಅವರು ಹೇಳಿದ್ದಾರೆ. ಈ ಕಿರೀಟದ ನಿಖರವಾದ ಬೆಲೆ ಎಷ್ಟು ಎನ್ನುವ ಮಾಹಿತಿ ಇಲ್ಲ.

  • ಮಿಸ್ ಯುನಿವರ್ಸ್ ಕಿರೀಟದ ಬೆಲೆ 37 ಕೋಟಿ ರೂ.- ಏನೇನು ವಿಶೇಷತೆ ಇದೆ?

    ಮಿಸ್ ಯುನಿವರ್ಸ್ ಕಿರೀಟದ ಬೆಲೆ 37 ಕೋಟಿ ರೂ.- ಏನೇನು ವಿಶೇಷತೆ ಇದೆ?

    ಡಿಸೆಂಬರ್ 12 ರಂದು ನಡೆದ ಮಿಸ್ ಯುನಿವರ್ಸ್ 2021 ಸ್ಪರ್ಧೆಯಲ್ಲಿ ಭಾರತೀಯ ಯುವತಿ ಹರ್ನಾಜ್ ಸಂಧು ಕಿರೀಟ ಅಲಂಕರಿಸಿದ್ದಾರೆ. ಭಾರತದ ನಾರಿ ಗೆದ್ದ ಕಿರೀಟದ ಬೆಲೆ ಬರೋಬ್ಬರಿ 37 ಕೋಟಿ ರೂ.

    ಹೌದು. ಈ ಹಿಂದೆ ನಡೆದಿರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹಲವು ಬಾರಿ ಕಿರೀಟಗಳನ್ನು ಬದಲಿಸಲಾಗಿದೆ. 2019ರಲ್ಲಿ ಮಿಸ್ ಯುನಿವರ್ಸ್ ಸಂಸ್ಥೆ ಕಿರೀಟವನ್ನು ವಿನ್ಯಾಸ ಗೊಳಿಸಲು ಮೌವದ್ ಆಭರಣ ಕಂಪನಿಯನ್ನು ಆಯ್ಕೆ ಮಾಡಿತ್ತು. ಮಹಿಳಾ ಸಬಲೀಕರಣ, ಶಕ್ತಿ, ಸಮುದಾಯಗಳನ್ನು ಒಂದುಗೂಡಿಸುವಂತಹ ಮಿಸ್ ಯುನಿವರ್ಸ್ ಸಂಸ್ಥೆಗೆ ಮೌವದ್ ವಿನ್ಯಾಸಕರು ಪವರ್ ಆಫ್ ಯುನಿಟ್ ಕ್ರೌನ್ ಅನ್ನು ತಯಾರಿಸಿದ್ದರು.

    ಈ ಕಿರೀಟದ ಬೆಲೆ 5 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಎಂದರೆ ಬರೋಬ್ಬರಿ 37 ಕೋಟಿ ರೂ. ಹಾಗೂ ಇದು ವಿಶ್ವದ ಅತ್ಯಂತ ದುಬಾರಿ ಸೌಂದರ್ಯ ಸ್ಪರ್ಧೆಯ ಕಿರೀಟ ಎಂಬುದಾಗಿಯೂ ದಾಖಲೆಯಾಗಿದೆ. ಇದನ್ನೂ ಓದಿ: 21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್

    ಈ ಕಿರೀಟ ಮಹತ್ವಾಕಾಂಕ್ಷೆ, ವೈವಿಧ್ಯತೆ, ಸಮುದಾಯ ಹಾಗೂ ಸೌಂದರ್ಯದ ಸಂಕೇತವಾಗಿದೆ. 2019ರಲ್ಲಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ, 2020ರಲ್ಲಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ಈ ವಿಶ್ವದ ದುಬಾರಿ ಕಿರೀಟವನ್ನು ತೊಟ್ಟಿದ್ದು, ಇದೀಗ ಭಾರತದ ಹೆಮ್ಮೆಯ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

     

    View this post on Instagram

     

    A post shared by MOUAWAD (@mouawad)

    ಕಿರೀಟದಲ್ಲಿ 1,725 ಬಿಳಿ ವಜ್ರಗಳು ಹಾಗೂ ಮೂರು ಗೋಲ್ಡನ್ ಕ್ಯಾನರಿ ವಜ್ರಗಳಿವೆ. ವಿನ್ಯಾಸದಲ್ಲಿ ಕಾಣಿಸುವ ಹೆಣೆದ ಬಳ್ಳಿ, ಎಲೆ, ದಳಗಳು ಏಳು ಖಂಡಗಳ ಸಮುದಾಯವನ್ನು ಪ್ರತಿನಿಧಿಸುತ್ತದೆ. ಕಿರೀಟದ ಮಧ್ಯಭಾಗದ ಗೋಲ್ಡನ್ ಕ್ಯಾನರಿ ವಜ್ರ 62.83 ಕ್ಯಾರೆಟ್ ತೂಕ ಹೊಂದಿದೆ. ಇದನ್ನೂ ಓದಿ: ನನ್ನ ತಮ್ಮನಿಗೆ ತಿಂಡಿ ತಿನ್ನಿಸಲು ಬಿಡಿ – ಐರಾ, ಯಥರ್ವ್ ಕ್ಯೂಟ್ ವೀಡಿಯೋ ವೈರಲ್

    ಹರ್ನಾಜ್ ಸಂಧು ಸದ್ಯ ಈ ದುಬಾರಿ ಕಿರೀಟಕ್ಕೆ ಒಡತಿಯಾಗಿದ್ದು, ಸುಶ್ಮಿತಾ ಸೇನ್, ಲಾರ ದತ್ತಾರ ನಂತರ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ ಮೂರನೇ ಭಾರತೀಯ ಮಹಿಳೆಯಾಗಿದ್ದಾರೆ.

  • ಆ್ಯಂಡ್ರಿಯಾ ಮೆಜಾ 69ನೇ ಭುವನ ಸುಂದರಿ

    ಆ್ಯಂಡ್ರಿಯಾ ಮೆಜಾ 69ನೇ ಭುವನ ಸುಂದರಿ

    ಫ್ಲೋರಿಡಾ: ಮೆಕ್ಸಿಕೋದ 26 ವರ್ಷದ ಆ್ಯಂಡ್ರಿಯಾ ಮೆಜಾ 69ನೇ ಮಿಸ್ ಯೂನಿವರ್ಸ್ ಕಿರೀಟ ಗೆದ್ದಿದ್ದಾರೆ.

    ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಆ್ಯಂಡ್ರಿಯಾ ಭುವನ ಸುಂದರಿ ಕಿರೀಟ ಗೆದ್ದರೆ ಬ್ರೆಜಿಲ್‍ನ ಜೂಲಿಯ ಗಾಮಾ ಮೊದಲ ರನ್ನರ್ ಅಪ್ ಹಾಗೂ ಪೆರುವಿನ ಜಾನಿಕ್ ಮಾಸೆಟಾ ಎರಡನೇ ರನ್ನರ್ ಆಪ್ ಆಗಿದ್ದಾರೆ.

    ಮಿಸ್ ಯೂನಿವರ್ಸ್ ಸ್ಪರ್ಧೆಯ ಪ್ರಶ್ನೋತ್ತರ ಸುತ್ತಿನಲ್ಲಿ ಆ್ಯಂಡ್ರಿಯಾ ಮೆಜಾ ಅವರಿಗೆ ಕೊವಿಡ್ ಸಂಬಂಧಿತ ಪ್ರಶ್ನೆ ಕೇಳಲಾಯಿತು. ಒಂದು ವೇಳೆ ನೀವು ನಿಮ್ಮ ದೇಶದ ಲೀಡರ್? ಆಗಿದ್ದರೆ, ಈ ಕೊವಿಡ್ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ರಿ? ಎಂಬ ಪ್ರಶ್ನೆಗೆ ದಿಟ್ಟತನದಿಂದ ಆ್ಯಂಡ್ರಿಯಾ ಉತ್ತರಿಸಿದರು.

    ಕೊರೊನಾ ನಿಯಂತ್ರಿಸಲು ನಿರ್ದಿಷ್ಟವಾದ ಕ್ರಮ ಯಾವುದೂ ಇಲ್ಲದ ಕಾರಣ, ಪರಿಸ್ಥಿತಿ ಕೈ ಮೀರುವ ಮುನ್ನವೇ ನಾನು ಲಾಕ್‍ಡೌನ್ ಮಾಡಿಸುತ್ತಿದ್ದೆ. ಯಾಕೆಂದರೆ ಈಗಾಗಲೇ ನಾವು ಅನೇಕ ಜೀವಗಳನ್ನು ಕಳೆದುಕೊಂಡಿದ್ದೇವೆ. ಅದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಜನರ ಕಾಳಜಿಯನ್ನು ನಾವು ಮಾಡಬೇಕು. ಪ್ರಾರಂಭದಲ್ಲಿಯೇ ಲಾಕ್‍ಡೌನ್ ಮಾಡುವ ಮೂಲಕ ನಾನು ಜನರ ರಕ್ಷಣೆ ಮಾಡುತ್ತಿದ್ದೆ ಎಂದು ಉತ್ತರಿಸಿದ ಆ್ಯಂಡ್ರಿಯಾ ಎಲ್ಲರ ಚಪ್ಪಾಳೆ ಪಡೆದುಕೊಂಡರು.

    ಈ ಬಾರಿ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 70 ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತವನ್ನು ಪ್ರತಿನಿಧಿಸಿದ್ದ ಆಡ್ಲೈನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಮೂರನೇ ರನ್ನರ್ ಅಪ್ ಆಗಿದ್ದಾರೆ.

  • ಕದೀತಾ ಇದ್ದೀನಿ ಕ್ಷಮಿಸಿ ಬಿಡು- ದೇವಿಗೆ ಪೂಜೆ ಮಾಡಿ ಕಿರೀಟ ಹೊತ್ತೊಯ್ದ ಭಕ್ತ

    ಕದೀತಾ ಇದ್ದೀನಿ ಕ್ಷಮಿಸಿ ಬಿಡು- ದೇವಿಗೆ ಪೂಜೆ ಮಾಡಿ ಕಿರೀಟ ಹೊತ್ತೊಯ್ದ ಭಕ್ತ

    – ಕಿರೀಟ ಕದೀತಿರೋ ವಿಡಿಯೋ ಫುಲ್ ವೈರಲ್

    ಹೈದರಾಬಾದ್: ದೇವಸ್ಥಾನಗಳಲ್ಲಿ ಕದಿಯೋದು ಸಾಮಾನ್ಯ. ಆದರೆ ಇಲ್ಲೊಬ್ಬ ಕಳ್ಳ ಕದಿಯುವ ಮುಂಚೆ ದೇವಿಗೆ ಪೂಜೆ ಮಾಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾನೆ.

    ಹೈದಾರಾಬಾದಿನ ಗನ್ ಫಾಂಡ್ರಿಯಲ್ಲಿರುವ ದುರ್ಗಾ ಭವಾನಿ ದೇವಸ್ಥಾನದಲ್ಲಿ ಬುಧವಾರ ಈ ಘಟನೆ ನಡೆದಿದೆ. ಭಕ್ತ ಕಳ್ಳತನ ಮಾಡುವ ಮೊದಲು ದೇವಿಗೆ ಪೂಜೆ ಮಾಡಿ ನಂತರ ಕಿರೀಟ ಕದ್ದಿರುವುದು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತದೆ.

    ವಿಡಿಯೋದಲ್ಲೇನಿದೆ?
    2 ನಿಮಿಷ 20 ಸೆಕೆಂಡ್ ಇರೋ ಈ ವಿಡಿಯೋದಲ್ಲಿ ಮೊದಲು ಭಕ್ತ ಚಪ್ಪಲಿ ಕಳಚಿಟ್ಟು ದೇವಾಲಯದ ಒಳಗೆ ಪ್ರವೇಶ ಮಾಡುತ್ತಾನೆ. ನಂತರ ಮೊಣಕಾಲೂರಿ ತನ್ನ ಎರಡೂ ಕೈಗಳನ್ನು ಜೋಡಿಸಿ ದೇವಿಗೆ ನಮಸ್ಕರಿಸಿ, 5-6 ಒಂದು ಸುತ್ತು ತಿರುಗುತ್ತಾನೆ. ಆ ಬಳಿಕ ತಲೆಬಗ್ಗಿಸಿ ಬೇಡಿಕೊಂಡು ದೇವಿಯ ಪಾದ ಮುಟ್ಟಿ ನಮಸ್ಕರಿಸುತ್ತಾನೆ. ಅಲ್ಲದೆ ದೇವಿಯ ಎದುರೇ ಬಸ್ಕಿ ಹೊಡೆಯುತ್ತಾನೆ.

    ಆ ಬಳಿಕ ಮೂರ್ತಿಯ ಎದುರಿದ್ದ ಕುಂಕುಮ ಹಣೆಗಿಟ್ಟು ಹಾಗೆಯೇ ಸುತ್ತು ಬರುತ್ತಾ ಅಕ್ಕ-ಪಕ್ಕ, ಹೊರಗಡೆ ಯಾರಾದರೂ ಇದ್ದಾರೆಯಾ ಎಂಬುದನ್ನು ಚೆಕ್ ಮಾಡುತ್ತಾನೆ. ಯಾರೂ ಇಲ್ಲದಿರುವುದನ್ನು ಮನಗಂಡ ಭಕ್ತ, ನೇರವಾಗಿ ದೇವಿಯ ಕಿರೀಟಕ್ಕೆ ಕೈ ಹಾಕುತ್ತಾನೆ. ಆದರೆ ಹಗ್ಗದಿಂದ ಕಟ್ಟಿರುವುದರಿಂದ ಅದನ್ನು ತೆಗೆಯಲು ಅಷ್ಟು ಸುಲಭವಾಗಲಿಲ್ಲ. ಹೀಗಾಗಿ ಮತ್ತೆ ಹೊರಗಡೆ ನೋಡುತ್ತಾನೆ.

    ಹೀಗೆ ನೋಡುತ್ತಾ ದೇವಿಯ ಬಳಿ ಮತ್ತೆ ಪ್ರಾರ್ಥನೆ ಮಾಡಿದಂತೆ ನಟಿಸಿ ಬಳಿಕ ಕಿರೀಟ ಬಿಚ್ಚಲು ಪ್ರಯತ್ನಿಸುತ್ತಾನೆ. ದೇವಿಯ ತಲೆಯಿಂದ ಕಿರೀಟ ತೆಗೆದರೂ ಹಗ್ಗದಿಂದ ಅದನ್ನು ಬಿಚ್ಚಲು ಸಮಯ ತೆಗೆದುಕೊಳ್ಳುತ್ತಾನೆ. ಕೊನೆಗೆ ಹೇಗೋ ಹಗ್ಗದಿಂದ ಕಿರೀಟವನ್ನು ಬೇರ್ಪಡಿಸಿ ತನ್ನ ಶರ್ಟಿನೊಳಗೆ ಬಚ್ಚಿಟ್ಟುಕೊಂಡು ಅಲ್ಲಿಂದ ಎಸ್ಕೇಪ್ ಆಗುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಸದ್ಯ ಈ ವಿಡಿಯೋವನ್ನು ಸಾಕಷ್ಟು ಮಂದಿ ನೋಡಿದ್ದು, ಹಲವಾರು ಕಮೆಂಟ್ ಗಳು ಬಂದಿವೆ. ಕೆಲವರು ಕಳ್ಳ ಭಕ್ತಿ ಎಂದು ಹೇಳಿದರೆ, ಇನ್ನೊಬ್ಬರು ಒಳ್ಳೆಯದು, ಕೆಲವರು ಕದ್ದು ಪ್ರಾರ್ಥಿಸಿದರೆ, ಈತ ಪ್ರಾರ್ಥಿಸಿ ಕದಿಯುತ್ತಾನೆ ಎಂದು ಬರೆದುಕೊಂಡು ಕಣ್ಣು ಹೊಡೆಯುವ ಎಮೋಜಿ ಹಾಕಿದ್ದಾರೆ. ಮತ್ತೊಬ್ಬರು ಇದು ಒಂಥರಾ ಟಾಲಿವುಡ್ ಸಿನಿಮಾದಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ಹೀಗೆ ಹಲವಾರು ಕಾಮಿಡಿ ಪ್ರತಿಕ್ರಿಯೆಗಳು ಬಂದಿವೆ.

  • ಮಿಸ್ ವರ್ಲ್ಡ್ ಅಮೆರಿಕ – ಫಿನಾಲೆಯಲ್ಲಿ ಕುಸಿದು ಬಿದ್ದ ಭಾರತೀಯ ಮಾಡೆಲ್‍ಗೆ ಸಿಕ್ತು ಆಸ್ಪತ್ರೆಯಲ್ಲಿ ಕಿರೀಟ

    ಮಿಸ್ ವರ್ಲ್ಡ್ ಅಮೆರಿಕ – ಫಿನಾಲೆಯಲ್ಲಿ ಕುಸಿದು ಬಿದ್ದ ಭಾರತೀಯ ಮಾಡೆಲ್‍ಗೆ ಸಿಕ್ತು ಆಸ್ಪತ್ರೆಯಲ್ಲಿ ಕಿರೀಟ

    ವಾಷಿಂಗ್ಟನ್: ಮಿಸ್ ವರ್ಲ್ಡ್ ಅಮೆರಿಕ 2019 ಫಿನಾಲೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಮೂಲದ ಮಾಡೆಲ್‍ಗೆ ಆಯೋಜಕರು ಆಸ್ಪತ್ರೆಗೆ ಹೋಗಿ ಕಿರೀಟ ನೀಡಿದ್ದಾರೆ.

    ಭಾರತೀಯ ಮೂಲದ ಶ್ರೀ ಸೈನಿ ಮಂಗಳವಾರ ಸಂಜೆ ಗೌನ್ ರೌಂಡ್‍ನಲ್ಲಿ ಭಾಗವಹಿಸುವ ಮೊದಲು ಕುಸಿದು ಬಿದ್ದಿದ್ದರು. ಪರಿಣಾಮ ಅವರ ಕಾಲಿಗೆ ಗಂಭೀರವಾಗಿ ಗಾಯಗಳಾಗಿತ್ತು. ಬಳಿಕ ಸೈನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಸೈನಿ ಕುಸಿದು ಬಿದ್ದ ನಂತರ ಅವರ ತಾಯಿ ಏಕ್ತಾ, ಮಗಳ ಇನ್‍ಸ್ಟಾಗ್ರಾಂನಲ್ಲಿ ನಾವು ಆಸ್ಪತ್ರೆಯಲ್ಲಿ ರಾತ್ರಿ 9 ಗಂಟೆಯಿಂದ ಇದ್ದೇವೆ. ವೈದ್ಯರು ಸೈನಿಗೆ ಬೇರೆ ಬೇರೆ ಸ್ಕ್ಯಾನಿಂಗ್‍ಗಳನ್ನು ಮಾಡುತ್ತಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದರು.

    ಸೈನಿ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಪರ್ಧೆಯಲ್ಲಿ ಆಕೆ ಗೆದ್ದಿದ್ದ ಐದು ಪ್ರಶಸ್ತಿಗಳನ್ನು ಮಿಸ್ ವರ್ಲ್ಡ್ ಅಮೆರಿಕ ಆಯೋಜಕರು ಆಸ್ಪತ್ರೆಗೆ ಭೇಟಿ ನೀಡಿ ಪುರಸ್ಕರಿಸಿದ್ದಾರೆ. ಸೈನಿ ‘ಬ್ಯುಟಿ ವಿತ್ ಎ ಪರ್ಪಸ್ ಅವಾರ್ಡ್’, ‘ಟಾಪ್ ಇನ್‍ಫ್ಲೂಯೆನ್ಸರ್ ಅವಾರ್ಡ್, ‘ಎಂಟರ್ ಪ್ರೆನ್ಯೂರ್ ಚಾಲೆಂಜ್ ಅವಾರ್ಡ್’, ಮೊದಲನೇ ರನ್ನರಪ್ ಟ್ಯಾಲೆಂಟ್ ಅವಾರ್ಡ್, ಹಾಗೂ ‘ಮೊದಲನೇ ರನ್ನರಪ್ ಟಾಪ್ ಮಾಡೆಲ್ ಅವಾರ್ಡ್’ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಕಿರೀಟ ಪಡೆಯುತ್ತಿರುವ ಫೋಟೋವನ್ನು ಶೈನಿ ಅಪ್ಲೋಡ್ ಮಾಡಿ ಅದಕ್ಕೆ, ನನ್ನ ಸಹಸ್ಪರ್ಧಿಗಳಿಗೆ ಹಾಗೂ ಅಂಬುಲೆನ್ಸ್ ಕರೆಸಿ ನನ್ನ ಜೀವ ಉಳಿಸಿದವರಿಗೆ ಧನ್ಯವಾದಗಳು. ನಾನು ಆಕಸ್ಮಿಕವಾಗಿ ಏಕೆ ಕುಸಿದು ಬಿದ್ದೆ ಎಂದು ಕಂಡುಹಿಡಿಯಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಸ್ಪರ್ಧೆಗಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ನನ್ನನ್ನು ಹೇಗೆ ಸಿದ್ಧಪಡಿಸಬೇಕೆಂಬುದು ನನಗೆ ತಿಳಿಯಿತು. ಇನ್‍ಸ್ಟಾದಲ್ಲಿ ಶುಭಹಾರೈಸಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.